ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 7 ಕಾಲ್ಪನಿಕ ಆದರ್ಶ ರಾಜ್ಯಕ್ಕಾಗಿ ರಾಜಕೀಯ ತಲಾಷು
ಸಮಾಜವಾದ: ಯಾವುದನ್ನು ಸಮತಾವಾದಿಗಳು ಬಂಡವಾಳಶಾಹಿ ಮತ್ತು ಸಮತಾವಾದಗಳ ಮಧ್ಯವರ್ತಿ ಹಂತವೆಂದು ವೀಕ್ಷಿಸುತ್ತಾರೊ ಆ ಉತ್ಪಾದನೆಯ ಮಾಧ್ಯಮ ಸರಕಾರದ ಸ್ವಾಮ್ಯ ಮತ್ತು ನಿಯಂತ್ರಣದಲ್ಲಿರತಕ್ಕದ್ದು ಎಂದು ಪ್ರತಿಪಾದಿಸುವ ಸಾಮಾಜಿಕ ಪದ್ಧತಿ; ಸಮತಾವಾದ: ವರ್ಗಗಳ ಗೈರುಹಾಜರಿ, ಉತ್ಪಾದನೆ ಮತ್ತು ಜೀವನಾಧಾರಗಳ ಮಾಧ್ಯಮದ ಜನಸ್ವಾಮ್ಯವಾದ, ಮತ್ತು ಆರ್ಥಿಕ ವಸ್ತುಗಳ ನೀತಿಸಮ್ಮತವಾದ ವಿತರಣೆ—ಇವುಗಳನ್ನು ಪ್ರತಿಪಾದಿಸುವ ಒಂದು ಸಾಮಾಜಿಕ ಪದ್ಧತಿ.
ಗ್ರೀಕ್ ಪುರಾಣ, ಯಾರ ಆಳಿಕೆಯಲ್ಲಿ ಗ್ರೀಸ್ ದೇಶ ಸುವರ್ಣ ಯುಗವನ್ನು ಅನುಭವಿಸುತ್ತಿತ್ತೊ, ಆ ಕ್ರಾನಸ್ ಎಂಬ ಗ್ರೀಕ್ ದೇವತೆಯ ಕುರಿತು ಮಾತಾಡುತ್ತದೆ. “ಎಲ್ಲರೂ ಸಾಮಾನ್ಯವಾಗಿದ್ದುದರಲ್ಲಿ ಸಮ ಪ್ರಮಾಣದಲ್ಲಿ ಪಾಲಿಗರಾದರು. ಖಾಸಗಿ ಸೊತ್ತು ಅಜ್ಞಾತವಾಗಿತ್ತು ಮತ್ತು ಶಾಂತಿ ಮತ್ತು ಸಾಮರಸ್ಯ ಭಂಗಗೊಳ್ಳದೆ ಆಳುತ್ತಿತ್ತು,” ವಿವರಿಸುತ್ತದೆ, ಡಿಕ್ಷನೆರಿ ಆಫ್ ದ ಹಿಸ್ಟರಿ ಆಫ್ ಐಡೀಯಸ್. ಅದೇ ಮೂಲ ಮುಂದುವರಿಸುವುದು: “ಸಮಾಜವಾದದ ಪ್ರಥಮ ಸುಳಿವು ನಷ್ಟಪಟ್ಟ ಆ ‘ಸುವರ್ಣ ಯುಗ’ಕ್ಕಾಗಿ ಮಾಡಿದ ಪ್ರಲಾಪದಲ್ಲಿದೆಯೆಂದು ತೋರಿಬರುತ್ತದೆ.”
ಆದರೆ ಸಮಾಜವಾದ, ಆಧುನಿಕ ರಾಜಕೀಯ ಚಳವಳಿಯಾಗಿ, 19ನೆಯ ಶತಮಾನದ ಆದಿ ಮತ್ತು ಮಧ್ಯ ದಶಕಗಳ ವರೆಗೆ ತೋರಿಬರಲಿಲ್ಲ. ತೋರಿಬಂದಾಗ ಅದು ವಿಶೇಷವಾಗಿ, ಯಾವುದು ಸಾಂಪ್ರದಾಯಿಕ ವಿಚಾರಗಳನ್ನು ತೀರಾ ಕುಲುಕಿಸಿಬಿಟ್ಟಿತ್ತೊ ಆ ಫ್ರೆಂಚ್ ವಿಪ್ಲವ ನಡೆದಿದ್ದ ಫ್ರಾನ್ಸಿನಲ್ಲಿ ಸಿದ್ಧಮನಸ್ಸಿನಿಂದ ಅಂಗೀಕರಿಸಲ್ಪಟ್ಟಿತು. ಅಲ್ಲಿ, ಇತರ ಯೂರೋಪಿಯನ್ ದೇಶಗಳಂತೆ, ಕೈಗಾರಿಕಾ ವಿಪ್ಲವ ಕಠಿಣ ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸಿತ್ತು. ಖಾಸಗಿ ಸ್ವಾಮ್ಯದ ಬದಲಿಗೆ ಸಂಪನ್ಮೂಲಗಳ ಸಾರ್ವಜನಿಕ ಸ್ವಾಮ್ಯ ವಿಶೇಷವಾಗಿ ಸಂಯೋಜಿತ ಶ್ರಮಿಕರ ಫಲದಲ್ಲಿ ಜನರು ಸಮಪ್ರಮಾಣದಲ್ಲಿ ಭಾಗಿಗಳಾಗುವಂತೆ ಸಾಧ್ಯ ಮಾಡುವುದು ಎಂಬ ವಿಚಾರವನ್ನು ಆಯ್ದುಕೊಳ್ಳಲು ಜನರು ಪಕ್ವ ಸ್ಥಿತಿಯಲಿದ್ದರು.
ಸಮಾಜವಾದ ಹೊಸ ವಿಚಾರವಲ್ಲ. ಗ್ರೀಕ್ ತತ್ವಜ್ಞಾನಿಗಳಾದ ಅರಿಸ್ಟಾಟ್ಲ್ ಮತ್ತು ಪ್ಲೇಟೊ ಇದರ ಕುರಿತು ಬರೆದಿದ್ದರು. ತರುವಾಯ, 16ನೆಯ ಶತಮಾನದ ಪ್ರಾಟೆಸ್ಟಂಟ್ ಸುಧಾರಣೆಯ ಸಮಯದಲ್ಲಿ ಥಾಮಸ್ ಮುಂಟ್ಸರ್ ಎಂಬ ತೀವ್ರಗಾಮಿ ಜರ್ಮನ್ ಕ್ಯಾಥಲಿಕ್ ಪಾದ್ರಿ, ವರ್ಗರಹಿತ ಸಮಾಜವೊಂದಕ್ಕೆ ಕರೆ ಕೊಟ್ಟನು. ಆದರೆ ಅವನ ವೀಕ್ಷಣಗಳು, ವಿಶೇಷವಾಗಿ, ಈ ಉದ್ದೇಶವನ್ನು ಸಾಧಿಸಲು ಬೇಕಿರುವಲ್ಲಿ ವಿಪ್ಲವವನ್ನೂ ಮಾಡಬಹುದೆಂಬ ಅವನ ಕರೆ, ವಾದಾಸ್ಪದವಾಗಿದ್ದವು. 19ನೆಯ ಶತಮಾನದಲ್ಲಿ ವೇಲ್ಸಿನ ರಾಬರ್ಟ್ ಓವೆನ್, ಫ್ರಾನ್ಸಿನ ಎಟಿಯೆನ್ ಕ್ಯಾಬೆ ಮತ್ತು ಪಿಯೆರ್-ಜೋಸೆಫ್ ಪ್ರೂಡೊ, ಮತ್ತು ಪ್ರಧಾನ ಪಾದ್ರಿಗಳೂ ಇದ್ದ ಅನೇಕ ಸಮಾಜ ಸುಧಾರಕರು, ಸಮಾಜವಾದವು ಕೇವಲ ಕ್ರೈಸ್ತತ್ವಕ್ಕಿರುವ ಇನ್ನೊಂದು ಹೆಸರು ಎಂದು ಕಲಿಸಿದರು.
ಮಾರ್ಕ್ಸ್ ಮತ್ತು ಮೋರ್ ಅವರ ಆದರ್ಶ ರಾಜ್ಯಗಳು
ಆದರೆ ಮೇಲಿನ ಪ್ರಮಾಣ ಗ್ರಂಥ ಹೇಳುವುದು: “ಸಮಾಜವಾದದ ಈ ಯಾವ ಪ್ರತಿನಿಧಿಯೂ ಕಾರ್ಲ್ ಮಾರ್ಕ್ಸ್ ಬೀರಿದಂಥ ಪರಿಣಾಮಕ್ಕೆ ಸಮಾನವಾದುದನ್ನು ಬೀರಲಿಲ್ಲ. ಇವನ ಬರಹಗಳು ಸಮಾಜವಾದಿಗಳ ಯೋಚನೆ ಮತ್ತು ವರ್ತನೆಗಳ ಓರೆಗಲ್ಲಾಯಿತು.”a ವರ್ಗ ಹೋರಾಟದ ಮೂಲಕ ಇತಿಹಾಸ ಹೆಜ್ಜೆ ಹೆಜ್ಜೆಯಾಗಿ ಮುಂದುವರಿಯುತ್ತದೆ ಎಂದು ಮಾರ್ಕ್ಸ್ನು ಕಲಿಸಿದನು; ಒಮ್ಮೆ ಆದರ್ಶ ರಾಜಕೀಯ ಪದ್ಧತಿಯನ್ನು ಕಂಡುಹಿಡಿಯುವಲ್ಲಿ, ಆ ಅರ್ಥದಲ್ಲಿ ಇತಿಹಾಸ ಅಂತ್ಯಗೊಳ್ಳುವುದು. ಈ ಆದರ್ಶ ಪದ್ಧತಿ ಹಿಂದಿನ ಸಮಾಜಗಳ ಸಮಸ್ಯೆಗಳನ್ನು ಬಗೆಹರಿಸುವುದು. ಸರ್ವರೂ ಶಾಂತಿ, ಸ್ವಾತಂತ್ರ್ಯ, ಮತ್ತು ಸಮೃದ್ಧಿಯಲ್ಲಿ, ಯಾವ ಸರಕಾರದ ಯಾ ಮಿಲಿಟರಿ ಸೈನ್ಯದ ಆವಶ್ಯಕತೆಯಿಲ್ಲದೆ ಜೀವಿಸುವರು.
ಬ್ರಿಟಿಷ್ ರಾಜನೀತಿಜ್ಞ ಸರ್ ಥಾಮಸ್ ಮೋರ್, 1516ರಲ್ಲಿ ತನ್ನ ಯುಟೋಪಿಯ ಎಂಬ ಪುಸ್ತಕದಲ್ಲಿ ವರ್ಣಿಸಿದುದಕ್ಕೆ ಇದು ಗಮನಾರ್ಹವಾಗಿ ಹೋಲಿಕೆಯಾಗಿತ್ತು. ಮೋರ್ ಸೃಷ್ಟಿಸಿದ ಗ್ರೀಕ್ ಹೆಸರಿನ ಈ ಪದದ ಅರ್ಥ “ಇಲ್ಲದ ಸ್ಥಳ” (ou-topos) ಎಂದಾಗಿದ್ದು ಅದು “ಉತ್ತಮ ಸ್ಥಳ” ಎಂಬರ್ಥದ eu-topos ಎಂಬ ಪದದ ಎರಡಾರ್ಥದ ನುಡಿಯಾಗಿರಸಾಧ್ಯವಿದೆ. ಮೋರ್ ಬರೆದ ಯುಟೋಪಿಯ ಆದರ್ಶ ರಾಜ್ಯ ಕಾಲ್ಪನಿಕ ದೇಶ (ಇಲ್ಲದ ಸ್ಥಳ) ವಾಗಿದ್ದರೂ, ಆದರ್ಶ ದೇಶ (ಉತ್ತಮ ಸ್ಥಳ) ವಾಗಿತ್ತು. ಹೀಗೆ, “ಯುಟೋಪಿಯ” ಎಂಬುದು “ವಿಶೇಷವಾಗಿ ಕಾನೂನು, ಸರಕಾರ, ಮತ್ತು ಸಾಮಾಜಿಕ ಪರಿಸ್ಥಿತಿಗಳಲ್ಲಿ ಆದರ್ಶ ಪರಿಪೂರ್ಣತೆಯ ಸ್ಥಳ” ಎಂಬ ಅರ್ಥದ್ದಾಗಿ ಪರಿಣಮಿಸಿದೆ. ಮೋರ್ನ ಈ ಪುಸ್ತಕ, ಯೂರೋಪಿನಲ್ಲಿ, ವಿಶೇಷವಾಗಿ ಇಂಗ್ಲೆಂಡಿನಲ್ಲಿ ಆಗ ಇದ್ದ ಅನಾದರ್ಶ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಸ್ಪಷ್ಟ ದೋಷಾರೋಪಣೆಯಾಗಿದ್ದು, ಇದು ಆ ಬಳಿಕ ಸಮಾಜವಾದದ ಬೆಳವಣಿಗೆಗೆ ಸಹಾಯ ನೀಡಿತು.
ಮಾರ್ಕ್ಸ್ನ ಕಲ್ಪನೆಗಳು ಜರ್ಮನ್ ತತ್ವಜ್ಞಾನಿ ಜಾರ್ಜ್ ವಿಲ್ಹೆಲ್ಮ್ ಫ್ರೀಡ್ರಿಕ್ ಹೇಗೆಲ್ ಎಂಬವನ ವೀಕ್ಷಣಗಳನ್ನೂ ಪ್ರತಿಬಿಂಬಿಸಿದವು. ಡಿಕ್ಷನೆರಿ ಆಫ್ ದ ಹಿಸ್ಟರಿ ಆಫ್ ಐಡೀಯಸ್ ಗ್ರಂಥಕ್ಕನುಸಾರ, “ಮಾರ್ಕ್ಸ್ ಅವರ ಸಮಾಜವಾದದ ಭವಿಷ್ಯದ್ದರ್ಶಕ, ಧರ್ಮಪ್ರಾಯ ಲಕ್ಷಣವು ಹೇಗೆಲ್ನ ತೀವ್ರ ಸುಧಾರಣೆಯ ಕ್ರೈಸ್ತ ದೇವತಾಶಾಸ್ತ್ರದ ತಾತ್ವಿಕ ನಿರೂಪಣೆಯಿಂದ ರೂಪಿಸಲ್ಪಟ್ಟಿತ್ತು.” “ತೀವ್ರ ಸುಧಾರಣೆಯ ಕ್ರೈಸ್ತ ದೇವತಾಶಾಸ್ತ್ರ”ದ ಈ ಹಿನ್ನೆಲೆಯಲ್ಲಿ ಮಾರ್ಕ್ಸ್ “ತೀರಾ ಬಲವಾದ ನೈತಿಕ ಕರೆಯನ್ನು, ಧರ್ಮಪ್ರಾಯವಾದ ನಿಶಿತ್ಚಾಭಿಪ್ರಾಯವುಳ್ಳದ್ದಾಗಿ” ವಿಕಸಿಸಿದನು. “ಅದು ನಾಗರಿಕತೆ ಮತ್ತು ಸಮರ್ಪಕತೆಯ ಕಡೆಗೆ ಶಿಸ್ತಿನ ನಡಗೆಯಲ್ಲಿ ಸೇರಬೇಕೆಂಬ ಕರೆಗಿಂತ ಕಡಮೆಯದ್ದಾಗಿರಲಿಲ್ಲ.” ಸಮಾಜವಾದ ಭವಿಷ್ಯತ್ತಿನ ಅಲೆಯಾಗಿತ್ತು; ಪ್ರಾಯಶಃ, ಕೆಲವರು, ಇದು ನಿಜವಾಗಿಯೂ ಕ್ರೈಸ್ತತ್ವವು ಹೊಸ ಹೆಸರಿನಿಂದ ವಿಜಯದ ಕಡೆಗೆ ಸಾಗುತ್ತದೆಂದು ಯೋಚಿಸಿದಿರ್ದಬಹುದು!
ಬಂಡವಾಳ ಶಾಹಿ ಪದ್ಧತಿಯಿಂದ ಆದರ್ಶ ರಾಜ್ಯಕ್ಕೆ ಹಾದಿ
ಮಾರ್ಕ್ಸ್ ತನ್ನ ಡಾಸ್ ಕಪಿಟಾಲ್ ಗ್ರಂಥದ ಪ್ರಥಮ ಸಂಪುಟವನ್ನು ಪ್ರಕಟಿಸುವ ವರೆಗೆ ಮಾತ್ರ ಬದುಕಿದನು. ಕೊನೆಯ ಎರಡು ಸಂಪುಟಗಳು 1885 ಮತ್ತು 1894ರಲ್ಲಿ, ಜರ್ಮನ್ ಸಮಾಜವಾದಿ ತತ್ವಜ್ಞಾನಿಯಾದ ಫ್ರೀಡ್ರಿಕ್ ಎಂಗೆಲ್ಸ್ ಎಂಬ ಆಪ್ತ ಸಹಕಾರಿಯಿಂದ ಪ್ರಕಟಿಸಲ್ಪಟ್ಟವು. ಡಾಸ್ ಕಪಿಟಾಲ್ ಬಂಡವಾಳ ಶಾಹಿಯ ಐತಿಹಾಸಿಕ ಹಿನ್ನೆಲೆ, ಪಾಶ್ಚಾತ್ಯ ರೀತಿಯ ಪ್ರಾತಿನಿಧಿಕ ಪ್ರಜಾಪ್ರಭುತ್ವದ ಆರ್ಥಿಕ ಪದ್ಧತಿಯನ್ನು ಅದು ವಿವರಿಸಿತು. ಅನಿಯಂತ್ರಿತ ವ್ಯಾಪಾರ ಮತ್ತು ಸರಕಾರಿ ನಿಯಂತ್ರಣವಿಲ್ಲದ ಸ್ಪರ್ಧೆಯಿರುವದರ ಮೇಲೆ ಆಧರಿಸಿದ್ದು, ಬಂಡವಾಳ ಶಾಹಿ ಪದ್ಧತಿ, ಮಾರ್ಕ್ಸ್ ವಿವರಿಸಿದಂತೆ, ಉತ್ಪಾದನೆ ಮತ್ತು ವಿತರಣೆಯ ಮಾಧ್ಯಮದ ಸ್ವಾಮ್ಯವನ್ನು ಖಾಸಗಿ ಮತ್ತು ಸಂಸ್ಥಾರೂಪದ ಕೈಗಳಲ್ಲಿ ಕೇಂದ್ರೀಕರಿಸುತ್ತದೆ. ಮಾರ್ಕ್ಸ್ಗನುಸಾರವಾಗಿ, ಬಂಡವಾಳ ಶಾಹಿ ಪದ್ಧತಿ ಒಂದು ಮಧ್ಯಮ ವರ್ಗ ಮತ್ತೊಂದು ಕಾರ್ಮಿಕ ವರ್ಗವನ್ನು ಉಂಟುಮಾಡಿ, ಈ ಎರಡು ವರ್ಗಗಳ ಮಧ್ಯೆ ವಿರೋಧವನ್ನುಂಟುಮಾಡಿ, ಕಾರ್ಮಿಕರ ಮೇಲೆ ದಬ್ಬಾಳಿಕೆಗೆ ನಡೆಸುತ್ತದೆ. ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ಪುಸ್ತಕಗಳಿಂದ ತನ್ನ ವೀಕ್ಷಣಗಳಿಗೆ ಬೆಂಬಲ ಕೊಡುತ್ತಾ, ಬಂಡವಾಳ ಶಾಹಿ ಪದ್ಧತಿ ವಾಸ್ತವವಾಗಿ ಅಪ್ರಜಾಸತ್ತಾತ್ಮಕವೆಂದೂ ಸಮಾಜವಾದ ಪ್ರಜಾಪ್ರಭುತ್ವದಲ್ಲಿ ಕಟ್ಟ ಕಡೆಯದ್ದು, ಅದು ಮಾನವ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಬೆಳೆಯಿಸಿ ಜನರಿಗೆ ಪ್ರಯೋಜನ ತರುತ್ತದೆಂದೂ ವಾದಿಸಿದನು.
ಶ್ರಮಜೀವಿಗಳು ಯಾವಾಗ ಕ್ರಾಂತಿಯಲ್ಲಿ ಎದ್ದು ಮಧ್ಯಮ ತರಗತಿಯವರ ದಬ್ಬಾಳಿಕೆಯನ್ನು ಉರುಳಿಸಿ “ಶ್ರಮಜೀವಿಗಳ ಸರ್ವಾಧಿಕಾರ”ವೆಂದು ಮಾರ್ಕ್ಸ್ ಕರೆದುದನ್ನು ಸ್ಥಾಪಿಸುವರೋ ಆವಾಗ ಆದರ್ಶ ರಾಜ್ಯವು ತಲುಪಲ್ಪಡುವುದು. (ಪುಟ 21ರ ಬಾಕ್ಸ್ ನೋಡಿ.) ಆದರೆ ಅವನ ವೀಕ್ಷಣಗಳು ಸಮಯ ದಾಟಿದಷ್ಟಕ್ಕೆ ಹದಕ್ಕೆ ಬಂತು. ಅವನು ಕ್ರಾಂತಿಯ ಎರಡು ಚಿಂತನಾರೂಪಗಳನ್ನು—ಒಂದು ಹಿಂಸಾತ್ಮ ತೆರದ್ದು, ಇನ್ನೊಂದು ಹೆಚ್ಚು ಕಾಯಂ ಆಗಿರುವ, ಮೆಟ್ಟಲು ಮೆಟ್ಟಲಾಗಿ ಮುಂದುವರಿಯುವ ತೆರದ್ದು—ಅನುಮತಿಸಲು ಆರಂಭಿಸಿದನು. ಇದರಿಂದ ರಸಕರವಾದ ಪ್ರಶ್ನೆಯೊಂದು ಎದ್ದುಬಂತು.
ಆದರ್ಶ ರಾಜ್ಯ ಕ್ರಾಂತಿಯ ಮಾರ್ಗವಾಗಿಯೆ, ವಿಕಾಸದ ಮಾರ್ಗವಾಗಿಯೆ?
“ಕಾಮ್ಯುನಿಸಮ್” (ಸಮತಾವಾದ) ಎಂಬ ಪದ “ಸಾಮಾನ್ಯ, ಸರ್ವರಿಗೆ ಸೇರಿದ್ದು” ಎಂಬರ್ಥ ಬರುವ ಕಮ್ಯೂನಿಸ್ ಎಂಬ ಲ್ಯಾಟಿನ್ ಪದದಿಂದ ಬಂದಿದೆ. ಸಮಾಜವಾದದಂತೆ, ಸಮತಾವಾದವು ಸಹ, ಸ್ವತಂತ್ರೋದ್ಯಮವು ನಿರುದ್ಯೋಗ, ಬಡತನ, ವ್ಯಾಪಾರ ಚಕ್ರ, ಮತ್ತು ಕಾರ್ಮಿಕ-ನಿರ್ವಾಹಕ ಘರ್ಷಣೆಗಳಿಗೆ ನಡಿಸುತ್ತದೆಂದು ವಾದಿಸುತ್ತದೆ. ಇದಕ್ಕಿರುವ ಪರಿಹಾರವು ರಾಷ್ಟ್ರದ ಐಶ್ವರ್ಯವನ್ನು ಹೆಚ್ಚು ಸಮಾನರೂಪದಲ್ಲಿ ಮತ್ತು ನ್ಯಾಯವಾಗಿ ವಿತರಣೆ ಮಾಡುವುದೇ.
ಆದರೆ ಕಳೆದ ಶತಕದ ಅಂತ್ಯದೊಳಗೆ, ಮಾರ್ಕ್ಸಿಸ್ಟರು ಈ ಒಪ್ಪಿರುವ ಉದ್ದೇಶಗಳನ್ನು ಹೇಗೆ ಸಾಧಿಸುವುದೆಂಬುದರ ವಿಷಯ ಪ್ರತಿಕೂಲ ಮನಸ್ಸುಳ್ಳವರಾದರು. 1900ಗಳಾರಂಭದಲ್ಲಿ, ಹಿಂಸಾತ್ಮಕ ಕ್ರಾಂತಿಯನ್ನು ತಳ್ಳಿ ಹಾಕಿ ಪಾರ್ಲಿಮೆಂಟರಿ ಪ್ರಜಾಸತ್ತಾತ್ಮಕ ಪದ್ಧತಿಯೊಳಗೆ ಕಾರ್ಯ ನಡೆಸುವುದನ್ನು ಪ್ರತಿಪಾದಿಸಿದವರು ಹೆಚ್ಚು ಸಂಖ್ಯೆಯವರಾಗಿ, ಈಗ ಪ್ರಜಾಸತ್ತಾತ್ಮಕ ಸಮಾಜವಾದ ಎಂದು ಕರೆಯಲ್ಪಡುವವರಾಗಿ ಬೆಳೆದರು. ಜರ್ಮನಿಯ ಫೆಡರಲ್ ರಿಪಬ್ಲಿಕ್, ಫ್ರಾನ್ಸ್, ಮತ್ತು ಬ್ರಿಟನ್ಗಳಲ್ಲಿ ಇಂದು ಕಂಡುಬರುವ ಸಮಾಜವಾದ ಇದೇ. ಬಹುತರವಾಗಿ, ಈ ಪಕ್ಷಗಳು ಶುದ್ಧ ಮಾರ್ಕ್ಸಿಸ್ಟ್ ಚಿಂತನೆಗಳನ್ನು ತ್ಯಜಿಸಿ, ಕೇವಲ ನಾಗರಿಕರಿಗೆ ಪ್ರಜಾಹಿತ ಸರಕಾರವನ್ನು ಸೃಷ್ಟಿಸುವುದರಲ್ಲಿ ಮಾತ್ರ ಆಸಕ್ತರಾಗಿದ್ದಾರೆ.
ಆದರೆ, ಕಾಮ್ಯುನಿಸ್ಟ್ ಆದರ್ಶ ರಾಜ್ಯ ಹಿಂಸಾತ್ಮಕ ಕ್ರಾಂತಿಯಿಂದ ಮಾತ್ರ ಬರಸಾಧ್ಯವಿದೆ ಎಂದು ಬಲವಾಗಿ ನಂಬಿದ ಒಬ್ಬ ಒಮ್ಮನಸ್ಸಿನ ನಿಷ್ಠೆಯ ಮಾರ್ಕ್ಸಿಸ್ಟನು ಲೆನಿನ್ ಎಂಬವನು. ಇವನ ಬೋಧನೆ, ಮಾರ್ಕ್ಸಿಸ್ಟ್ ವಾದದೊಂದಿಗೆ ಇಂದಿನ ಸಾಂಪ್ರದಾಯಿಕ ಸಮತಾವಾದದ ತಳಹದಿಯಾಗಿದೆ. ಲೆನಿನ್ ಎಂಬ ಗುಪ್ತನಾಮವಿದ್ದ ವ್ಲಾಡಿಮಿರ್ ಇಲಿಕ್ ಊಲ್ಯನಫ್, ಈ ಹಿಂದಿನ ಸೋವಿಯೆಟ್ ಯೂನಿಯನ್ನಲ್ಲಿ 1870ರಲ್ಲಿ ಜನಿಸಿದನು. 1889ರಲ್ಲಿ ಅವನು ಮಾರ್ಕ್ಸ್ ವಾದಕ್ಕೆ ಪರಿವರ್ತಿತನಾದನು. 1900ರ ಬಳಿಕ, ಸೈಬೀರಿಯದಲ್ಲಿ ಗಡೀಪಾರಾಗಿ ಸ್ವಲ್ಪ ಸಮಯ ಕಳೆದ ಬಳಿಕ, ಅವನು ಅಧಿಕಾಂಶ ಪಶ್ಚಿಮ ಯೂರೋಪಿನಲ್ಲಿ ಜೀವಿಸಿದನು. ಸಾರ್ ಅರಸನ ಸರಕಾರ ಕೆಳಗುರುಳಿದ ಬಳಿಕ, ಅವನು ರಷ್ಯಕ್ಕೆ ಹಿಂದಿರುಗಿ ಬಂದು, ರಷ್ಯನ್ ಕಾಮ್ಯುನಿಸ್ಟ್ ಪಾರ್ಟಿಯನ್ನು ಸ್ಥಾಪಿಸಿ, 1917ರಲ್ಲಿ ಬಾಲ್ಶೆವಿಕ್ ಕ್ರಾಂತಿಯ ನಾಯಕತ್ವ ವಹಿಸಿದನು. ಆ ಬಳಿಕ ಅವನು 1924ರಲ್ಲಿ ಮರಣ ಹೊಂದುವ ತನಕ ಸೋವಿಯೆಟ್ ಯೂನಿಯನಿನ ಪ್ರಥಮ ಮುಖಂಡನಾದನು. ಕಾಮ್ಯುನಿಸ್ಟ್ ಪಾರ್ಟಿಯು ಉತ್ತಮ ತೆರದ ಶಿಸ್ತಿನ, ಶ್ರಮಜೀವಿಗಳ ಸೇವಾಮುಖವಾಗಿ ಸೇವೆ ಮಾಡುವ ಕೇಂದ್ರೀಕರಿಸಲ್ಪಟ್ಟ ಕ್ರಾಂತಿಕಾರರ ತಂಡವಾಗಿ ಅವನು ವೀಕ್ಷಿಸಿದನು. ಆದರೆ ಮೆನ್ಶೆವಿಕರು ಇದಕ್ಕೆ ಸಮ್ಮತಿಸಲಿಲ್ಲ.—21ನೆಯ ಪುಟದ ಬಾಕ್ಸ್ ನೋಡಿ.
ಕ್ರಾಂತಿ ಮತ್ತು ವಿಕಾಸದ ಮಧ್ಯೆ ಇರುವ ಎಲ್ಲೆಗೆರೆ ಅಷ್ಟು ಸುಸ್ಪಷ್ಟವಲ್ಲ. 1978ರಲ್ಲಿ, ಕಂಪ್ಯಾರಿಂಗ್ ಪೊಲಿಟಿಕಲ್ ಸಿಸ್ಟಮ್ಸ್: ಪವರ್ ಆ್ಯಂಡ್ ಪಾಲಿಸಿ ಇನ್ ತ್ರೀ ವರ್ಲ್ಡ್ಸ್ ಎಂಬ ಪುಸ್ತಕ ಅವಲೋಕಿಸಿದ್ದು: “ಸಮಾಜವಾದಿ ಗುರಿಗಳನ್ನು ಹೇಗೆ ಸಾಧಿಸುವುದೆಂಬ ವಿಷಯ ಸಮತಾವಾದ ಹೆಚ್ಚು ಚಂಚಲವಾಗಿದೆ. . . . ಸಮತಾವಾದ ಮತ್ತು ಪ್ರಜಾಸತ್ತಾತ್ಮಕ ಸಮಾಜವಾದದ ಮಧ್ಯೆ ಇದ್ದ ವ್ಯತ್ಯಾಸಗಳು ಗಣನೀಯವಾಗಿ ಕಡಮೆಯಾಗಿವೆ.” ಈಗ, 1992ರಲ್ಲಿ, ಸಮತಾವಾದ ಪೂರ್ವ ಯೂರೋಪಿನಲ್ಲಿ ಉಗ್ರ ಪರಿವರ್ತನೆಗೊಳಗಾಗುತ್ತಿರುವಾಗ, ಈ ಮೇಲಿನ ಮಾತುಗಳಿಗೆ ಇನ್ನೂ ಹೆಚ್ಚಿನ ಅರ್ಥ ಬರುತ್ತದೆ.
ಸಮತಾವಾದ ಧರ್ಮವನ್ನು ಪುನ: ಆಚರಣೆಗೆ ತರುತ್ತದೆ
“ನಮಗೆ ಆತ್ಮಿಕ ಮೌಲ್ಯಗಳು ಅಗತ್ಯ . . . ಶತಮಾನಗಳಲ್ಲಿ ಧರ್ಮವು ಉಂಟುಮಾಡಿ ಆಕಾರಕೊಟ್ಟ ನೈತಿಕ ಮೌಲ್ಯಗಳು ನಮ್ಮ ದೇಶದಲ್ಲೂ ನವೀಕರಣದ ಕೆಲಸದಲ್ಲಿ ಸಹಾಯ ಮಾಡಬಲ್ಲವು.” ಸೋವಿಯೆಟ್ ಯೂನಿಯನಿನ ಕಾಮ್ಯುನಿಸ್ಟ್ ಪಾರ್ಟಿಯ ಜನರಲ್ ಸೆಕ್ರಿಟರಿಯಿಂದ ಇಂಥ ಮಾತುಗಳನ್ನು ಕೇಳುತ್ತೇವೆಂದು ನೆನಸಿದವರು ಕೊಂಚ ಜನ. ಆದರೆ ನವಂಬರ 30, 1989ರಲ್ಲಿ ಮಿಕಾಯೆಲ್ ಗಾರ್ಬಚೆಫ್, ತನ್ನ ಇಟೆಲಿ ಭೇಟಿಯ ಸಮಯ ಧರ್ಮದ ಕುರಿತು ಈ ನಾಟಕೀಯ ಹಿಂದುಮುಂದನ್ನು ಪ್ರಕಟಿಸಿದರು.
ಹಾಗಾದರೆ ಇದು ಪ್ರಾಯಶಃ, ಆದಿಕ್ರೈಸ್ತರು ಕಮ್ಯುನಿಸ್ಟರಾಗಿದ್ದರೆಂದೂ, ಒಂದು ತೆರದ ಕ್ರೈಸ್ತ ಸಮಾಜವಾದವನ್ನು ಆಚರಿಸುತ್ತಿದ್ದರೆಂದೂ ಸೂಚಿಸುತ್ತದೆಯೆ? ಕೆಲವರು ಅಪೊಸ್ತಲರ ಕೃತ್ಯ 4:32ನ್ನು ತೋರಿಸುತ್ತಾ ಹೀಗೆ ವಾದಿಸಬಹುದು. ಅಲ್ಲಿ ಹೇಳುವುದು: “ಎಲ್ಲವೂ ಅವರಿಗೆ ಹುದುವಾಗಿ ಇತ್ತು.” ಆದರೆ ತನಿಖೆ ತೋರಿಸುವುದೇನಂದರೆ ಇದು ಅನಿರೀಕ್ಷಿತ ಪರಿಸ್ಥಿತಿಗಳಿಂದಾದ ತಾತ್ಕಾಲಿಕ ಏರ್ಪಾಡಾಗಿತ್ತು; “ಕ್ರೈಸ್ತ” ಸಮಾಜವಾದದ ಕಾಯಂ ಪದ್ಧತಿಯಾಗಿರಲಿಲ್ಲ. ಅವರು ಪ್ರಾಪಂಚಿಕ ಸೊತ್ತುಗಳಲ್ಲಿ ಪ್ರೀತಿಯಲ್ಲಿ ಪಾಲಿಗರಾದುದರಿಂದ, “ಅವರಲ್ಲಿ ಕೊರತೆ ಪಡುವವನು ಒಬ್ಬನೂ ಇರಲಿಲ್ಲ.” ಹೌದು, “ಪ್ರತಿಯೊಬ್ಬನಿಗೆ ಅವನವನ ಅವಶ್ಯದಂತೆ ಹಂಚಿಕೊಡುತ್ತಿದ್ದರು.”—ಅಪೊಸ್ತಲರ ಕೃತ್ಯಗಳು 4:34, 35.
“ಗ್ಲಾಸ್ನಾಸ್ಟ್” ಮತ್ತು “ಪೆರಸ್ಟ್ರಾಯ್ಕ”
ಸೋವಿಯೆಟ್ ಯೂನಿಯನ್ ಪೂರ್ವ ಯೂರೋಪಿನ ಅದರ ಜೊತೆ ಸಮತಾವಾದಿ ಸರಕಾರಗಳು 1989ರ ಕೊನೆಯ ತಿಂಗಳುಗಳಿಂದ ಹಿಡಿದು ಮನ ತಡಕಾಡಿಸುವ ರಾಜಕೀಯ ಬದಲಾವಣೆಗಳನ್ನು ಅನುಭವಿಸಿವೆ. ಗ್ಲಾಸ್ನಾಸ್ಟ್, ಯಾ ಅನಾವರಣ ಎಂಬ ಕಾರ್ಯನೀತಿಯ ಕಾರಣದಿಂದ, ಈ ಬದಲಾವಣೆಗಳನ್ನು ಸಕಲರೂ ನೋಡಿದ್ದಾರೆ. ಪೂರ್ವ ಯೂರೋಪಿಯನರು ವ್ಯಾಪಕ ಸುಧಾರಣೆಗಳನ್ನು ಕೇಳಿಕೊಂಡಿದ್ದಾರೆ, ಮತ್ತು ಸ್ವಲ್ಪ ಮಟ್ಟಿಗೆ ಅವು ಕೊಡಲ್ಪಟ್ಟಿವೆ. ಕಾಮ್ಯುನಿಸ್ಟ್ ನಾಯಕರು ಹೆಚ್ಚು ಮಾನವೀಯತೆಯ ಮತ್ತು ಕನಿಕರದ ಪದ್ಧತಿ ಅಗತ್ಯವೆಂದು ಒಪ್ಪಿ, ಒಬ್ಬ ಪೋಲಿಷ್ ಅರ್ಥಶಾಸ್ತ್ರಜ್ಞನು ಹೇಳಿದಂತೆ, “ವಿಭಿನ್ನವಾದ, ಹೆಚ್ಚು ಬೆಳಕು ತೋರುವ ಮತ್ತು ಕಾರ್ಯಸಾಧಕ ರೂಪದ ಸಮಾಜವಾದದ ಪುನರ್ಜನ್ಮ”ಕ್ಕೆ ಕರೆ ಕೊಟ್ಟಿದ್ದಾರೆ.
ಇವರಲ್ಲಿ ಪ್ರಧಾನ ನಾಯಕರು ಗಾರ್ಬಚೆಫ್. ಅವರು 1985ರಲ್ಲಿ ಅಧಿಕಾರಕ್ಕೆ ಬಂದ ಸ್ವಲ್ಪದರಲ್ಲಿ ಪೆರೆಸ್ಟ್ರಾಯಕಾ (ಪುನರ್ರಚನೆ) ವಿಚಾರವನ್ನು ಆಚರಣೆಗೆ ತಂದರು. 1990ಗಳ ಪಂಥಾಹ್ವಾನಗಳನ್ನು ನಿಭಾಯಿಸಲು ಪೆರೆಸ್ಟ್ರಾಯಕಾ ಅಗತ್ಯವೆಂದು ಹೇಳಿ ಇಟೆಲಿಗೆ ಭೇಟಿಕೊಟ್ಟ ಒಂದು ಸಂದರ್ಭದಲ್ಲಿ ಅವರು ಅದನ್ನು ಸಮರ್ಥಿಸಿದರು. ಅವರಂದದ್ದು: “ತೀವ್ರ ಸುಧಾರಣೆಯ ಮಾರ್ಗದಲ್ಲಿ ಪ್ರವರ್ತಿಸತೊಡಗಿದ ಸೋಶಲಿಸ್ಟ್ ದೇಶಗಳು ಈಗ ಹಿಂದಿರುಗಸಾಧ್ಯವಿಲ್ಲದ ರೇಖೆಯನ್ನು ದಾಟುತ್ತಿದ್ದಾರೆ. ಆದರೂ, ಪಶ್ಚಿಮದಲ್ಲಿ ಅನೇಕರು ಹೇಳುವಂತೆ, ಇದು ಸಮಾಜವಾದದ ಪತನವೆಂದು ಸಾಧಿಸಿ ಹೇಳುವುದು ತಪ್ಪು. ಇದಕ್ಕೆ ಬದಲು, ಲೋಕದ ಸೋಶಲಿಸ್ಟ್ ಕಾರ್ಯಗತಿ, ಅದರ ಮುಂದಿನ ಬೆಳವಣಿಗೆಯನ್ನು ವಿವಿಧ ರೂಪಗಳಲ್ಲಿ ಹಿಂದಟ್ಟುವುದು.”
ಈ ಕಾರಣದಿಂದ, ಕಾಮ್ಯುನಿಸ್ಟ್ ನಾಯಕರು ಕಳೆದ ವರ್ಷ ಅಂಕಣಕಾರ ಚಾರ್ಲ್ಸ್ ಕ್ರಾತ್ಯಾಮರ್ ಮಾಡಿದ ನಿರ್ಧಾರಕ್ಕೆ ಸಮ್ಮತಿಸಲು ಸಿದ್ಧರಿಲ್ಲ. ಆ ಅಂಕಣಕಾರರು ಬರೆದುದು: “ಪ್ರತಿಯೊಬ್ಬ ರಾಜಕೀಯ ತತ್ವಜ್ಞಾನಿಯನ್ನು ಪ್ಲೇಟೋವಿನ ಕಾಲದಿಂದ ಹಿಡಿದು ಮಗ್ನವಾಗಿರಿಸಿರುವ ಸಾರ್ವಕಾಲಿಕ ಪ್ರಶ್ನೆಯಾದ, ಆಡಳಿತ ಮಾಡುವ ಸರ್ವೋತ್ತಮ ವಿಧ ಯಾವುದು ಎಂಬ ಪ್ರಶ್ನೆಗೆ ಉತ್ತರ ದೊರಕಿದೆ. ಹಲವು ಸಹಸ್ರ ವರ್ಷಕಾಲ ಪ್ರತಿಯೊಂದು ರಾಜಕೀಯ ಪದ್ಧತಿಯನ್ನು ಪ್ರಯೋಗಿಸಿ ನೋಡಿದ ಮೇಲೆ, ನಾವು ಈ ಸಹಸ್ರ ವರ್ಷಗಳನ್ನು, ಉದಾರವಾದ, ಅನೇಕ ತತ್ವಗಳ ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ, ನಾವು ಕಂಡುಹಿಡಿಯಲು ಅಪೇಕ್ಷಿಸಿದ್ದನ್ನು ಕಂಡುಕೊಂಡಿದ್ದೇವೆ ಎಂಬ ಖಂಡಿತ ಜ್ಞಾನದಿಂದ ಮುಕ್ತಾಯಗೊಳಿಸುತ್ತೇವೆ.”
ಆದರೆ ಜರ್ಮನ್ ವೃತ್ತಪತ್ರಕೆ ಡೈ ಸೀಯೆಟ್, ಪಾಶ್ಚಿಮಾತ್ಯ ರೀತಿಯ ಪ್ರಜಾಪ್ರಭುತ್ವವು ತೋರಿಸುವ ದುಃಖಕರವಾದ ಚಿತ್ರವನ್ನು ಮುಚ್ಚುಮರೆಯಿಲ್ಲದೆ ಒಪ್ಪಿ, ಅದರ “ನಿರುದ್ಯೋಗ, ಮದ್ಯ ಮತ್ತು ಮಾದಕ ದ್ರವ್ಯದ ದುರುಪಯೋಗ, ವೇಶ್ಯಾವೃತ್ತಿ, ಸಾಮಾಜಿಕ ಕಾರ್ಯಕ್ರಮಗಳ ಕಡಿತ, ಖೋತಾ ತೆರಿಗೆ ಮತ್ತು ಬಜೆಟಿನ ಖೋತಾ” ಇವುಗಳಿಗೆ ಗಮನ ಸೆಳೆಯುತ್ತಾ, “ಸಮಾಜವಾದವನ್ನು ಎಂದೆಂದಿಗೂ ಜಯಿಸಿರುವ ಪರಿಪೂರ್ಣ ಸಮಾಜವು ನಿಜವಾಗಿಯೂ ಇದೆಯೆ?” ಎಂದು ಕೇಳುತ್ತದೆ.
ಒಂದು ಸುಪರಿಚಿತ ನಾಣ್ಣುಡಿ, ಇತರರಷ್ಟೆ ಕೆಟ್ಟವರಾಗಿರುವ ನೀವು ಅವರ ವಿಷಯ ಗೊಣಗಬಾರದು, ಎಂದು ಹೇಳುತ್ತದೆ. ಅಪೂರ್ಣ ಮಾನವ ಸರಕಾರದ ಯಾವ ರೂಪಕ್ಕೆ ಇನ್ನೊಂದರ ಬಲಹೀನತೆಗಳನ್ನು ಟೀಕಿಸಸಾಧ್ಯವಿದೆ? ಪರಿಪೂರ್ಣ ಮಾನವ ಸರಕಾರ—ಕಾಲ್ಪನಿಕ ಆದರ್ಶ ರಾಜ್ಯ—ಅಸ್ತಿತ್ವದಲ್ಲಿಲ್ಲ ಎಂದು ವಾಸ್ತವಾಂಶಗಳು ತೋರಿಸುತ್ತವೆ. ರಾಜಕಾರಣಿಗಳು ಇನ್ನೂ ಆ “ಉತ್ತಮ ಸ್ಥಳ”ವನ್ನು ಹುಡುಕುತ್ತಿದ್ದಾರೆ. ಅದು ಇನ್ನೂ “ಇಲ್ಲದ ಸ್ಥಳ”ವಾಗಿ ಪರಿಣಮಿಸಿದೆ. (g90 11/8)
[ಅಧ್ಯಯನ ಪ್ರಶ್ನೆಗಳು]
a ಯೆಹೂದಿ ಹೆತ್ತವರಿಂದ 1818ರಲ್ಲಿ ಆಗ ಪ್ರಷ್ಯವೆಂದು ಕರೆಯಲ್ಪಡುತ್ತಿದ್ದ ದೇಶದಲ್ಲಿ ಹುಟ್ಟಿದ ಮಾರ್ಕ್ಸ್, ಜರ್ಮನಿಯಲ್ಲಿ ವಿದ್ಯಾಭ್ಯಾಸ ಪಡೆದು ಅಲ್ಲಿ ಪತ್ರಿಕೋದ್ಯೋಗಿಯಾಗಿ ಕೆಲಸ ಮಾಡಿದನು; 1849 ಬಳಿಕ ಅವನು ತನ್ನ ಜೀವನದಲ್ಲಿ ಅಧಿಕಾಂಶವನ್ನು ಲಂಡನಿನಲ್ಲಿ ಕಳೆದು ಅಲಿಯ್ಲೆ 1883ರಲ್ಲಿ ಮರಣಪಟ್ಟನು.
[ಪುಟ 21 ರಲ್ಲಿರುವ ಚೌಕ]
ಸಮಾಜವಾದ ಮತ್ತು ಸಮತಾವಾದಗಳ ಪರಿಭಾಷೆ
ಬಾಲಿವ್ಷಿಕ್ಸ್⁄ಮೆನೆವ್ಷಿಕ್ಸ್: 1898ರಲ್ಲಿ ಸ್ಥಾಪಿಸಲ್ಪಟ್ಟ ರಷ್ಯನ್ ಸೋಶಿಯಲ್ ಡೆಮೊಕ್ರ್ಯಾಟಿಕ್ ಲೇಬರ್ ಪಾರ್ಟಿಯು 1903ರಲ್ಲಿ ಎರಡು ಗುಂಪುಗಳಾಗಿ ಒಡೆಯಿತು; ಬಾಲಿವ್ಷಿಕ್ತ್ಸ್, ಅಕ್ಷರಶಃ “ಬಹುಸಂಖ್ಯಾತ ಸದಸ್ಯರುಗಳು” ಲೆನಿನ್ನ ಕೆಳಗೆ, ಶಿಸ್ತುಬದ್ಧ ಕ್ರಾಂತಿಕಾರಿಗಳ ಮಿತಸಂಖ್ಯೆಯ ಪಾರ್ಟಿಯನ್ನು ಚಿಕ್ಕದ್ದಾಗಿ ಇಡಲು ಮೆಚ್ಚಿಗೆ ವ್ಯಕ್ತಪಡಿಸಿದರು; ಮೆನೆವ್ಷಿಕ್ಸ್, ಅರ್ಥಾತ್ “ಅಲ್ಪಸಂಖ್ಯಾತ ಸದಸ್ಯರುಗಳು,” ಪ್ರಜಾಪ್ರಭುತ್ವ ವಿಧಾನಗಳ ಮೂಲಕ ದೊಡ್ಡಸಂಖ್ಯೆಯಲ್ಲಿ ಪಕ್ಷದ ಸದಸ್ಯತನವನ್ನು ಸಮ್ಮತಿಸಿದರು.
ಬುಅರ್ಷ್ವಾಸೀ⁄ಪ್ರೋಲಿಟೇರಿಯಟ್: ಮಾರ್ಕ್ಸ್, ಪ್ರೋಲಿಟೇರಿಯಟ್ (ಶ್ರಮಿಕ)ವರ್ಗ ಬುಅರ್ಷ್ವಾಸೀ (ಮಧ್ಯಮ ವರ್ಗದವರು, ಫ್ಯಾಕ್ಟರಿ ಧನಿಗಳ ಸಹಿತ)ವರ್ಗವನ್ನು ಕಿತ್ತೆಸೆದು, ಒಂದು “ಪ್ರೋಲಿಟೇರಿಯಟ್ ನಿರಂಕುಶಾಧಿಕಾರವನ್ನು” ಸ್ಥಾಪಿಸುವದರ ಮೂಲಕ, ಒಂದು ವರ್ಗರಹಿತ ಸಮಾಜವನ್ನು ಉತ್ಪಾದಿಸುವರು ಎಂದು ಕಲಿಸಿದನು.
ಕಾಮಿನ್ಟರ್ನ್: ಕಾಮ್ಯೂನಿಸ್ಟ್ ಇಂಟರ್ನ್ಯಾಶನಲ್ (ಯಾ, ತೃತೀಯ ಅಂತಾರಾಷ್ಟ್ರೀಯ)ದ ಸಂಕ್ಷಿಪ್ತರೂಪ, ಕಾಮ್ಯೂನಿಸಮ್ನ್ನು ಪ್ರವರ್ಧಿಸಲು ಲೆನಿನನು ರೂಪಿಸಿದ ಒಂದು ಸಂಸ್ಥಾಪನೆ; 1943ರಲ್ಲಿ ಬರಖಾಸ್ತುಗೊಳಿಸಲ್ಪಟ್ಟಿತು, ಇದರ ಮುಂಚೆ ಪ್ರಥಮ ಅಂತಾರಾಷ್ಟ್ರೀಯ (1864-76) ಅನೇಕ ಯೂರೋಪಿಯನ್ ಸಮಾಜವಾದ ಗುಂಪುಗಳಿಗೆ ಮತ್ತು ದ್ವಿತೀಯ ಅಂತಾರಾಷ್ಟ್ರೀಯ (1889-1919)ವು ಸಮಾಜವಾದಿ ಪಕ್ಷಗಳ ಅಂತಾರಾಷ್ಟ್ರೀಯ ಪಾರ್ಲಿಮೆಂಟ್ಗೆ ಜನ್ಮವನ್ನಿತಿತ್ತು.
ಕಾಮ್ಯೂನಿಸ್ಟ್ ಸಾರ್ವಜನಿಕ ಪ್ರಕಟನೆ (ಮ್ಯಾನಿಫೆಸ್ಟೊ): ಯೂರೋಪಿಯನ್ ಸಮಾಜವಾದಿ ಮತ್ತು ಕಾಮ್ಯೂನಿಸ್ಟ್ ಪಕ್ಷಗಳಿಗೆ ದೀರ್ಘಕಾಲ ಒಂದು ಆಧಾರವಾಗಿದ್ದಂತಹ ವೈಜ್ಞಾನಿಕ ಸಮಾಜವಾದದ ಮುಖ್ಯ ಸಿದ್ಧಾಂತಗಳ ಮಾರ್ಕ್ಸ್ ಮತ್ತು ಎಂಗೆಲ್ಸ್ರಿಂದ 1848ರಲ್ಲಿ ಮಾಡಲ್ಪಟ್ಟ ಒಂದು ಹೇಳಿಕೆ.
ಯೂರೊಕಾಮ್ಯೂನಿಸಮ್: ಪಾಶ್ಚಿಮಾತ್ಯ ಯೂರೋಪಿಯನ್ ಕಾಮ್ಯೂನಿಸ್ಟ್ ಪಕ್ಷಗಳ ಕಾಮ್ಯೂನಿಸಮ್; ಸೋವಿಯೆಟ್ ನೇತೃತ್ವದಿಂದ ಸ್ವತಂತ್ರವಾಗಿದ್ದು, ಸಂಮಿಳಿತ ಸರಕಾರಗಳಲ್ಲಿ ಸೇರಿ ಕಾರ್ಯಾಚರಿಸಲು ಸಿದ್ಧವಾಗಿದ್ದು, ಒಂದು “ಪ್ರೋಲಿಟೇರಿಯಟ್ರ ನಿರಂಕುಶಾಧಿಕಾರವು” ಈಗೇನೂ ಆವಶ್ಯಕವಲ್ಲವೆಂದು ಅದು ವಾದಿಸುತ್ತದೆ.
ವೈಜ್ಞಾನಿಕ⁄ಕಾಲ್ಪನಿಕ ಆದರ್ಶರಾಜ್ಯದ ಸಮಾಜವಾದ: ಅವನ ಕಲಿಸುವಿಕೆಗಳ ನಡುವಿನ ಭಿನ್ನತೆಯನ್ನು ಗುರುತಿಸಲು ಮಾರ್ಕ್ಸ್ನಿಂದ ಬಳಸಲ್ಪಟ್ಟ ಪಾರಿಭಾಷಿಕಗಳು, ಇತಿಹಾಸದ ವೈಜ್ಞಾನಿಕ ಪರೀಕ್ಷೆಗಳ ಮೇಲೆ ಮತ್ತು ಬಂಡವಾಳಶಾಹಿಯ ಕಾರ್ಯರೀತಿಯ ಮೇಲೆ ಮತ್ತು ಅವನ ಹಿಂದಿನವರ ನಿಚ್ಚಳವಾದ ಕಾಲ್ಪನಿಕ ಆದರ್ಶರಾಜ್ಯದ ಸಮಾಜವಾದಿ ಕಲಿಸುವಿಕೆಗಳ ಮೇಲೆ ಆಧಾರಿತವಾಗಿರುತ್ತದೆ ಎಂದೆಣಿಸಲ್ಪಡುತ್ತದೆ.