ಧರ್ಮವು ನಿಜವಾಗಿಯೂ ಆವಶ್ಯಕವೊ?
ಧರ್ಮವು ನಿಮಗೆ ಮಹತ್ವಪೂರ್ಣವೊ? ನೀವು ಪ್ರಾಯಶಃ ಒಂದು ಧಾರ್ಮಿಕ ಗುಂಪಿನ ಅಥವಾ ಚರ್ಚಿನ ಒಬ್ಬ ಸದಸ್ಯರೋ? ಹಾಗಿದ್ದರೆ, ಹಿಂದೆ 1844ರಲ್ಲಿ ಜೀವಿಸಿದ್ದ ಜನರೊಂದಿಗೆ ನಿಮಗೆ ಹೆಚ್ಚು ಸರಿಸಮಾನತೆ ಇದೆ, ಯಾಕೆಂದರೆ “ಧರ್ಮವು . . . ಜನರ ಶಾಮಕ ಔಷಧ [ಆಫೀಮು]ವಾಗಿದೆ” ಎಂದು ಜರ್ಮನ್ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್‌ನು ಬರೆದದ್ದು ಅದೇ ವರ್ಷದಲ್ಲಿ. ಆ ಕಾಲದಲ್ಲಿ ಬಹಳ ಮಟ್ಟಿಗೆ ಪ್ರತಿಯೊಬ್ಬರೂ ಚರ್ಚಿಗೆ ಹೋಗುತ್ತಿದ್ದರು ಮತ್ತು ಸಮಾಜದ ಪ್ರತಿಯೊಂದು ಅಂತಸ್ತಿನ ಮೇಲೆ ಧರ್ಮವು ಬಲವಾಗಿ ಪ್ರಭಾವ ಬೀರಿತ್ತು. ಇಂದು, ಅದು ತೀವ್ರವಾಗಿ ಬದಲಾಗಿದೆ, ಮತ್ತು ಕೋಟ್ಯಾಂತರ ಜನರ ಜೀವಿತಗಳಲ್ಲಿ ಧರ್ಮವು ಕೊಂಚವೇ ಅಥವಾ ಯಾವ ಪಾತ್ರವನ್ನು ವಹಿಸುವುದಿಲ್ಲ. ನೀವು ಚರ್ಚಿಗೆ ಹೋಗುವದಾದರೆ, ನಿಮ್ಮ ಸಮಾಜದಲ್ಲಿ ನೀವು ಅಲ್ಪ ಸಂಖ್ಯಾತರಾಗಿರುವದು ಸಂಭವನೀಯ.
ಈ ಬದಲಾವಣೆಯನ್ನು ಬರಮಾಡಿದ್ದು ಯಾವುದು? ಒಂದು ಕಾರಣವು, ಕಾರ್ಲ್ ಮಾರ್ಕ್ಸ್ ವಿಕಾಸಿಸಿದ್ದ ಧರ್ಮ ವಿರೋಧಿ ತತ್ವಜ್ಞಾನವು ಅತ್ಯಂತ ಪ್ರಭಾವಿತವಾಗಿ ಪರಿಣಮಿಸಿದ್ದೆ. ಮಾನವ ಪ್ರಗತಿಗೆ ಧರ್ಮವು ಒಂದು ಆತಂಕ ಎಂಬದಾಗಿ ಮಾರ್ಕ್ಸ್‌ನು ಪರಿಗಣಿಸಿದ್ದನೆಂಬದು ಸ್ಫುಟ. ಮಾನವಕುಲದ ಆವಶ್ಯಕತೆಗಳು ಪ್ರಾಪಂಚಿಕತೆಯಿಂದ ಉತ್ತಮವಾಗಿ ಪೂರೈಸಲ್ಪಡಬಲ್ಲವು ಎಂದು ಅವನು ವಾದಿಸಿದನು, ಈ ತತ್ವಜ್ಞಾನವು ದೇವರಿಗಾಗಲಿ ಯಾ ಸಾಂಪ್ರದಾಯಿಕ ಧರ್ಮಕ್ಕಾಗಲಿ ಯಾವ ಅವಕಾಶವನ್ನೂ ಕೊಡಲಿಲ್ಲ. ಇದು ಅವನನ್ನು ಈ ಹೇಳಿಕೆಗೆ ನಡಿಸಿತು: “ಜನರ ಸಂತೋಷಕ್ಕೆ ಮೊತ್ತಮೊದಲನೆಯ ಆವಶ್ಯಕತೆಯು ಧರ್ಮದ ನಿರ್ಮೂಲನೆಯೇ.”
ಮಾರ್ಕ್ಸ್‌ನ ಈ ಪ್ರಾಪಂಚಿಕ ತತ್ವಜ್ಞಾನವು ಜರ್ಮನ್ ಸಮತಾವಾದಿ ಫ್ರೆಡರಿಕ್ ಎಂಗಲ್ಸ್ ಮತ್ತು ರಷ್ಯಾದ ಕಮೂನಿಸ್ಟ್ ಧುರೀಣ ವಡ್ಲಿಮೀರ್ ಲೆನಿನ್ ಇವರಿಂದ ಇನ್ನಷ್ಟು ಪ್ರಗತಿಯನ್ನು ಪಡೆಯಿತು. ಅದು ಮಾರ್ಕ್ಸ್‌ವಾದ-ಲೆನಿನ್‌ವಾದ ಎಂದು ಹೆಸರುವಾಸಿಯಾಯಿತು. ಇತ್ತೀಚಿಗಿನ ತನಕ, ರಾಜಕೀಯ ಆಡಳಿತದ ಕೆಳಗೆ ಜೀವಿಸಿದ್ದ ಮಾನವಕುಲದ ಮೂರರಲ್ಲಿ ಒಂದಂಶಕ್ಕಿಂತ ಹೆಚ್ಚು ಜನರು ಈ ನಾಸ್ತಿಕ ತತ್ವಜ್ಞಾನವನ್ನು ಹೆಚ್ಚು ಯಾ ಕಡಿಮೆ ಮಟ್ಟದಲ್ಲಿ ಅನುಸರಿಸಿದ್ದರು. ಅನೇಕ ಪುರುಷರು ಮತ್ತು ಸ್ತ್ರೀಯರು ಅದನ್ನು ಇನ್ನೂ ಅನುಸರಿಸುತ್ತಿದ್ದಾರೆ.
ಐಹಿಕವಾದದ ಬೆಳವಣಿಗೆ
ಆದರೆ ಮಾನವಕುಲದ ಮೇಲಿನ ಧರ್ಮದ ಪ್ರಭಾವವನ್ನು ನಿರ್ಬಲಗೊಳಿಸಿದ್ದು ಕಮ್ಯೂನಿಸ್ಟ್ ತತ್ವಜ್ಞಾನದ ಹಬ್ಬುವಿಕೆಯು ಮಾತ್ರವೆ ಅಲ್ಲ. ವೈಜ್ಞಾನಿಕ ರಂಗದ ಬೆಳವಣಿಗೆಗಳು ಸಹಾ ತಮ್ಮ ಪಾತ್ರವನ್ನು ವಹಿಸಿದವು. ದೃಷ್ಟಾಂತಕ್ಕಾಗಿ, ವಿಕಾಸವಾದವು ಜನಾದರಣೀಯವಾಗಿ ಮಾಡಲ್ಪಟ್ಟದರ್ದಿಂದ ಅದು ಅನೇಕರನ್ನು ನಿರ್ಮಾಣಿಕನ ಅಸ್ತಿತ್ವದ ಕುರಿತು ಸಂದೇಹಿಸುವಂತೆ ನಡಿಸಿತು. ಮತ್ತು ಅಲ್ಲಿ ಬೇರೆ ಕಾರಣಗಳೂ ಇದ್ದವು.
“ಹಿಂದೆ ಅಲೌಕಿಕ ಕೃತ್ಯಗಳಾಗಿ ಪರಿಗಣಿಸಲ್ಪಟ್ಟಿದ್ದ ಪ್ರಕೃತಿಗೋಚರ ಫಟನೆಗಳಿಗೆ ವೈಜ್ಞಾನಿಕ ಅರ್ಥವಿವರಣೆಗಳ ಸಂಶೋಧನೆ” ಮತ್ತು “ವೈದ್ಯಕೀಯ, ಶಿಕ್ಷಣ ಮತ್ತು ಕಲಾಸಂಸ್ಕೃತಿಗಳಂಥಹ ಕಾರ್ಯರಂಗಗಳಿಂದ ವ್ಯವಸ್ಥಾಪಿತ ಧರ್ಮದ ಪ್ರಭಾವದ ಬಹಳಷ್ಟು ವರ್ಜಿಸುವಿಕೆ” ಎಂದು ಎನ್‌ಸೈಕ್ಲೊಪೀಡಿಯ ಬ್ರಿಟಾನಿಕವು ಹೇಳುತ್ತದೆ. ಇಂಥವುಗಳ ವಿಕಾಸನೆಗಳು ಐಹಿಕವಾದದ ಬೆಳವಣಿಗೆಗೆ ನಡಿಸಿತು. ಈ ಐಹಿಕವಾದ ಎಂದರೇನು? ಅದು “ಜೀವಿತದ ಒಂದು ನೋಟ . . . ಅದು ಧರ್ಮ ಮತ್ತು ಧಾರ್ಮಿಕ ಪರಿಗಣನೆಗಳನ್ನು ದುರ್ಲಕ್ಷಿಸುವುದರ ಅಥವಾ ಉದ್ದೇಶಪೂರ್ವಕವಾಗಿ ಹೊರಗಿಡುವದರ ಮೇಲೆ ಆಧರಿಸಿದೆ” ಎಂಬದಾಗಿ ಅರ್ಥ ನಿರೂಪಣೆ ಕೊಡಲಾಗಿದೆ. ಐಹಿಕವಾದವು ಕಮ್ಯೂನಿಸ್ಟ್ ಮತ್ತು ಕಮ್ಯುನಿಸ್ಟೇತರ ದೇಶಗಳಲ್ಲಿ ಪ್ರಭಾವಶಾಲಿಯಾಗಿ ನಿಂತಿದೆ.
ಆದರೆ ಐಹಿಕವಾದವು ಮತ್ತು ಮಾರ್ಕ್ಸ್‌ವಾದ-ಲೆನಿನ್‌ವಾದವು ಮಾತ್ರವೇ ಧರ್ಮದ ಪ್ರಭಾವವನ್ನು ನಿರ್ಬಲಗೊಳಿಸಿದ್ದಲ್ಲ. ಕ್ರೈಸ್ತ ಪ್ರಪಂಚದ ಚರ್ಚುಗಳೂ ಅದಕ್ಕೆ ದೋಷಪಾತ್ರರು. ಯಾಕೆ? ಯಾಕೆಂದರೆ ಶತಮಾನಗಳಿಂದ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ. ಬೈಬಲಿನ ಬದಲಾಗಿ ಅವರು ಅಶಾಸ್ತ್ರೀಯ ಸಂಪ್ರದಾಯಗಳ ಮತ್ತು ಮಾನವ ತತ್ವಜ್ಞಾನಗಳ ಮೇಲಾಧರಿತ ಬೋಧನೆಗಳನ್ನು ಕಲಿಸಿರುತ್ತಾರೆ. ಆದಕಾರಣ, ಅವರ ಹಿಂಡಿನಲ್ಲಿರುವ ಹೆಚ್ಚಿನವರು ಐಹಿಕವಾದದ ಆಕ್ರಮಣವನ್ನು ಎದುರಿಸಲು ಆತ್ಮಿಕವಾಗಿ ತೀರಾ ನಿರ್ಬಲರಾಗಿರುತ್ತಾರೆ.
ಅದಲ್ಲದೆ, ಚರ್ಚುಗಳು ತಾವೇ ಐಹಿಕವಾದಕ್ಕೆ ಕೊನೆಗೆ ಹೆಚ್ಚೆಚ್ಚಾಗಿ ಬಿಟ್ಟುಕೊಟ್ಟವರಾಗಿರುತ್ತಾರೆ. 19ನೇ ಶತಮಾನದಲ್ಲಿ, ಕ್ರೈಸ್ತ ಪ್ರಪಂಚದ ಧಾರ್ಮಿಕ ಪಂಡಿತರು ಒಂದು ಉಚ್ಛತಮ ಠೀಕೆಯ ವಿಧಾನವನ್ನು ಹೊರತಂದು ಅನೇಕರಲ್ಲಿ ಬೈಬಲು ದೇವರ ಪ್ರೇರಿತ ವಾಕ್ಯವೆಂಬ ವಿಶ್ವಾಸಪಾತ್ರತೆಯನ್ನು ನಾಶಗೊಳಿಸಿದರು. ಚರ್ಚುಗಳು, ರೋಮನ್ ಕ್ಯಾಥ್‌ಲಿಕ್ ಚರ್ಚು ಸಹಾ ಸೇರಿ, ವಿಕಾಸವಾದವನ್ನು ಸ್ವೀಕರಿಸಿದವು. ಹೌದು, ಅವರಿನ್ನೂ ಸೃಷ್ಟಿಕ್ರಿಯೆಯಲ್ಲಿ ನಂಬುವುದಾಗಿ ವಾದಿಸಿದ್ದರು. ಮನುಷ್ಯನ ದೇಹವು ವಿಕಾಸಗೊಂಡ ಸಂಭಾವ್ಯತೆಗೆ ಅವರು ಎಡೆಗೊಟ್ಟರು, ಆದರೆ ಆತ್ಮ ಮಾತ್ರ ದೇವರಿಂದ ನಿರ್ಮಿಸಲ್ಪಟ್ಟಿತು ಎಂದು ವಾದಿಸಿದರು. 1960ರಲ್ಲಿ ಪ್ರಾಟೆಸ್ಟಂಟ್ ಧರ್ಮವು “ದೇವರ ಮರಣ” ಎಂದು ಘೋಷಿಸಿದ ದೇವತಾಶಾಸ್ತ್ರವನ್ನು ಹೊರತಂದರು. ಅನೇಕ ಪ್ರಾಟೆಸ್ಟಂಟ್ ವೈದಿಕರು ಪ್ರಾಪಂಚಿಕತೆಯ ಜೀವನಕ್ರಮವನ್ನು ಮನ್ನಿಸಿಬಿಟ್ಟರು. ಮದುವೆಗೆ ಮುಂಚೆ ಲೈಂಗಿಕ ಸಂಬಂಧಕ್ಕೆ ಮತ್ತು ಸಲಿಂಗಿಕಾಮಕ್ಕೂ ಅವರು ನೈತಿಕ ಬೆಂಬಲವನ್ನು ಕೊಟ್ಟರು. ಕೆಲವು ಕ್ಯಾಥ್‌ಲಿಕ್ ದೇವತಾಶಾಸ್ತ್ರಿಗಳು ಕ್ರಾಂತಿಕಾರಿ ಮಾರ್ಕ್ಸ್‌ವಾದದೊಂದಿಗೆ ಕ್ಯಾಥ್‌ಲಿಕ್‌ವಾದವನ್ನು ಮಿಶ್ರಮಾಡಿ ಮುಕ್ತ ದೇವತಾಶಾಸ್ತ್ರವನ್ನು ವಿಕಾಸಿಸಿದರು.
ಐಹಿಕವಾದದ ಹಿಮ್ಮೆಟ್ಟುವಿಕೆ
ಹೀಗೆ, ಐಹಿಕವಾದವು ಪ್ರಾಧಾನ್ಯತೆಗೆ ಬಂತು, ವಿಶಿಷ್ಟವಾಗಿ 1960ರ ದಶಕದಲ್ಲಿ ಮತ್ತು 1970ರ ದಶಕದ ಸುಮಾರು ನಡುಭಾಗದ ತನಕ. ಅನಂತರ ವಿಷಯಗಳು ಪುನಃ ಬದಲಾಗ ತೊಡಗಿದವು. ಧರ್ಮವು, ಹೆಚ್ಚಿನ ಭಾಗ ಅಲ್ಲದಿದ್ದರೂ, ಮುಖ್ಯತಮ ಚರ್ಚುಗಳು ದೃಶ್ಯಕ್ಕೆ ಹಿಮ್ಮರುಳುತ್ತಿರುವಂತೆ ಕಂಡುಬಂದವು. ಭೂಸುತ್ತಲೂ, 1970ರ ಕೊನೆಯಲ್ಲಿ ಮತ್ತು 1980ರ ದಶಕದಲ್ಲಿ ಹೊಸ ಧಾರ್ಮಿಕ ಪಂಗಡಗಳು ಸಂಖ್ಯೆಯಲ್ಲಿ ಬೆಳೆಯುವುದು ತೋರಿಬಂತು.
ಈ ರೀತಿಯಲ್ಲಿ ಧರ್ಮದ ಪುನರುಜ್ಜೀವಿತವೇಕೆ? ಫ್ರೆಂಚ್ ಸಮಾಜ ಶಾಸ್ತ್ರಜ್ಞ ಝೆಲ್ ಕೆಪೆಲ್ ಹೇಳಿದ್ದು, “ಲೌಕಿಕ ಶಿಕ್ಷಣ ಪಡೆದ ಸಾಮಾನ್ಯ ಜನರು . . . ಐಹಿಕ ಸಂಸ್ಕೃತಿಯು ತಮ್ಮನ್ನು ನಿಲುಕೊನೆಗೆ ತಲಪಿಸಿದೆಯೆಂದೂ ಮತ್ತು ದೇವರಿಂದ ತಮ್ಮನ್ನು ದೂರಗೊಳಿಸಿದ ಮೂಲಕ, ಮನುಷ್ಯರು ತಾವು ಬಿತ್ತಿರುವ ಅಹಂಕಾರ ಮತ್ತು ವ್ಯರ್ಥತ್ವದ ಫಲಗಳಾದ ಪಾತಕ, ವಿಚ್ಛೇದ, ಏಯ್ಡ್ಸ್, ಅಮಲೌಷಧಿಯ ದುರುಪಯೋಗ, [ಮತ್ತು] ಆತ್ಮಘಾತವೆಂಬ ಫಲಗಳನ್ನು ಕೊಯ್ಯುವದು ನಿಜವೆಂದು ಸಾಧಿಸುತ್ತಿದ್ದಾರೆ.”
ಐಹಿಕವಾದದ ಹಿಮ್ಮೆಟ್ಟುವಿಕೆಯು ಮಾರ್ಕ್ಸ್‌ವಾದ-ಲೆನಿನ್‌ವಾದದ ಇತ್ತೀಚಿಗಿನ ಕುಸಿತದಿಂದಾಗಿ ಇನ್ನಷ್ಟು ರಭಸವನ್ನು ಪಡೆದಿದೆ. ಅನೇಕಾನೇಕ ಜನರಿಗೆ ಈ ನಾಸ್ತಿಕ ತತ್ವಜ್ಞಾನವು ಸಾಕ್ಷತ್ ಧರ್ಮವೇ ಆಗಿ ಪರಿಣಮಿಸಿತ್ತು. ಹೀಗಿರಲಾಗಿ, ಅದರಲ್ಲೇ ತಮ್ಮ ಭರವಸವನ್ನು ಇಟ್ಟುಕೊಂಡಿದ್ದ ಆ ಜನರ ದಿಗ್ಭಮ್ರೆಯನ್ನು ಸ್ವಲ್ಪ ಊಹಿಸಿಕೊಳ್ಳಿರಿ! ವಾಷಿಂಗ್‌ಟನ್ ಪೋಸ್ಟ್ ಪತ್ರಿಕೆಯು ಮಾಸ್ಕೋದಿಂದ, ಕಮ್ಯೂನಿಸ್ಟ್ ಪಾರ್ಟಿಯ ಒಬ್ಬ ಹೈಸ್ಕೂಲ್ ಅಧ್ಯಕ್ಷನು ಹೀಗಂದದ್ದನ್ನು ಉಲ್ಲೇಖಿಸಿಯದೆ: “ಒಂದು ದೇಶವು ಅದರ ಆರ್ಥಿಕತೆ ಮತ್ತು ವ್ಯವಸ್ಥಾಪನೆಗಳ ಮೇಲೆ ಆಧರಿಸಿಕೊಂಡು ಬಾಳುತ್ತದ ಮಾತ್ರವೇ ಅಲ್ಲ, ಆದರೆ ಅದರ ಪುರಾಣಸಾಹಿತ್ಯ ಮತ್ತು ಮೂಲಪಿತೃಗಳ ಮೇಲೆ ಕೂಡಾ. ತಮ್ಮ ಅತ್ಯಂತ ಮಹಾನ್ ಪುರಾಣಗಳು ಸತ್ಯದ ಮೇಲಲ್ಲ, ಅಪಪ್ರಚಾರ ಮತ್ತು ಭ್ರಮೆಗಳ ಮೇಲೆ ಆಧರಿಸಿದ್ದವು ಎಂಬದನ್ನು ಕಂಡುಕೊಳ್ಳುವುದು ಯಾವುದೇ ಸಮಾಜಕ್ಕಾದರೂ ವಿಪತ್ಕಾರವೇ ಸರಿ. ಆದರೆ ಈಗ ಲೆನಿನ್ ಮತ್ತು ಕ್ರಾಂತಿಯ ವಿಷಯದಲ್ಲಿ ನಾವು ಅದನ್ನೇ ಅನುಭವಿಸುತ್ತಾ ಇದ್ದೇವೆ.”
ಕಮ್ಯೂನಿಸ್ಟ್ ಮತ್ತು ಬಂಡವಾಳಶಾಹಿ ಈ ಎರಡೂ ಆಡಳಿತಗಳ ಕುರಿತು ಮಾತಾಡುತ್ತಾ ಫ್ರೆಂಚ್ ಸಮಾಜತಜ್ಞ ಮತ್ತು ತತ್ವಜ್ಞಾನಿ ಎಡ್ಗರ್ ಮೋರನ್ ಒಪ್ಪಿಕೊಂಡದ್ದು: “ಶ್ರಮಜೀವಿವರ್ಗದಿಂದ ಎತ್ತಿಹಿಡಿಯಲ್ಪಟ್ಟಿದ್ದ ಭವ್ಯ ಭವಿಷ್ಯತ್ತು ಕುಸಿದು ಹೋದದ್ದನ್ನು ನಾವು ಕಂಡಿದ್ದೇವೆ ಮಾತ್ರವೇ ಅಲ್ಲ, ಎಲ್ಲಿ ವಿಜ್ಞಾನ, ತರ್ಕಬದ್ಧತೆ, ಮತ್ತು ಪ್ರಜಾಪ್ರಭುತ್ವವು ತನ್ನಷ್ಟಕ್ಕೆ ತಾನೇ ಸುಧಾರಣೆ ಹೊಂದಿ ಮುನ್ನಡೆಯುವದೆಂದು ನೆನಸಲಾಗಿತ್ತೊ ಆ ಐಹಿಕ ಸಮಾಜದ ಸ್ವಯಂಚಾಲಿತ ಮತ್ತು ಪ್ರಾಕೃತಿಕ ಪ್ರಗತಿಯ ಕುಸಿತವನ್ನು ಸಹಾ ನಾವು ಕಂಡಿದ್ದೇವೆ. . . . ಈಗ ಪ್ರಗತಿಗಾಗಿ ಯಾವ ಆಶ್ವಾಸನೆಯೂ ಇಲ್ಲ. ನಾವು ನಿರೀಕ್ಷಿಸಿದ್ದ ಭವ್ಯ ಭವಿಷ್ಯತ್ತು ಕುಸಿದು ಬಿದದ್ದೆ.” ದೇವರ ಹೊರತು ಒಂದು ಉತ್ತಮ ಲೋಕವನ್ನು ನಿರ್ಮಿಸಲು ಮನುಷ್ಯರ ಪ್ರಯತ್ನಗಳಲ್ಲಿ ಭರವಸವನ್ನು ಇಟ್ಟವರಾದ ಅನೇಕರ ಆಶಾಶೂನ್ಯ ಭಾವನೆಯು ಇದಾಗಿದೆ.
ಧರ್ಮದಲ್ಲಿ ಹೊಸಾಸಕ್ತಿ
ಈ ವಿಶ್ವವ್ಯಾಪ್ತ ಆಶಾಶೂನ್ಯತೆಯ ಭಾವವು ಹಲವಾರು ಪ್ರಾಮಾಣಿಕ ವ್ಯಕ್ತಿಗಳನ್ನು ತಮ್ಮ ಜೀವಿತಕ್ಕೆ ಒಂದು ಆತ್ಮಿಕ ಪಕ್ಕದ ಅಗತ್ಯವನ್ನು ಮನಗಾಣುವಂತೆ ನಡಿಸುತ್ತಾ ಇದೆ. ಅಂದರೆ ಧರ್ಮದ ಅಗತ್ಯತೆಯನ್ನು ಅವರು ಮನಗಾಣುತ್ತಾರೆ. ಆದರೆ ಮುಖ್ಯತಮ ಚರ್ಚುಗಳೊಂದಿಗೆ ಅವರು ಅತೃಪರ್ತು, ಮತ್ತು ಹೊಸ ಹೊಸ ಧರ್ಮಪಂಗಡಗಳ ಕುರಿತೂ ಕೆಲವರಿಗೆ ಸಂದೇಹ— ರೋಗವಾಸಿ ಪಂಥಗಳು, ದೈವದತ್ತಶಕ್ತಿಯ (charismatic) ಗುಂಪುಗಳು, ಪ್ರವಿಷ್ಟ ಯಾ ಗೋಪ್ಯ (esoteric) ಪಂಗಡಗಳು ಮತ್ತು ಸೈತಾನನ ಭಕ್ತರ ಗುಂಪುಗಳಲ್ಲಿ ಸಹಾ. ಧಾರ್ಮಿಕ ಮತಭ್ರಾಂತಿಯು ಸಹಾ ತನ್ನ ಕುರೂಪ ತಲೆಯನ್ನು ಎತ್ತತೊಡಗಿದೆ. ಹೀಗೆ, ಹೌದು, ಧರ್ಮವು ಒಂದು ರೀತಿಯಲ್ಲಿ ಹಿಮ್ಮರಳುತ್ತಾ ಇದೆ. ಆದರೆ ಅಂಥ ಒಂದು ಧರ್ಮಕ್ಕೆ ಹಿಮ್ಮರಳುವಂಥಾದ್ದು ಮಾನವಕುಲಕ್ಕೆ ಒಳ್ಳೆಯದೊ? ನಿಶ್ಚಯವಾಗಿ ಯಾವುದೇ ಒಂದು ಧರ್ಮವು ಮಾನವ ಕುಲದ ಆತ್ಮಿಕ ಆವಶ್ಯಕತೆಯನ್ನು ನಿಜವಾಗಿ ಪೂರೈಸುತ್ತದೊ? (w91 12/1)
[ಪುಟ 3 ರಲ್ಲಿರುವ ಚಿತ್ರ]
“ಧರ್ಮವು ದಬ್ಬಾಳಿಕೆಗೊಳಗಾದ ಜೀವಿಗಳ ನಿಟ್ಟುಸಿರು, ನಿರ್ದಯ ಲೋಕದ ಭಾವುಕತೆ, ಮತ್ತು ಜೀವರಹಿತ ಪರಿಸ್ಥಿತಿಯ ಸಾರವಾಗಿದೆ. ಅದು ಜನರ ಶಾಮಕ ಔಷಧ”
[ಕೃಪೆ]
Photo: New York Times, Berlin—33225115
[ಪುಟ 4 ರಲ್ಲಿರುವ ಚಿತ್ರ]
ವಡ್ಲಿಮೀರ್ ಲೆನಿನ್ (ಮೇಲೆ) ಮತ್ತು ಕಾರ್ಲ್ ಮಾರ್ಕ್ಸ್‌ರು ಧರ್ಮವು ಮಾನವ ಪ್ರಗತಿಗೆ ಒಂದು ಆತಂಕವೆಂದು ಎಣಿಸಿದರು
[ಕೃಪೆ]
Musée d’Histoire Contemporaine—BDIC (Universitiés de Paris)
[ಪುಟ 5 ರಲ್ಲಿರುವ ಚಿತ್ರ]
ಮಾರ್ಕ್ಸ್‌ವಾದಿ ಮತ್ತು ಲೆನಿನ್‌ವಾದಿ ವಿಚಾರತತ್ವವು ಲಕ್ಷಾಂತರ ಜನರ ಹೃದಯಗಳಲ್ಲಿ ಆಶಾಗೋಪುರವನ್ನೆಬ್ಬಿಸಿತ್ತು
[ಕೃಪೆ]
Musée d’Histoire Contemporaine—BDIC (Universitiés de Paris)
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover photo: Garo Nalbandian