ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 7/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1992
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1993
  • ನಮ್ಮ ವಾಚಕರಿಂದ
    ಎಚ್ಚರ!—1993
  • ನಮ್ಮ ವಾಚಕರಿಂದ
    ಎಚ್ಚರ!—1992
  • ನಮ್ಮ ವಾಚಕರಿಂದ
    ಎಚ್ಚರ!—1992
ಎಚ್ಚರ!—1992
g92 7/8 ಪು. 30

ನಮ್ಮ ವಾಚಕರಿಂದ

ಟೀಕೆಗಳನ್ನು ಅಂಗೀಕರಿಸುವುದು ಇಂದು ಸ್ವಲ್ಪ ಮೊದಲು ನಾನು ಅನೇಕ ವಾರಗಳಿಂದ ತಯಾರಿಸುತ್ತಿದ್ದ ಒಂದು ಯೋಜನೆಯ ಮೇಲೆ ನನಗೆ ಸ್ವಲ್ಪ ಟೀಕೆ ದೊರೆಯಿತು. ಟೀಕೆ ಲಾಭದಾಯಕವಾಗಿದ್ದರೂ ನನ್ನ ಮೇಲ್ವಿಚಾರಕರು ಕಟುವಾಗಿ ಮಾತಾಡಿದರು. ಅದು ನನ್ನನ್ನು ತೀರಾ ಕಲಕಿಸಿತು. ನಾನು ಮನೆಗೆ ಹೋದಾಗ “ನೀವು ಟೀಕೆಯನ್ನು ದ್ವೇಷಿಸುತ್ತೀರೊ?” ಎಂಬ ಲೇಖನವನ್ನು ಓದಿದೆ. (ಮಾರ್ಚ್‌ 8, 1992) ಅದು ನನ್ನ ಹೊರನೋಟವನ್ನೆಲ್ಲ ಬದಲಾಯಿಸಿತೆಂದು ಹೇಳಬೇಕಾದ ಅಗತ್ಯವಿಲ್ಲ.

ಡಿ. ಬಿ., ಯುನೊಯಿಟೆಡ್‌ ಸ್ಟೇಟ್ಸ್‌.

ಲೇಖನ ನಿಜವಾಗಿಯೂ ಸಹಾಯಕಾರಿಯಾಗಿತ್ತು. ಇತ್ತೀಚೆಗೆ ನನಗೆ ಟೀಕೆ ಸಿಕ್ಕಿದ್ದುದರಿಂದ, ನಾನು ಖಿನ್ನಳಾಗಿಯೂ ಹತಾಶಳಾಗಿಯೂ ಇದ್ದೆ. ಆದರೂ, ಈ ಲೇಖನವನ್ನು ಪುನಃ ಪುನಃ ಓದಿದಾಗ, ನನ್ನ ಸಮಸ್ಯೆಯನ್ನು ಜಯಿಸುವಂತೆ ಸಹಾಯ ದೊರೆಯಿತು.

ಎನ್‌. ಒ., ಜಪಾನ್‌

ಮನುಷ್ಯ ಮತ್ತು ಮೃಗ “ಮನುಷ್ಯನು ಮತ್ತು ಮೃಗ ಶಾಂತಿಯಿಂದ ಜೀವಿಸುವಾಗ” (ಮಾರ್ಚ್‌ 8, 1992) ಎಂಬ ವಿಷಯಕ್ಕೆ ನಾನು ಹೃತ್ಪೂರ್ವಕವಾದ ಗಣ್ಯತೆ ವ್ಯಕ್ತಪಡಿಸುತ್ತೇನೆ. ನಾನು ಒಂದು ವರ್ಷದಿಂದ ಬೈಬಲಿನ ವಿದ್ಯಾರ್ಥಿಯಾಗುವುದರಿಂದ ಈ ಭೂಮಿಯನ್ನು ಶಾಶ್ವತ ಪ್ರಮೋದವನವಾಗಿ ಮಾಡುವ ಯೆಹೋವನ ಉದ್ದೇಶವನ್ನು ನಾನು ತಿಳಿದಿದ್ದೇನೆ. ಈ ಲೇಖನ, ಯೆಹೋವನ ಕಡೆಗೆ ನನಗಿದ್ದ ಪ್ರೀತಿಯನ್ನೂ ನೂತನ ಲೋಕದಲ್ಲಿ ಮೃಗಗಳೊಂದಿಗೆ ಶಾಂತಿಯಿಂದ ಜೀವಿಸುವ ನನ್ನ ಇಚ್ಫೆಯನ್ನೂ ವರ್ಧಿಸಿದೆ.

ಎ. ಎಸ್‌., ಬ್ರೆಸೀಲ್‌

ನಾನು ಯಾವಾಗಲೂ ಪ್ರಾಣಿಗಳನ್ನು ಪ್ರೀತಿಸುತ್ತಿದ್ದೆ. ಒಂದು ವಿಶ್ವವಿದ್ಯಾಲಯಕ್ಕೆ ಹೋಗಿ ಮೃಗಶಾಸ್ತ್ರದ ಕಾರ್ಯಕ್ರಮಕ್ಕೆ ಸೇರುವ ಮನಸ್ಸೂ ನನಗಿತ್ತು. ಆದರೆ, ಕೇವಲ ಕೆಲವೇ ಪ್ರಾಣಿಜಾತಿಗಳ ಅಧ್ಯಯನ ಮಾಡಲು ಇಡೀ ಜೀವಮಾನವನ್ನು ಕಳೆಯುವುದರಿಂದ ನಾನು ಏನು ಸಂಪಾದಿಸುತ್ತಿದ್ದೆ? ಯೆಹೋವನ ನೂತನ ಲೋಕದಲ್ಲಿ, ನಾನು ಸಕಲ ಮೃಗಗಳನ್ನು—ಸದಾಕಾಲ—ಅಧ್ಯಯನ ಮಾಡಬಲ್ಲೆ! ಒಂದು ದಿನ ನನ್ನ ಬಯಕೆ ಈಡೇರುತ್ತದೆಂಬ ತಿಳಿವಳಿಕೆ ಕೊಟ್ಟ ಈ ಲೇಖನದ ವಾಚನ ನನಗೆ ಆನಂದ ಬಾಷ್ಪಗಳನ್ನು ಬರಿಸಿತು.

ಎಲ್‌. ಎಮ್‌., ಯುನೊಯಿಟೆಡ್‌ ಸ್ಟೇಟ್ಸ್‌

ವೃದ್ಧರ ಪರಾಮರಿಕೆ “ವಯಸ್ಸಾದವರನ್ನು ಪರಾಮರಿಸುವುದು—ವರ್ಧಿಸುತ್ತಿರುವ ಒಂದು ಸಮಸ್ಯೆ” (ಜನವರಿ 8, 1992) ನನಗೆ ತುಂಬ ಪ್ರೋತ್ಸಾಹನೆ ನೀಡಿತು. ನನ್ನ 86 ವಯಸ್ಸಿನ ತಂದೆಗೆ ಈಗ ಆಲ್ಸೈಮರ್ಸ್‌ ರೋಗವಿದೆ, ಮತ್ತು ನಾನು ಅವರನ್ನು ಆಸ್ಪತ್ರೆಯ ಬದಲು ಮನೆಯಲ್ಲಿ ಪರಾಮರಿಸಬೇಕೆಂದಿದ್ದೆ. ಅವರ ಅವಸ್ಥೆ ಈಗ ಕೆಟ್ಟಿರುವುದರಿಂದ, ಅವರನ್ನು ಪರಾಮರಿಸುವ ಕಷ್ಟ ಮತ್ತು ಮಾನಸಿಕ ಶ್ರಮ ಜಾಸ್ತಿಯಾಗಿದೆ. ತೀರಾ ನಿರಾಶೆಯ ಸ್ಥಿತಿಗೆ ನಾನು ತಲುಪಿದೆ! ಆಗ ನಾನು ನಿಮ್ಮ ಲೇಖನಗಳನ್ನು ಓದಿದೆ. ಅತಿಯಾಗಿ ಸಮಾಧಾನ ಹೊಂದಿದ ನನ್ನ ಕಣ್ಣುಗಳಲ್ಲಿ ಕಣ್ಣೀರಿಳಿಯಿತು. ಅನೇಕಾನೇಕ ಸಮಸ್ಯೆಗಳೂ ಕಷ್ಟದ ಸಮಯಗಳೂ ಮುಂದಿರುವುದಾದರೂ ನನ್ನ ತಂದೆಯನ್ನು ಕೊನೆಯ ತನಕ ಪರಾಮರಿಸುವ ನನ್ನ ದೃಢತೆಗೆ ಬಲವಾದ ವರ್ಧಕ ಶಕ್ತಿ ದೊರೆತಿದೆ.

ಟಿ. ಎಚ್‌., ಜಪಾನ್‌

ಮೆಕ್ಸಿಕೊ ಸಿಟಿ ಮೆಕ್ಸಿಕೊ ಸಿಟಿ—ಬೆಳೆಯುತ್ತಿರುವ ದೈತ್ಯನೆ?” (ಫೆಬ್ರವರಿ 8, 1992) ಎಂಬ ಲೇಖನದಲ್ಲಿ ತಪ್ಪಿದೆ ಎಂದು ನನಗೆ ತಿಳಿದುಬಂತು. ದೊಡ್ಡ ಕುಟುಂಬವಿರುವುದು ಸಾಂಸ್ಕೃತಿಕ ಪರಂಪರೆಯೆಂದು ನೀವನ್ನುತ್ತೀರಿ. ಆದರೆ ಈ ಘಟನೆ ನಡೆಯುವುದು ದೇಶದ ಕೆಲವು ಭಾಗಗಳಲ್ಲಿ ಮಾತ್ರ—ಮೆಕ್ಸಿಕೊ ಸಿಟಿಯಲ್ಲಲ್ಲ.

ಎಸ್‌. ಸಿ., ಮೆಕ್ಸಿಕೊ

ಆ ಲೇಖನದ ಕಾರಣ ತಪ್ಪು ಗ್ರಹಿಕೆಯಾಗಿರುವಲ್ಲಿ ನಮಗೆ ಖೇದವಿದೆ. ಆದರೆ, ಆ ಹೇಳಿಕೆಯನ್ನು ಕೇವಲ ಮೆಕ್ಸಿಕೊ ಸಿಟಿಯನ್ನು ಸೂಚಿಸಿಯಲ್ಲ, ಇಡೀ ಮೆಕ್ಸಿಕೊ ದೇಶವನ್ನು ಸೂಚಿಸಿ ಮಾಡಲಾಗಿತ್ತು.—ಸಂ.

ಮಗುವಿನ ಮರಣ “ಬೈಬಲಿನ ದೃಷ್ಟಿಕೋನ—ದೇವರು ನನ್ನ ಮಗುವನ್ನು ಏಕೆ ಕೊಂಡೊಯ್ದನು?” (ಮೇ 8, 1992) ಈ ಲೇಖನ, ನಾನು ಮತ್ತು ನನ್ನ ಗಂಡ ನಮ್ಮ ಪ್ರಥಮ ಮಗುವನ್ನು ಅಕಾಲ ಪ್ರಸವದ ಕಾರಣ ಕಳೆದುಕೊಂಡ ದಿನವೇ ಬಂತು. ದೇವರು ಈ ನಷ್ಟಕ್ಕೆ ಕಾರಣನಲ್ಲವೆಂಬುದಕ್ಕೆ ಪುನರಾಶ್ವಾಸನೆಯ ಜ್ಞಾಪನ ಇದಾಗಿತ್ತು.

ಜೆ. ಜಿ., ಯುನೊಯಿಟೆಡ್‌ ಸ್ಟೇಟ್ಸ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ