ದೇಹವು ಕೊಡುವ ಎಚ್ಚರಿಕೆಗೆ ಕಿವಿಗೊಡುವುದು
ಎಚ್ಚರ!ದ ಐರ್ಲೆಂಡಿನ ಸುದ್ದಿಗಾರರಿಂದ
ಯೂನ ಮತ್ತು ಅವಳ ಗಂಡ ರಾನ್ ಎಂಬವರಿಗೆ ಆ ಅನುಭವ ಗಾಬರಿಗೊಳಿಸುವಂಥದ್ದೂ ವೇದನಾಭರಿತವೂ ಆಗಿತ್ತು. ಜನವರಿಯ ಒಂದು ಶೀತಲ ರಾತ್ರಿಯಲ್ಲಿ, ಯೂನ ಮೂರ್ಛೆ ತಪ್ಪಿ ಬಿದ್ದಳು. ರಾನ್ ಡಾಕ್ಟರರನ್ನು ಕರೇಕಳುಹಿಸಲಾಗಿ, ಅವರು ಅದು ಅವಳ ಅಂಡಾಶಯದ ಮೇಲೆ ಪ್ರಭಾವ ಬೀರಿದ ಚೋದಕ ಸ್ರಾವದ ಅಸಮತೆಯಾಗಿರಸಾಧ್ಯವಿದೆಯೆಂದು ಹೇಳಿ ಅವಳನ್ನು ಆಸ್ಪತ್ರೆಗೆ ಕಳುಹಿಸಿದರು. ರಾನ್, ರಕ್ತಸ್ರಾವವಾಗುತ್ತಿದ್ದ ಮತ್ತು ತೀರಾ ನೋವನ್ನು ಅನುಭವಿಸುತ್ತಿದ್ದ ತನ್ನ ಮಡದಿಯನ್ನು ಕಾರಿನಲ್ಲಿ ಹಾಕಿ ಉಬ್ಬುಗಳಿದ್ದ ಕತ್ತಲಿನ ಬೆಟ್ಟದ ರಸ್ತೆಗಳಲ್ಲಿ 80 ಕಿಲೊಮೀಟರ್ ದೂರದ ಆಸ್ಪತ್ರೆಗೆ ಒಯ್ದನು.
ಆದರೆ ಆ ಆಸ್ಪತ್ರೆಗೆ ಈ ಸಮಸ್ಯೆಯ ಆರೈಕೆ ಮಾಡಲಾಗದರ್ದಿಂದ, ಅವಳನ್ನು ಹತ್ತಿರದ ಇನ್ನೊಂದು ಹೆಚ್ಚು ದೊಡ್ಡ, ಹೆಚ್ಚು ಆಧುನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವಳಿಗೆ ಸಫಲ ಶಸ್ತ್ರಕ್ರಿಯೆ ನಡೆದು ಅವಳು ಉತ್ತಮವಾಗಿ ಗುಣಹೊಂದಿದಳು.
ಯೂನಳ ಜೀವವನ್ನುಳಿಸಿದ ಆಸ್ಪತ್ರೆಯ ಸಿಬ್ಬಂದಿಗಳ ನೈಪುಣ್ಯ ಮತ್ತು ಪರಾಮರಿಕೆಗೆ ರಾನ್ ಮತ್ತು ಯೂನ ಕೃತಜ್ಞರಾಗಿದ್ದರು. ಅವರು ಆ್ಯನೆಸೆಟ್ತಿಸ್ಟ್ ವೈದ್ಯರಿಗೆ ಉಪಕಾರ ಹೇಳುತ್ತಿದ್ದಾಗ, ಆ ವೈದ್ಯರು ಸಂಗತಿ ಒಳ್ಳೆಯದಾಗಿ ಪರಿಣಮಿಸಿದುದಕ್ಕೆ ಸಂತೋಷಪಟ್ಟು, ಬಳಿಕ ಈ ಸ್ವಾರಸ್ಯಕರವಾದ ಹೇಳಿಕೆಯನ್ನು ಕೊಟ್ಟರು: “ಥಟ್ಟನೆ ತೋರಿಬರುವ ಅಂಡಾಶಯದ ರೋಗಗಳು ತೀರಾ ಕೊಂಚ. ಅವುಗಳಲ್ಲಿ ಅಧಿಕಾಂಶ ರೋಗಗಳು ಅತಿ ಮುಂದಾಗಿಯೆ ರೋಗಸೂಚನೆಗಳನ್ನು ಕೊಡುತ್ತವೆ.” ಅವರು ಹೇಳಿದುದರ ಅರ್ಥವೇನು?
ಎಚ್ಚರಿಕೆಯ ಸಂಕೇತಗಳು
ಎರಡು ವರ್ಷಗಳ ಹಿಂದೆ ಅವಳಿಗೆ ತೊಡಕುಂಟಾಗಿತ್ತು ಎಂದು ಯೂನ ವಿವರಿಸುತ್ತಾಳೆ. ಮುಟ್ಟಿನ ಸಮಯದಲ್ಲಿ ಶ್ರಮದ ಕೆಲಸ ಮಾಡಿದರೆ ಮಾತ್ರ ಅವಳಿಗೆ ರಕ್ತಸ್ರಾವ—ಅದೂ ಹೆಚ್ಚಾಗಿ ರಕ್ತದ ಗೆಡ್ಡೆಯಾಗಿ—ಆಗುತ್ತಿತ್ತು. ಅವಳನ್ನುವುದು: “ನಾನು ವೈದ್ಯಕೀಯ ಸಲಹೆಯನ್ನು ಹುಡುಕಬೇಕಾಗಿತ್ತು, ಅದರೆ ನಾನು, ಬೇಗನೆ ಋತುಬಂಧ ಕಾಲವನ್ನು ಪ್ರವೇಶಿಸುತ್ತಿದ್ದೇನೆಂದು ನೆನಸಿ ಅದನ್ನು ಅಲಕ್ಷ್ಯ ಮಾಡಿದೆ. ಆದರೆ, ಆ ಬಳಿಕ ಜನವರಿಯಲ್ಲಿ ನನ್ನ ಮುಟ್ಟು ಎರಡು ದಿನಗಳಲ್ಲಿ ನಿಂತು, ಬಳಿಕ ಮೂರು ದಿನಗಳಲ್ಲಿ ಬಲು ಜಾಸ್ತಿ ಸ್ರಾವ, ದೊಡ್ಡ ಗೆಡ್ಡೆಗಳೊಂದಿಗೆ ಆಗತೊಡಗಿತು. ನಾನು ನಿಜವಾಗಿಯೂ ಚಿಂತಿತಳಾಗದಿದ್ದರೂ, ಎರಡನೆಯ ದಿನದಲ್ಲಿ ತೀರಾ ಅಸ್ವಸ್ಥಳಾದುದರಿಂದ ಹಾಸಿಗೆ ಹಿಡಿಯಬೇಕಾಯಿತು. ಆದರೂ ನಾವು ಡಾಕ್ಟರರನ್ನು ಕರೆಯಲಿಲ್ಲ. ನನ್ನನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕಾಗಿದ್ದ ರಾತ್ರಿ ಅದಾಗಿತ್ತು.”
ಅವಳ ಅನುಭವವು ಒಂದು ಜೀವಾಪಾಯದ ತುರ್ತಾಗುವುದರಿಂದ ತಪ್ಪಿಸಸಾಧ್ಯವಿತ್ತೆ? ರೋಗಸೂಚನೆಗಳು ಯಾವುದೆಂದು ತಿಳಿಯಸಾಧ್ಯವಿರುತ್ತಿದ್ದರೆ ಮತ್ತು ವಿಳಂಬಿಸದೆ ವರ್ತಿಸುತ್ತಿದ್ದರೆ ಸಾಧ್ಯವಿರುತ್ತಿತ್ತು ಎಂಬುದು ಯೂನಳ ಅಭಿಪ್ರಾಯ. ಅದರೆ ದುರ್ಭಾಗ್ಯವಶಾತ್, “ಅನೇಕ ಹೆಂಗಸರಂತೆ, ನಾನು ಯಾವಾಗಲೂ ಮುಟ್ಟಿನ ಸಂಬಂಧದ ಯಾವ ಸಂಗತಿಯನ್ನೂ ಗುರುತರವಾಗಿ ತಕ್ಕೊಳ್ಳದೆ, ಅಪ್ರಧಾನವಾಗಿ ತಕ್ಕೊಂಡೆ.” ಆದರೆ ವಾಸ್ತವವಾಗಿ, ಯೂನಳ ರೋಗಸೂಚನೆ ಯಾವುದಕ್ಕೆ ಒಡನೆ ಗಮನಕೊಡಬೇಕೊ ಆ ರೀತಿಯ ಅಂಡಾಶಯದ ರೋಗವಾಗಿತ್ತು.
ಪ್ರತಿ ಮಾಸ, ಮಕ್ಕಳನ್ನು ಹೆರುವ ವಯಸ್ಸಿನ ಮಹಿಳೆಯರಿಗೆ ಅವರ ಸಾಮಾನ್ಯ ಆರೋಗ್ಯ ಹೇಗಿದೆಯೆಂಬ ಒಂದು ಸೂಚಕವಿದೆ: ಮುಟ್ಟು ಎಂಬ ನೈಸರ್ಗಿಕ ಕಾರ್ಯಗತಿ. ಇದರಲ್ಲಿ ಗಮನಾರ್ಹ ಅನಿಯತ ಕ್ರಮವಿರುವಲ್ಲಿ ಅದು ಎಚ್ಚರಿಕೆಯ ಸಂಕೇತದಂತಿದೆ. ಕೆಲವು ಸಂದರ್ಭಗಳಲ್ಲಿ, ಈ ಎಚ್ಚರಿಕೆಯನ್ನು ಕೇಳಲು ವಿಳಂಬವು ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯ ಬದಲಿಗೆ ಶಸ್ತ್ರ ಚಿಕಿತ್ಸೆಯಲ್ಲಿ ಅಂತ್ಯಗೊಂಡೀತು.
ಹಾಗಾದರೆ, ಈ ಸೂಚನೆಗಳು ಅಷ್ಟೊಂದು ಸಲ ಅಸಡ್ಡೆ ಯಾ ಅಪ್ರಧಾನ ಮಾಡಲ್ಪಡುವುದೇಕೆ? ಅನೇಕ ಕುಟುಂಬಗಳಲ್ಲಿ ಕುಟುಂಬದ ಆಹಾರವನ್ನು ಯೋಜಿಸಿ, ಔಷಧ ಕೊಟ್ಟು, ಕುಟುಂಬಾರೋಗ್ಯವನ್ನು ಪರೀಕ್ಷಿಸುವವಳು ಹೆಂಡತಿ. ಹೀಗೆ ಮಾಡುವಾಗ ಅವಳು ತನ್ನ ಸಮಸ್ಯೆಗಳನ್ನು ಅಸಡ್ಡೆ ಮಾಡಬಹುದು. ಯೂನಳ ಉದಾಹರಣೆಯಂತೆ, ಪ್ರಾಯಶಃ ಅವಳಿಗೆ ತನ್ನ ರೋಗಸೂಚನೆಗಳು ಅನಿಶ್ಚಿತವಾಗಿವೆ. ಅಥವಾ, ಆರೋಗ್ಯಕ್ಕೆ ಹಣ ಕಡಮೆ ಇರುವುದರಿಂದ ಅವಳು ತನ್ನ ಮಕ್ಕಳಿಗೆ ಮತ್ತು ಗಂಡನಿಗೆ ಆದ್ಯತೆ ಕೊಟ್ಟು, ತನ್ನ ಸ್ವಂತ ಸಮಸ್ಯೆಗಳು ಹೇಗೊ ಕಣ್ಮರೆಯಾದಾವೆಂದು ನಿರೀಕ್ಷಿಸಬಹುದು. ಅವಳು ಭಯಪಡುತ್ತಾ, ತನ್ನ ಪ್ರಸ್ತುತದ ಅಸ್ವಾಸ್ಥ, ಆಸ್ಪತ್ರೆಯಲ್ಲಿ ಅನುಭವಿಸಬಹುದಾದ ಕ್ಲೇಶಕ್ಕಿಂತ ಉತ್ತಮವಾಗಿರಬಹುದೆಂದು ಎಣಿಸಬಹುದು. ಆಕೆ ಉದ್ಯೋಗದಲ್ಲಿರುವ ತಾಯಿಯಾಗಿದ್ದು, ತನ್ನ ಸ್ವಂತ ಹಿತಕ್ಕಾಗಿ ರಜೆ ತೆಗೆದುಕೊಳ್ಳಲು ಒಂದೇ ಅಶಕ್ತಳು ಇಲ್ಲವೆ ಇಷ್ಟವಿಲ್ಲದವಳು ಆಗಿರಬಹುದು.
ಡಾಕ್ಟರರು ಹೇಳುವುದೇನಂದರೆ, ಅನೇಕ ಸಂದರ್ಭಗಳಲ್ಲಿ ಒಬ್ಬ ಹೆಂಡತಿ ತನ್ನ ಆರೋಗ್ಯ ಸಮಸ್ಯೆಗಳ ವಿಷಯ ಒಂಟಿಯಾಗಿ ಸಂಕಟಪಡುವಂತೆ ಬಿಡಲ್ಪಡುತ್ತಾಳೆ. ಅವಳ ಗಂಡನು “ಹೆಂಗಸರ ಸಮಸ್ಯೆಗಳ” ಸಂಬಂಧದಲ್ಲಿ ಪ್ರಾಯಶಃ ಹೆಚ್ಚು ಚಿಂತಿತನಾಗಿರಲಿಕ್ಕಿಲ್ಲ. ಆದರೂ, ತಮ್ಮ ಪತ್ನಿಯರನ್ನು ಪ್ರೀತಿಸುವ ಪತಿಗಳು, ತಮ್ಮ ಪತ್ನಿಯರ ಹಿತವನ್ನು ನೋಡಿಕೊಳ್ಳುವ ದೃಷ್ಟಿಯಿಂದ ಇಂಥ ವಿಷಯಗಳ ಮಾಹಿತಿಯನ್ನು ಪಡೆದುಕೊಳ್ಳುವರು. ಬೈಬಲು ಪುರುಷರನ್ನು ಪ್ರೋತ್ಸಾಹಿಸುವುದು: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು.” (ಎಫೆಸ 5:28, 33) ಹೀಗಿರುವುದರಿಂದ, ಗಂಡಂದಿರು ಮತ್ತು ಹೆತ್ತವರು ತಮ್ಮ ಹೆಂಡತಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅವರು ಅನಾವಶ್ಯಕವಾದ ತುರ್ತು ಪರಿಸ್ಥಿತಿಗಳಿಂದ ದೂರವಿರುವಂತೆ ಹೇಗೆ ಸಹಾಯ ಮಾಡಬಲ್ಲರು?
ಸೂಚನೆಗಳಿಗೆ ಲಕ್ಷ್ಯ ಕೊಡಿರಿ
ಎಚ್ಚರಿಕೆಯ ಸೂಚನೆಗಳಾಗಿರಬಹುದಾದ ಅಸಾಮಾನ್ಯವಾದ ಸಂಭವಗಳಿಗೆ ಎಚ್ಚರವಾಗಿರ್ರಿ. ಅನಿಯತ ಕ್ರಮದ ರಕ್ತಸ್ರಾವ ಯಾ ಸೂಸುವಿಕೆ, ಬೇನೆಯೊಂದಿಗೆ ಆಗದಿದ್ದರೂ, ಪರೀಕೆಗ್ಷೊಳಗಾಗಬೇಕು.a ಆಸಾಧಾರಣವಾದ ಆಯಾಸ, ಹೆಚ್ಚು ರಕ್ತ ನಷ್ಟ, ಮತ್ತು ಮೂತ್ರ ಮಾಡುವಾಗ ಸಮಸ್ಯೆ—ಇಂಥವುಗಳನ್ನೂ ಪರೀಕೆಗ್ಷೊಳಪಡಿಸಬೇಕು. ಇದು ನಾರುಗಡ್ಡೆಗಳ (fibroids) ರೋಗಸೂಚನೆಯಾಗಿರಬಹುದು ಮತ್ತು ಬೇಗನೆ ಕಂಡುಹಿಡಿಯುವಲ್ಲಿ, ಅದನ್ನು ನಿಭಾಯಿಸುವುದು ಸುಲಭವಾಗಬಹುದು.
ಎಡೆಬಿಡದ ಬೆನ್ನು ನೋವು, ಯೋನಿಯಲ್ಲಿ ಒತ್ತಡ, ಯಾ ಪ್ರಯಾಸದ ಕೆಲಸದ ಸಮಯ ಮೂತ್ರನಷ್ಟ, ಇವುಗಳನ್ನೂ ಅಲಕ್ಷ್ಯ ಮಾಡಬಾರದು. ಈ ಸೂಚನೆಗಳು, ಆದಿ ಹಂತಗಳಲ್ಲಿ ವ್ಯಾಯಾಮ ಕೆಲವು ಬಾರಿ ಸರಿಪಡಿಸಬಲ್ಲ, ಆದರೆ ವಿಳಂಬವಾಗುವಲ್ಲಿ ಶಸ್ತ್ರ ಚಿಕಿತ್ಸೆ ಬೇಕಾಗಬಹುದಾದ ಪರಿಸ್ಥಿತಿಯನ್ನು ಸೂಚಿಸಬಲ್ಲವು.b
ಇಂಥ ರೋಗಸೂಚನೆಗಳಿಗೆ ಪ್ರತಿವರ್ತಿಸುವುದಲ್ಲದೆ, 25ಕ್ಕೆ ಮೇಲಿನ ವಯಸ್ಸಿನ ಸ್ತ್ರೀಯರು ಕ್ರಮದ ವೈದ್ಯಕೀಯ ಪರೀಕೆಗ್ಷೆ, ವಿಶೇಷವಾಗಿ ಸ್ತನ, ಹೊಟ್ಟೆ ಮತ್ತು ವಸ್ತಿ ಕುಹರಗಳ ಸಂಬಂಧದಲ್ಲಿ, ತಮ್ಮನ್ನು ಒಳಪಡಿಸಿಕೊಳ್ಳುವುದು ಹಿತಕರ. ಇದನ್ನು ಎರಡು ವರ್ಷಗಳಿಗೆ ಒಮ್ಮೆ ಅಥವಾ ಆ ಸ್ತ್ರೀಯ ಕುಟುಂಬದ ಮತ್ತು ವ್ಯಕ್ತಿಪರ ಆರೋಗ್ಯ ಚರಿತ್ರೆ ಸೂಚಿಸುವುದಕ್ಕನುಸಾರವಾಗಿ ಮಾಡಬಹುದು.
ಆ ವಿಶೇಷ ಸಮಯಗಳಲ್ಲಿ
ಸ್ತ್ರೀಯನ್ನು ಪ್ರೀತಿಸುವವರು ಅವಳಿಗೆ ವಿಶೇಷ ಗಮನ ಕೊಡಬೇಕಾದ, ಅವಳ ಜೀವನದ ಮೂರು ಹಂತಗಳನ್ನೂ ಜ್ಞಾಪಿಸಿಕೊಳ್ಳಿರಿ: ಮುಟ್ಟಿನಾರಂಭ; ಪ್ರಸವ; ಮತ್ತು ಋತುಬಂಧ. ಈ ಮೂರು ಹಂತಗಳಲ್ಲಿ ಪ್ರತಿಯೊಂದರಲ್ಲಿಯೂ ವಿಳಂಬಿಸದ ವೈದ್ಯಕೀಯ ಸಲಹೆ ಯಾ ಚಿಕಿತ್ಸೆ ತುರ್ತು ಪರಿಸ್ಥಿತಿಯನ್ನು ತಡೆಯಬಹುದು.
ಮುಟ್ಟಿನಾರಂಭ: ತಮ್ಮ ದೇಹದ ಕಾರ್ಯಕಲಾಪಗಳನ್ನು ತಿಳಿಯಲು ಮತ್ತು ಮುಟ್ಟಿನಾರಂಭವನ್ನು ಸುಲಭವಾಗಿ ಗ್ರಹಿಸುವಂತೆ ಸಹಾಯ ಮಾಡಲು ಎಳೆಯ ಹುಡುಗಿಯರಿಗೆ ಆರೋಗ್ಯ ವಿದ್ಯಾಭ್ಯಾಸ ಅಗತ್ಯ. ಹೆತ್ತವರು, ವಿಶೇಷವಾಗಿ ತಾಯಂದಿರು ತಮ್ಮ ಹೆಣ್ಣುಮಕ್ಕಳೊಂದಿಗೆ ಮುಚ್ಚುಮರೆಯಿಲ್ಲದ ಮತ್ತು ತೆರೆದ ಚರ್ಚೆಗಳನ್ನು ನಡೆಸಬೇಕು. ಸಮಸ್ಯೆಯಿರುವಲ್ಲಿ ಹುಡುಗಿಯರು ಲಜ್ಜೆಯಿಂದ ಏನೋ ದೋಷವಾಗಿದೆ ಎಂದು ನೆನಸುವಂತೆ ಅಥವಾ ತಿಂಗಳಿನ ಆ ಸಮಯದಲ್ಲಿ ತುಂಬ ಸ್ರಾವವಾಗುವ ಮುಟ್ಟನ್ನು ಅಥವಾ ತೀರಾ ವೇದನೆಯನ್ನು ಅನುಭವಿಸಬೇಕಾಗುವುದು ಎಂದು ನೆನಸುವಂತೆ ಬಿಡಬಾರದು. ಅವರ ಹೆತ್ತವರು ಸಹಾಯ ಮಾಡಲು ಅಶಕ್ತರಾಗುವಲ್ಲಿ, ಪ್ರಾಯಶಃ ವಯಸ್ಸಾಗಿರುವ ಸ್ತ್ರೀ ಮಿತ್ರಳೊಬ್ಬಳು ಯೋಗ್ಯ ವೈದ್ಯಕೀಯ ಸಲಹೆಯ ಕುರಿತು ಮಾರ್ಗದರ್ಶನ ಮಾಡಬಹುದು.
ಒಬ್ಬ ಯುವತಿಗೆ ಆಕೆಯ ರಜಸ್ಸುಗಳು ಸಾಮಾನ್ಯವೆಂದು ಹೇಗೆ ಗೊತ್ತಾಗಸಾಧ್ಯವಿದೆ? ಒಬ್ಬಳೇ ಸ್ತ್ರೀಯಲ್ಲಿ ಇವು ವಿಭಿನ್ನವಾಗಿರಬಹುದು. ಮುಟ್ಟಿನ ಅನಿಯತ ಕ್ರಮವು ಮುಟ್ಟಿನಾರಂಭದಿಂದ ಹಿಡಿದು ಮೊದಲಿನ ಆರು ತಿಂಗಳಿಂದ ಒಂದು ವರ್ಷದ ತನಕ (ಅಥವಾ ಕೆಲವು ಸಂದರ್ಭಗಳಲ್ಲಿ, ಎರಡು ವರ್ಷಗಳ ತನಕವೂ) ಸಾಮಾನ್ಯ. ಮತ್ತು ಇದು ಸಾಮಾನ್ಯವಾಗಿ ಹೀಗಾಗುವುದು ಚಿಕ್ಕ ರೀತಿಯ ಚೋದಕಸ್ರಾವದ ಬದಲಾವಣೆಯ ಕಾರಣ. ಈ ಆದಿ ವರ್ಷಗಳ ಬಳಿಕ, ಒಮ್ಮೊಮ್ಮೆ ಋತುಚಕ್ರದ ಅವಧಿಯಲ್ಲಿ ಯಾ ಸ್ರಾವದ ಲಕ್ಷಣದಲ್ಲಿ ಬದಲಾವಣೆ ಇರುವಲ್ಲಿ, ಇದು ಸಾಮಾನ್ಯವೆಂದೆಣಿಸಲ್ಪಡುತ್ತದೆ. ಇದಕ್ಕಿಂತ ಹೆಚ್ಚು ಗಮನಾರ್ಹ ಬದಲಾವಣೆಗಳು ವೈದ್ಯಕೀಯ ಪರೀಕ್ಷೆಯನ್ನು ಕೇಳಿಕೊಳ್ಳುವ ಎಚ್ಚರಿಕೆಯ ಸೂಚನೆಗಳಾಗಿರಬಲ್ಲವು.
ಆರೋಗ್ಯ ವಿದ್ಯಾಭ್ಯಾಸದ ಒಂದು ಭಾಗ ಆಹಾರ ಕ್ರಮವೇ. ಪೋಷಣೆಯ ಬದಲು ಸ್ವಾದಕ್ಕೆ ಮಹತ್ವ ಕೊಡುವ ಕಚಡ ಆಹಾರ, ಮತ್ತು ತಮ್ಮ ತೂಕದ ಕುರಿತು ವಿಶೇಷ ಚಿಂತೆ, ಅನೇಕ ವೇಳೆ ಹದಿಪ್ರಾಯದ ಹುಡುಗಿಯರು ಯೋಗ್ಯ ಪ್ರಮಾಣದಲ್ಲಿ ಪೋಷಕ ಪದಾರ್ಥಗಳನ್ನು, ವಿಶೇಷವಾಗಿ ಕ್ಯಾಲ್ಸಿಯಮ್ ಮತ್ತು ಕಬ್ಬಿಣದ ಧಾತುವಿರುವ ಆಹಾರವನ್ನು ಪಡೆಯದಂತೆ ಮಾಡುತ್ತದೆ. ಇನ್ನೂ ಕ್ರಮದ ಅಂಡಾಣು ಉತ್ಪತ್ತಿ ಚಕ್ರವನ್ನು ಸ್ಥಾಪಿಸದಿರುವ ಹುಡುಗಿಯರಿಗೆ ಮುಟ್ಟಿನ ಸಮಯದಲ್ಲಿ ಅನೇಕ ವೇಳೆ ಸರಾಸರಿಗಿಂತ ಹೆಚ್ಚು ರಕ್ತನಷ್ಟವಾಗುತ್ತದೆ. ಮತ್ತು ಇದು ಕಬ್ಬಿಣದ ಆವಶ್ಯಕತೆಯನ್ನು ವರ್ಧಿಸುತ್ತದೆ. ಆದುದರಿಂದ ಸುಸಮತೆಯಿರುವ ಆಹಾರವನ್ನು ತಿನ್ನುವುದು ಮತ್ತು ತೀರಾ ಶುದ್ಧೀಕರಿಸಿದ ಆಹಾರವನ್ನು ಹೆಚ್ಚು ತಿನ್ನುವುದರಿಂದ ದೂರವಿರುವುದು ಅತಿ ಪ್ರಾಮುಖ್ಯ. ಕೆಲವು ಸಲ ಕಬ್ಬಿಣ ಸ್ವತ ಸೇರಿಸಿರುವ ಆಹಾರವನ್ನು ಶಿಫಾರಸು ಮಾಡಬಹುದು.
ಪ್ರಸವ: ಪ್ರಸವ ಶಾಸ್ತ್ರಜ್ಞರು ಗರ್ಭವತಿಯರಿಗೆ ಜನ್ಮಪೂರ್ವದ ಆದಿ ಪರೀಕ್ಷೆಯನ್ನು ಶಿಫಾರಸು ಮಾಡುತ್ತಾರೆ. ಕಬ್ಬಿಣದ ಧಾತು ಯಾ ಫೋಲಿಕ್ ಆ್ಯಸಿಡ್ ಸೇರಿಕೆಗಳು ಬೇಕೋ ಎಂದು ನೋಡಲು ಅವರು ರಕ್ತವನ್ನು ಪರೀಕ್ಷಿಸಬಲ್ಲರು. ಗರ್ಭವತಿಯಾಗಿರುವ ಸ್ತ್ರೀಗೆ ರಕ್ತಸ್ರಾವವಾಗುವುದು ಹೆಚ್ಚು ಸಂಭಾವ್ಯವಾಗಿರುವುದರಿಂದ, ಎಚ್ಚರಿಕೆಯ ಸೂಚನೆಗಳಿಗೆ ಕಿವಿಗೊಡುವುದು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುತ್ತದೆ.
ಗರ್ಭಧಾರಣೆಯ ಸಮಯ ಅತಿ ಸ್ವಲ್ಪ ರಕ್ತಸ್ರಾವವೂ ವೈದ್ಯಕೀಯ ಅಂದಾಜನ್ನು ಅಪೇಕ್ಷಿಸುತ್ತದೆ. ಈ ಸಮಯದಲ್ಲಿರುವ ಇತರ ಅಪಾಯ ಸೂಚನೆಗಳು ಟೊಂಕ ನೋವು, ಮೂತ್ರದಲ್ಲಿ ರಕ್ತ ಹೋಗುವ ಲಕ್ಷಣಗಳು, ಮತ್ತು ಮೂತ್ರ ಹೊಯ್ಯುವಾಗ ವೇದನೆ—ಇವೇ. ಆದರೆ ಯಾವುದೇ ಅಕ್ರಮ ಯಾ ರೋಗಸೂಚನೆಗಳನ್ನು ಆದಿಯಲ್ಲೇ ಪ್ರಸವವೈದ್ಯರಿಗೆ ತಿಳಿಸತಕ್ಕದ್ದು. ಹಣ ಕಡಮೆಯಿರುವಾಗ, ಗಂಡನಿಗೆ, ತಾನು ಯಾರೊಂದಿಗೆ “ಒಂದೇ ಶರೀರ”ವಾಗಿದ್ದೇನೊ ಅಂಥವಳ ಆರೋಗ್ಯ ಮತ್ತು ಜೀವದ ವಿಷಯದಲ್ಲಿ ವಿಶೇಷ ಜವಾಬ್ದಾರಿ, ಅವಳ ಜೀವವು ಅಪಾಯಕ್ಕಿಳಿಸದಂತೆ ಮಾಡುವ ಜವಾಬ್ದಾರಿಯಿದೆ.—ಮತ್ತಾಯ 19:5, 6; ಎಫೆಸ 5:25.
ಋತುಬಂಧ: ಇದು ಋತುಚಕ್ರದ ರೂಡಿಪ್ರಕಾರವಾದ ಪೂರ್ಣಾಂತ್ಯಕ್ಕಿರುವ ವೈದ್ಯಕೀಯ ಶಬ್ದ. ಈ ಸಮಯವನ್ನು ಸಂಧಿಕಾಲ ಯಾ ಜೀವನದ ಸಂಧಿಕಾಲವೆಂದೂ ಕರೆಯಲಾಗುತ್ತದೆ. ಮತ್ತು ಇದು ಒಬ್ಬ ಸ್ತ್ರೀಯ ಜೀವನದ ಪ್ರಾಕೃತಿಕ ಹಂತ. ವಿಶಾಲಾರ್ಥದಲ್ಲಿ, ಇದಕ್ಕೆ ಈ ನೈಸರ್ಗಿಕ ಸಂಭವದ ಮೊದಲಿನ ಮತ್ತು ಅನಂತರದ ತಿಂಗಳುಗಳು ಯಾ ವರ್ಷಗಳೂ ಎಂಬ ಅರ್ಥವಿದೆ. ಈ ಸಮಯದಲ್ಲಿ ಅನೇಕ ಸ್ತ್ರೀಯರು ಅಹಿತಕರವಾದ ದೈಹಿಕ ರೋಗಸೂಚನೆಗಳನ್ನು—ಅನಿಯತ ಕ್ರಮದ ಋತುಸ್ರಾವ ಮತ್ತು ಬಿಸುಪೇರುವುದು, ಇತ್ಯಾದಿ— ಅನುಭವಿಸುತ್ತಾರೆ. ಆದರೆ ಇವು ಕ್ರಮೇಣ ನಿಂತುಹೋಗುತ್ತವೆ. ಲಂಬಿತವಾದ ಯಾ ಜಾಸ್ತಿಯಾದ ಋತುಸ್ರಾವವಿರುವುದಾದರೆ ಯಾ ಕೊನೆಯ ಮುಟ್ಟೆಂದು ಕಂಡುಬಂದರೂ ಆರು ತಿಂಗಳು ಯಾ ಹೆಚ್ಚು ಸಮಯದ ಬಳಿಕ ಇನ್ನೊಮ್ಮೆ ಮುಟ್ಟಾಗುವಲ್ಲಿ, ಡಾಕ್ಟರರನ್ನು ಕೂಡಲೇ ವಿಚಾರಿಸಬೇಕು.
ಎಲ್ಲ ತುರ್ತು ಪರಿಸ್ಥಿತಿಗಳನ್ನು ಮುಂಭಾವಿಸಸಾಧ್ಯವಿಲ್ಲವೆಂಬುದು ಖರೆ. “ಕಾಲವೂ ಪ್ರಾಪ್ತಿಯೂ” ನಮಗೆಲ್ಲರಿಗೂ ಸಂಭವಿಸುತ್ತದೆ. (ಪ್ರಸಂಗಿ 9:11) ಆದರೆ ಆ್ಯನೆಸಿಟ್ತಿಸ್ಟ್ ವೈದ್ಯರು ಯೂನಗೆ ಹೇಳಿದಂತೆ: “ಥಟ್ಟನೆ ತೋರಿಬರುವ ಅಂಡಾಶಯದ ರೋಗಗಳು ಕೊಂಚ.” ಉತ್ತಮ ಆರೋಗ್ಯ ಶಿಕ್ಷಣ ಮತ್ತು ಶರೀರದ ಕಾರ್ಯಾಚರಣೆಯ ಪ್ರಜ್ಞೆ ಸ್ತ್ರೀಯರನ್ನು ಮುಂಬರಬಹುದಾದ ಸ್ತ್ರೀರೋಗ ತುರ್ತಿನಿಂದ ಸಂರಕ್ಷಿಸಬಲ್ಲದು. ವಿಪತ್ತನ್ನು ಎದುರಿಸುವ ತನಕ ಎಚ್ಚರಿಕೆಗಳ್ನು ಅಸಡ್ಡೆ ಮಾಡುವುದಕ್ಕಿಂತ ತುರ್ತನ್ನು ಭಗ್ನಗೊಳಿಸುವುದು ಲೇಸು. ಆದುದರಿಂದ, ಹೆಂಡತಿಯರೇ ಮತ್ತು ಗಂಡಂದಿರೇ, ದೇಹದ ಎಚ್ಚರಿಕೆಯ ಸೂಚನೆಗಳಿಗೆ ಕಿವಿಗೊಡಿರಿ! (g91 10/8)
[ಅಧ್ಯಯನ ಪ್ರಶ್ನೆಗಳು]
a ಕೆಲವು—ಎಲ್ಲವಲ್ಲ—ಸಂದರ್ಭಗಳಲ್ಲಿ, ಇವು ಕೊರಳಿನ ಕ್ಯಾನ್ಸರಿನ ರೋಗಸೂಚನೆಯಾಗಿರಬಲ್ಲದು, ಮತ್ತು ಬೇಗನೆ ಕಂಡುಹಿಡಿಯುವಲ್ಲಿ, ಅಧಿಕಾಂಶ ಸಂದರ್ಭಗಳಲ್ಲಿ ವಾಸಿಯಾಗಬಲ್ಲದು.
b ಯೂಟೆರೊ-ವೆಜೈನಲ್ ಪ್ರೊಲ್ಯಾಪ್ಸ್, ಅಥವಾ ಜಗ್ಗಿದ ಗರ್ಭ.
[ಪುಟ 25 ರಲ್ಲಿರುವಚಿತ್ರ]
ಒಬ್ಬ ಸಹಾನುಭೂತಿಯ ಗಂಡನು ತನ್ನ ಹೆಂಡತಿ ಅವಳ ದೇಹವು ಕೊಡುವ ಎಚ್ಚರಿಕೆಗಳಿಗೆ ಕಿವಿಗೊಡುವಂತೆ ಸಹಾಯ ಮಾಡಬಲ್ಲನು