ಚಂಡಮಾರುತ ಆ್ಯಂಡ್ರುವಿಗೆ ನಾಶಮಾಡಲು ಆಗದ್ದಿದ ವಿಷಯಗಳು
ಕೆಲವು ಚಂಡಮಾರುತಗಳು ಇನ್ನು ಕೆಲವು ಚಂಡಮಾರುತಗಳಿಗಿಂತ ಹೆಚ್ಚು ವಿನಾಶಕರವಾಗಿವೆ.a ಕೆಲವು, ಬಲವಾದ ಗಾಳಿ ಮತ್ತು ಬಿರುಸಾದ ಮಳೆಯನ್ನು ತಂದು ಮರಗಳನ್ನು ಬೀಳಿಸುವುದಕ್ಕಿಂತ ಹೆಚ್ಚಿನದನ್ನು ಮಾಡುವುದಿಲ್ಲ. ಆದರೆ ದಕ್ಷಿಣ ಫ್ಲಾರಿಡದಲ್ಲಿ (ಆಗಸ್ಟ್ 24, 1992) ಮತ್ತು ಲೂಯ್ಸಿಯಾನದಲ್ಲಿ (ಆಗಸ್ಟ್ 26, 1992) ಚಂಡಮಾರುತ ಆ್ಯಂಡ್ರು ಬೀಸಿದಾಗ, ಚಂಡಮಾರುತ ಇನೀಕಿ ಹವಾಯಿಯ ಕಾಆಯ್ಯಲ್ಲಿಯೂ (ಸಪ್ಟಂಬರ 12, 1992) ತುಫಾನು ಓಮರ್ ಗ್ವಾಮ್ನಲ್ಲಿಯೂ (ಆಗಸ್ಟ್ 28, 1992) ಬೀಸಿದವು.
ಈ ಚಂಡಮಾರುತಗಳು ಕೋಟಿಗಟ್ಟಲೆ ಡಾಲರುಗಳಷ್ಟು ನಷ್ಟವನ್ನು ಬರಿಸುತ್ತಾ ಪಾಳುಗೆಡವಿದವು. ಫ್ಲಾರಿಡದಲ್ಲಿ ಡಜನುಗಟ್ಟಲೆ ಜನರು ನಾಶವಾದರು. ಸಾವಿರಾರು ಕುಟುಂಬಗಳು ಮನೆಯಿಲ್ಲದವುಗಳಾದವು. ವಿಮೆಯ ಏಜಂಟರು ಹಾಳಾಗಿರುವ ಮನೆಗಳ ಸುತ್ತಲೂ ಅವುಗಳ ಧಣಿಗಳನ್ನು ಹುಡುಕುತ್ತಾ ಓಡಿಯಾಡಿ ಹಣದ ಚೆಕ್ಕನ್ನು ಬರೆಯುತ್ತಿದ್ದರು.
ಯೆಹೋವನ ಸಾಕ್ಷಿಗಳ ಫೋರ್ಟ್ ಲಾಡರ್ಡೇಲ್ ಸಹಾಯ ಕಮಿಟಿಯ ಒಂದು ವರದಿ, ಆ ಪ್ರದೇಶದಲ್ಲಿದ್ದ ಯೆಹೋವನ ಸಾಕ್ಷಿಗಳ 1,033 ಮನೆಗಳಲ್ಲಿ 518 ಮನೆಗಳನ್ನು ದುರಸ್ತು ಮಾಡಬಹುದೆಂದು ಹೇಳಿತು. ಈ ಪ್ರಮಾಣವನ್ನು ಸಾಮಾನ್ಯವಾಗಿ ಅನ್ವಯಿಸುವಲ್ಲಿ, ಆ್ಯಂಡ್ರುವಿನ ದಾರಿಯಲ್ಲಿದ್ದ ಎಲ್ಲ ಮನೆಗಳಲ್ಲಿ 50 ಪ್ರತಿಶತ ಮನೆಗಳು ನಾಶವಾಗಿದ್ದವು. ಆ ಬಳಿಕ, ವಾಸಕ್ಕೆ ಯೋಗ್ಯವಾದ ಮನೆ ಇನ್ನೂ ಇದ್ದವರು ತಮ್ಮ ಪೀಠೋಪಕರಣ ಮತ್ತು ನೆರಿಗೆಯ ತೆರೆಗಳನ್ನು ಒಣಗಿಸಲು ಮತ್ತು ಭಾರಿ ಮಳೆಯಿಂದಾಗಿ ಒಡೆದ ಚಾವಣಿಯ ಮೂಲಕ ಒಳ ಮಾಳಿಗೆಯಿಂದ ಬಿದ್ದಿದ್ದ ಬಿಳಿ ಅಂಟನ್ನು ಶುಚಿ ಮಾಡಲು ಪ್ರಯತ್ನಿಸುತ್ತಿದ್ದರು. ಅನೇಕರಿಗೆ ತಮ್ಮ ಹಾಳು ಬಿದ್ದ ಮನೆಗಳನ್ನು ನೋಡುವುದೇ ಕಷ್ಟವಾಗುತ್ತಿತ್ತು. ಆದರೆ ಪ್ರಾಯಶಃ ಹೆಚ್ಚು ಕೆಡುಕಾದವರು ಕಡಮೆ ಬಲದ ವಾಹನ ಮನೆಗಳಲ್ಲಿ ಯಾ ಟ್ರೆಯ್ಲರ್ಗಳಲ್ಲಿ ಜೀವಿಸುತ್ತಿದ್ದವರು.
ಚಂಡಮಾರುತ ಆ್ಯಂಡ್ರು ಯಾರನ್ನೂ ಬಿಡಲಿಲ್ಲ
ಇಂಥವರಲ್ಲಿ ಲೆನರ್ಡ್ ಮತ್ತು ಟೆರಿ ಕೀಫರ್ ಎಂಬವರು ಒಬ್ಬ ದಂಪತಿಗಳು. ಅವರು ಫ್ಲಾರಿಡ ಸಿಟಿಯಲ್ಲಿ ತಮ್ಮ ವಾಹನ ಮನೆಯ ಪಾರ್ಕನ್ನು ಪುನರ್ಭೇಟಿ ಮಾಡಲು ಹೋದಾಗ, ಆ ಪ್ರದೇಶವನ್ನು ಪ್ರವೇಶಿಸಲು ತಮ್ಮನ್ನು ಒಂದು ಮಿಲಿಟರಿ ಚೆಕ್ಪಾಯಿಂಟಿನಲ್ಲಿ ಗುರುತಿಸಿ ಕೊಡಬೇಕಾಯಿತು. ಅಲ್ಲಿ ಅವರು ನೋಡಿದ ವಾಹನ ಮನೆಗಳ ಪಾರ್ಕ್, ನೂರಾರು ದೊಡ್ಡ ಸ್ಫೋಟನದ ಬಾಂಬುಗಳು—ಸಿಡಿಗುಂಡಿನ ಕುಳಿಗಳನ್ನು ಮಾಡದೆ—ಬಡಿದಂತಿತ್ತು. ಮರಗಳು ಕೀಳಲ್ಪಟ್ಟಿದ್ದವು. ಮನೆಗಳ ಮೊದಲಿನ ಗೋಡೆಗಳೂ ಚಾವಣಿಗಳೂ ಆಗಿದ್ದ ಒರಟೊರಟಾದ ಎಲ್ಯೂಮಿನಿಯಮ್ ಹಾಳೆಗಳು ಮರಗಳಿಗೆ ಸುತ್ತಲ್ಪಟ್ಟಿದ್ದು, ಅವುಗಳ ಕೊಂಬೆಗಳಿಂದ ಉತ್ಸವದ ಒಂದು ರೀತಿಯ ವಿಕಟಾಲಂಕಾರದಂತೆ ನೇತಾಡುತ್ತಿದ್ದವು. ವಿದ್ಯುದ್ವಾಹಕ ಸರಿಗೆಗಳು ಎಲ್ಲೆಲ್ಲಿಯೂ ಕೆಳಗೆ ಬಿದ್ದಿದ್ದವು, ಅವುಗಳ ಮರದ ಕಂಬಗಳು ಬೆಂಕಿಕಡ್ಡಿಗಳಂತೆ ತುಂಡಾಗಿದ್ದವು. ಕಾರುಗಳು ಮಗುಚಿ ಬಿದ್ದು ಜಜ್ಜಲ್ಪಟ್ಟಿದ್ದವು.
ತನ್ನ ಹೊಸ ಮನೆ ವಾಸಕ್ಕೆ ಯೋಗ್ಯವಲ್ಲ ಎಂದು ಹೇಳಲ್ಪಟ್ಟಿದ್ದ ಬಾಬ್ ವಾನ್ ಡಿಕ್ ತನ್ನ ಮನೆಯ ದೃಶ್ಯವನ್ನು ಹೀಗೆ ವಿವರಿಸುತ್ತಾನೆ: “ಒಳ ಚಾವಣಿ ಜಜ್ಜುಬಡಿಯ ಸಾಧ್ಯವಿರುವುದನ್ನು ಜಜ್ಜುಬಡಿಯುತ್ತಾ, ಬಗ್ಗಿಸಸಾಧ್ಯವಿದ್ದುದನ್ನು ಬಗ್ಗಿಸುತ್ತಾ, ಗಾಬರಿಗೊಳ್ಳ ಸಾಧ್ಯವಿದ್ದ ನಮ್ಮನ್ನು ಗಾಬರಿಗೊಳಿಸುತ್ತಾ ಮುರಿದು ಬಿತ್ತು.”
ವೈಯಕ್ತಿಕ ವಸ್ತುಗಳು, ಆಟದ ಸಾಮಾನುಗಳು, ಬಟ್ಟೆಬರೆ, ಫೋಟೋಗಳು, ಪುಸ್ತಕಗಳು—ಇವೆಲ್ಲ ಹಳೆಯ ಜೀವನ ಶೈಲಿಯ ದುಃಖಕರವಾದ ಸ್ಮರಣೆಗಳಾಗಿ ಬಿದ್ದಿದ್ದವು. ಒಂಟಿಯಾದ ಕರೀ ಬೆಕ್ಕು ಕಲ್ಲಿನ ಹೆಂಟೆಗಳ ಮಧ್ಯೆ ಗೊತ್ತುಗುರಿಯಿಲ್ಲದೆ ತಿರುಗಾಡುತ್ತಿತ್ತು. ಅದು ಕೀಫರ್ ದಂಪತಿಗಳ ಕಡೆ ಕೌತುಕದಿಂದ ನೋಡಿತು. ಸಣ್ಣ ಹಲ್ಲಿಗಳು ಯಾರೋ ಒಬ್ಬನ ಅಮೂಲ್ಯ ಸೊತ್ತಾಗಿದ್ದ ವಸ್ತುವಿನ ಮೇಲೆ ಓಡಿಯಾಡುತ್ತಿದ್ದವು. ಹಾಳಾಗಿದ್ದ ಶೀತಕಗಳಿಂದ ಸುರಿದ್ದಿದ ಕೊಳೆಯುವ ಆಹಾರದ ವಾಸನೆ ಗಾಳಿಯಲ್ಲಿತ್ತು. ಪ್ರತಿಯೊಂದು ದಿಕ್ಕಿನಲ್ಲಿಯೂ ಬಿರುಸಾದ ನಾಶದ ದೃಶ್ಯವಿತ್ತು—ಎಲ್ಲವೂ ತಾಸಿಗೆ 260 ಕಿಲೊಮೀಟರ್ಗಳ ವೇಗದಲ್ಲಿ ಬೀಸುತ್ತಿದ್ದ ಬಲಾಢ್ಯವಾದ ಗಾಳಿಗಳಿಂದ ಮಾಡಲ್ಪಟ್ಟಿತ್ತು.
ಈ ಮನೆಗಳ ಧಣಿಗಳಿಗೂ ನಿವಾಸಿಗಳಿಗೂ ಇದು ಮನೋವೇಧಕ ವಿಷಯವಾಗಿತ್ತು. ಅನೇಕ ವರ್ಷಕಾಲ ಕುಟುಂಬವನ್ನು ಬೆಳೆಸುತ್ತಾ ತಮ್ಮದೇ ಆಗಿರುವ ಈ ಪ್ರತ್ಯೇಕ ಬೀಡುಗಳಲ್ಲಿ ಜೀವನಭಾಗಿಗಳಾಗಿದ್ದ ಇವರು, ಬಿರುಗಾಳಿ ನಿಂತ ಮೇಲೆ ಹಿಂದೆ ಬಂದಾಗ ಎಲ್ಲವೂ ನಜ್ಜುಗುಜ್ಜಾಗಿ ಚದರಿರುವುದನ್ನು ಕಂಡರು. ಕೀಫರ್ ದಂಪತಿಗಳು ಹಿಂದಿನ ಒಂದು ಭೇಟಿಯಲ್ಲಿ ತಮ್ಮ ಕೆಲವು ಸೊತ್ತುಗಳನ್ನು ರಕ್ಷಿಸಿದ್ದರು. ಆದರೆ ಈಗ ಬಿಡಲ್ಪಟ್ಟಿದ್ದ ಮನೆಯ ಸಾಮಾನು ಚೂರುಗಳ ಮಧ್ಯೆ ಜಾಗ್ರತೆಯಿಂದ ವಸ್ತುಗಳನ್ನು ಹುಡುಕುವುದು ಅವರಿಗೆ ತೀರಾ ಮಾನಸಿಕವಾದ ಆಘಾತವಾಗಿತ್ತು. ಆದರೂ, ತಾವಿನ್ನೂ ಬದುಕಿದ್ದೇವೆ, ಮತ್ತು ದೇವರನ್ನು ಸೇವಿಸಶಕ್ತರಾಗಿದ್ದೇವೆ ಎಂಬುದನ್ನು ಅವರು ಗಣ್ಯ ಮಾಡಿದರು.
ಚಂಡಮಾರುತ ಆ್ಯಂಡ್ರು ಯಾವುದನ್ನೂ ಬಿಟ್ಟಿರಲಿಲ್ಲ. ಅಂಗಡಿ ಸಾಲುಗಳು, ಕಾರ್ಖಾನೆಗಳು, ಸರಕಿನ ಮಳಿಗೆಗಳು—ಇವೆಲ್ಲ ಈ ಪ್ರಕೃತಿಯ ಆಕ್ರಮಣದ ಗುರಿಹಲಗೆಯಾಗಿದ್ದವು. ದುರ್ಬಲ ಮನುಷ್ಯನ ಕಟ್ಟಡ ನಿಯಮಾವಳಿಗಳು ಈ ಧ್ವಂಸವನ್ನು ತಡೆಯಲಿಲ್ಲ.
ಮಾನವ ಪ್ರಕೃತಿಯಲ್ಲಿ ಅತ್ಯುತ್ತಮವೂ ಅತಿ ಕೆಟ್ಟದ್ದೂ
ವಿವಿಧ ಸಹಾಯ ಸಂಸ್ಥೆಗಳು ಸಂಘಟಿಸಲ್ಪಟ್ಟಂತೆ, ದೇಶದ ಎಲ್ಲ ಕಡೆಗಳಿಂದ ಫ್ಲಾರಿಡಕ್ಕೆ ಸಹಾಯ ಬಂದು ಸುರಿಯಲಾರಂಭಿಸಿತು. ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಕೂಡಲೆ ಪ್ರತಿಕ್ರಿಯೆ ತೋರಿಸಿ ಒಂದು ರಿಲೀಫ್ ಕಮಿಟಿ ಫೋರ್ಟ್ ಲಾಡರ್ಡೇಲ್ ಎಸೆಂಬ್ಲಿ ಹಾಲ್ನಿಂದ ಕಾರ್ಯ ನಡೆಸುವಂತೆ ನೇಮಿಸಿತು. ಅವರು ಸಾಮಗ್ರಿ, ಆಹಾರ ಮತ್ತು ತುರ್ತು ವಸ್ತುಗಳನ್ನು ಕೊಳ್ಳಲಿಕ್ಕಾಗಿ ಒಂದು ಗಣನೀಯ ಮೊತ್ತದ ಹಣವನ್ನೂ ಕೊಟ್ಟರು. ಇದರ ಪರಿಣಾಮವಾಗಿ, ಸಾಕ್ಷಿಗಳು ಮೊತ್ತ ಮೊದಲಾಗಿ ಪ್ರತಿವರ್ತನೆ ತೋರಿಸಿದವರ ಮಧ್ಯೆ ಇದ್ದು, ಸ್ವಯಂಸೇವಕರಿಗೆ ಕರೆ ಕೊಡಲಾರಂಭಿಸಿದರು. ವಾಸ್ತವವಾಗಿ, ಅನೇಕರು ಕರೆಯಿಲ್ಲದೆ ಬಂದರು.
ಸಾಕ್ಷಿ ಕೆಲಸಗಾರರು ಕ್ಯಾಲಿಫೋರ್ನಿಯ, ನಾರ್ತ್ ಕ್ಯಾರೊಲೈನ, ಆರೆಗನ್, ವಾಷಿಂಗ್ಟನ್ ಸ್ಟೇಟ್, ಪೆನ್ಸಿಲೇನ್ವಿಯ, ಮಿಸೂರಿ, ಮತಿತ್ತರ ಕಡೆಗಳಿಂದ ಬಂದರು. ಸಾಮಾನ್ಯವಾಗಿ ರಾಜ್ಯ ಸಭಾಗೃಹಗಳನ್ನು ಕಟ್ಟುವ ವರ್ಜೀನಿಯ ಪ್ರಾದೇಶಿಕ ಕಟ್ಟಡ ಕಮಿಟಿಯೊಂದು, ಚಾವಣಿ ದುರುಸ್ತಿಗಾಗಿ 18 ಜನ ಸಾಕ್ಷಿಗಳ ಒಂದು ಗುಂಪನ್ನು ಕಳುಹಿಸಿತು. ಅವರಿಗೆ ವಾಹನ ನಡೆಸುತ್ತಾ ಬರಲು 18 ತಾಸುಗಳು ಹಿಡಿದವು. ರಿಲೀಫ್ ಕೆಲಸಗಾರರು ರಜೆ ಯಾ ಗೈರುಹಾಜರಿಯ ರಜೆ ತೆಗೆದುಕೊಂಡು, ಬಿಕ್ಕಟ್ಟಿನಲ್ಲಿದ್ದ ತಮ್ಮ ಜೊತೆ ಸಾಕ್ಷಿಗಳನ್ನು ತಲುಪಲು, ನೂರಾರು ಮತ್ತು ಸಾವಿರಾರು ಕಿಲೊಮೀಟರ್ ಸಹ, ವಾಹನ ನಡೆಸುತ್ತಾ ಬಂದರು.
ಸೌತ್ ಕ್ಯಾರೊಲೈನದ ಚಾರ್ಲ್ಸ್ಟನ್ ಪ್ರದೇಶದಿಂದ ಬಂದ ಗುಂಪು ಬೆಲೆ ಕಟ್ಟಲಾಗದ ಸಹಾಯವನ್ನು ಕೊಟ್ಟಿತು. ಅವರಿಗೆ 1989ರಲ್ಲಿ ಚಂಡಮಾರುತ ಹ್ಯೂಗೋವಿನ ಅನುಭವವಾಗಿತ್ತು. ಏನು ನಿರೀಕ್ಷಿಸಬಹುದೆಂದು ಗೊತ್ತಿದ್ದ ಅವರು ಬೇಗನೆ ವಿದ್ಯುತ್ ಉತ್ಪಾದಕ ಸಲಕರಣೆ ಮತ್ತು ಕಟ್ಟಡದ ಸಾಮಗ್ರಿಗಳು ಸೇರಿದ್ದ ಪರಿಹಾರ ಸರಬರಾಯಿಗಳನ್ನು ಸಂಘಟಿಸಿದರು. ಎರಡು ವಾರಗಳಲ್ಲಿ, ಈ ಸ್ವಯಂಸೇವಕ ತಂಡಗಳು 800 ಮನೆಗಳನ್ನು ಒಣಗಿಸಿ ಅನೇಕ ಚಾವಣಿಗಳನ್ನು ರಿಪೇರಿ ಮಾಡಿದ್ದವು.
ಸಾಕ್ಷಿ ದುರಸ್ತುಗಾರ ತಂಡಗಳು ಕೊಟ್ಟ ಸಹಾಯದಿಂದ ಅನೇಕ ಸಾಕ್ಷಿಗಳಲ್ಲದ ಪತಿ ಪತ್ನಿಯರು ಮತ್ತು ನೆರೆಯವರು ಪ್ರಯೋಜನ ಪಡೆದರು. ವೆಸ್ಟ್ ಹೋಮ್ಸ್ಟೆಡ್ನ ರಾನ್ ಕ್ಲಾರ್ಕ್ ವರದಿ ಮಾಡಿದ್ದು: “ಅವಿಶ್ವಾಸಿಗಳಾದ ಪತಿ ಪತ್ನಿಯರಿಗೆ ಇದರಿಂದ ನಿಜವಾಗಿಯೂ ಪರಿಣಾಮವಾಗಿಯದೆ. ಸಾಕ್ಷಿಗಳು ಅವರಿಗಾಗಿ ಆಗಲೇ ಮಾಡಿರುವ ವಿಷಯಗಳಿಂದ ಭಾವಪರವಶರಾಗಿ ಅವರು ಅತ್ತಿದ್ದಾರೆ.” ಒಬ್ಬಾಕೆ ಸಾಕ್ಷಿಯ ಅವಿಶ್ವಾಸಿ ಗಂಡನ ಕುರಿತು ಅವರು ಹೇಳಿದ್ದು: “ಸಾಕ್ಷಿಗಳು ಈಗ ಅಲ್ಲಿ ಅವನಿಗಾಗಿ ಚಾವಣಿ ಹೊದಿಸುತ್ತಾ ಇರುವಾಗ ಅವನಾದರೋ ಆನಂದಪರವಶನಾಗಿದ್ದಾನೆ.”
ಇನ್ನೊಬ್ಬ ಸಾಕ್ಷಿ, ತಾನು ಪ್ರತಿ ರಾತ್ರಿ ಹೋಗಿ ವಿಚಾರಿಸುತ್ತಾ ಇದ್ದ ಒಬ್ಬ ಸಾಕ್ಷ್ಯೇತರ ನೆರೆಯವರ ಕುರಿತು ಹೇಳಿದನು. ತಾವು ಚೆನ್ನಾಗಿದ್ದೇವೆಂದು ಅವರು ಹೇಳುತ್ತಾ ಇದ್ದರು. ಆದರೆ ಐದನೆಯ ದಿವಸ ಹೆಂಡತಿ ನಿಯಂತ್ರಣ ತಪ್ಪಿ ಅಳತೊಡಗಿದಳು. “ನಮ್ಮ ಕೂಸಿಗೆ ಡಾಯಪರ್ ಚೌಕವಿಲ್ಲ. ಮಗುವಿನ ಬೇಬಿ ಫುಡ್ ಆಹಾರವೂ ಹೆಚ್ಚು ಕಡಮೆ ಮುಗಿದದೆ. ನಮಗೆ ಸಾಕಷ್ಟು ಆಹಾರವಾಗಲಿ, ನೀರಾಗಲಿ ಇಲ್ಲ.” ಗಂಡನಿಗೆ 20 ಲೀಟರ್ ಪೆಟ್ರೋಲ್ ಬೇಕಾಗಿತ್ತು, ಆದರೆ ಎಲ್ಲಿಯೂ ದೊರೆಯಲಿಲ್ಲ. ಅದೇ ದಿನ, ಆ ಸಾಕ್ಷಿ ಅವರಿಗೆ ಬೇಕಾಗಿದ್ದ ಎಲ್ಲವನ್ನೂ ರಾಜ್ಯ ಸಭಾಗೃಹದ ರಿಲೀಫ್ ಮಂಡಿಯಿಂದ ತಂದುಕೊಟ್ಟನು. ಹೆಂಡತಿ ಕೃತಜ್ಞತೆಯಿಂದ ಅತಳ್ತು. ಗಂಡನು ಪರಿಹಾರ ಸೇವೆಗೆ ವಂತಿಗೆಯನ್ನು ಕೊಟ್ಟನು.
ಸಭೆಯ ಹಿರಿಯರಿಂದ ಮತ್ತು ಶುಶ್ರೂಷಾ ಸೇವಕರಿಂದ ಒಂದು ನಿರ್ಣಾಯಕ ಪಾತ್ರ ವಹಿಸಲ್ಪಟ್ಟಿತು. ಅವರು ಆ ಆಪತ್ತಿನ ಪ್ರದೇಶದ ದುರಸ್ತಾದ ವಿಭಿನ್ನ ರಾಜ್ಯ ಸಭಾಗೃಹಗಳಲ್ಲಿ ಪರಿಹಾರವನ್ನು ಸಂಘಟಿಸಲು ಕೂಡಿ ಕೆಲಸ ಮಾಡಿದರು. ಅವರು ಎಲ್ಲ ಸಾಕ್ಷಿಗಳನ್ನು ಕಂಡುಹಿಡಿಯಲು ಮತ್ತು ಅವರ ಆವಶ್ಯಕತೆಗಳನ್ನು ವಿಚಾರಿಸಲು ದಣಿಯದೆ ಕೆಲಸ ನಡೆಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಇನ್ನೊಂದು ಪ್ರದೇಶದ ಪರಿಹಾರ ಪ್ರಯತ್ನದ ಕುರಿತು ಒಬ್ಬ ವಿಮಾನ ದಳದ ಅಧಿಕಾರಿ ಹೀಗೆ ಹೇಳಿದನೆಂದು ಹೇಳಲಾಯಿತು: “ಎಲ್ಲರು ಅಧಿಕಾರಿಗಳಾಗಿ ಕೇವಲ ಅಪ್ಪಣೆ ಕೊಡಲು ಬಯಸುತ್ತಾರಲ್ಲದೆ ಶ್ರದ್ಧೆಯಿಂದ ಕೀಳೆಂದು ಎಣಿಸಲಾಗುವ ಕೆಲಸಗಳನ್ನು ಮಾಡುವುದಿಲ್ಲ.”
ವಿಪತ್ತುಗಳು ಜನರಲ್ಲಿ ಅತ್ಯುತ್ತಮವಾದ ಮತ್ತು ಅತಿ ಕೆಟ್ಟದಾದ ಗುಣಗಳನ್ನು ಹೊರತರಬಲ್ಲದು. ಅತಿ ಕೆಟ್ಟದ್ದರ ಒಂದು ಉದಾಹರಣೆ ಲೂಟಿಯೆ. ಸಾಕ್ಷಿಗಳ ಒಂದು ಕುಟುಂಬ, ತಾವು ತಮ್ಮ ಶೀತಕ ಮತ್ತು ಬಟ್ಟೆ ಒಗೆಯುವ ಯಂತ್ರವನ್ನಾದರೂ ಉಳಿಸಿ ಸ್ಥಳೀಕ ರಾಜ್ಯ ಸಭಾಗೃಹದ ಪರಿಹಾರ ಕೇಂದ್ರಕ್ಕೆ ಉಪಯೋಗಕ್ಕಾಗಿ ಕೊಡಬಹುದೆಂದು ನಿರ್ಣಯಿಸಿದರು. ಅವರು ಒಂದು ಟ್ರಕ್ಕನ್ನು ತರಲು ಸಭಾಗೃಹಕ್ಕೆ ಹೋದರು. ಹಿಂದೆ ಬರುವುದರೊಳಗೆ, ಲೂಟಿ ಮಾಡುವವರು ಎರಡು ವಸ್ತುಗಳನ್ನೂ ಕದ್ದಿದ್ದರು!
ಒಬ್ಬ ಪ್ರತ್ಯಕ್ಷ ಸಾಕ್ಷಿ ವರದಿ ಮಾಡಿದ್ದು: “ನಿರ್ಜನವಾಗಿದ್ದ ರಸ್ತೆಗಳಲ್ಲಿ ನಾವು ಪ್ರಯಾಣಿಸುತ್ತಿದ್ದಾಗ, ಲೂಟಿ ಮಾಡಲು ಬರಬಾರದೆಂದು ಎಚ್ಚರಿಸುವ ನೋಟೀಸುಗಳಿರುವ ಮನೆಗಳನ್ನು ನೋಡಿದೆವು. ಕೆಲವು ಗುರುತು ಹಲಗೆಗಳಲ್ಲಿ, ‘ಲೂಟಿ ಮಾಡುವವರು ಸಾಯಬೇಕು’ ಮತ್ತು, ‘ಲೂಟಿ ಮಾಡುವವರಿಗೆ ಗುಂಡಿಕ್ಕಲಾಗುವುದು’ ಎಂದು ಬರೆದಿತ್ತು. ಇನ್ನೊಂದರಲ್ಲಿ, ‘ಲೂಟಿ ಮಾಡುತ್ತಿದ್ದ ಇಬ್ಬರಿಗೆ ಗುಂಡು ಹೊಡೆಯಲಾಗಿದೆ. ಒಬ್ಬನು ಸತ್ತಿದ್ದಾನೆ,’ ಎಂದು ಬರೆದಿತ್ತು. ಅಂಗಡಿ ಮತ್ತು ಅಂಗಡಿ ಸಾಲುಗಳನ್ನು ಸೂರೆ ಮಾಡಲಾಗಿತ್ತು. ಎಂಬತ್ತೆರಡನೆಯ ಏಯರ್ಬೋರ್ನ್ ಡಿವಿಷನಿನ ಒಬ್ಬ ಸಾರ್ಜೆಂಟನಿಗನುಸಾರ, ಲೂಟಿ ಮಾಡುವ ಒಬ್ಬನನ್ನು ಹಿಡಿಯಲಾಯಿತು, ಮತ್ತು ಕಡಮೆ ಪಕ್ಷ ಒಬ್ಬನನ್ನಾದರೂ ಜನರೇ ಗಲ್ಲಿಗೇರಿಸಿದ್ದರು.
ಅನೇಕರನ್ನು ದಸ್ತಗಿರಿ ಮಾಡಲಾಗಿತ್ತು. ಯಾವುದೇ ವಿಪತ್ತಿನಲ್ಲಿ, ಪಾತಕ ಪ್ರವೃತ್ತಿಯವರು ರಣಹದ್ದುಗಳಂತೆ ಎರಗಿ ಬರಲು ಸಿದ್ಧವಾಗಿದ್ದಾರೆಂದು ಕಂಡುಬರುತ್ತದೆ. ಮತ್ತು ಸಾಮಾನ್ಯರೆಂದು ಕರೆಯಲ್ಪಡುವ ಜನರು ಸಹ ಲೂಟಿ ಮಾಡುವುದರಲ್ಲಿ ಭಾಗವಹಿಸುವಂತೆ ನಡೆಸಲ್ಪಡುತ್ತಾರೆ. ಹಣ ತೆರದೆ ದೊರೆಯುತ್ತದೆಂಬ ಶೋಧನೆ ಬರುವಾಗ ಧರ್ಮ, ನೀತಿ, ಮತ್ತು ನೈತಿಕತೆ ಮಾಯವಾಗಿ ಹೋಗುವಂತೆ ತೋರುತ್ತದೆ.
ಆರಂಭದಲ್ಲಿ ಕೆಲವು ಸೈನಿಕರ ಗುಂಡು ತುಂಬಿರದ ರೈಫ್ಲ್ಗಳನ್ನೂ ಸಶಸ್ತ್ರರಾಗಿದ್ದ ಲೂಟಿ ಮಾಡುವವರು ಕದರ್ದೆಂದು ಎಚ್ಚರ!ಕ್ಕೆ ಹೇಳಲಾಯಿತು. ರಾಜ್ಯ ಸಭಾಗೃಹದ ಪರಿಹಾರ ಕೇಂದ್ರವನ್ನು ತಾವು ಮರುಮಧ್ಯದ ತಂಪುಜಾಗವಾಗಿ ಕಾಣುತ್ತೇವೆಂದೂ, “ಏಕೆಂದರೆ, ನೀವು ಬಂದೂಕು ಹಿಡಿಯುವುದಿಲ್ಲ” ವೆಂದೂ ಕೆಲವು ಸೈನಿಕರು ಹೇಳುವುದು ಕೇಳಿಬಂತು.
“ಸುಮ್ಮಗೆ ಕುಳಿತು ಚಟುವಟಿಕೆಶೂನ್ಯರಾಗಬೇಡಿ”
ಯೆಹೋವನ ಸಾಕ್ಷಿಗಳು, ತಮ್ಮ ನೈಸರ್ಗಿಕ ವಿಪತ್ತಿನ ಅನುಭವದಿಂದ ಏನು ಕಲಿತಿದ್ದಾರೆ? ಆದಷ್ಟು ಬೇಗನೆ ಅಧ್ಯಾತ್ಮಿಕ ಚಟುವಟಿಕೆಗಳನ್ನು ಆರಂಭಿಸಬೇಕು. ಹೋಮ್ಸ್ಟೆಡ್ನ ಒಬ್ಬ ಮೇಲಿಚ್ಚಾರಕರಾದ ಎಡ್ ರಮ್ಸಿ, ಒಂದು ಜೋಡಿ ರಾಜ್ಯ ಸಭಾಗೃಹ, ಚಂಡಮಾರುತ ಬಂದ ಸೋಮವಾರದ ಬಳಿಕ ಬಂದ ಬುಧವಾರ, ಕೂಟಗಳಿಗೆ ಸಿದ್ಧವಾಗಿತ್ತು ಎಂದು ಎಚ್ಚರ!ಕ್ಕೆ ಹೇಳಿದರು. ಚಾವಣಿಯ ಕೆಲವಂಶ ಹೋಗಿ ಬಿಟ್ಟಿತ್ತು, ಒಳ ಮಾಳಿಗೆ ಕುಸಿದು ಬಿದ್ದಿತ್ತು ಮತ್ತು ನೀರು ಒಳಗೆ ಬಂದಿತ್ತು. ಸ್ವಯಂಸೇವಕರು ರಾಜ್ಯ ಸಭಾಗೃಹಗಳನ್ನು ಕೂಟಗಳಿಗಾಗಿ ತಯಾರಿಸಲು ಮತ್ತು ತಮ್ಮ ಧ್ವಂಸವಾಗಿದ್ದ ಪ್ರದೇಶದಲ್ಲಿ ಪರಿಹಾರ ಕೆಲಸವನ್ನು ನಿರ್ದೇಶಿಸುವ ಕೇಂದ್ರ ಕಾರ್ಯಾಲಯವಾಗಿ ಮಾಡಲು ಬೇಗನೆ ಕೆಲಸ ನಡೆಸಿದರು. ಚಂಡಮಾರುತದ ಬಲಿಗಳಿಗೂ ಸಹಾಯಕ ಕೆಲಸಗಾರರಿಗೂ ಊಟ ದೊರೆಯುವಂತೆ ಅಡುಗೆಮನೆಗಳನ್ನು ಸ್ಥಾಪಿಸಲಾಯಿತು.
ಪ್ರಿನ್ಸ್ಟನ್ ಸ್ಪ್ಯಾನಿಷ್ ಸಭೆಯ ಹಿರಿಯರಾದ ಫರ್ಮಿನ್ ಪಾಸ್ಟ್ರಾನ, ತನ್ನ 80 ಸಾಕ್ಷಿಗಳ ಸಭೆಯಲ್ಲಿ ಏಳು ಕುಟುಂಬಗಳು ತಮ್ಮ ಮನೆಗಳನ್ನು ಪೂರ್ತಿಯಾಗಿ ಕಳೆದುಕೊಂಡರೆಂದು ವರದಿ ಮಾಡಿದರು. ತನ್ನ ಜೊತೆ ಸಾಕ್ಷಿಗಳಿಗೆ ಅವರು ಸೂಚಿಸಿದ ಪರಿಹಾರವೇನು? “ಬೇಕಾಗಿರುವಲ್ಲಿ ದುಃಖಿಸಿರಿ. ಆದರೆ ಸುಮ್ಮಗೆ ಕುಳಿತು ಚಟುವಟಿಕೆಶೂನ್ಯರಾಬೇಡಿ. ಇತರರಿಗೆ ಕ್ರಿಯಾಶೀಲ ಸಹಾಯವನ್ನು ಕೊಡಿ, ಮತ್ತು ಸಾಧ್ಯವಿರುವ ಮಟ್ಟಿಗೆ, ಶುಶ್ರೂಷೆಗೆ ಹೋಗಿ. ನಮ್ಮ ಕ್ರೈಸ್ತ ಕೂಟಗಳಿಗೆ ತಪ್ಪಬೇಡಿರಿ. ಯಾವುದನ್ನು ಬಗೆಹರಿಸುವುದು ಸಾಧ್ಯವೂ ಅದನ್ನು ಬಗೆಹರಿಸಿರಿ; ಆದರೆ ಪರಿಹಾರವಿಲ್ಲದೆ ಇರುವ ವಿಷಯದ ಕುರಿತು ಪರಿತಪಿಸಬೇಡಿ.” ಇದರ ಪರಿಣಾಮವಾಗಿ, ಸಾಕ್ಷಿಗಳು ಬೇಗನೆ ಸಾರಲು ಮತ್ತು ರಿಲೀಫ್ ಪೆಟ್ಟಿಗೆಗಳನ್ನು ಮನೆಯಿಂದ ಮನೆಗೆ ಒಯ್ಯಲು ತೊಡಗಿದರು. ಆ್ಯಂಡ್ರು ಅವರ ಆಸಕ್ತಿಯನ್ನು ಹೊಡೆದುಕೊಂಡು ಹೋಗಿರಲಿಲ್ಲ.
‘ಮುಂದಿನ ಸಲ ಖಾಲಿ ಮಾಡುವೆವು!’
ಷ್ಯಾರನ್ ಕ್ಯಾಸ್ಟ್ರೋ ಎಂಬ ಕಟರ್ಲ್ ರಿಜ್ನ 37 ವಯಸ್ಸಿನ ಮಹಿಳೆ ಎಚ್ಚರ!ಕ್ಕೆ ತನ್ನ ಕಥೆಯನ್ನು ಹೇಳಿದಳು: “ನನ್ನ ತಂದೆ ಮನೆಯನ್ನು ಖಾಲಿ ಮಾಡದಿರಲು ನಿರ್ಣಯಿಸಿದರು. ಕಳೆದ ಬಾರಿಯ ಚಂಡಮಾರುತ ಫ್ಲಾರಿಡ ತೀರಕ್ಕೆ ಹೊಡೆಯಲು ತಪ್ಪಿದರ್ದಿಂದ, ಆ್ಯಂಡ್ರು ಸಹ ಹಾಗೆಯೆ ಮಾಡುವನೆಂದು ಅವರು ಅಭಿಪ್ರಯಿಸಿದರು. ಅವರು ಕಿಟಿಕಿಗಳನ್ನು ಸಹ ಜಡಿದು ಮುಚ್ಚುತ್ತಿರಲಿಲ್ಲ. ಆದರೆ ಸಂತೋಷಕರವಾಗಿ, ನನ್ನ ತಮ್ಮನು ಬಂದು, ಪ್ಲೈವುಡ್ನಿಂದ ಕಿಟಿಕಿಗಳನ್ನು ಮುಚ್ಚಬೇಕೆಂದು ಹಟ ಹಿಡಿದನು. ಅವನ ಈ ಕೃತ್ಯ ನಮ್ಮ ಜೀವವನ್ನು ಉಳಿಸಿತೆಂಬುದು ನಿಸ್ಸಂದೇಹ. ಇಲ್ಲದಿದ್ದರೆ ನಮ್ಮ ಕಿಟಿಕಿಗಳು ನುಚ್ಚುನೂರಾಗಿ ನಾವು ತುಂಡುತುಂಡಾಗುತ್ತಿದ್ದೆವು.
“ಮುಂಜಾನೆ ಸುಮಾರು 4:30ಕ್ಕೆ ವಿದ್ಯುತ್ ಹೊರಟು ಹೋಯಿತು. ಹೊರಗಿನ ಶಬ್ದ ದಿಗಿಲುಗೊಳಿಸುತ್ತಿತ್ತು. ಅದೊಂದು ದೊಡ್ಡ ಟ್ರೆಯ್ನಿನ ಸದ್ದಿನಂತಿತ್ತು. ಮರಗಳು ಮತ್ತು ಕಟ್ಟಡಗಳು ಮುರಿದು ಬೀಳುವಾಗ ಅವು ಮೊಳಗುತ್ತಿದ್ದವು. ಒಂದು ಭಯಗೊಳಿಸುವ ಕೀಚುದನಿ, ನಮ್ಮ ಚಾವಣಿಯ ಮೇಲಿನ ಮೊಳೆಗಳು ಸಡಿಲವಾಗುತ್ತಿರುವುದೇ ಎಂದು ನಮಗೆ ಬಳಿಕ ತಿಳಿದುಬಂತು. ಅಟ್ಟ ಅಟ್ಟಿಸಲ್ಪಟ್ಟಿತು, ಚಾವಣಿಯ ಮೂರನೆಯ ಒಂದಂಶವೂ ಹೋಗಿ ಬಿಟ್ಟಿತು. ನನ್ನ ಶಕ್ತಿಗುಂದಿದ ತಾಯಿ ಮತ್ತು ನನ್ನ 90 ವಯಸ್ಸಿನ ಅಜ್ಜಿ ಸೇರಿದ್ದ 12 ಜನರಾಗಿದ್ದ ನಾವು ಕಿಟಿಕಿಯಿಲ್ಲದ ಮಧ್ಯಕೋಣೆಯಲ್ಲಿ ತಂಗಬೇಕಾಯಿತು. ನಾವು ಅಲ್ಲೇ ಸಾಯುವೆವೆಂದು ನಿಶ್ಚಯವಾಗಿ ನೆನಸಿದೆವು.”
ಈ ಅನುಭವದಿಂದ ಅವಳು ಯಾವ ಪಾಠವನ್ನು ಕಲಿತಳು? “ಮುಂದಿನ ಸಲ ಖಾಲಿ ಮಾಡಲು ಹೇಳುವಲ್ಲಿ, ಪ್ರಶ್ನಿಸದೆ ನಾವು ಖಾಲಿ ಮಾಡುವೆವು. ಎಚ್ಚರಿಕೆಗೆ ನಾವು ಕಿವಿಗೊಡುವೆವು. ಇರುವುದರಲ್ಲಿ ಭಾಗಿಯಾಗಲು ಮತ್ತು ಅತ್ಯಲ್ಪ ಪದಾರ್ಥಗಳಲ್ಲಿ ಜೀವಿಸಲು ಸಹ ನಾನು ಕಲಿತಿದ್ದೇನೆ. ಮತ್ತು ಅಳುವುದು, ದುಃಖಿಸುವುದು ಮತ್ತು ಅನಂತರ ವಾಸ್ತವ್ಯವನ್ನು ಎದುರಿಸುವುದು ಸರಿ ಎಂದು ನನಗೆ ಗೊತ್ತು.”
ವಾರ್ತಾ ಮಾಧ್ಯಮಗಳ ಪ್ರತಿಕ್ರಿಯೆ
ಸಾಕ್ಷಿಗಳು ಎಷ್ಟು ಉತ್ತಮವಾಗಿ ಸಂಘಟಿತರಾಗಿದ್ದರೆಂಬುದನ್ನು ವಾರ್ತಾ ಮಾಧ್ಯಮಗಳು ಸಹ ಗಮನಿಸಿದವು. ಸವಾನ ಈವ್ನಿಂಗ್ ಪ್ರೆಸ್, “ಯೆಹೋವನ ಸಾಕ್ಷಿಗಳಿಗೆ ದಕ್ಷಿಣ ಫ್ಲಾರಿಡದಲ್ಲಿ ಸ್ವಾಗತವಿದೆಯೆಂದು ಅವರು ಕಂಡುಕೊಳ್ಳುತ್ತಾರೆ” ಎಂಬ ಶೀರ್ಷಿಕೆಯನ್ನು ಕೊಟ್ಟಿತು, ಮತ್ತು ದ ಮಆ್ಯಮಿ ಹೆರಲ್ಡ್, “ಸಾಕ್ಷಿಗಳು ತಮ್ಮವರನ್ನು—ಮತ್ತು ಇತರರನ್ನು ಪರಾಮರಿಸುತ್ತಾರೆ” ಎಂದು ಪ್ರಕಟಿಸಿತು. ಅದು ಹೇಳಿದ್ದು: “ಈ ವಾರ ಹೋಮ್ಸ್ಟೆಡ್ನಲ್ಲಿ ಯಾರೂ ಯೆಹೋವನ ಸಾಕ್ಷಿಗಳಿಗೆ ಕದವನ್ನು—ಮುಚ್ಚಲು ಕದವಿದ್ದರೂ—ಬಡಿದು ಮುಚ್ಚುವುದಿಲ್ಲ. ಈ ವಿಪತ್ತಿನ ಸ್ಥಳಕ್ಕೆ ಸುಮಾರು 3,000 ಸ್ವಯಂಸೇವಕರು ದೇಶದ ವಿಭಿನ್ನ ಭಾಗಗಳಿಂದ—ಮೊದಲಾಗಿ ತಮ್ಮವರಿಗೆ, ಆ ಬಳಿಕ ಇತರರಿಗೆ ಸಹಾಯ ಕೊಡಲಿಕ್ಕಾಗಿ ಬಂದಿದ್ದಾರೆ. . . . ಯಾವುದೇ ಮಿಲಿಟರಿ ಸಂಘ, ಸಾಕ್ಷಿಗಳ ನಿಷ್ಕೃಷ್ಟತೆ, ಶಿಸ್ತು ಮತ್ತು ಕಾರ್ಯಸಾಧಕತೆಯನ್ನು ಕಂಡು ಅಸೂಯೆಪಟೀತ್ಟು.”
ಯೆಹೋವನ ಸಾಕ್ಷಿಗಳಿಗೆ ಅವರ ಸಮ್ಮೇಳನ ಮತ್ತು ಅಧಿವೇಶನಗಳಲ್ಲಿ ಹೆಚ್ಚು ಜನರಿಗೆ ಉಣಿಸುವ ಕಾರ್ಯಕ್ರಮದ ಅನುಭವವಿದೆ. ಇದಲ್ಲದೆ, ರಾಜ್ಯ ಸಭಾಗೃಹ ಮತ್ತು ದೊಡ್ಡ ಸಮ್ಮೇಳನಾಲಯಗಳನ್ನು ರಚಿಸಲಿಕ್ಕಾಗಿ ಅವರು ಲೋಕಾದ್ಯಂತ ನೂರಾರು ಪ್ರಾದೇಶಿಕ ಕಟ್ಟಡ ಕಮಿಟಿಗಳನ್ನು ಸಂಘಟಿಸಿದ್ದಾರೆ. ಹೀಗೆ ಅವರಿಗೆ ಕೆಲವೇ ತಾಸುಗಳ ನೋಟೀಸಿನಲ್ಲಿ ಓಗೊಡಲು ಸಿದ್ಧರಾಗಿರುವ ಆಳುಬಲವಿದೆ.
ಆದರೂ, ಇರುವ ಇನ್ನೊಂದು ಸಂಗತಿಯು ಅವರ ಮನೋಭಾವ. ಅದೇ ವರದಿ ಮುಂದುವರಿಸಿದ್ದು: “ಅಧಿಕಾರಿ, ನೌಕರ ಶಾಹಿ ಅಲ್ಲಿಲ್ಲ. ಹೋರಾಡುವ ಅಹಂಭಾವಗಳಿಲ್ಲ. ಬದಲಿಗೆ, ಕೆಲಸಗಾರರು ಎಷ್ಟೇ ಸೆಕೆ, ಕೊಳಕು, ಆಯಾಸವೇ ಇರಲಿ, ಬಹು ಉಲ್ಲಾಸಚಿತ್ತರೂ ಸಹಕಾರ ಭಾವದವರೂ ಆಗಿರುತ್ತಾರೆ.” ಇದನ್ನು ಹೇಗೆ ವಿವರಿಸಲಾಯಿತು? ಒಬ್ಬ ಸಾಕ್ಷಿ ಉತ್ತರಿಸಿದ್ದು: “ಯಾವುದು ನಾವು ಇತರರಿಗೆ ಪ್ರೀತಿ ತೋರಿಸುವಂತೆ ನಮ್ಮನ್ನು ಪ್ರಚೋದಿಸುತ್ತದೊ, ಆ ದೇವರೊಂದಿಗಿರುವ ಸಂಬಂಧದಿಂದ ಇದು ಬರುತ್ತದೆ.” ಸಾಕ್ಷಿಗಳ ಕ್ರಿಸ್ತೀಯ ಪ್ರೇಮ—ಇದು ಆ್ಯಂಡ್ರುವಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದ್ದಿದ ಇನ್ನೊಂದು ವಿಷಯವಾಗಿತ್ತು.—ಯೋಹಾನ 13:34, 35.
ಒಂದು ರಸಕರವಾದ ತುಲನೆಯು, ಯೆಹೋವನ ಸಾಕ್ಷಿಗಳು ಮರಗಳಿಂದ ಕಲಿತಿರುವಂತೆ ತೋರುವುದೇ. ಒಬ್ಬ ಪ್ರತ್ಯಕ್ಷ ಸಾಕ್ಷಿ ಈ ರೀತಿ ವಿವರಿಸಿದನು: “ನಾನು ಸುತ್ತುತ್ತಿದ್ದಾಗ, ನೂರಾರು ದೊಡ್ಡ ಮರಗಳು ಕೀಳಲ್ಪಟ್ಟು ನೆಲದಲ್ಲಿ ಬಿದ್ದಿರುವುದನ್ನು ನನಗೆ ನೋಡದಿರಲಾಗಲಿಲ್ಲ. ಇದೇಕೆ? ತಮ್ಮ ಗಾತ್ರದ ಕಾರಣ ಅವು ಗಾಳಿಯನ್ನು ತೀರಾ ತಡೆಯುತ್ತಿದ್ದವು, ಮತ್ತು ಅವುಗಳ ಬೇರಿನ ವ್ಯವಸ್ಥೆ ವ್ಯಾಪಕವಾಗಿದ್ದರೂ ಆಳವಾಗಿ ಹೋಗಿರಲಿಲ್ಲ. ಆದರೆ ಇನ್ನೊಂದು ಪಕ್ಕದಲ್ಲಿ, ತೆಳ್ಳಗಿನ ತಾಳೆಯ ಜಾತಿಯ ಮರಗಳು ಇನ್ನೂ ನಿಂತಿದ್ದವು. ಅವು ಗಾಳಿಗೆ ಅನುಕೂಲವಾಗಿ ಬಗ್ಗಿದವು, ಅವು ಪರ್ಣಾಂಗಗಳನ್ನು ಕಳೆದುಕೊಂಡರೂ ನೆಲದಲ್ಲಿ ಬೇರೂರಿ ನಿಂತವು.”
ಸಾಕ್ಷಿಗಳಿಗೆ ನಂಬಿಕೆಯ ಆಳವಾದ ಬೇರುಗಳು ದೇವರ ವಾಕ್ಯದಲ್ಲಿದ್ದವು, ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಬಗ್ಗುವವರಾಗಿದ್ದರು. ಅವರಿಗೆ ಸೊತ್ತು ಮತ್ತು ಮನೆಗಳು ಸರ್ವಸ್ವವಾಗಿರಲಿಲ್ಲ. ಕಡಮೆ ಪಕ್ಷ, ಅವರು ಜೀವದಿಂದ್ದಿದರು, ಮತ್ತು ವಿಪತ್ತಿನ ಎದುರಿನಲ್ಲಿಯೂ ಯೆಹೋವನನ್ನು ಸೇವಿಸುವ ಸಾಧ್ಯತೆ ಅವರಿಗಿತ್ತು. ಜೀವವು ಆ್ಯಂಡ್ರು ಅವರಿಂದ ತೆಗೆದುಕೊಂಡು ಹೋಗದ್ದಿದ ಸಂಗತಿಯಾಗಿತ್ತು.
ಇದು ಹೇಗೆ ಮಾಡಲ್ಪಡುತ್ತದೆ?
ಆ್ಯನ್ಹೈಸರ್ ಬುಶ್ ಕಂಪೆನಿ ಒಂದು ಟ್ರಕ್ ಕುಡಿಯುವ ನೀರನ್ನು ದಾನವಾಗಿ ಕೊಟ್ಟಿತು. ಬಂದು ಮುಟ್ಟಿದಾಗ, ನೀರನ್ನು ಎಲ್ಲಿ ಕೊಡಬೇಕು ಎಂದು ಡ್ರೈವರನು ಅಧಿಕಾರಿಗಳೊಡನೆ ಕೇಳಿದನು. ಇದಕ್ಕೆ ಯಾವುದಾದರೂ ವ್ಯವಸ್ಥೆಯಿರುವವರು ಕೇವಲ ಸಾಕ್ಷಿಗಳೇ ಎಂದು ಅವನಿಗೆ ಹೇಳಲಾಯಿತು. ವಾಸ್ತವವೇನಂದರೆ, ಆ್ಯಂಡ್ರು ಬಡಿದ ಮೇಲೆ ಒಂದು ವಾರದೊಳಗೆ, ಸುಮಾರು 70 ಟ್ರ್ಯಾಕ್ಟರ್-ಟ್ರೇಲರ್ಗಳು ತುಂಬುವಷ್ಟು ಸರಬರಾಯಿಗಳು ಯೆಹೋವನ ಸಾಕ್ಷಿಗಳ ಫೋರ್ಟ್ ಲಾಡರ್ಡೇಲ್ ಸಮ್ಮೇಳನಾಲಯಕ್ಕೆ ಬಂದ್ದಿದವು.
ಅಲ್ಲಿಯ ಒಬ್ಬ ಸ್ವಯಂಸೇವಕನು ವರದಿ ಮಾಡುವುದು: “ಹೀಗೆ ನಾವು ಒಂದು ಟ್ರಕ್ ತುಂಬ ಕುಡಿಯುವ ನೀರನ್ನು ಪಡೆದೆವು. ನಾವು ಒಡನೆ ಇದನ್ನು ರಾಜ್ಯ ಸಭಾಗೃಹಗಳಲ್ಲಿರುವ ವಿತರಣಾ ಕೇಂದ್ರಗಳಿಗೆ, ಇತರ ಆಹಾರ ಸಾಮಗ್ರಿಗಳೊಂದಿಗೆ ಸೇರಿಸಿ ಕಳುಹಿಸಿದೆವು. ಇದರಲ್ಲಿ ಸಹೋದರರೂ ಆ ಪ್ರದೇಶದಲ್ಲಿ ಆವಶ್ಯಕತೆಯಿದ್ದ ನೆರೆಯವರೂ ಭಾಗಿಗಳಾದರು.” ವಾಷಿಂಗ್ಟನ್ ಸ್ಟೇಟ್ನ ಒಂದು ಕಾಗದ ಕಾರ್ಖಾನೆ 2,50,000 ಪೇಪರ್ ಪೇಟ್ಲುಗಳನ್ನು ದಾನವಾಗಿ ಕೊಟ್ಟಿತು.
ಆರಂಭದಲ್ಲಿ, ನಗರಾಧಿಕಾರಿಗಳು, ‘ಸಾಕ್ಷಿಗಳು ಮಾತ್ರ ಸರಿಯಾಗಿ ವ್ಯವಸ್ಥಿತರಾಗಿದ್ದಾರೆ’ ಎಂದು ಹೇಳಿ ಸಾಕ್ಷ್ಯೇತರ ಸ್ವಯಂಸೇವಕರನ್ನು ರಾಜ್ಯ ಸಭಾಗೃಹಗಳಿಗೆ ಕಳುಹಿಸುತ್ತಿದ್ದರು. ಕ್ರಮೇಣ, ಮಿಲಿಟರಿಯವರು ಬಂದು ಆಹಾರ ಮತ್ತು ನೀರಿನ ಪರಿಹಾರ ಕೇಂದ್ರಗಳನ್ನೂ ಶಿಬಿರ ನಗರಗಳನ್ನೂ ಸ್ಥಾಪಿಸಿದರು.
ಸಾಕ್ಷಿಗಳ ಮೊದಲ ಸರಬರಾಯಿ ವಿತರಣ ಕೇಂದ್ರವನ್ನು ರಿಲೀಫ್ ಕಮಿಟಿಯು ಫೋರ್ಟ್ ಲಾಡರ್ಡೇಲ್ ಸಮ್ಮೇಳನಾಲಯದಲ್ಲಿ ಸ್ಥಾಪಿಸಲಾಯಿತು. ಇದು ಹೋಮ್ಸ್ಟೆಡ್ನ ಸುತ್ತಲಿದ್ದ ಪ್ರಧಾನ ವಿಪತಲ್ವಯದಿಂದ ಸುಮಾರು 60 ಕಿಲೊಮೀಟರ್ ಉತ್ತರಕ್ಕಿತ್ತು. ಈ ಒತ್ತಡವನ್ನು ಕಮ್ಮಿ ಮಾಡಲು, ಒಂದು ಪ್ರಾಥಮಿಕ ವಿತರಣ ಕೇಂದ್ರವನ್ನು ವಿಪತಲ್ವಯದಿಂದ ಸುಮಾರು 400 ಕಿಲೊಮೀಟರ್ ವಾಯುವ್ಯದಲ್ಲಿರುವ ಆರ್ಲ್ಯಾಂಡೊದ ಪ್ಲ್ಯಾಂಟ್ ಸಿಟಿ ಸಮ್ಮೇಳನಾಲಯದಲ್ಲಿ ಸ್ಥಾಪಿಸಲಾಯಿತು. ಹೆಚ್ಚಿನ ಸಹಾಯ ಸಾಮಗ್ರಿಗಳು, ವಿಂಗಡಿಸಲ್ಪಟ್ಟು ಕಟ್ಟಲ್ಪಡಲು ಅಲ್ಲಿಗೆ ರವಾನೆಯಾದವು. ಕಮಿಟಿಯು ಅದರ ಆವಶ್ಯಕತೆಗಳನ್ನು ಪ್ರತಿದಿನ ಪ್ಲಾಂಟ್ ಸಿಟಿಯಿಂದ ಆರ್ಡರ್ ಮಾಡಿತು, ಮತ್ತು ಅಲ್ಲಿಂದ ಫೋರ್ಟ್ ಲಾಡರ್ಡೇಲ್ಗಿರುವ ಐದು ತಾಸಿನ ಪ್ರಯಾಣಕ್ಕಾಗಿ ದೊಡ್ಡ ಟ್ರ್ಯಾಕ್ಟರ್-ಟ್ರೇಲರ್ಗಳನ್ನು ಬಳಸಲಾಯಿತು.
ಸರದಿಯಾಗಿ, ಈ ವಿತರಣ ಕೇಂದ್ರವು ಆಹಾರ, ಸಾಮಗ್ರಿ, ನೀರು, ವಿದ್ಯುತ್ ಉತ್ಪಾದಕ ಸಲಕರಣೆ ಮತ್ತು ಇತರ ಆವಶ್ಯಕ ವಸ್ತುಗಳನ್ನು ವಿಪತ್ತಿನ ಕ್ಷೇತ್ರದ ಮಧ್ಯದಲ್ಲಿದ್ದ ದುರಸ್ತು ಮಾಡಲ್ಪಟ್ಟಿದ್ದ ಮೂರು ರಾಜ್ಯ ಸಭಾಗೃಹಗಳಿಗೆ ಸರಬರಾಯಿ ಮಾಡಿತು. ಅಲ್ಲಿ, ಸಮರ್ಥರಾದ ಸಾಕ್ಷಿಗಳು, ಕಟ್ಟಡದ ಮತ್ತು ಶುಚಿ ಮಾಡುವ ತಂಡಗಳನ್ನು, ಅವರು ಅವಶ್ಯವಿರುವ ನೂರಾರು ಮನೆಗಳಿಗೆ ಭೇಟಿ ಕೊಡುವಂತೆ ಏರ್ಪಡಿಸಿದರು. ರಾಜ್ಯ ಸಭಾಗೃಹದ ಜಮೀನಿನಲ್ಲಿ ಅಡುಗೆ ಮನೆ ಮತ್ತು ಉಣಿಸುವ ಸಾಲುಗಳು ಸಹ ತೆರೆಯಲ್ಪಟ್ಟವು, ಮತ್ತು ಸಹಾಯ ಪಡೆಯಲಿಕ್ಕಾಗಿ ಯಾರು ಅಲ್ಲಿಗೆ ಬಂದರೂ ಅವರಿಗೆ ಸ್ವಾಗತವಿತ್ತು. ಕೆಲವು ಸೈನಿಕರು ಸಹ ಅಲ್ಲಿ ಊಟ ಮಾಡಿ ಸಂತೋಷಿಸಿದರು, ಮತ್ತು ಕೊನೆಗೆ ಅವರು ವಂತಿಗೆಯ ಪೆಟ್ಟಿಗೆಗಳಲ್ಲಿ ವಂತಿಗೆ ಹಾಕುವುದನ್ನು ಪ್ರೇಕ್ಷಿಸಲಾಯಿತು.
ಪುರುಷರು ಮನೆಗಳ ದುರಸ್ತಿನಲ್ಲಿ ಮಗ್ನರಾಗಿದ್ದಾಗ, ಕೆಲವು ಸ್ತ್ರೀಯರು ಊಟ ತಯಾರಿಸುತ್ತಿದ್ದರು. ಇತರರು ದೊರೆಯುವ ಯಾವ ಜನರನ್ನೂ, ನೈಸರ್ಗಿಕ ವಿಪತ್ತುಗಳ ಕುರಿತ ಬೈಬಲಿನ ವಿವರಣೆಯಲ್ಲಿ ಪಾಲಿಗರಾಗಲು ಮತ್ತು ಅವಶ್ಯವಿರುವವರಿಗೆ ಸಹಾಯ ಸಾಮಗ್ರಿಗಳ ಪೆಟ್ಟಿಗೆಗಳನ್ನು ಸಹ ಕೊಡಲು ಭೇಟಿಯಾದರು. ಇವರಲ್ಲಿ ಒಬ್ಬಳು ಟೆರೇಸ ಪೆರೇಡ. ಅವಳ ಮನೆ ಹಾಳಾಗಿತ್ತು, ಆಕೆಯ ಕಾರಿನ ಕಿಟಿಕಿಗಳು ಒಡೆದ್ದಿದವು. ಆದರೂ ನೆರೆಯವರಿಗಾಗಿ ಆಕೆಯ ಕಾರ್ ತುಂಬ ಸಹಾಯ ಪೆಟ್ಟಿಗೆಗಳಿದ್ದವು. ಆಕೆಯ ಗಂಡ, ಲಸಾರೊ, ರಾಜ್ಯ ಸಭಾಗೃಹವೊಂದರಲ್ಲಿ ಕೆಲಸದಲ್ಲಿ ನಿರತನಾಗಿದ್ದನು.—ಪ್ರಸಂಗಿ 9:11; ಲೂಕ 21:11, 25.
ಮನೆಗಳನ್ನು ಕಳೆದುಕೊಂಡಿದ್ದ ಅನೇಕರಿಗೆ, ಆ್ಯಂಡ್ರು ಮುಟ್ಟದೆ ಇದ್ದ ಸಾಕ್ಷಿಗಳ ಮನೆಗಳಲ್ಲಿ ಸ್ಥಳ ಸಿಕ್ಕಿತು. ಇತರರು ವಾಸದ ಉದ್ದೇಶಕ್ಕಾಗಿ ಎರವಲಾಗಿ ಯಾ ದಾನವಾಗಿ ಕೊಡಲ್ಪಟ್ಟಿದ್ದ ಟ್ರೇಲರ್ಗಳಲ್ಲಿ ವಾಸಿಸಿದರು. ಕೆಲವರು ಮಿಲಿಟರಿಯವರು ಸ್ಥಾಪಿಸಿದ್ದ ಶಿಬಿರ ನಗರಗಳಿಗೆ ಹೋದರು. ಇತರರು ತಮ್ಮ ಮನೆಗಳನ್ನು ಪೂರ್ತಿ ನಷ್ಟವೆಂದೆಣಿಸಿ ಬಿಟ್ಟು, ದೇಶದ ಇತರ ಭಾಗಗಳಲ್ಲಿ ಮಿತ್ರರ ಯಾ ಸಂಬಂಧಿಗಳ ಬಳಿಗೆ ಹೋದರು. ಅವರಿಗೆ ಮನೆಯೂ ಇರಲಿಲ್ಲ, ಕೆಲಸಗಳೂ ಇರಲಿಲ್ಲ. ಅವರಿಗೆ ವಿದ್ಯುತ್ತಾಗಲಿ, ನೀರಾಗಲಿ, ಯೋಗ್ಯವಾದ ರೊಚ್ಚು ಚರಂಡಿಗಳಾಗಲಿ ಇರಲಿಲ್ಲ. ಆದುದರಿಂದ ಅವರು ತಮಗಿದ್ದ ಅತ್ಯುತ್ತಮ ಪರಿಹಾರ ಮಾರ್ಗವನ್ನು ಆಯ್ದುಕೊಂಡರು.
ಎಲ್ಲರೂ ಉತ್ತಮವಾಗಿ ಕಲಿತ ಒಂದು ಪಾಠವನ್ನು ಒಬ್ಬ ಸ್ಪ್ಯಾನಿಷ್ ಮಾತಾಡುವ ಸಾಕ್ಷಿಯು ಹೀಗೆ ವ್ಯಕ್ತ ಪಡಿಸಿದನು: “ನಮ್ಮ ಜೀವನದ ಗುರಿಗಳ ವಿಷಯದಲ್ಲಿ ಕಲಿತ ಪಾಠಕ್ಕಾಗಿ ನಾವು ತುಂಬ ಕೃತಜ್ಞರು. ನಾವು 15 ಯಾ 20 ವರ್ಷ ನಮ್ಮ ಮನೆಗಳನ್ನು ಕಟ್ಟಿ ಬೆಳೆಸಿ, ಪ್ರಾಪಂಚಿಕ ವಸ್ತುಗಳನ್ನು ಶೇಖರಿಸಬಹುದು, ಆದರೆ ಬಳಿಕ, ಒಂದೇ ತಾಸಿನಲ್ಲಿ ಅದೆಲ್ಲ ಹೋಗಿ ಬಿಡಬಲ್ಲದು. ಇದು, ನಾವು ಅಧ್ಯಾತ್ಮಿಕವಾಗಿ ನಮ್ಮ ಗುರಿಗಳನ್ನು ಗುರುತಿಸುವಂತೆ, ನಮ್ಮ ಜೀವನವನ್ನು ಹೆಚ್ಚು ಸರಳವಾಗಿಡುವಂತೆ ಮತ್ತು ಯೆಹೋವನನ್ನು ಸೇವಿಸುವ ಕುರಿತು ನಿಜವಾಗಿಯೂ ಯೋಚಿಸುವಂತೆ ಸಹಾಯ ಮಾಡುತ್ತದೆ.”
ಇದು ಅಧಿಕಾಂಶ ಅಪೊಸ್ತಲ ಪೌಲನು ಹೇಳಿದಂತೆಯೇ ಇದೆ: “ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಇಷ್ಟೇ ಅಲ್ಲದೆ ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.”—ಫಿಲಿಪ್ಪಿ 3:7, 8.
ನಮ್ಮ ಈಗಿನ ಲೋಕದಲ್ಲಿ ನೈಸರ್ಗಿಕ ಆಪತ್ತುಗಳು ಜೀವನದ ಒಂದು ಭಾಗ. ನಾವು ಅಧಿಕಾರಿಗಳ ಎಚ್ಚರಿಕೆಗೆ ಕಿವಿಗೊಡುವಲ್ಲಿ, ಕಡಮೆ ಪಕ್ಷ ನಮ್ಮ ಜೀವವನ್ನಾದರೂ ಉಳಿಸಿಕೊಳ್ಳಬಹುದು. ನಮ್ಮ ಮನೆ ಮತ್ತು ಸೊತ್ತುಗಳು ನಷ್ಟಗೊಳ್ಳಬಹುದು, ಆದರೆ “ಸಂತೈಸುವ ದೇವರ” ಕೂಡ ಕ್ರೈಸ್ತನಿಗಿರುವ ಸಂಬಂಧವು ಬಲಗೊಳಿಸಲ್ಪಡಬೇಕು. ಕೆಲವರು ಒಂದು ವಿಪತ್ತಿನಲ್ಲಿ ಸಾಯಬಹುದಾದರೂ, ಪುನಃಸ್ಥಾಪಿಸಲ್ಪಟ್ಟಿರುವ ಭೂಮಿಯ ಮೇಲೆ—ಪ್ರಾಕೃತಿಕ ವಿಪತ್ತುಗಳಿಂದ ಸಂಕಟ ಮತ್ತು ಮರಣ ಎಂದಿಗೂ ಸಂಭವಿಸದಿರುವ ಭೂಮಿಯ ಮೇಲೆ—ದೇವರ ನೂತನ ಲೋಕದಲ್ಲಿ ಅವರಿಗೆ ಪುನರುತ್ಥಾನವಾಗುವುದೆಂದು ಯೇಸು ವಾಗ್ದಾನಿಸಿದನು.—2 ಕೊರಿಂಥ 1:3, 4; ಯೆಶಾಯ 11:9; ಯೋಹಾನ 5:28, 29; ಪ್ರಕಟನೆ 21:3, 4. (g93 1/8)
[ಅಧ್ಯಯನ ಪ್ರಶ್ನೆಗಳು]
a ಚಂಡಮಾರುತವು “ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಉಂಟಾಗುವ, ತಾಸಿಗೆ 121 ಕಿಲೊಮೀಟರ್ (75 ಎಮ್ಪಿಎಚ್) ಗಳಿಗೂ ಜಾಸ್ತಿ ವೇಗವನ್ನು ಹೊಂದುವ ಉಷ್ಣವಲಯದ ಸುಂಟರ ಗಾಳಿ.” (ದ ಕನ್ಸೈಸ್ ಕೊಲಂಬಿಯ ಎನ್ಸೈಕ್ಲೊಪೀಡಿಯ) ಒಂದು ತುಫಾನು, “ಪಶ್ಚಿಮ ಶಾಂತ ಸಾಗರ ಯಾ ಚೈನ ಸಮುದ್ರದಲ್ಲಿ ಸಂಭವಿಸುವ ಚಂಡಮಾರುತ.”—ದಿ ಅಮೆರಿಕನ್ ಹೆರಿಟೆಜ್ ಡಿಕ್ಷನೆರಿ ಆಫ್ ದಿ ಇಂಗ್ಲಿಷ್ ಲ್ಯಾಂಗೆಜ್ವ್.
[ಪುಟ 20 ರಲ್ಲಿರುವ ಚೌಕ]
ಪೂರ್ತಿ ಆಶ್ಚರ್ಯಚಕಿತರು
ಹನ್ನೊಂದು ಬಿಳಿ ಸಾಕ್ಷಿಗಳ ಒಂದು ಗುಂಪು ಈ ರಿಲೀಫ್ ಕೆಲಸದಲ್ಲಿ ಸಹಾಯ ನೀಡಲು ಫ್ಲಾರಿಡದ ಟ್ಯಾಂಪದಿಂದ ಪ್ರಯಾಣಿಸಿದರು. ಅವರು ಸರಬರಾಯಿಗಳನ್ನು ಪಡೆದು ಒಬ್ಬ ಕಪ್ಪು ಸಾಕ್ಷಿಯ ಮನೆಯ ಚಾವಣಿಯನ್ನು ರಿಪೇರಿ ಮಾಡತೊಡಗಿದರು. ಅವನ ಸಾಕ್ಷಿಯಲ್ಲದ ಸೋದರಳಿಯನು ಬಂದಾಗ, ಅವನಿಗೆ ಇದನ್ನು ನೋಡಿ ನಂಬಲಿಕ್ಕಾಗಲಿಲ್ಲ. ಬಿಳಿ ಸಾಕ್ಷಿಗಳು ತನಗಿಂತ ಮೊದಲಾಗಿಯೇ ಬಂದು ತನ್ನ ಮಾವನ ಮನೆಯನ್ನು ದುರಸ್ತು ಮಾಡುವುದನ್ನು ನೋಡಿ ಅವನು ಪೂರ್ತ ಆಶ್ಚರ್ಯಚಕಿತನಾದನು. ಅವನು ಎಷ್ಟು ಮನತಟ್ಟಲ್ಪಟ್ಟವನಾದನೆಂದರೆ, ಕಟ್ಟುವ ಕೆಲಸದಲ್ಲಿ ಅವನು ನೆರವನ್ನೂ ಕೊಟ್ಟನು.
ಮುಂದಿನ ಬಾರಿ ಸಾಕ್ಷಿಗಳು ಅವನ ಮನೆಯ ಬಳಿ ಬರುವಾಗ ತಾನು ಒಂದು ಬೈಬಲ್ ಅಧ್ಯಯನವನ್ನು ಕೇಳಿಕೊಳ್ಳುವೆನೆಂದು ಅವನು ಹೇಳಿದನು. ಆ ಟ್ಯಾಂಪ ಗುಂಪಿನೊಂದಿಗೆ ಮಾತಾಡುವಾಗ ಅವನೂ ಅವರ ವಠಾರದವನೇ ಎಂದು ತಿಳಿದು ಬಂತು. ವಿಳಂಬಿಸದೆ, ಆ ಗುಂಪಿನ ಒಬ್ಬ ಹಿರಿಯರು ಮುಂದಿನ ವಾರದಲ್ಲಿ ಒಂದು ಬೈಬಲ್ ಅಧ್ಯಯನಕ್ಕಾಗಿ ಏರ್ಪಡಿಸಿದರು! ಒಬ್ಬ ಸಾಕ್ಷಿ ಹೇಳಿದಂತೆ, ಸಾಕ್ಷಿ ಕೊಡಲಿಕ್ಕಾಗಿ ನೀವು ಮನೆಯ ಬಾಗಲುಗಳನ್ನೇ ತಟ್ಟಬೇಕೆಂದಿಲ್ಲ—ಚಾವಣಿಗಳನ್ನು ತಟ್ಟಿದರೆ ಸಾಕು!
[ಪುಟ 15 ರಲ್ಲಿರುವ ಚಿತ್ರಗಳು]
ಚಂಡಮಾರುತ ಆ್ಯಂಡ್ರು ಯಾವುದನ್ನೂ ಉಳಿಸಲಿಲ್ಲ, ಮತ್ತು ಕೆಲವೇ ಕಟ್ಟಡಗಳು ತಡೆದು ನಿಲ್ಲಶಕ್ತವಾಗಿದ್ದವು
ಕೀಫರ್ ದಂಪತಿಗಳ ವಾಹನ ಮನೆ—ಮತ್ತು ಅದರಲ್ಲಿ ಉಳಿದಿರುವುದು
[ಪುಟ 16 ರಲ್ಲಿರುವ ಚಿತ್ರಗಳು]
ರೆಬೆಕ ಪೆರೆಸ್, ಅವಳ ಪುತ್ರಿಯರು ಮತ್ತು ಇತರ 11 ಮಂದಿ ಈ ಚಿಕ್ಕ ಜಾಗದಲ್ಲಿ ಇದ್ದು ಪಾರಾದರು
ಲೂಟಿ ಮಾಡುವುದನ್ನು ತಡೆಯಲು ಮಿಲಿಟರಿ ಬಂತು (ಮೇಲೆ ಬಲಕ್ಕೆ); ಸೂರೆ ಮಾಡಿದ ಅಂಗಡಿ (ಬಲಕ್ಕೆ)
ಚಂಡಮಾರುತ ಚಾವಣಿಗಳನ್ನು ಕಿತ್ತು ಹಾಕಿತು, ವಾಹನಗಳು ಮೇಲಕ್ಕೆಸೆಯಲ್ಪಟ್ಟವು
[ಪುಟ 17 ರಲ್ಲಿರುವ ಚಿತ್ರಗಳು]
ಪರಿಹಾರ ಕಾರ್ಯ ರಾಜ್ಯ ಸಭಾಗೃಹಗಳಲ್ಲಿ ಸಂಘಟಿಸಲ್ಪಟ್ಟಿತು
ವಾಹನ ಮನೆಗಳು ಮರಗಳನ್ನು ಸುತ್ತಿಕೊಂಡಿದ್ದವು; ಒಂದು ಮಗುವಿನ ಆಟದ ಸಾಮಾನುಗಳು ಹಾಸಿಗೆಯ ಮೇಲೆ ತೊರೆದು ಬಿಡಲ್ಪಟ್ಟಿವೆ; ಮುರುಕಲುಗುಪ್ಪೆಯಲ್ಲಿ ಬೈಬಲ್ ಸಾಹಿತ್ಯ; ಟೆರೇಸ ಪೆರೇಡಳಂಥ ಸಾಕ್ಷಿಗಳು ನೆರೆಯವರಿಗೆ ಸರಬರಾಯಿಗಳನ್ನು ಒಯ್ದರು
ದಾನವಾಗಿ ಕೊಡಲ್ಪಟ್ಟಿದ್ದ ಕಟ್ಟಡ ಸಾಮಗ್ರಿಗಳು. ಬಟ್ಟೆಬರೆಗಳನ್ನು ಪ್ರತ್ಯೇಕಿಸುವುದು
[ಪುಟ 18 ರಲ್ಲಿರುವ ಚಿತ್ರಗಳು]
ಅಮೆರಿಕದ ಎಲ್ಲ ಕಡೆಗಳಿಂದ ಬಂದ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ಸಹಾಯ ಮಾಡಿದರು