ಧ್ವಂಸಗಳ ಮಧ್ಯೆ ಪರಿಹಾರವನ್ನು ಒದಗಿಸುವುದು
ವಿಪತ್ತಿನ ಹಿಂದೆಯೇ ಪರಿಹಾರವನ್ನು ಒದಗಿಸುವ ಮಾನವನ ಪ್ರಯತ್ನವು ನಿಜವಾಗಿಯೂ ಪ್ರಶಂಸಾರ್ಹವೇ. ಅನೇಕ ಪರಿಹಾರ ಕಾರ್ಯಕ್ರಮಗಳು ಮನೆಗಳನ್ನು ಪುನರ್ನಿರ್ಮಿಸಲು, ಕುಟುಂಬಗಳನ್ನು ಪುನರ್ಮಿಲನಗೊಳಿಸಲು, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಜೀವಗಳನ್ನು ರಕ್ಷಿಸಲು ಸಹಾಯಮಾಡಿವೆ.
ವಿಪತ್ತು ಬಡಿಯುವಾಗ, ಯೆಹೋವನ ಸಾಕ್ಷಿಗಳು ಐಹಿಕ ಪರಿಹಾರ ಕಾರ್ಯಕ್ರಮಗಳ ಮುಖಾಂತರ ಮಾಡಲ್ಪಡುವ ಯಾವುದೇ ಒದಗಿಸುವಿಕೆಗಳನ್ನು ಸದುಪಯೋಗಿಸಿಕೊಳ್ಳುತ್ತಾರೆ—ಮತ್ತು ಅವುಗಳಿಗಾಗಿ ಅವರು ಕೃತಜ್ಞರು. ಅದೇ ಸಮಯದಲ್ಲಿ, “ವಿಶೇಷವಾಗಿ ನಂಬಿಕೆಯಲ್ಲಿ [ತಮಗೆ] ಸಂಬಂಧಿತರಾಗಿರುವವರೆಡೆಗೆ . . . ಒಳ್ಳೆಯದ್ದಾಗಿರುವುದನ್ನು ಮಾಡುವ” ಒಂದು ಶಾಸ್ತ್ರೀಯ ಹಂಗು ಅವರಿಗಿದೆ. (ಗಲಾತ್ಯ 6:10, NW) ಹೌದು, ಸಾಕ್ಷಿಗಳು ತಾವು ಸಂಬಂಧಿತರಾಗಿದ್ದೇವೋ ಎಂಬಂತೆ ಭಾವಿಸುತ್ತಾರೆ; ಅವರು ಒಬ್ಬರು ಇನ್ನೊಬ್ಬರನ್ನು “ಕುಟುಂಬ”ದೋಪಾದಿ ವೀಕ್ಷಿಸುತ್ತಾರೆ. ಆದುದರಿಂದಲೇ, ಅವರು ಒಬ್ಬರು ಇನ್ನೊಬ್ಬರನ್ನು “ಸಹೋದರ” ಮತ್ತು “ಸಹೋದರಿ” ಎಂಬುದಾಗಿ ಹೇಳುತ್ತಾರೆ.—ಹೋಲಿಸಿ ಮಾರ್ಕ 3:31-35; ಫಿಲೆಮೋನ 1, 2.
ಆದುದರಿಂದ, ವಿಪತ್ತೊಂದು ನೆರೆಹೊರೆಯವರನ್ನು ಬಾಧಿಸುವಾಗ, ಯೆಹೋವನ ಸಾಕ್ಷಿಗಳ ನಡುವೆಯಿರುವ ಹಿರಿಯರು, ಪ್ರತಿ ಸಭೆಯ ಸದಸ್ಯನು ಎಲ್ಲಿದ್ದಾನೆ ಮತ್ತು ಅವನ ಅಗತ್ಯಗಳೇನು ಎಂಬುದರ ಕುರಿತು ತಿಳಿದುಕೊಳ್ಳಲು ಹಾಗೂ ಆವಶ್ಯಕ ನೆರವಿಗಾಗಿ ಏರ್ಪಾಡುಗಳನ್ನು ಮಾಡಲು ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಮಾಡುತ್ತಾರೆ. ಇದು ಅಕ್ರಾ, ಘಾನ; ಸಾನ್ ಆ್ಯಂಜಲೊ, ಅಮೆರಿಕ; ಮತ್ತು ಕೋಬೀ ಜಪಾನಿನಲ್ಲಿ ಹೇಗೆ ನಿಜವಾಗಿತ್ತೆಂಬುದನ್ನು ಪರಿಗಣಿಸಿರಿ.
ಅಕ್ರಾ—“ಒಂದು ಅಲ್ಪಪ್ರಮಾಣದ ನೋಹನ ದಿನ”
ರಾತ್ರಿ ಸುಮಾರು 11 ಗಂಟೆಗೆ ಮಳೆಯು ಸುರಿಯಲಾರಂಭಿಸಿತು, ಮತ್ತು ಅದು ತಾಸುಗಟ್ಟಲೆ ಪಟ್ಟುಸಡಿಲಿಸದೆ ಬಿರುಸಾಗಿ ಸುರಿಯಿತು. “ಮಳೆ ಎಷ್ಟು ಜೋರಾಗಿ ಸುರಿಯುತ್ತಿತ್ತೆಂದರೆ ನನ್ನ ಇಡೀ ಕುಟುಂಬವು ಎಚ್ಚರದಿಂದಿತ್ತು,” ಎಂದು ಅಕ್ರಾದಲ್ಲಿನ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದ ಜಾನ್ ಟ್ವೂಮಾಸಿ ಹೇಳುತ್ತಾನೆ. ಡೇಲಿ ಗ್ರ್ಯಾಫಿಕ್ ಅದನ್ನು “ಒಂದು ಅಲ್ಪಪ್ರಮಾಣದ ನೋಹನ ದಿನ” ಎಂದು ಕರೆಯಿತು. “ನಾವು ಕೆಲವು ಅಮೂಲ್ಯ ವಸ್ತುಗಳನ್ನು ಉಪ್ಪರಿಗೆಗೆ ತೆಗೆದುಕೊಂಡುಹೋಗಲು ಪ್ರಯತ್ನಿಸಿದೆವು,” ಜಾನ್ ಮುಂದುವರಿಸುವುದು, “ಆದರೆ ನಾವು ಮೆಟ್ಟಿಲುಸಾಲಿನ ಬಾಗಿಲನ್ನು ತೆರೆದಂತೆ, ನೆರೆನೀರು ಒಳಕ್ಕೆ ಅಲೆಅಲೆಯಾಗಿ ಉಕ್ಕೇರಿತು.”
ಅಧಿಕಾರಿಗಳು ಸ್ಥಳವನ್ನು ಖಾಲಿಮಾಡುವಂತೆ ಎಚ್ಚರಿಸಿದರಾದರೂ, ಒಂದು ಖಾಲಿ ಮನೆ—ನೀರಿನಿಂದ ತುಂಬಿರುವುದಾದರೂ ಕೂಡ—ಲೂಟಿಮಾಡುವವರನ್ನು ಆಕರ್ಷಿಸಬಹುದೆಂಬುದಾಗಿ ಭಯಪಡುತ್ತಾ ಅನೇಕರು ಹಿಂಜರಿದರು. ಕೆಲವರು ಹೊರಟುಹೋಗಲು ಬಯಸಿದರಾದರೂ ಹೋಗಲಿಕ್ಕೆ ಸಾಧ್ಯವಾಗಲಿಲ್ಲ. “ನನ್ನ ತಾಯಿ ಮತ್ತು ನಾನು ಬಾಗಿಲನ್ನು ತೆರೆಯಲು ಅಶಕ್ತರಾಗಿದ್ದೆವು” ಎಂದು ಪೌಲಿನಾ ಎಂಬ ಹೆಸರಿನ ಒಬ್ಬ ಹುಡುಗಿಯು ಹೇಳುತ್ತಾಳೆ. “ನೀರು ಮೇಲೇರುತ್ತಾ ಹೋಯಿತು, ಆದುದರಿಂದ ನಾವು ಮರದ ಪೀಪಾಯಿಗಳ ಮೇಲೆ ನಿಂತುಕೊಂಡು, ಚಾವಣಿಯ ತೊಲೆಯೊಂದನ್ನು ಹಿಡಿದುಕೊಂಡೆವು. ಕೊನೆಗೆ, ಬೆಳಿಗ್ಗೆ ಸುಮಾರು ಐದು ಗಂಟೆಗೆ, ನಮ್ಮ ನೆರೆಯವರು ನಮ್ಮನ್ನು ಕಾಪಾಡಿದರು.”
ಸಾಧ್ಯವಾದಷ್ಟು ಬೇಗನೆ, ಯೆಹೋವನ ಸಾಕ್ಷಿಗಳು ಕೆಲಸಮಾಡಲು ಪ್ರಾರಂಭಿಸಿದರು. ಬಿಯಾಟ್ರಿಸ್ ಎಂಬ ಹೆಸರಿನ ಒಬ್ಬ ಕ್ರೈಸ್ತ ಸಹೋದರಿಯು ಹೇಳುವುದು: “ಸಭೆಯಲ್ಲಿನ ಹಿರಿಯರು ನಮ್ಮನ್ನು ಹುಡುಕುತ್ತಿದ್ದರು, ಮತ್ತು ಅವರು ನಮ್ಮನ್ನು ನಾವು ಎಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದೆವೋ, ಆ ಒಬ್ಬ ಜೊತೆ ಸಾಕ್ಷಿಯ ಮನೆಯಲ್ಲಿ ಕಂಡುಕೊಂಡರು. ನೆರೆಯು ಸಂಭವಿಸಿದ ಕೇವಲ ಮೂರು ದಿನಗಳ ಬಳಿಕ, ಸಭೆಯ ಹಿರಿಯರು ಮತ್ತು ಯುವಪ್ರಾಯದ ಸದಸ್ಯರು ನಮ್ಮ ನೆರವಿಗೆ ಬಂದು, ನಮ್ಮ ಮನೆಯ ಒಳಗೆ ಮತ್ತು ಹೊರಗೆ ಇದ್ದ ಮಣ್ಣನ್ನು ಕೆರೆದುಹಾಕಿದರು. ವಾಚ್ ಟವರ್ ಸೊಸೈಟಿ ಸಾಬೂನುಗಳು, ಸೋಂಕು ನಿವಾರಕಗಳು, ಪೆಯಿಂಟ್, ಹಾಸಿಗೆಗಳು, ಕಂಬಳಿಗಳು, ಉಣ್ಣೆ ಬಟ್ಟೆ, ಮತ್ತು ಮಕ್ಕಳಿಗಾಗಿ ಉಡುಗೆತೊಡುಗೆಗಳನ್ನು ಸರಬರಾಯಿ ಮಾಡಿತು. ಸಹೋದರರು ಹಲವಾರು ದಿನಗಳ ವರೆಗೆ ನಮಗೆ ಆಹಾರವನ್ನು ಕಳುಹಿಸಿಕೊಟ್ಟರು. ನಾನು ಗಾಢವಾಗಿ ಪ್ರಚೋದಿಸಲ್ಪಟ್ಟೆ!”
ಆರಂಭದಲ್ಲಿ ಉದ್ಧರಿಸಲ್ಪಟ್ಟ ಜಾನ್ ಟ್ವೂಮಾಸಿ ವರದಿಸುವುದು: “ನಮ್ಮ ಸೊಸೈಟಿ ನಮಗೆ—ಇಡೀ ವಾಸದ ಮಹಡಿಯನ್ನು ಶುಚಿಮಾಡಲು ಸಾಕಾಗುವಷ್ಟು ಸಾಬೂನು ಹಾಗೂ ಸೋಂಕು ನಿವಾರಕಗಳನ್ನು ಕಳುಹಿಸಿಕೊಟ್ಟಿದೆ ಎಂದು ನಾನು ಇತರ ಬಾಡಿಗೆದಾರರಿಗೆ ಹೇಳಿದೆ. ಸುಮಾರು 40 ಬಾಡಿಗೆದಾರರು ಶುಚಿಮಾಡಲು ಸಹಾಯಮಾಡಿದರು. ಸ್ಥಳಿಕ ಚರ್ಚೊಂದರಲ್ಲಿ ಪಾದ್ರಿಯಾಗಿರುವ ಒಬ್ಬ ಮನುಷ್ಯನನ್ನು ಸೇರಿಸಿ, ನನ್ನ ನೆರೆಯವರಿಗೆ ನಾನು ಸ್ವಲ್ಪ ಸಾಬೂನುಗಳನ್ನು ಕೊಟ್ಟೆ. ಯೆಹೋವನ ಸಾಕ್ಷಿಗಳು ತಮ್ಮ ಸ್ವಂತ ಜನರಿಗೆ ಮಾತ್ರ ಪ್ರೀತಿಯನ್ನು ತೋರಿಸುತ್ತಾರೆ ಎಂದು ನನ್ನ ಸಹೋದ್ಯೋಗಿಗಳು ತಪ್ಪಾಗಿ ಭಾವಿಸಿದ್ದರು.”
ಕ್ರೈಸ್ತ ಸಹೋದರ ಸಹೋದರಿಯರು ತಮಗೆ ನೀಡಲ್ಪಟ್ಟ ಪ್ರೀತಿಪರ ನೆರವನ್ನು ಮಹತ್ತರವಾಗಿ ಗಣ್ಯಮಾಡಿದರು. ಸಹೋದರ ಟ್ವೂಮಾಸಿ ಕೊನೆಗೊಳಿಸುವುದು: “ನಾನು ನೆರೆಯಲ್ಲಿ ಕಳೆದುಕೊಂಡ ಸಾಮಾನುಗಳು, ಪರಿಹಾರ ಸಾಮಗ್ರಿಗಳಿಗಿಂತಲೂ ಹೆಚ್ಚಿನ ಹಣಕಾಸಿನ ಮೌಲ್ಯವುಳ್ಳವುಗಳಾಗಿದ್ದವಾದರೂ, ಸೊಸೈಟಿಯಿಂದ ಬಂದ ಈ ಹೃದಯಸ್ಪರ್ಶಿ ಒದಗಿಸುವಿಕೆಯಿಂದಾಗಿ, ನಾವು ಕಳೆದುಕೊಂಡದ್ದಕ್ಕಿಂತಲೂ ಅತ್ಯಂತ ಹೆಚ್ಚನ್ನು ಪಡೆದುಕೊಂಡಿದ್ದೇವೆಂದು ನನ್ನ ಕುಟುಂಬ ಮತ್ತು ನಾನು ಭಾವಿಸುತ್ತೇವೆ.”
ಸಾನ್ ಆ್ಯಂಜಲೊ—“ಲೋಕಾಂತ್ಯವಾಗುತ್ತಿತ್ತೋ ಎಂಬಂತೆ ಅದು ಧ್ವನಿಸಿತು”
1995, ಮೇ 28ರಂದು, ಸಾನ್ ಆ್ಯಂಜಲೊ ಅನ್ನು ಪಾಳುಗೆಡವಿದ ಸುಂಟರಗಾಳಿಯು, ಮರಗಳನ್ನು ಬೇರು ಸಮೇತ ಕಿತ್ತುಹಾಕಿ, ವಿದ್ಯುತ್ ಕಂಬಗಳನ್ನು ಲಟ್ಟನೆ ಮುರಿದು, ವಿದ್ಯುತ್ಪ್ರವಾಹಭರಿತ ತಂತಿಗಳನ್ನು ರಸ್ತೆಗಳಿಂದಾಚೆಗೆ ಎಸೆಯಿತು. ಗಾಳಿಯು ಸಾರ್ವಜನಿಕ ಸೇವಾ ಸಂಘಟನೆಯ ಕಟ್ಟಡಗಳನ್ನು ಹಾನಿಗೊಳಿಸುತ್ತಾ, ಒಂದು ಗಂಟೆಗೆ 160 ಕಿಲೊಮೀಟರುಗಳಷ್ಟು ರಭಸವಾಗಿ ಹೊಡೆಯಿತು. 20,000ಕ್ಕಿಂತಲೂ ಹೆಚ್ಚಿನ ಮನೆಗಳು ಅಂಧೀಕರಣಗಳನ್ನು ಅನುಭವಿಸಿದವು. ಅನಂತರ ಆಲಿಕಲ್ಲಿನ ಮಳೆ ಬಂತು. “ಗಾಲ್ಫ್ ಚೆಂಡಿನ ಗಾತ್ರದ ಆಲಿಕಲ್ಲು” ಅನಂತರ “ಸಾಫ್ಟ್ಚೆಂಡಿನ ಗಾತ್ರದ ಆಲಿಕಲ್ಲು” ಮತ್ತು, ಅಂತಿಮವಾಗಿ “ಗ್ರೇಪ್ಫ್ರೂಟ್ (ಸಿಟ್ರಸ್ ಪ್ಯಾರೆಡಿಸಿ) ಹಣ್ಣಿನ ಗಾತ್ರದ ಆಲಿಕಲ್ಲು” ಅನ್ನು ರಾಷ್ಟ್ರೀಯ ಹವಾಮಾನ ಸೇವೆಯು ವರದಿಸಿತು. ಆಕ್ರಮಣವು ಕಿವುಡುಗೊಳಿಸುವಂತಿತ್ತು. ಒಬ್ಬ ನಿವಾಸಿಯು ಹೇಳಿದ್ದು: “ಲೋಕಾಂತ್ಯವಾಗುತ್ತಿತ್ತೋ ಎಂಬಂತೆ ಅದು ಧ್ವನಿಸಿತು.”
ಒಂದು ವಿಪತ್ತುಸೂಚಕ ಪ್ರಶಾಂತತೆಯು ಬಿರುಗಾಳಿಯನ್ನು ಹಿಂಬಾಲಿಸಿತು. ಹಾನಿಯನ್ನು ಪರೀಕ್ಷಿಸಲು, ಜನರು ತಮ್ಮ ಜಜ್ಜಲ್ಪಟ್ಟ ಮನೆಗಳಿಂದ ನಿಧಾನವಾಗಿ ಹೊರಬಂದರು. ಇನ್ನೂ ನಿಂತಿದ್ದ ಮರಗಳಿಂದ ಅವುಗಳ ಎಲೆಗಳು ಬಿದ್ದುಹೋಗಿದ್ದವು. ಇನ್ನೂ ನಿಂತಿದ್ದ ಮನೆಗಳು ಸೂರೆಮಾಡಲ್ಪಟ್ಟಿದ್ದವೋ ಎಂಬಂತೆ ತೋರಿದವು. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ನೆಲವನ್ನು ಒಂದು ಮೀಟರಿನಷ್ಟು ಆಳದ ಹಿಮರಾಶಿಗಳಲ್ಲಿ ಮುಚ್ಚಿಬಿಟ್ಟಿತು. ಮನೆ ಮತ್ತು ವಾಹನಗಳ ಸಾವಿರಾರು ಕಿಟಕಿಗಳು, ಬಿರುಗಾಳಿಯಲ್ಲಿ ನುಚ್ಚುನೂರು ಮಾಡಲ್ಪಟ್ಟಿದ್ದವಾದುದರಿಂದ, ಒಡೆದಿದ್ದ ಗಾಜಿನ ಚೂರುಗಳು ಈಗ ನೆಲವನ್ನು ಮುಚ್ಚಿದ್ದ ಆಲಿಕಲ್ಲಿನ ಮಗ್ಗುಲಲ್ಲಿ ಮಿಂಚುತ್ತಿದ್ದವು. ಒಬ್ಬ ಮಹಿಳೆಯು ಹೇಳುವುದು, “ನಾನು ಮನೆ ಸೇರಿದಾಗ, ಮನೆಯ ಮುಂದಿನ ರಸ್ತೆಯಲ್ಲಿ ನಾನು ನನ್ನ ಕಾರಿನಲ್ಲಿ ಕುಳಿತುಕೊಂಡು ಅತ್ತುಬಿಟ್ಟೆ. ಹಾನಿಯು ಎಷ್ಟು ಕೆಟ್ಟದ್ದಾಗಿತ್ತೆಂದರೆ, ಅದು ನನ್ನನ್ನು ತೀರ ಕ್ಷೋಭೆಗೊಳಿಸಿತು.”
ಪರಿಹಾರ ಕಾರ್ಯಕ್ರಮಗಳು ಮತ್ತು ಆಸ್ಪತ್ರೆಗಳು, ಹಣಕಾಸಿನ ನೆರವು, ಕಟ್ಟಡ ಸಾಮಗ್ರಿಗಳು, ವೈದ್ಯಕೀಯ ಚಿಕಿತ್ಸೆ, ಮತ್ತು ಸಲಹೆನೀಡುವಿಕೆಯನ್ನು ತ್ವರಿತವಾಗಿ ಒದಗಿಸಿದವು. ಶ್ಲಾಘ್ಯವಾಗಿಯೇ, ಬಿರುಗಾಳಿಯ ಬಲಿಗಳಾಗಿದ್ದ ಅನೇಕ ಜನರು ಸ್ವತಃ ಇತರರಿಗೆ ಸಹಾಯಮಾಡಲು ತಮ್ಮಿಂದ ಸಾಧ್ಯವಾದದ್ದನ್ನು ಮಾಡಿದರು.
ಯೆಹೋವನ ಸಾಕ್ಷಿಗಳ ಸಭೆಗಳು ಸಹ ಕ್ರಿಯೆಯನ್ನು ಕೈಕೊಂಡವು. ಸಾನ್ ಆ್ಯಂಜಲೊದಲ್ಲಿನ ಒಬ್ಬ ಹಿರಿಯನಾದ ಓಬ್ರಿ ಕಾನರ್ ವರದಿಸುವುದು: “ಬಿರುಗಾಳಿಯು ಅಂತ್ಯಗೊಂಡ ಕೂಡಲೇ ನಾವು ಒಬ್ಬರು ಇನ್ನೊಬ್ಬರ ಕುರಿತು ವಿಚಾರಿಸುತ್ತಾ ಫೋನ್ ಮಾಡಿದೆವು. ಕಿಟಕಿಗಳನ್ನು ಮುಚ್ಚಲು, ಚಾವಣಿಗಳ ಮೇಲೆ ಪ್ಲ್ಯಾಸ್ಟಿಕ್ ಅನ್ನು ಹಾಕಲು, ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಮನೆಗಳನ್ನು ಹವಾಮಾನಾಬೇಧ್ಯ ಮಾಡಲು ನಾವು ಪರಸ್ಪರರಿಗೆ ಮತ್ತು ನಮ್ಮ ಸಾಕ್ಷಿಗಳಲ್ಲದ ನೆರೆಹೊರೆಯವರಿಗೆ ಸಹಾಯಮಾಡಿದೆವು. ನಂತರ ಯಾರ ಮನೆ ಬಾಧಿಸಲ್ಪಟ್ಟಿತ್ತೋ, ಆ ಸಭೆಯಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ದಾಖಲೆಯನ್ನು ನಾವು ಮಾಡಿದೆವು. ಸುಮಾರು ಒಂದು ನೂರು ಮನೆಗಳಿಗೆ ದುರಸ್ತಿನ ಅಗತ್ಯವಿತ್ತು, ಮತ್ತು ಪರಿಹಾರ ಏಜೆನ್ಸಿಗಳಿಂದ ಸರಬರಾಯಿ ಮಾಡಲ್ಪಟ್ಟ ಸಾಮಗ್ರಿಗಳು ಸಾಕಾಗಲಿಲ್ಲ. ಆದುದರಿಂದ ನಾವು ಅಧಿಕ ಸಾಮಗ್ರಿಗಳನ್ನು ಕೊಂಡುಕೊಂಡು, ಕೆಲಸಕ್ಕಾಗಿ ಸಂಘಟಿಸಿದೆವು. ಪ್ರತಿ ವಾರಾಂತ್ಯ ಸುಮಾರು 250 ಸಾಕ್ಷಿಗಳಂತೆ, ಒಟ್ಟಿನಲ್ಲಿ ಸುಮಾರು 1,000 ಸಾಕ್ಷಿಗಳು ಸಹಾಯ ಮಾಡಲು ತಾವಾಗಿಯೇ ಮುಂದೆಬಂದರು. ಅವರು 740 ಕಿಲೊಮೀಟರುಗಳಷ್ಟು ದೂರದಿಂದಲೂ ಬಂದರು. ಎಲ್ಲರೂ ನಿರಾಯಾಸವಾಗಿ, ಅನೇಕ ವೇಳೆ 40 ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿ ಕೆಲಸಮಾಡಿದರು. 70 ವರ್ಷ ಪ್ರಾಯದ ಒಬ್ಬ ಸಹೋದರಿಯು ಕೂಡ, ತನ್ನ ಸ್ವಂತ ಮನೆ ದುರಸ್ತಾಗುತ್ತಿದ್ದ ಒಂದು ವಾರಾಂತ್ಯವನ್ನು ಬಿಟ್ಟು, ಪ್ರತಿ ವಾರಾಂತ್ಯ ನಮ್ಮೊಂದಿಗೆ ಕೆಲಸಮಾಡಿದಳು. ಮತ್ತು ಆ ವಾರಾಂತ್ಯದಲ್ಲಿ ದುರಸ್ತುಕಾರ್ಯದಲ್ಲಿ ಸಹಾಯಮಾಡುತ್ತಾ ಆಕೆ ತನ್ನ ಸ್ವಂತ ಚಾವಣಿಯ ಮೇಲಿದ್ದಳು!
“‘ಇದನ್ನು ಇತರ ಧರ್ಮಗಳು ತಮ್ಮ ಸದಸ್ಯರಿಗಾಗಿ ಮಾಡುವುದಾದರೆ ಒಳ್ಳೆಯದಾಗಿರುವುದಿಲ್ಲವೋ?’ ಎಂಬಂಥ ಅಭಿವ್ಯಕ್ತಿಗಳನ್ನು ನಾವು ಅನೇಕವೇಳೆ ನೋಡುಗರಿಂದ ಕೇಳಿಸಿಕೊಂಡೆವು. ಒಬ್ಬ ಜೊತೆ ಸಾಕ್ಷಿಯ ಮನೆಯಲ್ಲಿ—ಉಚಿತವಾಗಿ ದುರಸ್ತುಮಾಡಲು ಅಥವಾ ಇಡೀ ಚಾವಣಿಯನ್ನು ಪುನರ್ನಿರ್ಮಿಸಲು ಕೂಡ ತಯಾರಾಗಿ—10ರಿಂದ 12 ಮಂದಿ (ಸಹೋದರಿಯರನ್ನು ಸೇರಿಸಿ) ಸ್ವಯಂಸೇವಕರ ಒಂದು ತಂಡವು ಶುಕ್ರವಾರ ಮುಂಜಾನೆ ಆಗಮಿಸುತ್ತಿದ್ದುದನ್ನು ನೋಡಿ ನಮ್ಮ ನೆರೆಯವರು ಪ್ರಭಾವಿತರಾದರು. ಅನೇಕ ವಿದ್ಯಮಾನಗಳಲ್ಲಿ ಕೆಲಸವು ಒಂದು ವಾರಾಂತ್ಯದಲ್ಲಿ ಪೂರ್ಣಗೊಳಿಸಲ್ಪಡುತ್ತಿತ್ತು. ಕೆಲವೊಮ್ಮೆ ನಮ್ಮ ತಂಡವು ಪಕ್ಕದ ಮನೆಗೆ ಬರುವಾಗ, ಒಬ್ಬ ಹೊರಗಿನ ಕಂಟ್ರ್ಯಾಕ್ಟರ್ ಚಾವಣಿ ಕೆಲಸದಲ್ಲಿ ಪೂರಾ ಮಗ್ನನಾಗಿರುತ್ತಿದ್ದ. ಅವರು ತಮ್ಮ ಕೆಲಸವನ್ನು ಪೂರ್ಣಗೊಳಿಸುವ ಮುನ್ನವೇ ನಾವು ನಮ್ಮ ಚಾವಣಿಯನ್ನು ಕಳಚಿ, ಪುನರ್ನಿರ್ಮಿಸಿ, ಅಂಗಳವನ್ನು ಶುಚಿಗೊಳಿಸಿಯಾಗುತ್ತಿತ್ತು. ಕೆಲವೊಮ್ಮೆ ಕೇವಲ ನಮ್ಮನ್ನು ಗಮನಿಸಲಿಕ್ಕಾಗಿ ಅವರು ತಮ್ಮ ಕೆಲಸವನ್ನು ನಿಲ್ಲಿಸಿದರು!”
ಸಹೋದರ ಕಾನರ್ ಮುಕ್ತಾಯಗೊಳಿಸುವುದು: “ನಾವು ಒಟ್ಟಾಗಿ ಆನಂದಿಸಿರುವ ಅನುಭವಗಳನ್ನು ನಾವೆಲ್ಲರೂ ಕಳೆದುಕೊಳ್ಳಲಿದ್ದೇವೆ. ಹಿಂದೆಂದಿಗಿಂತಲೂ ಹೆಚ್ಚು ಭ್ರಾತೃತ್ವ ಪ್ರೀತಿಯನ್ನು ತೋರಿಸುತ್ತಾ ಇದ್ದುದರ ಮೂಲಕ ಒಂದು ವಿಭಿನ್ನ ನೋಟದಿಂದ ನಾವು ಒಬ್ಬರು ಇನ್ನೊಬ್ಬರನ್ನು ತಿಳಿದುಕೊಂಡಿದ್ದೇವೆ. ಸಹೋದರ ಸಹೋದರಿಯರು ಪರಸ್ಪರರಿಗೆ ಸಹಾಯಮಾಡುತ್ತಾ—ಏಕೆಂದರೆ ಅವರು ನಿಜವಾಗಿಯೂ ಬಯಸುತ್ತಾರೆ—ದೇವರ ಹೊಸ ಲೋಕದಲ್ಲಿ ಪರಿಸ್ಥಿತಿಯು ಹೇಗಿರುವುದೆಂಬುದರ ಕುರಿತಾಗಿ ಇದು ಕೇವಲ ಒಂದು ನಮೂನೆಯಾಗಿದೆ ಎಂದು ನಾವು ಭಾವಿಸುತ್ತೇವೆ.”—2 ಪೇತ್ರ 3:13.
ಕೋಬೀ—“ಮರ, ಪ್ಲ್ಯಾಸ್ಟರ್ ಮತ್ತು ಮಾನವ ದೇಹಗಳ ಒಂದು ಭಗ್ನಾವಶೇಷ”
ಕೋಬೀಯ ನಿವಾಸಿಗಳು ಸಿದ್ಧವಾಗಿರುವರೆಂದು ಭಾವಿಸಲಾಗಿತ್ತು. ವಾಸ್ತವವಾಗಿ, ಪ್ರತಿ ಸೆಪ್ಟೆಂಬರ್ 1ರಂದು ಅವರು ವಿಪತ್ತು ತಡೆಗಟ್ಟುವಿಕೆ ದಿನವನ್ನು ಆಚರಿಸುತ್ತಾರೆ. ಶಾಲಾಮಕ್ಕಳು ಭೂಕಂಪ ವ್ಯಾಯಾಮಗಳನ್ನು ಅಭ್ಯಾಸಿಸುತ್ತಾರೆ, ಮಿಲಿಟರಿಯು, ಹೆಲಿಕಾಪ್ಟರ್ ರಕ್ಷಣಾ ನಿಯೋಗಿ ಮಂಡಳಿಗಳನ್ನು ಪೂರ್ವ ಪ್ರಯೋಗಿಸುತ್ತದೆ, ಮತ್ತು ಅಗ್ನಿಶಾಮಕ ವಿಭಾಗಗಳು ತಮ್ಮ ಭೂಕಂಪ-ಕೃತಕ ಯಂತ್ರಗಳನ್ನು ಹೊರತರುತ್ತವೆ; ಅದರಲ್ಲಿ ಸ್ವಯಂಸೇವಕರು, ನಿಜವಾದ ಭೂಕಂಪದಂತೆಯೇ ಅಲುಗಾಡಿ, ಕಂಪಿಸುವ ಒಂದು ಕೊಠಡಿಯ ಗಾತ್ರದ ಬಾಕ್ಸ್ನೊಳಗೆ ತಮ್ಮ ಬದುಕಿ ಉಳಿಯುವ ಕೌಶಲಗಳನ್ನು ಅಭ್ಯಾಸಿಸುತ್ತಾರೆ. ಆದರೆ 1995, ಜನವರಿ 17ರಂದು ನಿಜವಾದ ಸಂಗತಿಯು ಸಂಭವಿಸಿದಾಗ, ಎಲ್ಲ ತಯಾರಿಯು ನಿಷ್ಪ್ರಯೋಜಕವಾಗಿ ತೋರಿತು. ಹತ್ತಾರು ಸಾವಿರಾರು ಚಾವಣಿಗಳು ಒಳಗೆ ಬಿದ್ದವು—ಕೃತಕ ಯಂತ್ರಗಳಲ್ಲಿ ಎಂದೂ ಸಂಭವಿಸದಂಥ ಯಾವುದೋ ಸಂಗತಿ. ರೈಲುಗಾಡಿಗಳು ತಮ್ಮ ಪಕ್ಕಗಳಿಗೆ ಮಗುಚಿ ಬಿದ್ದವು; ಹೆದ್ದಾರಿಯ ಭಾಗಗಳು ವಿಘಟಿಸಲ್ಪಟ್ಟವು; ಅನಿಲ ಮತ್ತು ನೀರಿನ ಕೊಳಾಯಿಗಳು ಛಿದ್ರವಾಗಿಹೋದವು; ಮನೆಗಳು ರಟ್ಟಿನಂತೆ ಕುಸಿದುಬಿದ್ದವು. ಟೈಮ್ ಪತ್ರಿಕೆಯು ಆ ದೃಶ್ಯವನ್ನು “ಮರ, ಪ್ಲ್ಯಾಸ್ಟರ್ ಮತ್ತು ಮಾನವ ದೇಹಗಳ ಒಂದು ಭಗ್ನಾವಶೇಷ” ಎಂಬುದಾಗಿ ವರ್ಣಿಸಿತು.
ಅನಂತರ ಬೆಂಕಿ ಹೊತ್ತಿಕೊಂಡಿತು. ಆಶಾಭಂಗಗೊಂಡ ಅಗ್ನಿದಳದವರು ಟ್ರ್ಯಾಫಿಕ್ನ ಹಿಂದೆ ಕಿಲೊಮೀಟರುಗಳಷ್ಟು ದೂರ ಸಿಕ್ಕಿಕೊಂಡಿರುವಾಗ ಕಟ್ಟಡಗಳು ಹೊತ್ತಿಉರಿದವು. ಉರಿಯುತ್ತಿರುವ ಸ್ಥಳವನ್ನು ತಲಪಿದವರು ಅನೇಕ ವೇಳೆ ನಗರದ ಒಡೆದುಹೋದ ನೀರು ವ್ಯವಸ್ಥೆಯಿಂದ ನೀರನ್ನು ಪಡೆದುಕೊಳ್ಳಲು ಸಾಧ್ಯವಿರದಿದ್ದುದನ್ನು ಕಂಡುಕೊಂಡರು. “ಪ್ರಥಮ ದಿನವು ಅತಿ ಭೀತಿಕಾರಕವಾಗಿತ್ತು,” ಎಂದು ಒಬ್ಬ ಅಧಿಕಾರಿಯು ಹೇಳಿದನು. “ಆ ಉರಿಯುತ್ತಿರುವ ಮನೆಗಳಲ್ಲಿ ಎಷ್ಟೋ ಜನರು ಹೂಳಲ್ಪಟ್ಟಿದ್ದರೆಂಬುದನ್ನು ತಿಳಿದವನಾಗಿದ್ದು, ಮತ್ತು ಅದರ ಕುರಿತು ನನಗೆ ಏನೂ ಮಾಡಸಾಧ್ಯವಿಲ್ಲವೆಂಬ ಅರಿವು, ನನ್ನ ಜೀವನದಲ್ಲಿ ಹಿಂದೆಂದೂ ನನ್ನನ್ನು ಅಷ್ಟು ಅಸಮರ್ಥನನ್ನಾಗಿ ಮಾಡಿದ್ದದ್ದಿಲ್ಲ.”
ಒಟ್ಟಿನಲ್ಲಿ, ಕೆಲವು 5,000 ಜನರು ಕೊಲ್ಲಲ್ಪಟ್ಟರು, ಮತ್ತು ಅಂದಾಜಾಗಿ 50,000 ಕಟ್ಟಡಗಳು ಸರ್ವನಾಶವಾಗಿದ್ದವು. ಕೋಬೀ ಅದಕ್ಕೆ ಆವಶ್ಯಕವಾಗಿದ್ದ ಮೂರನೇ ಒಂದಂಶದಷ್ಟು ಆಹಾರವನ್ನು ಮಾತ್ರ ಪಡೆದಿತ್ತು. ನೀರನ್ನು ಪಡೆದುಕೊಳ್ಳುವುದಕ್ಕಾಗಿ ಕೆಲವರು ಒಡೆದುಹೋಗಿದ್ದ ನೀರಿನ ಕೊಳಾಯಿಗಳ ಆಳದಿಂದ ಹೊಲಸಾದ ದ್ರವವನ್ನು ತೋಡುವುದಕ್ಕೆ ಮರೆಹೊಕ್ಕರು. ನಿರ್ಗತಿಕರಲ್ಲಿ ಅನೇಕ ಜನರು ಆಶ್ರಯಗಳಿಗೆ ಓಡಿಹೋದರು, ಅವುಗಳಲ್ಲಿ ಕೆಲವು ದಿನವೊಂದಕ್ಕೆ ಅನ್ನದ ಒಂದು ಉಂಡೆಯಷ್ಟು ಅಲ್ಪ ಪ್ರಮಾಣದ ಆಹಾರವನ್ನು ಪ್ರತಿಯೊಬ್ಬ ವ್ಯಕ್ತಿಗೆ ಹಂಚಿಕೊಡುತ್ತಾ, ಆಹಾರವನ್ನು ಪಡಿವ್ಯವಸ್ಥೆಮಾಡಿಕೊಟ್ಟವು. ಅತೃಪ್ತಿ ಬೇಗನೆ ಹಬ್ಬಿತು. “ಅಧಿಕಾರಿಗಳು ಏನೊಂದೂ ಮಾಡಿಲ್ಲ,” ಎಂದು ಒಬ್ಬ ಮನುಷ್ಯನು ದೂರಿದನು. “ನಾವು ಅವರ ಮೇಲೆ ಆತುಕೊಳ್ಳುವುದನ್ನು ಮುಂದುವರಿಸುವುದಾದರೆ ನಾವು ಹೊಟ್ಟೆಗಿಲ್ಲದೆ ಸಾಯುವೆವು.”
ಕೋಬೀಯಲ್ಲಿನ ಮತ್ತು ಹತ್ತಿರದ ಸ್ಥಳಗಳಲ್ಲಿನ ಯೆಹೋವನ ಸಾಕ್ಷಿಗಳ ಸಭೆಗಳು ತತ್ಕ್ಷಣವೇ ತಮ್ಮನ್ನು ಸಂಘಟಿಸಿಕೊಂಡವು. ಅವರ ಕೆಲಸವನ್ನು ಪ್ರತ್ಯಕ್ಷವಾಗಿ ನೋಡಿದ ಒಬ್ಬ ಹೆಲಿಕಾಪ್ಟರ್ ಚಾಲಕನು ಹೇಳುವುದು: “ಭೂಕಂಪದ ದಿನದಂದು ನಾನು ವಿಪತ್ತಿನ ಸ್ಥಳಕ್ಕೆ ಹೋದೆ ಮತ್ತು ಅಲ್ಲಿ ಒಂದು ವಾರವನ್ನು ಕಳೆದೆ. ಆಶ್ರಯವೊಂದಕ್ಕೆ ನಾನು ಆಗಮಿಸಿದಾಗ, ಪ್ರತಿಯೊಂದೂ ಪೂರಾ ಅಸ್ತವ್ಯಸ್ತವಾಗಿತ್ತು. ಎಂಥದೇ ಪರಿಹಾರ ಕಾರ್ಯವು ನಡೆಸಲ್ಪಟ್ಟಿರಲಿಲ್ಲ. ಆವಶ್ಯಕ ಕೆಲಸವನ್ನು ಮಾಡುತ್ತಾ, ಆ ಸ್ಥಳಕ್ಕೆ ಮುನ್ನುಗ್ಗಿದ್ದವರು ಯೆಹೋವನ ಸಾಕ್ಷಿಗಳು ಮಾತ್ರವೇ.”
ನಿಜವಾಗಿಯೂ, ಅಲ್ಲಿ ಮಾಡಲು ಬಹಳಷ್ಟು ಕೆಲಸವಿತ್ತು. ಹತ್ತು ರಾಜ್ಯ ಸಭಾಗೃಹಗಳು ಉಪಯೋಗಕ್ಕೆ ಅಯೋಗ್ಯವಾಗಿದ್ದವು ಮತ್ತು 430ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು ನಿರ್ಗತಿಕರಾಗಿದ್ದರು. ಇದಕ್ಕೆ ಕೂಡಿಸಿ ಸಾಕ್ಷಿಗಳು ಜೀವಿಸಿದ ಇನ್ನೂ 1,206 ಮನೆಗಳಿಗೆ ದುರಸ್ತಿನ ಅಗತ್ಯವಿತ್ತು. ಅದು ಮಾತ್ರವಲ್ಲದೆ, ವಿಪತ್ತಿನಲ್ಲಿ ಸತ್ತುಹೋಗಿದ್ದ 15 ಸಾಕ್ಷಿಗಳ ಕುಟುಂಬಗಳಿಗೆ ಜರೂರಿಯಾದ ಸಾಂತ್ವನದ ಅಗತ್ಯವಿತ್ತು.
ದೇಶದ ಸುತ್ತಲಿಂದ ಸುಮಾರು 1,000 ಸಾಕ್ಷಿಗಳು ದುರಸ್ತಿನ ಕೆಲಸದಲ್ಲಿ ಸಹಾಯಮಾಡುವುದಕ್ಕಾಗಿ ತಮ್ಮ ಸಮಯವನ್ನು ಕೊಡಲು ಸ್ವಇಚ್ಛೆಯಿಂದ ಮುಂದೆಬಂದರು. “ಇನ್ನೂ ದೀಕ್ಷಾಸ್ನಾನ ಪಡೆದುಕೊಂಡಿರದ ಬೈಬಲ್ ವಿದ್ಯಾರ್ಥಿಗಳ ಮನೆಗಳಲ್ಲಿ ನಾವು ಕೆಲಸಮಾಡಿದಾಗ, ‘ಈ ಎಲ್ಲ ಕೆಲಸಕ್ಕಾಗಿ ನಾವು ನಿಮಗೆ ಎಷ್ಟು ಹಣವನ್ನು ಕೊಡಬೇಕು?’ ಎಂದು ನಮಗೆ ಯಾವಾಗಲೂ ಕೇಳಲಾಯಿತು” ಎಂದು ಒಬ್ಬ ಸಹೋದರನು ಗಮನಿಸುತ್ತಾನೆ. ಕೆಲಸವು ಸಭೆಗಳಿಂದ ಬೆಂಬಲಿಸಲ್ಪಟ್ಟಿತೆಂಬುದನ್ನು ನಾವು ಅವರಿಗೆ ಹೇಳಿದಾಗ, ಅವರು ನಮಗೆ ಹೀಗೆ ಹೇಳುತ್ತಾ ಉಪಕಾರಹೇಳಿದರು, ‘ನಾವು ಏನನ್ನು ಓದಿದ್ದೇವೋ ಅದು ಈಗ ಒಂದು ವಾಸ್ತವಿಕ ವಿಷಯವಾಗಿದೆ!”
ವಿಪತ್ತಿಗೆ ಯೆಹೋವನ ಸಾಕ್ಷಿಗಳು ತೋರಿಸಿದ ಶೀಘ್ರ ಮತ್ತು ಆದ್ಯಂತ ಪ್ರತಿಕ್ರಿಯೆಯಿಂದ ಅನೇಕರು ಪ್ರಭಾವಿಸಲ್ಪಟ್ಟರು. “ನಾನು ಬಹಳ ಗಾಢವಾಗಿ ಪ್ರಭಾವಿಸಲ್ಪಟ್ಟೆ” ಎಂದು ಈ ಮುಂಚೆ ಉದ್ಧರಿಸಲ್ಪಟ್ಟ ವಿಮಾನ ಚಾಲಕನು ಹೇಳುತ್ತಾನೆ. “ನೀವು ಒಬ್ಬರು ಇನ್ನೊಬ್ಬರನ್ನು ‘ಸಹೋದರ’ ಮತ್ತು ‘ಸಹೋದರಿ’ ಎಂದು ಕರೆಯುತ್ತೀರಿ. ನೀವು ಪರಸ್ಪರ ಸಹಾಯಮಾಡುವ ವಿಧವನ್ನು ನಾನು ನೋಡಿದ್ದೇನೆ; ನೀವು ನಿಜವಾಗಿಯೂ ಒಂದು ಕುಟುಂಬವಾಗಿದ್ದೀರಿ.”
ಸ್ವತಃ ಸಾಕ್ಷಿಗಳೇ ಭೂಕಂಪದಿಂದ ಅಮೂಲ್ಯವಾದ ಪಾಠಗಳನ್ನು ಕಲಿತರು. ಒಬ್ಬ ಸಹೋದರಿಯು ಒಪ್ಪಿಕೊಂಡದ್ದು: “ಸಂಸ್ಥೆಯೊಂದು ಹೆಚ್ಚು ದೊಡ್ಡದಾದಂತೆ, ವೈಯಕ್ತಿಕ ಆಸ್ಥೆ ತೋರಿಸುವುದಕ್ಕೆ ಹೆಚ್ಚು ಕಷ್ಟವಾಗುತ್ತದೆಂದು ನಾನು ಯಾವಾಗಲೂ ಭಾವಿಸಿದ್ದೇನೆ.” ಆದರೆ ಆಕೆಯು ಪಡೆದ ಕೋಮಲ ಆರೈಕೆಯು ಆಕೆಯ ದೃಷ್ಟಿಕೋನವನ್ನು ಬದಲಾಯಿಸಿತು. “ಯೆಹೋವನು ನಮಗಾಗಿ ಒಂದು ಸಂಸ್ಥೆಯೋಪಾದಿ ಮಾತ್ರವಲ್ಲ, ವೈಯಕ್ತಿಕವಾಗಿಯೂ ಕಾಳಜಿವಹಿಸುತ್ತಿದ್ದಾನೆ ಎಂಬುದು ನನಗೆ ಈಗ ಗೊತ್ತಿದೆ.” ಆದರೂ, ವಿಪತ್ತುಗಳಿಂದ ಶಾಶ್ವತ ಪರಿಹಾರವು ಮುಂದಿದೆ.
ಬೇಗನೆ ಶಾಶ್ವತ ಪರಿಹಾರ!
ಮಾನವ ಜೀವಿತ ಮತ್ತು ಜೀವನೋಪಾಯವು ಇನ್ನು ಮುಂದೆ ವಿಪತ್ತುಗಳಿಂದ ಅಂತ್ಯಗೊಳಿಸಲ್ಪಡದಿರುವ ಸಮಯಕ್ಕಾಗಿ ಯೆಹೋವನ ಸಾಕ್ಷಿಗಳು ಎದುರುನೋಡುತ್ತಾರೆ. ದೇವರ ಹೊಸ ಲೋಕದಲ್ಲಿ, ಮಾನವನು ಭೂಮಿಯ ಪರಿಸರದೊಂದಿಗೆ ಸಹಕರಿಸಲು ಕಲಿಸಲ್ಪಡುವನು. ಮಾನವರು ಸ್ವಾರ್ಥಪರ ಅಭ್ಯಾಸಗಳನ್ನು ಬಿಟ್ಟುಬಿಟ್ಟಂತೆ, ಅವರು ಸ್ವಾಭಾವಿಕ ಅಪಾಯಗಳಿಗೆ ಕಡಿಮೆ ಬೇಧ್ಯರಾಗಿರುವರು.
ಇನ್ನೂ ಹೆಚ್ಚಾಗಿ, ಸ್ವಾಭಾವಿಕ ಶಕ್ತಿಗಳ ಸೃಷ್ಟಿಕರ್ತನಾದ ಯೆಹೋವ ದೇವರು, ತನ್ನ ಮಾನವ ಕುಟುಂಬ ಮತ್ತು ಭೌಮಿಕ ಸೃಷ್ಟಿಯು ಪುನಃ ಇನ್ನೆಂದೂ ನೈಸರ್ಗಿಕ ಶಕ್ತಿಗಳಿಂದ ಬೆದರಿಸಲ್ಪಡದಂತೆ ನೋಡಿಕೊಳ್ಳುವನು. ಆಗ ಭೂಮಿಯು ನಿಜವಾಗಿಯೂ ಒಂದು ಪ್ರಮೋದವನವಾಗಿರುವುದು. (ಯೆಶಾಯ 65:17, 21, 23; ಲೂಕ 23:43) ಪ್ರಕಟನೆ 21:4ರ ಪ್ರವಾದನೆಯು ವೈಭವಯುಕ್ತವಾಗಿ ನೆರವೇರಿಸಲ್ಪಡುವುದು: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”
[ಪುಟ 5 ರಲ್ಲಿರುವ ಚಿತ್ರ]
ಬಿಯಾಟ್ರಿಸ್ ಜೋನ್ಸ್ (ಎಡಗಡೆ) ನೆರೆನೀರನ್ನು ಹಾದುಹೋಗಲಿಕ್ಕಾಗಿ, ತಾನು ಮತ್ತು ಇತರರು ಹೇಗೆ ಒಂದು ಸರಪಣಿಯನ್ನು ರೂಪಿಸಿದೆವೆಂದು ತೋರಿಸುತ್ತಾಳೆ
[ಪುಟ 6 ರಲ್ಲಿರುವ ಚಿತ್ರ]
ಬಿರುಗಾಳಿ ಮಳೆಯ ಅನಂತರ ಪರಿಹಾರ ಕಾರ್ಯ