ಯುವ ಜನರು ಪ್ರಶ್ನಿಸುವುದು . . .
ಏಯ್ಡ್ಸ್ ತಗಲುವುದನ್ನು ನಾನು ಹೇಗೆ ತಪ್ಪಿಸಬಲ್ಲೆ?
“ಇದು ಸಂಭವಿಸುವಂತೆ ನಾನು ಅವಕಾಶಕೊಟ್ಟದ್ದು ನನ್ನನ್ನು ಕೋಪಗೊಳ್ಳುವಂತೆ ಮಾಡುತ್ತದೆ,” ಎಂದು ಕೇ ಹೇಳುತ್ತಾಳೆ. “ಭವಿಷ್ಯತ್ತಿನಲ್ಲಿ ನನಗಿರಬಹುದಾಗಿದ್ದ ಆಯ್ಕೆಗಳನ್ನು ನಾನು ಮಾಡಿರುವ ಆಯ್ಕೆಗಳು ಕದ್ದುಕೊಂಡಿವೆ.” (ನ್ಯೂಸ್ವೀಕ್ ಪತ್ರಿಕೆ, ಆಗಸ್ಟ್ 3, 1992) 18ರ ಪ್ರಾಯದಲ್ಲಿ ಕೇ ಏಯ್ಡ್ಸ್ ಸೋಂಕು ರೋಗಾಣು ತಟ್ಟಿದವಳಾದಳು.
ಅಮೆರಿಕದಲ್ಲಿ, ಏಚ್ಐವಿ (ಹ್ಯೂಮನ್ ಇಮ್ಯೂನೊಡಿಫಿಷನ್ಸಿ ವೈರಸ್)ನಿಂದ—ಭೀತಿಕಾರಕ ರೋಗವಾದ ಏಯ್ಡ್ಸ್ಗೆ ಕಾರಣವಾದ ರೋಗಾಣುವೆಂದು ವೈದ್ಯರು ಹೇಳುತ್ತಾರೆa—ತಟ್ಟಿದವರಾದ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನರಲ್ಲಿ ಕೇ ಕೇವಲ ಒಬ್ಬಳಾಗಿದ್ದಾಳೆ. ಎಷ್ಟು ಮಂದಿ ಯುವಜನರು ಸೋಂಕಿತರಾಗಿದ್ದಾರೆಂದು ಯಾರೂ ವಾಸ್ತವವಾಗಿ ತಿಳಿದಿಲ್ಲವಾದರೂ, ನಿಸ್ಸಂಶಯವಾಗಿ ಯುವಜನರು ಚಿಂತಿತರಾಗಿದ್ದಾರೆ. ಬ್ರಿಟಿಷ್ ಯುವಜನರಲ್ಲಿ, ಏಯ್ಡ್ಸ್ ಅವರ ಅತ್ಯಂತ ದೊಡ್ಡ ಚಿಂತೆಯಾಗಿದೆ ಎಂದು ಒಂದು ಸಮೀಕ್ಷೆಯು ತೋರಿಸಿತು. ಅಂತಹ ಚಿಂತೆಯ ಹೊರತಾಗಿಯೂ, ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು ಹೇಳುವುದು: “ಅನೇಕ ಯುವಜನರು ಒಬ್ಬನು ಏಚ್ಐವಿಯನ್ನು ಅಂಟಿಸಿಕೊಳ್ಳಸಾಧ್ಯವಿರುವ ಕಾರ್ಯಚಟುವಟಿಕೆಯಲ್ಲಿ ಒಳಗೂಡುವುದನ್ನು ವರದಿಸುವುದನ್ನು ಮುಂದುವರಿಸುತ್ತಾರೆ.”
ಏಯ್ಡ್ಸ್ ಸದಾ ವಿನಾಶಕರವಾದದ್ದಾಗಿದೆ, ಮತ್ತು ಇದು ಲೋಕವ್ಯಾಪಕವಾಗಿ ವಿಶೇಷ ಪ್ರಮಾಣಗಳಲ್ಲಿ ಹರಡುತ್ತಾ ಇದೆ. ನೀವು ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಲ್ಲಿರಿ?
ಏಯ್ಡ್ಸ್—ಸತ್ಯಾಂಶದಿಂದ ಮಿಥ್ಯೆಯನ್ನು ವಿಂಗಡಿಸುತ್ತದೆ
ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳ ಮೂಲಕ ಸಿದ್ಧಗೊಳಿಸಲ್ಪಟ್ಟ ಒಂದು ಪುಸ್ತಿಕೆಯು ವಿವರಿಸುವುದು: “ಏಚ್ಐವಿ ಸೋಂಕು ‘ಕೇವಲ ಸಂಭವಿಸು’ವುದಿಲ್ಲ. ನೆಗಡಿ ಅಥವಾ ಫ್ಲೂನಂತೆ ಅದು ನಿಮಗೆ ‘ಅಂಟು’ವುದಿಲ್ಲ.” ಆದುದರಿಂದ, ಏಯ್ಡ್ಸ್ ರೋಗಕ್ಕೆ ಆಹುತಿಯಾದವರೊಂದಿಗೆ ಸಾಂದರ್ಭಿಕವಾದ, ಸರ್ವಸಾಮಾನ್ಯವಾದ ಸಂಪರ್ಕವು ಅಪಾಯಕರವಾಗಿ ಕಂಡುಬರುವುದಿಲ್ಲ. ಅವನ ಅಥವಾ ಅವಳ ಹತ್ತಿರ ನೀವು ಕುಳಿತುಕೊಳ್ಳುತ್ತೀರೆಂಬ ಕಾರಣದಿಂದ ಸೋಂಕಿತನಾದ ಸಹಪಾಠಿಯೊಬ್ಬನಿಂದ ಏಯ್ಡ್ಸ್ ರೋಗವನ್ನು ಪಡೆಯುವುದರ ಕುರಿತು ನೀವು ಚಿಂತಿಸಬೇಕಾಗಿಲ್ಲ. ಏಚ್ಐವಿ ರೋಗಾಣುವು ವಾಯುವಾಹಿಯಾಗಿಲ್ಲದಿರುವುದರಿಂದ, ಏಯ್ಡ್ಸ್ ರೋಗಕ್ಕೆ ಆಹುತಿಯಾದವನು ಕೆಮ್ಮುವುದಾದರೆ ಅಥವಾ ಸೀನುವುದಾದರೆ ನೀವು ಚಿಂತಿತರಾಗಬೇಕಾಗಿಲ್ಲ. ವಾಸ್ತವದಲ್ಲಿ, ಏಯ್ಡ್ಸ್ ರೋಗದಿಂದ ಕಷ್ಟಾನುಭವಿಸುತ್ತಿರುವವರ ಕುಟುಂಬಗಳು ಟವಲುಗಳಲ್ಲಿ, ಊಟದ ಪಾತ್ರೆಗಳಲ್ಲಿ, ಮತ್ತು ಹಲ್ಲುಜ್ಜುವ ಬ್ರಷ್ಗಳಲ್ಲಿ ಪಾಲಿಗರಾಗಿದ್ದರೂ, ರೋಗಾಣುವು ಹರಡಿಲ್ಲ.b
ಇದು ಯಾಕಂದರೆ ಈ ಘಾತುಕ ರೋಗಾಣುವು ವ್ಯಕ್ತಿಯೊಬ್ಬನ ರಕ್ತ, ವೀರ್ಯ, ಅಥವಾ ಯೋನಿಯ ಸ್ರಾವಗಳಲ್ಲಿ ವಾಸವಾಗಿರುತ್ತದೆ. ಆದುದರಿಂದ, ಅಧಿಕಾಂಶ ರೋಗಿಗಳಲ್ಲಿ, ಏಯ್ಡ್ಸ್ ರೋಗವು ಲೈಂಗಿಕ ಸಂಭೋಗ—ಸಲಿಂಗಕಾಮ ಅಥವಾ ವಿರುದ್ಧಲಿಂಗಕಾಮc—ದಿಂದ ರವಾನಿಸಲ್ಪಡುತ್ತದೆ. ಕೆಲವೊಮ್ಮೆ ಅಮಲೌಷಧದ ದುರುಪಯೋಗದಲ್ಲಿ, ಏಚ್ಐವಿಯಿಂದ ಸೋಂಕಿತರಾದವರೊಂದಿಗೆ ಸೂಜಿಗಳನ್ನು ಅಥವಾ ಸಿರಿಂಜುಗಳನ್ನು ಹಂಚಿಕೊಳ್ಳುವ ಮೂಲಕ, ಅನೇಕರು ಈ ವ್ಯಾಧಿಗೆ ಆಹುತಿಯಾಗಿದ್ದಾರೆ.d ಮತ್ತು ಬಲವಾದ ತಪಾಸಣೆಯ ಮೂಲಕ ಅಪಾಯವು “ಪ್ರಾಯೋಗಿಕವಾಗಿ ನಿರ್ಮೂಲ ಮಾಡಲ್ಪಟ್ಟಿದೆ” ಎಂದು ವೈದ್ಯರು ವಾದಿಸುವಾಗ, ಏಯ್ಡ್ಸ್ ರೋಗವು ರಕ್ತಪೂರಣದ ಮೂಲಕವಾಗಿ ಸಹ ರವಾನಿಸಲ್ಪಡಸಾಧ್ಯವಿದೆ.
ವಿವಾಹಕ್ಕೆ ಮುಂಚಿನ ಲೈಂಗಿಕ ಸಂಭೋಗ ಅಥವಾ ಕಾನೂನು ವಿರುದ್ಧವಾದ ಅಮಲೌಷಧಗಳೊಂದಿಗೆ ಪ್ರಯೋಗಗಳನ್ನು ನಡೆಸುವುದರಲ್ಲಿ ಪ್ರವೃತ್ತನಾಗುವ ಯಾವನಾದರೂ ಏಯ್ಡ್ಸ್ ರೋಗವನ್ನು ಸೋಂಕಿಸಿಕೊಳ್ಳುವ ಅಧಿಕ ಗಂಡಾಂತರದಲ್ಲಿದ್ದಾನೆ. ಒಬ್ಬ ಭಾವೀ ಲೈಂಗಿಕ ಸಹಭಾಗಿಯು ಅಸ್ವಸ್ಥನಾಗಿ ಕಂಡುಬರದೇ ಇರಬಹುದೆಂಬುದು ನಿಜ. ಆದರೆ ಏಚ್ಐವಿ ಸ್ವಯಂ ಸಲಹೆ ಮತ್ತು ಶೋಧನೆಗಳು: ಸತ್ಯಾಂಶಗಳು, ವಿವಾದಾಂಶಗಳು, ಮತ್ತು ಉತ್ತರಗಳು (ವಾಲಂಟರಿ ಏಚ್ಐವಿ ಕೌನ್ಸಲಿಂಗ್ ಆ್ಯಂಡ್ ಟೆಸ್ಟಿಂಗ್: ಫ್ಯಾಕ್ಟ್ಸ್, ಇಷ್ಯೂಸ್, ಆ್ಯಂಡ್ ಆನ್ಸರ್ಸ್.) ಎಂಬ ಪುಸ್ತಿಕೆ ಜ್ಞಾಪಕಕೊಡುವುದು: “ವ್ಯಕ್ತಿಯೊಬ್ಬನನ್ನು ಅವಲೋಕಿಸುವ ಮೂಲಕ ಅವನು ಅಥವಾ ಅವಳು ಏಚ್ಐವಿ ರೋಗಾಣುವಿನಿಂದ ಸೋಂಕಿತರಾಗಿದ್ದಾರೆಂದು ನೀವು ಹೇಳಲು ಸಾಧ್ಯವಿಲ್ಲ. ಯಾವನಾದರು ಪರಿಪೂರ್ಣ ಆರೋಗ್ಯವುಳ್ಳವರಂತೆ ಕಾಣಸಾಧ್ಯವಿದೆ ಮತ್ತು ಅವರಿಗೂ ಹಾಗೆ ಅನಿಸಸಾಧ್ಯವಿದೆ, ಆದರೂ ಅವರು ಸೋಂಕಿತರಾಗಿರಬಹುದು. ಈ ಕಾರಣದಿಂದಾಗಿ, ಏಚ್ಐವಿ ರೋಗಾಣುವಿನಿಂದ ಸೋಂಕಿತರಾದ ಅಧಿಕಾಂಶ ಜನರಿಗೆ ಅದು ತಿಳಿದಿಲ್ಲ.”
“ಸುರಕ್ಷಿತ ಸಂಭೋಗ”?
ಆದುದರಿಂದಲೇ ಅನೇಕ ಆರೋಗ್ಯ ಕೆಲಸಗಾರರು ಮತ್ತು ಶಿಕ್ಷಕರು ಶಿಶ್ನ ಕವಚಗಳ ಉಪಯೋಗವನ್ನು ಉತ್ತೇಜಿಸುತ್ತಿದ್ದಾರೆ.e ಗರ್ಭನಿರೋಧಕ ಸಾಧನದ ಉಪಯೋಗವು ಸಂಭೋಗವನ್ನು “ಸುರಕ್ಷಿತ”ವನ್ನಾಗಿ ಮಾಡುತ್ತದೆ—ಅಥವಾ ಕನಿಷ್ಠ ಪಕ್ಷ “ಹೆಚ್ಚು ಸುರಕ್ಷಿತ”—ಎಂಬ ಸಂದೇಶವನ್ನು ಟಿವಿ ಜಾಹೀರಾತುಗಳು, ಜಾಹೀರಾತು ಫಲಕಗಳು, ಮತ್ತು ಶಾಲಾ ಉಪನ್ಯಾಸಕರುಗಳು ಹಬ್ಬಿಸಿದ್ದಾರೆ. ಇದಲ್ಲದೆ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಶಿಶ್ನ ಕವಚಗಳನ್ನೂ ವಿತರಿಸಿವೆ. ಅಂತಹ ಯೋಜನೆಯಿಂದ ಪ್ರಚೋದಿಸಲ್ಪಟ್ಟು, ಯುವಜನರು ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಗಳಲ್ಲಿ ಅವುಗಳನ್ನು ಉಪಯೋಗಿಸುತ್ತಿದ್ದಾರೆ.
ಹಾಗಿದ್ದರೂ, “ಸುರಕ್ಷಿತ ಸಂಭೋಗ”ವು ಎಷ್ಟು ಸುರಕ್ಷಿತವಾದದ್ದಾಗಿದೆ? “ಸೋಂಕನ್ನು ಹೊಂದದಿರುವಂತೆ ಮಾಡುವ ಕುರಿತಾದ ನಿಮ್ಮ ಸಂಭವನೀಯತೆಗಳನ್ನು ಶಿಶ್ನ ಕವಚಗಳು ಉತ್ತಮಗೊಳಿಸಬಲ್ಲವು,” ಎಂದು ಅಮೆರಿಕದ ರೆಡ್ ಕ್ರಾಸ್ ಸಂಸ್ಥೆಯ ಒಂದು ಬ್ರೋಷರ್ ಹೇಳುತ್ತದೆ. ಆದರೆ ಯಾವಾಗಲೂ ಹಾನಿಕರವಾಗಿ ಪರಿಣಮಿಸುವ ಒಂದು ರೋಗವನ್ನು ತಪ್ಪಿಸಿಕೊಳ್ಳುವುದರ ಕುರಿತಾಗಿರುವ ‘ನಿಮ್ಮ ಸಂಭವನೀಯತೆಗಳು ಉತ್ತಮಗೊಂಡ’ ಮಾತ್ರಕ್ಕೆ ನೀವು ಸುರಕ್ಷಿತರೆಂದು ಭಾವಿಸುತ್ತಿರೋ? “ಲೇಟೆಕ್ಸ್ ಶಿಶ್ನ ಕವಚಗಳು ಏಚ್ಐವಿ ಸೋಂಕುಗಳನ್ನು ಮತ್ತು ಇತರ ರತಿ ರವಾನಿತ ರೋಗಗಳನ್ನು ತಡೆಗಟ್ಟುವಂತೆ ಸಹಾಯಮಾಡುತ್ತವೆಂದು ತೋರ್ಪಡಿಸಲ್ಪಟ್ಟಿವೆ . . . ಆದರೆ ಅವು ತಪ್ಪುಮಾಡಲು ಸಾಧ್ಯವಿಲ್ಲದವುಗಳಾಗಿಲ್ಲ,” ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು ಒಪ್ಪಿಕೊಳ್ಳುತ್ತವೆ. ವಾಸ್ತವವಾಗಿ, ಸಂಭೋಗದ ಸಮಯದಲ್ಲಿ ಅವು ಒಡೆಯುವ, ಹರಿಯುವ, ಅಥವಾ ಕಳಚಿಹೋಗುವ ಸಾಧ್ಯತೆಗಳಿವೆ. ಟೈಮ್ ಪತ್ರಿಕೆಗನುಸಾರ, ಶಿಶ್ನ ಕವಚಗಳು “10% ಮತ್ತು 15%ರ ನಡುವೆ ಸೋಲಿನ ಪ್ರಮಾಣವನ್ನು ಹೊಂದಿರ ಸಾಧ್ಯವಿದೆ”! ನಿಮ್ಮ ಜೀವಿತವನ್ನು ಅಂತಹ ಒಂದು ಅಧಿಕ ಪ್ರಮಾಣದ ಅಪಜಯಕ್ಕೆ ಈಡುಮಾಡುವಿರೊ? ಮತ್ತು ವಿಚಾರಗಳನ್ನು ಇನ್ನೂ ಕೆಟ್ಟದ್ದಾಗಿ ಮಾಡಲು, ಅಮೆರಿಕದಲ್ಲಿ ಲೈಂಗಿಕವಾಗಿ ಕ್ರಿಯಾಶೀಲರಾಗಿರುವ ಯುವಜನರಲ್ಲಿ ಅರ್ಧಕ್ಕಿಂತ ಕಡಿಮೆ ಯುವಜನರು ಶಿಶ್ನ ಕವಚಗಳನ್ನು ಉಪಯೋಗಿಸುತ್ತಿದ್ದಾರೆ.
ಹೀಗೆ ಜ್ಞಾನೋಕ್ತಿಗಳು 22:3ರ ಬುದ್ಧಿವಾದವು ಸಮಯೋಚಿತವಾದದ್ದಾಗಿದೆ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” ಅಮಲೌಷಧದ ದುರುಪಯೋಗ ಮತ್ತು ಲೈಂಗಿಕ ಅನೈತಿಕತೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಏಯ್ಡ್ಸ್ ರೋಗವನ್ನು ತಡೆಯುವುದರ ಕುರಿತಾದ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಅಮಲೌಷಧಗಳು ಮತ್ತು ಲೈಂಗಿಕ ಅನೈತಿಕತೆಯನ್ನು ವರ್ಜಿಸುವುದರ ಕುರಿತು ಮಾತಾಡುವುದು ಸುಲಭ, ಆದರೆ ವಾಸ್ತವವಾಗಿ ವರ್ಜಿಸುವುದು ಕಷ್ಟವೆಂದು ನಿಮಗನಿಸುತ್ತದೊ? ವಿಶೇಷವಾಗಿ ಯುವಜನರು ಎದುರಿಸುವ ವಿಪರೀತ ಒತ್ತಡಗಳ ದೃಷ್ಟಿಯಿಂದ, ಅನೇಕರು ಆ ರೀತಿಯ ಭಾವನೆಯುಳ್ಳವರಾಗಿದ್ದಾರೆ.
ಒತ್ತಡಗಳು
“ಯೌವನ ಪ್ರಾಯದ” ಸಮಯದಲ್ಲಿ, ಲೈಂಗಿಕ ಅಪೇಕ್ಷೆಗಳು ತೀಕ್ಷೈವಾಗಿರುತ್ತವೆ. (1 ಕೊರಿಂಥ 7:36) ಈಗ, ದೂರದರ್ಶನ ಮತ್ತು ಚಲನಚಿತ್ರಗಳ ಪ್ರಭಾವವೂ ಕೂಡಿಕೊಂಡಿದೆ. ಕೆಲವು ಅಧ್ಯಯನಗಳಿಗನುಸಾರ, ಹದಿವಯಸ್ಕರು ಪ್ರತಿದಿನ ಐದಕ್ಕಿಂತಲೂ ಹೆಚ್ಚು ತಾಸುಗಳನ್ನು ಟಿವಿ ನೋಡುವುದರಲ್ಲಿ ಕಳೆಯುತ್ತಾರೆ—ಅದು ಬಹುಮಟ್ಟಿಗೆ ಲೈಂಗಿಕವಾಗಿ ಸಜೀವವಾದ ವರ್ಣಚಿತ್ರಗಳಿಂದ ಕೂಡಿರುತ್ತದೆ. ಆದರೆ ಟಿವಿಯ ಕಾಲ್ಪನಿಕ ಪ್ರಪಂಚದಲ್ಲಿ, ಕಾಮಕ್ಕೆ ದುಷ್ಪರಿಣಾಮಗಳಿಲ್ಲ. ಅಮೆರಿಕದ ದೂರದರ್ಶನದಲ್ಲಿ “ವಿವಾಹಿತರಾದ ಪುರುಷ ಮತ್ತು ಸ್ತ್ರೀಯರಿಗಿಂತಲೂ ಹೆಚ್ಚು ಸಾಧಾರಣವಾಗಿ ಅವಿವಾಹಿತರಾದ ವಿರುದ್ಧಲಿಂಗದ ದಂಪತಿಗಳು ನಾಲ್ಕರಿಂದ ಎಂಟು ಬಾರಿ ಹೆಚ್ಚು ಲೈಂಗಿಕ ಸಂಭೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಗರ್ಭನಿರೋಧಕಗಳು ಅಧಿಕಾಂಶ ಸೂಚಿಸಲ್ಪಡುವುದಾಗಲಿ ಉಪಯೋಗಿಸಲ್ಪಡುವುದಾಗಲಿ ಇಲ್ಲ, ಆದರೆ ಸ್ತ್ರೀಯರು ಗರ್ಭವತಿಯರಾಗುವುದು ವಿರಳ; ಅವರು ವೇಶ್ಯೆಯರು ಅಥವಾ ಸಲಿಂಗಕಾಮಿಗಳೂ ಆಗಿರದ ಹೊರತು, ಸ್ತ್ರೀಯರು ಮತ್ತು ಪುರುಷರು ವಿರಳವಾಗಿ ರತಿ ರವಾನಿತ ರೋಗಗಳಿಂದ ಸೋಂಕಿತರಾಗಿರುತ್ತಾರೆ.” ಎಂದು ಒಂದು ಅಧ್ಯಯನವು ಪ್ರಕಟಿಸಿತು.—ಜನಸಂಖ್ಯೆ ಆಯ್ಕೆಗಳ ಕೇಂದ್ರ (ಸೆಂಟರ್ ಫಾರ್ ಪಾಪ್ಯುಲೇಷನ್ ಆಪ್ಷನ್).
ಅಂತಹ ಅಧಿಕ ಪ್ರಮಾಣದ ದೂರದರ್ಶನ ಪ್ರಸಾರವು ವಾಸ್ತವವಾಗಿ ನಿಮ್ಮ ನಡವಳಿಕೆಯ ಮೇಲೆ ಪರಿಣಾಮವನ್ನು ಬೀರಬಲ್ಲದೋ? ಹೌದು, ಗಲಾತ್ಯ 6:7, 8ರಲ್ಲಿ ಬೈಬಲಿನ ನಿಯಮಕ್ಕನುಸಾರ: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು.” “ಟಿವಿಯಲ್ಲಿ ‘ಲೈಂಗಿಕ’ ವಿಚಾರಗಳನ್ನು ಕಡಿಮೆ ಪ್ರಮಾಣದಲ್ಲಿ ನೋಡುವವರಿಗಿಂತಲೂ, ಟಿವಿಯ ‘ಲೈಂಗಿಕ’ ವಿಚಾರಗಳನ್ನು ಅಧಿಕ ಪ್ರಮಾಣದಲ್ಲಿ ನೋಡಿದವ್ದರು ಲೈಂಗಿಕವಾಗಿ ಕ್ರಿಯಾಶೀಲರಾಗುವ ಸಂಭವನೀಯತೆಗಳು ಹೆಚ್ಚು,” ಎಂದು 400 ಯುವಜನರ ಕುರಿತಾದ ಅಧ್ಯಯನವೊಂದು ಕಂಡುಹಿಡಿಯಿತು.
ಸಮಾನಸ್ಥರ ಒತ್ತಡವು ಇನ್ನೊಂದು ಪ್ರಬಲವಾದ ಪ್ರಭಾವವಾಗಿದೆ. “ಹೊಂದಿಕೊಳ್ಳಲಿಕ್ಕಾಗಿ ಒಂದು ಗುಂಪನ್ನು ನಾನು ಹುಡುಕುತ್ತಿದ್ದೆ ಮತ್ತು ಅದು ಕಷ್ಟಕರವೇ ಸರಿ,” ಎಂದು ಡೇವಿಡ್ ಎಂಬ ಹೆಸರಿನ ಹದಿವಯಸ್ಕನೊಬ್ಬನು ಒಪ್ಪಿಕೊಳ್ಳುತ್ತಾನೆ. “ಅನೇಕ ಬಾರಿ ನನ್ನನ್ನು ನಾನು ನಿಜವಾಗಿಯೂ ಒಂದು ಅನಾರೋಗ್ಯಕರ ಪರಿಸ್ಥಿತಿಯಲ್ಲಿ ಒಳಪಡಿಸಿಕೊಂಡೆನು. . . ನಾನು ಏಯ್ಡ್ಸ್ ರೋಗಿಯೆಂದು ನಿರ್ಣಯಿಸಲ್ಪಟೆನ್ಟು.” ತದ್ರೀತಿಯಲ್ಲಿ, ಬೈಬಲ್ ಸಮಯಗಳಲ್ಲಿಯೂ ಯುವಜನರು ಆಗಾಗ್ಗೆ ಸಮಾನಸ್ಥರ ಒತ್ತಡಕ್ಕೆ ಈಡಾಗಿದ್ದರು. ಬೈಬಲಿನ ಸಲಹೆ ಏನು? “ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.”—ಜ್ಞಾನೋಕ್ತಿ 1:10.
ಇಲ್ಲ ಎಂದು ಹೇಳುವುದು
ಇಂದ್ರಿಯನಿಗ್ರಹವು ಅಸ್ವಾಭಾವಿಕವಾದದ್ದಾಗಿದೆ ಎಂದು “ಸುರಕ್ಷಿತ ಸಂಭೋಗ”ದ ಪ್ರವರ್ತಕರು ವಾದಿಸುತ್ತಾರೆ. ಆದರೆ ಅಂತಿಮವಾಗಿ, ವ್ಯಭಿಚಾರವನ್ನು ಗಣನೆಗೆ ತೆಗೆದುಕೊಳ್ಳದಿರುವುದು ನಿಜವಾಗಿಯೂ ಸಹಾಯಕರವೊ? ಇದು ಯುವಜನರನ್ನು ಗಲಿಬಿಲಿಗೊಳಿಸುತ್ತದೆಂದು ಒಪ್ಪಿಕೊಳ್ಳುತ್ತಾ ಒಬ್ಬ ಹದಿವಯಸ್ಕನು ಹೇಳುವುದು: “ಸಂಭೋಗಕ್ಕೆ ನಕಾರ ಹಾಕಿ, ಹಿತಕರವೂ ಶುದ್ಧವೂ ಆಗಿರುವುದು ಸರಿ ಎಂದವರು ಹೇಳುತ್ತಾರೆ. ಅದೇ ಸಮಯದಲ್ಲಿ ಅವರು [ಶಿಶ್ನ ಕವಚ] ಕೊಟ್ಟು, ದುಷ್ಪರಿಣಾಮವಿಲ್ಲದೆ ಸಂಭೋಗಿಸುವುದು ಹೀಗೆಂದು ಹೇಳುತ್ತಾರೆ.”
ಅಂತಹ ನೈತಿಕ ಗೊಂದಲಕ್ಕೆ ನೀವು ಒಬ್ಬ ಬಲಿಪಶುಗಳಾಗಬೇಡಿ. ಬೈಬಲು ಹಳೆಯ ಶೈಲಿಯದ್ದಾಗಿ ಕಂಡುಬರಬಹುದಾದರೂ, ಏಯ್ಡ್ಸ್ ಸೋಂಕು ರೋಗದ ಅಪಾಯದಲ್ಲಿ ನಿಮ್ಮನ್ನು ಸಿಕ್ಕಿಸುವಂತಹ ನಡವಳಿಕೆಯನ್ನು ನೀವು ತ್ಯಜಿಸುವಂತೆ ಅದು ಒತ್ತಿಹೇಳುತ್ತದೆ. ‘ರಕ್ತವನ್ನು ವಿಸರ್ಜಿಸಿರಿ’ ಎಂಬ ಬೈಬಲಿನ ಆಜೆಗ್ಞೆ ನೀವು ವಿಧೇಯರಾಗುವುದಾದರೆ, ಒಂದು ರಕ್ತಪೂರಣದ ಮೂಲಕ ನೀವು ಏಯ್ಡ್ಸ್ ರೋಗವನ್ನು ಸೋಂಕಿಸಿಕೊಳ್ಳಲಾರಿರಿ. (ಅ. ಕೃತ್ಯಗಳು 15:29) “ಅಮಲೌಷಧ ಸೇವನೆ”ಯ ವಿರುದ್ಧವಾದ ಬೈಬಲಿನ ನಿಷೇಧಕ್ಕೆ ಲಕ್ಷ್ಯಕೊಡುವಲ್ಲಿ ಕಲುಷಿತಗೊಂಡ ಒಂದು ಸೂಜಿಮದ್ದಿನ ಮೂಲಕ ಸೋಂಕಿನ ಭಯಪಡುವ ಆವಶ್ಯಕತೆಯಿಲ್ಲ. (ಗಲಾತ್ಯ 5:20; ಪ್ರಕಟನೆ 21:8; ದಿ ಕಿಂಗ್ಡಮ್ ಇಂಟರ್ಲಿನಿಯರ್) ವಿಶೇಷವಾಗಿ ಲೈಂಗಿಕ ನೈತಿಕತೆಯ ಕುರಿತಾದ ಬೈಬಲಿನ ನಿಬಂಧನೆಯು ನಿಮ್ಮನ್ನು ಸಂರಕ್ಷಿಸುವುದು. “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ,” ಎಂದು ಬೈಬಲ್ ಆಜ್ಞಾಪಿಸುತ್ತದೆ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರಗಾಗಿವೆ, ಆದರೆ ಜಾರತ್ವಮಾಡುವವನು ತನ್ನ ದೇಹಕ್ಕೆ ಹಾನಿಕರವಾದ ಪಾಪವನ್ನು ಮಾಡುತ್ತಾನೆ.” (1 ಕೊರಿಂಥ 6:18) ಈ ಮಾತುಗಳ ವಿವೇಕವನ್ನು ಏಯ್ಡ್ಸ್ ರೋಗದ ಉತ್ಕಟ ಸ್ಥಿತಿಯು ಒತ್ತಿ ಹೇಳುತ್ತದೆ.
ಯುವಜನರು ಅನೈತಿಕತೆಯಿಂದ ಹೇಗೆ “ಓಡಿಹೋಗ”ಸಾಧ್ಯವಿದೆ? ವರ್ಷಗಳಿಂದ “ಯುವಜನರು ಪ್ರಶ್ನಿಸುವುದು . . . ” ಎಂಬ ಲೇಖನಗಳು, ಗುಂಪಿನೊಂದಿಗಿರುವಾಗ ಡೇಟಿಂಗ್ ಮಾಡುವುದು, (ಒಂದು ಕೋಣೆಯಲ್ಲಿ, ಅಥವಾ ವಾಸದ ಮಹಡಿಯಲ್ಲಿ ಅಥವಾ ಪಾರ್ಕ್ಮಾಡಲ್ಪಟ್ಟ ಕಾರೊಂದರಲ್ಲಿ ವಿರೋಧ ಲಿಂಗದವರಲ್ಲಿ ಒಬ್ಬರೊಂದಿಗೆ ಒಂಟಿಯಾಗಿರುವಂತಹ) ಅಪಾಯಕ್ಕೆ ಗುರಿಮಾಡುವ ಸಂದರ್ಭಗಳನ್ನು ತ್ಯಜಿಸುವುದು, ಪ್ರೀತಿಯ ಅಭಿವ್ಯಕ್ತಿಗಳಿಗೆ ಮಿತಿಗಳನ್ನಿಡುವುದು, (ಉತ್ತಮ ನಿರ್ಣಯಗಳಿಗೆ ಕೆಲವೊಮ್ಮೆ ಅಡಿಯ್ಡನ್ನುಂಟುಮಾಡುವ) ಮದ್ಯಪಾನೀಯದ ಉಪಯೋಗದಿಂದ ದೂರವಾಗಿರುವುದು, ಮತ್ತು ಪರಿಸ್ಥಿತಿಯೊಂದು ಭಾವೂದ್ರೇಕಕ್ಕೆ ಒಳಪಡಿಸುವಾಗ ದೃಢವಾಗಿ ನಿರಾಕರಿಸುವುದು, ಇಂತಹ ಅನೇಕ ಪ್ರಾಯೋಗಿಕ ಸಲಹೆಗಳನ್ನು ನೀಡಿವೆ.f ಯಾವುದೇ ಸಂಗತಿಯಲ್ಲಿ ಶಾರೀರಿಕವಾಗಿ ಅಪಾಯಕರ ಮಾತ್ರವಲ್ಲ ಆದರೆ ಆತ್ಮಿಕವಾಗಿ ವಿನಾಶಕರವಾಗಿರುವ ನಡವಳಿಕೆಯಲ್ಲಿ ನೀವು ಒಳಗೂಡುವಂತೆ ಬೇರೊಬ್ಬರು ನಿಮ್ಮನ್ನು ಒತ್ತಾಯಪಡಿಸುವಂತೆ ಬಿಡಬೇಡಿ. (ಜ್ಞಾನೋಕ್ತಿ 5:9-14) “ನಿಮ್ಮ ಜೀವಿತವನ್ನು ಬೇರೊಬ್ಬ ವ್ಯಕ್ತಿಯ ಜವಾಬ್ದಾರಿಯಲ್ಲಿ ಒಪ್ಪಿಸಲು ನೀವು ಅಪೇಕ್ಷಿಸುತ್ತೀರೋ?” ಎಂದು ನ್ಯೂಸ್ವೀಕ್ ಪತ್ರಿಕೆಯ ಲೇಖನವೊಂದರಲ್ಲಿ ಉದ್ಧರಿಸಲ್ಪಟ್ಟ ಏಮಿ ಎಂಬ ಹೆಸರಿನ ಯುವತಿಯೊಬ್ಬಳು ಕೇಳಿದಳು. ಪ್ರೌಢ ಶಾಲೆಯ ಪದವಿ ಪಡೆಯುವುದಕ್ಕೆ ಮೊದಲು ಒಬ್ಬ ಗೆಳೆಯನಿಂದ ಏಚ್ಐವಿ ರೋಗಾಣುವನ್ನು ಸೋಂಕಿಸಿಕೊಂಡಿದ್ದಳು. ಅವಳು ಸ್ಪಷ್ಟವಾಗಿಗಿ ಕೇಳಿದ್ದು: “ಆ ಹುಡುಗ ಅಥವಾ ಹುಡುಗಿಯ ಕಾರಣದಿಂದಾಗಿ ಸಾಯುವುದರಲ್ಲಿ ಪ್ರಯೋಜನವಿದೆಯೆ? ಅದನ್ನು ನಾನು ಸಂದೇಹಿಸುತ್ತೇನೆ.” (g93 9/8)
[ಅಧ್ಯಯನ ಪ್ರಶ್ನೆಗಳು]
a ದಶಂಬರ 8, 1993ರ, ಎಚ್ಚರ! ಸಂಚಿಕೆಯಲ್ಲಿ ಪ್ರಕಟವಾದ “ಯುವಜನರು ಪ್ರಶ್ನಿಸುವುದು . . . ಏಯ್ಡ್ಸ್—ನಾನು ಗಂಡಾಂತರದಲ್ಲಿರುವೆನೊ?” ಎಂಬ ಲೇಖನವನ್ನು ನೋಡಿರಿ.
b “ಈ ದೇಶದಲ್ಲಿ 1981ರಲ್ಲಿ ಏಯ್ಡ್ಸ್ನ ರೋಗಗಳು ಪ್ರಥಮವಾಗಿ ವರದಿಮಾಡಲ್ಪಟ್ಟವು. ಸಾಮಾನ್ಯವಾದ, ಅಲೈಂಗಿಕ ವಿಧದಿಂದ ಏಯ್ಡ್ಸ್ ಸಾಗಿಸಲ್ಪಟ್ಟಿರುವುದಾದರೆ ಇಷ್ಟರೊಳಗೆ ನಮಗೆ ತಿಳಿದುಬರುತ್ತಿತ್ತು,” ಎಂದು ಹೇಳಿ ಅಮೆರಿಕದ ಹಿಂದಿನ ಪ್ರಧಾನ ಶಸ್ತ್ರವೈದ್ಯರಾದ ಡಾ. ಎವ್ರೆಟ್ ಕೂಪ್ ಸಂದೇಹ ವಾದಿಗಳಿಗೆ ಉತ್ತರ ನೀಡಿದರು.
c ಬಾಯಿ ಮತ್ತು ಗುದದ್ವಾರದ ಸಂಭೋಗವನ್ನು ಇದು ಒಳಗೊಂಡಿರುತ್ತದೆ.
d ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು ಇನ್ನೂ ಎಚ್ಚರಿಕೆ ನೀಡಿದ್ದು: “ನಿಮ್ಮ ಕಿವಿಗಳನ್ನು ಚುಚ್ಚಿಸಿಕೊಳ್ಳಲು ನೀವು ಯೋಜಿಸಿರುವುದಾದರೆ . . . , ಹೊಚ್ಚಹೊಸತಾದ ಅಥವಾ ಕ್ರಿಮಿ ಶುದ್ಧಿಮಾಡಿದ ಸಲಕರಣೆಯನ್ನು ಉಪಯೋಗಿಸುವಂತಹ ಒಬ್ಬ ಅರ್ಹತೆಯುಳ್ಳ ವ್ಯಕ್ತಿಯ ಬಳಿಗೆ ನೀವು ಹೋಗುತ್ತೀರೆಂಬದನ್ನು ದೃಢಪಡಿಸಿಕೊಳ್ಳಿರಿ. ಪ್ರಶ್ನೆಗಳನ್ನು ಕೇಳುವುದರ ಕುರಿತು ಸಂಕೋಚ ಪ್ರವೃತ್ತಿಯುಳ್ಳವರಾಗಿರಬೇಡಿ.”
e “ಶಿಶ್ನ ಕವಚವು ಇಡೀ ಶಿಶ್ನವನ್ನು ಆವರಿಸುವ ಒಂದು ಕವಚವಾಗಿದೆ. ವೀರ್ಯ, ರಕ್ತ ಮತ್ತು ಯೋನಿಯ ಸ್ರಾವಗಳು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸಾಗಿಸಲ್ಪಡದಂತೆ ತಡೆಯಲು ಒಂದು ಪ್ರತಿಬಂಧಕ, ಅಥವಾ ತಡೆಯೋಪಾದಿ ಕಾರ್ಯನಡಿಸುವ ಮೂಲಕ ಅದು ರತಿ ರವಾನಿತ ರೋಗ [ಎಸ್ಟಿಡಿ]ಗಳ ವಿರುದ್ಧ ರಕ್ಷಣೆ ನೀಡುತ್ತದೆ,” ಎಂದು ಎಫ್ಡಿಎ ಕನ್ಸ್ಯೂಮರ್ ಪತ್ರಿಕೆಯು ವಿವರಿಸುತ್ತದೆ.
f ಉದಾಹರಣೆಗಾಗಿ, ಇಂಗ್ಲಿಷ್ ಎವೇಕ್!ನ ಏಪ್ರಿಲ್ 22, 1986; ಏಪ್ರಿಲ್ 22, 1989; ಮತ್ತು ಏಪ್ರಿಲ್ 22, 1992ರ ಸಂಚಿಕೆಗಳಲ್ಲಿ “ಯುವಜನರು ಪ್ರಶ್ನಿಸುವುದು . . . ” ಲೇಖನಗಳನ್ನು ನೋಡಿರಿ.
[ಪುಟ 17 ರಲ್ಲಿರುವ ಚಿತ್ರ]
ಲೈಂಗಿಕ ಒತ್ತಡಕ್ಕೆ ಒಳಗಾಗುವುದು ಏಯ್ಡ್ಸ್ ರೋಗಕ್ಕೆ ಕಾರಣವಾಗಬಲ್ಲದು