ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 12/8 ಪು. 30-31
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೂರೋಪಿಯನ್‌ ನ್ಯಾಯಾಲಯವು ಗ್ರೀಕ್‌ ಸಾಕ್ಷಿಗಳ ಪರವಾಗಿ ತೀರ್ಮಾನಿಸುತ್ತದೆ
  • ನಿದ್ರಾ ಸಾಲ
  • ಎಂದೂ ತೀರ ವೃದ್ಧರಲ್ಲ
  • ಹೆಣ್ಣು ಕಾರ್ಮಿಕರ ಪೀಡನೆ
  • ಜಪಾನಿನ ವಿಶ್ವವಿದ್ಯಾಲಯದಲ್ಲಿ ಬೈಬಲ್‌ ಪಾಠಗಳು
  • ನಿಯಂತ್ರಣವನ್ನು ಮೀರಿ ಏಯ್ಡ್ಸ್‌ ಇದೆಯೋ?
  • ಏಷ್ಯಾದಲ್ಲಿ ಮಗು ವೇಶ್ಯಾವೃತ್ತಿಯು ಉತ್ಕರ್ಷವಾಗಿ ಏರುತ್ತಿದೆ
  • ಶೀಘ್ರ ಆರಾಧನೆ
  • ಮೃಗಗಳಿಗಾಗಿ ಪೂಜೆ
  • ಕಣ್ಣಿನ ಒತ್ತಡವನ್ನು ಕಡಿಮೆಗೊಳಿಸುವುದು
  • ಮಾರಾಟಕ್ಕಾಗಿ ಚರ್ಚುಗಳು
  • ನಿಧಾನ ನಡುಗೆಯ ಒತ್ತಡ
  • ಡೆಂಗಿ ಜ್ವರ—ಸೊಳ್ಳೆ ಕಡಿತದಿಂದ ಬರುವ ಒಂದು ಜ್ವರ
    ಎಚ್ಚರ!—1998
  • ಡೆಂಗೀ—ಹೆಚ್ಚಾಗುತ್ತಿರುವ ಪೀಡೆ
    ಎಚ್ಚರ!—2012
  • ಏಯ್ಡ್ಸ್‌—ನಾನು ಗಂಡಾಂತರದಲ್ಲಿರುವೆನೊ?
    ಎಚ್ಚರ!—1993
  • ಏಯ್ಡ್ಸ್‌ ಹದಿಹರೆಯದವರಿಗೆ ಆಪತ್ಕಾಲ
    ಎಚ್ಚರ!—1992
ಇನ್ನಷ್ಟು
ಎಚ್ಚರ!—1993
g93 12/8 ಪು. 30-31

ಜಗತ್ತನ್ನು ಗಮನಿಸುವುದು

ಯೂರೋಪಿಯನ್‌ ನ್ಯಾಯಾಲಯವು ಗ್ರೀಕ್‌ ಸಾಕ್ಷಿಗಳ ಪರವಾಗಿ ತೀರ್ಮಾನಿಸುತ್ತದೆ

ಮೇ 25, 1993ರಂದು, ಫ್ರಾನ್ಸ್‌ನ ಸಾಸ್ಟ್ರ್‌ಬರ್ಗ್‌ನಲ್ಲಿ ಅಧಿವೇಶನಗಳನ್ನು ನಡೆಸುವ ಮಾನವ ಹಕ್ಕುಗಳ ಯೂರೋಪಿಯನ್‌ ನ್ಯಾಯಾಲಯದ ಮೂಲಕ ನೀಡಲಾದ ತೀರ್ಮಾನದಲ್ಲಿ, ಶ್ರೇಷ್ಠವಾದ ಒಂದು ನ್ಯಾಯಬದ್ಧ ಜಯವನ್ನು ಯೆಹೋವನ ಸಾಕ್ಷಿಗಳು ಪಡೆದರು. ನ್ಯಾಯವಲ್ಲದ ಮತಪ್ರಚಾರ ಮಾಡುವ ಸಂಗತಿಗಾಗಿ ಆರೋಪಿಸಲ್ಪಟ್ಟ, 83 ವರ್ಷ ಪ್ರಾಯದ ಸಾಕ್ಷಿ, ಮಿನೋಸ್‌ ಕೊಕಿನಾಕಿಸ್‌, ಈ ಮೊಕದ್ದಮೆಯಲ್ಲಿ ಒಳಗೊಂಡಿದ್ದರು. ಮಾರ್ಚ್‌ 20, 1986ರಂದು, ಕ್ರೀಟ್‌ನ ಲಾಸಿತಿ ಕ್ರಿಮಿನಲ್‌ ನ್ಯಾಯಾಲಯ ಮೂಲಕ ಅವರಿಗೆ ನಾಲ್ಕು ತಿಂಗಳು ಸೆರೆಮನೆವಾಸದ ದಂಡ ವಿಧಿಸಿತ್ತು. ಹಾಗಿದ್ದರೂ, ಯೂರೋಪಿಯನ್‌ ನ್ಯಾಯಾಲಯದ ತೀರ್ಪು, ಅವರ ಅಪರಾಧ ನಿರ್ಣಯವನ್ನು ಮೂರು ನ್ಯಾಯಾಧೀಶರ ವಿರುದ್ಧವಾಗಿ ಆರು ನ್ಯಾಯಾಧೀಶರ ನಿರ್ಣಯದಿಂದ ರದ್ದುಮಾಡಿತು. ಅನೇಕ ದಶಕಗಳ ವರೆಗೆ, ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನ ಮೂಲಕ ಪ್ರಬಲವಾಗಿ ಪ್ರಭಾವಿತವಾದ ಗ್ರೀಸಿನ ಸರಕಾರವು, ನ್ಯಾಯವಲ್ಲದ ಮತಪ್ರಚಾರದ ಆರೋಪಗಳ ಮೇಲೆ ಸಾವಿರಾರು ಯೆಹೋವನ ಸಾಕ್ಷಿಗಳ ಸೆರೆಹಿಡಿಯುವಿಕೆಗೆ ಕಾರಣವಾಗಿತ್ತು. ಈ ಮೊಕದ್ದಮೆಯಲ್ಲಿ, ಯೂರೋಪಿಯನ್‌ ಒಪ್ಪಂದದ ಕೆಳಗೆ ಶ್ರೀ ಕೊಕಿನಾಕಿಸ್‌ರ ಹಕ್ಕುಗಳನ್ನು ಗ್ರೀಕ್‌ ಸರಕಾರವು ಉಲ್ಲಂಘಿಸಿತು ಎಂದು ಯೂರೋಪಿಯನ್‌ ನ್ಯಾಯಾಲಯವು ಕಂಡುಕೊಂಡಿತು. ಗ್ರೀಸ್‌ನಲ್ಲಿನ 26,000ಕ್ಕಿಂತ ಹೆಚ್ಚಿನ ಸಾಕ್ಷಿಗಳು, ಈ ನಿರ್ಣಯವು ಅವರ ಹಿಂಸೆಯನ್ನು ಕೊನೆಗೊಳಿಸಿ, ಶಾಂತಿಯಲ್ಲಿ ಅವರ ನ್ಯಾಯಬದ್ಧವಾದ ಶುಶ್ರೂಷೆಯನ್ನು ನಿರ್ವಹಿಸುವಂತೆ ಅವರಿಗೆ ಅನುಮತಿ ನೀಡುವುದೆಂಬ ನಿರೀಕ್ಷೆಯುಳ್ಳವರಾಗಿದ್ದಾರೆ. (g93 8/22)

ನಿದ್ರಾ ಸಾಲ

“ನಿದ್ರೆಯ ಕೊರತೆ ಇರುವ ಜನರು ಎಲ್ಲರಂತೆ ನಡೆಯಬಲ್ಲರು, ಆಲಿಸಬಲ್ಲರು, ಮತ್ತು ನೋಡಬಲ್ಲರು. ಹಾಗಿದ್ದರೂ, ವಿವೇಚನೆ ಮಾಡುವ ಸಾಮರ್ಥ್ಯ, ನಿರ್ಣಯಗಳನ್ನು ಮಾಡುವ ಮತ್ತು ಚುರುಕಾಗಿ ಉಳಿಯುವ ಶಕ್ತಿ ಬಲಹೀನಗೊಳ್ಳುತ್ತದೆ,” ಎಂದು ವೆಜಾ ಪತ್ರಿಕೆಯು ಹೇಳುತ್ತದೆ. ಆವಶ್ಯಕವಾದ ನಿದ್ರೆಯನ್ನು ತಪ್ಪುವುದರ ಅಪಾಯಗಳ ಕುರಿತು ಎಚ್ಚರಿಸುವ ನಿಪುಣರನ್ನು ಲೇಖನವು ನಮೂದಿಸುತ್ತದೆ. “ಕೆಲಸದ ಪ್ರತಿ 10 ಅಪಘಾತಗಳಲ್ಲಿ ಎರಡು, ರಾತ್ರಿಯಲ್ಲಿ ಸಾಕಷ್ಟು ನಿದ್ದೆ ಇಲ್ಲದೆ ಇರುವ ಕಾರಣದಿಂದಾಗುತ್ತವೆ” ಎಂದು ನಿದ್ರೆಗಾಗಿ ಬ್ರೇಸಿಲಿಯನ್‌ ಸಂಸ್ಥೆಯ ಅಧ್ಯಕ್ಷರಾದ, ಡಾ. ಡೆನಿಸ್‌ ಮಾರ್ಟಿನೆಜ್‌ರಿಂದ ಮಾಡಲಾದ ಒಂದು ಸಮೀಕ್ಷೆಯು ತೋರಿಸುತ್ತದೆ. ಕೊಂಚ ನಿದ್ರೆಯನ್ನು ಪಡೆಯುವವರು, “ಉದಾಹರಣೆಗಾಗಿ, ಮೂರು ಉದ್ಯೋಗದ ಸ್ಥಳಗಳಲ್ಲಿ ಕೆಲಸಮಾಡುತ್ತಾ, . . . ತಮ್ಮ ಆರೋಗ್ಯವನ್ನು ಕೆಲಸದ ಮಾರುಕಟ್ಟೆಗೆ ಬಲಿಕೊಡುತ್ತಿದ್ದಾರೆಂದು” ಡಾ. ಮಾರ್ಟಿನೆಜ್‌ ಎಚ್ಚರಿಸುತ್ತಾರೆ. (g93 8/22)

ಎಂದೂ ತೀರ ವೃದ್ಧರಲ್ಲ

‘ಕಲಿಯಲು ನೀವು ಎಂದೂ ತೀರ ವೃದ್ಧರಲ್ಲ.’ ಈ ಹಳೆಯ ಹೇಳಿಕೆಯನ್ನು ದೃಷ್ಟಾಂತಿಸುವ ಹಾಗೆ, ಚೈತನ್ಯ ಹೊಮ್ಮುತ್ತಿರುವ 93 ವರ್ಷ ಪ್ರಾಯದ ಬರ್ನಾಬಾ ಎವಾನ್‌ಹಾಲಿಸ್‌ತಾ, ಎರಡು ವರ್ಷದ ಅವಧಿಯಲ್ಲಿ ತಮ್ಮ ವಿಶ್ವವಿದ್ಯಾನಿಲಯ ಅಧ್ಯಯನಗಳನ್ನು ಪೂರ್ಣಗೊಳಿಸುವ ಕಡೆಗೆ ಮುನ್ನೋಡುತ್ತಿದ್ದಾರೆ. ಸ್ಪೆಯಿನ್‌ನ ವ್ಯಾಲೆನ್‌ಸಿಯದ ವಿಶ್ವವಿದ್ಯಾನಿಲಯದಲ್ಲಿ ಅವರು ಕಲೆಯನ್ನು ಅಭ್ಯಾಸಿಸುತ್ತಿದ್ದಾರೆ, ಮತ್ತು ಅವರ ಅಧ್ಯಯನಗಳಿಗಾಗಿರುವ ಅವರ ಸಮರ್ಪಣೆಯು, ಈಗಾಗಲೇ ಅವರಿಗೆ ಎದ್ದುಕಾಣುವ ವ್ಯಾಸಂಗಿಕ ಸಾಧನೆಗಾಗಿ ಬಹುಮಾನವನ್ನು ಗಳಿಸಿಕೊಟ್ಟಿದೆ. “ಇರುವುದರಲ್ಲಿ ಅತ್ಯಂತ ಸುಂದರವಾದ ವಿಷಯವು ಅಭ್ಯಾಸ ಮಾಡುವುದಾಗಿದೆ” ಎಂದು ಪ್ರತಿ ಬೆಳಗ್ಗೆ ಎಂಟು ಗಂಟೆಗೆ ವಿಶ್ವವಿದ್ಯಾನಿಲಯಕ್ಕೆ ಬರುವ ಮತ್ತು ಅನೇಕ ಬಾರಿ ತನ್ನ ಸಂಜೆಯ ವರ್ಗಗಳನ್ನು ರಾತ್ರಿ ಒಂಬತ್ತರ ತನಕ ಮುಗಿಸದ ಬರ್ನಾಬಾ ವಿವರಿಸುತ್ತಾರೆ. ಅಭ್ಯಾಸ ಮಾಡಲು ವೃದ್ಧರಿಗೆ ಒಂದು ಸುವರ್ಣ ಅವಕಾಶವಿದೆ ಎಂದು ಬರ್ನಾಬಾ ನಂಬುತ್ತಾರೆ. “ಅದನ್ನು ಮಾಡಲು ನಿಮಗೆ ಸಮಯವಿರುವ ಜೀವನದ ಅವಧಿಯಾಗಿದೆ” ಎಂದು ಅವರು ಹೇಳುತ್ತಾರೆ. ಸಕ್ರಿಯವಾಗಿರುವುದು ಅವರಿಗೆ ಜೀವನದಲ್ಲಿ ಒಂದು ಉದ್ದೇಶವನ್ನು ಕೊಡುತ್ತದೆ ಎಂದು ಅವರ ಹೆಂಡತಿಯು ಕೂಡಿಸುತ್ತಾರೆ. (g93 8/22)

ಹೆಣ್ಣು ಕಾರ್ಮಿಕರ ಪೀಡನೆ

ಕೆನಡದ ಟೊರೆಂಟೊವಿನಲ್ಲಿರುವ ಟೊರೆಂಟೊ ಆಸ್ಪತ್ರೆಯಲ್ಲಿ ನಡೆದ ಇತ್ತೀಚೆಗಿನ ಒಂದು ಸಮೀಕ್ಷೆಯು, ಕೆಲಸದಲ್ಲಿರುವಾಗ ಅದರ 70 ಪ್ರತಿಶತ ಹೆಣ್ಣು ಕಾರ್ಮಿಕರು ಲೈಂಗಿಕವಾಗಿ ಪೀಡಿಸಲ್ಪಟ್ಟರು ಎಂಬದಾಗಿ ದೂರು ನೀಡಿದ್ದರೆಂದು ತೋರಿಸಿತು. ದ ಟೊರೆಂಟೊ ಸ್ಟಾರ್‌ಗನುಸಾರ, ಹೆಂಗಸರಲ್ಲಿ 2 ಪ್ರತಿಶತರು, ಲೈಂಗಿಕವಾಗಿ ದಾಳಿ ಮಾಡಲ್ಪಟ್ಟಿದ್ದಾಗಿ ವರದಿಸುತ್ತಾರೆ ಮತ್ತು ಒಂದು ಪ್ರತಿಶತ ಹೆಂಗಸರು ಕಾಮಕ್ಕಾಗಿ ಬೆದರಿಸಲ್ಪಟ್ಟದ್ದಾಗಿ ವರದಿಸುತ್ತಾರೆ. ಅವರನ್ನು “ಅಯೋಗ್ಯ ಯಾ ಸೂಕ್ತವಲ್ಲದ ಅನೌಪಚಾರಿಕ ರೀತಿಯಲ್ಲಿ ಸಂಬೋಧಿಸಲಾಯಿತೆಂದು” ಹೆಂಗಸರಲ್ಲಿ ಅನೇಕರು ಹೇಳುತ್ತಾರೆ ಮತ್ತು “ಲೈಂಗಿಕ ಕುಚೇಷ್ಟೆಗಳ ಕುರಿತು” ಒಂದು ದೊಡ್ಡ ಪ್ರತಿಶತವು “ದೂರು ನೀಡಿತು.” ಹೆಣ್ಣು ಕಾರ್ಮಿಕರಲ್ಲಿ ಸುಮಾರು 60 ಪ್ರತಿಶತ ವ್ಯಕ್ತಿಗಳು ಆಸ್ಪತ್ರೆಯ “ಕೆಲವೊಂದು ಭಾಗಗಳಲ್ಲಿ ಕೆಲವೊಮ್ಮೆ ಅಸುರಕ್ಷತೆಯನ್ನು ಅನುಭವಿಸಿದರೆಂದು” ಸ್ಟಾರ್‌ ವರದಿಸುತ್ತದೆ. (g93 9/8)

ಜಪಾನಿನ ವಿಶ್ವವಿದ್ಯಾಲಯದಲ್ಲಿ ಬೈಬಲ್‌ ಪಾಠಗಳು

“ಅನೇಕ ವಿದ್ಯಾರ್ಥಿಗಳು ಪ್ರಾಚೀನ ಸಾಹಿತ್ಯ ಕೃತಿಗಳ, ನಿರ್ದಿಷ್ಟವಾಗಿ ಬೈಬಲಿನ ಕುರಿತು ಹೆಚ್ಚಾಗಿ ಕಲಿಯಲು ಆತುರವುಳ್ಳವರಾಗಿದ್ದು, ವಿದೇಶೀ ಸಂಸ್ಕೃತಿಗಳ ತಿಳಿವಳಿಕೆಗೆ ಅದು ಅತ್ಯಾವಶ್ಯಕವೆಂದು ಎಣಿಸಿದರು,” ಎಂದು ಜಪಾನಿನ ಪ್ರತಿಷ್ಠಿತ ವಾಸೆಡಾ ವಿಶ್ವವಿದ್ಯಾನಿಲಯದ ಸಾಹಿತ್ಯ ಇಲಾಖೆಯಲ್ಲಿನ ವಿದ್ಯಾರ್ಥಿಗಳ ಇತ್ತೀಚೆಗಿನ ಒಂದು ಸಮೀಕ್ಷೆಯು ಪ್ರಕಟಿಸಿತೆಂದು, ದ ಡೇಲಿ ಯೊಮಿಯುರಿ ವರದಿಸುತ್ತದೆ. ಸಾಹಿತ್ಯದ ಕ್ಷೇತ್ರದಲ್ಲಿ ಈಗಾಗಲೇ ಪ್ರಖ್ಯಾತಿಯನ್ನು ಪಡೆದಿದ್ದ ವಿಶ್ವವಿದ್ಯಾನಿಲಯವು, 1993ರ ವಸಂತ ವ್ಯಾಸಂಗ ಕಾಲದ ಆರಂಭದೊಂದಿಗೆ ಬೈಬಲ್‌ ಪಾಠಗಳನ್ನು ತನ್ನ ಕ್ರಮದಲ್ಲಿ ಸೇರಿಸಿತು. ಎರಡು ವರ್ಷಗಳ ಹಿಂದೆ ತಮ್ಮ ಬೋಧನಾ ಕಾರ್ಯಕ್ರಮಗಳನ್ನು ಹೊಂದಿಸಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯವನ್ನು ವಿಶ್ವವಿದ್ಯಾನಿಲಯಗಳಿಗೆ ಶಿಕ್ಷಣ ಮಂತ್ರಾಲಯವು ಕೊಟ್ಟಂದಿನಿಂದ, ಜಪಾನಿನಲ್ಲಿ, ಶಾಲೆಯ ಪಠ್ಯಕ್ರಮವನ್ನು ತಯಾರಿಸುವುದರಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಅನುಮತಿಸಲ್ಪಟ್ಟ ಮೊದಲ ಸಂದರ್ಭವು ಇದಾಗಿದೆ. (g93 9/8)

ನಿಯಂತ್ರಣವನ್ನು ಮೀರಿ ಏಯ್ಡ್ಸ್‌ ಇದೆಯೋ?

ಏಯ್ಡ್ಸ್‌ನ ಲೋಕವ್ಯಾಪಕ ಹರಡುವಿಕೆಯು ಈಗ ನಿಯಂತ್ರಣವನ್ನು ಮೀರಿ ಹೋಗಿದೆಯೋ? ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾದ ಗ್ಲೋಬಲ್‌ ಏಯ್ಡ್ಸ್‌ ಪಾಲಿಸಿ ಕೊಅಲಿಷನ್‌ನ ಮೂಲಕ ಸಂಕಲಿಸಲಾದ 1,000 ಪುಟಗಳ ವರದಿಯು, ಹಾಗಿರಬಹುದೆಂದು ಹೇಳುತ್ತದೆ. ದ ಗಾರ್ಡಿಯನ್‌ ವೀಕ್‌ಲಿಗನುಸಾರ, ಯಾವ ದೇಶವೂ ಏಯ್ಡ್ಸ್‌ನ ಹರಡುವಿಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಮತ್ತು ರೋಗವು ಯೂರೋಪಿನಲ್ಲಿ ಶಿಖರಕ್ಕೇರಿದೆ ಎಂದು ಹೇಳುವವರು ತಪ್ಪಾಗಿರಬಹುದು ಎಂಬುದಾಗಿ ವರದಿಯು ತೋರಿಸುತ್ತದೆ. ವರದಿಯು ಹೇಳುವುದು: “ಏಚ್‌ಐವಿ⁄ಏಯ್ಡ್ಸ್‌ ವ್ಯಾಧಿಯು ಒಂದು ನವೀನ, ಹೆಚ್ಚು ಅಪಾಯಕಾರಿ ನೆಲೆಯನ್ನು ಪ್ರವೇಶಿಸುತ್ತಿದೆ. ಭೌಗೋಲಿಕ ಬೆದರಿಕೆಯು ಹೆಚ್ಚಾದಂತೆ, ಬೆಳೆಯುತ್ತಿರುವ ನಿರಾತಂಕ, ಪಟ್ಟು ಹಿಡಿದ ನಿರಾಕರಣೆ, ಮತ್ತು ಪುನರುಜ್ಜೀವಿತವಾದ ವಿವೇಚನೆಯ ಅನೇಕ ಸೂಚನೆಗಳಿವೆ.” (g93 9/8)

ಏಷ್ಯಾದಲ್ಲಿ ಮಗು ವೇಶ್ಯಾವೃತ್ತಿಯು ಉತ್ಕರ್ಷವಾಗಿ ಏರುತ್ತಿದೆ

“ಹತ್ತು ವರ್ಷ ಪ್ರಾಯದಲ್ಲಿ ನೀನೊಬ್ಬಾಕೆ ಯುವ ವಯಸ್ಕಳು, ಇಪ್ಪತ್ತಕ್ಕೆ ನೀನೊಬ್ಬಾಕೆ ಮುದಿ ಹೆಂಗಸು, ಮೂವತ್ತಕ್ಕೆ ನೀನು ಸತ್ತುಹೋದವಳು.” ಅದು, ನ್ಯಾಷನಲ್‌ ಜಿಯೋಗ್ರಾಫಿಕ್‌ ಟ್ರಾವಲರ್‌ ಪತ್ರಿಕೆಗನುಸಾರ, ಬ್ಯಾಂಕಾಕ್‌ನ ಥಯಿಲ್ಯಾಂಡ್‌ನಲ್ಲಿನ ಮಗು ವೇಶ್ಯೆಯರ ಕುರಿತಾದ ಒಂದು ಸಾಮಾನ್ಯ ಹೇಳಿಕೆಯಾಗಿದೆ. ಸುಮಾರು 10 ಲಕ್ಷ ಮಗು ವೇಶ್ಯೆಯರು ಏಷ್ಯಾದಲ್ಲಿದ್ದು, ಅವರಲ್ಲಿ ಅನೇಕರು ಹತ್ತು ವರ್ಷ ಪ್ರಾಯಕ್ಕಿಂತ ಎಳೆಯವರಾಗಿರುತ್ತಾರೆ. ಉತ್ಕರ್ಷವಾಗಿ ಏರುತ್ತಿರುವ ಈ ಕಾನೂನುರೀತ್ಯ ಉದ್ಯಮವನ್ನು, ಪ್ರವಾಸವು ಪೋಷಿಸುತ್ತಿದೆ ಎಂಬುದಾಗಿ ಪತ್ರಿಕೆಯು ಗಮನಿಸುತ್ತದೆ. ಆಸ್ಟ್ರೇಲಿಯ, ಜಪಾನ್‌, ಅಮೆರಿಕ, ಮತ್ತು ಪಾಶ್ಚಾತ್ಯ ಯೂರೋಪ್‌ನಲ್ಲಿರುವ ಅನೇಕ ಪಿಡೊಫೈಲ್‌ (ಮಕ್ಕಳನ್ನು ಲೈಂಗಿಕ ವಸ್ತುಗಳನ್ನಾಗಿ ಇಷ್ಟಪಡುವ ಲೈಂಗಿಕ ವಾದವನ್ನು ಉತ್ತೇಜಿಸುವ) ಸಂಸ್ಥೆಗಳು ಏಷ್ಯನ್‌ ದೇಶಗಳಿಗೆ ‘ಕಾಮ ಪ್ರವಾಸಗಳನ್ನು’ ಪ್ರವರ್ತಿಸುತ್ತವೆ. ಭಾರತದ ಮುಂಬಯಿಯ ವೇಶ್ಯಾಗೃಹಗಳಲ್ಲಿ ವೇಶ್ಯೆಯರಾಗಲು, ಪ್ರತಿ ವರ್ಷ ಸುಮಾರು 5,000 ಹುಡುಗಿಯರು ನೇಪಾಳದ ಪರ್ವತಗಳಿಂದ “ಹೊಸದಾಗಿ ಸೇರಿಸಲ್ಪಡುತ್ತಾರೆ” ಎಂದು ಲಂಡನ್‌ನಿನ ದ ಟೈಮ್ಸ್‌ ಇತ್ತೀಚೆಗೆ ವರದಿ ಮಾಡಿತು. ಈಗ ಅಲ್ಲಿ ಸರಿಸುಮಾರು 2,00,000 ಹುಡುಗಿಯರು ಇದ್ದಾರೆ, ಏಯ್ಡ್ಸ್‌ ರೋಗವನ್ನು ಉಂಟುಮಾಡುವ ಏಚ್‌ಐವಿ ಸಾಂಕ್ರಮಿಕ ವಿಷದಿಂದ ಅವರಲ್ಲಿ ಸುಮಾರು ಅರ್ಧದಷ್ಟು ಜನರು ಸೋಂಕಿಸಲ್ಪಟ್ಟಿದ್ದಾರೆ. ಉನ್ನತವಾಗಿ ಸಂಘಟಿತವಾದ ಒಂದು ವ್ಯಾಪಾರವು ಹುಡುಗಿಯರನ್ನು ಪಾಶ್ಚಾತ್ಯ ಯೂರೋಪ್‌ ಮತ್ತು ಅಮೆರಿಕಕ್ಕೆ ಕೂಡ ಸಾಗಿಸುತ್ತದೆ. (g93 9/8)

ಶೀಘ್ರ ಆರಾಧನೆ

“ಚರ್ಚಿನ ಆರಾಧನೆಗಳು ಬೆಳಗ್ಗೆ 11 ಗಂಟೆಗೆ ಆರಂಭಿಸಿ ಒಂದು ತಾಸು ಯಾ ಹೆಚ್ಚಿನ ಸಮಯದ ವರೆಗೆ ನಡೆಯಬೇಕಾದದ್ದು ಯಾಕೆ?” ಟೈಮ್ಸ್‌ ವೆಸ್ಟ್‌ ವರ್ಜಿನಿಯನ್‌ನಲ್ಲಿ ಕಾಣಿಸುವ ಅಸೋಷಿಅಟೇಡ್‌ ಪ್ರೆಸ್‌ ವರದಿಗನುಸಾರ, ಅಮೆರಿಕದ ಫ್ಲೋರಿಡಾದಲ್ಲಿ ಒಬ್ಬ ಬ್ಯಾಪ್ಟಿಸ್ಟ್‌ ಶುಶ್ರೂಷಕನಿಂದ ಇತ್ತೀಚೆಗೆ ಹಾಕಲಾದ ಆ ಪ್ರಶ್ನೆಯು, ಭವಿಷ್ಯನುಡಿಯಬಹುದಾದ ಒಂದು ಪರಿಹಾರಕ್ಕೆ ನಡಿಸಿದೆ. “ಪ್ರಸಂಗ ಒಂದನ್ನು ನೀಡಲು, ದೇವರ ಸ್ತೋತ್ರಗೀತೆಗಳನ್ನು ಹಾಡುವುದರಲ್ಲಿ ನಾಯಕತ್ವವನ್ನು ವಹಿಸಲು, ವಚನಗಳನ್ನು ಓದಲು, ಪ್ರಾರ್ಥನೆಗಳನ್ನು ಹೇಳಲು ಮತ್ತು ತನ್ನ ಸಭೆಯು ಚರ್ಚಿನಿಂದ ಹೋಗುವಂತೆ ಮಾಡಲು,” ಅವನಿಗೆ ಸಮಯವನ್ನು ಕೊಡುವುದು ಎಂದು ಹೇಳಿಕೊಳ್ಳುವ ಒಂದು “ಅಚ್ಚುಕಟ್ಟಾದ ಸಣ್ಣ 22 ನಿಮಿಷಗಳ ಆರಾಧನೆಯನ್ನು” ಪಾದ್ರಿಯು ನೀಡುತ್ತಾನೆ. ಅಸೋಷಿಅಟೇಡ್‌ ಪ್ರೆಸ್‌ಗನುಸಾರ, “ಮ್ಯಾಕ್‌ಡೋನಲ್ಡ್ಸ್‌ರ ಶೀಘ್ರ ಆಹಾರದ ಹೋಟೆಲು ಆಹಾರಕ್ಕಾಗಿ ಏನನ್ನು ಮಾಡಿತ್ತೊ ಅದನ್ನು ಚರ್ಚಿಗಾಗಿ” ಶುಶ್ರೂಷಕನು ಮಾಡುವಂತೆ ಅನುಮತಿಸುತ್ತಾ, ಪ್ರಸಂಗವು ಎಂಟು ನಿಮಿಷಗಳಿಗೆ ಸೀಮಿತವಾಗಿರುವುದು. ಹಾಗಿದ್ದರೂ, “ಹಣ ಶೇಖರಣೆಯ ತಟ್ಟೆಯನ್ನು ದಾಟಿಸಲಿಕ್ಕಾಗಿ ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗುವುದು” ಎಂದು ವರದಿಯು ಕೂಡಿಸುತ್ತದೆ. (g93 9/8)

ಮೃಗಗಳಿಗಾಗಿ ಪೂಜೆ

ಇತ್ತೀಚೆಗೆ ಇಟ್ಯಾಲಿಯನ್‌ ಪಾದ್ರಿಗಳಿಂದ ಪ್ರಾಣಿಗಳು ವಿಶೇಷವಾದ ಗಮನವನ್ನು ಪಡೆಯುತ್ತಿರುವಂತೆ ತೋರುತ್ತದೆ. ಪ್ರಾಣಿಗಳಿಗೆ “ಪ್ರೀತಿಸುವ ಸಾಮರ್ಥ್ಯ ಇಲ್ಲ” ಎಂದು ಹೇಳಿದ್ದರಿಂದ ಜೆಜ್ಯೂಯಿಟ್‌ಗಳನ್ನು “ಅಸಂಪ್ರದಾಯಿಗಳು” ಮತ್ತು “ಸೃಷ್ಟಿಯ ವೈರಿಗಳೆಂದು” ಫ್ರಾಂನ್‌ಸಿಸ್‌ಕನ್‌ರ ಧಾರ್ಮಿಕ ವರ್ಗದವರು ಇತ್ತೀಚೆಗೆ ಆಪಾದಿಸಿದರು. ಚರ್ಚಿನ ನೋಟವನ್ನು ಕ್ಯಾತೊಲಿಕ್‌ ಬಿಷಪ್‌ ಮಾರ್ಯೊ ಕಾನ್‌ಚಾನಿ ಈ ರೀತಿಯಲ್ಲಿ ಪ್ರಸ್ತಾಪಿಸುತ್ತಾರೆ: “[ಕ್ಯಾತೊಲಿಕ್‌] ಚರ್ಚ್‌ ಜೀವಿಸುತ್ತಿರುವ ಎಲ್ಲಾ ಜೀವಿಗಳಿಗೆ ತೆರೆದಿದೆ.” ಆದುದರಿಂದ, ಇಟ್ಯಾಲಿಯನ್‌ ವಾರ್ತಾಪತ್ರಿಕೆ ಲಾ ರಿಪಬ್‌ಬಿಕ್ಲಾಗನುಸಾರ, ಅವರ “ಚಿಕ್ಕ ಪ್ರಾಣಿ ಮಿತ್ರರಿಗಾಗಿ” ರೋಮಿನಲ್ಲಿನ ಚರ್ಚಿಗೆ ಹೋಗುವವರು ಆಶೀರ್ವಾದಗಳನ್ನು ಪಡೆಯಲು ಬಹಳ ಸಮಯದಿಂದ ಶಕ್ತರಾಗಿದ್ದಾರೆ. ಅಂಥ ಒಂದು ಸಂದರ್ಭವನ್ನು ಘೋಷಿಸುತ್ತಾ, “ಕ್ರೈಸ್ತರೆಂದು ಹೆಚ್ಚು ಸೂಕ್ತವಾಗಿ ವರ್ಣಿಸಬಲ್ಲವರ ಜೊತೆಗೆ—ಬೆಕ್ಕುಗಳು, ನಾಯಿಗಳು, ಗಿಳಿಗಳು, ಮೊಲಗಳು, ಮತ್ತು ಒಂದು ಆಶೀರ್ವಾದವನ್ನು ಬಯಸುವ ಎಲ್ಲಾ ಪ್ರಾಣಿವರ್ಗವು ಕೂಡ ಪೂಜೆಗೆ ಹಾಜರಾಗಬಹುದೆಂದು,” ವಾರ್ತಾಪತ್ರಿಕೆಯು ವಿವರಿಸುತ್ತದೆ. (g93 8/22)

ಕಣ್ಣಿನ ಒತ್ತಡವನ್ನು ಕಡಿಮೆಗೊಳಿಸುವುದು

ನಿಮ್ಮ ದೂರದರ್ಶನ ಯಾ ಕಂಪ್ಯೂಟರ್‌ ಪರದೆಯನ್ನು ನೋಡುವುದರಿಂದ ಕಣ್ಣಿನ ಒತ್ತಡದಿಂದ ನೀವು ಕಷ್ಟಾನುಭವಿಸುತ್ತಿದ್ದರೆ, ಅದನ್ನು ಕೇವಲ ಕೆಳಗೆ ಇಟ್ಟು ಮೇಲಕ್ಕೆ ನಿರ್ದೇಶಿಸುವ ಮೂಲಕ ಪರಿಹಾರವನ್ನು ನೀವು ಕಂಡುಕೊಳ್ಳಬಹುದು. ನ್ಯೂ ಇಂಗ್ಲೆಂಡ್‌ನ ಜರ್ನಲ್‌ ಆಫ್‌ ಮೆಡಿಸಿನ್‌ನಿಂದ ಮಾಡಲಾದ ಈ ಶಿಫಾರಸ್ಸು, ಕೆಳಕ್ಕೆ ನೋಡುವುದಕ್ಕಿಂತ ನೇರವಾಗಿ ನೋಡುವಾಗ ಜನರು ತಮ್ಮ ಕಣ್ಣುಗಳನ್ನು ದೊಡ್ಡದಾಗಿ ತೆರೆಯುತ್ತಾರೆ ಮತ್ತು ಕಣ್ಣುಗಳನ್ನು ಕಡಮೆ ಬಾರಿ ಮಿಟುಕಿಸುತ್ತಾರೆಂಬ ಊಹೆಯ ಮೇಲೆ ಆಧರಿಸಿದೆ. ಕಡಮೆ ಕಣ್ಣು ಮಿಟುಕಿಸುವಿಕೆಯು ಕಣ್ಣುಗಳ ಘರ್ಷಣೆಯನ್ನು ಕಡಮೆಮಾಡುವ ಅರ್ಥದಲ್ಲಿದೆ, ಮತ್ತು ಅವುಗಳನ್ನು ದೊಡ್ಡದಾಗಿ ತೆರೆಯುವುದು ಕಣ್ಣಿನ ರಕ್ಷಣಾತ್ಮಕ ತೇವದ ಪದರದ ಬಾಷ್ಪೀಭವನವನ್ನು ಹೆಚ್ಚಿಸುತ್ತದೆ. (g93 9/8)

ಮಾರಾಟಕ್ಕಾಗಿ ಚರ್ಚುಗಳು

ಇಟಲಿಯಲ್ಲಿನ ರೋಮನ್‌ ಕ್ಯಾತೊಲಿಕ್‌ ಚರ್ಚಿಗೆ ಅದೆಷ್ಟು ಧಾರ್ಮಿಕ ಕಟ್ಟಡಗಳನ್ನು ಖಂಡಿತವಾಗಿ ಹೊಂದಿದೆ ಎಂಬುದು ಗೊತ್ತಿರುವುದಿಲ್ಲ, ಆದರೆ ಒಂದು ಸಂಗತಿ ಮಾತ್ರ ನಿಶ್ಚಿತವಾಗಿದೆ: ಅದು ಅವುಗಳೆಲ್ಲವನ್ನು ಕಾಪಾಡಿ ಕೊಳ್ಳಶಕ್ತವಾಗಿಲ್ಲ. ನಿಧಾನವಾಗಿ ಹಾಳಾಗುತ್ತಿರುವ ತೊರೆಯಲ್ಪಟ್ಟ ಚರ್ಚ್‌ ಕಟ್ಟಡಗಳ ಸಂಖ್ಯೆಯು ದಿನನಿತ್ಯವೂ ಹೆಚ್ಚುತ್ತಿದೆ. ಹೀಗೆ, ಇಟ್ಯಾಲಿಯನ್‌ ಚರ್ಚಿನ ಸಾಂಸ್ಕೃತಿಕ ನ್ಯಾಯಸಮ್ಮತ ಸ್ವತ್ತುಗಾಗಿರುವ ಸಮಿತಿಯ ಅಧ್ಯಕ್ಷರಾದ, ಪೇಟ್ರೊ ಆನ್‌ಟೊನ್‌ಯೊ ಗಾರ್ಲಾಟೊ, ಧಾರ್ಮಿಕ ಉದ್ದೇಶಗಳಿಗಾಗಿ ಇನ್ನು ಮುಂದೆ ಉಪಯೋಗಿಸದೆ ಇರುವ ಕೆಲವು ಕಟ್ಟಡಗಳನ್ನು ಮಾರಬೇಕೊ ಬೇಡವೊ ಎಂದು ಚರ್ಚು ಬೆಲೆ ಕಟ್ಟುತ್ತಾ ಇದೆ ಎಂದು ಹೇಳಿದರು. ಎಷ್ಟು ಚರ್ಚುಗಳು ಮಾರಾಟಕ್ಕೆ ಇರುವುವು? “ಒಂದು ಪೂರ್ವಭಾವಿ ಕರಡು ಅಂದಾಜು,” ಇಟಲಿಯಲ್ಲಿನ 95,000ಕ್ಕಿಂತಲೂ ಹೆಚ್ಚಾಗಿರುವ ಚರ್ಚುಗಳ “10 ಪ್ರತಿಶತದ ಸಂಖ್ಯೆಯನ್ನು ಸೂಚಿಸುತ್ತದೆ,” ಎಂದು ಇಲ್‌ ಮೆಸ್ಸಾಜೆರೊವಿನಲ್ಲಿ ಬಿಷಪ್‌ರು ವಿವರಿಸಿದರು. (g93 9/8)

ನಿಧಾನ ನಡುಗೆಯ ಒತ್ತಡ

ಜರ್ಮನಿಯ ಬರ್ಲಿನ್‌ನಲ್ಲಿರುವ ಆರ್ತೊಪೀಡಿಕ್‌ (ಅಂಗ ವಿಕಾರಗಳನ್ನು ಸರಿಪಡಿಸುವ) ವಿಶ್ವವಿದ್ಯಾನಿಲಯ ಕಿನ್ಲಿಕ್‌ನಿಂದ ಮಾಡಲಾದ ಒಂದು ಅಧ್ಯಯನಕ್ಕನುಸಾರ, ನಿಧಾನ ನಡುಗೆಯು (ಜಾಗಿಂಗ್‌), ಒಂದು ಸೈಕಲನ್ನು ಚಲಾಯಿಸುವುದಕ್ಕಿಂತ ಹತ್ತು ಬಾರಿ ಹೆಚ್ಚು ಒತ್ತಡವನ್ನು ದೇಹದ ಕೀಲುಗಳ ಮೇಲೆ ಹಾಕುತ್ತದೆ. ಆ ಉದ್ದೇಶಕ್ಕಾಗಿ ವಿಶೇಷವಾಗಿ ತಯಾರಿಸಲಾದ ಕೃತಕ ಟೊಂಕವನ್ನು ಉಪಯೋಗಿಸುತ್ತಾ, ಹಲವಾರು ಚಟುವಟಿಕೆಗಳ ಸಮಯದಲ್ಲಿ ವೈಯಕ್ತಿಕ ಕೀಲುಗಳ ಮೇಲೆ ಇರಿಸಲಾದ ಒತ್ತಡವನ್ನು ಅಳತೆ ಮಾಡುವುದರಲ್ಲಿ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನಿಗಳು ಪ್ರಥಮ ಬಾರಿಗೆ ಸಫಲರಾದರು. “ಒಂದು ಸೈಕಲನ್ನು ಚಲಾಯಿಸುವ ವ್ಯಕ್ತಿಗಳಿಗಿಂತ ನಿಧಾನವಾಗಿ ನಡೆಯುವವರು ತಮ್ಮ ಸ್ನಾಯುರಜ್ಜುಗಳನ್ನು ಮತ್ತು ಕೀಲುಗಳನ್ನು ಹೆಚ್ಚಿನ ಒತ್ತಡದ ಕೆಳಗೆ ಹಾಕುತ್ತಾರೆ ಎಂದು ಸಾಮಾನ್ಯವಾಗಿ ಊಹಿಸಲಾಗಿದ್ದರೂ ಕೂಡ, ಇಂಥ ಒಂದು ಮಹಾ ಅಪಸರಣದಿಂದ ಸಂಶೋಧಕರು ತಾವೇ ಆಶ್ಚರ್ಯಚಕಿತರಾಗಿದ್ದಾರೆಂದು,” ಸುಟ್‌ಡೊಯಿಚಾ ಜಿಟಂಗ್‌ ವರದಿಸುತ್ತದೆ. (g93 9/8)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ