ವ್ಯಾಯಾಮ ವೃದ್ಧರಿಗೆ ಪ್ರಯೋಜನ ತರುತ್ತದೆಯೆ?
“ಮುಪ್ಪಾಗಿಸುವ ಪ್ರಕ್ರಿಯೆಯನ್ನು ವ್ಯಾಯಾಮವು ಬದಲಾಯಿಸಬಲ್ಲದೊ?” ಸುಮಾರು ಐದು ವರ್ಷಗಳ ಹಿಂದೆ ಅದು ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿ ಒಂದು ತಲೆಬರಹವಾಗಿತ್ತು. ಲೇಖನವು ವರದಿಸಿದ್ದು: “ತಮ್ಮ 90ರಷ್ಟು ವೃದ್ಧ ಪ್ರಾಯದಲ್ಲಿರುವ ಜನರು, ಒಂದು ಆಕ್ರಮಣಕಾರಿ ಭಾರ ತರಬೇತಿ ವ್ಯಾಯಾಮ ಪದ್ಧತಿಯಲ್ಲಿ ಸೇರಿಸಲ್ಪಟ್ಟರೆ, ಬಲಿಷ್ಠರೂ, ತಮ್ಮ ಸ್ನಾಯುಗಳ ಗಾತ್ರವನ್ನು ಹೆಚ್ಚಿಸುವವರೂ ಆಗಬಲ್ಲರು ಎಂದು [ಬಾಸ್ಟನ್ನಲ್ಲಿರುವ] ಟಫ್ಟ್ಸ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.”
ವೃದ್ಧರು ನಿಜವಾಗಿಯೂ ವ್ಯಾಯಾಮದಿಂದ ಪ್ರಯೋಜನ ಪಡೆಯಬಲ್ಲರೆಂಬ ಪ್ರಮಾಣವು ಹೆಚ್ಚಾಗುತ್ತಾ ಮುಂದುವರಿದಿದೆ. ಇಸವಿ 1990ರ ಒಂದು ಅಧ್ಯಯನ ಕುರಿತು ಹಾರ್ವರ್ಡ್ ಹೆಲ್ತ್ ಲೆಟರ್ನ ಫೆಬ್ರವರಿ 1991ರ ಸಂಚಿಕೆ ಹೀಗೆ ವರದಿಸಿತು: “87 ಮತ್ತು 96ರ ವಯೋಮಿತಿಗಳ ನಡುವೆ ಇದ್ದ ಒಂಬತ್ತು [ನರ್ಸಿಂಗ್ ಹೋಮ್ ವಾಸಿಗಳು] ಭಾರಗಳನ್ನು ಉಪಯೋಗಿಸುತ್ತಾ, ಸ್ನಾಯುಗಳನ್ನು ಬಲಗೊಳಿಸಲು ಎರಡು ತಿಂಗಳುಗಳ ತೀವ್ರ ಶಾರೀರಿಕ ವ್ಯಾಯಾಮವನ್ನು ಪೂರ್ಣಗೊಳಿಸಿದರು.” ಈ ಅಧ್ಯಯನದ ಕುರಿತು, ಮೇಯೊ ಕಿನ್ಲಿಕ್ ನ್ಯುಟ್ರಿಷನ್ ಲೆಟರ್ ವಿವರಿಸಿದ್ದು: “ಭಾಗವಹಿಸಿದವರು ಕಾಲಿನ ಸ್ನಾಯು ಬಲವನ್ನು ಬಹುಮಟ್ಟಿಗೆ ಎರಡು ಪಟ್ಟು ಹೆಚ್ಚುಗೊಳಿಸಿ, ತೊಡೆಯ ಸ್ನಾಯು ಗಾತ್ರವನ್ನು 9 ಪ್ರತಿಶತದಿಂದ ಹೆಚ್ಚಿಸಿ, ಚಲಾವಣೆಯ ಪರೀಕ್ಷೆಗಳಲ್ಲಿ ಪ್ರದರ್ಶನವನ್ನು ಉತ್ತಮಗೊಳಿಸಿದರು.”
ಸಂಶೋಧಕರು ವರದಿಸಿದ್ದು: “ಅವರ ಬಹಳ ಮುಂದುವರಿದ ವಯಸ್ಸು, ಅತಿಯಾದ ಜಡತನದ ರೂಢಿಗಳು, ಅನೇಕ ಬಹುಕಾಲದ ರೋಗಗಳು ಮತ್ತು ಆಚಾರಾರ್ಥಕ ಅಸಾಮರ್ಥ್ಯಗಳು, ಮತ್ತು ಪೌಷ್ಟಿಕ ಕೊರತೆಗಳನ್ನು ಪರಿಗಣಿಸುತ್ತಾ, ನಮ್ಮ ವಿಷಯಗಳಲ್ಲಿ ಬಲ ತರಬೇತಿಗೆ ಇರುವ ಪ್ರಸನ್ನತೆಯುಳ್ಳ ಪ್ರತಿಕ್ರಿಯೆಯು ಗಮನಾರ್ಹವಾಗಿದೆ.” ವ್ಯಾಯಾಮದ ಮೌಲ್ಯವು ಮತ್ತೆ ಮತ್ತೆ ರುಜುವಾಗಿದೆ.
ಉದಾಹರಣೆಗೆ, ತನ್ನ ಬಲ ಪಕ್ಕವನ್ನು ನಿಸ್ಸತ್ವಗೊಳಿಸಿದ ಮತ್ತು ಒಂದು ನಡೆ ಬಂಡಿಯ ಸಹಾಯವಿಲ್ಲದೆ ನಡೆಯಲು ತನ್ನನ್ನು ಅಶಕ್ತಗೊಳಿಸಿದ ಪಾರ್ಶ್ವವಾಯುವಿನ ಹೊಡೆತವನ್ನು 1979ರಲ್ಲಿ ಅನುಭವಿಸಿದ 90 ವರ್ಷ ಪ್ರಾಯದ ಜ್ಯಾಕ್ ಸೀಬರ್ಟ್ನನ್ನು ಪರಿಗಣಿಸಿರಿ. ವಾಸ್ತವಿಕವಾಗಿ ಹತ್ತು ವರ್ಷಗಳಿಗಿಂತಲೂ ಹೆಚ್ಚು ಸಮಯ ಪ್ರತಿದಿನ ಬೆಳಗ್ಗೆ, ಅವನು ಹಾಸಿಗೆಯ ಮೇಲೆ ಮಲಗಿಕೊಂಡು ನಿಸ್ಸತ್ವಗೊಳ್ಳದ ತನ್ನ ಎಡ ಕಾಲನ್ನು ಎತ್ತರವಾಗಿ ನಿಲ್ಲಿಸಿ, ಒಂದು ಸೈಕಲನ್ನು ಪಂಪು ಮಾಡಲು ಒಬ್ಬನು ಉಪಯೋಗಿಸಬಹುದಾದ ಚಲನೆಯಲ್ಲಿ ಅದನ್ನು ಸುಮಾರು 20 ನಿಮಿಷಗಳ ಕಾಲ ಅಲ್ಲಾಡಿಸುತ್ತಾನೆ. ಕೆಲವು ಸಂದರ್ಭಗಳಲ್ಲಿ ಅವನು (ಚಿತ್ರದಲ್ಲಿ ತೋರಿಸಿದಂತೆ) ನಿಸ್ಸತ್ವಗೊಂಡ ಬಲ ಕಾಲನ್ನು ಎಡ ಕಾಲ ಮೇಲೆ ಎತ್ತಿಹಿಡಿದು ಎರಡನ್ನೂ ಜೊತೆಯಾಗಿ ಸುತ್ತ ತಿರುಗಿಸುವನು. ಈ ಕ್ರಮವಾದ ವ್ಯಾಯಾಮ, ಒಂದು ನಡೆ ಬಂಡಿಯೊಂದಿಗೆ ಅವನು ಇನ್ನೂ ನಡೆಯಸಾಧ್ಯವಾಗುವಂತೆ ಅವನ ಕಾಲ ಸ್ನಾಯುಗಳನ್ನು ಬಲಗೊಳಿಸಿವೆ ಮಾತ್ರವಲ್ಲ ಅವನ ಹೃದಯರಕ್ತನಾಳದ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಅವನಿಗೆ ಸಹಾಯಮಾಡಿದೆ ಮತ್ತು ಅವನನ್ನು ಮಾನಸಿಕವಾಗಿ ಜಾಗರೂಕನಾಗಿ ಇಟ್ಟಿದೆ.
ಆದುದರಿಂದ, ವ್ಯಾಯಾಮ ಮಾಡುವುದನ್ನು ಆರಂಭಿಸುವುದು ಎಂದೂ ತೀರ ತಡವಾದ ಸಂಗತಿಯಲ್ಲ ಎಂಬುದನ್ನು ನೆನಪಿನಲ್ಲಿಡಿರಿ. ಇಸವಿ 1990ರಲ್ಲಿ 82 ವರ್ಷ ವಯಸ್ಸಿನ ಜಾನ್ ಕೆಲಿ ಮಾಡಿದಂತೆ ಐದು ತಾಸು ಮತ್ತು ಐದು ನಿಮಿಷಗಳಲ್ಲಿ ಬಾಸ್ಟನ್ ಮ್ಯಾರತಾನ್—42 ಕಿಲೋಮೀಟರ್ ಓಟವನ್ನು ನೀವು ಎಂದಿಗೂ ಓಡಲಾರಿರಿ ನಿಜ. ಯಾ 1991ರಲ್ಲಿ 84 ವರ್ಷ ವಯಸ್ಸಿನ ಮುತ್ತಜ್ಜಿ, ಮೇವಿಸ್ ಲಿಂಡ್ಗ್ರೆನ್ ಮಾಡಿದಂತೆ, ಆ ಅಂತರವನ್ನು ಏಳು ತಾಸುಗಳು ಮತ್ತು ಒಂಬತ್ತು ನಿಮಿಷಗಳಲ್ಲಿ ಕೂಡ ನೀವು ಪೂರ್ಣಗೊಳಿಸ ಶಕ್ತರಾಗುವ ಸಾಧ್ಯತೆ ಇರಲಿಕ್ಕಿಲ್ಲ. ಆದರೂ, ಅಮೆರಿಕನ್ ಹಾರ್ಟ್ ಅಸೋಸಿಯೇಷನ್ನ ಒಂದು ಪತ್ರಿಕೆ, ಸರ್ಕ್ಯುಲೇಷನ್ ಕಳೆದ ವರ್ಷ ಪ್ರಚೋದಿಸಿದ್ದು: “ಸಕ್ರಿಯರಾಗಿರಲು ಮಾರ್ಗಗಳಿಗಾಗಿ ಹುಡುಕುವ ರೂಢಿಯನ್ನು ಮಾಡಿಕೊಳ್ಳುವುದು ಪ್ರಾಮುಖ್ಯವಾಗಿದೆ.”
ಪತ್ರಿಕೆಯು ವಿವರಿಸಿದ್ದು: “ದಿನನಿತ್ಯವೂ ಮಾಡಲಾದ ಕಡಿಮೆ ತೀವ್ರತೆಯ ಚಟುವಟಿಕೆಗಳು ಕೂಡ ಕೆಲವು ದೀರ್ಘಾವಧಿಯ ಆರೋಗ್ಯ ಪ್ರಯೋಜನಗಳನ್ನು ಮತ್ತು ಹೃದಯರಕ್ತನಾಳ ರೋಗದ ಕಡಮೆ ಗಂಡಾಂತರವನ್ನು ಹೊಂದಿರಬಲ್ಲವು. ಅಂತಹ ಚಟುವಟಿಕೆಗಳಲ್ಲಿ ಆನಂದಕ್ಕಾಗಿ ಅಡ್ಡಾಡಿಕೊಂಡು ಬರುವುದು, ತೋಟಗಾರಿಕೆ, ಪ್ರಾಂಗಣ ಕೆಲಸ, ಮನೆ ಕೆಲಸ, ನೃತ್ಯ ಮತ್ತು ಶಿಫಾರಸ್ಸು ಮಾಡಲಾದ ಮನೆ ವ್ಯಾಯಾಮವು ಒಳಗೊಂಡಿವೆ.” (g93 10/22)
[ಪುಟ 31 ರಲ್ಲಿರುವ ಚಿತ್ರ]
ಈ 90 ವರ್ಷ ವಯಸ್ಸಿನ ಪಾರ್ಶ್ವವಾಯು ಹೊಡೆತಕ್ಕೆ ತುತ್ತಾದವನು ಪಡೆದಂತೆ, ಒಬ್ಬ ವೃದ್ಧ ಅಂಗವಿಕಲ ವ್ಯಕ್ತಿಯು ವ್ಯಾಯಾಮದಿಂದ ಪ್ರಯೋಜನವನ್ನು ಪಡೆಯಬಲ್ಲನು