ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 4/8 ಪು. 20
  • ಐಸ್‌ ಕ್ರೀಮಿನ ಇತಿಹಾಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಐಸ್‌ ಕ್ರೀಮಿನ ಇತಿಹಾಸ
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಐಸ್‌ ಕ್ರೀಮನ್ನು ಮಾಡುವ ಕಲೆ
  • ಸಮುದ್ರದ ಸ್ಫಟಿಕ ಭವನಗಳು
    ಎಚ್ಚರ!—1996
  • ಆಹಾರಪಥ್ಯ ಚಿಂತೆಯ ವಿಷಯ
    ಎಚ್ಚರ!—1997
  • ಬ್ರೂನೋಸ್ಟ್‌—ನಾರ್ವೆಯ ಒಂದು ಚೀಸ್‌ ರಸಭಕ್ಷ್ಯ
    ಎಚ್ಚರ!—1997
  • ನಿಮ್ಮ ಜ್ಞಾಪಕಶಕ್ತಿಯನ್ನು ನೀವು ಉತ್ತಮಗೊಳಿಸಬಲ್ಲಿರಿ
    ಎಚ್ಚರ!—1996
ಇನ್ನಷ್ಟು
ಎಚ್ಚರ!—1994
g94 4/8 ಪು. 20

ಐಸ್‌ ಕ್ರೀಮಿನ ಇತಿಹಾಸ

ಅದರ ಆರಂಭದ ದಿನಗಳಿಗಿಂತ ಐಸ್‌ ಕ್ರೀಮ್‌ ಮಹತ್ತರವಾಗಿ ಪ್ರಗತಿಯನ್ನು ಹೊಂದಿದೆ. ಪುರಾತನ ರೋಮನರು ಸಾರ್ಬೆಟನ್ನು ಕಂಡುಹಿಡಿದರು. ಹಿಮ, ಹಣ್ಣು, ಮತ್ತು ಜೇನಿನಿಂದ ಮಾಡಲ್ಪಟ್ಟ ಅರ್ಧ ಘನೀಕರಿಸಲ್ಪಟ್ಟ ಈ ಸಿಹಿತಿಂಡಿಯನ್ನು, ಕೆಲವೊಮ್ಮೆ ಐಶ್ವರ್ಯವಂತರ ಮೇಜಿನ ಮೇಲೆ ಕಂಡುಕೊಳ್ಳಸಾಧ್ಯವಿತ್ತು. ಸಾರ್ಬೆಟ್‌ ಉತ್ಪಾದನೆ ದೀರ್ಘಕಾಲಾವಧಿಯ ಬಳಿಕ ಪರಮೋತ್ತಮಗೊಳಿಸಲ್ಪಟ್ಟಿತು. ಅದು ಮಧ್ಯಯುಗಗಳಲ್ಲಿ ಅರಬ್ಬಿ ಮುಖ್ಯ ಬಾಣಸಿಗರ ಕೈಯಲ್ಲಿ ತನ್ನ ಉಚ್ಚಸ್ಥಾನವನ್ನೇರಿತೆಂಬುದು ಸ್ಪಷ್ಟ. “ಸಾರ್ಬೆಟ್‌” ಮತ್ತು “ಷರಬತ್ತು” ಎಂಬ ಪದಗಳು ಬಹುಶಃ ಅರಬ್ಬಿ ಭಾಷೆಯ ಮೂಲವಾಗಿರಬಹುದು.

ಮುಖ್ಯವಾಗಿ ನೀರಿನಿಂದ ಮಾಡಲ್ಪಡುತ್ತಿದ್ದ ಪುರಾತನ ಶೈಲಿಯ ಪಾನಕವು, ಆಧುನಿಕ ದಿನದ ಐಸ್‌ ಕ್ರೀಮಿನ ಮೂಲರೂಪವೆಂದು ಹೇಳಸಾಧ್ಯವಿದೆ. ಹಾಲು, ಮೊಟ್ಟೆಗಳು, ಸಕ್ಕರೆ ಮತ್ತು ರುಚಿಕಾರದ ಉಪಯೋಗದಿಂದ ಒಂದು ಕೆನೆಗೂಡಿದ, ರುಚಿಕರ ಮಿಶ್ರಣವನ್ನು ಉತ್ಪತ್ತಿ ಮಾಡಿದಾಗ ಒಂದು ತಿರುಗುಬಿಂದು ತಲಪಲ್ಪಟ್ಟಿತು. ನೀವು 1600ಗಳಲ್ಲಿ ಜೀವಿಸಿದ್ದರೆ, ಫ್ರೆಂಚ್‌ ರಾಜ ಲೂಯಿ XIV ಇವನ ಆಸ್ಥಾನದಲ್ಲಿ ಉನ್ನತವರ್ಗದವರ ಮಧ್ಯೆ ಐಸ್‌ ಕ್ರೀಮಿನ ಪ್ರಥಮ ಪ್ರವೇಶಕ್ಕೆ ನೀವು ಸಾಕ್ಷಿಯಾಗಿರುತ್ತಿದ್ದಿರಿ. ಆ ಸಮಯದಲ್ಲಿ, ಜೀರ್ಣಿಸುವುದಕ್ಕೆ ಐಸ್‌ ಕ್ರೀಮ್‌ ಉತ್ತಮವೊ ಅಲ್ಲವೊ ಎಂಬುದರ ಕುರಿತು ವೈದ್ಯರುಗಳು ಮತ್ತು ಇತರ ಪಂಡಿತರ ನಡುವೆ ಸ್ಪಲ್ಪ ವಾಗ್ವಾದವಿತ್ತು.

ಐಸ್‌ ಕ್ರೀಮಿನ ಶೀತಕ ಯಂತ್ರಗಳು ಇಲ್ಲದಿರುವಾಗ ಐಸ್‌ ಕ್ರೀಮನ್ನು ಹೇಗೆ ಮಾಡಸಾಧ್ಯವಿತ್ತು? ಪ್ರಥಮವಾಗಿ, ಮರ ಮತ್ತು ಮಿಶ್ರಲೋಹದಿಂದ ಮಾಡಲ್ಪಟ್ಟಿರುವ ಎರಡು—ಒಂದರೊಳಗೆ ಇನ್ನೊಂದು—ಪಾತ್ರೆಗಳು ಉಪಯೋಗಿಸಲ್ಪಡುತ್ತಿದ್ದವು. ಸಣ್ಣ ಪಾತ್ರೆಯಲ್ಲಿ ಐಸ್‌ ಕ್ರೀಮಿನ ಮಿಶ್ರಣವನ್ನು ತಯಾರಿಸಬೇಕಿತ್ತು, ಮತ್ತು ಎರಡು ಪಾತ್ರೆಗಳ ಮಧ್ಯದಲ್ಲಿರುವ ಸ್ಥಳವನ್ನು ಹಿಮ ಮತ್ತು ಉಪ್ಪಿನಿಂದ ತುಂಬಿಸಬೇಕಾಗಿತ್ತು. ಮಿಶ್ರಣಾಂಶಗಳು ಸೇರಿಸಲ್ಪಟ್ಟ ಬಳಿಕ, ಆ ಮಿಶ್ರಣವು ಪಾತ್ರೆಯಲ್ಲಿ ಬಿಡಲ್ಪಡುತ್ತಿತ್ತು, ಮತ್ತು ಐಸ್‌ ಕ್ರೀಮ್‌ ಸಿದ್ಧವಾಗುತ್ತಿತ್ತು. ಐಸ್‌ ಕ್ರೀಮ್‌ ಎಲ್ಲಿಂದ ಬಂತು? ಚಳಿಗಾಲದಲ್ಲಿ ಹಿಮವನ್ನು ಒಟ್ಟುಗೂಡಿಸಿ, ಅದನ್ನು ಒಣಹುಲ್ಲು ಮತ್ತು ಓಕ್‌ ಮರದ ರೆಂಬೆಗಳಿಂದ ಮುಚ್ಚಿದ ಕುಳಿಗಳಲ್ಲಿ ತುಂಬುವುದರ ಮೂಲಕ ಮಂಜುಗೆಡ್ಡೆಯನ್ನು ಮಾಡಿ ಅದನ್ನು ಸಂಗ್ರಹಿಸಿಡಲು ಸಾಧ್ಯವಿದೆಯೆಂದು ಶತಮಾನಗಳ ಹಿಂದೆ ಜನರು ಕಂಡುಹಿಡಿದರು. ಹತ್ತೊಂಬತ್ತನೆಯ ಶತಮಾನದಲ್ಲಿ, ಐಸ್‌ ತಯಾರಕ ಯಂತ್ರಗಳು ಆವಿಷ್ಕರಿಸಲ್ಪಟ್ಟವು ಮತ್ತು ಅಧಿಕ ಉತ್ಪಾದನೆಗಾಗಿ ಉಪಯೋಗಿಸಲ್ಪಟ್ಟವು. ಮನೆಗಳಲ್ಲಿ ಮರ ಮತ್ತು ಬೆಂಡಿನಿಂದ ಮಾಡಲ್ಪಟ್ಟ ಹಿಮದ ಪೆಟ್ಟಿಗೆಗಳಲ್ಲಿ ಹಿಮವು ಸಂಗ್ರಹಿಸಲ್ಪಡುತ್ತಿತ್ತು.

ಐಸ್‌ ಕ್ರೀಮ್‌ ಮಾಡುವ ತಂತ್ರಕೌಶಲದಲ್ಲಿ ಈ ಶತಮಾನವು ಅಧಿಕ ಸಂಸ್ಕೃತಿಯನ್ನು ಕಂಡಿದೆ. ಶೀತಕಗಳು, ಐಸ್‌ ಕ್ರೀಮಿನ ಯಂತ್ರಗಳು, ಮತ್ತು ಇತರ ಉಪಕರಣಗಳು, ಇಂದು ಜನಾರೋಗ್ಯದ ಪ್ರಗತಿಗೊಂಡ ಮಟ್ಟಗಳೊಂದಿಗೆ, ಕೈಗಾರಿಕೆಯ ಮತ್ತು ಮನೆಯ ಐಸ್‌ ಕ್ರೀಮಿನ ಉತ್ಪಾದನೆಯನ್ನು ಸುಲಭಗೊಳಿಸಿವೆ.

ಐಸ್‌ ಕ್ರೀಮನ್ನು ಮಾಡುವ ಕಲೆ

ಐಸ್‌ ಕ್ರೀಮನ್ನು ಮಾಡುವವನೊಬ್ಬನು ತನ್ನ ವೃತ್ತಿಯ ಬಗ್ಗೆ ಅರಿತವನಾಗಿರಬೇಕು, ಅಂದರೆ ಅವನು ಒಬ್ಬ ಮಿಠಾಯಿ ತಯಾರಕನು ಮತ್ತು ಬಾಣಸಿಗನು, ಕೆಲವೊಮ್ಮೆ ಕಲಾಕಾರನೂ, ಮತ್ತು ಸ್ವಲ್ಪ ಮಟ್ಟಿಗೆ ರಸಾಯನ ಶಾಸ್ತ್ರಜ್ಞನೂ ಹಾಗೂ ಬ್ಯಾಕ್ಟೀರಿಯ ವಿಜ್ಞಾನಿ ಸಹ ಆಗಿರಬೇಕು. ಐಸ್‌ ಕ್ರೀಮನ್ನು ಅಷ್ಟೊಂದು ದಟ್ಟವಾಗಿ, ಕೆನೆಗೂಡಿದ್ದಾಗಿ, ರುಚಿಕರವಾಗಿ ಯಾವುದು ಮಾಡುತ್ತದೆ? ಒಳ್ಳೇದು, ಕೈಗಾರಿಕೆಯ ಪದ್ಧತಿಯಿಂದ ಉತ್ಪಾದಿಸಲ್ಪಟ್ಟ ಐಸ್‌ ಕ್ರೀಮನ್ನು ಉದಾಹರಣೆಯಾಗಿ ಪರಿಗಣಿಸಿ. ಉತ್ಪಾದನೆಯ ಸಮಯದಲ್ಲಿ, ಮಿಶ್ರಣವನ್ನು ದಟ್ಟಗೊಳಿಸಲಿಕ್ಕಾಗಿ ಕೊಬ್ಬುಗಳು ಮತ್ತು ತರಕಾರಿಯ ಸಾರೀಕೃತ ಸ್ವತಗಳು ಸೇರಿಸಲ್ಪಡುತ್ತವೆ. ಸಮ ಪ್ರಮಾಣದ ಮೊಟ್ಟೆಗಳು, ಸಕ್ಕರೆ, ಮತ್ತು ಅಗತ್ಯವಿರುವುದಾದರೆ, ಸ್ವಾಭಾವಿಕ ವರ್ಣಲೇಪನ ಮತ್ತು, ಕೋಕೋ, ಕಾಫಿ, ಮತ್ತು ಹಣ್ಣಿನಂತಹ ರುಚಿಕಾರಕವನ್ನು ಸಹ ಅದರಲ್ಲಿ ಬೆರಸಲಾಗುತ್ತವೆ. ಪೀನಟ್‌ ಬಟರ್‌ (ನೆಲಗಡಲೆ ಕಣಕ)ನ ಐಸ್‌ ಕ್ರೀಮ್‌ ಸಹ ಇದೆ.

ಮಿಶ್ರಣವನ್ನು, 70ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಚೆನ್ನಾಗಿ ಬೆರಸಿದ ಬಳಿಕ, ಅದರಲ್ಲಿರಬಹುದಾದ ಯಾವುದೇ ಸೂಕ್ಷ್ಮಜೀವಾಣುಗಳನ್ನು ನಾಶಪಡಿಸಲಿಕ್ಕಾಗಿ ಅದನ್ನು 90ಡಿಗ್ರಿ ಸೆಲ್ಸಿಯಸ್‌ ತಾಪಮಾನಕ್ಕೆ ತರಬೇಕು. ಕೆಲವು ತಾಸುಗಳ ತನಕ ಅದನ್ನು 4ಡಿಗ್ರಿ ಸೆಲ್ಸಿಯಸ್‌ಗೆ ತಣ್ಣಗಾಗಿಸಿದ ಬಳಿಕ, ಅದು ಗೆಡ್ಡೆಕಟ್ಟುತ್ತದೆ. ಶೀತ ಘನೀಕರಣವು ಈ ಕಾರ್ಯವಿಧಾನದ ದ್ವಿತೀಯ ಹಂತವಾಗಿದೆ. ಮಿಶ್ರಣವನ್ನು ನಿಧಾನವಾಗಿ ಕಲಕುವಾಗ, ತಾಪಮಾನವನ್ನು ಬೇಗನೆ -6ಡಿಗ್ರಿಯಿಂದ -10ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲಾಗುತ್ತದೆ. ಇದು ಐಸ್‌ ಕ್ರೀಮಿನ ಲಾಕ್ಷಣಿಕವಾದ ಕೆನೆಗೂಡುವ ರಚನೆಗೆ ನೆರವಾಗುವ ಅಂಶಗಳಲ್ಲಿ ಒಂದಾದ ಗಾಳಿಯು ಮಿಶ್ರಣದೊಳಗೆ ಪ್ರವೇಶಿಸುವಂತೆ ಬಿಡುತ್ತದೆ.

ರೋಮನರು ತಮ್ಮ ಷರಬತ್ತಿನಲ್ಲಿ ಆನಂದಿಸಿದಂದಿನಿಂದ ಮತ್ತು ಲೂಯಿ XIVನ ಆಸ್ಥಾನದಲ್ಲಿ ಐಸ್‌ ಕ್ರೀಮ್‌ ಪರಿಚಯಿಸಲ್ಪಟ್ಟಂದಿನಿಂದ ಅನೇಕ ಶತಮಾನಗಳು ಗತಿಸಿವೆ. ಆದರೆ ಮುಂದಿನ ಬಾರಿ ನಿಮ್ಮ ಮೆಚ್ಚಿನ ಘನೀಕರಿಸಿದ ಸಿಹಿಭಕ್ಷ್ಯವನ್ನು—ಒಂದು ಷರಬತ್ತಾಗಿರಲಿ ಅಥವಾ ಐಸ್‌ ಕ್ರೀಮಾಗಿರಲಿ—ಸವಿಯುವಾಗ, ಅಂತಹ ನವಚೈತನ್ಯವನ್ನುಂಟುಮಾಡುವ ಕಲ್ಪನೆಯನ್ನು ಆಲೋಚಿಸಿದ್ದಕ್ಕಾಗಿ ಮತ್ತು ಆವಿಷ್ಕರಿಸಿದ್ದಕ್ಕಾಗಿ, ಆ ಪುರಾತನ ರೋಮನರಿಗೆ ಕೃತಜ್ಞತೆ ಸೂಚಿಸಿರಿ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ