ಜೇನುನೊಣಕ್ಕೆ ಎದುರಾಗಿ ಕಂಪ್ಯೂಟರ್
ಸಾಮಾನ್ಯ ಜೇನುನೊಣವು ಎಷ್ಟು ಚಾತುರ್ಯದ್ದಾಗಿದೆ? ಪ್ರತ್ಯಕ್ಷವಾಗಿ ಇಂದಿನ ಅತಿ ಶಕ್ತಿಶಾಲಿ ಸೂಪರ್ಕಂಪ್ಯೂಟರ್ಗಳಿಗಿಂತ ಎಷ್ಟೊ ಹೆಚ್ಚು ಚತುರ. ಮತ್ತು ಸೂಕ್ಷ್ಮಾಕಾರ ಕಲೆಯಲ್ಲಿ ಅವು ಒಂದು ಕೌತುಕವೆ ಸರಿ.
ಜಗತ್ತಿನ ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ಗಳಲ್ಲೊಂದು 16 ಗಿಗಫ್ಲಾಪ್ಸ್ (ಸೆಕಂಡಿಗೆ 16,000,000,000 ಅಂಕಕರಣಗಳ) ವೇಗವುಳ್ಳ ಅಚ್ಚರಿಯ ಕಾರ್ಯಗತಿಯನ್ನು ಮುಟ್ಟಬಲ್ಲದು. ಸಾಧಾರಣ ಮನುಷ್ಯ ಪರಿಭಾಷೆಯಲ್ಲಿ, ಅಂತಹ ಕಂಪ್ಯೂಟರ್ ಪ್ರತಿ ಸೆಕಂಡಿಗೆ ಎರಡು ಸಂಖ್ಯೆಗಳ ಸಂಕಲನದಂತಹ, 1,600 ಕೋಟಿ ಸಾಮಾನ್ಯ ಅಂಕಗಣಿತ ಕ್ರಿಯೆಗಳನ್ನು ನಡಿಸಬಲ್ಲದು. ವೈದೃಶ್ಯದಲ್ಲಿ, ಒಂದು ಜೇನುನೊಣದ ಮಿದುಳಲ್ಲಿ ಸಂಭವಿಸುತ್ತಿರುವ ವಿದ್ಯುದ್ವಾಹಕ ಮತ್ತು ರಾಸಾಯನಿಕ ಘಟನೆಗಳೆಲದ್ಲರ ಒಂದು ಮಿತವಾದ ಎಣಿಕೆಯು, ಪ್ರತಿ ಸೆಕಂಡಿಗೆ ಹತ್ತು ಶತಕೋಟಿಗೆ ಸಮಮೊತ್ತದ ಕ್ರಿಯೆಗಳನ್ನು ಈ ಅಲ್ಪ ಜೇನುನೊಣವು ನಡಿಸುತ್ತದೆಂದು ತೋರಿಸುತ್ತದೆ. ವಿಸ್ಮಯಕರ!
ಜೇನುನೊಣವು ಇದನ್ನೆಲ್ಲ ಮಾಡುವಾಗಲೂ ಕಂಪ್ಯೂಟರ್ಗಿಂತ ಬಹಳ ಕಡಿಮೆ ಶಕ್ತಿಯನ್ನು ಬಳಸುತ್ತದೆ. ಬೈಟ್ ಪತ್ರಿಕೆಗೆ ಅನುಸಾರವಾಗಿ, “ಒಂದು ಜೇನುನೊಣದ ಮಿದುಳು 10 ಮೈಕ್ರೊವಾಟ್ಗಿಂತಲೂ ಕಡಿಮೆ ಶಕ್ತಿಯನ್ನು ಹರಿಯಬಿಡುತ್ತದೆ. . . . ಅದು ಇಂದು ತಯಾರಿಸಲ್ಪಡುವ ಅತ್ಯಂತ ಕಾರ್ಯಸಾಧಕ ಕಂಪ್ಯೂಟರ್ಗಳಿಗೆ ಪ್ರಮಾಣದಲ್ಲಿ ಸುಮಾರು ಏಳು ಪಾಲಷ್ಟು ಹೆಚ್ಚು ಉತ್ಕೃಷ್ಟವಾಗಿದೆ.” ಆದುದರಿಂದ, ಒಂದು ಕೋಟಿಗಿಂತಲೂ ಹೆಚ್ಚು ಜೇನುನೊಣದ ಮಿದುಳುಗಳು, ಒಂದು 100-ವಾಟ್ ವಿದ್ಯುದ್ದೀಪದ ಏಕ ಬುರುಡೆಗೆ ಬೇಕಾದ ವಿದ್ಯುಚ್ಛಕ್ತಿಯಲ್ಲಿ ಕ್ರಿಯೆನಡಿಸಬಲ್ಲವು. ಈ ಸಮಮೊತ್ತದ ಕ್ರಿಯೆಗಳನ್ನು ನಡಿಸುವುದಕ್ಕೆ ಇಂದಿನ ಕಂಪ್ಯೂಟರುಗಳಲ್ಲಿ ಅತ್ಯಂತ ಚತುರವಾದವುಗಳು ಕೋಟ್ಯಂತರ ಪಾಲಷ್ಟು ಹೆಚ್ಚು ಶಕ್ತಿಯನ್ನು ಬಳಸುತ್ತವೆ.
ಆದರೂ, ಜೇನುನೊಣಗಳು ಕಂಪ್ಯೂಟರ್ಗಳಿಗಿಂತ ಎಷ್ಟೋ ಹೆಚ್ಚನ್ನು ಮಾಡುತ್ತವೆ. ಅವು ಬಣ್ಣಗಳನ್ನು ಗುರುತಿಸಬಲ್ಲವು, ವಾಸನೆ ಹಿಡಿಯಬಲ್ಲವು, ಹಾರಬಲ್ಲವು, ನಡೆಯಬಲ್ಲವು, ಮತ್ತು ತಮ್ಮ ಸಮತೂಕವನ್ನು ಕಾಪಾಡಿಕೊಳ್ಳಬಲ್ಲವು. ಮಕರಂದದ ಮೂಲಗಳನ್ನು ಹುಡುಕಲು ಬಹಳ ದೂರಗಳ ತನಕ ಸಂಚರಿಸಿ, ಬಳಿಕ ಜೇನುಗೂಡಿಗೆ ಹಿಂದೆಬಂದು ಜೊತೆ ಜೇನುನೊಣಗಳಿಗೆ ಆದೇಶಗಳನ್ನು ಅವು ಅರುಹಬಲ್ಲವು. ಅವು ತೀರ ನುರಿತ ರಸಾಯನ ವಿಜ್ಞಾನಿಗಳೂ ಆಗಿರುತ್ತವೆ. ಜೇನು ತುಪ್ಪವನ್ನು ಮಾಡಲು ಮಕರಂದಕ್ಕೆ ವಿಶೇಷ ಕಿಣ್ವಗಳನ್ನು ಅವು ಸೇರಿಸುತ್ತವೆ. ತಮ್ಮ ಗೂಡುಗಳನ್ನು ಕಟ್ಟುವುದರಲ್ಲಿ ಮತ್ತು ದುರುಸ್ತಿಯಲ್ಲಿ ಬಳಸಲಿಕ್ಕಾಗಿ ಅವು ನೊಣಮೇಣವನ್ನು ಉತ್ಪಾದಿಸುತ್ತವೆ. ತಮ್ಮ ಮರಿಗಳಿಗಾಗಿ ರಾಯಲ್ ಜೆಲಿ (ಹಣ್ಣುಪಾಕ) ಮತ್ತು ನೊಣರೊಟ್ಟಿಯಂತಹ ವಿಶೇಷ ಆಹಾರ ಪದಾರ್ಥಗಳನ್ನು ಅವು ತಯಾರಿಸುತ್ತವೆ. ಒಳನುಗ್ಗುವವರನ್ನು ಗುರುತಿಸುವ ಮತ್ತು ಹಿಮ್ಮೆಟ್ಟಿಸುವ ಮೂಲಕ ಅವು ತಮ್ಮ ಗೂಡನ್ನು ರಕ್ಷಿಸುತ್ತವೆ.
ಅವು ಒಳ್ಳೆಯ ಗೃಹಕೃತ್ಯ ನಿರ್ವಾಹಕಗಳೂ ಆಗಿರುವುದರಿಂದ, ಕಚಡವನ್ನು ಮತ್ತು ಇತರ ಕಸಗಳನ್ನು ಕ್ರಮವಾಗಿ ಗೂಡಿನಿಂದ ಹೊರಗೆಹಾಕುತ್ತವೆ. ಚಳಿಗಾಲದಲ್ಲಿ ಉಷ್ಣತೆಗಾಗಿ ಗುಂಪಾಗಿ ಒಂದುಸೇರುವ ಮೂಲಕ ಅಥವಾ ತಿಳಿಗಾಳಿಯನ್ನು ಒಳಗೆ ಬೀಸುವ ಮೂಲಕ ಮತ್ತು ಬೇಸಗೆಯಲ್ಲಿ ನೀರನ್ನು ಚಿಮುಕಿಸುವ ಮೂಲಕ ಅವು ಗೂಡಿನಲ್ಲನ ತಾಪಮಾನವನ್ನು ನಿಯಂತ್ರಿಸುತ್ತವೆ. ಅವುಗಳ ಗೂಡು ತುಂಬಿಹೋದಾಗ, ಅವುಗಳಲ್ಲಿ ಕೆಲವು ಜೇನುನೊಣಗಳು ಬಿಟ್ಟುಹೊರಡಬೇಕೆಂದು ಅರಿಯುವಷ್ಟು ಅವುಗಳು ಚುರುಕಾಗಿವೆ. ಆದುದರಿಂದ ಅವು ಹಳೆ ಗೂಡಿಗಾಗಿ ಒಬ್ಬ ಹೊಸ ರಾಣಿಯನ್ನಾರಿಸಿಕೊಳ್ಳುತ್ತವೆ, ಮತ್ತು ಹಳೆಯ ರಾಣಿ ಮತ್ತು ಅನೇಕ ಶ್ರಮಿಕ ನೊಣಗಳು ಒಂದು ಹೊಸ ಬೀಡನ್ನು ನೆಲೆಗೊಳಿಸಲು ಹಿಂಡುಹಿಂಡಾಗಿ ಸಂಚರಿಸುತ್ತವೆ. ಆದರೆ ಮೊದಲಾಗಿ, ಹೊಸ ನಿವೇಶನಗಳನ್ನು ಶೋಧಿಸಲು ಬೇಹುಗಾರ ನೊಣಗಳನ್ನು ಕಳುಹಿಸಲಾಗುತ್ತದೆ. ಇವು ಹಿಂತಿರುಗಿ ಬಂದು ಮಾಹಿತಿಯನ್ನು ಹಂಚಿಕೊಂಡ ಬಳಿಕವೊ ಎಂಬಂತೆ, ಗೂಡಿನ ನೆಲೆಯನ್ನು “ತಿಳಿದಿರುವ” ನೊಣಗಳು ಹಿಂಡನ್ನು ಅದರ ಹೊಸ ಬೀಡಿಗೆ ನಡಿಸುತ್ತವೆ.
ಯಾವ ಬಾಹ್ಯ ಸಹಾಯ ಅಥವಾ ಮಾರ್ಗದರ್ಶನವೂ ಇಲ್ಲದೆ ಈ ವಿನೀತ ನೊಣಗಳು ಇದೆಲ್ಲವನ್ನು ಮಾಡುತ್ತವೆ. ಅವು ಸ್ವತಂತ್ರವಾಗಿ ಕಾರ್ಯನಡಿಸುತ್ತವೆ. ಆದರೂ, ಸೂಪರ್ಕಂಪ್ಯೂಟರ್ಗಳಿಗೆ ಕಾರ್ಯಕ್ರಮ ಯೋಜಕರ, ಯಂತ್ರಶಿಲ್ಪಿಗಳ, ಮತ್ತು ತಂತ್ರಜ್ಞರ ತಂಡವೆ ಬೇಕಾಗುತ್ತದೆ. ಇಲ್ಲಿ ಹೋಲಿಕೆಯೆ ಇಲ್ಲ! ಜೇನುನೊಣಗಳು ನಿಜವಾಗಿಯೂ ಸೂಕ್ಷ್ಮಾಕಾರ ಕಲೆಯ ಒಂದು ಕೌತುಕವೆ ಸರಿ.
[ಪುಟ 38 ರಲ್ಲಿರುವ ಚಿತ್ರ ಕೃಪೆ]
L. Fritz/H. Armstrong Roberts