ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 4/8 ಪು. 29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರಕ್ತದಿಂದ ಏಯ್ಡ್ಸ್‌?
  • ಡಿಲ್ಲಿಯ ಕಾಣೆಯಾಗುತ್ತಿರುವ ವ್ಯಕ್ತಿಗಳು
  • ಟಿವಿ ಹಿಂಸಾಚಾರ ಅಳೆಯಲ್ಪಡುತ್ತದೆ
  • ಭೌಗೋಲಿಕ ನ್ಯೂನ ಪೋಷಣೆ
  • ಕ್ಯೂಬದಲ್ಲಿ ಯೆಹೋವನ ಸಾಕ್ಷಿಗಳು
  • ಜಗತ್ತನ್ನು ಗಮನಿಸುವುದು
    ಎಚ್ಚರ!—1997
  • ತೊದಲುವಿಕೆ ನಿಂತುಹೋಯಿತು!
    ಎಚ್ಚರ!—1998
  • ಲೋಕವನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1994
ಇನ್ನಷ್ಟು
ಎಚ್ಚರ!—1995
g95 4/8 ಪು. 29

ಜಗತ್ತನ್ನು ಗಮನಿಸುವುದು

ರಕ್ತದಿಂದ ಏಯ್ಡ್ಸ್‌?

ಒಂದು ರಕ್ತಪೂರಣದಿಂದ ಅಥವಾ ರಕ್ತದ ಉತ್ಪನ್ನಗಳಿಂದ ಏಯ್ಡ್ಸ್‌ ಪಡೆದುಕೊಳ್ಳುವುದರ ಸಂಭವನೀಯತೆಗಳು ಯಾವುವು? ಜೊಹಾನೆಸ್‌ಬರ್ಗ್‌ನ ದ ಸ್ಟಾರ್‌ ಎಂಬ ವಾರ್ತಾಪತ್ರಿಕೆಗನುಸಾರ, ಏಯ್ಡ್ಸ್‌ ರೋಗವು ಸಮೀಕರಿಸಲ್ಪಟ್ಟಂದಿನಿಂದ ರಕ್ತ ಅಥವಾ ರಕ್ತದ ಉತ್ಪನ್ನಗಳಿಂದಾಗಿ, ಲೋಕವ್ಯಾಪಕವಾಗಿ 6,00,000 ಜನರು—ಅಥವಾ ಬಾಧಿತಿರಾದವರೆಲ್ಲರಲ್ಲಿ 15 ಪ್ರತಿಶತ ಜನರು—ಏಯ್ಡ್ಸ್‌ ರೋಗಾಣುವಿನಿಂದ ಬಾಧಿಸಲ್ಪಟ್ಟಿದ್ದಾರೆ. ಪ್ರಸ್ತುತ, ಏಚ್‌ಐವಿಗಾಗಿ ರಕ್ತ ಪರೀಕ್ಷೆ ಮಾಡುವುದು ಕಾಲವ್ಯಯಮಾಡುವಂತಹದ್ದಾಗಿದೆ ಮತ್ತು ದುಬಾರಿಯಾಗಿದೆ. ರಕ್ತವು ಕಡಿಮೆಪಕ್ಷ ಏಳು ವಿವಿಧ ಪರೀಕೆಗ್ಷಳಿಗೆ ಒಳಗಾಗಬೇಕು ಎಂದು ಕೆಲವರು ತೀರ್ಮಾನಿಸುತ್ತಾರೆ. ಅನೇಕವೇಳೆ, ಈ ಪರೀಕ್ಷೆಗಳನ್ನು ಉಪಯೋಗಿಸಲಿಕ್ಕಾಗಿ ವರ್ಧಿಷ್ಣು ದೇಶಗಳು ಆರ್ಥಿಕ ಸಂಪನ್ಮೂಲಗಳನ್ನಾಗಲಿ ತರಬೇತಿಯನ್ನಾಗಲಿ ಹೊಂದಿರುವುದಿಲ್ಲ. ಎಲ್ಲಿ ಪರೀಕ್ಷೆಗಳು ನಡೆಸಲ್ಪಡುತ್ತವೋ ಆ ಸಂಪದ್ಭರಿತ ದೇಶಗಳಲ್ಲಿ ಸಹ, ದೋಷಗಳಿವೆ. ಡಚ್‌ ರಕ್ತಪೂರಣ ಇಲಾಖೆಯ ವೈದ್ಯಕೀಯ ಮುಖ್ಯಸ್ಥರಾದ ಪಾಲ್‌ ಸ್ಟ್ರೆಂಗರ್ಸ್‌ ಒಪ್ಪಿಕೊಳ್ಳುವುದು: “ಏಚ್‌ಐವಿ ರೋಗಾಣು ಅಥವಾ ಹೆಪಟೈಟಿಸ್‌ಗೆ ಸಂಬಂಧಿಸಿದಂತೆ, ರಕ್ತದ ಯಾವುದೇ ಉತ್ಪನ್ನವು 100 ಪ್ರತಿಶತ ಸುರಕ್ಷಿತ ಎಂದು ನಾವು ಹೇಳಲಾರೆವು.” (g95 3⁄22)

ಡಿಲ್ಲಿಯ ಕಾಣೆಯಾಗುತ್ತಿರುವ ವ್ಯಕ್ತಿಗಳು

ಭಾರತದ ರಾಜಧಾನಿಯಾದ ಡಿಲ್ಲಿಯಲ್ಲಿ ಪ್ರತಿ ವರ್ಷ 10,000ಕ್ಕಿಂತಲೂ ಹೆಚ್ಚು ಜನರು ಕಾಣೆಯಾಗುತ್ತಿದ್ದಾರೆಂದು ವರದಿಸಲ್ಪಡುತ್ತದೆ. ಇವುಗಳಲ್ಲಿ, ಮೂರನೇ ಒಂದು ಭಾಗ ಮಾತ್ರವೇ ಯಾವಾಗಲಾದರೂ ಪತ್ತೆ ಹಚ್ಚಲ್ಪಡುತ್ತದೆ. ಐವತ್ತು ಪ್ರತಿಶತ 18ರ ಕೆಳಗಿನ ಪ್ರಾಯದ ಮಕ್ಕಳು, ಮತ್ತು 1ಕ್ಕೆ 2ರಂತೆ ಪುರುಷರ ಸಂಖ್ಯೆಯು ಸ್ತ್ರೀಯರ ಸಂಖ್ಯೆಗಿಂತ ಅಧಿಕವಾಗಿದೆ. ಟೈಮ್ಸ್‌ ಆಫ್‌ ಇಂಡಿಯದಲ್ಲಿ ವರದಿಸಲ್ಪಡುವಂತೆ, ಸಾವಿರಾರು ಎಳೆಯ ಹುಡುಗಿಯರು ವೇಶ್ಯಾಗೃಹಗಳಿಗೆ ಕಟ್ಟಕಡೆಗೆ ತಲಪುತ್ತಾರೆ. ಎಳೆಯ ಹುಡುಗರು ಅಪರಾಧಿಗಳ ಗ್ಯಾಂಗ್‌ಗಳಿಂದ ಭಿಕ್ಷಾವೃತ್ತಿಗೆ ಒತ್ತಾಯಿಸಲ್ಪಡುತ್ತಾರೆ ಅಥವಾ ಸಣ್ಣ ಫಲಾಹಾರಮಂದಿರಗಳಲ್ಲಿ ಕಡಿಮೆ ಸಂಬಳಕ್ಕೆ ದೀರ್ಘ ತಾಸುಗಳ ವರೆಗೆ ಕೆಲಸ ಮಾಡುವಂತೆ ಮಾಡಲ್ಪಡುತ್ತಾರೆ. (g95 4⁄8)

ಟಿವಿ ಹಿಂಸಾಚಾರ ಅಳೆಯಲ್ಪಡುತ್ತದೆ

ಅಮೆರಿಕನ್‌ ಟಿವಿಯಲ್ಲಿನ ಹಿಂಸಾಚಾರದ ಕುರಿತು ಎಲ್ಲ ಗೊಂದಲವಿದ್ದಾಗ್ಯೂ, ಮತ್ತು ಅದನ್ನು ನಿಗ್ರಹಿಸಲು ಟಿವಿ ನೆಟ್‌ವರ್ಕ್‌ಗಳಿಂದ ಅನೇಕ ವಾಗ್ದಾನಗಳು ಕೊಡಲ್ಪಟ್ಟಿರುವಾಗ್ಯೂ, ಟಿವಿಯಲ್ಲಿನ ಹಿಂಸಾಚಾರವು ಕಳೆದ ಎರಡು ವರ್ಷಗಳಲ್ಲಿ ವಾಸ್ತವವಾಗಿ ಅಧಿಕಗೊಂಡಿದೆ ಎಂದು ವಿವಾದಾತ್ಮಕವಾದ ಹೊಸ ಅಧ್ಯಯನವೊಂದು ಪ್ರತಿಪಾದಿಸುತ್ತದೆ. ವಾರ್ತಾಮಾಧ್ಯಮದ ಕೇಂದ್ರ ಹಾಗೂ ಸಾರ್ವಜನಿಕ ವಿಚಾರಗಳಿಂದ ಆ ಅಧ್ಯಯನವು ನಡೆಸಲ್ಪಟ್ಟಿತು ಮತ್ತು ಹತ್ತು ಸ್ಟೇಶನ್‌ಗಳಲ್ಲಿ ಒಂದು ದಿನದ ಕಾರ್ಯಕ್ರಮ ಯೋಜನೆಯನ್ನು ಪರೀಕ್ಷಿಸುವ ಮೂಲಕವಾಗಿ ಹಾಗೂ ಆ ವಿಷಯಾನುಕ್ರಮಣಿಕೆಯನ್ನು, ಎರಡು ವರ್ಷಗಳ ಮೊದಲ ಅದೇ ತಾರೀಖಿನ ಕಾರ್ಯಕ್ರಮ ಯೋಜನೆಯೊಂದಿಗೆ ಹೋಲಿಸುವ ಮೂಲಕವಾಗಿ ಅದು ತನ್ನ ನಿರ್ಣಯಗಳನ್ನು ತಲಪಿತು. ಶಾರೀರಿಕ ಹಾನಿ ಅಥವಾ ಸ್ವತ್ತಿನ ನಾಶನದಲ್ಲಿ ಫಲಿಸುವ ಶಾರೀರಿಕ ಬಲಪ್ರಯೋಗದ ಉದ್ದೇಶಪೂರ್ವಕವಾದ ಕೃತ್ಯಗಳು ಎಂದು ನಿರೂಪಿಸಲ್ಪಡುವ ಹಿಂಸಾಚಾರದ ಕೃತ್ಯಗಳು, ಎರಡು ವರ್ಷಗಳಾವಧಿಯಲ್ಲಿ 41 ಪ್ರತಿಶತದಷ್ಟು ಅಧಿಕಗೊಂಡಿವೆಯೆಂದು ಅದು ಕಂಡುಕೊಂಡಿತು. ಗಂಭೀರವಾದ ಹಿಂಸಾಚಾರದ ಕೃತ್ಯಗಳು, ಜೀವಕ್ಕೆ ಬೆದರಿಕೆಹಾಕುವಂತೆ ಅಥವಾ ಗಂಭೀರವಾದ ನಷ್ಟವನ್ನು ಉಂಟುಮಾಡಬಹುದಾದಂತೆ ನಿರೂಪಿಸಲ್ಪಟ್ಟಿದ್ದವು, ಮತ್ತು ಇವುಗಳ ಸಂಖ್ಯೆಯು 67 ಪ್ರತಿಶತಕ್ಕೇರಿತು. “ಹಿಂಸಾತ್ಮಕ ಘಟನೆಗಳ ಸರಾಸರಿ ಪ್ರಮಾಣವು, ಒಂದು ಚ್ಯಾನಲ್‌ನಲ್ಲಿ ತಾಸೊಂದಕ್ಕೆ 10ರಿಂದ ಬಹುಮಟ್ಟಿಗೆ 15 ದೃಶ್ಯಗಳ ವರೆಗೆ ಅಧಿಕಗೊಂಡಿತು” ಎಂದು ಟಿವಿ ಗೈಡ್‌ ವರದಿಸುತ್ತದೆ. (g95 3⁄22)

ಭೌಗೋಲಿಕ ನ್ಯೂನ ಪೋಷಣೆ

ಭೌಗೋಲಿಕವಾಗಿ, ನ್ಯೂನ ಪೋಷಣೆಯ ಕುರಿತು ಶುಭವಾರ್ತೆ ಮತ್ತು ಅಶುಭವಾರ್ತೆ, ಎರಡೂ ಇದೆ. ಗ್ಲೋಬಲ್‌ ಚೈಲ್ಡ್‌ ಹೆಲ್ತ್‌ ನ್ಯೂಸ್‌ ಆ್ಯಂಡ್‌ ರಿವ್ಯೂಗನುಸಾರ, ನ್ಯೂನ ಪೋಷಣೆಯಿಂದ ಕಷ್ಟಾನುಭವಿಸುವ, ಐದು ವರ್ಷಗಳ ಪ್ರಾಯಕ್ಕಿಂತ ಕೆಳಗಿನ ಎಲ್ಲ ಮಕ್ಕಳ ಶೇಕಡಾ ಪ್ರಮಾಣವು, 1975ರಲ್ಲಿ 42 ಪ್ರತಿಶತದಿಂದ 1990ರಲ್ಲಿ 34 ಪ್ರತಿಶತಕ್ಕೆ ಇಳಿಯಿತು. ಆದರೂ, ನ್ಯೂನ ಪೋಷಿತ ಮಕ್ಕಳ ಸಮಗ್ರ ಸಂಖ್ಯೆಯು ವರ್ಧಿಸಿದೆ. ವರ್ಧಿಷ್ಣು ದೇಶಗಳಲ್ಲಿ, ಐದು ವರ್ಷಗಳ ಕೆಳಗಿನ ಸುಮಾರು 19.3 ಕೋಟಿ ಮಕ್ಕಳು ಮಿತವಾಗಿ ಅಥವಾ ಗಂಭೀರವಾಗಿ ಕಡಿಮೆ ತೂಕವುಳ್ಳವರಾಗಿದ್ದಾರೆ, ಮತ್ತು ಅವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ತೀವ್ರವಾಗಿ ನ್ಯೂನ ಪೋಷಿತರಾಗಿದ್ದಾರೆ. ಒಂದು ಮಗುವಿಗೆ ತುಸು ನ್ಯೂನ ಪೋಷಣೆಯಾಗಿರುವಲ್ಲಿ, ರೋಗದಿಂದ ಸಾಯುವ ಅಪಾಯವು ಇಮ್ಮಡಿಗೊಳಿಸಲ್ಪಡುತ್ತದೆ ಎಂದು ವಾರ್ತಾಪತ್ರಿಕೆಯು ಗಮನಿಸುತ್ತದೆ. ಮಿತವಾಗಿ ನ್ಯೂನ ಪೋಷಣೆಯಾಗಿರುವ ಒಂದು ಮಗುವಿಗೆ ಅಪಾಯವು ಮುಮ್ಮಡಿಗೊಳಿಸಲ್ಪಡುತ್ತದೆ. ತೀಕ್ಷ್ಣವಾಗಿ ನ್ಯೂನ ಪೋಷಣೆಯಾಗಿರುವ ಒಂದು ಮಗುವಿಗೆ, ರೋಗದಿಂದ ಸಾಯುವ ಅಪಾಯವು 11 ಬಾರಿ ಹೆಚ್ಚು ಅಧಿಕವಾಗಿದೆ. ಉದ್ಯಮಶೀಲ ದೇಶಗಳಲ್ಲಿ, ಮಕ್ಕಳಲ್ಲಿ ನ್ಯೂನ ಪೋಷಣೆಯ ಅತ್ಯಂತ ಸಾಮಾನ್ಯ ರೂಪವು ಬೊಜ್ಜಾಗಿದೆ ಎಂದು ವಾರ್ತಾಪತ್ರಿಕೆಯು ವರದಿಸುತ್ತದೆ. ಉದಾಹರಣೆಗಾಗಿ, ಉತ್ತರ ಅಮೆರಿಕದಲ್ಲಿ, ಮಕ್ಕಳು ತಮ್ಮ ಬಲ ಪೂರೈಕೆಯಲ್ಲಿ 50 ಪ್ರತಿಶತದಷ್ಟನ್ನು ಕೊಬ್ಬುಗಳಿಂದ ಪಡೆದುಕೊಳ್ಳುತ್ತಾರೆ—ಅದು “ಶಿಫಾರಸ್ಸು ಮಾಡಲ್ಪಟ್ಟಿರುವ ಪ್ರಮಾಣಕ್ಕಿಂತ ಇಮ್ಮಡಿ”ಯಾಗಿದೆ. (g95 3⁄22)

ಕ್ಯೂಬದಲ್ಲಿ ಯೆಹೋವನ ಸಾಕ್ಷಿಗಳು

ಕ್ಯೂಬದಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಶುಶ್ರೂಷೆಯನ್ನು ನಿರ್ವಹಿಸಲು ಹೆಚ್ಚು ಸ್ವಾತಂತ್ರ್ಯವನ್ನು ಅನುಭೋಗಿಸುತ್ತಿದ್ದಾರೆ; ಅದು ಜನರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚುವಂತೆ ಅವರನ್ನು ಶಕ್ತರನ್ನಾಗಿ ಮಾಡಿದೆ. ಆ ಕೆಲಸವು ಅಧಿಕೃತವಾಗಿ ಅಂಗೀಕರಿಸಲ್ಪಡದಿದ್ದರೂ ಮತ್ತು ನ್ಯಾಯಸಮ್ಮತವಾಗಿಲ್ಲದಿರುವುದಾದರೂ, ಅವರು ತಮ್ಮ ಹಿಂದಿನ ಆಫೀಸುಗಳನ್ನು ಉಪಯೋಗಿಸುವಂತೆ ಅನುಮತಿಸಲ್ಪಟ್ಟಿದ್ದಾರೆ ಮತ್ತು ಆರಾಧನೆಗಾಗಿ ಎಷ್ಟು ಹೆಚ್ಚು ಸ್ವತಂತ್ರವಾಗಿ ಅವರು ಕೂಡಿಬಂದಿದ್ದಾರೆಂದರೆ, ಅವರು ಸಣ್ಣ ಸಮ್ಮೇಳನಗಳನ್ನು ನಡೆಸಿದ್ದಾರೆ. ಪತ್ರಿಕೆಗಳನ್ನು ಮುದ್ರಿಸುವಂತೆ ಅವರಿಗೆ ಅಧಿಕಾರವು ಕೊಡಲ್ಪಟ್ಟಿದೆ. ಈ ಘಟನೆಗಳಿಂದ ಹರ್ಷ ಮತ್ತು ಹುರುಪಿನಿಂದ ತುಂಬಿದವರಾಗಿದ್ದು, ಸಾಕ್ಷಿಗಳು ಬೈಬಲಿನ ನಿರೀಕ್ಷೆಯ ಸಂದೇಶವನ್ನು ಒಯ್ಯಲು ಶ್ರಮಿಸುತ್ತಾ, ತಮ್ಮ ಸಾರುವ ಕೆಲಸವನ್ನು ಮುಂದುವರಿಸುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ