ಟಾನ್ಸೆನೀಯದಲ್ಲಿ ರಾತ್ರಿಯ ಒಂದು ಭೇಟಿ
ಕೆನ್ಯದಲ್ಲಿ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನ ಮುಗಿದ ಬಳಿಕ ನಾವು ಟಾನ್ಸೆನೀಯದೊಳಗೆ ನಮ್ಮ ಸ್ವಂತ ಫೋಟೊ ಸಫಾರಿಯನ್ನು ಭಾವೂದ್ರೇಕದಿಂದ ಪ್ರಾರಂಭಿಸಿದೆವು.
ನಮ್ಮ ಪ್ರಥಮ ನಿಲುಗಡೆಯು ಲೇಕ್ ಮಾನ್ಯಾರಾ ನ್ಯಾಷನಲ್ ಪಾರ್ಕ್. ವಿವಿಧ ಕಾಡುಪ್ರಾಣಿಗಳನ್ನು—ನೀಲ ಕೋತಿಗಳು, ಇಂಪಾಲಾ ಜಿಂಕೆಗಳು, ಕೇಪ್ ಕಾಡುಕೋಣ, ಜೀಬ್ರಗಳು ಇತ್ಯಾದಿ—ನೋಡಿ ನಾವು ಬೆರಗಾದೆವು. ನೀರಾನೆಗಳು ಚುಕ್ಕೆಗಳಂತೆ ಹರಡಿರುವ ಒಂದು ಕೊಳದ ಮೇಲಿಂದ ಅವನ್ನು ದಿಟ್ಟಿಸು ನೋಡುವುದನ್ನು ಭಾವಿಸಿರಿ. ಆಚೆ ಪಕ್ಕದಲ್ಲಿ ನೀವೊಂದು ಜಿರಾಫೆ ಮೇಯುವುದನ್ನು, ಒಂದು ಸಿಂಹ ದೂರದ ಹುಲ್ಲಿನಲ್ಲಿರುವುದನ್ನು, ಮತ್ತು ಅದರಾಚೆಗೆ ನೂ ಜಿಂಕೆಗಳ ಗುಂಪೊಂದನ್ನು ಪ್ರೇಕ್ಷಿಸುತ್ತೀರಿ.
ಎಂಗೋರೋಂಗೋರೋ ಕುಂಡಕ್ಕೆ ಬಂದ ಮೇಲೆ, ನಾವು ಒಬ್ಬ ಗೈಡ್ ಮತ್ತು ಒಂದು ಫೋರ್ ವ್ಹೀಲ್ ಡ್ರೈವ್ನ ವಾಹನವನ್ನು ಕಾಲ್ಡೇರ (ಕುಸಿದ ಜ್ವಾಲಾಮುಖಿಯ ಕುಂಡ) ದೊಳಗೆ ದಿನದ ಪ್ರಯಾಣಕ್ಕಾಗಿ ಹೋಗಲು ಕೂಲಿಗೆ ಇಟ್ಟುಕೊಂಡೆವು. ಆ ಉಬ್ಬುತಗ್ಗಿನ ಪ್ರಯಾಣ ನಮ್ಮನ್ನು ಅಂಚಿನಿಂದ ಸುಮಾರು 600 ಮೀಟರ್ ದೂರದ ಕುಂಡದ ತಳಕ್ಕೆ ಕೊಂಡೊಯ್ಯಿತು. ಎಂತಹ ಒಂದು ದೃಶ್ಯ! ಕಾಡುಪ್ರಾಣಿಗಳು ವಿಶಾಲವಾದ ಬಯಲಿನಲ್ಲೆಲ್ಲ ಹರಡಿಕೊಂಡಿದ್ದವು. ನೂ ಜಿಂಕೆಗಳ ಹಿಂಡುಗಳು ವಲಸೆ ಹೋಗುತ್ತವೆಯೊ ಎಂಬಂತೆ ಚಲಿಸುತ್ತಿದ್ದವು. ಜೀಬ್ರಗಳು, ಹಾರ್ಟ್ಬೀಸ್ಟ್ ಜಿಂಕೆಗಳು, ಥಾಂಪ್ಸನ್ಸ್ ಮತ್ತು ಗ್ರ್ಯಾಂಟ್ಸ್ ಜಿಂಕೆಗಳು ಹೇರಳವಾಗಿದ್ದವು. ಒಂದು ನಿಲುಗಡೆಯಲ್ಲಿ, ಒಂದು ಕೇಸರ ಸಿಂಹ, ನಾವು ನೇರವಾಗಿ ಅದರ ಮೇಲಿಂದ ನೋಡುತ್ತಿದ್ದೇವೆ ಎಂಬ ವಿಷಯದಲ್ಲಿ ಅಚಿಂತಿತವಾಗಿ ನಮ್ಮ ವಾಹನದ ನೆರಳಲ್ಲಿ ವಿಶ್ರಮಿಸಿತು. ಆ ಬಳಿಕ ನಾವು ದೂರದಲ್ಲಿದ್ದ ಕರಿ ಖಡ್ಗಮೃಗವನ್ನು ಮತ್ತು ಹತ್ತಿರದಲ್ಲಿ ಮರಗಳಿಂದ ತಿನ್ನುತ್ತಿದ್ದ ಕಾಡಾನೆಗಳನ್ನು ನೋಡಲು ನಿಂತೆವು. ನಾವು ಅಂಚಿನ ಕಡೆಗೆ ಹಿಂದೆ ವಾಹನ ಚಲಿಸುತ್ತಿದ್ದಾಗ ಎಷ್ಟೋ ವಿಶಿಷ್ಟ ಲಕ್ಷಣಗಳ ಪ್ರಾಣಿಗಳನ್ನು ನೆನಪಿಸಿಕೊಂಡೆವು. ನಮಗೆ ನೋಡಸಿಗದಿದ್ದ ಯಾವುದಾದರೂ ಇತ್ತೊ?
ಹೌದು, ಆಫ್ರಿಕನ್ ಚಿರತೆ. ಆದರೆ ಕಾಡಿನಲ್ಲಿ ಇದನ್ನು ನೋಡುವ ನಿರೀಕ್ಷೆ ಒಂದು ಭ್ರಾಂತಿಯೆ. ಛಾಯಾಚಿತ್ರಗ್ರಾಹಕ ಅರ್ವಿನ್ ಬಾವರ್ ಗಮನಿಸಿದ್ದು: “ಪ್ರವಾಸಿಗಳು ಚಿರತೆಯನ್ನು ವಿಪರೀತ ಉತ್ಸಾಹ ಮತ್ತು ಶ್ರದ್ಧೆಯಿಂದ ಬೆನ್ನಟ್ಟುತ್ತಾರೆ. ಇದಕ್ಕೆ ಕಡಮೆ ಪಕ್ಷ ಆಂಶಿಕ ಕಾರಣವು, ಫೋಟೊ ಹಿಡಿಯುವುದಂತೂ ಬಿಡಿರಿ, ಅದನ್ನು ಕಂಡುಹಿಡಿಯುವುದು ಸಹ ವಿಪರೀತ ಕಷ್ಟಕರ. ಪ್ರತಿನಿಧಿರೂಪದ ಸಫಾರಿಗಳ ಪ್ರವಾಸಿಗಳಿಗೆ ಅದರ ಕಣ್ಷಿಕ ದರ್ಶನವೂ ಆಗುವುದಿಲ್ಲ. ನನ್ನ 15 ಸಫಾರಿಗಳ ಸಮಯದಲ್ಲಿ, ನಾನು ಒಟ್ಟಿಗೆ ಎಂಟು ಚಿರತೆಗಳನ್ನು ಕಂಡಿದ್ದೇನೆ. ಫೋಟೊ ಹಿಡಿಯುವಷ್ಟು ದೂರದಲ್ಲಿ ಸಿಕ್ಕಿದ್ದು ಒಂದೇ ಒಂದು.”—ಇಂಟರ್ನ್ಯಾಷನಲ್ ವೈಲ್ಲ್ಡೈಫ್.
ರಾತ್ರಿಯಾಗುವುದರೊಳಗೆ, ನಮ್ಮ ಮನಸ್ಸಿನಲ್ಲಿ ಇನ್ನೊಂದು ಸಮಸ್ಯೆಯಿತ್ತು. ಒಂದು ಬಾಡಿಗೆಯ ವಸತಿಸ್ಥಳದಲ್ಲಿ ಕಾಯ್ದಿಟ್ಟಿದ್ದ ವಸತಿ ರದ್ದಾಗಿದುದ್ದರಿಂದ ನಮಗೆ ವಾಸಸ್ಥಳವನ್ನು ಹುಡುಕಲಿಕ್ಕಿತ್ತು. ಇದು ನಮ್ಮನ್ನು ಕರಾಳ ರಾತ್ರಿಯಲ್ಲಿ ಒಂದು ಮಣ್ಣಿನ ರಸ್ತೆಗೆ ನಡಿಸಿತು. ಥಟ್ಟನೆ ಎದುರಿನ ಆಸನಗಳಲ್ಲಿದ್ದ ನಾವಿಬ್ಬರು ಬೆಚ್ಚಿಬಿದ್ದೆವು. ಕಂದು ಬಣ್ಣದ ಒಂದು ಅಸ್ಪಷ್ಟ ವಸ್ತು ನೇರವಾಗಿ ನಮ್ಮ ಮುಂದೀಪದ ಪ್ರಕಾಶದೊಳಕ್ಕೆ ಹಾರಿತು. ನಾವು ಒಡನೆ ವಾಹನ ನಿಲ್ಲಿಸಿ ಆಶ್ಚರ್ಯದಿಂದ ಮೇಲುಸಿರು ಸೆಳೆದೆವು!
ಅಲ್ಲಿ, ನೇರವಾಗಿ ನಮ್ಮ ಮುಂದೆ ಒಂದು ಪೂರ್ಣ ಬೆಳೆದಿದ್ದ ಚಿರತೆಯಿತ್ತು! ಹಿಂದೆ ಕೂತಿದ್ದವರು ನಮಗೆ ನೋಡಲು ಸಿಕ್ಕಲಿಲ್ಲವಲ್ಲಾ ಎಂದು ಹೇಳುವಂತಿದ್ದರೆ ಆ ಪ್ರತಿಕೂಲ ಪರಿಸ್ಥಿತಿ ಅದೇ ಕ್ಷಣದಲ್ಲಿ ಅಂತ್ಯಗೊಂಡಿತು. ಆ ಚಿರತೆ ರಸ್ತೆಯ ಬಲಪಕ್ಕಕ್ಕೆ ಧಾವಿಸಿ ಸ್ತಬ್ಧವಾಗಿ ನಿಂತಿತು. ಆ ಬೆಳಕುಗಳಲ್ಲಿ ಮತ್ತು ನಮ್ಮೆಲ್ಲರ ವೀಕ್ಷಣದಲ್ಲಿ, ‘ಈಗ ನಾನೇನು ಮಾಡಲಿ,’ ಎಂದು ಅದು ಚಿಂತಿಸುತ್ತಿರುವಂತೆ ತೋರಿತು. ‘ಆಕ್ರಮಣ ಮಾಡಲೊ ಅಥವಾ ಅಜ್ಞಾತ “ಶತ್ರು”ವಿಗೆ ಬೆನ್ನುಹಾಕಿ ಪೊದೆಗಳ ಮಧ್ಯೆ ಓಡಿಹೋಗಲೊ?’
ನಮ್ಮ ಸಂಗಾತಿಗಳಲ್ಲೊಬ್ಬರಾಗಿದ್ದ ಏಡ್ರಿಯನ್, ಈ ಸುರುಳಿಸುತ್ತಿದ ಶಕ್ತಿಯ ಸ್ಪ್ರಿಂಗಿನಿಂದ ಮತ್ತು ಸೌಂದರ್ಯದಿಂದ ಕೇವಲ ಒಂದು ಮೀಟರ್ ದೂರದಲಿದ್ದರು. “ಬೇಗ, ಫ್ಲ್ಯಾಶ್ಬಲ್ಬ್ ಕೊಡಿ,” ಎಂದು ಪಿಸುಗುಟ್ಟಿದರು ಅವರು, ತನ್ನ ಪೂರ್ತಿ ಸ್ವಯಂಚಾಲಿತ ಕ್ಯಾಮರವನ್ನು ಹಿಡಿಯಲು ಕೈಹಾಕುತ್ತಾ. ಹಿಂದಿನಿಂದ, “ಸದ್ದು ಮಾಡಬೇಡಿ,” ಎಂಬ ಪಿಸುಪಿಸುಗುಟ್ಟುವ ಎಚ್ಚರಿಕೆಯ ಮಾತುಗಳು ಬಂದವು. ಕ್ಯಾಮರವನ್ನು ಒಡನೆ ಸಿದ್ಧಮಾಡಿ ಫೋಟೊ ಹಿಡಿಯಲಾಯಿತು, ಆದರೆ ಫ್ಲಾಶ್, ವಾಹನದ ಒಳಗೆ ವಿಚಲನಗೊಂಡದ್ದರಿಂದ ಅದು ನಿಷ್ಫಲವಾದಂತೆ ತೋರಿತು. ಬ್ಯಾಟರಿಗಳು ಪುನಃ ತುಂಬುವ ಸಮಯದಲ್ಲಿ ಏಡ್ರಿಯನ್ ತನ್ನ ಕಿಟಿಕಿಯನ್ನು ಸಾವಧಾನವಾಗಿ ಕೆಳಗಿಳಿಸಿದರು. ಬಾಲದ ತುದಿಯನ್ನು ಸ್ಪಂದಿಸುತ್ತಾ, ಹೊಳೆಯುವ ಕಣ್ಣುಗಳಿದ್ದ ಆ ಚಿರತೆ ಕೈ ಎಟಕುವಷ್ಟು ದೂರದಲ್ಲಿತ್ತು.
ನಾವು ಎರಡನೆಯ ಸಲ ಚಿತ್ರ ಹಿಡಿದೊಡನೆ, ಅದು ಏನು ಮಾಡಬೇಕೆಂದು ನಿರ್ಣಯಿಸಿತು. ಆ ಅತಿ ಸೊಗಸಾದ ಚಿರತೆ ಕುರುಚಲಿನೊಳಗೆ ಹಾರಿ ಮಾಯವಾಯಿತು. ನಮ್ಮ ವಾಹನದೊಳಗೆ ಎಂತಕ ಭಾವೋದ್ರೇಕ! ಮರೆಯಲಾಗದ ಒಂದು ಅನುಭವ; ಅಂತಹ ಅನುಭವ ಅತಿ ವಿರಳವೆಂದು ಆ ಗೈಡ್ ಆಮೇಲೆ ಹೇಳಿದನು. ಆ ಎರಡನೆಯ ಫೋಟೊ ತೀರ ಅತ್ಯುತ್ತಮವಾಗಿ ತೆಗೆಯಲ್ಪಟ್ಟದ್ದಾಗಿ ಪರಿಣಮಿಸಿದಾಗ, ಟಾನ್ಸೆನೀಯದಲ್ಲಿ ಆ ರೋಮಾಂಚಕ ರಾತ್ರಿಯ ಭೇಟಿಯ ಸ್ಮರಣೆಯನ್ನು ಪುಷ್ಟೀಕರಿಸಲು ಅದು ನಮ್ಮಲ್ಲಿತ್ತು.