ಜಗತ್ತನ್ನು ಗಮನಿಸುವುದು
ಹೆಚ್ಚು ಉತ್ತಮವಾಗಿ ಓದುವ ಮತ್ತು ಬರೆಯುವ ಮಕ್ಕಳು
“ಎಳೆಯರಿಗೆ ಓದುವುದು, ಬರೆಯುವ ಕೌಶಲ್ಯಗಳನ್ನು ವರ್ಧಿಸುತ್ತದೆ” ಎಂದು ಕೆನಡದ ವಾರ್ತಾಪತ್ರಿಕೆ ಗ್ಲೋಬ್ ಆ್ಯಂಡ್ ಮೇಲ್ ವರದಿಸುತ್ತದೆ. ಕೆನಡದ, ಒಂಟ್ಯಾರಿಯೊ ಶಿಕ್ಷಣ ಇಲಾಖೆಯಿಂದ ನಡಿಸಲ್ಪಟ್ಟ ಇತ್ತೀಚೆಗಿನ ಪರೀಕ್ಷೆಗಳ ಫಲಿತಾಂಶಗಳಿಗನುಸಾರ, ತಾವು ಬೆಳೆಯುತ್ತಿದ್ದಂತೆ ತಮಗಾಗಿ ಅನೇಕ ಸಲ ಕಥೆಗಳು ಓದಲ್ಪಡುತ್ತಿದ್ದವು ಎಂದು ಹೇಳಿದ ವಿದ್ಯಾರ್ಥಿಗಳು, ವಿರಳವಾಗಿ ಅಥವಾ ಯಾವುದೇ ಪುಸ್ತಕಗಳು ತಮಗಾಗಿ ಓದಲ್ಪಟ್ಟಿರುದವರಿಗಿಂತ ಪರೀಕ್ಷೆಗಳನ್ನು ಹೆಚ್ಚು ಉತ್ತಮವಾಗಿ ನಿರ್ವಹಿಸಿದರು. “ಓದುವಿಕೆಯನ್ನು ಚೆನ್ನಾಗಿ ನಿರ್ವಹಿಸಿದ ವಿದ್ಯಾರ್ಥಿಗಳು ಬರವಣಿಗೆಯನ್ನೂ ಉತ್ತಮವಾಗಿ ನಿರ್ವಹಿಸಿದರು” ಮತ್ತು “ಶಾಲಾ ಪುಸ್ತಕಗಳ ಹೊರತೂ ಇತರ ಪುಸ್ತಕಗಳನ್ನು ಓದುವವರು, ಓದು ಬರಹ ಎರಡನ್ನೂ ಹೆಚ್ಚು ಉತ್ತಮವಾಗಿ ನಿರ್ವಹಿಸಿದರು” ಎಂದು ಗ್ಲೋಬ್ ಕೂಡಿಸಿತು. ಒಂಟ್ಯಾರಿಯೊ ಟೀಚರ್ಸ್ ಫೆಡರೇಷನಿನ ಅಧ್ಯಕ್ಷರಿಗನುಸಾರ, “ಓದದಂತಹ ಅಥವಾ ಯಾರು 14 ವರ್ಷದಷ್ಟರ ತನಕ ಓದಿಸಲ್ಪಡುವದಿಲ್ಲವೋ ಆ ವಿದ್ಯಾರ್ಥಿಗಳು ಅದರ ನಂತರ ಓದುವುದಿಲ್ಲ.”
ಬೈಬಲನ್ನು ಅಕ್ರಮವಾಗಿ ತಿದ್ದುವುದು
ಆಕ್ಸ್‌ಫರ್ಡ್ ಯ್ಯೂನಿವರ್ಸಿಟಿ ಪ್ರೆಸ್ ಅಭೂತಪೂರ್ವವಾದ ಬದಲಾವಣೆಗಳೊಂದಿಗೆ ಬೈಬಲಿನ ಒಂದು ಹೊಸ ತರ್ಜುಮೆಯನ್ನು ತಯಾರಿಸಿದೆ. “ರಾಜಕೀಯವಾಗಿ ಸರಿ”ಯಾಗಿರುವ ಪ್ರಯತ್ನದಲ್ಲಿ ಈ ತರ್ಜುಮೆಯು, ಲಿಂಗಭೇದ, ಕುಲಭೇದ, ಅಥವಾ ಯೆಹೂದಿ ವಿರೋಧಿನುಡಿಗಳಿಂದ ಕಳಂಕಿತವಾಗಿರುವ ಅರ್ಥವಿವರಣೆಯೆಂದು ಆರೋಪಿಸಸಾಧ್ಯವಿರುವ ಹೇಳಿಕೆಗಳನ್ನು ಹೋಗಲಾಡಿಸುತ್ತದೆ. ಉದಾಹರಣೆಗಾಗಿ, ಹೊಸ ತರ್ಜುಮೆಯು ದೇವರನ್ನು “ತಂದೆ-ತಾಯಿ” ಆಗಿ ಸೂಚಿಸಿ ಮಾತಾಡುತ್ತದೆ. ಯೇಸು “ಮನುಷ್ಯ ಕುಮಾರ”ನಲ್ಲ ಬದಲಾಗಿ “ಮಾನವನಾಗಿರುವ ಒಬ್ಬನು” ಆಗಿ ಇರುವನು. ಯೆಹೂದ್ಯರು ಯೇಸು ಕ್ರಿಸ್ತನನ್ನು ಕೊಂದಿರುವದಕ್ಕೆ ತರ್ಜುಮೆಯಲ್ಲಿ ಯಾವ ಉಲ್ಲೇಖವೂ ಇಲ್ಲ. ದೇವರ “ಬಲಗಡೆಯ ಕೈ,” ಆತನ “ಶಕ್ತಿಯುತವಾದ ಕೈ” ಆಗುವಾಗ ಎಡಗೈಯನ್ನು ಉಪಯೋಗಿಸುವವರ ವಿರುದ್ಧವಾದ ಪಕ್ಷಪಾತವೆಂದು ಆರೋಪಿಸಲಾಗುವಂತಹದ್ದು ನಿಮೂರ್ಲಗೊಳಿಸಲ್ಪಡುವುದು ಎಂದು ದ ಸಂಡೇ ಟೈಮ್ಸ್ ಹೇಳುತ್ತದೆ.
ಮೀನುಗಾರಿಕೆ ಗಂಡಾಂತರಕ್ಕೆ ಒಳಗಾಗಿದೆ
ವಿಭಿನ್ನ ರಾಷ್ಟ್ರಗಳ ಮೀನುಗಾರಿಕೆಯ ತಂಡಗಳು ಪ್ರಾದೇಶಿಕ ನೀರುಗಳು ಮತ್ತು ಮೀನುಗಾರಿಕೆಯ ಹಕ್ಕುಗಳ ಕುರಿತಾಗಿ ಕಾದಾಡುತ್ತಿರುವಂತೆಯೇ, ಲೋಕದ ಮೀನು ಕೊಯ್ಲು ತನ್ನ ಅಧಿಕತಮ ಉತ್ಪನ್ನಕಾರಕತೆಯನ್ನು ತಲಪಿದೆ ಮತ್ತು ಈಗ ಲೋಕದ ಹೆಚ್ಚಿನ ಭಾಗಗಳಲ್ಲಿ ಇಳಿತರವಾಗುತ್ತಿದೆಯೆಂದು ವರ್ಲ್ಡ್‌ವಾಚ್ ಇನ್ಸ್‌ಟಿಟ್ಯೂಟ್‌ನಿಂದ ಒಂದು ವರದಿಯು ಎಚ್ಚರಿಸುತ್ತದೆ. ಕಡಲಿನ ಜೀವನದ ಭೌಗೋಲಿಕ ಬರಿದುಗೊಳ್ಳುವಿಕೆಯಲ್ಲಿ ಪರಿಸರೀಯ ಮಾಲಿನ್ಯತೆಯು ಒಂದು ಅಂಶವೆಂದು ಅಂಗೀಕರಿಸುವಾಗಲೇ, ವ್ಯಾಪಾರಿ ಮೀನುಗಾರಿಕೆಯ ಕೈಗಾರಿಕೆಯಿಂದ ಮಿತಿಮೀರಿದ ಮೀನುಹಿಡಿಯುವಿಕೆಯು, ಅಟ್ಲ್ಯಾಂಟಿಕ್ ಮತ್ತು ಪೆಸಿಫಿಕ್ ಮಹಾ ಸಾಗರಗಳು ಹಾಗೂ ಕಪ್ಪು ಮತ್ತು ಭೂಮಧ್ಯ ಸಮುದ್ರಗಳಲ್ಲಿ ತೆಗೆದುಕೊಳ್ಳಲ್ಪಡುವ ಮೀನುಗಳ ಇಳಿಮುಖವಾಗುತ್ತಿರುವ ಸಂಖ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸುತ್ತದೆ. ವರ್ಲ್ಡ್‌ವಾಚ್ ವರದಿಗನುಸಾರ, ಕೆಲವು ಕ್ಷೇತ್ರಗಳಲ್ಲಿ ಹಿಡಿದ ಮೀನಿನ ಮೊತ್ತವು 30 ಶೇಕಡದಷ್ಟು ಕಡಿಮೆಯಾಗಿದೆ ಮತ್ತು ಸಾಗರಗಳ ಸಂಪನ್ಮೂಲಗಳ ಸದ್ಯದ ಅವ್ಯವಸ್ಥಿತ ನಿರ್ವಹಣೆಯು ಮುಂದುವರಿಯುವಲ್ಲಿ, ಅಕ್ಷರಶಃ ಲಕ್ಷಾಂತರ ಮೀನುಗಾರರು ಬೇಗನೇ ನಿರುದ್ಯೋಗಿಗಳಾಗುವರು ಎಂದು ದ ಅಸಾನ್ಸ್ ಫ್ರಾನ್ಸ್ ಪ್ರೆಸ್ ನ್ಯೂಸ್ ಸರ್ವಿಸ್ ಹೇಳುತ್ತದೆ.
ಬರ್ಡ್ಸ್ ನೆಸ್ಟ್ ಸೂಪಿನ ಏರುತ್ತಿರುವ ಬೆಲೆ
ಹಾಂಗ್‌ಕಾಂಗ್ ಮತ್ತು ಏಷ್ಯಾದ ಇತರ ನಗರಗಳ ರೆಸೊರ್ಟೆಂಟ್‌ಗಳಲ್ಲಿ, ಒಂದು ಅಚ್ಚುಮೆಚ್ಚಿನ ಭಕ್ಷ್ಯವು, ತಿನ್ನಬಹುದಾದ ಹಕ್ಕಿಯ ಗೂಡು ಆಗಿದೆ, ಇದನ್ನು ಅನೇಕ ವೇಳೆ ಒಂದು ಸೂಪ್‌ಆಗಿ ತಯಾರಿಸಲಾಗುತ್ತದೆ. ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್‌ಗನುಸಾರ, ಅನೇಕ ಚೀನಿಯರು ಬೇಯಿಸಲ್ಪಟ್ಟ ಗೂಡುಗಳನ್ನು ಕೇವಲ ಒಂದು ರಸಭಕ್ಷ್ಯವಾಗಿ ಮಾತ್ರವಲ್ಲ ಬದಲಿಗೆ ಒಂದು ಆರೋಗ್ಯ ಟಾನಿಕ್ ಆಗಿಯೂ ವೀಕ್ಷಿಸುತ್ತಾರೆ. ಹಾಂಗ್‌ಕಾಂಗ್ ದೇಶವೊಂದೇ 1992ರಲ್ಲಿ ಸುಮಾರು 1 ಕೋಟಿ 70 ಲಕ್ಷ ಸಿಫ್ವ್‌ಲ್ಟೆಟ್ ಗೂಡುಗಳನ್ನು ಬಳಸಿತು. ಮಿತಿಮೀರಿದ ಬಳಸುವಿಕೆಯಾದರೋ, ಗೂಡುಗಳ ಒಟ್ಟುಗಟ್ಟಲೆ ದರವನ್ನು ಪ್ರತಿ ಕಿಲೋಗ್ರಾಮ್‌ಗೆ 500 ಡಾಲರುಗಳ ರೆಕಾರ್ಡು ದರಕ್ಕೆ ಏರಿಸಿದೆ ಮತ್ತು ಉತ್ತಮ ಗುಣಮಟ್ಟದ ಗೂಡುಗಳು ಅದಕ್ಕಿಂತ ಎಂಟು ಪಟ್ಟು ಹೆಚ್ಚು ಬೆಲೆ ಬಾಳುತ್ತವೆ. ಆ ಗೂಡುಗಳನ್ನು ತಯಾರಿಸುವ ಸಿಫ್ವ್‌ಲ್ಟೆಟ್ ಪಕ್ಷಿಗಳಿಗೆ ಆಗುವ ನಷ್ಟ ಹೆಚ್ಚು ಉಚ್ಚವಾಗಿದೆ. ಗೂಡುಗಳು ಶೇಖರಿಸಲ್ಪಡುವಾಗ ಮೊಟ್ಟೆಗಳ ಮತ್ತು ಮರಿಗಳ ನಾಶವು, ಕೆಲವು ಸಿಫ್ವ್‌ಲ್ಟೆಟ್ ಪಕ್ಷಿಗಳ ಸಂಖ್ಯೆಗಳ ಕ್ಷೀಣಿಸುವಿಕೆಯಲ್ಲಿ ಮತ್ತು ಇತರ ಸಿಫ್ವ್‌ಲ್ಟೆಟ್ ಪಕ್ಷಿಗಳ ಅಳಿವಿನಲ್ಲಿ ಪರಿಣಮಿಸಿದೆ.
ಕ್ಷಯರೋಗದ ಹೋರಾಟದಲ್ಲಿ ಸೋಲುವುದು
ಪ್ಯಾರಿಸ್‌ನಲ್ಲಿರುವ ಲಾ ಪಿಡ್ಯೆ ಸಾಲ್‌ಪೇಟ್ರಿಯರ್ ಆಸ್ಪತ್ರೆಯ, ಬ್ಯಾಕ್ಟೀರಿಯ-ವೈರಸ್ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಪ್ರೊಫೆಸರ್ ಸಾಕ್ ಗ್ರಾಸೇರವರಿಗನುಸಾರ, ರೋಗಗಳ ವಿರುದ್ಧವಾದ ಯುದ್ಧದಲ್ಲಿ, ಕ್ಷಯರೋಗದೊಂದಿಗಿನ ಹೋರಾಟವು “ಒಂದು ಲೋಕವ್ಯಾಪಕ ಮಟ್ಟದಲ್ಲಿ ಸಂಪೂರ್ಣ ಅಪಜಯವಾಗಿದೆ.” ರೋಗಿಗಳಿಗೆ ಚಿಕಿತ್ಸೆ ನೀಡಲ್ಪಡದಿರುವಲ್ಲಿ, ಕ್ಷಯರೋಗದ ಮರ್ತ್ಯತೆಯ ಸಂಖ್ಯಾಪ್ರಮಾಣವು ಸುಮಾರು 50 ಶೇಕಡವಾಗಿರುತ್ತದೆ. ಲೋಕದಲ್ಲಿ ಟಿಬಿಯಿಂದಾಗಿ ನರಳುವವರಲ್ಲಿ ಅರ್ಧದಷ್ಟು ಜನರಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯು ದುರ್ಲಭ್ಯವಾಗಿರುವಾಗ, ನಿಜವಾದ ವಿಪತ್ತು, ಎಲ್ಲಿ ರೋಗವನ್ನು ಹೊಂದಿರುವವರಲ್ಲಿ ಕೇವಲ ಅರ್ಧದಷ್ಟು ಜನರು ತಾವು ಸಂಪೂರ್ಣವಾಗಿ ಗುಣಮುಖರಾಗುವ ತನಕ ತಮ್ಮ ಚಿಕಿತ್ಸೆಯನ್ನು ಮುಂದುವರಿಸುತ್ತಾರೋ, ಪ್ರತಿಜೀವಕಗಳು ಉಚಿತವಾಗಿ ಲಭ್ಯವಾಗಿರುವ ತಂತ್ರಜ್ಞಾನೀಯವಾಗಿ ವರ್ಧಿಷ್ಣುವಾಗಿರುವ ದೇಶಗಳಲ್ಲಿ ಇರುತ್ತದೆ ಎಂದು ಪ್ರೊಫೆಸರ್ ಗ್ರಾಸೇ ಸೂಚಿಸಿ ಹೇಳಿದರು. “ಇನ್ನುಳಿದ ಅರ್ಧ ಜನರು ತಮ್ಮ ಚಿಕಿತ್ಸೆಯನ್ನು ತೆಗೆದುಕೊಳ್ಳುವುದಿಲ್ಲ, ಅಥವಾ ಅದನ್ನು ತುಂಬ ಅಕ್ರಮವಾಗಿ ತೆಗೆದುಕೊಳ್ಳುತ್ತಾರೆ, ಇದು ಒಂದು ಹೆಚ್ಚು ಉಚ್ಚವಾದ ಮರ್ತ್ಯತೆಯ ಸಂಖ್ಯಾಪ್ರಮಾಣವನ್ನು (ಚಿಕಿತ್ಸೆ ನೀಡಲ್ಪಟ್ಟವರ 25 ಶೇಕಡ) ಉಂಟುಮಾಡುತ್ತದೆ ಮತ್ತು ಪ್ರತಿಜೀವಕಗಳಿಗೆ ನಿರೋಧಕವಾಗಿರುವ ಟ್ಯೂಬರ್ಕಲ್ ಬಸಿಲಸ್‌ನ ವಂಶವೊಂದನ್ನು ಉತ್ಪಾದಿಸುತ್ತದೆ.”
ಶ್ಲಾಘನೆ ಒತ್ತಡವನ್ನು ಪ್ರತಿರೋಧಿಸುತ್ತದೆ
ಜರ್ಮನಿಯಲ್ಲಿ ಪ್ರತಿ ವರ್ಷ ಹೃದಯಾಘಾತಗಳು 2,00,000 ವ್ಯಕ್ತಿಗಳ ಜೀವಗಳನ್ನು ಅಂತ್ಯಗೊಳಿಸುತ್ತವೆ. ಮುಖ್ಯ ಕಾರಣವೇನಾಗಿದೆ? “ಒತ್ತಡ” ಎಂದು ಸ್ಯೂಟ್‌ಡೈಚ ಟ್ಸೈಟುಂಗ್ ವಾರ್ತಾಪತ್ರಿಕೆಯು ವರದಿಸುತ್ತದೆ ಯಾಕಂದರೆ, ಜರ್ಮನಿಯಲ್ಲಿ ಕೆಲಸ ಮಾಡುವುದು “ಸಂಪೂರ್ಣ ಬದ್ಧತೆ, ಸತತ ಒತ್ತಡ”ವನ್ನು ಕೇಳಿಕೊಳ್ಳುತ್ತದೆ. ಕೆಲಸದ ಸ್ಥಳದಲ್ಲಿ ಒತ್ತಡದ ಅನಾರೋಗ್ಯದಿಂದಾಗಿ ಗೈರುಹಾಜರಿಯು ಒಂದು ಉಚ್ಚ ಸಂಖ್ಯಾಪ್ರಮಾಣದಲ್ಲಿ ಪರಿಣಮಿಸುತ್ತದೆ ಮತ್ತು ಇದು ತೀರಾ ನಿಶ್ಶಕ್ತಿಗೆ ನಡಿಸಬಲ್ಲದು. ಸುಮಾರು 50 ಶೇಕಡ ದಾದಿಯರು, ಒತ್ತಡದ ರೋಗಲಕ್ಷಣಗಳಿಂದ ನರಳುತ್ತಾರೆ, ಮತ್ತು 3 ಶಿಕ್ಷಕರಲ್ಲಿ 1 ಶಿಕ್ಷಕನು ಮುಂಚಿತವಾಗಿ ನಿವೃತ್ತಿಯನ್ನು ತೆಗೆದುಕೊಳ್ಳುತ್ತಾನೆ, ಅನೇಕರು “ನರವ್ಯೂಹದ ಬಿಗಿತ”ದ ಕಾರಣದಿಂದಾಗಿ ಹಾಗೆ ಮಾಡುತ್ತಾರೆ. ಆರೋಗ್ಯ ವಿಮಾ ಕಂಪೆನಿಗಳು ಕೆಲಸದ ಸ್ಥಳಗಳಲ್ಲಿ ಒತ್ತಡವನ್ನು ಕಡಿಮೆಗೊಳಿಸುವ ವಿಧವನ್ನು ಅಧ್ಯಯನಿಸುತ್ತಿವೆ. ಹಲವಾರು ನೂರಾರು ಮಧ್ಯಮ ಗಾತ್ರದ ವ್ಯಾಪಾರ ಸಂಸ್ಥೆಗಳಲ್ಲಿ ನಡಿಸಲ್ಪಟ್ಟ ಒಂದು ಅಧ್ಯಯನವು, ಇದಕ್ಕೆ ನೆರವು ನೀಡುವ ಒಂದು ಅಂಶಕ್ಕೆ ನಿರ್ದೇಶಿಸುತ್ತದೆ: ಸಮೀಕ್ಷಿಸಲ್ಪಟ್ಟ ಕಾರ್ಮಿಕರಲ್ಲಿ 44 ಪ್ರತಿಶತ ತಮ್ಮ ಕೆಲಸದ ಸ್ಥಳದಲ್ಲಿ ಯಾವುದೇ ಶ್ಲಾಘನೆಯನ್ನು ಎಂದೂ ಪಡೆಯಲಿಲ್ಲ.
ಸಮಯಕ್ಕೆ ಮುಂಚೆ ವೃದ್ಧರಾಗುವುದನ್ನು ತಡೆಯಿರಿ
“ಜನರು ಮಕ್ಕಳಿಗಾಗಿ ಮನೆಗಳನ್ನು ಅಳವಡಿಸಿಕೊಳ್ಳುತ್ತಾರೆ. ವಯಸ್ಸಾದ ವ್ಯಕ್ತಿಗಳಿಗಾಗಿ ಅವುಗಳನ್ನು ಯಾಕೆ ಅಳವಡಿಸಿಕೊಳ್ಳಬಾರದು?” ಎಂದು ಸಾವುನ್ ಪಾವ್ಲೂ ವಿಶ್ವವಿದ್ಯಾನಿಲಯದ, ಜೆರೊಂಟಾಲೊಜಿಸ್ಟ್ ವಿಲ್ಸನ್ ಜೇಕಬ್ ಫಿಲ್ಹೊ ಕೇಳುತ್ತಾರೆ. ವಯಸ್ಸಾದವರಿಗಾಗಿ ಸುರಕ್ಷಿತವಾದ ಮನೆಗಳಲ್ಲದೆ, ಬೀಳುವ ಗಂಡಾಂತರವನ್ನು ಕಡಿಮೆಗೊಳಿಸಲು ತಮ್ಮ ಸ್ನಾಯು ವ್ಯೂಹವನ್ನು ಬಲಪಡಿಸಲಿಕ್ಕಾಗಿ ಅವರು ವ್ಯಾಯಾಮ ಮಾಡಲು ಅವರು ಸಲಹೆ ಕೊಡುತ್ತಾರೆ. ದೀರ್ಘಾಯುಷ್ಯದ ಅತಿ ಮಹತ್ತಾದ ಶತ್ರುಗಳು ಯಾವುವು? ಸಾವುನ್ ಪಾವ್ಲೂ ವಿಶ್ವವಿದ್ಯಾನಿಲಯದಲ್ಲೇ ಅಂಗಭಿನ್ನ ಚಿಕಿತ್ಸೆಯ ಶಸ್ತ್ರಚಿಕಿತ್ಸಕನಾಗಿರುವ ರೋಸೇ ಇಸಾರ್ ನೆವಿಸ್, ಈ ಶತ್ರುಗಳು “ಚಟುವಟಿಕೆಯಿಲ್ಲದ ಜೀವನ ರೀತಿ, ಸಮತೂಕವಿಲ್ಲದ ಪೌಷ್ಟಿಕತೆ (ವಿಶೇಷವಾಗಿ ಹೇರಳ ಕೊಬ್ಬು ಇರುವ ಪಥ್ಯಗಳು), ಧೂಮಪಾನ, ಮದ್ಯಸಾರ ಪಾನೀಯಗಳ ಮಿತಿಮೀರಿದ ಉಪಯೋಗ, ಒತ್ತಡ, ನಿದ್ರಾ ಕೊರತೆ” ಆಗಿವೆ. ಸೋಂಕು ರಕ್ಷೆಯ ವ್ಯವಸ್ಥೆಯನ್ನು ವಿಪರೀತವಾದ ಒತ್ತಡವು ದುರ್ಬಲಗೊಳಿಸುತ್ತದೆ, ಇದು “ವಿವಿಧ ರೋಗಗಳ ನುಗ್ಗುವಿಕೆ ಮತ್ತು ಫಲಸ್ವರೂಪವಾಗಿ ವೃದ್ಧಾಪ್ಯಕ್ಕೂ ನಿಕಟವಾಗಿ ಸಂಬಂಧಿಸಿರುತ್ತದೆ” ಎಂದು ಜರ್ನಲ್ ಡಾ ಟಾರ್ಡೆ ವಿವರಿಸುತ್ತದೆ. ಡಾ. ನೆವಿಸ್ ಇನ್ನೂ ಮುಂದುವರಿಸುತ್ತಾ ಪ್ರತಿಪಾದಿಸುವುದು: “ಸಮಯಕ್ಕೆ ಮುಂಚೆ ವೃದ್ಧರಾಗುವುದರ ಒಂದು ಪ್ರಮುಖ ಕಾರಣ, ಜೀವನದಲ್ಲಿ ನಿರಾಸಕ್ತಿ ಆಗಿದೆ.”
ದೇಹವನ್ನು ಚುಚ್ಚಿಸಿಕೊಳ್ಳುವ ಆರೋಗ್ಯ ಅಪಾಯ
“ವರ್ಷಗಳ ಹಿಂದೆ ದೇಹದ ಯಾವ ಅಂಗಗಳು ಚುಚ್ಚಿಸಲ್ಪಡುತ್ತಿರಲಿಲ್ಲವೋ ಅವುಗಳನ್ನು ಜನರು ಚುಚ್ಚಿಸಿಕೊಳ್ಳುತ್ತಿದ್ದಾರೆ,” ಎಂದು ಕೆನಡದಲ್ಲಿರುವ ಕಾಲ್‌ಗರಿ ಹೆಲ್ತ್ ಸರ್ವಿಸಸ್‌ಗಾಗಿರುವ, ಪರಿಸರೀಯ ಆರೋಗ್ಯದ ಡೈರೆಕ್ಟರರಾದ ಜಾನ್ ಪೆಲ್ಟನ್ ಹೇಳುತ್ತಾರೆ. ದ ವ್ಯಾನ್‌ಕ್ಯೂವರ್ ಸನ್‌ನಲ್ಲಿನ ಒಂದು ವರದಿಗನುಸಾರ ಇದು ಹುಬ್ಬುಗಳು, ತುಟಿಗಳು, ನಾಲಿಗೆಗಳು ಮತ್ತು ಹೊಕ್ಕುಳುಗಳನ್ನು ಒಳಗೊಳ್ಳುತ್ತದೆ. ಈ ಬೆಳೆಯುತ್ತಿರುವ ಗೀಳು ಏಡ್ಸ್ ಮತ್ತು ಹೆಪಟೈಟಿಸ್ ಬಿ ಮತ್ತು ಸಿಯನ್ನು ದಾಟಿಸಬಲ್ಲದೆಂಬ ಭಯವು, ದೇಹದ ಚುಚ್ಚುವಿಕೆಯನ್ನು ನಿಯಂತ್ರಿಸುವ ಮಾರ್ಗದರ್ಶಕಗಳನ್ನು ಪ್ರಸ್ತಾಪಿಸುವಂತೆ, ಆರ್ಲ್ಬಟಾ ಹೆಲ್ತ್‌ನಲ್ಲಿರುವ ಎನ್‌ವೈರನ್‌ಮೆಂಟಲ್ ಹೆಲ್ತ್ ಸರ್ವಿಸಸ್‌ಅನ್ನು ಪ್ರಚೋದಿಸಿದೆ. “ಹೊಸ ಮಟ್ಟಗಳು ಕಟ್ಟಕಡೆಗೆ ಸುಡುಮುದ್ರಿಸಿಕೊಳ್ಳುವಿಕೆ, ವ್ಯಾಕ್ಸಿಂಗ್, ಟ್ಯಾಟೂಯಿಂಗ್, ಎಲೆಕ್ಟೊಲ್ರಿಸಿಸ್ ಮತ್ತು ಸೆನ್‌ಸೊರಿ ಡೀಪ್ರೈವೇಷನ್‌ನಂತಹ ಅನಿಯಂತ್ರಿತ ವೈಯಕ್ತಿಕ ಸೇವೆಗಳ ಇಡೀ ಶ್ರೇಣಿಯನ್ನು ಆವರಿಸುವುದು” ಮತ್ತು ಈ ನಿಯಮಾವಳಿಗಳ ಕರಡುಪ್ರತಿಯು ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಂದ ಮತ್ತು ಉದ್ಯಮದಿಂದ ಪುನರ್ವಿಮರ್ಶಿಸಲ್ಪಡುವುದು, ಎಂದು ಆ ವರದಿಯು ಕೂಡಿಸುತ್ತದೆ. ದೇಹದ ಚುಚ್ಚಿಸುವಿಕೆಯನ್ನು ಮಾಡಲು ಕಿವಿ-ಚುಚಿಸ್ಚಿಕೊಳ್ಳುವಿಕೆಯ ಸಲಕರಣೆಯ ಉಪಯೋಗದ ಕುರಿತಾಗಿ, ಆ ಕ್ರಮ ವಿಧಾನವನ್ನು ಮಾಡುವವನೊಬ್ಬನು ಒಪ್ಪಿಕೊಳ್ಳುವುದು: “ಸೋಂಕುಗಳೊಂದಿಗೆ ಜನರು ಆಸ್ಪತ್ರೆಗೆ ಹೋಗುವುದನ್ನು ನಾವು ನೋಡಿದ್ದೇವೆ. ಅದು ನಿಜವಾಗಿಯೂ ಗಾಬರಿಗೊಳಿಸುವಂತಹದ್ದಾಗಿದೆ.”
ಸೆರೆಮನೆಗಳ ಸಂಖ್ಯಾಪ್ರಮಾಣಗಳು ವೃದ್ಧಿಯಾಗುತ್ತಿವೆ
ಲೋಕವ್ಯಾಪಕವಾಗಿ ಪಾತಕವು ವೃದ್ಧಿಯಾದಂತೆಯೇ, ಬಂಧಿಸಲ್ಪಡುವ ಸಂಖ್ಯಾಪ್ರಮಾಣವು ಸಹ ವೃದ್ಧಿಯಾಗುತ್ತದೆ. ಪ್ರತಿ 1,00,000 ಜನರಿಗೆ 558 ಜನರು ಬಂಧಿಸಲ್ಪಡುವ ಸಂಖ್ಯಾಪ್ರಮಾಣವನ್ನು ರಷ್ಯಾ ಈಗ ಹೊಂದಿರುತ್ತದೆ, ಮತ್ತು ಪ್ರತಿ 1,00,000 ಜನರಿಗೆ 519 ಜನರು ಬಂಧಿಸಲ್ಪಡುವ ಸಂಖ್ಯೆಯೊಂದಿಗೆ ಅಮೆರಿಕವು ಎರಡನೆಯ ಉಚ್ಚ ಸಂಖ್ಯಾಪ್ರಮಾಣವನ್ನು ಹೊಂದಿರುತ್ತದೆ. ಅನಂತರ ಬರುವಂತಹದ್ದು ದಕ್ಷಿಣ ಆಫ್ರಿಕದ 368, ಸಿಂಗಾಪುರದ 229, ಮತ್ತು ಕೆನಡದ 116. ಹಿಂದಿನ ಸೋವಿಯೆಟ್ ಒಕ್ಕೂಟದ ಒಡೆಯುವಿಕೆಯೊಂದಿಗೆ, ಕೊಲೆಗಳು ಮತ್ತು ಇತರ ಪಾತಕಗಳು ರಷ್ಯಾದಲ್ಲಿ ಮಹತ್ತಾಗಿ ವೃದ್ಧಿಯಾಗಿವೆ ಮತ್ತು ಬಂಧಿಸುವಿಕೆಯ ಸಂಖ್ಯಾಪ್ರಮಾಣವು ಹಿಂದಿನ ನಾಯಕ ದೇಶವಾಗಿದ್ದ ಅಮೆರಿಕಕ್ಕಿಂತ ಎತ್ತರಕ್ಕೇರಿತು. ಅಮೆರಿಕದ ಸಂಖ್ಯಾಪ್ರಮಾಣಗಳ ಆರರಲ್ಲಿ ಒಂದು ಭಾಗವಾಗಿರುವ ಪ್ರಮಾಣದಲ್ಲಿ ಇಷ್ಟೊಂದು ಯೂರೋಪಿಯನ್ ರಾಷ್ಟ್ರಗಳು ಜನರನ್ನು ಬಂಧಿಸುವುದೇಕೆ? “ರಾಷ್ಟ್ರಗಳೊಳಗೆ ಸಾಮಾನ್ಯವಾದ ಪಾತಕಗಳ ಸಂಖ್ಯಾಪ್ರಮಾಣಗಳಲ್ಲಿ ಸ್ವಲ್ಪವೇ ವ್ಯತ್ಯಾಸವಿರುವಾಗ, ಅಮೆರಿಕ, ರಷ್ಯಾ ಮತ್ತು ದಕ್ಷಿಣ ಆಫ್ರಿಕದಲ್ಲಿ ಹಿಂಸಾಚಾರವು ಹೆಚ್ಚು ಚಾಲ್ತಿಯಲ್ಲಿದೆ ಎಂಬುದು ಒಂದು ವಿವರಣೆಯಾಗಿದೆ,” ಎಂದು ಯು.ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುತ್ತದೆ. “ಕಾರಣಗಳೇನೇ ಆಗಿರಲಿ, ಬಂಧಿಸುವಿಕೆಯ ಸಂಖ್ಯಾಪ್ರಮಾಣಗಳಲ್ಲಿನ ವ್ಯತ್ಯಾಸವು ಬೆಳೆಯುವುದು ಸಂಭವನೀಯ.”
ತೊಂದರೆಯಲ್ಲಿ ಬಿದ್ದಿರುವ ವಿಶ್ವವಿದ್ಯಾನಿಲಯಗಳು
“ಆಫ್ರಿಕದ ನಿರ್ಲಕ್ಷಿಸಲ್ಪಟ್ಟ ವಿಶ್ವವಿದ್ಯಾನಿಲಯಗಳು ಕುಸಿತದ ಅಂಚಿನಲ್ಲಿವೆ” ಎಂದು ಜೊಹಾನ್ಸ್‌ಬರ್ಗ್‌ನ ವೀಕೆಂಡ್‌ಸ್ಟಾರ್ ವರದಿಸುತ್ತದೆ. ಹಣದ ಕೊರತೆಯ ಕಾರಣದಿಂದ, ಕೆಲವೇ ಕಂಪ್ಯೂಟರ್‌ಗಳಿವೆ ಮತ್ತು ಕೆಲವು ವಿದ್ಯಮಾನಗಳಲ್ಲಿ ಟೆಲಿಫೋನ್ ತಂತಿಗಳ ಸಂಪರ್ಕ ಕಡಿಯಲಾಗಿದೆ. ವಿಶ್ವವಿದ್ಯಾನಿಲಯವೊಂದರಲ್ಲಿ ದಾಖಲಿಸಲ್ಪಟ್ಟ 35,000 ವಿದ್ಯಾರ್ಥಿಗಳಿದ್ದಾರೆ, ಆದರೆ ಅದು ಮೂಲತಃ ಕೇವಲ 5,000 ವಿದ್ಯಾರ್ಥಿಗಳಿಗಾಗಿ ವಿನ್ಯಾಸಿಸಲ್ಪಟ್ಟಿತ್ತು. ಯುಗಾಂಡದಲ್ಲಿ ಒಂದು ಸಮಯದಲ್ಲಿ ಪ್ರಖ್ಯಾತವಾಗಿದ್ದ ವಿಶ್ವವಿದ್ಯಾನಿಲಯವೊಂದರಲ್ಲಿ ಉಪನ್ಯಾಸಕ ಹುದ್ದೆಗಳಲ್ಲಿ ಕೇವಲ ಅರ್ಧದಷ್ಟು ತುಂಬಿವೆ. ಈ ವಿಶ್ವವಿದ್ಯಾನಿಲಯದಲ್ಲಿ ಒಬ್ಬ ಉಪನ್ಯಾಸಕನ ವೇತನವು ಒಂದು ತಿಂಗಳಿಗೆ 19 ಡಾಲರುಗಳಾಗಿದೆ ಎಂಬುದು ವ್ಯಕ್ತ. ಕೆಲವು ವಿಶ್ವವಿದ್ಯಾನಿಲಯಗಳು, ಮುಷ್ಕರ ಹೂಡುತ್ತಿರುವ ಉಪನ್ಯಾಸಕರು ಅಥವಾ ವಿದ್ಯಾರ್ಥಿಗಳಿಂದಾಗಿ ತಿಂಗಳಾನುಗಟ್ಟಲೆ ಮುಚ್ಚಲ್ಪಟ್ಟಿವೆ. ಒಬ್ಬ ಕೆನ್ಯದ ಪ್ರೊಫೆಸರ್ ಅವಲೋಕಿಸಿದ್ದು: “ಆಫ್ರಿಕದಲ್ಲಿನ ಶೈಕ್ಷಣಿಕ ಸ್ವ-ನಾಶನವು ಕೆಟ್ಟದ್ದರಿಂದ ತೀರ ಕೆಟ್ಟದ್ದಾಗುತ್ತಾ ಇದೆ.”