ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 10/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1995
  • ಅನುರೂಪ ಮಾಹಿತಿ
  • ಸ್ವಮಗ್ನತೆ (ಆಟಿಜಮ್‌) ಒಗಟಾಗಿರುವ ವ್ಯಾಧಿಯೊಂದರ ಕಷ್ಟಗಳನ್ನು ನಿಭಾಯಿಸುವುದು
    ಎಚ್ಚರ!—1995
  • ನಮ್ಮ ವಾಚಕರಿಂದ
    ಎಚ್ಚರ!—2000
  • ನಮ್ಮ ವಾಚಕರಿಂದ
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1994
ಇನ್ನಷ್ಟು
ಎಚ್ಚರ!—1995
g95 10/8 ಪು. 30

ನಮ್ಮ ವಾಚಕರಿಂದ

ಬೇಸರ “ನಿಮ್ಮ ಜೀವನವು ಬೇಸರಕರವಾಗಿರುತ್ತದೊ? ನೀವದನ್ನು ಮಾರ್ಪಡಿಸಬಲ್ಲಿರಿ!” (ಫೆಬ್ರವರಿ 8, 1995) ಎಂಬ ಸರಣಿಯನ್ನು ನಾನು ಈಗತಾನೇ ಓದಿದೆ, ಮತ್ತು ಅದು ನನಗೆ ಎಷ್ಟು ಸಹಾಯ ಮಾಡಿತೆಂದು ನಾನು ನಿಮಗೆ ಹೇಳಲೇಬೇಕು. ನನಗೆ ಬೇಸರವಾಗಿರುವುದಾಗಿ ನಾನೆಂದೂ ಯೋಚಿಸಿಲ್ಲ, ಆದರೆ ನನ್ನ ವೈವಿಧ್ಯವಿಲ್ಲದ ನಿಯತಕ್ರಮದಿಂದಾಗಿ ನಾನು ನನ್ನ ಜೀವನದೊಂದಿಗೆ ತೀರ ಅತೃಪ್ತನಾಗಿದ್ದೆ. ಆ ಲೇಖನವು ನಾನು ವಿಷಯಗಳನ್ನು ಒಂದು ಸಂಪೂರ್ಣವಾದ ಹೊಸ ದೃಷ್ಟಿಕೋನದಿಂದ ನೋಡುವಂತೆ ನನಗೆ ಮಾಡಿತು.

ಎಸ್‌. ವಿ., ಅಮೆರಿಕ

ನಾಸಿವಾದವನ್ನು ಪ್ರತಿರೋಧಿಸುವುದು “ನಾವು ಹಿಟ್ಲರನ ಯುದ್ಧವನ್ನು ಬೆಂಬಲಿಸಲಿಲ್ಲ” ಎಂಬ ಲೇಖನದಿಂದ ನಾನು ಪ್ರಚೋದಿಸಲ್ಪಟ್ಟೆ. (ನವೆಂಬರ್‌ 8, 1995) ನಾಸಿವಾದವನ್ನು ಬೆಂಬಲಿಸಲು ಆರು ಆಸ್ಟಿಯ್ರನ್‌ ಬಿಷಪರ “ಗಂಭೀರವಾದ ಘೋಷಣೆ”ಯ ಒಂದು ಚಿತ್ರವು ಅದರಲ್ಲಿ ಅಡಕವಾಗಿತ್ತು. ಆ ಬಿಷಪರಲ್ಲಿ ಒಬ್ಬನು, 1928ರಲ್ಲಿ ನಾನು ಒಬ್ಬ ಜೆಸ್ಯುಟ್‌ ವಿದ್ಯಾರ್ಥಿಯಾಗಿದ್ದಾಗ ನನ್ನನ್ನು ದೃಢೀಕರಿಸಿದವನಾಗಿದ್ದನು. ಕ್ರೈಸ್ತ ನಂಬಿಕೆಯಲ್ಲಿ ಸ್ವತಃ ದೃಢನಾಗಿರಲು ತಿಳಿದಿರದ ಒಬ್ಬನಿಂದ ಬರುವ ಅಂತಹ “ದೃಢೀಕರಣ”ದ ಕುರಿತಾಗಿ ನಾನು ನಗುತ್ತೇನೆ! ಆ ಯುದ್ಧವು ಕ್ಯಾತೊಲಿಕ್‌ ಚರ್ಚಿನೊಂದಿಗಿನ ನನ್ನ ಸಂಬಂಧವನ್ನು ಅಂತ್ಯಗೊಳಿಸಿತು. ನಾನು ನನ್ನ ಸ್ವದೇಶವನ್ನೂ ತೊರೆದೆ. ನಾನು ನನ್ನ ಸ್ವಂತ ವಿಧದಲ್ಲೇ ಯುದ್ಧವನ್ನು ಪ್ರತಿರೋಧಿಸಲು ಪ್ರಯತ್ನಿಸಿದರೂ, ವಾಲ್‌ಫಾರ್ಟ್‌ ಕುಟುಂಬ ಸದಸ್ಯರ ಧೈರ್ಯ ನನ್ನಲ್ಲಿರಲಿಲ್ಲ. ಶಸ್ತ್ರಗಳನ್ನು ಹೊರಲು ನಿರಾಕರಿಸಿದ ಇಬ್ಬರು ಯೆಹೋವನ ಸಾಕ್ಷಿಗಳ ನೆನಪು ನನಗೆ ಇನ್ನೂ ಇದೆ. ಅವರು ತತ್‌ಕ್ಷಣವೇ ಕೊಲ್ಲಲ್ಪಟ್ಟರು. ನಾನು ಅಂತಹ ವ್ಯಕ್ತಿಗಳನ್ನು ಮೆಚ್ಚುತ್ತೇನೆ.

ಪಿ. ಕೆ., ಚಿಲಿ

ಮಗುವಿನೊಂದಿಗೆ ಮಲಗುವುದು ನಿಮ್ಮ ಆಗಸ್ಟ್‌ 8, 1994ರ ಸಂಚಿಕೆಯಲ್ಲಿ ನಾವು ಡಾ. ಜೇಮ್ಸ್‌ ಮೆಕೆನರವರ ಸಂಶೋಧನೆಯನ್ನು ವರದಿಸಿದ ಒಂದು ಎತ್ತಿಕೆಯನ್ನು ಗಮನಿಸಿದೆವು. (“ಜಗತ್ತನ್ನು ಗಮನಿಸುವುದು”) ತಮ್ಮ ಮಗುವಿನೊಂದಿಗೆ ಮಲಗುವ ತಾಯಂದಿರು ಸಿಡ್ಸ್‌ (ಸಡನ್‌ ಇನ್‌ಫಂಟ್‌ ಡೆತ್‌ ಸಿಂಡ್ರೋಮ್‌)ಅನ್ನು ಕಡಿಮೆಗೊಳಿಸುವರೆಂದು ಅದು ಸಲಹೆಕೊಟ್ಟಿತು. ನ್ಯೂ ಸೀಲೆಂಡ್‌ ಕಾಟ್‌ ಡೆತ್‌ ಅಧ್ಯಯನವು, ಹೆತ್ತವರು ನಿದ್ದೆಹೋಗುವಾಗ ಅವರು ಮಗುವನ್ನು ಮಂಚದಲ್ಲಿ ಮಲಗಿಸಿರುವಲ್ಲಿ ಸಿಡ್ಸ್‌ನ ತೀರ ಮಹತ್ತಾದ ಅಪಾಯವಿದೆ ಎಂದು ತೋರಿಸಿದೆ.

ಡಾ. ಎಸ್‌. ಎಲ್‌. ಟಿ., ನ್ಯೂ ಸೀಲೆಂಡ್‌

ಈ ಮಾಹಿತಿಗಾಗಿ ನಿಮಗೆ ಉಪಕಾರ. ಇತ್ತೀಚೆಗೆ ಡಾ. ಮೆಕೆನ ತಮ್ಮ ಸ್ಥಾನವನ್ನು ಸ್ಪಷ್ಟೀಕರಿಸಿದರು ಮತ್ತು ಒಬ್ಬ ತಾಯಿಯು ತನ್ನ ಮಗುವಿನೊಂದಿಗೆ ಮಲಗುವಾಗ ಆಗುವ ಆಕಸ್ಮಿಕ ಶಿಶು ಉಸಿರುಕಟ್ಟುವಿಕೆಯ ಅಪಾಯಗಳನ್ನು ಅಂಗೀಕರಿಸಿದರು. (1 ಅರಸು 3:19ನ್ನು ಹೋಲಿಸಿ.) ಆದುದರಿಂದ ಹೆಚ್ಚಿನ ವೈದ್ಯರು ಮಗುವಿನೊಂದಿಗೆ ಮಲಗುವುದನ್ನು ನಿರುತ್ತೇಜಿಸುತ್ತಾರೆ ಮತ್ತು ದಿಂಬುಗಳು ಅಥವಾ ದಟ್ಟವಾದ ರಜಾಯಿಗಳಿಲದ್ಲ ಒಂದು ಗೋದಲಿಯಲ್ಲಿ ಶಿಶುವನ್ನು ಮಲಗಿಸುವುದನ್ನು ಶಿಫಾರಸ್ಸು ಮಾಡುತ್ತಾರೆ.—ಸಂ.

ಜೇನುನೊಣಕ್ಕೆ ಎದುರಾಗಿ ಕಂಪ್ಯೂಟರ್‌ “ಜೇನುನೊಣಕ್ಕೆ ಎದುರಾಗಿ ಕಂಪ್ಯೂಟರ್‌” (ಫೆಬ್ರವರಿ 8, 1995) ಎಂಬ ಲೇಖನಕ್ಕಾಗಿ ನಾನು ನನ್ನ ಉಪಕಾರಗಳನ್ನು ವ್ಯಕ್ತಪಡಿಸಲೇಬೇಕು. ಈ ಲೇಖನವು ನನ್ನನ್ನು ತುಂಬ ಆಳವಾಗಿ ಪ್ರಭಾವಿಸಿತು. ನಮ್ಮ ಮಹಾ ಸೃಷ್ಟಿಕರ್ತನು ಜೇನುನೊಣದಂತಹ ಚಿಕ್ಕ ಜೀವಿಗಳನ್ನೂ ಅದ್ಭುತಕರವಾಗಿ ಮತ್ತು ಅಪೂರ್ವವಾಗಿರುವಂತೆ ನಿರ್ಮಿಸಿದನು.

ಕೆ. ಕೆ., ಜರ್ಮನಿ

ಸ್ವಮಗ್ನತೆ “ಸ್ವಮಗ್ನತೆ (ಆಟಿಸಮ್‌)—ಒಗಟಾಗಿರುವ ವ್ಯಾಧಿಯೊಂದರ ಕಷ್ಟಗಳನ್ನು ನಿಭಾಯಿಸುವುದು” (ಫೆಬ್ರವರಿ 8, 1995) ಎಂಬ ಲೇಖನಕ್ಕಾಗಿ ನಿಮಗೆ ತುಂಬಾ ಉಪಕಾರ. ನನ್ನ ಸಭೆಯಲ್ಲಿ ಒಬ್ಬ ಸ್ವಮಗ್ನತೆ ಪೀಡಿತ ಹುಡುಗನಿದ್ದಾನೆ, ಮತ್ತು ನಾನು ಅವನೊಂದಿಗೆ ತುಂಬಾ ನಿಕಟವಾಗಿದ್ದೇನೆ. ಆ ಲೇಖನವು ನಾನು ಸ್ವಮಗ್ನತೆಯನ್ನು ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಿತು. ಆತನೊಂದಿಗೆ ಮತ್ತು ಆತನ ತಾಯಿಯೊಂದಿಗೆ ಕೇವಲ ಸಮಯವನ್ನು ಕಳೆಯುವುದರಿಂದ ನಾನು ಸಹಾಯ ಮಾಡಬಲ್ಲೆ ಎಂದು ಈಗ ನನಗೆ ತಿಳಿದಿದೆ.

ಎ. ಎಫ್‌., ಜಪಾನ್‌

ನಮ್ಮ ಮಗಳು ಸ್ವಮಗ್ನತೆ ಪೀಡಿತಳಲ್ಲ, ಆದರೆ ಅವಳಲ್ಲಿ ತದ್ರೀತಿಯ ಲಕ್ಷಣಗಳಿವೆ. ಅನೇಕ ಮಕ್ಕಳಿಗಿರುವ ಸಮಸ್ಯೆಗಳ ಕುರಿತಾಗಿ ನೀವು ಜನರಿಗೆ ತಿಳಿಸುತ್ತಿರುವುದಕ್ಕಾಗಿ ನಾವು ಸಂತೋಷಿತರಾಗಿದ್ದೇವೆ. ಅಂತಹ ಮಕ್ಕಳನ್ನು ಜನರು, ಜೀವಕ್ಕೆ ಅರ್ಹರಾಗಿರುವ ಮಾನವ ಜೀವಿಗಳಾಗಿ ಉಪಚರಿಸುವಾಗ ಅದು ಬಹಳ ಪ್ರೋತ್ಸಾಹದಾಯಕವಾಗಿದೆ. ‘ನನಗೆ ನಿಮ್ಮ ಕುರಿತಾಗಿ ತುಂಬಾ ದುಃಖವಾಗುತ್ತದೆ’ ಅಥವಾ ‘ನೀವೇನು ಮಾಡುತ್ತೀರೋ ಅದನ್ನು ನಾನು ಎಂದೂ ಮಾಡಸಾಧ್ಯವಿರುತ್ತಿರಲಿಲ್ಲ’ ಎಂಬಂತಹ ಹೇಳಿಕೆಗಳು ಆತ್ಮೋನ್ನತಿ ಮಾಡುವುದಿಲ್ಲ. ನಮ್ಮ ಮಗಳು ಸಂತೋಷಿತಳಾಗಿದ್ದಾಳೆ, ಮತ್ತು ಕೆಲವೊಮ್ಮೆ ನಮ್ಮ ಇತರ ಮಕ್ಕಳು ನಮ್ಮ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತಾರೆ. ನಾವು ಅವಳ ಜನನಕ್ಕಾಗಿ ವಿಷಾದಿಸುವುದಿಲ್ಲ.

ಎಲ್‌. ಏಚ್‌., ಅಮೆರಿಕ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ