ಭವಿಷ್ಯತ್ತು ನಿಜವಾಗಿಯೂ ಕಾದಿರಿಸಿರುವ ಸಂಗತಿ
ವಿಜ್ಞಾನ ಕಲ್ಪನಾ ಕಥೆಯ ಅನೇಕ ಅತ್ಯುತ್ಸಾಹಿಗಳಿಗೆ, ವಿಚಾರಿಸುವ ಒಂದು ಮನಸ್ಸು, ಮಾನವ ಸಮಾಜದಲ್ಲಿ ಬದಲಾವಣೆಗಾಗಿ ಅಪೇಕ್ಷೆ, ಮತ್ತು ಭವಿಷ್ಯತ್ತಿನಲ್ಲಿ ಮಹಾ ಆಸಕ್ತಿಯು ಇರುತ್ತದೆ. ಭವಿಷ್ಯತ್ತಿನ ಕುರಿತು ಹೇಳಲಿಕ್ಕೆ ಬೈಬಲಿನಲ್ಲಿ ಹೆಚ್ಚಿನ ವಿಷಯವಿದೆ, ಆದರೆ ಮನುಷ್ಯನ ಅದೃಷ್ಟದ ಕುರಿತಾದ ಬೈಬಲಿನ ವೀಕ್ಷಣವು, ವಿಜ್ಞಾನ ಕಲ್ಪನಾ ಕಥೆಯ ಬರಹಗಾರರ ಊಹೆಗಳಿಗೆ ಬಹಳ ಕೊಂಚ ಹೋಲಿಕೆಯನ್ನು ಪಡೆದಿದೆ.
ಭವಿಷ್ಯತ್ತು ಏನಾಗಿರುವುದೆಂಬುದರ ಕುರಿತು ವಿಜ್ಞಾನ ಕಲ್ಪನಾ ಕಥೆಯು ಅನೇಕಾನೇಕ ಭಿನ್ನವಾದ ಕಥನಗಳನ್ನು ನೀಡುತ್ತದೆ. ಇವುಗಳಲ್ಲಿ ಯಾವುದಾದರೂ ಒಂದರ ಮೇಲೆ ನಿಮ್ಮ ಜೀವವನ್ನು ಗಂಡಾಂತರಕ್ಕೆ ಈಡುಮಾಡುವ ಮಟ್ಟಿಗೆ ನೀವು ಅವಲಂಬಿಸುವಿರೊ? ಯಾವುದರ ಮೇಲೆ ನಿಮ್ಮ ಆಯ್ಕೆಯನ್ನು ನೀವು ಆಧರಿಸುವಿರಿ? ಈ ದೃಶ್ಯ ವಿವರಗಳು ಅಥವಾ ಘಟನೆಗಳ ಯೋಜಿತ ಮಾರ್ಗಕ್ರಮಗಳು, ಎಲ್ಲವೂ ಸತ್ಯವಾಗಿರಸಾಧ್ಯವಿಲ್ಲ. ವಾಸ್ತವದಲ್ಲಿ, ಅವುಗಳಲ್ಲಿ ಎಲ್ಲವೂ ಊಹೆ—ಕಲ್ಪನಾ ಕಥೆ—ಯನ್ನು ಒಳಗೊಂಡಿರುವುದರಿಂದ, ಅವುಗಳಲ್ಲಿ ಒಂದಾದರೂ ಸತ್ಯವಾಗಿದೆಯೆಂದು ನೀವು ಭರವಸೆಯಿಂದ ಹೇಳಬಲ್ಲಿರೊ? ಅವುಗಳಲ್ಲಿ ಯಾವುದೂ ಸತ್ಯವಾಗಿರುವುದಿಲ್ಲವೆಂಬ ಸಾಧ್ಯತೆಯು ಹೆಚ್ಚಾಗಿರುತ್ತದೆ.
ನೆರವೇರದೆ ಹೋಗುವುದು
ಈಗಾಗಲೇ ಅನೇಕ ವಿಜ್ಞಾನ ಕಲ್ಪನಾ ಕಥೆಯ ದೃಶ್ಯ ವಿವರಗಳು ನೆರವೇರದೆ ಹೋಗುತ್ತಿವೆ. ಯಾವ ವಿಧದಲ್ಲಿ? ಹೇಗೆಂದರೆ, ಭೂಮಿಯ ಮೇಲೆ ಒಂದು ಉತ್ತಮ ನಾಗರಿಕತೆಯ ಕಡೆಗೆ ವಿಜ್ಞಾನವು ಹೇಗೆ ದಾರಿತೋರಿಸಬಲ್ಲದೆಂಬ ವಿಷಯದೊಂದಿಗೆ ನಿರ್ವಹಿಸುವ ದೃಶ್ಯ ವಿವರಗಳು ವಾಸ್ತವತೆಯನ್ನು ಪಡೆಯದೆ ಹೋಗಿವೆ. ಉತ್ತಮಗೊಂಡ ಒಂದು ನಾಗರಿಕತೆಯಿಂದ ಬಹು ದೂರವಾಗಿ, ಇಂದಿನ ವಾಸ್ತವಿಕತೆಯು ಪ್ರತಿಕೂಲವಾದದ್ದಾಗಿದೆ. ಜರ್ಮನ್ ಬರಹಗಾರ, ಕಾರ್ಲ್ ಮಿಕಾಯೆಲ್ ಆರ್ಮರ್ ಗಮನಿಸುವುದು: “ಭವಿಷ್ಯತ್ತು ನಮ್ಮನ್ನು ಭಾವಪರವಶಗೊಳಿಸಿದೆ.” ಅವರು “ಪರಮಾಣು ಮರಣದ ಭೌಗೋಲಿಕ ಬೆದರಿಕೆಗಳು, ಪರಿಸರದ ವಿಪತ್ತುಗಳು, ಹಸಿವೆ, ಬಡತನ, ಶಕ್ತಿಯ ಬಿಕ್ಕಟ್ಟು, [ಮತ್ತು] ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು” ಸೂಚಿಸುತ್ತಾರೆ.
ಬೇರೆ ಮಾತುಗಳಲ್ಲಿ, ಅನೇಕ ವಿಜ್ಞಾನ ಕಲ್ಪನಾ ಕಥೆಗಳಲ್ಲಿ ವರ್ಣಿಸಲಾದ ಭೂಮಿಗಾಗಿ ಮತ್ತು ಮಾನವ ಕುಟುಂಬಕ್ಕಾಗಿರುವ ಭವಿಷ್ಯತ್ತು, ವಾಸ್ತವಿಕತೆಯ ಕಡೆಗೆ ಪ್ರಗತಿಮಾಡುತ್ತಿಲ್ಲ. ಅದಕ್ಕೆ ವಿರುದ್ಧವಾಗಿ, ಭೂಮಿಯ ಮೇಲೆ ಪರಿಸ್ಥಿತಿಗಳು ಕ್ಷೀಣವಾದಂತೆ, ಮಾನವ ಸನ್ನಿವೇಶವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಯಾವುದೇ ವೈಜ್ಞಾನಿಕ ಅಥವಾ ತಾಂತ್ರಿಕ ಅಭಿವೃದ್ಧಿಗಳ ಹೊರತೂ, ಲೋಕದಾದ್ಯಂತ ಮಾನವ ಸಮಾಜವು, ಹೆಚ್ಚು ಹೆಚ್ಚಾಗಿ ಅಪರಾಧ, ಹಿಂಸಾಚಾರ, ಬಡತನ, ಕುಲಸಂಬಂಧವಾದ ಹಗೆತನಗಳು, ಮತ್ತು ಕುಟುಂಬದ ಕುಸಿತವನ್ನು ಅನುಭವಿಸುತ್ತದೆ.
ಕೆಲವೊಂದು ವೈಜ್ಞಾನಿಕ ಪ್ರಯತ್ನಗಳು ಮಾನವನ ತೊಂದರೆಗಳಿಗೆ ಬಹಳ ಹೆಚ್ಚನ್ನು ಕೂಡಿಸಿವೆ. ಕೆಲವೊಂದು ಉದಾಹರಣೆಗಳನ್ನು ಮಾತ್ರ ಪರಿಗಣಿಸಿರಿ: ನಮ್ಮ ವಾಯು, ಜಲ, ಮತ್ತು ಆಹಾರದ ರಾಸಾಯನಿಕ ಮಾಲಿನ್ಯ; ಎಲ್ಲಿ ಒಂದು ಕೈಗಾರಿಕೆಯ ಕಾರ್ಖಾನೆಯಲ್ಲಿ ನಡೆದ ದುರ್ಘಟನೆಯು ವಿಷಗಾಳಿಯ ಬಿಡುಗಡೆಯನ್ನುಂಟುಮಾಡಿ, ಇದರಿಂದ 2,000 ಜನರು ಮಡಿದು, ಸುಮಾರು 2,00,000 ಜನರು ಗಾಯಗೊಂಡರೋ ಆ ಭಾರತದ ಭೋಪಾಲ್ನಲ್ಲಿ ಸಂಭವಿಸಿದ ವಿಪತ್ತು; ಅನೇಕ ಮರಣಗಳಲ್ಲಿ ಮತ್ತು ಒಂದು ವಿಸ್ತಾರವಾದ ಕ್ಷೇತ್ರದಲ್ಲಿ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಭಿವೃದ್ಧಿಗಳಲ್ಲಿ ಫಲಿಸಿದ ಯುಕ್ರೇನ್ನ ಚರ್ನಾಬಲ್ನಲ್ಲಿನ ನ್ಯೂಕ್ಲಿಯರ್ ಶಕ್ತಿ ಕಾರ್ಖಾನೆಯ ಕರಗಿಹೋಗುವಿಕೆ.
ಬಾಹ್ಯಾಕಾಶದಲ್ಲಿ ನೆಲಸುನಾಡನ್ನು ಸ್ಥಾಪಿಸುವುದೊ?
ಭವಿಷ್ಯತ್ತಿನ ಕುರಿತಾದ ವಿಜ್ಞಾನ ಕಲ್ಪನಾ ಕಥೆಯ ಕಥನಗಳ ಒಂದು ದೊಡ್ಡ ಸಂಖ್ಯೆಯು, ಭೂಮಿಯ ಮೇಲಿರುವ ಜೀವಿತದ ಸಂಕಟಗಳಿಂದ ಮತ್ತು ಮಾನವ ಯೋಜನೆಗಳ ಅಸಫಲತೆಗಳಿಂದ ಮತ್ತೊಂದು ವಿಧದಲ್ಲಿ ಬಿಡುಗಡೆಯನ್ನು ನೀಡುತ್ತದೆ. ಅವು ಅತ್ಯುತ್ಸಾಹಿಯನ್ನು ಬಾಹ್ಯಾಕಾಶದಲ್ಲಿರುವ ಊಹಾತ್ಮಕ ದೃಶ್ಯ ವಿವರಗಳಿಗೆ ವರ್ಗಾಯಿಸುತ್ತವೆ. ಇತರ ಗ್ರಹಗಳಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ನೆಲಸುನಾಡನ್ನು ಸ್ಥಾಪಿಸಲು, ಮಾನವರು ಆಕಾಶಗಂಗೆಗಳ ಮಧ್ಯದಲ್ಲಿ ಆಕಾಶನೌಕೆಗಳನ್ನು ಬಳಸುವುದು, ಸಾಮಾನ್ಯ ಮುಖ್ಯವಿಷಯಗಳಾಗಿವೆ. ಇದು ಅನೇಕರನ್ನು, ಒಂದು ನ್ಯೂ ಯಾರ್ಕ್ ವಾರ್ತಾಪತ್ರಿಕೆಯ ಸಂಪಾದಕನಿಗೆ ಬರೆದ ಈ ವ್ಯಕ್ತಿಯ ಹಾಗೆ ಭಾವಿಸುವಂತೆ ಮಾಡುತ್ತದೆ: “ಮಾನವಜಾತಿಯ ಭವಿಷ್ಯತ್ತು, ಬಾಹ್ಯಾಕಾಶ ಶೋಧದಲ್ಲಿ ಅಡಗಿದೆ.”
ಭೂಮಿಯ ಹತ್ತಿರ ಬಾಹ್ಯಾಕಾಶ ಶೆಟಲ್ಗಳ ಹಾರಾಟ ಮತ್ತು ಬಾಹ್ಯಾಕಾಶವನ್ನು ವಿವರವಾಗಿ ಪರೀಕ್ಷಿಸಲು ಸಲಕರಣೆಗಳನ್ನು ಬಿಡುವುದರೊಂದಿಗೆ ಬಾಹ್ಯಾಕಾಶ ಶೋಧವು ಮುಂದುವರಿಯುತ್ತದೆ, ನಿಜ. ಆದರೆ ಬಾಹ್ಯಾಕಾಶದಲ್ಲಿ ಜೀವಿಸುವುದರ ಕುರಿತೇನು? ಮಾನವರ ಮೂಲಕ ವಿಸ್ತಾರವಾದ ಬಾಹ್ಯಾಕಾಶ ಹಾರಾಟಗಳ ಕುರಿತಾಗಿ ಮಾತುಕತೆಗಳಿರುವುದಾದರೂ, ಇತರ ಆಕಾಶಗಂಗೆಗಳಲ್ಲಂತೂ ಬಿಡಿರಿ, ಚಂದ್ರನ ಮೇಲೆ ಅಥವಾ ಹತ್ತಿರದ ಯಾವುದೇ ಗ್ರಹಗಳಲ್ಲಿ ನೆಲಸುನಾಡನ್ನು ಸ್ಥಾಪಿಸುವ ಯಾವುದೇ ಗಂಭೀರವಾದ ಕಾರ್ಯಯೋಜನೆಗಳು ಪ್ರಚಲಿತವಾಗಿರುವುದಿಲ್ಲ. ನಿಜವಾಗಿಯೂ, ಮಾನವ ಪ್ರಯತ್ನಗಳಿಂದ ಬಾಹ್ಯಾಕಾಶದಲ್ಲಿ ನೆಲಸುನಾಡನ್ನು ಸ್ಥಾಪಿಸುವುದು, ಹತ್ತಿರದ ಭವಿಷ್ಯತ್ತಿನಲ್ಲಿ ವಾಸ್ತವಿಕವಾದ ಒಂದು ಆಯ್ಕೆ ಆಗಿರುವುದಿಲ್ಲ. ಮತ್ತು ಹಲವಾರು ರಾಷ್ಟ್ರಗಳ ಪ್ರಚಲಿತ ಬಾಹ್ಯಾಕಾಶ ಕಾರ್ಯಕ್ರಮಗಳು ಎಷ್ಟು ವೆಚ್ಚದ್ದಾಗಿವೆ ಎಂದರೆ, ಅವುಗಳನ್ನು ಕಡಿಮೆಗೊಳಿಸಲಾಗುತ್ತಿದೆ ಇಲ್ಲವೆ ತ್ಯಜಿಸಲಾಗುತ್ತಿದೆ.
ವಾಸ್ತವವೇನೆಂದರೆ, ಮಾನವಜಾತಿಯ ಭವಿಷ್ಯತ್ತು, ನಿಮ್ಮ ಭವಿಷ್ಯತ್ತು, ಮಾನವರಿಂದ ಪ್ರವರ್ಧಿಸಲ್ಪಟ್ಟ ಯಾವುದೇ ಬಾಹ್ಯಾಕಾಶ ಸಾಹಸಕಾರ್ಯಗಳಲ್ಲಿರುವುದಿಲ್ಲ. ನಿಮ್ಮ ಭವಿಷ್ಯತ್ತು ಇಲ್ಲಿ, ಭೂಮಿಯ ಮೇಲಿದೆ. ಮತ್ತು ಆ ಭವಿಷ್ಯತ್ತು, ವಿಜ್ಞಾನಿಗಳಿಂದ, ಮಾನವ ಸರಕಾರಗಳಿಂದ, ಅಥವಾ ಹಸ್ತಪ್ರತಿ ಬರಹಗಾರರಿಂದ ನಿರ್ಧರಿಸಲ್ಪಡಲಾರದು. ನಾವು ಏಕೆ ಇಷ್ಟು ಖಚಿತರಾಗಿರಬಲ್ಲೆವು?
ಏಕೆಂದರೆ, ಭವಿಷ್ಯತ್ತು ಭೂಮಿಯ ಸೃಷ್ಟಿಕರ್ತನಾದ ಯೆಹೋವ ದೇವರಿಂದ ನಿರ್ಧರಿಸಲ್ಪಡುವುದು. ಮತ್ತು ಬೈಬಲಿನಲ್ಲಿ ಕೊಡಲ್ಪಟ್ಟಿರುವ ವಾಗ್ದಾನಗಳನ್ನು ಯಾವ ವಿಜ್ಞಾನ ಕಲ್ಪನಾ ಕಥೆಯ ದೃಶ್ಯ ವಿವರವೂ ಅನುಕರಿಸಲಾರದು. ದೇವರ ಪ್ರೇರಿತ ವಾಕ್ಯವಾದ ಆ ಪುಸ್ತಕದಲ್ಲಿ—ಯಾವುದನ್ನು ಆತನು ಮಾನವಜಾತಿಗೆ ಸಾಗಿಸಿದ್ದಾನೊ, ಅದರಲ್ಲಿ—ಮಾನವರಿಗಾಗಿ ಭವಿಷ್ಯತ್ತು ಏನಾಗಿರುವುದೆಂದು ಆತನು ನಮಗೆ ಹೇಳುತ್ತಾನೆ. (2 ತಿಮೊಥೆಯ 3:16, 17; 2 ಪೇತ್ರ 1:20, 21) ಅದು ಏನನ್ನು ಹೇಳುತ್ತದೆ?
ಮಾನವ ಕುಟುಂಬದ ಭವಿಷ್ಯತ್ತು
ಯೇಸು ಕ್ರಿಸ್ತನ ಕೈಗಳಲ್ಲಿ, ಒಂದು ಹೊಸ ಸರಕಾರದ ಮೂಲಕ ಮಾನವ ಸಮಾಜದ ಒಂದು ಸಂಪೂರ್ಣ ಕ್ರಮಪಡಿಸುವಿಕೆಯನ್ನು ನಡೆಸಲಿಕ್ಕಾಗಿರುವ ಸೃಷ್ಟಿಕರ್ತನ ಉದ್ದೇಶವನ್ನು, ದೇವರ ವಾಕ್ಯವು ಸ್ಪಷ್ಟವಾಗಿ ಸೂಚಿಸುತ್ತದೆ. ಬೈಬಲಿನಲ್ಲಿ ಆ ಸ್ವರ್ಗೀಯ ಸರಕಾರವು ದೇವರ ರಾಜ್ಯವೆಂದು ಕರೆಯಲ್ಪಟ್ಟಿದೆ.—ಮತ್ತಾಯ 6:9, 10.
ಆ ರಾಜ್ಯದ ಕುರಿತು ದಾನಿಯೇಲ 2:44ರ ಪ್ರೇರಿತ ಪ್ರವಾದನೆಯು ಘೋಷಿಸುವುದು: “ಆ [ಇಂದು ಅಸ್ತಿತ್ವದಲ್ಲಿರುವ] ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ [ಪ್ರಚಲಿತ ದಿನದ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”
ದೇವರ ಬಲಶಾಲಿಯಾದ ಸಕ್ರಿಯ ಶಕ್ತಿಯ ಪ್ರೇರಣೆಯ ಕೆಳಗೆ, ಅಪೊಸ್ತಲ ಪೇತ್ರನು ಸಹ ದೇವರ ರಾಜ್ಯದ ಕೆಳಗೆ ಭೂಮಿಯ ಮೇಲೆ ಭವಿಷ್ಯತ್ತಿನ ಜೀವನದ ಕುರಿತು ಬರೆದನು. ಅವನು ಹೇಳಿದ್ದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ [ದೇವರ ಸ್ವರ್ಗೀಯ ರಾಜ್ಯ] ನೂತನಭೂಮಂಡಲವನ್ನೂ [ಆ ರಾಜ್ಯದ ಕೆಳಗೆ ಒಂದು ಹೊಸ ಮಾನವ ಸಮಾಜ] ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.
ದೇವರ ಸ್ವರ್ಗೀಯ ರಾಜ್ಯದ ಆಳಿಕೆಯ ಕೆಳಗೆ ಭೂಮಿಯ ಮೇಲೆ ಜೀವಿಸುವ ಸುಯೋಗವಿರುವವರಿಗೆ ಜೀವನವು ಯಾವ ರೀತಿಯದ್ದಾಗಿರುವುದು? ಸೃಷ್ಟಿಕರ್ತನ ವಾಗ್ದಾನವು ಹೀಗಿದೆ: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:4, 5.
ಸೃಷ್ಟಿಕರ್ತನು ವಾಗ್ದಾನಿಸುವ ರೀತಿಯ ಭವಿಷ್ಯತ್ತು ಅದ್ಭುತಕರವಾದ ಭವಿಷ್ಯತ್ತಾಗಿದೆ. ಅದು, ಅನೇಕ ವೇಳೆ ಅತಿ ಮಾನುಷ, ಭ್ರಾಮಕ ಜೀವಿಗಳಿಂದ ಮತ್ತು ಪರಿಸರಗಳಿಂದ ವೈಶಿಷ್ಟ್ಯ ಪಡೆದಿರುವ, ವಿಜ್ಞಾನ ಕಲ್ಪನಾ ಕಥೆಯ ಬರಹಗಾರರಿಂದ ಅಥವಾ ವಿಜ್ಞಾನಿಗಳಿಂದ ಯಾವುದೇ ಕಲ್ಪಿತ ದೃಶ್ಯ ವಿವರಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಸತ್ಯ ಕ್ರೈಸ್ತರು ಭವಿಷ್ಯತ್ತಿಗಾಗಿರುವ ದೇವರ ಖಂಡಿತವಾದ ವಾಗ್ದಾನಗಳಲ್ಲಿ ನಂಬಿಕೆಯಿಡುತ್ತಾರೆ. ನಿಶ್ಚಯವಾಗಿ, ಅವರು ಹೆಚ್ಚನ್ನು ಮಾಡುತ್ತಾರೆ. ಅವುಗಳಿಗಾಗಿ ತಮ್ಮ ಜೀವವನ್ನು ಅವರು ಗಂಡಾಂತರಕ್ಕೆ ಈಡುಮಾಡುತ್ತಾರೆ.
ಅವರು ಏಕೆ ಇಂತಹ ಭರವಸೆಯಿಂದ ಹಾಗೆ ಮಾಡಬಲ್ಲರು? ಏಕೆಂದರೆ, ‘ದೇವರು ಸುಳ್ಳಾಡಸಾಧ್ಯವಿಲ್ಲ’ ಎಂಬ ಕಾರಣದಿಂದ, ಈ “ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ”ವೆಂದು ಅವರಿಗೆ ದೇವರ ವಾಕ್ಯದಿಂದ ತಿಳಿದಿದೆ. ವಾಸ್ತವದಲ್ಲಿ, “ದೇವರು ಸುಳ್ಳಾಡಲು ಸಾಧ್ಯವಿಲ್ಲ.” (ರೋಮಾಪುರ 5:5; ತೀತ 1:2, NW; ಇಬ್ರಿಯ 6:18) ದೇವರ ಒಬ್ಬ ಸೇವಕನಾದ ಯೆಹೋಶುವನು, ಬಹಳ ಹಿಂದೆ ಹೇಳಿದಂತೆ: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
ಹೆಚ್ಚಿನ ವಿಜ್ಞಾನ ಕಲ್ಪನಾ ಕಥೆಯು ಈ ದುಷ್ಟ ಹಳೆಯ ವ್ಯವಸ್ಥೆಯ ವಿಚಾರಗಳನ್ನು ಪ್ರತಿಬಿಂಬಿಸುತ್ತದೆ. ಅದು ಹೇಗೆ? ವಿಜ್ಞಾನ ಕಲ್ಪನಾ ಕಥೆಯು, ಅನೇಕ ವ್ಯಕ್ತಿಗಳು ಸಾಂಪ್ರದಾಯಿಕ ಅಧಿಕಾರವನ್ನು ತಿರಸ್ಕರಿಸಿ, ಮನುಷ್ಯನು ತನ್ನ ಸ್ವಂತ ಭವಿಷ್ಯತ್ತನ್ನು ಸಾಧಿಸಬಹುದೆಂದು ನಂಬಿದ, ಜ್ಞಾನೋದಯವೆಂಬುದಾಗಿ ಕರೆಯಲ್ಪಟ್ಟ ಅವಧಿಯಲ್ಲಿ ಆರಂಭಗೊಂಡಿತು. ಸಮಾಜದ ಹೆಚ್ಚಿನ ತೊಂದರೆಗೆ ಅವರು ಸರಿಯಾಗಿಯೇ ಲೌಕಿಕ ಧರ್ಮವನ್ನು ದೂಷಿಸಿದರು, ಆದರೆ ನಂತರ ಅವರು ದೇವರ ಅಸ್ತಿತ್ವದ ಹಾಗೂ ಉದ್ದೇಶದ ಕುರಿತಾದ ಸತ್ಯವನ್ನು ತಿರಸ್ಕರಿಸಿದರು. ವಿಷಯಗಳು ಕಾರ್ಯಮಾಡುತ್ತಿದ್ದ ವಿಧದಿಂದ ಅವರು ನಿರಾಶರಾದರು, ಆದುದರಿಂದ ಬೇರೆ ವಿಚಾರಗಳನ್ನು ಹುಡುಕಿದರು.
ಹಾಗಿದ್ದರೂ, ಮಾನವ ವಿಚಾರಗಳು, ಎಷ್ಟೇ ಉತ್ತಮವಾಗಿ ಯೋಚಿಸಲ್ಪಟ್ಟಿದ್ದರೂ, ವ್ಯಾಪ್ತಿಯಲ್ಲಿ ಸೀಮಿತವಾಗಿವೆ. ನಮ್ಮ ಸೃಷ್ಟಿಕರ್ತನು ಹೇಳುವುದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.”—ಯೆಶಾಯ 55:9.
ನಿಜವಾದ ವೈಜ್ಞಾನಿಕ ಕಂಡುಹಿಡಿತ
ದೇವರ ನೂತನ ಲೋಕದಲ್ಲಿ, ಜ್ಞಾನಕ್ಕಾಗಿರುವ ಮಾನವಜಾತಿಯ ಸ್ವಾಭಾವಿಕ ದಾಹವು, ಭಾಗಶಃ ಯಥಾರ್ಥವಾದ ವೈಜ್ಞಾನಿಕ ವಿಚಾರಣೆಯ ಮೂಲಕ ಶಮನಮಾಡಲ್ಪಡುವುದು. ದೃಶ್ಯ ವಿವರಗಳನ್ನು ಕಲ್ಪಿಸುವ ಅಗತ್ಯವು ಅಲ್ಲಿರುವುದಿಲ್ಲ, ಏಕೆಂದರೆ ವಾಸ್ತವಿಕತೆಯು ಮನಸ್ಸನ್ನು ಹಿತಕರವಾದ, ಸತ್ಯವಾದ ವಿಧದಲ್ಲಿ ಚಿತ್ತಾಕರ್ಷಮಾಡಿ, ಶಿಕ್ಷಣಕೊಡುವುದು.
ಪ್ರಖ್ಯಾತ ವಿಜ್ಞಾನಿಯಾದ ಐಸಕ್ ನ್ಯೂಟನ್ ತನ್ನನ್ನು, “[ತನ್ನ] ಮುಂದೆ ಕಂಡುಹಿಡಿಯಲಾಗದ ಸತ್ಯದ ಮಹಾ ಸಾಗರವು ಹರಡಿಕೊಂಡಿರುವಾಗ . . . ಸಮುದ್ರ ತೀರದಲ್ಲಿ ಆಡುತ್ತಿರುವ ಒಬ್ಬ ಹುಡುಗ”ನಿಗೆ ಹೋಲಿಸಿಕೊಂಡಾಗ ಅವನಿಗೆ ಹೇಗೆ ಅನಿಸಿತೆಂದು ಆಗ ಅನೇಕರು ಅರ್ಥಮಾಡಿಕೊಳ್ಳುವರು. ನಿಸ್ಸಂದೇಹವಾಗಿ, ದೇವರ ನೂತನ ಲೋಕದಲ್ಲಿ, ಒಂದರ ನಂತರ ಇನ್ನೊಂದು ಪ್ರಚೋದಕ ಕಂಡುಹಿಡಿತಕ್ಕೆ, ಆತನು ನಂಬಿಗಸ್ತ ಮಾನವರನ್ನು ನಿರ್ದೇಶಿಸುವನು.
ಹೌದು, ವೈಜ್ಞಾನಿಕ ಸಂಶೋಧನೆಯು ಆಗ ಸಂಪೂರ್ಣವಾಗಿ ಸತ್ಯದ ಮೇಲೆ ಆಧರಿಸಿರುವುದು, ಯಾಕೆಂದರೆ ಯೆಹೋವನು ‘ಸತ್ಯದ ದೇವರು.’ ಮನುಷ್ಯನ ಭೂಪರಿಸರದಿಂದ ಮತ್ತು ಪ್ರಾಣಿ ಲೋಕದಿಂದ ಸಹ ಕಲಿಯುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ. (ಕೀರ್ತನೆ 31:5; ಯೋಬ 12:7-9) ಸತ್ಯದ ದೇವರಿಂದ ಮಾರ್ಗದರ್ಶಿಸಲ್ಪಟ್ಟ ಪ್ರಾಮಾಣಿಕವಾದ ವೈಜ್ಞಾನಿಕ ಪ್ರಯತ್ನವು, ಖಂಡಿತವಾಗಿಯೂ ದೇವರ ನೂತನ ವ್ಯವಸ್ಥೆಯ ಒಂದು ಆಕರ್ಷಕ ವೈಶಿಷ್ಟ್ಯವಾಗಿರುವುದು. ಆಗ ಎಲ್ಲ ಶೋಧಗಳಿಗೆ, ಕಂಡುಹಿಡಿತಗಳಿಗೆ, ಮತ್ತು ಮಾನವನ ಜೀವಿತದಲ್ಲಿ ಮತ್ತು ಜೀವಿತದ ಮಟ್ಟಗಳಲ್ಲಿ ಆದ ಅದ್ಭುತಕರ ಅಭಿವೃದ್ಧಿಗಳಿಗಾಗಿ ಪ್ರಶಸ್ತಿಯು, ಯಾವುದೇ ಮನುಷ್ಯನಿಗಲ್ಲ, ವಿಶ್ವದ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಸಲ್ಲಿಸಲ್ಪಡುವುದು.
ವೇಗವಾಗಿ ಸಮೀಪಿಸುತ್ತಿರುವ ಆ ನೂತನ ಲೋಕದಲ್ಲಿ, ಆತನ ಪ್ರೀತಿಯ ಆರೈಕೆ ಮತ್ತು ಮಾರ್ಗದರ್ಶನಕ್ಕಾಗಿ ಎಲ್ಲ ವಿಧೇಯ ಮಾನವರು ದೇವರನ್ನು ಮಹಿಮೆಪಡಿಸುವರು. ಅವರು ಆತನನ್ನು ಮಹಾ ಹರ್ಷದಿಂದ ಸೇವಿಸುವರು ಮತ್ತು ಆತನಿಗೆ, ಪ್ರಕಟನೆ 4:11ರಲ್ಲಿ ವರ್ಣಿಸಲಾದಂತೆ ಹೇಳುವರು: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”
[ಪುಟ 0 ರಲ್ಲಿರುವ ಚಿತ್ರ]
ಮಾನವಜಾತಿಯ ಭವಿಷ್ಯತ್ತು ಭೂಮಿಯ ಮೇಲಿದೆ