ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 2/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1999
  • ಅನುರೂಪ ಮಾಹಿತಿ
  • ಹಿತಕರ ಒತ್ತಡ, ಅಹಿತಕರ ಒತ್ತಡ
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ ವಾಚಕರಿಂದ
    ಎಚ್ಚರ!—1999
  • ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?
    ಎಚ್ಚರ!—2010
ಇನ್ನಷ್ಟು
ಎಚ್ಚರ!—1999
g99 2/8 ಪು. 30

ನಮ್ಮ ವಾಚಕರಿಂದ

ಜಾತಿಪದ್ಧತಿ ನನಗೆ 12 ವರ್ಷ ವಯಸ್ಸು. ನಿನ್ನೆ ಜಾತಿಪದ್ಧತಿಯ ಬಗ್ಗೆ ಹೋಮ್‌ವರ್ಕನ್ನು ಕೊಡಲಾಗಿತ್ತು. ನನ್ನ ಪೂರ್ವಜರು ಭಾರತೀಯರು. “ಕ್ರೈಸ್ತರು ಮತ್ತು ಜಾತಿಪದ್ಧತಿ” (ಏಪ್ರಿಲ್‌ 8, 1998) ಎಂಬ ಲೇಖನವನ್ನು ನಾನು ಇಂದು ಪಡೆದುಕೊಂಡೆ. ನನ್ನ ಶಾಲಾ ಪಠ್ಯಪುಸ್ತಕಗಳು ವಿಷಯವನ್ನು ನೀವು ವಿವರಿಸಿದಂತಹ ರೀತಿಯಲ್ಲಿ ಸಮಗ್ರವಾಗಿ ವಿವರಿಸಲಿಲ್ಲ.

ಎಸ್‌. ಎಸ್‌. ಎನ್‌., ಅಮೆರಿಕ

ಒತ್ತಡವನ್ನು ನಿರ್ವಹಿಸುವುದು ಆಯಾಸ, ಬಳಲಿಕೆ ಮತ್ತು ಮಾನಸಿಕ ದಣಿವನ್ನು ನಿಭಾಯಿಸುವುದರ ವಿಷಯವಾಗಿ ನಾನು ಜನಪ್ರಿಯ ಪತ್ರಿಕೆಗಳಲ್ಲಿ ಓದಿದ್ದೇನೆ. ಅದನ್ನು ನಿಭಾಯಿಸುವಷ್ಟು ಶಕ್ತಿ ನನ್ನಲ್ಲಿದೆಯೋ ಎಂದು ಯೋಚಿಸುವಂತೆ ಮಾಡುತ್ತಿತ್ತು! ಒತ್ತಡವನ್ನು ನಿಭಾಯಿಸುವುದರ ಕುರಿತಾಗಿ ನೀವು ನೀಡಿದ 15 ಸಲಹೆಗಳಲ್ಲಿ ಒಂದು ಕೂಡ ನಕಾರಾತ್ಮಕವಾದದ್ದಾಗಿರಲಿಲ್ಲ. ಅದಕ್ಕೆ ಬದಲಾಗಿ, (“ನೀವು ಒತ್ತಡವನ್ನು ನಿರ್ವಹಿಸಲು ಸಾಧ್ಯವಿದೆ!,” ಏಪ್ರಿಲ್‌ 8, 1998) ಎಂಬ ವಿಷಯವು, ಜೀವನವನ್ನು ಸಾಗಿಸುತ್ತಿರುವಾಗಲೇ ಒತ್ತಡವನ್ನು ಹೇಗೆ ಕಡಿಮೆಮಾಡುವುದೆಂಬುದನ್ನು ತೋರಿಸಿ ಕೊಟ್ಟಿತು.

ಜೆ. ಬಿ., ಬೊಲಿವಿಯ

ನಾನು ವ್ಯಾಕುಲತೆಯಿಂದ ಬಳಲುತ್ತಿರುವ ಕಾರಣ, ಈ ಲೇಖನಗಳು ತಕ್ಕ ಸಮಯಕ್ಕೆ ಬಂದವು. ನಾನು ಪೂರ್ಣ ಸಮಯದ ಸೌವಾರ್ತಿಕಳಾಗಿದ್ದೇನೆ ಮತ್ತು ನನಗೆ ಇಂತಹ ಸಮಸ್ಯೆಗಳಿರುವುದು ತಪ್ಪೆಂದು ನಾನು ನೆನಸಿದೆ. ಈ ಲೇಖನಗಳನ್ನು ಓದಿದಾಗ, ನನಗೆ ಅಳು ಬಂತು. ಯೆಹೋವನು ತನ್ನ ಸೇವಕರಿಗೆ ಕೋಮಲವಾದ ಕನಿಕರವನ್ನು ತೋರಿಸುತ್ತಾನೆ ಮತ್ತು ನಮ್ಮ ಸಮಸ್ಯೆಗಳನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ ಎಂಬುದನ್ನು ನಾನು ತಿಳಿದುಕೊಂಡೆ.

ಡಿ. ಎಮ್‌., ಇಟಲಿ

ನಾನು ಚರ್ಮರೋಗದಿಂದ ಬಳಲುತ್ತಿರುವುದರಿಂದ ಈ ಲೇಖನವನ್ನು ಓದುವುದು ನಿಜವಾಗಿಯೂ ಒಳ್ಳೆಯದಾಗಿತ್ತು. ಯೆಹೋವನ ದೃಷ್ಟಿಯಲ್ಲಿ ನಾನು ಅಪ್ರಾಮುಖ್ಯಳಾಗಿದ್ದೇನೆಂದು ಕೆಲವೊಮ್ಮೆ ನನಗನಿಸುತ್ತದೆ, ಆದರೆ ನಿಮ್ಮ ಲೇಖನವು ಅದನ್ನು ಸುಳ್ಳೆಂದು ರುಜುಪಡಿಸಿತು. ಆತನು ನಿಜವಾಗಿಯೂ ನಮ್ಮ ಬಗ್ಗೆ ಎಷ್ಟೊಂದು ಚಿಂತಿಸುತ್ತಾನೆಂದರೆ, ಒತ್ತಡದ ಬಗ್ಗೆ ನನಗೆ ಬೇಕಾಗಿದ್ದ ಎಲ್ಲ ಮಾಹಿತಿಯನ್ನು ಆತನು ಒದಗಿಸಿದ್ದಾನೆ.

ಎಸ್‌. ಎಸ್‌., ಬ್ರೆಸಿಲ್‌

“ಪಿಟಿಎಸ್‌ಡಿ—ಅಪಸಾಮಾನ್ಯ ಅನುಭವಕ್ಕೊಂದು ಸಾಮಾನ್ಯ ಪ್ರತಿಕ್ರಿಯೆ” ಎಂಬ ರೇಖಾಚೌಕಕ್ಕಾಗಿ ನನ್ನ ಹೃದಯದಾಳದ ಕೃತಜ್ಞತೆ. ನನ್ನ ಬಾಲ್ಯಾವಸ್ಥೆಯು ತುಂಬ ನೋವುಭರಿತವಾಗಿತ್ತು, ಹಳೆಯ ನೆನಪುಗಳು ಮಾಸಿಹೋಗಿಲ್ಲವಾದರೂ ಲೇಖನವು ನಿಜವಾಗಿಯೂ ಸಮಾಧಾನವನ್ನು ನೀಡಿತು.

ಆರ್‌. ಎನ್‌., ಅಮೆರಿಕ

ಲೇಖನಗಳು ತುಂಬ ಜ್ಞಾನೋದಯವನ್ನು ಉಂಟುಮಾಡುವಂತಹವುಗಳಾಗಿ ಕಂಡುಕೊಂಡೆ. ಸೈತಾನನಿಂದ ಒತ್ತಡಗಳು ಹೆಚ್ಚಾಗುತ್ತಿರುವುದರಿಂದ, ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲಲು ನಮಗೆ ಈ ರೀತಿಯ ಮಾಹಿತಿಯು ತುಂಬ ಅಗತ್ಯ. ನಮ್ಮ ಸಮಸ್ಯೆಗಳಲ್ಲಿ ನೀವು ತುಂಬ ಆಸಕ್ತಿಯನ್ನು ವಹಿಸುತ್ತೀರಿ ಮತ್ತು ಇವುಗಳನ್ನು ನಿಭಾಯಿಸಲು ನಮಗೆ ಏನು ಅಗತ್ಯವಿದೆಯೋ ಅದನ್ನು ನೀಡುತ್ತೀರಿ ಎಂಬುದನ್ನು ಇದು ನನಗೆ ಮನಗಾಣಿಸಿತು.

ವಿ. ಟಿ., ಫಿಜಿ

ಹೆಚ್ಚು ಅಂಕಗಳನ್ನು ಗಳಿಸುವುದು ನಾನು ಶಾಲೆಗೆ ಹೋಗುತ್ತಿರುವ ಒಬ್ಬ ವಿದ್ಯಾರ್ಥಿನಿ. “ಯುವ ಜನರು ಪ್ರಶ್ನಿಸುವುದು . . . ನಾನು ಶಾಲೆಯಲ್ಲಿ ಹೆಚ್ಚು ಉತ್ತಮವಾಗಿ ಕಲಿಯಶಕ್ತನಾಗಿರುವೆನೊ?” (ಏಪ್ರಿಲ್‌ 8, 1998) ಎಂಬ ಲೇಖನಕ್ಕಾಗಿ ಉಪಕಾರವನ್ನು ಹೇಳಲು ನಾನು ಇಷ್ಟಪಡುತ್ತೇನೆ. ನನ್ನ ಅಂಕಗಳು ಯಾವಾಗಲೂ ಸರಾಸರಿಗಿಂತ ಹೆಚ್ಚಾಗಿದ್ದರೂ, ಇನ್ನೂ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ನಾನು ಶ್ರಮಿಸಲಿಲ್ಲ. ಆದರೆ ಈ ಆಸಕ್ತಿದಾಯಕವೂ ಪ್ರೇರೇಪಿಸುವಂತಹದ್ದೂ ಆದ ಲೇಖನದಿಂದ, ಕಾರ್ಯಸಾಧಕ ಗುರಿಗಳನ್ನಿಡುವ ಮೂಲಕ ನಿಜವಾಗಿಯೂ ನಾನು ಹೆಚ್ಚನ್ನು ಸಾಧಿಸಿದ್ದೇನೆ.

ಬಿ. ಆರ್‌., ಅಮೆರಿಕ

ನನಗೆ 14 ವರ್ಷ ವಯಸ್ಸು. ನನಗೆ ನಿಜವಾಗಿಯೂ ಅಧ್ಯಯನವನ್ನು ಮಾಡುವ ವಿಧವು ಗೊತ್ತಿರಲಿಲ್ಲ. ಕೆಲವೊಂದು ವಿಷಯಗಳು ಮುಂದೆ ಉಪಯೋಗಕ್ಕೆ ಬರುವುದಿಲ್ಲವೆಂದು ನಾನು ನಿರ್ಧರಿಸಿದೆ ಮತ್ತು ಅವುಗಳನ್ನು ಓದುವುದು ವ್ಯರ್ಥವೆಂದು ನೆನಸಿದೆ. ಈ ಲೇಖನವನ್ನು ಓದಿದ ಕಾರಣ, ನಾನು ನನ್ನ ಅಭಿಪ್ರಾಯವನ್ನು ಬದಲಾಯಿಸಿದೆ. ಅಷ್ಟುಮಾತ್ರವಲ್ಲದೆ, ಓದುವ ವಿಧವನ್ನು ತುಂಬ ಪ್ರಾಯೋಗಿಕವಾದ ರೀತಿಯಲ್ಲಿ ವಿವರಿಸಿದ್ದಕ್ಕಾಗಿ ನಿಮಗೆ ಉಪಕಾರ!

ಕೆ. ಎಫ್‌., ಜಪಾನ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ