ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 5/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1999
  • ಅನುರೂಪ ಮಾಹಿತಿ
  • ನಮ್ಮ ವಾಚಕರಿಂದ
    ಎಚ್ಚರ!—1999
  • ಪ್ರಣಯಚೇಷ್ಟೆ ಮಾಡುವುದರಲ್ಲಿ ತಪ್ಪೇನಿದೆ?
    ಎಚ್ಚರ!—1998
  • ನಮ್ಮ ವಾಚಕರಿಂದ
    ಎಚ್ಚರ!—1999
  • ನಮ್ಮ ವಾಚಕರಿಂದ
    ಎಚ್ಚರ!—1999
ಇನ್ನಷ್ಟು
ಎಚ್ಚರ!—1999
g99 5/8 ಪು. 30

ನಮ್ಮ ವಾಚಕರಿಂದ

ಅವನು ನನ್ನ ಪ್ರೀತಿಗೆ ಪ್ರತಿಸ್ಪಂದಿಸದಿದ್ದರೆ ಆಗೇನು? ನನಗೆ ಇವತ್ತು ಎಚ್ಚರ! ಪತ್ರಿಕೆಯ ಜುಲೈ 8ರ ಸಂಚಿಕೆಯು ಸಿಕ್ಕಿತು, ಮತ್ತು “ಯುವ ಜನರು ಪ್ರಶ್ನಿಸುತ್ತಾರೆ . . . ಅವನು ನನ್ನ ಪ್ರೀತಿಗೆ ಪ್ರತಿಸ್ಪಂದಿಸದಿದ್ದರೆ ಆಗೇನು?” ಎಂಬ ಲೇಖನವನ್ನು ನೋಡಿದಾಗ, ನನ್ನ ಪ್ರಾರ್ಥನೆಗಳಿಗೆ ಉತ್ತರವನ್ನು ಕೊಟ್ಟದ್ದಕ್ಕಾಗಿ ನಾನು ಕೂಡಲೇ ಯೆಹೋವನಿಗೆ ಉಪಕಾರ ಹೇಳಿದೆ. ಈ ಲೇಖನವನ್ನು ನನ್ನ ತಾಯಿಯೊಂದಿಗೆ ಪರ್ಯಾಲೋಚಿಸಿ, ನನ್ನ ಜೀವಿತದಲ್ಲಿ ಆ ಸಲಹೆಯನ್ನು ಅನ್ವಯಿಸಿಕೊಳ್ಳಲು ನಾನು ದೃಢನಿರ್ಧಾರವನ್ನು ಮಾಡಿದ್ದೇನೆ. “ಯುವ ಜನರು ಪ್ರಶ್ನಿಸುತ್ತಾರೆ . . .” ಎಂಬ ಲೇಖನಮಾಲೆಯು, ನಿಜವಾಗಿಯೂ ಯೆಹೋವ ದೇವರಿಂದ ಒಂದು ಪ್ರೀತಿಪರ ಒದಗಿಸುವಿಕೆಯಾಗಿದೆ.

ಕೆ. ಎಮ್‌., ಕೆನ್ಯಾ

ನಾನೊಬ್ಬ 22 ವರ್ಷ ಪ್ರಾಯದ ಸ್ತ್ರೀ. ನಿಮ್ಮ ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನು ಓದಲು ಆನಂದಿಸುತ್ತೇನಾದರೂ, ಒಂದು ಲೇಖನವು ನನ್ನ ಹೃದಯವನ್ನು ಇಷ್ಟೊಂದು ಗಾಢವಾಗಿ ಸ್ಪರ್ಶಿಸುತ್ತಿರುವುದು ಇದೇ ಪ್ರಥಮ ಬಾರಿ. ನಾನದನ್ನು ಓದಲು ಆರಂಭಿಸಿದಾಗ, ನನ್ನ ಕಣ್ಣುಗಳಲ್ಲಿ ನೀರು ಉಕ್ಕಿಬಂತು. ಸ್ವಲ್ಪ ಸಮಯದ ಹಿಂದೆ, ನೀವು ವರ್ಣಿಸಿರುವಂತಹ ರೀತಿಯ ಅನಿಸಿಕೆಗಳೇ ನನಗಿದ್ದವು, ಮತ್ತು ಅವುಗಳ ಕುರಿತಾಗಿ ನನಗೆ ಅನೇಕ ಪ್ರಶ್ನೆಗಳಿದ್ದವು. ವಿಷಯಗಳನ್ನು ಇನ್ನೂ ಸರಿಯಾದ ರೀತಿಯಲ್ಲಿ ನೋಡುವಂತೆ ಈ ಲೇಖನವು ನನಗೆ ಸಹಾಯಮಾಡಿತು.

ಆರ್‌. ಬಿ., ಲಿತ್ಯುಏನಿಯ

ನಾನು ಈ ಲೇಖನವನ್ನು ಓದಿದಾಗ ಹೀಗೆ ಪ್ರತಿಕ್ರಿಯಿಸಿದೆ: ‘ನನ್ನ ಭಾವನೆಗಳನ್ನು ಅವರು ಅರ್ಥಮಾಡಿಕೊಂಡಿದ್ದಾದರೂ ಹೇಗೆ?’ ಯೆಹೋವನು ಎಲ್ಲವನ್ನೂ ದಯೆಯಿಂದ ಅರ್ಥಮಾಡಿಕೊಳ್ಳುತ್ತಾನೆಂಬುದನ್ನು ತಿಳಿದುಕೊಂಡು ನನಗೆ ತುಂಬ ಸಂತೋಷವಾಯಿತು. ಈ ಪತ್ರಿಕೆಯು ಇಂದೇ ಸಿಕ್ಕಿತು, ಮತ್ತು ಈಗ ಮಧ್ಯರಾತ್ರಿಯಾಗಿದ್ದರೂ ನನಗೀಗಲೇ ಪತ್ರ ಬರೆಯಬೇಕೆಂಬ ಮನಸ್ಸಾಯಿತು.

ಎ. ಎನ್‌., ಜಪಾನ್‌

ಸ್ತ್ರೀಯರನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಲೇಖನವನ್ನು ಬರೆಯಲಾಗಿತ್ತಾದರೂ, ನನಗೆ ಅದು ತುಂಬ ಸಹಾಯಕಾರಿಯಾಗಿತ್ತು. ಕೇವಲ ಒಂದು ವಾರದ ಹಿಂದೆ ನನ್ನ ಪ್ರೇಮಯಾಚನೆಯನ್ನು ಕಟ್ಟುನಿಟ್ಟಾಗಿ ತಿರಸ್ಕರಿಸಲಾಯಿತು ಮತ್ತು ಅದು ನನಗೆ ನೋವನ್ನುಂಟುಮಾಡಿತು. ನಿಮ್ಮ ಲೇಖನವು ನನ್ನ ಭಾವನೆಗಳನ್ನು ಪರೀಕ್ಷಿಸುವಂತೆ ನನಗೆ ಸಹಾಯಮಾಡಿತು. ಅದು ನನ್ನನ್ನು ಸಂತೈಸಿತು ಮತ್ತು ಹೆಚ್ಚು ಪ್ರಾಮುಖ್ಯವಾಗಿ, ನಾನು ಒಬ್ಬ ಹೆಂಡತಿಯನ್ನು ಆರಿಸಿಕೊಳ್ಳುವಾಗ, ಪಡೆದುಕೊಳ್ಳುವುದರ ಕುರಿತಾಗಿ ಅಲ್ಲ, ಕೊಡುವುದರ ಕುರಿತಾಗಿ ಯೋಚಿಸಬೇಕೆಂದು ನನಗೆ ತೋರಿಸಿಕೊಟ್ಟಿತು.

ಪಿ. ಎಚ್‌. ಎಸ್‌., ಬ್ರಸಿಲ್‌

ಕೊರಿಯನ್‌ ಸಮಾಜದಲ್ಲಿ ಒಬ್ಬ ಹುಡುಗಿಯು ಮದುವೆ ಪ್ರಾಯಕ್ಕೆ ಬಂದ ಕೂಡಲೇ ಮದುವೆಯಾಗುವುದರ ಮೇಲೆ ತುಂಬ ಒತ್ತನ್ನು ನೀಡಲಾಗುತ್ತದೆ. ಒಬ್ಬ ಕ್ರೈಸ್ತ ಯುವ ಸ್ತ್ರೀಯು, ಮದುವೆಯಾಗುವ ಮುಂಚೆ “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟುವ” ತನಕ ಕಾಯುವುದು ಒಂದು ಪಂಥಾಹ್ವಾನವಾಗಿರಬಲ್ಲದು. (1 ಕೊರಿಂಥ 7:36, NW) ಅತ್ಯುತ್ಕೃಷ್ಟವಾದ ಸಲಹೆಗಾಗಿ ಉಪಕಾರಗಳು.

ಎಸ್‌. ಸಿ., ಕೊರಿಯ

ಸ್ವ-ಚಿಕಿತ್ಸೆ “ಸ್ವ-ಚಿಕಿತ್ಸೆ—ನಿಮಗೆ ಸಹಾಯಕರವೊ ಹಾನಿಕರವೊ?” (ಆಗಸ್ಟ್‌ 8, 1998) ಎಂಬ ಲೇಖನಮಾಲೆಯನ್ನು ನೋಡಿ ನನಗೆ ತುಂಬ ಸಂತೋಷವಾಯಿತು. ಅವು ಸೊಗಸಾಗಿ ಬರೆಯಲ್ಪಟ್ಟಿದ್ದು, ಆ ವಿಷಯದ ಕುರಿತಾದ ಒಂದು ಸಮತೋಲನದ ಸಾಮಾನ್ಯ ನೋಟವನ್ನು ಕೊಡುತ್ತವೆ. ಇದು ಲೋಕದ ಹೆಚ್ಚಿನ ದೇಶಗಳಲ್ಲಿ ವ್ಯಾವಹಾರಿಕವಾಗಿರಬಲ್ಲದು. ‘ಎಲ್ಲ ಅಸ್ವಸ್ಥತೆಗಳಿಗೆ ಒಂದು ಗುಳಿಗೆಯನ್ನು’ ತೆಗೆದುಕೊಳ್ಳುವ ಬದಲಿಗೆ ಆರೋಗ್ಯಪೂರ್ಣ ಜೀವನ ಶೈಲಿಗಳ ಮೂಲಕ, ನಮ್ಮ ಆರೋಗ್ಯದ ಕುರಿತು ನಾವು ವೈಯಕ್ತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಪ್ರಾಮುಖ್ಯತೆಗೆ ಹೆಚ್ಚು ಒತ್ತನ್ನು ಕೊಟ್ಟು ಅತ್ಯುತ್ಕೃಷ್ಟವಾದ ಕೆಲಸವನ್ನು ಮಾಡಿತು.

ಜೆ. ಎಮ್‌. ಜೆ., ಇಂಗ್ಲೆಂಡ್‌

ಪ್ರಣಯಚೇಷ್ಟೆ “ಬೈಬಲಿನ ದೃಷ್ಟಿಕೋನ: ಪ್ರಣಯಚೇಷ್ಟೆ ಮಾಡುವುದರಲ್ಲಿ ತಪ್ಪೇನಿದೆ?” (ಆಗಸ್ಟ್‌ 8, 1998) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ನನ್ನ ಕುಟುಂಬವು ನನ್ನ ಪ್ರಣಯಚೇಷ್ಟೆಯ ಜೀವನರೀತಿಯ ಫಲಿತಾಂಶಗಳಿಂದ ಚೇತರಿಸಿಕೊಳ್ಳುತ್ತಿದೆ. ನನ್ನ ಕುಟುಂಬಕ್ಕೆ, ವಿಶೇಷವಾಗಿ ನನ್ನ ಪ್ರೀತಿಯ ಹೆಂಡತಿಗೆ ನಾನು ಉಂಟುಮಾಡುತ್ತಿದ್ದ ನೋವನ್ನು ನಾನು ಅಲಕ್ಷಿಸಿದೆ. ನಾನು ನನ್ನ ಕ್ರೈಸ್ತ ಸಹೋದರ ಸಹೋದರಿಯರಿಗೆ ಈ ಒಂದು ಮಾತನ್ನು ಹೇಳಬಯಸುವೆ: “ದಯವಿಟ್ಟು ನಮ್ಮ ತಂದೆಯಾದ ಯೆಹೋವನಿಗೆ ಕಿವಿಗೊಡಿರಿ. ಪ್ರಣಯಚೇಷ್ಟೆಯಿಂದ ದೂರಸರಿಯಿರಿ, ಯೆಹೋವನಿಗೆ ಪ್ರಾರ್ಥಿಸಿರಿ, ಮತ್ತು ಕೆಟ್ಟತನದಿಂದ ದೂರ ಓಡುತ್ತಾ ಇರಿ.”

ಡಿ. ಬಿ., ಅಮೆರಿಕ

ಪ್ರಣಯಚೇಷ್ಟೆಯು ಒಂದು ಚಿಕ್ಕ ವಿಷಯವಲ್ಲ ಎಂಬ ವಾಸ್ತವಾಂಶವನ್ನು ಈ ಲೇಖನವು ನನಗೆ ಮನದಟ್ಟು ಮಾಡಿತು. ವಿವಾಹವಿಚ್ಛೇದದ ರೂಪದಲ್ಲಿ ನಮ್ಮ ಕುಟುಂಬವು ಒಂದು ದೊಡ್ಡ ಹೊಡೆತಕ್ಕೆ ಗುರಿಯಾಯಿತು. ಮತ್ತು ಮುಗ್ಧ ತಮಾಷೆಯೆಂದು ತೋರಿದಂತಹ ಸಂಗತಿಯು ಸಮಸ್ಯೆಯ ಮೂಲ ಕಾರಣವಾಗಿತ್ತು. ತಮ್ಮ ನಡತೆ, ಮಾತು, ಅಥವಾ ಹಾವಭಾವಗಳು, ವಿರುದ್ಧ ಲಿಂಗದವರ ಮೇಲೆ ಹೇಗೆ ಪ್ರಭಾವವನ್ನು ಬೀರುವುದೆಂದು ಸ್ವತಃ ಮುಂಗಾಣದವರಿಗೆ ಈ ಸಲಹೆಯು ಸಹಾಯಮಾಡುವುದೆಂದು ನಾನು ನಿರೀಕ್ಷಿಸುತ್ತೇನೆ.

ಓ. ಎಮ್‌., ಚೆಕ್‌ ರಿಪಬ್ಲಿಕ್‌

ಅನೇಕ ಸಹೋದರಿಯರ ನೋವುಭರಿತ ಹೃದಯಗಳಿಗೆ ಅದು ಒಂದು ಉಪಶಮನಕಾರಿ ಮುಲಾಮಿನಂತಿತ್ತು. ಯೆಹೋವನು ನಮ್ಮ ಅಂತರಂಗದ ಭಾವನೆಗಳನ್ನು ಗಮನಿಸುತ್ತಾನೆ ಮತ್ತು ಕಾಳಜಿವಹಿಸುತ್ತಾನೆಂಬುದನ್ನು ಈ ಲೇಖನದ ಮೂಲಕ ನಾವು ನೋಡಿದ್ದೇವೆ.

ಎ. ಎಮ್‌. ಪಿ., ಸ್ಪೆಯ್ನ್‌

“ಭಾವನಾತ್ಮಕ ಸಂಬಂಧಗಳು” ಎಂಬ ಉಪಶೀರ್ಷಿಕೆಯ ಕೆಳಗಿರುವ ಪ್ಯಾರಗ್ರಾಫ್‌ ನನಗೆ ಒಂದು ಪ್ರಕಟನೆಯಂತಿತ್ತು. ನನ್ನ ಗಂಡನು ಸಭೆಯಲ್ಲಿರುವ ಇನ್ನೊಬ್ಬ ಸಹೋದರಿಯೊಂದಿಗೆ ತಮ್ಮ ಏಕಪ್ರಕಾರದ ಹಿನ್ನೆಲೆಗಳಿಂದಾಗಿ ಅನ್ಯೋನ್ಯವಾದ ಅಭಿರುಚಿಗಳ ಮೇಲೆ ಆಧಾರಿತವಾದ ಒಲವನ್ನು ಬೆಳೆಸಿಕೊಂಡನು. ನಮ್ಮ 17 ವರ್ಷಗಳ ವೈವಾಹಿಕ ಜೀವನದಲ್ಲಿ, ಅವರನ್ನು ಶಂಕಿಸಲು ನನಗೆ ಎಂದೂ ಯಾವುದೇ ಆಸ್ಪದವನ್ನು ಕೊಟ್ಟಿರದಿದ್ದರೂ, ಈಗ ನನ್ನಲ್ಲಿ ಸಂದೇಹಗಳು ಉದ್ಭವಿಸಲಾರಂಭಿಸಿದವು. ನಾನು ಅವರಿಗೆ ಅದನ್ನು ತಿಳಿಸಿದಾಗ ಅವರಿಗೆ ಆರಂಭದಲ್ಲಿ ಆಶ್ಚರ್ಯವಾದರೂ, ನನ್ನ ದೃಷ್ಟಿಕೋನವನ್ನು ಅವರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಅವರು ನನ್ನನ್ನು ಅಥವಾ ನಮ್ಮ ಮೂವರು ಮಕ್ಕಳನ್ನು ನೋಯಿಸಲು ಎಂದೂ ಬಯಸಿರಲಿಲ್ಲವೆಂದು ಹೇಳಿದರು, ಮತ್ತು ಕೂಡಲೇ ಎಲ್ಲ ಸಂಪರ್ಕವನ್ನು ಕಡಿದುಹಾಕಿದರು. ಅವರ ಪ್ರತಿಕ್ರಿಯೆಯಿಂದ ನನಗೆ ತುಂಬ ಸಮಾಧಾನವಾಯಿತು.

ಡಿ. ಟಿ., ಕೆನಡ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ