ಪರಿಚಯ
ಬೆಲೆ ಏರಿಕೆಯ ಬಿಸಿ ನಿಮಗೆ ತಟ್ಟುತ್ತಿದ್ಯಾ? ಜೀವನ ನಡೆಸೋಕೆ ನೀವು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡೋ ಪರಿಸ್ಥಿತಿ ಬಂದಿದ್ಯಾ? ಹೆಂಡ್ತಿ-ಮಕ್ಕಳ ಜೊತೆ ಕೂತು ಮಾತಾಡೋಕೂ ಟೈಮ್ ಇಲ್ಲ ಅನಿಸ್ತಿದ್ಯಾ? ಹಾಗಿದ್ರೆ ಈ ಎಚ್ಚರ! ಪತ್ರಿಕೆಯಲ್ಲಿರೋ ಲೇಖನಗಳು ಬೆಲೆ ಏರಿಕೆಯ ಬರೆಗೆ ಔಷಧಿ ಏನು ಅಂತ ನಿಮಗೆ ತಿಳಿಸುತ್ತೆ. ಇದ್ರಲ್ಲಿ ನಿಮ್ಮ ಚಿಂತೆನ ಕಮ್ಮಿ ಮಾಡ್ಕೊಂಡು ಚೆನ್ನಾಗಿ ಜೀವನ ನಡೆಸೋಕೆ ಬೇಕಿರೋ ಸಲಹೆಗಳಿವೆ. ಕೊನೆ ಲೇಖನ, ಮುಂದೆ ನಮ್ಮ ಭವಿಷ್ಯ ಚೆನ್ನಾಗಿರುತ್ತೆ ಅನ್ನೋ ನಂಬಿಕೆ ಮೂಡಿಸುತ್ತೆ. ಆ ನಂಬಿಕೆಯಿಂದ ನಾವು ಈಗ್ಲೂ ಸಂತೋಷವಾಗಿ ಇರಬಹುದು. ಅದು ಹೇಗೆ ಅಂತ ಓದಿ ನೋಡಿ.