ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 7 ಪು. 105-ಪು. 106 ಪ್ಯಾ. 2
  • ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಸರಿಯಾದ ಅರ್ಥಒತ್ತು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸಭೆಗಾಗಿ ಭಾಷಣಗಳನ್ನು ತಯಾರಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಶಾಸ್ತ್ರವಚನಗಳನ್ನು ಸರಿಯಾದ ಒತ್ತುನೀಡಿ ಓದುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 7 ಪು. 105-ಪು. 106 ಪ್ಯಾ. 2

ಅಧ್ಯಾಯ 7

ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು

ನೀವೇನು ಮಾಡುವ ಅಗತ್ಯವಿದೆ?

ಗಟ್ಟಿಯಾಗಿ ಓದುವಾಗ, ನೀವು ಓದುತ್ತಿರುವ ಒಂದೊಂದು ವಾಕ್ಯದ ಮೇಲೆ ಅಲ್ಲ, ಬದಲಾಗಿ ಇಡೀ ಭಾಗದ ಪ್ರಧಾನ ವಿಚಾರಗಳ ಮೇಲೆ ವಿಶೇಷ ಒತ್ತನ್ನು ನೀಡಿರಿ.

ಇದು ಪ್ರಾಮುಖ್ಯವೇಕೆ?

ಪ್ರಧಾನ ವಿಚಾರಗಳನ್ನು ಒತ್ತಿಹೇಳುವಲ್ಲಿ, ನಿಮ್ಮ ಸಂದೇಶವನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬ ಸುಲಭ.

ಪರಿಣಾಮಕಾರಿಯಾದ ವಾಚಕನು ಒಂದೊಂದು ವಾಕ್ಯಕ್ಕಿಂತಲೂ ಹೆಚ್ಚಿನದ್ದನ್ನು ಪರಿಗಣಿಸುತ್ತಾನೆ ಮತ್ತು ಆ ವಾಕ್ಯವು ಕಂಡುಬರುವ ಪ್ಯಾರಗ್ರಾಫ್‌ಗಿಂತಲೂ ಮುಂದಕ್ಕೆ ನೋಡುತ್ತಾನೆ. ಅವನು ಓದುವಾಗ, ತಾನು ನೀಡುತ್ತಿರುವ ಪೂರ್ತಿ ಭಾಗದ ಪ್ರಧಾನ ವಿಚಾರಗಳು ಅವನ ಮನಸ್ಸಿನಲ್ಲಿರುತ್ತವೆ. ಇದು ಅವನ ಒತ್ತಿಹೇಳುವಿಕೆಯನ್ನು ಪ್ರಭಾವಿಸುತ್ತದೆ.

ಈ ವಿಧಾನವನ್ನು ಅನುಸರಿಸದಿರುವಲ್ಲಿ, ಭಾಷಣ ಶೈಲಿಯಲ್ಲಿ ಎದ್ದು ಕಾಣುವಂಥ ಅಂಶಗಳೇ ಇರುವುದಿಲ್ಲ. ಯಾವುದೂ ಸ್ಪಷ್ಟವಾಗಿ ಎದ್ದು ಕಾಣುವುದಿಲ್ಲ. ವಾಚನ ಮುಗಿದಾಗ, ಗಮನಾರ್ಹವಾದ ಯಾವುದೇ ಅಂಶವನ್ನು ನೆನಪಿಸಿಕೊಳ್ಳುವುದು ಕಷ್ಟಕರವಾಗಿದ್ದೀತು.

ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದಕ್ಕೆ ಕೊಡಲ್ಪಡುವ ಸರಿಯಾದ ಗಮನವು, ಅನೇಕವೇಳೆ ಬೈಬಲಿನಿಂದ ಯಾವುದಾದರೊಂದು ವೃತ್ತಾಂತದ ವಾಚನವನ್ನು ವರ್ಧಿಸಲು ಹೆಚ್ಚಿನದ್ದನ್ನು ಮಾಡಬಲ್ಲದು. ಇಂತಹ ಒತ್ತಿಹೇಳುವಿಕೆಯು, ಮನೆ ಬೈಬಲ್‌ ಅಧ್ಯಯನದಲ್ಲಿ ಅಥವಾ ಸಭಾ ಕೂಟದಲ್ಲಿ ಪ್ಯಾರಗ್ರಾಫ್‌ಗಳನ್ನು ಓದುವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬಲ್ಲದು. ಮತ್ತು ನಮ್ಮ ಅಧಿವೇಶನಗಳಲ್ಲಿ ಕೆಲವೊಮ್ಮೆ ಕೊಡಲಾಗುವಂತೆ, ಹಸ್ತಪ್ರತಿಯ ಭಾಷಣವನ್ನು ಓದಿಹೇಳುವಾಗ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ.

ಇದನ್ನು ಮಾಡುವ ವಿಧ. ದೇವಪ್ರಭುತ್ವಾತ್ಮಕ ಶಾಲೆಯಲ್ಲಿ ನಿಮಗೆ ಬೈಬಲಿನ ಒಂದು ಭಾಗವನ್ನು ಓದುವ ನೇಮಕವು ಸಿಗಬಹುದು. ಆಗ ಯಾವುದನ್ನು ಒತ್ತಿಹೇಳಬೇಕು? ನೀವು ಓದುವ ಭಾಗವು ಯಾವುದೊ ಕೇಂದ್ರೀಯ ವಿಚಾರ ಅಥವಾ ಪ್ರಮುಖ ಘಟನೆಯ ಸುತ್ತಲೂ ವಿಕಸಿಸಲ್ಪಟ್ಟಿರುವುದಾದರೆ, ಅದನ್ನು ಎದ್ದು ಕಾಣುವಂತೆ ಮಾಡುವುದು ಸೂಕ್ತವಾಗಿರುವುದು.

ನೀವು ಓದಲಿರುವ ಭಾಗವು ಪದ್ಯವಾಗಿರಲಿ ಗದ್ಯವಾಗಿರಲಿ, ಜ್ಞಾನೋಕ್ತಿಯಾಗಿರಲಿ ವೃತ್ತಾಂತ ನಿರೂಪಣೆಯಾಗಿರಲಿ, ಅದನ್ನು ಉತ್ತಮವಾಗಿ ಓದುವುದು ನಿಮ್ಮ ಸಭಿಕರಿಗೆ ಪ್ರಯೋಜನಕರವಾಗಿರುವುದು. (2 ತಿಮೊ. 3:16, 17) ಆದರೆ ಹಾಗೆ ಮಾಡಲಿಕ್ಕಾಗಿ, ನೀವು ಓದಲಿರುವ ಭಾಗಗಳನ್ನು ಮತ್ತು ನಿಮ್ಮ ಸಭಿಕರನ್ನು ಗಣನೆಗೆ ತೆಗೆದುಕೊಳ್ಳಲೇಬೇಕು.

ಒಂದು ಬೈಬಲ್‌ ಅಧ್ಯಯನದಲ್ಲಿ ಅಥವಾ ಸಭಾ ಕೂಟದಲ್ಲಿ ನೀವು ಒಂದು ಪುಸ್ತಕದಿಂದ ಗಟ್ಟಿಯಾಗಿ ಓದಲಿಕ್ಕಿರುವಲ್ಲಿ, ನೀವು ಒತ್ತಿಹೇಳಬೇಕಾಗಿರುವ ಪ್ರಧಾನ ವಿಚಾರಗಳಾವುವು? ಅಧ್ಯಯನದ ಮುದ್ರಿತ ಪ್ರಶ್ನೆಗಳಿಗೆ ಕೊಡಲ್ಪಟ್ಟಿರುವ ಉತ್ತರಗಳನ್ನು ಪ್ರಧಾನ ವಿಚಾರಗಳಾಗಿ ಪರಿಗಣಿಸಿರಿ. ಅಲ್ಲದೆ, ಈ ಭಾಗವು ಯಾವ ದಪ್ಪಕ್ಷರದ ಉಪಶಿರೋನಾಮದ ಕೆಳಗೆ ಕಂಡುಬರುತ್ತದೊ ಅದಕ್ಕೆ ಸಂಬಂಧಿಸುವ ವಿಷಯಗಳನ್ನೂ ಒತ್ತಿಹೇಳಿರಿ.

ಸಭೆಯಲ್ಲಿ ಭಾಷಣಗಳನ್ನು ಕೊಡುವಾಗ ಹಸ್ತಪ್ರತಿಯನ್ನು ಉಪಯೋಗಿಸುವುದನ್ನು ರೂಢಿ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ, ಎಲ್ಲ ಅಧಿವೇಶನಗಳಲ್ಲಿ ಒಂದೇ ರೀತಿಯ ವಿಚಾರಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗುವಂತೆ, ಕೆಲವು ಅಧಿವೇಶನ ಭಾಷಣಗಳಿಗೆ ಹಸ್ತಪ್ರತಿಗಳನ್ನು ಒದಗಿಸಲಾಗುತ್ತದೆ. ಇಂತಹ ಹಸ್ತಪ್ರತಿಗಳಲ್ಲಿರುವ ಪ್ರಧಾನ ವಿಚಾರಗಳನ್ನು ಒತ್ತಿಹೇಳಲಿಕ್ಕಾಗಿ, ಭಾಷಣಕಾರನು ಪ್ರಥಮವಾಗಿ ಭಾಷಣದ ವಿಷಯಭಾಗವನ್ನು ಜಾಗರೂಕತೆಯಿಂದ ವಿಶ್ಲೇಷಿಸಬೇಕು. ಅದರ ಮುಖ್ಯಾಂಶಗಳಾವುವು? ಅವನು ಇವುಗಳನ್ನು ಗುರುತಿಸಲು ಶಕ್ತನಾಗಿರಬೇಕು. ಅವನಿಗೆ ಆಸಕ್ತಿಕರವೆಂದು ಅನಿಸುವ ವಿಚಾರಗಳೇ ಮುಖ್ಯಾಂಶಗಳಾಗಿರುವುದಿಲ್ಲ. ಅವು, ಯಾವುದರ ಸುತ್ತಲೂ ಭಾಷಣದ ವಿಷಯಭಾಗವು ತಾನೇ ವಿಕಸಿಸಲ್ಪಟ್ಟಿದೆಯೊ ಆ ಮುಖ್ಯಾಲೋಚನೆಗಳಾಗಿವೆ. ಕೆಲವೊಮ್ಮೆ, ಹಸ್ತಪ್ರತಿಯಲ್ಲಿರುವ ಪ್ರಧಾನ ವಿಚಾರದ ಸಂಕ್ಷಿಪ್ತ ಹೇಳಿಕೆಯೊಂದು, ಒಂದು ನಿರೂಪಣೆಯನ್ನು ಅಥವಾ ವಾದಸರಣಿಯನ್ನು ಮುಂದಿಡುತ್ತದೆ. ಅನೇಕ ಬಾರಿ, ಸಮರ್ಥಿಸುವ ರುಜುವಾತನ್ನು ಪ್ರಸ್ತುತಪಡಿಸಿದ ನಂತರ, ಒಂದು ಬಲವಾದ ಹೇಳಿಕೆಯು ತಿಳಿಸಲ್ಪಡುತ್ತದೆ. ಈ ಪ್ರಧಾನ ಅಂಶಗಳನ್ನು ಕಂಡುಹಿಡಿದ ನಂತರ, ಭಾಷಣಕಾರನು ತನ್ನ ಹಸ್ತಪ್ರತಿಯಲ್ಲಿ ಅವುಗಳನ್ನು ಗುರುತುಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಇಂತಹ ಪ್ರಧಾನಾಂಶಗಳು ಕೇವಲ ಕೆಲವೇ ಇರುತ್ತವೆ, ಬಹುಮಟ್ಟಿಗೆ ನಾಲ್ಕು ಅಥವಾ ಐದಕ್ಕಿಂತ ಹೆಚ್ಚು ಇರುವುದಿಲ್ಲ. ಬಳಿಕ, ಸಭಿಕರು ಸುಲಭವಾಗಿ ಅವುಗಳನ್ನು ಗುರುತಿಸಸಾಧ್ಯವಿರುವಂಥ ರೀತಿಯಲ್ಲಿ ಅವನು ಓದುವುದನ್ನು ಪ್ರ್ಯಾಕ್ಟಿಸ್‌ ಮಾಡುವ ಅಗತ್ಯವಿದೆ. ಇವು ಭಾಷಣದ ಪ್ರಮುಖ ಹಂತಗಳಾಗಿವೆ. ಈ ಭಾಷಣದ ಭಾಗವನ್ನು ಸರಿಯಾದ ಒತ್ತಿನೊಂದಿಗೆ ನೀಡುವುದಾದರೆ, ಈ ಪ್ರಧಾನ ವಿಚಾರಗಳು ಜ್ಞಾಪಿಸಿಕೊಳ್ಳಲ್ಪಡುವುದು ಹೆಚ್ಚು ಸಂಭವನೀಯ. ಇದು ಭಾಷಣಕಾರನ ಗುರಿಯಾಗಿರಬೇಕು.

ಸಭಿಕರು ಮುಖ್ಯಾಂಶಗಳನ್ನು ಗುರುತಿಸುವಂತೆ ಸಹಾಯಮಾಡಲು ಭಾಷಣಕಾರನು ಅಗತ್ಯವಿರುವ ಒತ್ತಿಹೇಳುವಿಕೆಯನ್ನು ವ್ಯಕ್ತಪಡಿಸುವ ಅನೇಕ ವಿಧಗಳಿವೆ. ಹೆಚ್ಚಿನ ಉತ್ಸಾಹ, ವೇಗದಲ್ಲಿ ಬದಲಾವಣೆ, ಭಾವಪೂರ್ಣತೆಯ ಗಾಢತೆ ಅಥವಾ ಸೂಕ್ತವಾದ ಭಾವಾಭಿನಯಗಳು—ಇವು ಆ ವಿಧಗಳಲ್ಲಿ ಕೆಲವಾಗಿವೆ.

ಮನಸ್ಸಿನಲ್ಲಿಡಬೇಕಾದ ಅಂಶಗಳು

  • ಭಾಷಣವು ಯಾವುದರ ಸುತ್ತಲೂ ವಿಕಸಿಸಲ್ಪಟ್ಟಿದೆಯೊ ಆ ಪ್ರಧಾನ ವಿಚಾರಗಳನ್ನು ಗುರುತಿಸಲಿಕ್ಕಾಗಿ ಮುದ್ರಿತ ಭಾಗವನ್ನು ವಿಶ್ಲೇಷಿಸಿರಿ. ಅವುಗಳನ್ನು ಗುರುತುಮಾಡಿರಿ.

  • ಗಟ್ಟಿಯಾಗಿ ಓದುವಾಗ, ಸೂಕ್ತವಾಗಿರುವಲ್ಲಿ, ಆ ಪ್ರಧಾನ ವಿಚಾರಗಳು ಎದ್ದು ಕಾಣುವಂತೆ ಮಾಡಲಿಕ್ಕಾಗಿ, ಹೆಚ್ಚಿನ ಉತ್ಸಾಹ, ನಿಧಾನ ಗತಿ ಇಲ್ಲವೆ ಭಾವಪೂರ್ಣತೆಯ ಗಾಢತೆಯನ್ನು ಉಪಯೋಗಿಸಿರಿ.

ಅಭ್ಯಾಸಪಾಠ: ಅಧ್ಯಯನಕ್ಕೆ ನೇಮಿಸಲ್ಪಟ್ಟ ಕಾವಲಿನಬುರುಜು ಪತ್ರಿಕೆಯಿಂದ ಐದು ಪ್ಯಾರಗ್ರಾಫ್‌ಗಳನ್ನು ಆರಿಸಿಕೊಳ್ಳಿರಿ. ಆ ಪ್ಯಾರಗ್ರಾಫ್‌ಗಳ ಅಧ್ಯಯನ ಪ್ರಶ್ನೆಗಳ ಉತ್ತರಗಳಿಗೆ ಅಡಿಗೆರೆ ಹಾಕಿರಿ. ಕೇಳುಗನಿಗೆ ಉತ್ತರವನ್ನು ಕಂಡುಹಿಡಿಯುವುದು ಸುಲಭವಾಗುವಂಥ ರೀತಿಯಲ್ಲಿ ಪ್ಯಾರಗ್ರಾಫ್‌ಗಳನ್ನು ಗಟ್ಟಿಯಾಗಿ ಓದಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ