ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 47 ಪು. 247-ಪು. 250 ಪ್ಯಾ. 1
  • ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಚಿರಪರಿಚಿತ ಸನ್ನಿವೇಶಗಳ ಮೇಲಾಧಾರಿತ ದೃಷ್ಟಾಂತಗಳು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಸೂಕ್ತವಾದ ಚಿತ್ರ ಮತ್ತು ವಿಡಿಯೋ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಇತರರಿಗೆ ತೋರಿಸಲ್ಪಡುವ ಗೌರವ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಕಲಿಸಲು ದೃಶ್ಯ ಸಾಧನಗಳನ್ನು ಉಪಯೋಗಿಸಿರಿ
    2006 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 47 ಪು. 247-ಪು. 250 ಪ್ಯಾ. 1

ಅಧ್ಯಾಯ 47

ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದು

ನೀವೇನು ಮಾಡುವ ಅಗತ್ಯವಿದೆ?

ಭಾಷಣದ ಪ್ರಮುಖ ಅಂಶಗಳನ್ನು ಹೆಚ್ಚು ವಿಶದವಾಗಿ ವಿವರಿಸಲಿಕ್ಕಾಗಿ, ಚಿತ್ರಗಳು, ನಕ್ಷೆಗಳು, ಚಾರ್ಟ್‌ಗಳು ಅಥವಾ ಬೇರೆ ವಸ್ತುಗಳನ್ನು ಉಪಯೋಗಿಸಿರಿ.

ಇದು ಪ್ರಾಮುಖ್ಯವೇಕೆ?

ಒಂದು ದೃಶ್ಯ ಸಾಧನವು ಅನೇಕವೇಳೆ ಮನಸ್ಸಿನ ಮೇಲೆ ಬಾಯಿಮಾತಿಗಿಂತಲೂ ಹೆಚ್ಚು ಸ್ಪಷ್ಟವಾದ ಮತ್ತು ಹೆಚ್ಚುಕಾಲ ಬಾಳುವ ಪ್ರಭಾವವನ್ನು ಬೀರುತ್ತದೆ.

ನಿಮ್ಮ ಬೋಧಿಸುವಿಕೆಯಲ್ಲಿ ದೃಶ್ಯ ಸಾಧನಗಳನ್ನು ಏಕೆ ಉಪಯೋಗಿಸಬೇಕು? ಏಕೆಂದರೆ ಹಾಗೆ ಮಾಡುವುದರಿಂದ ನಿಮ್ಮ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಯೆಹೋವ ದೇವರೂ ಯೇಸು ಕ್ರಿಸ್ತನೂ ದೃಶ್ಯ ಸಾಧನಗಳನ್ನು ಉಪಯೋಗಿಸಿದರು ಮತ್ತು ನಾವು ಅವರಿಂದ ಪಾಠವನ್ನು ಕಲಿಯಬಲ್ಲೆವು. ಬಾಯಿಮಾತಿನೊಂದಿಗೆ ದೃಶ್ಯ ಸಾಧನಗಳನ್ನು ಉಪಯೋಗಿಸುವಾಗ, ಮಾಹಿತಿಯು ಎರಡು ಜ್ಞಾನೇಂದ್ರಿಯಗಳ ಮೂಲಕ ಶೇಖರಿಸಲ್ಪಡುತ್ತದೆ. ಇದು ನಿಮ್ಮ ಸಭಿಕರ ಗಮನವನ್ನು ಹಿಡಿದಿಡುವಂತೆಯೂ ಅವರ ಮೇಲೆ ಬೀರಿರುವ ಪ್ರಭಾವವನ್ನು ಇನ್ನಷ್ಟು ಬಲಗೊಳಿಸುವಂತೆಯೂ ಸಹಾಯಮಾಡುತ್ತದೆ. ನಿಮ್ಮ ಸುವಾರ್ತಾ ನಿರೂಪಣೆಗಳಲ್ಲಿ ನೀವು ದೃಶ್ಯ ಸಾಧನಗಳನ್ನು ಹೇಗೆ ಒಳಗೂಡಿಸಬಲ್ಲಿರಿ? ನೀವು ಅವುಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತಿದ್ದೀರೆಂಬುದನ್ನು ನೀವು ಹೇಗೆ ಖಾತ್ರಿಪಡಿಸಿಕೊಳ್ಳಸಾಧ್ಯವಿದೆ?

ಅತ್ಯಂತ ಮಹಾನ್‌ ಬೋಧಕನು ದೃಶ್ಯ ಸಾಧನಗಳನ್ನು ಉಪಯೋಗಿಸಿದ ವಿಧ. ಯೆಹೋವನು ಮಹತ್ವಪೂರ್ಣವಾದ ಪಾಠಗಳನ್ನು ಕಲಿಸಲಿಕ್ಕಾಗಿ ಸುಲಭವಾಗಿ ನೆನಪಿನಲ್ಲಿಡಸಾಧ್ಯವಿರುವಂಥ ದೃಶ್ಯ ಸಾಧನಗಳನ್ನು ಉಪಯೋಗಿಸಿದನು. ಒಂದು ರಾತ್ರಿ ಆತನು ಅಬ್ರಹಾಮನನ್ನು ಹೊರಗೆ ಕರೆದುತಂದು, “ಆಕಾಶದ ಕಡೆಗೆ ನೋಡು; ನಕ್ಷತ್ರಗಳನ್ನು ಲೆಕ್ಕಿಸುವದು ನಿನ್ನಿಂದಾದರೆ ಲೆಕ್ಕಿಸು; ನಿನ್ನ ಸಂತಾನವು ಅಷ್ಟಾಗುವದು” ಎಂದು ಹೇಳಿದನು. (ಆದಿ. 15:5) ವಾಗ್ದಾನ ಮಾಡಲ್ಪಟ್ಟ ಸಂಗತಿಯು ಮಾನವ ದೃಷ್ಟಿಕೋನದಿಂದ ಅಸಾಧ್ಯವಾಗಿ ಕಂಡುಬಂದರೂ, ಅಬ್ರಹಾಮನು ಅದರಿಂದ ಆಳವಾಗಿ ಪ್ರಭಾವಿತನಾಗಿ, ಯೆಹೋವನಲ್ಲಿ ನಂಬಿಕೆಯನ್ನಿಟ್ಟನು. ಇನ್ನೊಂದು ಸಂದರ್ಭದಲ್ಲಿ, ಯೆಹೋವನು ಯೆರೆಮೀಯನನ್ನು ಕುಂಬಾರನ ಮನೆಗೆ ಕಳುಹಿಸಿ, ಆ ಕುಂಬಾರನು ತನ್ನ ಕೆಲಸದ ಕೋಣೆಯಲ್ಲಿ ಜೇಡಿಮಣ್ಣಿಗೆ ರೂಪಕೊಡುವುದನ್ನು ನೋಡುವಂತೆ ಮಾಡಿದನು. ಸೃಷ್ಟಿಕರ್ತನಿಗೆ ಮಾನವರ ಮೇಲಿರುವ ಅಧಿಕಾರದ ವಿಷಯದಲ್ಲಿ ಎಂತಹ ಸ್ಮರಣೀಯ ಪಾಠವು ಅದಾಗಿತ್ತು! (ಯೆರೆ. 18:1-6) ಸೋರೆಗಿಡದ ಮೂಲಕ ಯೆಹೋವನು ಕಲಿಸಿದ ಕರುಣೆಯ ಪಾಠವನ್ನು ಯೋನನು ಹೇಗೆ ತಾನೇ ಮರೆತಾನು? (ಯೋನ 4:6-11) ಸೂಕ್ತವಾದ ಕೆಲವು ವಸ್ತುಗಳನ್ನು ಉಪಯೋಗಿಸುತ್ತಾ, ತನ್ನ ಪ್ರವಾದಿಗಳು ಪ್ರವಾದನಾ ಸಂದೇಶಗಳನ್ನು ಅಭಿನಯಿಸಿ ತೋರಿಸುವಂತೆಯೂ ಯೆಹೋವನು ಅವರಿಗೆ ಹೇಳಿದನು. (1 ಅರ. 11:29-32; ಯೆರೆ. 27:1-8; ಯೆಹೆ. 4:1-17) ಸಾಕ್ಷಿಗುಡಾರ ಮತ್ತು ದೇವಾಲಯದ ವೈಶಿಷ್ಟ್ಯ ಸೂಚಕ ಭಾಗಗಳು ತಾವೇ, ಸ್ವರ್ಗೀಯ ನಿಜತ್ವಗಳನ್ನು ನಾವು ತಿಳಿಯುವಂತೆ ನಮಗೆ ಸಹಾಯಮಾಡುವ ಚಿತ್ರಣಗಳಾಗಿವೆ. (ಇಬ್ರಿ. 9:9, 23, 24) ಪ್ರಮುಖ ಮಾಹಿತಿಯನ್ನು ರವಾನಿಸಲಿಕ್ಕಾಗಿ ದೇವರು ದರ್ಶನಗಳನ್ನೂ ಸಮೃದ್ಧವಾಗಿ ಉಪಯೋಗಿಸಿದನು.—ಯೆಹೆ. 1:4-28; 8:2-18; ಅ. ಕೃ. 10:9-16; 16:9, 10; ಪ್ರಕ. 1:1.

ಯೇಸು ದೃಶ್ಯ ಸಾಧನಗಳನ್ನು ಹೇಗೆ ಉಪಯೋಗಿಸಿದನು? ಫರಿಸಾಯರೂ ಹೆರೋದಿಯರೂ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಪ್ರಯತ್ನಿಸಿದಾಗ, ಅವನು ಒಂದು ನಾಣ್ಯವನ್ನು ತರಿಸಿ, ಅದರ ಮೇಲಿದ್ದ ಕೈಸರನ ಮುದ್ರೆಯ ಕಡೆಗೆ ಗಮನಸೆಳೆದನು. ಬಳಿಕ ಕೈಸರನದನ್ನು ಕೈಸರನಿಗೆ ಕೊಡಬೇಕೆಂದು, ಆದರೆ ದೇವರದನ್ನು ದೇವರಿಗೆ ಕೊಡಬೇಕೆಂದು ಅವನು ವಿವರಿಸಿದನು. (ಮತ್ತಾ. 22:19-21) ನಮ್ಮಲ್ಲಿರುವ ಸರ್ವಸ್ವದಿಂದಲೂ ದೇವರನ್ನು ಗೌರವಿಸುವ ವಿಷಯದಲ್ಲಿ ಒಂದು ಪಾಠವನ್ನು ಕಲಿಸಲಿಕ್ಕಾಗಿ ಯೇಸು ಒಬ್ಬ ಬಡ ವಿಧವೆಯನ್ನು ತೋರಿಸಿದನು. ಆಕೆ ದೇವಾಲಯದಲ್ಲಿ ಹಾಕಿದ ಕಾಣಿಕೆಯು—ಎರಡು ಕಾಸುಗಳು—ಆಕೆಯ ಸರ್ವಸ್ವವೇ ಆಗಿತ್ತು ಎಂದು ಹೇಳಿದನು. (ಲೂಕ 21:1-4) ಇನ್ನೊಂದು ಸಂದರ್ಭದಲ್ಲಿ ಅವನು ಒಂದು ಚಿಕ್ಕ ಮಗುವನ್ನು ದೀನಭಾವದವರಾಗಿರುವ, ಹೆಬ್ಬಯಕೆಯಿಲ್ಲದವರಾಗಿರುವುದರ ಮಾದರಿಯಾಗಿ ಉಪಯೋಗಿಸಿದನು. (ಮತ್ತಾ. 18:2-6) ತನ್ನ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಅವನು ಸ್ವತಃ ದೈನ್ಯಭಾವದ ಅರ್ಥವನ್ನು ಪ್ರದರ್ಶಿಸಿದನು.—ಯೋಹಾ. 13:14.

ದೃಶ್ಯ ಸಾಧನಗಳನ್ನು ಉಪಯೋಗಿಸಬಹುದಾದ ವಿಧಗಳು. ಯೆಹೋವನಂತೆ ನಾವು ದರ್ಶನಗಳ ಸಹಾಯದಿಂದ ಇತರರನ್ನು ಸಂಪರ್ಕಿಸಲಾರೆವು. ಆದರೂ, ಯೆಹೋವನ ಸಾಕ್ಷಿಗಳ ಪ್ರಕಾಶನಗಳಲ್ಲಿ ಅನೇಕ ಆಲೋಚನಾಪ್ರೇರಕ ಚಿತ್ರಗಳು ಇರುತ್ತವೆ. ದೇವರ ವಾಕ್ಯದಲ್ಲಿ ವಾಗ್ದಾನಿಸಲ್ಪಟ್ಟಿರುವ ಭೂಪರದೈಸನ್ನು ಆಸಕ್ತ ಜನರು ಚಿತ್ರಿಸಿಕೊಳ್ಳುವಂತೆ ಸಹಾಯಮಾಡಲು ಅವುಗಳನ್ನು ಉಪಯೋಗಿಸಿರಿ. ಒಂದು ಮನೆ ಬೈಬಲ್‌ ಅಧ್ಯಯನದಲ್ಲಿ, ನೀವು ಅಧ್ಯಯನಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿರುವಂಥ ಒಂದು ಚಿತ್ರಕ್ಕೆ ವಿದ್ಯಾರ್ಥಿಯ ಗಮನವನ್ನು ಸೆಳೆದು, ಅವನು ಏನು ನೋಡುತ್ತಿದ್ದಾನೊ ಅದನ್ನು ನಿಮಗೆ ತಿಳಿಸುವಂತೆ ಹೇಳಿರಿ. ಆಮೋಸ ಪ್ರವಾದಿಗೆ ಕೆಲವು ದರ್ಶನಗಳನ್ನು ಕೊಟ್ಟಾಗ ಯೆಹೋವನು, “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವದೇನು”? ಎಂದು ಕೇಳಿದ್ದು ಗಮನಾರ್ಹವಾದ ವಿಷಯವಾಗಿದೆ. (ಆಮೋ. 7:7, 8; 8:1, 2) ನೀವು ಜನರ ಗಮನವನ್ನು ದೃಶ್ಯ ಬೋಧನಾ ಸಾಧನಗಳಾಗಿ ರೂಪಿಸಲ್ಪಟ್ಟಿರುವ ಚಿತ್ರಗಳ ಕಡೆಗೆ ಸೆಳೆಯುವಾಗ ಅದೇ ರೀತಿಯ ಪ್ರಶ್ನೆಗಳನ್ನು ಕೇಳಸಾಧ್ಯವಿದೆ.

ನೀವು ಗಣಿತದ ಲೆಕ್ಕಾಚಾರವನ್ನು ಬರೆಯುವುದಾದರೆ ಅಥವಾ ಗಮನಾರ್ಹವಾದ ಘಟನೆಗಳ ಅನುಕ್ರಮವನ್ನು ತೋರಿಸುವ ಒಂದು ಕಾಲತಖ್ತೆಯನ್ನು ಉಪಯೋಗಿಸುವುದಾದರೆ, ದಾನಿಯೇಲ 4:16 ರ (NW) “ಏಳು ಕಾಲಗಳು” ಮತ್ತು ದಾನಿಯೇಲ 9:24 ರ “ಎಪ್ಪತ್ತು ವಾರ”ಗಳಂತಹ ಪ್ರವಾದನೆಗಳನ್ನು ಜನರು ಹೆಚ್ಚು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಸಾಧ್ಯವಿದೆ. ಇಂತಹ ದೃಶ್ಯ ಸಾಧನಗಳು ನಮ್ಮ ಅನೇಕ ಅಧ್ಯಯನ ಪ್ರಕಾಶನಗಳಲ್ಲಿ ಕಂಡುಬರುತ್ತವೆ.

ನಿಮ್ಮ ಕುಟುಂಬ ಬೈಬಲ್‌ ಅಧ್ಯಯನದಲ್ಲಿ, ಸಾಕ್ಷಿಗುಡಾರ, ಯೆರೂಸಲೇಮಿನ ದೇವಾಲಯ ಮತ್ತು ಯೆಹೆಜ್ಕೇಲನ ದಾರ್ಶನಿಕ ದೇವಾಲಯದಂತಹ ವಿಷಯಗಳ ಚರ್ಚೆಯಲ್ಲಿ ನೀವು ಒಂದು ಚಿತ್ರವನ್ನು ಅಥವಾ ರೇಖಾಚಿತ್ರವನ್ನು ಉಪಯೋಗಿಸುವಲ್ಲಿ, ಅರ್ಥಗ್ರಹಿಕೆಯು ಹೆಚ್ಚು ಸುಲಭವಾಗಬಲ್ಲದು. ಇದನ್ನು ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕದಲ್ಲಿ ಮತ್ತು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ—ರೆಫರೆನ್ಸ್‌ಗಳೊಂದಿಗೆ (ಇಂಗ್ಲಿಷ್‌) ಬೈಬಲಿನ ಪರಿಶಿಷ್ಟದಲ್ಲಿ ಮತ್ತು ಕಾವಲಿನಬುರುಜು ಪತ್ರಿಕೆಯ ಬೇರೆ ಬೇರೆ ಸಂಚಿಕೆಗಳಲ್ಲಿ ಕಂಡುಕೊಳ್ಳಸಾಧ್ಯವಿದೆ.

ನಿಮ್ಮ ಕುಟುಂಬದೊಂದಿಗೆ ಬೈಬಲನ್ನು ಓದುವಾಗ, ನಕ್ಷೆಗಳ ಸದುಪಯೋಗವನ್ನು ಮಾಡಿರಿ. ಊರ್‌ ಪಟ್ಟಣದಿಂದ ಖಾರಾನ್‌ ಪಟ್ಟಣದ ವರೆಗೆ ಮತ್ತು ಬೇತೇಲಿಗೆ ಅಬ್ರಹಾಮನು ಮಾಡಿದ ಪ್ರಯಾಣಮಾರ್ಗವನ್ನು ಪತ್ತೆಹಚ್ಚಿರಿ. ಇಸ್ರಾಯೇಲ್‌ ಜನಾಂಗವು ಐಗುಪ್ತವನ್ನು ಬಿಟ್ಟು ವಾಗ್ದತ್ತ ದೇಶಕ್ಕೆ ಪ್ರಯಾಣಮಾಡುವಾಗ ಹಾದುಹೋದ ದಾರಿಯನ್ನು ಪರೀಕ್ಷಿಸಿರಿ. ಇಸ್ರಾಯೇಲಿನ ಪ್ರತಿಯೊಂದು ಕುಲಕ್ಕೆ ಬಾಧ್ಯತೆಯಾಗಿ ಕೊಡಲ್ಪಟ್ಟ ಪ್ರದೇಶವನ್ನು ಕಂಡುಹಿಡಿಯಿರಿ. ಸೊಲೊಮೋನನ ಆಧಿಪತ್ಯದ ವೈಶಾಲ್ಯವನ್ನು ಅವಲೋಕಿಸಿರಿ. ಈಜೆಬೆಲಳು ಎಲೀಯನಿಗೆ ಹಾಕಿದ ಬೆದರಿಕೆಯ ಕಾರಣ, ಅವನು ಇಜ್ರೇಲಿನಿಂದ ಬೇರ್ಷೆಬದ ಆಚೆಯಿರುವ ಅರಣ್ಯಕ್ಕೆ ಪಲಾಯನಗೈದ ದಾರಿಯನ್ನು ಪತ್ತೆಹಚ್ಚಿರಿ. (1 ಅರ. 18:46-19:4) ಯೇಸು ಸಾರಿದ ನಗರಗಳನ್ನೂ ಪಟ್ಟಣಗಳನ್ನೂ ಕಂಡುಹಿಡಿಯಿರಿ. ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ವರ್ಣಿಸಿರುವ ಪೌಲನ ಸಂಚಾರಗಳನ್ನು ಅನುಸರಿಸಿರಿ.

ಸಭೆಯ ಚಟುವಟಿಕೆಗಳನ್ನು ಬೈಬಲ್‌ ವಿದ್ಯಾರ್ಥಿಗಳಿಗೆ ಪರಿಚಯಪಡಿಸುವಾಗ, ದೃಶ್ಯ ಸಾಧನಗಳು ಉಪಯುಕ್ತಕರವಾಗಿರುತ್ತವೆ. ನಿಮ್ಮ ವಿದ್ಯಾರ್ಥಿಗೆ ನೀವು ಮುದ್ರಿತ ಕಾರ್ಯಕ್ರಮವನ್ನು ತೋರಿಸಿ, ನಾವು ಸಮ್ಮೇಳನಗಳು ಮತ್ತು ಅಧಿವೇಶನಗಳಲ್ಲಿ ಯಾವ ರೀತಿಯ ಮಾಹಿತಿಯನ್ನು ಚರ್ಚಿಸುತ್ತೇವೆ ಎಂಬುದರ ಬಗ್ಗೆ ವಿವರಿಸಬಹುದು. ಅನೇಕರು ರಾಜ್ಯ ಸಭಾಗೃಹವನ್ನು ಅಥವಾ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸನ್ನು ವೈಯಕ್ತಿಕವಾಗಿ ಭೇಟಿಮಾಡಿದ್ದರಿಂದ, ಇವು ಅವರ ಮೇಲೆ ಒಳ್ಳೇ ಪ್ರಭಾವವನ್ನು ಬೀರಿವೆ. ಇದು ನಮ್ಮ ಕೆಲಸ ಮತ್ತು ಅದರ ಉದ್ದೇಶದ ಕುರಿತಾದ ತಪ್ಪಭಿಪ್ರಾಯಗಳನ್ನು ಹೋಗಲಾಡಿಸಲು ಪರಿಣಾಮಕಾರಿಯಾದ ಮಾರ್ಗವಾಗಿರಬಲ್ಲದು. ರಾಜ್ಯ ಸಭಾಗೃಹದ ಪರಿಚಯವನ್ನು ಒಬ್ಬನಿಗೆ ಮಾಡಿಕೊಡುತ್ತಿರುವಾಗ, ಇದು ಬೇರೆ ಆರಾಧನಾ ಸ್ಥಳಗಳಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ತೋರಿಸಿರಿ. ಹೆಚ್ಚು ಆಡಂಬರವಿಲ್ಲದಂಥ ಕಲಿಕೆಯ ಪರಿಸರವನ್ನು ಎತ್ತಿತೋರಿಸಿರಿ. ನಮ್ಮ ಸಾರ್ವಜನಿಕ ಶುಶ್ರೂಷೆಗಾಗಿ ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿರುವ ವೈಶಿಷ್ಟ್ಯಗಳನ್ನು, ಅಂದರೆ ಸಾಹಿತ್ಯ ವಿತರಣೆಯ ಸ್ಥಳಗಳು, ಟೆರಿಟೊರಿ ನಕ್ಷೆಗಳು ಮತ್ತು (ಹಣದ ತಟ್ಟೆಗೆ ತದ್ವಿರುದ್ಧವಾಗಿ) ಕಾಣಿಕೆ ಪೆಟ್ಟಿಗೆಗಳನ್ನು ತೋರಿಸಿರಿ.

ಆಡಳಿತ ಮಂಡಲಿಯ ಮೇಲ್ವಿಚಾರಣೆಯ ಕೆಳಗೆ ತಯಾರಿಸಲ್ಪಟ್ಟಿರುವ ವಿಡಿಯೋಗಳು ಲಭ್ಯವಿರುವಲ್ಲಿ, ಬೈಬಲಿನಲ್ಲಿ ಭರವಸೆಯನ್ನು ಕಟ್ಟಲಿಕ್ಕಾಗಿ, ವಿದ್ಯಾರ್ಥಿಗಳಿಗೆ ಯೆಹೋವನ ಸಾಕ್ಷಿಗಳ ಚಟುವಟಿಕೆಯ ಪರಿಚಯವನ್ನು ಮಾಡಿಸಲಿಕ್ಕಾಗಿ ಮತ್ತು ವೀಕ್ಷಕರು ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸುವಂತೆ ಪ್ರೋತ್ಸಾಹಿಸಲಿಕ್ಕಾಗಿ ಅವುಗಳನ್ನು ಉಪಯೋಗಿಸಿರಿ.

ದೊಡ್ಡ ಗುಂಪುಗಳಿಗಾಗಿ ದೃಶ್ಯ ಸಾಧನಗಳನ್ನು ಉಪಯೋಗಿಸುವುದು. ಚೆನ್ನಾಗಿ ತಯಾರಿಸಿ, ಯೋಗ್ಯವಾಗಿ ಪ್ರದರ್ಶಿಸುವಲ್ಲಿ, ದೊಡ್ಡ ಗುಂಪುಗಳಿಗೆ ಈ ದೃಶ್ಯ ಸಾಧನಗಳು ಪರಿಣಾಮಕಾರಿಯಾದ ಬೋಧನಾ ಸಾಧನಗಳಾಗಬಹುದು. ಇಂತಹ ದೃಶ್ಯ ಸಾಧನಗಳನ್ನು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವು ವಿವಿಧ ರೂಪಗಳಲ್ಲಿ ಒದಗಿಸಿದೆ.

ಕಾವಲಿನಬುರುಜು ಪತ್ರಿಕೆಯ ಅಧ್ಯಯನ ಲೇಖನಗಳಲ್ಲಿ ಸಾಮಾನ್ಯವಾಗಿ ಚಿತ್ರಗಳ ರೂಪದಲ್ಲಿ ದೃಶ್ಯ ಸಾಧನಗಳು ಸೇರಿರುತ್ತವೆ. ಅಧ್ಯಯನ ಚಾಲಕನು ಪ್ರಮುಖ ಅಂಶಗಳನ್ನು ಒತ್ತಿಹೇಳಲು ಇವುಗಳನ್ನು ಉಪಯೋಗಿಸಬಲ್ಲನು. ಸಭಾ ಪುಸ್ತಕ ಅಧ್ಯಯನದಲ್ಲಿ ಉಪಯೋಗಿಸಲ್ಪಡುವ ಪ್ರಕಾಶನಗಳ ವಿಷಯದಲ್ಲೂ ಇದು ಸತ್ಯವಾಗಿದೆ.

ಸಾರ್ವಜನಿಕ ಭಾಷಣಗಳ ಕೆಲವು ಹೊರಮೇರೆಗಳು, ಮುಖ್ಯಾಂಶಗಳನ್ನು ದೃಷ್ಟಾಂತಿಸಲಿಕ್ಕಾಗಿ ಸೂಕ್ತವಾದ ದೃಶ್ಯ ಸಾಧನಗಳನ್ನು ಉಪಯೋಗಿಸುವ ಸಾಧ್ಯತೆಯನ್ನು ಒದಗಿಸಬಹುದು. ಆದರೆ, ಸಭಿಕರಲ್ಲಿ ಹೆಚ್ಚಿನವರ ಕೈಗಳಲ್ಲಿರುವ ಬೈಬಲಿನಲ್ಲಿ ಏನಿದೆಯೋ ಅದರ ಮೇಲೆ ಕೇಂದ್ರೀಕರಿಸುವುದರಿಂದಲೇ ಸಾಮಾನ್ಯವಾಗಿ ಹೆಚ್ಚಿನ ಪ್ರಯೋಜನವು ದೊರೆಯುತ್ತದೆ. ಮತ್ತು ಕೆಲವು ಸಂದರ್ಭಗಳಲ್ಲಿ, ಒಂದು ಭಾಷಣದ ಒಂದು ಮುಖ್ಯಾಂಶವನ್ನೊ ಅನೇಕ ಮುಖ್ಯಾಂಶಗಳನ್ನೊ ತಿಳಿಸಲಿಕ್ಕಾಗಿ, ಒಂದು ಚಿತ್ರವೊ ಅಥವಾ ಮುಖ್ಯಾಂಶಗಳ ಒಂದು ಸಂಕ್ಷಿಪ್ತ ಹೊರಮೇರೆಯೊ ಅಗತ್ಯವಿರುವುದಾದರೆ, ಕೂಟದ ಸ್ಥಳದ ತೀರ ಹಿಂದಿನಿಂದ ಆ ದೃಶ್ಯ ಸಾಧನವನ್ನು ನೋಡಲು (ಅಥವಾ ಓದಲು) ಸಾಧ್ಯವಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಮುಂದಾಗಿಯೇ ಪರೀಕ್ಷಿಸಿ ನೋಡಿರಿ. ಇಂತಹ ಸಾಧನಗಳನ್ನು ಮಿತವಾಗಿ ಮಾತ್ರ ಉಪಯೋಗಿಸಬೇಕು.

ಮಾತಾಡುವಾಗ ಅಥವಾ ಬೋಧಿಸುವಾಗ ದೃಶ್ಯ ಸಾಧನಗಳನ್ನು ಉಪಯೋಗಿಸುವುದರಲ್ಲಿರುವ ನಮ್ಮ ಉದ್ದೇಶವು ಮನೋರಂಜನೆ ಆಗಿರುವುದಿಲ್ಲ. ಗೌರವಪೂರ್ಣವಾದ ಒಂದು ದೃಶ್ಯ ಸಾಧನವು ಉಪಯೋಗಿಸಲ್ಪಡುವಾಗ, ಅದು ವಿಶೇಷವಾಗಿ ಒತ್ತಿಹೇಳಲು ಯೋಗ್ಯವಾದ ವಿಚಾರಗಳಿಗೆ ದೃಷ್ಟಿಗೋಚರ ಬೆಂಬಲವನ್ನು ನೀಡಬೇಕು. ಇಂತಹ ಸಾಧನಗಳು, ಆಡಿದ ಮಾತನ್ನು ಸ್ಪಷ್ಟಪಡಿಸಲು ಸಹಾಯಮಾಡಿ, ಅದನ್ನು ಅರ್ಥಮಾಡಿಕೊಳ್ಳುವುದನ್ನು ಹೆಚ್ಚು ಸುಲಭವಾದದ್ದಾಗಿ ಮಾಡುವಾಗ ಅಥವಾ ಏನು ಹೇಳಲಾಗುತ್ತದೋ ಅದರ ಸಪ್ರಮಾಣತೆಗೆ ಬಲವಾದ ರುಜುವಾತನ್ನು ಒದಗಿಸುವಾಗ, ಅವು ಉಪಯುಕ್ತಕರವಾದ ಉದ್ದೇಶವನ್ನು ಪೂರೈಸುತ್ತವೆ. ಸರಿಯಾಗಿ ಉಪಯೋಗಿಸುವಲ್ಲಿ, ಸೂಕ್ತವಾದ ಒಂದು ದೃಶ್ಯ ಸಾಧನವು ಎಷ್ಟು ಆಳವಾದ ಪ್ರಭಾವವನ್ನು ಬೀರಬಹುದೆಂದರೆ, ಆ ದೃಶ್ಯ ಸಾಧನವೂ ಭಾಷಣದ ಅಂಶವೂ ಅನೇಕ ವರ್ಷಗಳ ವರೆಗೆ ನೆನಪಿನಲ್ಲಿ ಉಳಿಯುತ್ತದೆ.

ಕಿವಿಗೊಡುವ ಮತ್ತು ದೃಷ್ಟಿಸುವ ಸಾಮರ್ಥ್ಯ, ಇವೆರಡೂ ಕಲಿಯುವುದರಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತವೆ. ಈ ಜ್ಞಾನೇಂದ್ರಿಯಗಳನ್ನು ಅತ್ಯಂತ ಮಹಾನ್‌ ಬೋಧಕರು ಹೇಗೆ ಉಪಯೋಗಿಸಿದರೆಂಬುದನ್ನು ಜ್ಞಾಪಿಸಿಕೊಳ್ಳಿರಿ ಮತ್ತು ನೀವು ಇತರರನ್ನು ತಲಪಲು ಪ್ರಯತ್ನಿಸುವಾಗ ಅವರನ್ನು ಅನುಕರಿಸಲು ಪ್ರಯತ್ನಿಸಿರಿ.

ಪರಿಣಾಮಕಾರಿಯಾದ ದೃಶ್ಯ ಸಾಧನಗಳು . . .

  • ವಿಶೇಷವಾಗಿ ಒತ್ತಿಹೇಳಲು ಅರ್ಹವಾಗಿರುವ ವಿಷಯಗಳನ್ನು ಎತ್ತಿಹೇಳಬೇಕು ಅಥವಾ ಸ್ಪಷ್ಟೀಕರಿಸಬೇಕು.

  • ಅವುಗಳ ಪ್ರಧಾನ ಉದ್ದೇಶವು ಕಲಿಸುವುದೇ ಆಗಿರಬೇಕು.

  • ವೇದಿಕೆಯ ಮೇಲೆ ಉಪಯೋಗಿಸಲ್ಪಡುವಲ್ಲಿ, ಇಡೀ ಸಭಿಕವೃಂದಕ್ಕೆ ಸ್ಪಷ್ಟವಾಗಿ ಕಾಣುವಂತಿರಬೇಕು.

ಅಭ್ಯಾಸಪಾಠ: ನೀವು ಉಪಯೋಗಿಸಬಹುದಾದ ದೃಶ್ಯ ಸಾಧನಗಳನ್ನು ಈ ಕೆಳಗೆ ಪಟ್ಟಿಮಾಡಿರಿ . . .

ಯೆಹೋವನ ಸಂಸ್ಥೆಗಾಗಿ ಗಣ್ಯತೆಯನ್ನು ವರ್ಧಿಸಲು

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

ಕೆಲವು ಬೈಬಲ್‌ ಸತ್ಯಗಳನ್ನು ಒಂದು ಮಗುವಿಗೆ ಕಲಿಸಲು

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․․

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ