ಗೀತೆ 70
ಯೋಗ್ಯರನ್ನು ಹುಡುಕೋಣ
1. ಕ್ರಿಸ್ತ ಯೇಸು ತೋರಿದ ಸಾರೋ ವಿಧ,
ಸಿಹಿ ಸುದ್ದಿಯ ಸಾರೋಣ.
ವಿನಮ್ರತೆ ತೋರುವ ದೀನರನು,
ಹುಡುಕಿ ಸತ್ಯ ಬೋಧಿಸೋಣ.
ಮುಗುಳ್ನಗೆಯ ಬೀರಿ ಶಾಂತಿ ತೋರಿ,
ಪ್ರತಿಯೊಬ್ಬರ ವಂದಿಸೋಣ.
ನಿರಾಕರಿಸಿ ಕೋಪ ತೋರಿದರೆ,
ಧೂಳನ್ನು ಝಾಡಿಸಿ ಸಾಗೋಣ!
2. ಸಂದೇಶಕ್ಕೆ ಸ್ಪಂದನೆ ತೋರಿದರೆ
ಸಂತೋಷದಿ ಬೋಧಿಸೋಣ.
ಉತ್ಸಾಹದಿ ಮಾಡಿದರೆ ಪ್ರಗತಿ,
ಪ್ರೋತ್ಸಾಹ ಮಾಡಿ ಶ್ಲಾಘಿಸೋಣ.
ಯೆಹೋವನು ನೀಡುವನು ಶಕ್ತಿಯ
ಅಂಜಿಕೆ ಇಲ್ಲದೆ ಸಾರೋಣ.
ಸೌಜನ್ಯತೆ ತುಂಬಿರೋ ಮಾತನ್ನಾಡಿ,
ದೀನರ ಮನವ ಮುಟ್ಟೋಣ.
(ಅ. ಕಾ. 13:48; 16:14; ಕೊಲೊ. 4:6 ಸಹ ನೋಡಿ.)