ಲೋಕ ಶಾಂತಿಯ ಸ್ಪಪ್ನ ಒಂದು ಬಿರಿದ ದರ್ಶನ
ಲೋಕ ಶಾಂತಿಗಾಗಿ ಪ್ರತೀಕ್ಷೆಗಳ ಆಶಾವಾದವು ಉಬ್ಬೇರುತ್ತಾ ಇದೆ. ಟೊರಾಂಟೋ ಸ್ಟಾರ್ ಪತ್ರಿಕೆಯ ತನ್ನ ಅಂಕಣದಲ್ಲಿ, ಕ್ಯಾರೊಲ್ ಗಾಅರ್ ಬರೆದದ್ದು: “ಶಾಂತಿ ಸಂಧಾನಗಳು ಅಫಾನ್ಗಿಸ್ಥಾನದಿಂದ ಅಂಗೋಲದ ತನಕ ಹಬ್ಬುತ್ತಾ ಇವೆ. ಕೆಲವೇ ತಿಂಗಳುಗಳ ಹಿಂದೆ ಅಬೇಧ್ಯವೆಂದು ತೋರಿದ್ದ ಪ್ರಾದೇಶಿಕ ಹೋರಾಟಗಳು ಇಂದು ಮಣಿಯುವ ಚಿಹ್ನೆಗಳನ್ನು ತೋರಿಸುತ್ತಿವೆ. ಮತ್ತು ಸಂಯುಕ್ತ ರಾಷ್ಟ್ರ ಸಂಘವು ಒಂದು ಹುರಿದುಂಬಿಸುವ ಪುನರ್ಜನ್ಮವನ್ನು ಪಡೆದದೆ. ಇದು, ಗಾಅರ್ ಹೇಳುವುದು, “ಒಂದು ಜಾಗತಿಕ ನಿರೀಕ್ಷೆಯ ವ್ಯಾಧಿಯನ್ನೇ” ಚೇತರಿಸಿದೆ. ಯುಎಸ್ಎ ಟುಡೇಯ ಒಂದು ಸಂಪಾದಕೀಯವು ಸಹಾ ತದ್ರೀತಿಯಲ್ಲಿ ಘೋಷಿಸಿದ್ದು: “ಲೋಕದ ಎಲ್ಲಾ ಕಡೆಗಳಿಂದ ಶಾಂತಿಯು ಹೊರಹುಮ್ಮುತ್ತಾ ಇದೆ.
ಯಾವುದನ್ನು ಯುಎನ್ ಕ್ರಾನಿಕಲ್, “ರಷ್ಯಾ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಸೌಹಾರ್ದದಾರಂಭ” ಎಂದು ವರ್ಣಿಸಿದೆಯೇ ಅದು ಇತ್ತೀಚೆಗೆ ವಿಶೇಷವಾಗಿ ಗಮನಾರ್ಹವಾಗಿದೆ. ಸೇನಾಪಡೆಗಳ ಹಿಂತೆಗೆಯುವಿಕೆ, ಪೂರ್ವ ಯುರೋಪಿನ ಗಾಬರಿಬಡಿಸುವ ಘಟನೆಗಳು, ಸೈನ್ಯ ಮತ್ತು ಶಸ್ತ್ರಗಳ ಶಿಥಿಲತೆಯೇ—ಮುಂತಾದ ವಿಕಸನಗಳು ಶಸ್ತ್ರದೋಟದ ಮೇಲೆ ಕಟ್ಟಕಡೆಗೆ ಮುಖ್ಯ ಲೋಕಾಧಿಕಾರಗಳು ನಿಯಂತ್ರಣವನ್ನು ಹಾಕುತ್ತವೋ ಎಂಬ ನಿರೀಕ್ಷೆಗಳನ್ನು ಎಬ್ಬಿಸಿವೆ. ಎಲ್ಲಿ ಸೇನಾದಳದ ಖರ್ಚು ಆರ್ಥಿಕ ಮಿತವ್ಯಯದ 850 ಸಾವಿರ ಮಿಲಿಯ ಡಾಲರುಗಳನ್ನು ಪ್ರತಿವರ್ಷ ಹೀರುತ್ತದೋ ಆ ಲೋಕದಲ್ಲಿ ಇದೊಂದು ಸ್ವಾಗತಾರ್ಹ ಪ್ರತೀಕ್ಷೆಯೇ ಸರಿ.
ಆದಾಗ್ಯೂ, ಲೋಕ ಶಾಂತಿಯ ಮಾನವ ಸ್ಪಪ್ನವು ಸತ್ಯವಾಗುವುದು ಎಂಬದಕ್ಕೆ ಇರುವ ಸಂಭವನೀಯತೆಯಾದರೂ ಎಷ್ಟು? ಅತ್ಯಂತ ತೀವ್ರ ಆಶಾವಾದಿಗಳಾದ ಪ್ರೇಕ್ಷಕರು ಸಹಾ ಶಸ್ತ್ರ ಶಿಥಿಲತೆಯಿಂದ ಹಿಡಿದು ಶಸ್ತ್ರ ನಿರ್ಮೂಲನೆಗೆ ಮುಟ್ಟಲು ಒಂದು ಮಹತ್ತರವಾದ ಜಿಗಿತವಿದೆ ಎಂದು ಒಪ್ಪುತ್ತಾರೆ. ಅಣ್ವಸ್ತ್ರಗಳ ನಿಶಸ್ತ್ರೀಕರಣಕ್ಕೆ ಒಂದು ಅತ್ಯಪೂರ್ವ ಮಟ್ಟದ ಪರಸ್ಪರ ಭರವಸವು ಆವಶ್ಯಕವು. ವಿಷಾಧಕರವಾಗಿಯೇ, ಮುಖ್ಯ ಲೋಕಾಧಿಕಾರಗಳ ನಡುವೆ ಪರಸ್ಪರ ಅಪನಂಬಿಕೆಯ ವಿಸ್ತಾರವಾದ ಇತಿಹಾಸವೇ ಇದೆ. ಬೈಬಲಲ್ಲಿ ಪ್ರವಾದಿಸಲ್ಪಟ್ಟ ಪ್ರಕಾರ, ಮನುಷ್ಯರು “ಯಾವ ಒಮ್ಮತಕ್ಕೂ ಬಾರದ” [“ಸಂಧಾನಭಂಜಕರು,” ಕಿಂಗ್ಸ್ ಜೇಮ್ಸ್ ವರ್ಶನ್] ಆಗಿರುವ ಯುಗವು ಇದಾಗಿದೆ.—2 ತಿಮೊಥಿ 3:3.
ಅದಲ್ಲದೆ, ಅಣ್ವಸ್ತ್ರಗಳ ನಿರ್ಮೂಲನೆಯು ಶಾಂತಿಯನ್ನು ತರುವದೆಂಬ ಖಾತ್ರಿಯು ಎಲ್ಲರಿಗಿಲ್ಲ. ರಾಷ್ಟ್ರಗಳು ತಮ್ಮ ಅಣ್ವಸ್ತ್ರ ಸಂಚಯಗಳನ್ನು ಮಿತಗೊಳಿಸುವಂತೆ ಒತ್ತಾಯಪಡಿಸಲ್ಪಟ್ಟರೂ ಸಾಂಪ್ರದಾಯಿಕ ಶಸ್ತ್ರಗಳಿನ್ನೂ ಪರಿಣಾಮಕಾರಿಯಾಗಿ ಕೊಲೆಗೈಯಬಲ್ಲವು. 1ನೇ ಮತ್ತು 2ನೇ ಲೋಕ ಯುದ್ಧಗಳು ಈ ವಾಸ್ತವಿಕತೆಗೆ ಕ್ರೂರ ಸಾಕ್ಷ್ಮವನ್ನೀಯುತ್ತವೆ. ಅಣ್ವಸ್ತ್ರಗಳನ್ನು ಪುನಃ ನಿರ್ಮಿಸಲು ಬೇಕಾದ ತಾಂತ್ರಿಕಜ್ಞಾನವು ಇನ್ನೂ ಅಸ್ತಿತ್ವದಲ್ಲಿದ್ದು—ರಾಜಕೀಯ ವಿಕೋಪಗಳ ಪ್ರಥಮ ಚಿಹ್ನೆಗಳಿಗಾಗಿ ಕಾಯುತ್ತಾ, ಅದು ತಯಾರಾಗಿ ನಿಂತಿದೆ. ರಾಜಕೀಯ ತಜ್ಞ ರಿಚರ್ಡ್ ನೆಡ್ ಲಿಬೋನಂಥ ಕೆಲವರು, ಹೀಗೂ ವಾದಿಸುತ್ತಾರೆ: “ಕೆಲವೇ ಅಣ್ವಸ್ತ್ರಗಳನ್ನು ಎದುರಿಡುವದೂ ಪ್ರಾಯಶಃ ಜನರನ್ನು ಹುಷಾರಿಯಲ್ಲಿರುವಂತೆ ಮಾಡುವದು.”
ಆದರೆ ಎಷ್ಟರ ತನಕ ಅಣ್ವಸ್ತ್ರಗಳು ಅಸ್ತಿತ್ವದಲ್ಲಿವೆಯೋ ಆ ತನಕ, ಸರ್ವನಾಶನದ ಘೋರ ಕಲ್ಪನೆಯು ಶಾಂತಿ ಪ್ರಾಪ್ತಿಯ ಯಾವುದೇ ವಾದವನ್ನು ಹಾಸ್ಯಾಸ್ಪದವಾಗಿ ಮಾಡುವದು. ಅದೇ ರೀತಿ ಯುದ್ಧಗಳಿಗೆ ಸಂಬಂಧಿಸದ ಸಮಸ್ಯೆಗಳ ನಿರಂತರತೆಯೂ ಮಿಲ್ಯಾಂತರ ಜನರ ದಿನನಿತ್ಯದ ಜೀವನದಿಂದ ಶಾಂತಿಯನ್ನು ಅಪಹರಿಸುತ್ತದೆ. ಸಂಯುಕ್ತ ರಾಷ್ಟ್ರ ಸಂಘದ ಸೆಕ್ರಿಟರಿ ಜನರಲ್ ಝೇವಿಯರ್ ಪೆರೆಜ್ ಡಿಕ್ಯೂಲರ್, “ನಮ್ಮ ಜೊತೆ ನಾಗರಿಕರಲ್ಲಿ ನಿರಾಶ್ರಿತರಾಗಿರುವ ಅಥವಾ ಪೂರಾ ರೀತಿಯಲ್ಲಿ ನ್ಯೂನತೆಯ ಆಶ್ರಯವಿರುವ ಮಿಲ್ಯಾಂತರ ಜನರ ಪಾಡನ್ನು” ಕುರಿತು ಮಾತಾಡಿದರು. “ಆ ಸಮಸ್ಯೆಯು ಏಕ ಪ್ರಕಾರವಾಗಿ ಕೆಡುತ್ತಾ ಬರುತ್ತಿದೆ.” ದಿ ಯು ಎನ್ ಕ್ರಾನಿಕಲ್ ಇನ್ನೂ ತಿಳಿಸುತ್ತಾ, ಆರ್ಥಿಕ ಅವಿಕಸನವು “ಮಾನವ ಕುಲದ ಮೂರನೇ ಎರಡಂಶ ಜನರನ್ನು ಬಾಧಿಸುತ್ತದೆ, ಮತ್ತು ಕೆಲವು ಸಂದರ್ಭಗಳಲ್ಲಿ ಅವರ ದಾರಿದ್ರ್ಯ ಮತ್ತು ನಿರಾಶ್ರಿತ ಸ್ಥಿತಿಯು ಯುದ್ಧವು ಹೊಡೆದ ಬಾಧೆಗಳಿಂದಾಗಿ ಸ್ಪಷ್ಟವಾಗಿಗಿ ತೋರಿಬಂದಿಲ್ಲ.” ಮತ್ತು ಲೋಕದಲ್ಲಿ ಇರುವರೆಂದು ಅಂದಾಜು ಮಾಡಲ್ಪಟ್ಟ 12 ಮಿಲಿಯ ನಿರಾಶ್ರಿತರ ಕುರಿತಾಗಿ ಏನು? ಶಸ್ತ್ರ ಶಿಥಿಲತೆ ಅಥವಾ ಪೂರ್ಣ ನಿಶಸ್ತ್ರೀಕರಣವು ಕೂಡಾ ಅವರ ಜೀವನಕ್ಕೆ ಶಾಂತಿಯನ್ನು ತರಬಲ್ಲದೋ?
ವ್ಯಕ್ತವಾಗಿಯೇ, ಮನುಷ್ಯನ ಲೋಕ ಶಾಂತಿ ಎಂಬ ಸ್ವಪ್ನವು ಲಘುದೃಷ್ಟಿಯ, ಸಂಕುಚಿತ, ಸೀಮಿತವಾದ ಒಂದು ಬಿರಿದ ದರ್ಶನದಂತಿದೆ. ಶಾಂತಿಗಾಗಿ ಒಂದು ಉತ್ತಮ ಪ್ರತೀಕ್ಷೆಯು ಅಲ್ಲಿದೆಯೋ? ಖಂಡಿತವಾಗಿಯೂ ಇದೆ. ಈ ಪತ್ರಿಕೆಯ ಆಗಸ್ಟ್ 1, 1991ರ ಸಂಚಿಕೆಯಲ್ಲಿ ಬೈಬಲ್ ಶಾಂತಿಗಾಗಿ ಒಂದು ನಿಜ ನಿರೀಕ್ಷೆಯನ್ನು ಕೊಡುತ್ತದೆ ಎಂದು ನಾವು ನೋಡಿದೆವು.a ಶೀಫ್ರದಲ್ಲೀ ಯೇಸು ಕ್ರಿಸ್ತನು, ದೇವರ ರಾಜ್ಯದ ರಾಜನೋಪಾದಿ, ಯಾವುದೇ ಮಾನವ ಅಪೇಕ್ಷೆಗಳಿಗೆ ಎಷ್ಟೋ ಮಿಗಿಲಾದ ಶಾಂತಿಯನ್ನು ಬರಮಾಡುವನು. ಆದರೆ ಈ ಶಾಂತಿಯು ಮಾನವ ಕುಲಕ್ಕೆ ನಿಜವಾಗಿ ಯಾವ ಅರ್ಥದಲ್ಲಿದೆ? ಅದನ್ನು ಮುಂದಿನ ಲೇಖನವು ಚರ್ಚಿಸುವುದು. (w90 4/15)
[ಅಧ್ಯಯನ ಪ್ರಶ್ನೆಗಳು]
a “ಯಾರು ಮಾನವ ಕುಲವನ್ನು ಶಾಂತಿಗೆ ನಡಿಸುವರು?” ಎಂಬದನ್ನು ನಮ್ಮ ಆಗಸ್ಟ್ 1, 1991ರ ಸಂಚಿಕೆಯಲ್ಲಿ ನೋಡಿರಿ.