ಯೌವನದಲ್ಲಿ ದೇವರನ್ನು ಸೇವಿಸುವ ಯುವಜನರು
ಉತ್ತಮರಾದ ಯುವಜನರು ಯಾವ ಸಂಬಳವೂ ಇಲ್ಲದೆ ನಿಮ್ಮ ಮನೆಬಾಗಲಿಗೆ ದೇವರ ವಿಷಯ ಮಾತಾಡಲಿಕ್ಕಾಗಿ ಬರಲು ತಮ್ಮ ಸಮಯವನ್ನು ಕೊಡುವರೆಂಬ ವಿಷಯ ನಿಮಗೆ ವಿಚಿತ್ರವಾಗಿ ಕಾಣುತ್ತದೆಯೆ? ಬೆಳೆಯುತ್ತಿರುವ ಅವಿಶ್ವಾಸದ ಈ ಯುಗದಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ ಸಂತುಷ್ಟ ಭವಿಷ್ಯತ್ತಿನ ಕುರಿತು ಆಶ್ಚರ್ಯಕರವಾದ ಬೈಬಲ್ ವಾಗ್ದಾನಗಳನ್ನು ಇತರರಿಗೆ ತಿಳಿಸಲು ಹೋಗುತ್ತಾರೆಂಬುದು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆಯೆ?a
ಭೂವ್ಯಾಪಕವಾದ ಯೆಹೋವನ ಸಾಕ್ಷಿಗಳ 60,000ಕ್ಕೂ ಹೆಚ್ಚು ಸಭೆಗಳಲ್ಲಿ ನೀವು ಅನೇಕ ಯುವಜನರನ್ನು ಕಾಣುವಿರಿ. ಅವರು ಸಾಪ್ತಾಹಿಕ ಸಂಡೇ ಸ್ಕೂಲ್ ಯಾ ಭೋಧನಾ ಕ್ಲಾಸುಗಳಿಗೆ ಹೋಗುವುದಿಲ್ಲ. ಈ ಯುವಜನರು ಸಭಾಕೂಟಗಳಿಂದ ಪ್ರಯೋಜನ ಪಡೆಯುವುದು ಮಾತ್ರವಲ್ಲ ಅದರಲ್ಲಿ ಭಾಗವಹಿಸುವುದೂ ಉಂಟು. ಕಿರಿಯರು ಚಿಕ್ಕ ಉತ್ತರಗಳನ್ನು ಕೊಡಬಹುದು. ಹದಿಹರೆಯಕ್ಕೂ ಕೆಳವಯಸ್ಸಿನವರು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸುತ್ತಾರೆ. ಅನೇಕ ಹದಿಹರೆಯಸ್ಥರು ತಮ್ಮ ಶಾಲಾರಜಾದಿನಗಳನ್ನು ದೇವರ ಮತ್ತು ಭವಿಷ್ಯತ್ತಿಗೆ ಆತನ ಆಶ್ಚರ್ಯಕರವಾದ ವಾಗ್ದಾನಗಳ ಕುರಿತು ನೆರೆಹೊರೆಯವರು ಕಲಿಯಲು ಸಹಾಯ ಮಾಡುವಂತೆ ಉಪಯೋಗಿಸುತ್ತಾರೆ.
ಇಂಥ ಯುವ ಚಟುವಟಿಕೆ ಹೊಸದೇನೂ ಅಲ್ಲ. ಬೈಬಲು, ದೇವರನ್ನು ಸೇವಿಸುವುದರಲ್ಲಿ ಎದ್ದು ಕಾಣುವ ಮಾದರಿಗಳಾದ ಯುವಕ ಯುವತಿಯರ ಮತ್ತು ಎಳೆಯರ ಹಾಗೂ ಚಿಕ್ಕ ಮಕ್ಕಳ ವಿಷಯ ಹೇಳುತ್ತದೆ.
ಬೈಬಲಿನ ಕೀರ್ತನೆ ಪುಸ್ತಕ, ‘‘ಇಬ್ಬನಿ’’ಯಂತೆ ಚೈತನ್ಯದಾಯಕರೂ ಅಸಂಖ್ಯಾತರೂ ಆದ ‘‘ಯುವಕಸೈನಿಕರ’’ ಕುರಿತು ಮುಂತಿಳಿಸಿತು. ‘‘ಯುವಕರು’’ ಮತ್ತು ‘‘ಕನ್ಯೆಯರು’’ ದೇವರ ನಾಮವನ್ನು ಸ್ತುತಿಸುವುದನ್ನು ಸಹ ಅದು ತಿಳಿಸುತ್ತದೆ.(ಕೀರ್ತನೆ 110:3; 148:12, 13, NW) ಸಾ.ಶ. 33ರ ಪಂಚಾಶತ್ತಮದಲ್ಲಿ ದೇವರಾತ್ಮ ಸುರಿಸಲ್ಪಟ್ಟಾಗ ಅಲ್ಲಿ ಉಪಸ್ಥಿತರಾಗಿದವ್ದರ ಮಧ್ಯೆ ಕೆಲವು ಯುವಜನರೂ ಇದ್ದಿರುವುದು ಸಂಭವನೀಯ. ಆ ದಿನ ಸುಮಾರು 3,000 ಮಂದಿ ವಾಕ್ಯವನ್ನು ಅಂಗೀಕರಿಸಿ ದೀಕ್ಷಾಸ್ನಾನ ಹೊಂದಿದರು. ಅಪೋಸ್ತಲ ಪೇತ್ರನು, ಈ ಚಕಿತಗೊಳಿಸುವ ಸಂಭವವು, “ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು” ಎಂಬ ಯೋವೇಲನ ಪ್ರವಾದನೆಯ ನೆರವೇರಿಕೆಯೆಂದು ಹೇಳಿದನು.—ಅಪೊಸ್ತಲರ ಕೃತ್ಯ 2:4-8, 16,17,41.
ಯೌವನದಲ್ಲಿ ಯೆಹೋವ ದೇವರನ್ನು ಸೇವಿಸಿದ ಇತರ ಬೈಬಲ್ ಮಾದರಿಗಳಲ್ಲಿ ಸಮುವೇಲ, ನೀತಿಯ ರಾಜ ದಾವೀದ, ಪ್ರಸಿದ್ಧ ಪ್ರವಾದಿಗಳಾದ ಯೆರೆಮೀಯ ಮತ್ತು ದಾನಿಯೇಲ ಹಾಗೂ ನಂಬಿಗಸ್ತ ತಿಮೊಥಿ ಸೇರಿದ್ದಾರೆ. ಈ ಸಂಚಿಕೆಯಲ್ಲಿ ಈ ಬೈಬಲ್ ಮಾದರಿಗಳಲ್ಲಿ ಕೆಲವರ ವಿಷಯ ಹೇಳಿರುವ ಮೂರು ಲೇಖನಗಳಿವೆ. ಈ ಲೇಖನಗಳಿಂದ ನೀವು, ಯುವಜನರು ಹಾಗೂ ಪ್ರಾಯಸ್ಥರು ದೇವರ ಸೇವೆಯನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆಂದೂ ತಮ್ಮ ನೆರೆಯವರು ಸಹ ಹಾಗೆ ಮಾಡಲು ಸಹಾಯ ಮಾಡುವಂತೆ ಅವರೇಕೆ ಅಷ್ಟು ಸಮಯವನ್ನು ವ್ಯಯಿಸುತ್ತಾರೆಂದೂ ನೋಡುವಿರಿ. (w90 8/1)
[ಅಧ್ಯಯನ ಪ್ರಶ್ನೆಗಳು]
a 1946 ರಿಂದ ಜನಿಸಿದ 12 ಪ್ರತಿಶತ (Percent) ಅಮೇರಿಕರು : 16ನೇ ವಯಸಿನಲ್ಲಿ ಅವರಿಗೆ ತುಂಬ ನಂಬಿಕೆ ಇತ್ತು ಎಂದು 1985 ರ ಗ್ಯಲಪ ಸರ್ವೆ ಕಂಡರು.