ನಿಜ ಸ್ವಾತಂತ್ರ್ಯ—ಯಾವ ಮೂಲದಿಂದ?
“ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು.”—ಯೆರೆಮೀಯ 10:23, 24.
ನಿಸ್ಸಂಶಯವಾಗಿ ನೀವು ಸ್ವಾತಂತ್ರ್ಯವನ್ನು ಗಣ್ಯಮಾಡುತ್ತೀರಿ. ನಿಮ್ಮ ಸ್ವಂತ ವೀಕ್ಷಣೆಗಳನ್ನು ವ್ಯಕ್ತಪಡಿಸಲಿಕ್ಕಾಗಿ ಸ್ವತಂತ್ರರಿರಲು, ನೀವು ಎಲ್ಲಿ ಮತ್ತು ಹೇಗೆ ಜೀವಿಸಬೇಕು ಎಂದು ನಿರ್ಧರಿಸುವುದಕ್ಕೆ ಸ್ವತಂತ್ರರಿರಲು ನೀವು ಬಯಸುತ್ತೀರಿ. ನೀವು ಮಾಡುವ ಕೆಲಸವನ್ನು ಆರಿಸಿಕೊಳ್ಳಲು, ನಿಮ್ಮ ಊಟವನ್ನು, ಸಂಗೀತವನ್ನು, ಮಿತ್ರರನ್ನು ಆರಿಸಿಕೊಳ್ಳಲು ನೀವು ಬಯಸುತ್ತೀರಿ. ಚಿಕ್ಕದಾದ ಮತ್ತು ದೊಡ್ಡದಾದ ಅನೇಕಾನೇಕ ವಿಷಯಗಳ ಕುರಿತು ನಿಮ್ಮ ಸ್ವಂತ ಇಷ್ಟಗಳು ನಿಮಗಿವೆ. ಸಹಜ ಸ್ಥಿತಿಯ ಯಾವ ವ್ಯಕ್ತಿಯಾದರೂ ಕೊಂಚ ಅಥವಾ ಏನೂ ಸ್ವಾತಂತ್ರ್ಯವಿಲ್ಲದೆ ಸರ್ವಾಧಿಕಾರದ ಅಧಿಪತಿಗಳಿಗೆ ದಾಸನಾಗಿರಲು ಬಯಸಲಾರನು.
1, 2. ಹೆಚ್ಚಿನ ಜನರು ಸ್ವಾತಂತ್ರ್ಯವನ್ನು ಹೇಗೆ ವೀಕ್ಷಿಸುತ್ತಾರೆ, ಆದರೆ ಬೇರೆ ಏನನ್ನು ಗಮನಿಸುವ ಅಗತ್ಯವಿದೆ?
2 ಆದರೂ ಎಲ್ಲಿ ಬೇರೆಯವರು ಮತ್ತು ನೀವು ಸಹಾ ನಿಜ ಸ್ವಾತಂತ್ರ್ಯದಿಂದ ಪ್ರಯೋಜನ ಹೊಂದಬಲ್ಲಿರೋ ಅಂಥ ಒಂದು ಲೋಕವನ್ನು ಸಹಾ ನೀವು ಬಯಸಲಾರಿರೋ? ಎಲ್ಲಿ ಪ್ರತಿಯೊಬ್ಬನ ಜೀವಿತವು ಪರಿಪೂರ್ಣವಾಗಿ ವ್ಯಕ್ತಪಡಿಸಲ್ಪಡ ಸಾಧ್ಯವಾಗುವ ಸ್ವಾತಂತ್ರ್ಯವು ಕಾಪಾಡಲ್ಪಡುವುದೋ ಅಂಥ ಒಂದು ಲೋಕವು ನಿಮಗೆ ಬೇಡವೂ? ಮತ್ತು ಅದು ಸಾಧ್ಯವಿರುವುದಾದರೆ, ಭಯ, ಪಾತಕ, ಹಸಿವೆ, ಬಡತನ, ಮಾಲಿನ್ಯತೆ, ಅಸ್ವಸ್ಥ ಮತ್ತು ಯುದ್ಧಗಳಿಂದ ಸ್ವತಂತ್ರವಾಗಿರುವ ಒಂದು ಲೋಕವನ್ನು ಸಹಾ ನೀವು ಇಷ್ಟೈಸಲಾರಿರೋ? ನಿಶ್ಚಯವಾಗಿ ಅಂಥ ಸ್ವಾತಂತ್ರ್ಯಗಳು ಅತೀಷವ್ಟಾಗಿ ಅಪೇಕ್ಷಣೀಯವು.
3. ನಾವು ಸ್ವಾತಂತ್ರ್ಯವನ್ನು ಅಮೂಲ್ಯವೆಂದೆಣಿಸುತ್ತೇವೆ ಏಕೆ?
3 ಸ್ವಾತಂತ್ರ್ಯದ ಕುರಿತು ಮಾನವರಾದ ನಾವು ಅಷ್ಟು ಪ್ರಬಲವಾಗಿ ಭಾವಿಸುವುದೇಕೆ? ಬೈಬಲ್ ಅನ್ನುವುದು: “ಎಲ್ಲಿ ಯೆಹೋವನ ಆತ್ಮ ಇದೆಯೇ ಅಲ್ಲಿ ಸ್ವಾತಂತ್ರ್ಯ ಇದೆ.” (2 ಕೊರಿಂಥ 3:17, NW) ಹೀಗೆ ಯೆಹೋವನು ಸ್ವಾತಂತ್ರ್ಯದ ದೇವರಾಗಿದ್ದಾನೆ. ಮತ್ತು ಆತನು ನಮ್ಮನ್ನು ತನ್ನ ‘ಸ್ವರೂಪ ಮತ್ತು ಹೋಲಿಕೆ’ ಯಲ್ಲಿ ನಿರ್ಮಿಸಿದರ್ದಿಂದ, ನಾವು ಸ್ವಾತಂತ್ರ್ಯವನ್ನು ಗಣ್ಯಮಾಡುವಂತೆ ಮತ್ತು ಪ್ರಯೋಜನ ಹೊಂದುವಂತೆ ಆತನು ನಮಗೆ ಚಿತ್ತಸ್ವಾತಂತ್ರ್ಯವನ್ನು ಅನುಗ್ರಹಿಸಿದ್ದಾನೆ.—ಆದಿಕಾಂಡ 1:26.
ಸ್ವಾತಂತ್ರ್ಯ ದುರುಪಯೋಗಿಸಲ್ಪಟ್ಟದ್ದು
4, 5. ಇತಿಹಾಸದಲ್ಲೆಲ್ಲೂ ಸ್ವಾತಂತ್ರ್ಯವು ದುರುಪಯೋಗಿಸಲ್ಪಟ್ಟಿದೆ ಹೇಗೆ?
4 ಇತಿಹಾಸದಲ್ಲೆಲ್ಲೂ ಲಕ್ಷಾಂತರ ಜನರು, ಇತರರು ಅವರ ಚಿತ್ತ ಸ್ವಾತಂತ್ರ್ಯವನ್ನು ದುರುಪಯೋಗಿಸಿದ ಕಾರಣದಿಂದಾಗಿ ದಾಸ್ಯತ್ವಕ್ಕೆ, ಚಿತ್ರಹಿಂಸೆಗೆ ಮತ್ತು ಸಾವಿಗೆ ಗುರಿಯಾಗಿರುವರು. ಸುಮಾರು 3,500 ವರ್ಷಗಳ ಹಿಂದೆ, “ಐಗುಪ್ತ್ಯರು ಇಸ್ರಾಯೇಲ್ಯರ ಕೈಯಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡು . . . ಕೆಲಸಗಳಲ್ಲಿ ಕಠಿಣವಾಗಿ ದುಡಿಸಿ ಅವರ ಜೀವಗಳನ್ನು ಬೇಸರ ಪಡಿಸಿದರು,” ಎಂದು ಬೈಬಲ್ ಹೇಳುತ್ತದೆ. (ವಿಮೋಚನಕಾಂಡ 1:13, 14) ಸಾ.ಶ.ಪೂ. ನಾಲ್ಕನೆಯ ಶತಮಾನದಲ್ಲಿ, ಅಥೆನ್ಸ್ ಮತ್ತು ಬೇರೆ ಎರಡು ಗ್ರೀಕ್ ಪಟ್ಟಣಗಳ ಗುಲಾಮರ ಸಂಖ್ಯೆಯು ಸ್ವತಂತ್ರ ಜನಸಂಖ್ಯೆಯನ್ನು ಸುಮಾರು 4ಕ್ಕೆ ಒಂದು ಪ್ರಮಾಣದಲ್ಲಿ ಮೀರಿತ್ತೆಂದು ಎಸೈಕ್ಲೊಪೀಡಿಯ ಅಮೆರಿಕಾನ ಹೇಳುತ್ತದೆ. ಇದೇ ಮೂಲವು ಇದನ್ನೂ ಹೇಳಿದೆ: “ರೋಮಿನಲ್ಲಿ ಗುಲಾಮನಿಗೆ ಮೂಲತಃ ಹಕ್ಕುಗಳು ಇರಲಿಲ್ಲ. ಅತ್ಯಲ್ಪ ಅಪರಾಧಕ್ಕಾಗಿ ಅವನನ್ನು ಕೊಲ್ಲಲು ಸಾಧ್ಯತೆ ಇತ್ತು.” ಕಾಮ್ಟನ್ಸ್ ಎನ್ಸೈಕ್ಲೊಪೀಡಿಯ ಗಮನಿಸುವುದು: “ರೋಮಿನಲ್ಲಿ ಗುಲಾಮ ಚಾಕರಿಯು ರಾಜ್ಯದ ತಳಪಾಯವಾಗಿತ್ತು. . . . ಗುಲಾಮರು ಹೆಚ್ಚಾಗಿ ಸರಪಣಿ ಬಿಗಿಯಲ್ಪಟ್ಟ ಸ್ಥಿತಿಯಲ್ಲಿ ಹೊಲಗಳಲ್ಲಿ ದುಡಿಯುತ್ತಿದ್ದರು. ರಾತ್ರಿಯಲ್ಲಿ ಅವರನ್ನು ಒಟ್ಟಾಗಿ ಕಟ್ಟಿಹಾಕಿ, ನೆಲದಡಿಯಲ್ಲಿ ಅರ್ಧ ಹೂತಿದ್ದ ಮಹಾ ಸೆರೆಮನೆಗಳೊಳಗೆ ಬಂಧಿಸುತ್ತಿದ್ದರು.” ಹೆಚ್ಚಿನ ದಾಸರು ಒಂದು ಕಾಲದಲ್ಲಿ ಸ್ವತಂತ್ರರಾಗಿದ್ದವರಾದ್ದರಿಂದ, ಆ ಭಗ್ನಜೀವಿತಗಳ ಮನೋವ್ಯಥೆಯನ್ನು ಊಹಿಸಿಕೊಳ್ಳಿರಿ!
5 ಶತಮಾನಗಳ ತನಕ ಕ್ರೈಸ್ತ ಪ್ರಪಂಚವು ಒಂದು ದಬ್ಬಾಳಿಕೆಯ ಗುಲಾಮ ವ್ಯಾಪಾರವನ್ನು ನಡೆಸಿತ್ತು. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “1500 ರಿಂದ 1800 ರ ತನಕ ಯೂರೋಪಿಯಾನರು ಸುಮಾರು ಒಂದು ಕೋಟಿ ಕರಿಯ ಗುಲಾಮರನ್ನು ಆಫ್ರಿಕದಿಂದ ಪಶ್ಚಿಮ ಗೋಲಾರ್ಧಕ್ಕೆ ಸಾಗಿಸಿದರು.” ಈ 20 ನೆಯ ಶತಮಾನದಲ್ಲಿ, ನಾಝೀ ಕೂಟಶಿಬಿರಗಳಲ್ಲಿ ಸರಕಾರದ ಕಾಯಿದೆಯ ರೀತಿಯಲ್ಲಿ ಲಕ್ಷಾಂತರ ಮಂದಿ ಬಂದಿವಾಸಿಗಳು ಕಠಿಣವಾಗಿ ದುಡಿಸಲ್ಪಟ್ಟು ಸತ್ತರು ಅಥವಾ ಕೊಲ್ಲಲ್ಪಟ್ಟರು. ಅದಕ್ಕೆ ಬಲಿಯಾದವರಲ್ಲಿ ಅನೇಕ ಯೆಹೋವನ ಸಾಕ್ಷಿಗಳು ಕೂಡಿದ್ದರು ಯಾಕಂದರೆ ಅವರು ಕೊಲೆಗಡುಕ ನಾಝೀ ಆಳಿಕೆಯನ್ನು ಬೆಂಬಲಿಸಲು ನಿರಾಕರಿಸಿದ ಕಾರಣದಿಂದಲೇ.
ಸುಳ್ಳು ಧರ್ಮಕ್ಕೆ ಸೆರೆ
6. ಪುರಾತನ ಕಾನಾನಿನಲ್ಲಿ ಸುಳ್ಳು ಧರ್ಮವು ಜನರನ್ನು ದಾಸರನ್ನಾಗಿ ಮಾಡಿದ್ದು ಹೇಗೆ?
6 ಸುಳ್ಳು ಧರ್ಮವನ್ನು ಪಾಲಿಸುವುದರಿಂದ ಉಂಟಾಗುವ ಒಂದು ದಾಸ್ಯವೂ ಅಸ್ತಿತ್ವದಲ್ಲಿದೆ. ದೃಷ್ಟಾಂತಕ್ಕಾಗಿ, ಪುರಾತನ ಕಾನಾನಿನಲ್ಲಿ, ಮಕ್ಕಳನ್ನು ಮೋಲೆಕನಿಗೆ ಬಲಿ ಅರ್ಪಿಸಲಾಗುತ್ತಿತ್ತು. ಈ ಸುಳ್ಳು ದೇವರ ದೊಡ್ಡ ವಿಗ್ರಹದೊಳಗೆ ಒಂದು ಕುಲುಮೆಯು ಧಗಧಗಿಸುತ್ತಿತ್ತು ಎಂದು ಹೇಳಲಾಗುತ್ತದೆ. ಜೀವಂತ ಮಕ್ಕಳನ್ನು ವಿಗ್ರಹದ ಪೂರ್ತಿಚಾಚಿದ ತೋಳುಗಳಿಗೆ ಎಸೆದಾಗ ಅವು ಆ ಮೂಲಕವಾಗಿ ಕೆಳಗೆ ಬೆಂಕಿಯೊಳಗೆ ದುಮುಕುತ್ತಿದ್ದವು. ಕೆಲವು ಇಸ್ರಾಯೇಲ್ಯರು ಸಹ ಈ ಮಿಥ್ಯಾರಾಧನೆಯನ್ನು ನಡಿಸುತ್ತಿದ್ದರು. ಅವರು ‘ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗಾಗಿ ಆಹುತಿಕೊಡುತ್ತಿದ್ದರು. ಅಂಥ ಅಸಹ್ಯಕಾರ್ಯವನ್ನು ಆತನು ವಿಧಿಸಲಿಲ್ಲ, ಅದರ ಸಂಕಲ್ಪವೂ ಆತನ ಹೃದಯದಲ್ಲಿ ಹುಟ್ಟಿರಲಿಲ್ಲ’ ಎಂದು ದೇವರು ಹೇಳುತ್ತಾನೆ. (ಯೆರೆಮೀಯ 32:35) ಮೋಲೆಕನು ತನ್ನ ಆರಾಧಕರಿಗೆ ಯಾವ ಪ್ರಯೋಜನವನ್ನು ತಂದನು? ಆ ಕಾನಾನ್ಯ ಜನಾಂಗಗಳು ಮತ್ತು ಮೋಲೆಕನ ಭಕ್ತಿಯು ಇಂದು ಎಲ್ಲಿದೆ? ಅವೆಲ್ಲವೂ ಅಳಿದುಹೋಗಿರುತ್ತವೆ. ಅದು ಸುಳ್ಳು ಭಕ್ತಿ, ಸತ್ಯದ ಮೇಲಲ್ಲ, ಸುಳ್ಳಿನ ಮೇಲೆ ಆಧಾರಿತವಾದ ಭಕ್ತಿಯಾಗಿತ್ತು.—ಯೆಶಾಯ 60:12.
7. ಯಾವ ಭೀಕರ ಪದ್ಧತಿಯು ಆ್ಯಸ್ಟೆಕ್ ಧರ್ಮದ ಭಾಗವಾಗಿತ್ತು?
7 ಶತಮಾನಗಳ ಹಿಂದೆ ಮಧ್ಯ ಅಮೆರಿಕದಲ್ಲಿ ಆ್ಯಸ್ಟೆಕ್ ಜನಾಂಗದವರು ಸುಳ್ಳು ಧರ್ಮಕ್ಕೆ ದಾಸರಾಗಿದ್ದರು. ಅಲ್ಲಿ ಜನರಿಗೆ ವ್ಯಕ್ತಿಪರ ದೇವರುಗಳಿದ್ದರು, ನಿಸರ್ಗದ ಶಕ್ತಿಗಳನ್ನು ದೇವರುಗಳೆಂದು ಪೂಜಿಸಲಾಗುತ್ತಿತ್ತು, ದಿನನಿತ್ಯದ ಜೀವಿತದಲ್ಲಿ ವಿವಿಧ ಕಾರ್ಯಗತಿಗಳಿಗೆ ಅವುಗಳ ಸ್ವಂತ ದೇವರುಗಳಿದ್ದರು, ಸಸಿಗಳಿಗೆ ಅವುಗಳ ದೇವರುಗಳಿದ್ದರು, ಆತ್ಮಹತ್ಯೆಗಳಿಗೆ ಸಹ ಒಬ್ಬ ದೇವರಿದ್ದನು. ದ ಏನ್ಷೆಂಟ್ ಸನ್ ಕಿಂಗ್ಡಮ್ಸ್ ಆಫ್ ದ ಅಮೆರಿಕಾಸ್ ಎಂಬ ಪುಸ್ತಕ ತಿಳಿಸುವುದು: “ಅದೃಶ್ಯ ಶಕ್ತಿಗಳನ್ನು ಬೆಂಬಲಿಸುವುದಕ್ಕೆ ಶಕ್ತರಾಗುವಂತೆ ಮತ್ತು ಆ ಮೂಲಕ ಅವನ್ನು ಶಾಂತಗೊಳಿಸುವಂತೆ ತಮ್ಮಿಂದ ಕೊಡಸಾಧ್ಯವಾದಷ್ಟು ಹೆಚ್ಚು ಮಾನವ ಹೃದಯಗಳನ್ನು ಒದಗಿಸುವದಕ್ಕೆ, ಆ್ಯಸ್ಟೆಕ್ ಮೆಕ್ಸಿಕೋ ಸರಕಾರವು ಮೇಲಿಂದ ಕೆಳತನಕ ಸಂಘಟಿತವಾಗಿತ್ತು. ರಕ್ತವು ದೇವರುಗಳ ಪಾನವಾಗಿತ್ತು. ದೇವರುಗಳಿಗೆ ಯಜ್ಞವಾಗಿ ತಕ್ಕದ್ದಾದ ಬಂದಿಗಳನ್ನು ಬಲಿಕೊಡಲು ಎಡೆಬಿಡದ ಚಿಕ್ಕ ಯುದ್ಧಗಳು ನಡಿಯುತ್ತಿದ್ದವು.” 1486 ರಲ್ಲಿ ಒಂದು ದೊಡ್ಡ ಪಿರಮಿಡ್ಡು ದೇವಸ್ಥಾನದ ಸಮರ್ಪಣೆಯಾದಾಗ, ಸಾವಿರಾರು ಬಲಿಗಳನ್ನು “ಯಜ್ಞಾರ್ಪಣೆಯ ಕಲ್ಲಿನ ಮೇಲೆ ಕೈಕಾಲುಗಳನ್ನು ಚಾಚಲು ಕಾಯುವಂತೆ ಸಾಲಾಗಿ ನಿಲ್ಲಿಸುತ್ತಿದ್ದರು. ಅವರ ಹೃದಯಗಳನ್ನು ಕೊಯ್ದು ತೆಗೆದು, ತುಸು ಹೊತ್ತು ಬಿಸಿಲಿಗೆ” ಸೂರ್ಯ-ದೇವರನ್ನು ಶಾಂತಗೊಳಿಸಲಿಕ್ಕಾಗಿ ಹಿಡಿಯುತ್ತಿದ್ದರು. ದಿ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಆರಾಧಕರು ಕೆಲವು ಸಾರಿ ಒಂದು ಬಲಿಯ ದೇಹದ ಭಾಗಗಳನ್ನು ತಿನ್ನುತ್ತಿದ್ದರು.” ಆದರೂ, ಆ ಪದ್ಧತಿಗಳು ಆ್ಯಸ್ಟೆಕ್ ಸಾಮ್ರಾಜ್ಯವನ್ನಾಗಲಿ ಅದರ ಸುಳ್ಳುಧರ್ಮವನ್ನಾಗಲಿ ರಕ್ಷಿಸಲಿಲ್ಲ.
8. ಆ್ಯಸ್ಟೆಕ್ ಜನಾಂಗದವರ ನಡುವೆ ಸಂಭವಿಸಿದ್ದಕ್ಕಿಂತಲೂ ಎಷ್ಟೋ ಹೆಚ್ಚಿನ ಒಂದು ಆಧುನಿಕ ಸಂಹಾರದ ಕುರಿತು ಒಬ್ಬ ಪರ್ಯಟನ ಮಾರ್ಗದರ್ಶಿ ಹೇಳಿದ್ದೇನು?
8 ಆ್ಯಸ್ಟೆಕ್ ಯಾಜಕರು ಒಬ್ಬ ಯೌವನಸ್ಥನ ಹೃದಯವನ್ನು ಕೊಯ್ದು ತೆಗೆಯುವುದನ್ನು ಚಿತ್ರಿಸಿದ ಒಂದು ಪ್ರದರ್ಶನ ಸಂಪುಟವು ಎಲ್ಲಿತ್ತೋ ಆ ಪ್ರದರ್ಶನಾಲಯವನ್ನು ಸಂದರ್ಶಕರು ಒಮ್ಮೆ ಸಂದರ್ಶಿಸುತ್ತಿದ್ದರು. ಪ್ರದರ್ಶನ ವಸ್ತುವನ್ನು ಪರ್ಯಟನ ಮಾರ್ಗದರ್ಶಿಯು ವಿವರಿಸಿ ಹೇಳಿದಾಗ, ಸಂಚಾರ ಗುಂಪಿನ ಕೆಲವರಿಂದ ಖೇಧದ ಮೇಲುಸಿರು ಹೊರಟಿತು. ಮಾರ್ಗದರ್ಶಿಯು ಅನಂತರ ಅಂದದ್ದು: “ಯುವಕರನ್ನು ವಿಧರ್ಮಿ ದೇವರುಗಳಿಗೆ ಬಲಿಕೊಡುವ ಆ್ಯಸ್ಟೆಕ್ ಪದ್ಧತಿಯಿಂದ ನಿಮ್ಮ ಮನ ಕಲಕಿದೆ ಎಂದು ನನಗೆ ಗೊತ್ತು. ಆದರೂ, ಈ 20 ನೆಯ ಶತಮಾನದಲ್ಲಿ ಲಕ್ಷಾಂತರ ಯುವ ಜನರು ಯುದ್ಧ ದೇವತೆಗೆ ಬಲಿಯಾಗಿದ್ದಾರೆ. ಅದೇನು ಇದಕ್ಕಿಂತ ಮೇಲೋ?” ಯುದ್ಧದಲ್ಲಿ ಎಲ್ಲಾ ರಾಷ್ಟ್ರಗಳ ಧಾರ್ಮಿಕ ಮುಖಂಡರು ವಿಜಯಕ್ಕಾಗಿ ಪ್ರಾರ್ಥಿಸುವುದು ಮತ್ತು ಒಂದೇ ಧರ್ಮದ ಜನರು ಆಗಾಗ್ಯೆ ವಿರುದ್ಧ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತಿರುವಾಗಲೂ ಸೈನ್ಯಗಳನ್ನು ಆಶೀರ್ವದಿಸುವುದು ನಿಜಸಂಗತಿಯಾಗಿದೆ.—1 ಯೋಹಾನ 3:10-12; 4:8, 20, 21; 5:3.
9. ಇತಿಹಾಸದಲ್ಲಿ ಬೇರೆ ಯಾವುದಕ್ಕಿಂತಲೂ ಅಧಿಕವಾಗಿ ಎಳೆಯ ಜೀವಗಳನ್ನು ಹತಿಸುವ ಪದ್ಧತಿ ಯಾವುದು?
9 ಯುವಜನರನ್ನು ಮೋಲೆಕನಿಗೆ, ಆ್ಯಸ್ಟೆಕ್ ದೇವರುಗಳಿಗೆ, ಅಥವಾ ಯುದ್ಧಕ್ಕೆ ಬಲಿಕೊಡುವಿಕೆಗಿಂತ, ಲೋಕವ್ಯಾಪಕವಾಗಿ ವರ್ಷಕ್ಕೆ ಸುಮಾರು 4 ಅಥವಾ 5 ಕೋಟಿ ಇನ್ನೂ ಹುಟ್ಟದ ಶಿಶುಗಳನ್ನು ಗರ್ಭಪಾತಗಳಲ್ಲಿ ಕೊಲ್ಲುವಿಕೆಯು ಹೆಚ್ಚು ಅಶಿಶಯಿಸುತ್ತಾ ಇದೆ. ಕಳೆದ ಕೇವಲ ಮೂರು ವರ್ಷಗಳಲ್ಲಿ ನಡೆದ ಗರ್ಭಪಾತಗಳ ಸಂಖ್ಯೆಯು ಈ ಶತಮಾನದ ಎಲ್ಲಾ ಯುದ್ಧಗಳಲ್ಲಿ ಕೊಲ್ಲಲ್ಪಟ್ಟ ಹತ್ತು ಕೋಟಿ ಜನರಿಗಿಂತಲೂ ದೊಡ್ಡದಾಗಿರುತ್ತದೆ. ನಾಝೀ ಆಳಿಕೆಯ 12 ವರ್ಷಗಳಲ್ಲಿ ಹತಿಸಲ್ಪಟ್ಟ ಎಲ್ಲಾ ಜನರಿಗಿಂತ ಹಲವಾರು ಪಾಲು ಹೆಚ್ಚು ಸಂಖ್ಯೆಯಲ್ಲಿ ಶಿಶುಗಳು ಪ್ರತಿ ವರುಷ ಗರ್ಭಪಾತದಿಂದಾಗಿ ಸಾಯುತ್ತಿವೆ. ಇತ್ತೀಚಿಗಿನ ದಶಕಗಳಲ್ಲಿ, ಮೋಲೆಕನಿಗೆ ಅಥವಾ ಆ್ಯಸ್ಟೆಕ್ ದೇವರುಗಳಿಗೆ ಬಲಿಯರ್ಪಿಸಲ್ಪಟ್ಟ ಆ ಎಲ್ಲಾ ಜನರಿಗಿಂತ ಸಾವಿರಾರು ಪಾಲಷ್ಟು ಹೆಚ್ಚು ಶಿಶುಗಳು ಗರ್ಭಪಾತದಿಂದಾಗಿ ಸತ್ತಿವೆ. ಆದರೂ ಗರ್ಭಪಾತ ಮಾಡಿಸಿಕೊಳ್ಳುವ ಅಥವಾ ಮಾಡುವ (ಹೆಚ್ಚಿನವರಲ್ಲದಿದ್ದರೆ) ಆನೇಕರು, ಒಂದಲ್ಲ ಒಂದು ಧರ್ಮದ ಅವಲಂಬಿಗಳು.
10. ಜನರು ಸುಳ್ಳುಧರ್ಮಕ್ಕೆ ದಾಸರಾಗಿರುವ ಇನ್ನೊಂದು ಮಾರ್ಗವು ಯಾವುದು?
10 ಸುಳ್ಳು ಧರ್ಮವು ಜನರನ್ನು ಬೇರೆ ವಿಧಾನಗಳಲ್ಲೂ ಬಂಧನದಲಿಡ್ಲುತ್ತದೆ. ಉದಾಹರಣೆಗಾಗಿ, ಮೃತರು ಆತ್ಮ ಲೋಕದಲ್ಲಿ ಜೀವಂತರಾಗಿದ್ದಾರೆಂದು ಅನೇಕರು ನಂಬುತ್ತಾರೆ. ಇಂಥ ಒಂದು ಸುಳ್ಳು ನಂಬಿಕೆಯ ಫಲಿತಾಂಶವು, ಮೃತ ಪೂರ್ವಜರಿಂದ ಪ್ರಯೋಜನ ಹೊಂದಬಹುದೆಂದು ನೆನಸಿ ಅವರಿಗೆ ಭಯಪಡುವುದು ಮತ್ತು ಅವರನ್ನು ಪೂಜಿಸುವುದೇ. ಇದು ಜನರನ್ನು, ಮೃತರನ್ನು ಶಾಂತಗೊಳಿಸಲು ಜೀವಂತರಿಗೆ ಸಹಾಯ ಮಾಡಶಕ್ತರೆಂದು ನೆನಸಿ, ಸಂಪರ್ಕಿಸುವ ಮಂತ್ರವೈದ್ಯರ, ದೆವ್ವಮಾಧ್ಯಮಗಳ ಮತ್ತು ವೈದಿಕರ ದಾಸರಾಗುವಂತೆ ಮಾಡುತ್ತದೆ. ಅಂಥ ಒಂದು ದಾಸ್ಯದಿಂದ ಹೊರಬರುವ ಯಾವುದಾದರೊಂದು ಮಾರ್ಗವಿದೆಯೇ ಎಂದು ಯುಕ್ತವಾಗಿಯೇ ಪ್ರಶ್ನಿಸ ಸಾಧ್ಯವಿದೆ.—ಧರ್ಮೋಪದೇಶಕಾಂಡ 18:10-12; ಪ್ರಸಂಗಿ 9:5, 10. (w92 4/1)
[ಪುಟ 4,5 ರಲ್ಲಿರುವಚಿತ್ರ]
ಇತಿಹಾಸದಲ್ಲೆಲ್ಲೂ ಕೆಲವರು ತಮ್ಮ ಚಿತ್ತಸ್ವಾತಂತ್ರ್ಯವನ್ನು ಇತರರನ್ನು ದಾಸರನ್ನಾಗಿ ಮಾಡಲು ದುರುಪಯೋಗಿಸಿದ್ದಾರೆ