ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 2/15 ಪು. 3-4
  • ಪಂಥಗಳು—ಅವುಗಳೇನಾಗಿವೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಂಥಗಳು—ಅವುಗಳೇನಾಗಿವೆ?
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪಂಥವೆಂದರೇನು?
  • ಯೆಹೋವನ ಸಾಕ್ಷಿಗಳೆಂದರೆ ಒಂದು ಪಂಥನಾ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ಯೆಹೋವನ ಸಾಕ್ಷಿಗಳು ಒಂದು ಪಂಥವಾಗಿದ್ದಾರೋ?
    ಕಾವಲಿನಬುರುಜು—1994
  • ದೇವರ ಹೆಸರಿನಲ್ಲಿ ಗೋಪ್ಯತೆ
    ಕಾವಲಿನಬುರುಜು—1997
  • ಜಗತ್ತನ್ನು ಗಮನಿಸುವುದು
    ಎಚ್ಚರ!—1992
ಇನ್ನಷ್ಟು
ಕಾವಲಿನಬುರುಜು—1994
w94 2/15 ಪು. 3-4

ಪಂಥಗಳು—ಅವುಗಳೇನಾಗಿವೆ?

ಫೆಬ್ರವರಿ 28, 1993—ನೂರಕ್ಕಿಂತಲೂ ಹೆಚ್ಚು ಕಾನೂನು-ನಿರ್ಬಂಧಕ ಅಧಿಕಾರಿಗಳು, ಹಲವಾರು ಪುರುಷರು, ಸ್ತ್ರೀಯರು, ಮತ್ತು ಮಕ್ಕಳು ನೆಲೆಸಿರುವ ಒಂದು ಕಟ್ಟಡಗಳ ವಠಾರದ ಮೇಲೆ ದಾಳಿ ಮಾಡಿದರು. ನ್ಯಾಯಬಾಹಿರ ಶಸ್ತ್ರಗಳಿಗಾಗಿ ಹುಡುಕುವುದು ಮತ್ತು ಗುಮಾನಿಯಲ್ಲಿದ್ದ ದುಷ್ಕರ್ಮಿಯನ್ನು ಕೈದುಮಾಡುವುದೇ ಹೇತುವಾಗಿತ್ತು. ಆದರೆ ಕಟ್ಟಡಗಳೊಳಗಿಂದ ಸಿಡಿಗುಂಡುಗಳ ಸುರಿಮಳೆಯು ಅವರೆಡೆಗೆ ಎರಗಿದಾಗ ಅಧಿಕಾರಿಗಳು ಅಚ್ಚರಿಗೊಳಗಾದರು. ಅವರು ಗುಂಡುಹಾರಿಸಿ ಜವಾಬು ಕೊಟ್ಟರು.

ಈ ಮುಕಾಬಿಲೆಯಿಂದಾಗಿ ಹತ್ತುಮಂದಿ ಸತ್ತರು ಮತ್ತು ಹಲವಾರು ಮಂದಿ ಗಾಯಗೊಂಡರು. ಹಿಂಬಾಲಿಸಿದ 50 ದಿನಗಳಲ್ಲಿ ನೂರಾರು ಮಂದಿ ಸರಕಾರಿ ಅಧಿಕಾರಿಗಳು ಒಂದು ಚಿಕ್ಕ ಯುದ್ಧವನ್ನೇ ನಡಿಸಲು ಸಾಕಾಗುವಷ್ಟು ಕೋವಿಗಳಿಂದ ವಠಾರಕ್ಕೆ ಮುತ್ತಿಗೆ ಹಾಕಿದರು. ಪ್ರತ್ಯಕ್ಷ ಹೋರಾಟದಲ್ಲಿ ಕೊನೆಗೊಂಡ ಆ ಬಿಕ್ಕಟ್ಟು ಕಡಿಮೆ ಪಕ್ಷ 17 ಮಕ್ಕಳ ಸಹಿತ 86 ಮಂದಿಯನ್ನು ಸಾಯಿಸಿತು.

ಆದರೆ ಶತ್ರುವು ಯಾರು? ಮಾದಕ-ದ್ರವ್ಯ ವ್ಯವಹಾರದ ದೊಂಬಿಜನರ ಪಡೆಯೋ? ಒಂದು ಗೆರಿಲ್ಲಾ ತಂಡವೂ? ಅಲ್ಲ. ಆ “ಶತ್ರು” ವು ಒಂದು ಧಾರ್ಮಿಕ ಗುಂಪಿನ ಉಪಾಸಕರು, ಒಂದು ಪಂಥದ ಸದಸ್ಯರಾಗಿದ್ದರು ಎಂಬದು ನಿಮಗೆ ತಿಳಿದಿರಬಹುದು. ಅವರ ದುರಂತವು, ಅಮೆರಿಕದ ಮಧ್ಯ ಟೆಕ್ಸಾಸ್‌ ಬಯಲಿನ ಒಂದು ಅಪ್ರಸಿದ್ಧ ಸಮಾಜವನ್ನು ಅಂತಾರಾಷ್ಟ್ರೀಯ ಗಮನದ ಕೇಂದ್ರಬಿಂದುವಾಗಿ ಮಾಡಿತು. ವಾರ್ತಾ ಮಾಧ್ಯಮವು ವಾಯುಅಲೆಗಳನ್ನು ಮತ್ತು ವೃತ್ತಪತ್ರಿಕೆಗಳನ್ನು, ಮತಾಂಧ ಪಂಥಗಳ ಅಪಾಯಗಳ ಮೇಲಣ ವರದಿಗಳ, ವಿಶೇಷ್ಲಣೆಗಳ ಮತ್ತು ಹೇಳಿಕೆಗಳ ಸುರಿಮಳೆಯಿಂದಲೇ ತುಂಬಿಸಿಬಿಟ್ಟಿತು.

ಯಾವುದರಲ್ಲಿ ಪಂಥದ ಸದಸ್ಯರು ಅವರ ನಾಯಕರಿಂದ ಸಾವಿಗೆಳೆಯಲ್ಪಟ್ಟರೋ ಆ ಹಿಂದಣ ಘಟನೆಗಳ ನೆನಪು ಸಾರ್ವಜನಿಕರಿಗಾಯಿತು: ಕ್ಯಾಲಿಫೋರ್ನಿಯದಲ್ಲಿ 1969ರ ಮ್ಯಾಸನ್‌ ಕೊಲೆಗಳು; ಗಯಾನ, ಜೋನ್ಸ್‌ಟೌನ್‌ನಲ್ಲಿ ಪಂಥದ ಸದಸ್ಯರ 1978ರ ಸಾಮೂಹಿಕ ಆತ್ಮಹತ್ಯೆ; ಮೂವತ್ತೆರಡು ಸದಸ್ಯರ ಸಾವಿನಲ್ಲಿ ಕೊನೆಗೊಂಡ ಕೊರಿಯದ ಪಂಥ ನಾಯಕಿ ಪಾಕ್‌ ಸೂನ್‌-ಜಳಿಂದ ಹೂಡಲ್ಪಟ್ಟ 1987ರ ಕೊಲೆ-ಆತ್ಮಹತ್ಯೆಯ ಒಪ್ಪಂದ. ಗಮನಾರ್ಹವಾಗಿ, ಇವರಲ್ಲಿ ಹೆಚ್ಚಿನ ಜನರು ಕ್ರೈಸ್ತರೆನಿಸಿಕೊಂಡಿದ್ದರು ಮತ್ತು ಬೈಬಲ್‌ನಲ್ಲಿ ತಮ್ಮ ನಂಬಿಕೆಯನ್ನು ಪ್ರತಿಪಾದಿಸಿದ್ದರು.

ಬೈಬಲನ್ನು ದೇವರ ವಾಕ್ಯವೆಂದು ಗೌರವಿಸುವ ಅನೇಕರು, ಈ ಪಂಥಗಳಿಂದ ಶಾಸ್ತ್ರವಚನಗಳ ನಿರ್ಲಜ್ಜ ಅಪಪ್ರಯೋಗದೆಡೆಗೆ ಎದೆಗುಂದಿಸಲ್ಪಟ್ಟಿದ್ದಾರೆಂಬದು ಗ್ರಾಹ್ಯ. ಫಲಿತಾಂಶವಾಗಿ, ವರ್ಷಾಂತರಗಳಲ್ಲಿ ಪಂಥಗಳ ವಾಗ್ದಂಡನೆಗಾಗಿ ಮತ್ತು ಅವುಗಳ ಅಪಾಯಕಾರಿ ಪದ್ಧತಿಗಳನ್ನು ಬಯಲುಪಡಿಸಲಿಕ್ಕಾಗಿ ನೂರಾರು ಸಂಘಟನೆಗಳು ಸ್ಥಾಪಿಸಲ್ಪಟ್ಟಿರುತ್ತವೆ. ಕೆಲವೇ ವರ್ಷಗಳಲ್ಲಿ ಒಂದು ಹೊಸ ಸಹಸ್ರ ವರ್ಷದ ಬರೋಣವು ಪಂಥಗಳ ಸಂಖ್ಯಾಭಿವೃದ್ಧಿಯನ್ನು ಸ್ಫೋಟಿಸುವುದೆಂದು ಪಾಂಥಿಕ-ವರ್ತನೆ ಪರಿಣಿತರು ಕಾಲಜ್ಞಾನ ನುಡಿಯುತ್ತಾರೆ. ಪಂಥ-ವಿರೋಧಿ ಗುಂಪುಗಳಿಗೆ ಅನುಸಾರವಾಗಿ ಸಾವಿರಾರು ಪಂಥಗಳು, “ಅಲ್ಲಿ ಹೊರಗೆ ನಿಮ್ಮ ದೇಹವನ್ನು ಸ್ವಾಧೀನಪಡಿಸಿಕೊಳ್ಳಲು, ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು, ನಿಮ್ಮ ಆತ್ಮವನ್ನು ಭ್ರಷ್ಟಗೊಳಿಸಲು ಸಿದ್ಧವಾಗಿವೆ. . . . ಕೆಲವು ಶಸ್ತ್ರಸಜ್ಜಿತವಾಗಿವೆ ಆದರೆ ಹೆಚ್ಚಿನವು ಅಪಾಯಕಾರಿಯಾಗಿ ಪರಿಗಣಿಸಲ್ಪಟ್ಟಿವೆ. ಅವು ನಿಮ್ಮನ್ನು ಮೋಸಗೊಳಿಸುವುವು ಮತ್ತು ನಿಮ್ಮ ಹಣ ಮತ್ತು ಸೊತ್ತುಗಳನ್ನು ಲುಟಾಯಿಸುವುವು, ನಿಮ್ಮ ವಿವಾಹದೇರ್ಪಾಡು ಮಾಡುವುವು ಮತ್ತು ಶವಸಂಸ್ಕಾರಗಳನ್ನೂ ನಡಿಸುವುವು” ಎಂಬದಾಗಿ ಒಂದು ವೃತ್ತ ಪತ್ರಿಕೆಯು ಗಮನಿಸಿತು.

ಪಂಥವೆಂದರೇನು?

“ಪಂಥ” ಎಂಬ ಪದವು ಅದರ ಮೂಲಾರ್ಥಗಳ ಪೂರ್ಣ ಅರಿವಿಲ್ಲದಿರಬಹುದಾದ ಅನೇಕರಿಂದ ಅಸ್ಪಷ್ಟವಾಗಿಗಿ ಉಪಯೋಗಿಸಲ್ಪಡುತ್ತದೆ. ಈ ಗಲಿಬಿಲಿಯನ್ನು ತಡೆಯುವುದಕ್ಕಾಗಿ ಕೆಲವು ದೇವತಾ ಶಾಸ್ತ್ರಜ್ಞರು ಕಾರ್ಯತಃ ಆ ಶಬ್ದದ ಪ್ರಯೋಗದಿಂದ ದೂರವಿರುತ್ತಾರೆ.

“ಸಾಂಪ್ರದಾಯಿಕವಾಗಿ, ಪಂಥ ಶಬ್ದವು ಆರಾಧನೆಯ ಯಾವುದೇ ವಿಧಕ್ಕೆ ಅಥವಾ ಮತಪದ್ಧತಿಯ ಆಚರಣೆಗೆ ಸೂಚಿತವಾಗಿದೆ” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ವಿವರಿಸುತ್ತದೆ. ಆ ಮಾನದಂಡದಿಂದ, ಎಲ್ಲಾ ಧಾರ್ಮಿಕ ಸಂಸ್ಥಾಪನೆಗಳನ್ನು ಪಂಥಗಳಾಗಿ ವರ್ಗೀಕರಿಸ ಸಾಧ್ಯವಿದೆ. ಆದರೂ, ಇಂದಿನ ಸಾಮಾನ್ಯ ಬಳಕೆಯಲ್ಲಿ, “ಪಂಥ” ಎಂಬ ಶಬ್ದಕ್ಕೆ ಭಿನ್ನವಾದ ಅರ್ಥವಿದೆ. “ಇಸವಿ 1900 ಗಳ ಮಧ್ಯದಿಂದ, ಪಂಥಗಳ ಕುರಿತಾದ ಬಹಿರಂಗ ಪ್ರಕಟನೆಯು ಶಬ್ದದ ಅರ್ಥವನ್ನು ಅಳವಡಿಸಿರುತ್ತದೆ. ಇಂದು ಆ ಪದವು, ಹೊಸತೂ ಅಸಾಂಪ್ರದಾಯಿಕವೂ ಆದ ಬೋಧನೆಗಳನ್ನು ಮತ್ತು ಪದ್ಧತಿಗಳನ್ನು ಪ್ರವರ್ಧಿಸುವ ಒಬ್ಬ ಜೀವಂತ ನಾಯಕನನ್ನು ಹಿಂಬಾಲಿಸುವ ಗುಂಪುಗಳಿಗೆ ಅನ್ವಯಿಸುತ್ತದೆ” ಎಂಬದಾಗಿ ಅದೇ ಎನ್‌ಸೈಕ್ಲೊಪೀಡಿಯ ಗಮನಿಸುತ್ತದೆ.

ಶಬ್ದದ ಜನಪ್ರಿಯ ಪ್ರಯೋಗವನ್ನು ಅನುಮೋದಿಸುತ್ತಾ, ನ್ಯೂಸ್‌ವೀಕ್‌ ಪತ್ರಿಕೆಯು ವಿವರಿಸುವುದೇನಂದರೆ ಪಂಥಗಳು “ಸಾಮಾನ್ಯವಾಗಿ ಚಿಕ್ಕವೂ, ಅಲ್ಪ ಅಂಚಿನ ಗುಂಪುಗಳೂ ಆಗಿದ್ದು, ಅವುಗಳ ಸದಸ್ಯರು ತಮ್ಮ ಗುರುತನ್ನು ಮತ್ತು ಉದ್ದಿಶ್ಯವನ್ನು ಒಬ್ಬ ಏಕೈಕ, ಜನಾಕರ್ಷಕ ನಾಯಕನಿಂದ ಪಡೆಯುತ್ತವೆ.” ಅಂತೆಯೇ, ಏಷ್ಯಾವೀಕ್‌ ಪತ್ರಿಕೆಯು ಗಮನಿಸುವುದೇನಂದರೆ “ [ಪಂಥ] ಎಂಬ ಶಬ್ದವು ತಾನೇ ಅಸ್ಪಷ್ಟವಾಗಿಗಿದೆ, ಆದರೂ ಅದು ಸಾಮಾನ್ಯವಾಗಿ ಯಾರು ಆಗಿಂದಾಗ್ಗೆ ತನ್ನನ್ನು ದೇವರ ವ್ಯಕ್ತೀಕರಣನೆಂಬದಾಗಿ ಘೋಷಿಸಿಕೊಳ್ಳುತ್ತಾನೋ ಆ ಒಬ್ಬ ಜನಾಕರ್ಷಕ ನಾಯಕನ ಸುತ್ತಲೂ ಕಟ್ಟಲ್ಪಟ್ಟ ಒಂದು ಹೊಸ ಧಾರ್ಮಿಕ ನಂಬಿಕೆಯನ್ನು ಸೂಚಿಸುತ್ತದೆ.”

ಅಮೆರಿಕದ ಮೆರಿಲ್ಯಾಂಡ್‌ ರಾಜ್ಯದ 100 ನೆಯ ಕಾಂಗ್ರೆಸ್‌ನ ಸಂಯುಕ್ತ ಠರಾವಿನಲ್ಲಿ ಪ್ರಯೋಗಿಸಿದ ಭಾಷೆಯು ಸಹ, ಪಂಥ ಎಂಬ ಶಬ್ದದ ಹೀನಕರ ಮೂಲಾರ್ಥವನ್ನು ಸೂಚಿಸುತ್ತದೆ. ಠರಾವು ಹೇಳುವುದೇನಂದರೆ “ಒಂದು ಪಂಥವು ಒಬ್ಬ ವ್ಯಕ್ತಿಗೆ ಅಥವಾ ವಿಚಾರಕ್ಕೆ ಅತಿರೇಕ ಭಕ್ತಿಯನ್ನು ಪ್ರದರ್ಶಿಸುವ ಮತ್ತು ಅದರ ಮುಖಂಡರುಗಳ ಧ್ಯೇಯಗಳನ್ನು ಪ್ರವರ್ಧಿಸಲಿಕ್ಕಾಗಿ ಮನಗಾಣಿಕೆ ಮತ್ತು ಹತೋಟಿಯ ಅನುಚಿತವಾದ ಜಾಣ್ಮೆಯುಕ್ತ ತಂತ್ರಗಳನ್ನು ಉಪಯೋಗಿಸುವ, ಒಂದು ಗುಂಪು ಅಥವಾ ಚಳುವಳಿಯಾಗಿದೆ.”

ಸ್ಪಷ್ಟವಾಗಿಗಿ, ಪಂಥಗಳು, ಇಂದು ಯಾವುದು ಸಾಮಾನ್ಯವಾದ ಸಾಮಾಜಿಕ ವರ್ತನೆಯೆಂದು ಸ್ವೀಕರಿಸಲ್ಪಡುತ್ತದೋ ಅದರೊಂದಿಗೆ ಸಂಘರ್ಷಿಸುವ ತೀವ್ರಗಾಮಿ ನೋಟಗಳು ಮತ್ತು ಪದ್ಧತಿಗಳಿರುವ ಧಾರ್ಮಿಕ ಗುಂಪುಗಳಾಗಿ ಸಾಮಾನ್ಯವಾಗಿ ತಿಳಿಯಲ್ಪಡುತ್ತವೆ. ಸಾಧಾರಣವಾಗಿ ಅವು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಗೋಪ್ಯತೆಯಲ್ಲಿ ನಡಿಸುತ್ತವೆ. ಈ ಅನೇಕ ಪಾಂಥಿಕ ಗುಂಪುಗಳು ಕಾರ್ಯತಃ ತಮ್ಮನ್ನು ಪ್ರತ್ಯೇಕ ನಿಕೇತನಗಳಲ್ಲಿ ಬೇರ್ಪಡಿಸಿಕೊಂಡಿರುತ್ತವೆ. ಒಬ್ಬ ಸ್ವಯಂ-ಘೋಷಿತ ಮಾನವ ನಾಯಕನಿಗೆ ಅವರ ಅನುರಕ್ತಿಯು ಶರ್ತರಹಿತವೂ ಮತ್ತು ಸಂಪೂರ್ಣವೂ ಆಗಿರುವ ಸಂಭವನೀಯತೆ ಇದೆ. ಆಗಿಂದಾಗ್ಗೆ ಈ ಮುಖಂಡರು ದೈವಿಕವಾಗಿ ಆರಿಸಲ್ಪಟ್ಟವರಾಗಿ ಅಥವಾ ಸ್ವಭಾವದಲ್ಲಿ ತಾವು ದೈವಿಕರಾಗಿ ಇರುವುದನ್ನೂ ಕೊಚ್ಚಿಕೊಳ್ಳುತ್ತಾರೆ.

ಕೆಲವೊಮ್ಮೆ, ಪಂಥವಿರೋಧಿ ಸಂಸ್ಥಾಪನೆಗಳು ಮತ್ತು ವಾರ್ತಾ ಮಾಧ್ಯಮವು ಯೆಹೋವನ ಸಾಕ್ಷಿಗಳನ್ನು ಒಂದು ಪಂಥವಾಗಿ ನಿರ್ದೇಶಿಸಿವೆ. ಇತ್ತೀಚಿನ ಹಲವಾರು ವೃತ್ತಪತ್ರಿಕೆ ಲೇಖನಗಳು ಸಾಕ್ಷಿಗಳನ್ನು, ಸಂಶಯಾಸ್ಪದ ಪದ್ಧತಿಗಳಿಗೆ ಜ್ಞಾತವಾಗಿರುವ ಧಾರ್ಮಿಕ ಪಂಗಡಗಳೊಂದಿಗೆ ಸೇರಿಸಿರುತ್ತವೆ. ಆದರೆ ಯೆಹೋವನ ಸಾಕ್ಷಿಗಳನ್ನು ಒಂದು ಅಲ್ಪ ಅಂಚಿನ ಧಾರ್ಮಿಕ ಗುಂಪು ಎಂದು ಸೂಚಿಸುವುದು ನಿಷ್ಕೃಷ್ಟವೋ? ಪಾಂಥಿಕ ಸದಸ್ಯರು ಹೆಚ್ಚಾಗಿ ತಮ್ಮನ್ನು ಸ್ನೇಹಿತರಿಂದ, ಕುಟುಂಬದಿಂದ, ಮತ್ತು ಸಾಮಾನ್ಯ ಸಮಾಜದಿಂದಲೂ ಪ್ರತ್ಯೇಕವಾಗಿಡುತ್ತಾರೆ. ಯೆಹೋವನ ಸಾಕ್ಷಿಗಳು ಹಾಗಿದ್ದಾರೋ? ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಮೋಸಕರವೂ ಅನುಚಿತವೂ ಆಗಿರುವ ತಂತ್ರಗಳನ್ನು ಸಾಕ್ಷಿಗಳು ಉಪಯೋಗಿಸುತ್ತಾರೋ?

ಪಾಂಥಿಕ ನಾಯಕರು ತಮ್ಮ ಅನುಯಾಯಿಗಳ ಮನಸ್ಸುಗಳನ್ನು ಹತೋಟಿಯಲ್ಲಿಡಲು ಜಾಣ್ಮೆಯುಳ್ಳ ವಿಧಾನಗಳನ್ನು ಉಪಯೋಗಿಸುವುದಕ್ಕೆ ಖ್ಯಾತರಾಗಿದ್ದಾರೆ. ಯೆಹೋವನ ಸಾಕ್ಷಿಗಳು ಇದನ್ನು ಮಾಡುತ್ತಾರೆಂಬದಕ್ಕೆ ಯಾವುದೇ ರುಜುವಾತು ಇದೆಯೇ? ಅವರ ಆರಾಧನೆಯು ಗೋಪ್ಯತೆಯ ಮರೆಯಲ್ಲಿದೆಯೇ? ಒಬ್ಬ ಮಾನವ ನಾಯಕನನ್ನು ಅವರು ಅನುಸರಿಸುತ್ತಾರೋ ಮತ್ತು ಪೂಜಿಸುತ್ತಾರೋ? ಸ್ಪಷ್ಟವಾಗಿಗಿ, ಯೆಹೋವನ ಸಾಕ್ಷಿಗಳು ಒಂದು ಪಂಥವಾಗಿದ್ದಾರೋ?

[ಪುಟ 3 ರಲ್ಲಿರುವ ಚಿತ್ರ ಕೃಪೆ]

Jerry Hoefer/Fort Worth Star Telegram/Sipa Press

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ