ಗಿಲ್ಯಾದ್ ಪದವೀಧರರು “ಕೊಡುವದರಲ್ಲಿ ಹೆಚ್ಚಿನ ಸಂತೋಷವನ್ನು” ಕಂಡುಕೊಳ್ಳುತ್ತಾರೆ
ಭಾನುವಾರ, ಮಾರ್ಚ್ 6, 1994 ರಂದು, ಯೆಹೋವನ ಸಾಕ್ಷಿಗಳ ಲೋಕ ಮುಖ್ಯಕಾರ್ಯಾಲಯದ ಬೆತೆಲ್ ಕುಟುಂಬ ಮತ್ತು ಆತಿಥಿಗಳು ಒಂದು ಉತ್ಸವ ಸಂದರ್ಭಕ್ಕೆ—ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಅದರ 96ನೇ ತರಗತಿಯ ಪದವಿಪ್ರಾಪ್ತಿ ಸಮಾರಂಭಕ್ಕೆ—ಒಟ್ಟುಗೂಡಿದರು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯಲ್ಲಿ ಎರಡು ದಶಕಗಳಷ್ಟು ಸೇವೆ ಸಲ್ಲಿಸಿರುವ, ಕಾರ್ಯಕ್ರಮದ ಅಧ್ಯಕ್ಷರಾದ ಕಾರ್ಲ್ ಎಫ್. ಕ್ಲೈನ್, ತಮ್ಮ ಪೀಠಿಕಾ ಹೇಳಿಕೆಯಲ್ಲಿ 46 ವಿದ್ಯಾರ್ಥಿಗಳಿಗೆ ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ ಎಂದು ಯೇಸು ಹೇಳಿದನು. ಹೀಗೆಯೆ ನಿಮ್ಮ ಮಿಷನೆರಿ ನೇಮಕದಲ್ಲಿರುವುದು—ನೀವು ಎಷ್ಟು ಹೆಚ್ಚಾಗಿ ಕೊಡುತ್ತೀರೊ, ಅಷ್ಟು ಹೆಚ್ಚು ಸಂತೋಷಿತರು ನೀವಾಗುವಿರಿ.”—ಅ. ಕೃತ್ಯಗಳು 20:35.
ಬೀಳ್ಕೊಡುವ ಬುದ್ಧಿವಾದದ ಮಾತುಗಳು
ವಿದ್ಯಾರ್ಥಿಗಳಿಗಾಗಿ ಭಾಷಣಗಳ ಒಂದು ಸರಣಿಯು ಹಿಂಬಾಲಿಸಿ ಬಂತು. ಸರ್ವಿಸ್ ಡಿಪಾರ್ಟ್ಮೆಂಟ್ ಕಮಿಟಿಯ ಸದಸ್ಯರಾದ, ಲಿಆನ್ ವೀವರ್, “ತಾಳ್ಮೆಯು ಯೆಹೋವನನ್ನು ಮಹಿಮೆಪಡಿಸುತ್ತದೆ” ಎಂಬ ಮುಖ್ಯ ವಿಷಯವನ್ನು ವಿಕಸಿಸಿದರು. ನಾವೆಲ್ಲರೂ ಪರೀಕ್ಷೆಗಳನ್ನು ಎದುರಿಸುತ್ತೇವೆ. (2 ಕೊರಿಂಥ 6:3-5) “ನಾವು ಒತ್ತಡದ ಕೆಳಗೆ ಇರುವಾಗ,” ಸಹೋದರ ವೀವರ್ ಸೂಚಿಸಿದ್ದು, “ನಾವು ನಮ್ಮ ಮೇಲೆಯೇ ಆತುಕೊಳ್ಳುವುದು ಎಷ್ಟೊಂದು ಸುಲಭ.” ಆದಾಗ್ಯೂ, ಅವರು ವಿದ್ಯಾರ್ಥಿಗಳಿಗೆ ಜ್ಞಾಪಿಸಿದ್ದು: “ಮಾನವ ಪರೀಕ್ಷೆಗಳ ವಿಧಾನದಲ್ಲಿ ನೀವು ಏನನ್ನೇ ಎದುರಿಸಬೇಕಿದ್ದರೂ, ಯೆಹೋವನಿಗೆ ಅದರಲ್ಲಿ ಅಭಿರುಚಿಯುಂಟು. ನೀವು ತಾಳಿಕೊಳ್ಳಶಕ್ತರಾಗುವುದಕ್ಕೆ ಮೀರಿ ಶೋಧಿಸಲ್ಪಡುವುದಕ್ಕೆ ಆತನು ನಿಮ್ಮನ್ನೆಂದಿಗೂ ಬಿಡನು.”—1 ಕೊರಿಂಥ 10:13.
ಆಡಳಿತ ಮಂಡಳಿಯ, ಲೈಮನ್ ಸ್ವಿಂಗಲ್ ಅವರ ಮೂಲಕ ಕೊಡಲ್ಪಟ್ಟ, ಮುಂದಿನ ಭಾಷಣದ ಶಿರೋನಾಮವು, “ನಿಮ್ಮ ನೇಮಕವನ್ನು ಸದಾ ಆದರಿಸಿರಿ,” ಎಂದಾಗಿತ್ತು. ಇಸ್ರಾಯೇಲ್ಯರು, ತಾವು ಎಲ್ಲಿ ವಾಸಿಸುವೆವು ಮತ್ತು ತಾವು ಏನನ್ನು ಮಾಡುವೆವು ಎಂದು ಯಾವಾಗಲೂ ಆರಿಸಲಿಲ್ಲ. ಪ್ರತಿಯೊಂದು ಗೋತ್ರಕ್ಕೂ ಒಂದು ಭೂಭಾಗವನ್ನು ಹಂಚಿ ಕೊಡಲಾಗಿತ್ತು, ಮತ್ತು ಲೇವಿಯರಿಗೆ ನಿರ್ವಹಿಸಲು ನಿರ್ದಿಷ್ಟ ಕೆಲಸಗಳು ನೇಮಿಸಲ್ಪಟ್ಟಿದ್ದವು. ತದ್ರೀತಿಯಲ್ಲಿ, ಇಂದು ವಿಶೇಷ ಪೂರ್ಣ ಸಮಯದ ಸೇವೆಯಲ್ಲಿ ಅನೇಕರು—ಮಿಷನೆರಿ ಮತ್ತು ಬೆತೆಲ್ ಕುಟುಂಬದ ಸದಸ್ಯರುಗಳಂತಹವರು—ತಾವು ಎಲ್ಲಿ ಜೀವಿಸುವೆವು ಮತ್ತು ಯಾವ ಕೆಲಸವನ್ನು ಮಾಡುವೆವು ಎಂದು ತಾವಾಗಿ ತೀರ್ಮಾನಿಸುವುದಿಲ್ಲ. ನೇಮಕದ ಕುರಿತು ಅನಿಶ್ಚಿತತೆಯ ಭಾವನೆಗಳನ್ನು ಒಬ್ಬನು ಅನುಭವಿಸುವಲ್ಲಿ ಆಗೇನು? “ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ಅವನ ಮಾದರಿಯನ್ನು ನಿಕಟವಾಗಿ ಗಮನಿಸುವಲ್ಲಿ, ನೀವು ಬಿದ್ದುಹೋಗುವುದಿಲ್ಲ,” ಎಂದರು ಸಹೋದರ ಸ್ವಿಂಗಲ್.—ಇಬ್ರಿಯ 12:2, 3.
ಇದನ್ನು ಅನುಸರಿಸಿ ವಾಚ್ಟವರ್ ಫಾರ್ಮ್ಸ್ ಕಮಿಟಿಯ ಲೆನರ್ಡ್ ಪಿಯರ್ಸನ್, “ಕೇಂದ್ರೀಕರಿಸಲ್ಪಟ್ಟವರಾಗಿರ್ರಿ” ಎಂಬ ವಿಷಯದಲ್ಲಿ ಮಾತಾಡಿದರು. ಅವರಂದದ್ದು: “ನಿಮ್ಮಲ್ಲಿ ಉತ್ತಮ ಕ್ಯಾಮರಾ, ಅತಿ ಸುಂದರ ದೃಶ್ಯ, ಒಂದು ಆದರ್ಶ ಹಿನ್ನೆಲೆಯಿರಬಲ್ಲದು, ಆದರೂ—ನಿಮ್ಮ ಕ್ಯಾಮರಾವು ನಾಭಿ ತಪ್ಪಿರುವಲ್ಲಿ—ನ್ಯೂನ ಫಲಿತಾಂಶವನ್ನು ಪಡೆಯುವಿರಿ.” ವಿಶಾಲ ಕೋನದ ಲೆನ್ಸಿನಂತೆ, ನಮ್ಮ ನೋಟವು ಲೋಕವ್ಯಾಪಕವಾಗಿ ಮಾಡಲ್ಪಡುವ ಸಾರುವಿಕೆಯನ್ನು ಒಳಗೂಡಿರಬೇಕು. ದೊಡ್ಡ ಚಿತ್ರವನ್ನು ನಾವು ಎಂದಿಗೂ ಮರೆಯಬಾರದು. “ಯಾರು ತಮ್ಮ ಮೇಲೆಯೆ ಕೇಂದ್ರೀಕರಿಸಿಕೊಳ್ಳುತ್ತಾರೋ ಅವರು ತಮ್ಮ ನೇಮಕದಲ್ಲಿ ಅಸಂತೋಷಿಗಳಾಗುವರು,” ಎಂದು ಸಹೋದರ ಪಿಯರ್ಸನ್ ಹೇಳಿದರು. “ಯಾರು ಯೆಹೋವನ ಮೇಲೆ ಮತ್ತು ಆತನು ಅವರಿಗೆ ಮಾಡಲು ಕೊಟ್ಟ ಕೆಲಸದ ಮೇಲೆ ಕೇಂದ್ರೀಕರಿಸುತ್ತಾರೊ ಅವರು ಯಶಸ್ವಿಯಾಗುವರು.”
ಆಡಳಿತ ಮಂಡಳಿಯ ಮತ್ತೊಬ್ಬ ಸದಸ್ಯರಾದ ಜಾನ್ ಈ. ಬಾರ್ ಇವರ ಮೂಲಕ ಕೊಡಲ್ಪಟ್ಟ ಮುಂದಿನ ಭಾಷಣದ ಶಿರೋನಾಮವು “ಆಭಾರಿಗಳಾಗಿರಲು ಇರುವ ಎಷ್ಟೋ ವಿಷಯಗಳು” ಎಂದಾಗಿತ್ತು. “ಯೆಹೋವನಿಗೆ ಆಭಾರಿಯಾಗಿರುವ ನಿಮ್ಮ ಭಾವನೆಗಳನ್ನು ಎಂದಿಗೂ ಕಳೆದುಕೊಳ್ಳದಿರ್ರಿ,” ಎಂದು ಸಹೋದರ ಬಾರ್ ವಿದ್ಯಾರ್ಥಿಗಳಿಗೆ ಬುದ್ಧಿವಾದವನ್ನಿತರ್ತು. “ನಿಮಗೆ ಯಾವ ನೇಮಕವೇ ಇರಲಿ, ಅದು ಸಂತೃಪ್ತಿಯ ಅತಿ ಮಹತ್ವದ ಮೂಲಗಳಲ್ಲಿ ಒಂದಾಗಿದೆ.” ಉಪಕಾರದ ಮನೋಭಾವವು ದಾವೀದನನ್ನು ಹೀಗೆ ಬರೆಯಲು ಪ್ರೇರೇಪಿಸಿತು: “ನನಗೆ ಪ್ರಾಪ್ತವಾಗಿರುವ ಸ್ವಾಸ್ತ್ಯವು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.” (ಕೀರ್ತನೆ 16:6) “ನಿಮ್ಮ ದಿನನಿತ್ಯದ ಜೀವಿತದಲ್ಲಿ ಯೆಹೋವನಿಗೆ ನಿಕಟವಾಗಿರುವ ಭಾವನೆಯಲ್ಲಿ ನಿಮಗೆ ಅಂತಹ ಅಪೂರ್ವ ಸ್ವಾಸ್ತ್ಯವಿದೆ,” ಎಂದು ಸಹೋದರ ಬಾರ್ ಹೇಳಿದರು. “ನೀವು ಆಭಾರಿಗಳಾಗಿರುವ ಅತಿ ಸಂತೃಪ್ತಿಕರವಾದ ಸಂಬಂಧವು ಅದಾಗಿದೆ ಎಂದು ನೀವು ಕಾಣುವಷ್ಟರ ವರೆಗೆ ಯೆಹೋವನು ಅದನ್ನು ನಿಮ್ಮಿಂದ ಎಂದಿಗೂ ತೆಗೆಯವುದಿಲ್ಲ.”
ಗಿಲ್ಯಾದ್ ಶಿಕ್ಷಕರಾದ ಜ್ಯಾಕ್ ರೆಡ್ಫರ್ಡ್, “ನೀವು ನಿಮ್ಮ ನಾಲಗೆಯನ್ನು ಹೇಗೆ ಉಪಯೋಗಿಸುವಿರಿ?” ಎಂಬ ಮುಖ್ಯ ವಿಷಯದ ಮೇಲೆ ಮುಂದೆ ಮಾತಾಡಿದರು. ಆಲೋಚನೆ ಇಲ್ಲದ ಮಾತು ಎಂಥ ಭಗ್ನಾವಶೇಷವನ್ನುಂಟುಮಾಡಬಲ್ಲುದು! (ಜ್ಞಾನೋಕ್ತಿ 18:21) ನಾಲಗೆಯನ್ನು ಹೇಗೆ ಹಿಡಿತಕ್ಕೆ ತರಬಹುದು? “ನೀವು ಮೊದಲು ಮನಸ್ಸನ್ನು ತರಬೇತಿಗೊಳಿಸಬೇಕು,” ಎಂದುತ್ತರಿಸಿದರು ಸಹೋದರ ರೆಡ್ಫರ್ಡ್, “ಯಾಕಂದರೆ ನಾಲಗೆಯು ಮನಸ್ಸು ಮತ್ತು ಹೃದಯವನ್ನು ಪ್ರತಿಬಿಂಬಿಸುತ್ತದೆ.” (ಮತ್ತಾಯ 12:34-37) ಯೇಸುವು ಒಂದು ಅತ್ಯುತ್ತಮ ಮಾದರಿಯನ್ನು ಒದಗಿಸಿದನು; ಯೆಹೋವನ ಹೆಸರನ್ನು ಮಹಿಮೆಪಡಿಸಲು ಅವನು ತನ್ನ ನಾಲಗೆಯನ್ನು ಉಪಯೋಗಿಸಿದನು. “ಇಂದು ಯೆಹೋವನ ವಾಕ್ಯಗಳನ್ನು ಕೇಳಲಿಕ್ಕಾಗಿ ಒಂದು ಕ್ಷಾಮವಿದೆ,” ಎಂದು ಸಹೋದರ ರೆಡ್ಫರ್ಡ್ರು ತರಗತಿಗೆ ಅಂದರು. “ನಿಮಗೆ ಆ ಮಾತುಗಳು ತಿಳಿದಿವೆ. ‘ಶಿಕ್ಷಿತರಾದವರ ನಾಲಗೆಯು ನಿಮಗುಂಟು.’ ಆದುದರಿಂದ ಯೆಹೋವನಿಗೆ ಪೂರ್ಣವಾಗಿ ಸಮರ್ಪಿತವಾದ ಮನಸ್ಸು ಮತ್ತು ಹೃದಯದ ಮೂಲಕ ನಿಮ್ಮ ನಾಲಗೆಯು ಯಾವಾಗಲೂ ನಡಿಸಲ್ಪಡಲಿ.”—ಯೆಶಾಯ 50:4.
“ಯೆಹೋವನ ಸಮ್ಮುಖದಲ್ಲಿರುವಂತೆ ನೀವು ನಡೆಯುತ್ತೀರೊ?” ಎಂಬ ಭಾಷಣದಲ್ಲಿ ಪ್ರಾರ್ಥನೆಯ ಪ್ರಮುಖತೆಯನ್ನು ಒತ್ತಿಹೇಳಲಾಯಿತು. ಶಾಲೆಯ ರಿಜಿಸ್ಟ್ರಾರ್ ಆದ, ಯುಲಿಸೀಸ್ ಗ್ಲಾಸ್, ಸೂಚಿಸಿದ್ದು: “ಒಬ್ಬ ತಂದೆಯು ತನ್ನ ಕುಟುಂಬವನ್ನು ಬೆಂಬಲಿಸಲು ಶ್ರಮಪಟ್ಟು ಕೆಲಸ ಮಾಡಿದರೂ ಅವರೊಂದಿಗೆ ಎಂದೂ ಮಾತಾಡದಿರುವಲ್ಲಿ ಮತ್ತು ಪ್ರೀತಿಯ ಅಭಿವ್ಯಕ್ತಿಗಳನ್ನು ಮಾಡದಿರುವಲ್ಲಿ, ಪ್ರೀತಿಗಿಂತ, ಅಹಿತಕರವಾದ ಕರ್ತವ್ಯವೇ ಅವನ ಹೇತುವೆಂದು ಅವನ ಕುಟುಂಬವು ತೀರ್ಮಾನಿಸಬಹುದು. ನಮ್ಮ ವಿಷಯದಲ್ಲಿಯೂ ಅದು ಹಾಗಿದೆ. ನಾವು ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿರಬಹುದು. ಆದರೆ ನಾವು ಪ್ರಾರ್ಥಿಸದಿರುವಲ್ಲಿ, ಒಬ್ಬ ಪ್ರೀತಿಯ ಸ್ವರ್ಗೀಯ ತಂದೆಗೆ ಸಮರ್ಪಿತರಾಗಿರುವುದಕ್ಕಿಂತ ಕೇವಲ ಒಂದು ಕೆಲಸಕ್ಕೆ ನಾವು ಸಮರ್ಪಿತರಾಗಿದ್ದೇವೆ.”
“ಜನಸ್ತೋಮವು ದೇವರ ಜನರೊಂದಿಗೆ ಸಹವಾಸಿಸುತ್ತಿರುವ ಕಾರಣ,” ಎಂಬ ಮುಖ್ಯ ವಿಷಯದ ಮೇಲೆ ಆಡಳಿತ ಮಂಡಳಿಯ ಥಿಯಡೊರ್ ಜರಸ್ ಮಾತಾಡಿದರು. ಪ್ರತಿ ವರುಷ ನೂರಾರು ಸಾವಿರಾರು ಮಂದಿ ಯೆಹೋವನ ಸಂಸ್ಥೆಯಲ್ಲಿ ಒಟ್ಟುಗೂಡುತ್ತಾರೆ. (ಜೆಕರ್ಯ 8:23) ಯೆಹೋವನ ಸಾಕ್ಷಿಗಳನ್ನು ದೇವಜನರೋಪಾದಿ ಗುರುತಿಸುವುದು ಯಾವುದು? ಮೊದಲನೇದಾಗಿ, ಅವರು ಪೂರ್ಣ ಬೈಬಲನ್ನು ದೇವರ ವಾಕ್ಯವನ್ನಾಗಿ ಸ್ವೀಕರಿಸುತ್ತಾರೆ. (2 ತಿಮೊಥೆಯ 3:16) ಎರಡನೇದಾಗಿ, ಅವರು ರಾಜಕೀಯವಾಗಿ ತಟಸ್ಥರು. (ಯೋಹಾನ 17:16) ಮೂರನೇದಾಗಿ, ಅವರು ದೇವರ ನಾಮಕ್ಕೆ ಸಾಕ್ಷಿಯನ್ನು ನೀಡುತ್ತಾರೆ. (ಯೋಹಾನ 17:26) ನಾಲ್ಕನೇದಾಗಿ, ಅವರು ಸ್ವತ್ಯಾಗದ ಪ್ರೀತಿಯನ್ನು ಪ್ರದರ್ಶಿಸುತ್ತಾರೆ. (ಯೋಹಾನ 13:35; 15:13) ಈ ಪರಿಚಯ ಪತ್ರಗಳೊಂದಿಗೆ, ನಮ್ಮನ್ನು ‘ಕತ್ತಲೆಯಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಧೈರ್ಯದಿಂದ ಪ್ರಚಾರಮಾಡಬಲ್ಲೆವು.’—1 ಪೇತ್ರ 2:9.
ಈ ಹುರಿದುಂಬಿಸುವ ಭಾಷಣಗಳ ಅನಂತರ, ಎಲ್ಲಾ 46 ವಿದ್ಯಾರ್ಥಿಗಳು ಪ್ರಶಸ್ತಿ ಪತ್ರಗಳನ್ನು ಪಡೆದರು. ಅವರು ಭೂಸುತ್ತಲೂ 16 ದೇಶಗಳಿಗೆ ನೇಮಿಸಲ್ಪಟ್ಟಿದ್ದಾರೆ.
ವೈವಿಧ್ಯದ ಅಪರಾಹ್ಣದ ಕಾರ್ಯಕ್ರಮ
ಅಪರಾಹ್ಣದಲ್ಲಿ, ಬೆತೆಲ್ ಕಮಿಟಿಯ ಡಾನಲ್ಡ್ ಕ್ರೆಬ್ಸರಿಂದ ಒಂದು ಸಂಕ್ಷಿಪ್ತ ಕಾವಲಿನಬುರುಜು ಅಧ್ಯಯನವು ನಡೆಸಲ್ಪಟ್ಟಿತು. ಅನಂತರ ಪದವೀಧರರು, “ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ,” ಎಂಬ ಶಿರೋನಾಮದ ಕಾರ್ಯಕ್ರಮವನ್ನು ಸಾದರಪಡಿಸಿದರು. (ಜ್ಞಾನೋಕ್ತಿ 1:20) ಬೀದಿಗಳಲ್ಲಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಾಕ್ಷಿ ನೀಡುವಲ್ಲಿ ಅವರಿಗಾದ ಪ್ರತಿಫಲದಾಯಕ ಅನುಭವಗಳನ್ನು ಅವರು ಪುನರಭಿನಯಿಸಿದರು. ನಿಜಕ್ಕೂ, ಅವಿಧಿಯಾಗಿ ಸಾರಲು ಧೈರ್ಯವನ್ನು ತಂದುಕೊಳ್ಳುವವರನ್ನು ಯೆಹೋವನು ಆಶೀರ್ವದಿಸುತ್ತಾನೆ. “ಕೊಯ್ಯುವ ದೇವದೂತರ ಕೈಗಳಲ್ಲಿ ನಾವು ಕುಡುಗೋಲುಗಳು ಎಂಬುದಾಗಿ ಯೋಚಿಸಲು ನಾನು ಇಚ್ಛಿಸುತ್ತೇನೆ,” ಎಂದು ಒಬ್ಬ ಪದವೀಧರನು ಅಂದನು. “ನಮ್ಮ ಕೌಶಲಗಳು ಹರಿತವಾಗಿರುವಷ್ಟು, ಹೆಚ್ಚಿನ ಕೆಲಸವನ್ನು ಮಾಡುವಂತೆ ಆ ದೇವದೂತರು ನಮ್ಮನ್ನು ಉಪಯೋಗಿಸಶಕ್ತರು.” (ಹೋಲಿಸಿ ಪ್ರಕಟನೆ 14:6.) ಈ ತರಗತಿಯ ಪದವೀಧರರಿಗೆ ಕಳುಹಿಸಲ್ಪಟ್ಟ ದೇಶಗಳಲ್ಲಿ ಮೂರು ದೇಶಗಳಾದ—ಬೊಲಿವಿಯ, ಮಾಲ್ಟ, ಮತ್ತು ಟೈವಾನಿನ ಒಂದು ಶೈಕ್ಷಣಿಕ ಪ್ರವಾಸಕ್ಕೆ ಪ್ರೇಕ್ಷಕರನ್ನು ಕೊಂಡೊಯ್ದ ಸ್ಲೈಡ್ ಪ್ರದರ್ಶನವು ಕೂಡ ವಿದ್ಯಾರ್ಥಿ ಕಾರ್ಯಕ್ರಮದಲ್ಲಿತ್ತು.
ಅನಂತರ, 17 ವರುಷಗಳಿಂದ ಮಿಷನೆರಿಗಳಾದ, ವಾಲೆಸ್ ಮತ್ತು ಜೇನ್ ಲಿವರನ್ಸ್ರನ್ನು ಮುಖತಃ ಭೇಟಿ ಮಾಡಲಾಯಿತು. ಅಕ್ಟೋಬರ 1993 ರಲ್ಲಿ, ಅವರು ವಾಚ್ಟವರ್ ಫಾರ್ಮ್ಸ್ಗೆ ಕರೆಯಲ್ಪಟ್ಟರು. ಅಲ್ಲಿ ಸಹೋದರ ಲಿವರನ್ಸ್ ಈಗ ಗಿಲ್ಯಾದ್ ಶಿಕ್ಷಕರಲ್ಲಿ ಒಬ್ಬರಾಗಿ ಸೇವೆ ಮಾಡುತ್ತಾರೆ.
“ಯೋಗ್ಯರಾದವರನ್ನು ಅವರ ಮುದೀ ವಯಸ್ಸಿನಲ್ಲಿ ಗೌರವಿಸುವುದು” ಎಂಬ ವಿಷಯದ ಮೇಲೆ, ನಾಲ್ಕು ದೃಶ್ಯಗಳ ಒಂದು ಸಾದರಪಡಿಸುವಿಕೆಯು ಹಿಂಬಾಲಿಸಿತು. ಜನರು ಮುದುಕರಾಗುತ್ತಿರುವಾಗ, ಕೆಲಸಕ್ಕೆ ಬಾರದವರಾಗುವ ಮತ್ತು ತೊರೆಯಲ್ಪಡುವ ಹೆದರಿಕೆಯು ಅವರ ಆತ್ಮವಿಶ್ವಾಸವನ್ನು ಸವೆಯಿಸಬಹುದು. (ಕೀರ್ತನೆ 71:9) ಅಂತಹ ನಂಬಿಗಸ್ತ ವೃದ್ಧರನ್ನು ಸಭೆಯಲ್ಲಿರುವ ಎಲ್ಲರೂ ಬೆಂಬಲಿಸಶಕ್ತರೆಂದು ಈ ಹೃದಯ ಸ್ಪರ್ಶಿ ಸಾದರಪಡಿಸುವಿಕೆಯು ತೋರಿಸಿತು.
ಮುಕ್ತಾಯದ ಸಂಗೀತ ಮತ್ತು ಪ್ರಾರ್ಥನೆಯ ಅನಂತರ, ಜರ್ಸಿ ಸಿಟಿ ಎಸೆಂಬ್ಲಿ ಹಾಲ್ ಮತ್ತು ಸ್ಯಾಟೆಲೈಟ್ ಹಾಲ್ಗಳಲ್ಲಿ ಹಾಜರಿದ್ದ ಎಲ್ಲ 6,220 ಮಂದಿಯು ಚೈತನ್ಯ ಭಾವವನ್ನು ಹೊಂದಿದರು. ನಮ್ಮ ಪ್ರಾರ್ಥನೆಗಳು ಅವರ ಹೊಸ ನೇಮಕಗಳಲ್ಲಿ ಪದವೀಧರರೊಂದಿಗೆ ಇವೆ. ಕೊಡುವುದರ ಮೂಲಕ ಬರುವ ಮಹಾ ಸಂತೋಷವನ್ನು ಅವರು ಅನುಭವಿಸುತ್ತಾ ಮುಂದುವರಿಯುವಂತಾಗಲಿ.
[ಪುಟ 26 ರಲ್ಲಿರುವ ಚೌಕ]
ತರಗತಿಯ ಅಂಕಿ ಅಂಶಗಳು
ಪ್ರತಿನಿಧೀಕರಿಸಿರುವ ದೇಶಗಳ ಸಂಖ್ಯೆ: 9
ನೇಮಿಸಲ್ಪಟ್ಟಿರುವ ದೇಶಗಳ ಸಂಖ್ಯೆ: 16
ವಿದ್ಯಾರ್ಥಿಗಳ ಸಂಖ್ಯೆ: 46
ಸರಾಸರಿ ವಯಸ್ಸು: 33.85
ಸತ್ಯದಲ್ಲಿ ಸರಾಸರಿ ವರ್ಷಗಳು: 16.6
ಪೂರ್ಣ ಸಮಯದ ಸೇವೆಯಲ್ಲಿ ಸರಾಸರಿ ವರ್ಷಗಳು: 12.2
[ಪುಟ 27 ರಲ್ಲಿರುವ ಚೌಕ]
ಮಾಲ್ಟಾಕ್ಕೆ ವಿಶೇಷ ಗಮನ
ಮಾಲ್ಟಾದಲ್ಲಿ, ಕ್ರೈಸ್ತಪ್ರಪಂಚ ಬೈಬಲ್ ಸತ್ಯಕ್ಕೆ ಅನೇಕ ವರುಷಗಳವರೆಗೆ ಕುಕ್ಕೆ ಹಾಕಿತು. ಅಲ್ಲಿಗೆ ಕಳುಹಿಸಲ್ಪಟ್ಟ ಕೊನೆಯ ಮಿಷನೆರಿಗಳು, 1947 ರಷ್ಟು ಹಿಂದೆ ಎಂಟನೇ ತರಗತಿಯಲ್ಲಿ ಪದವೀಧರರಾದ ಫ್ರೆಡ್ರಿಕ್ ಸ್ಮೆಡ್ಲಿ ಮತ್ತು ಪೀಟರ್ ಬ್ರೈಡಲ್ ಆಗಿದ್ದರು. ಆದಾಗ್ಯೂ, ಅವರು ತಲಪಿದ ಸ್ವಲ್ಪವೇ ಸಮಯಾನಂತರ ಅವರು ಬಂಧಿಸಲ್ಪಟ್ಟು, ಮಾಲ್ಟಾದಿಂದ ಹೊರಹಾಕಲ್ಪಟ್ಟರು. ಇಸವಿ 1948ರ ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕವು ವರದಿಸುವುದು: “ಕೇವಲ ರೋಮನ್ ಕ್ಯಾತೊಲಿಕ್ ಪುರೋಹಿತ ವರ್ಗದ ವಿರೋಧದಿಂದಾಗಿ, ಈ ಇಬ್ಬರು ಮಿಷನೆರಿಗಳು ತಮ್ಮ ಹೆಚ್ಚಿನ ಸಮಯವನ್ನು, ಅವರ ಶೂಶ್ರುಷಾ ಕರ್ತವ್ಯಗಳನ್ನು ನಿಭಾಯಿಸುವುದರಲ್ಲಿ ಕಳೆಯುವಂತೆ, ನ್ಯಾಯಾಲಯಗಳಲ್ಲಿ ಮತ್ತು ಆ ದೇಶದ ಅಧಿಕಾರಿಗಳೊಂದಿಗೆ ಕಳೆದರು. ಮಾಲ್ಟಾವು ಕ್ಯಾತೊಲಿಕರಿಗೆ ಸಂಬಂಧಿಸಿದೆ ಮತ್ತು ಇತರರೆಲ್ಲರು ಅದನ್ನು ಬಿಟ್ಟುಹೋಗಬೇಕು ಎಂದು ಪಾದ್ರಿಗಳು ಹೇಳುತ್ತಾರೆ.” ಈಗ, ಸುಮಾರು 45 ವರುಷಗಳ ಅನಂತರ, ಗಿಲ್ಯಾದಿನ 96 ನೆಯ ತರಗತಿಯಿಂದ ನಾಲ್ಕು ಮಿಷನೆರಿಗಳನ್ನು ಮಾಲ್ಟಾಕ್ಕೆ ನೇಮಿಸಲಾಗಿದೆ.
[ಪುಟ 26 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 96 ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳನ್ನು ಮುಂದಿನಿಂದ ಹಿಂದಿನ ವರೆಗೆ ಲೆಕ್ಕಿಸಲಾಗಿದ್ದು ಹೆಸರುಗಳು ಪ್ರತಿ ಸಾಲಿನಲ್ಲಿ ಎಡದಿಂದ ಬಲಕ್ಕೆ ಕೊಡಲ್ಪಟ್ಟಿವೆ.
(1) ಏಲರ್ಸ್, ಪಿ.; ಗೀಜೀ, ಎಮ್.; ಜೆಲ್ಮನ್, ಎಸ್.; ಜೂಸ್ಪರೆಗಿ, ಜೆ.; ರೋ, ಎಸ್.; ಜ್ಯಾಕ್ಸನ್, ಕೆ.; ಸ್ಕಾಟ್, ಟಿ. (2) ಲೀಯರ್, ಟಿ.; ಗಾರ್ಸಿಯಾ, ಐ.; ಗಾರ್ಸಿಯಾ, ಜೆ.; ಫೆರ್ನಾಂಡಿಸ್, ಎ.; ಡೇವಡ್ಸನ್, ಎಲ್.; ಲೀಡಮನ್, ಪಿ.; ಗಿಬ್ಸನ್, ಎಲ್.; ಹ್ವಾರೆಸ್, ಸಿ. (3) ಫಾಟ್ಸ್, ಸಿ.; ಪಾಸ್ಟ್ರಾನ, ಜಿ.; ಕ್ಲಾಸನ್, ಡಿ.; ಫೆರ್ನಾಂಡಿಸ್, ಎಲ್.; ವಾಲ್ಸ್, ಎಮ್.; ಡ್ರೆಸನ್, ಎಮ್.; ಪಾಸ್ಟ್ರಾನ, ಎಫ್.; ಬರ್ಕ್ಸ್, ಜೆ. (4) ಬರ್ಕ್ಸ್, ಡಿ.; ಸ್ಕಾಟ್, ಎಸ್.; ಜ್ಯಾಕ್ಸನ್, ಎಮ್.; ಮೊರಿ, ಎಚ್.; ಹ್ವಾರೆಸ್ ಎಲ್.; ಜೂಸ್ಪರೆಗಿ, ಎ.; ಬ್ರೂಶಾನ್, ಸಿ.; ರೋ, ಸಿ. (5) ಜೆಲ್ಮನ್, ಕೆ.; ಲೀಡಮನ್, ಪಿ.; ಡೇವಡ್ಸನ್, ಸಿ.; ಮೊರಿ, ಎಸ್.; ವಾಲ್ಸ್, ಡಿ.; ಡ್ರೆಸನ್, ಡಿ.; ಸ್ಕಾಫ್ಸ್ಮಾ, ಜಿ.; ಲೀಯರ್, ಎಸ್. (6) ಕ್ಲಾಸನ್ ಟಿ.; ಗಿಬ್ಸನ್, ಟಿ.; ಗೀಜಿ, ಸಿ.; ಏಲರ್ಸ್, ಡಿ.; ಫಾಟ್ಸ್, ಆರ್.; ಸ್ಕಾಫ್ಸ್ಮಾ, ಎಸ್.; ಬ್ರೂಶಾನ್, ಎಲ್.