1996 “ದೈವಿಕ ಶಾಂತಿಯ ಸಂದೇಶವಾಹಕರು” ಅಧಿವೇಶನ
ಪುರಾತನ ಸಮಯಗಳಲ್ಲಿ ಯೆಹೋವನ ಜನರು ವಾರ್ಷಿಕವಾಗಿ ಮೂರು ಪ್ರಧಾನ ಹಬ್ಬಗಳನ್ನು ಆಚರಿಸಿದರು. ತದ್ರೀತಿಯಲ್ಲಿ, ಆಧುನಿಕ ಸಮಯಗಳಲ್ಲಿ ಯೆಹೋವನ ಹೆಸರಿನ ಜನರು ಉತ್ಸವ ಸಂದರ್ಭಗಳಿಗಾಗಿ ವರ್ಷವೊಂದರಲ್ಲಿ ಮೂರು ಸಲ ಕೂಡಿಬರುತ್ತಾರೆ. ಅವರು ಒಂದು ದಿನದ ವಿಶೇಷ ಸಮ್ಮೇಳನ ದಿನ, ಎರಡು ದಿನದ ಸರ್ಕಿಟ್ ಸಮ್ಮೇಳನ ಮತ್ತು ಮೂರು ಅಥವಾ ನಾಲ್ಕು ದಿನದ ಜಿಲ್ಲಾ ಅಧಿವೇಶನಕ್ಕಾಗಿ ಒಟ್ಟುಗೂಡಿ ಬರುವುದನ್ನು ಆನಂದಿಸುತ್ತಾರೆ. ಈ ವರ್ಷ, ಜಿಲ್ಲಾ ಅಧಿವೇಶನದ ಮುಖ್ಯ ವಿಷಯವು “ದೈವಿಕ ಶಾಂತಿಯ ಸಂದೇಶವಾಹಕರು” ಎಂದಾಗಿದೆ.
ಆ ಮುಖ್ಯವಿಷಯವು ಎಷ್ಟು ತಕ್ಕದ್ದಾಗಿದೆ! ನಮ್ಮ ದೇವರಾದ ಯೆಹೋವನು, “ಶಾಂತಿದಾಯಕನಾದ ದೇವರು” ಆಗಿದ್ದಾನೆ, ಹೌದು, “ಶಾಂತಿಯನ್ನು ಕೊಡುವ ದೇವರು” ಆಗಿದ್ದಾನೆ. ನಮ್ಮ ನಾಯಕನಾದ ಯೇಸು ಕ್ರಿಸ್ತನು, “ಶಾಂತಿಯ ಪ್ರಭು” ಆಗಿದ್ದಾನೆ, ಮತ್ತು ಯೆಹೋವನ ಸೇವಕರು ತರುವಂತಹ ಸಂದೇಶವು ದೈವಿಕ ಶಾಂತಿಯ ಒಂದು ಸಂದೇಶವಾಗಿದೆ. (ಫಿಲಿಪ್ಪಿ 4:9; ರೋಮಾಪುರ 15:33, NW; ಯೆಶಾಯ 9:6; ನಹೂಮ 1:15) ದೈವಿಕ ಶಾಂತಿಯ ಪ್ರಾಮುಖ್ಯವನ್ನು ಹೆಚ್ಚು ಪೂರ್ಣವಾಗಿ ಗಣ್ಯಮಾಡಲು ಎಲ್ಲರಿಗೆ ಸಹಾಯ ಮಾಡಲಿರುವ ಒಂದು ಉತ್ತಮ ಅಧಿವೇಶನ ಕಾರ್ಯಕ್ರಮವು ಏರ್ಪಡಿಸಲ್ಪಟ್ಟಿದೆ.
ಈ ವರ್ಷ ಭಾರತವೊಂದರಲ್ಲೇ, 15 ಅಧಿವೇಶನಗಳಿರುವವು. ನಿಮ್ಮ ಮನೆಯ ಹತ್ತಿರ ಒಂದು ಅಧಿವೇಶನವಿರಬಹುದು. ಅದು ನಿಖರವಾಗಿ ಯಾವಾಗ ಮತ್ತು ಎಲ್ಲಿ ಇರುವುದೆಂಬುದನ್ನು ನಿಮ್ಮ ನೆರೆಹೊರೆಯಲ್ಲಿರುವ ಯೆಹೋವನ ಸಾಕ್ಷಿಗಳೊಂದಿಗೆ ಕೇಳಿ, ಅನಂತರ ಹಾಜರಾಗಲು ಯೋಜನೆಗಳನ್ನು ಏಕೆ ಮಾಡಬಾರದು? ನಿಜವಾದ, ಶಾಶ್ವತವಾದ ಶಾಂತಿಯಲ್ಲಿ ಆಸಕ್ತರಾಗಿರುವವರೆಲ್ಲರೂ ಒಂದು ಹೃದಯೋಲ್ಲಾಸದ ಸ್ವಾಗತವನ್ನು ಪಡೆಯುವರು.