“ದಿವ್ಯ ಭಯ” ಜಿಲ್ಲಾ ಅಧಿವೇಶನಕ್ಕೆ ಸ್ವಾಗತ!
ಹೌದು, ಯೆಹೋವನ ಸಾಕ್ಷಿಗಳ 1994ರ ಜಿಲ್ಲಾ ಅಧಿವೇಶನಗಳಿಗಾಗಿ ಸಮಯವು ಹತ್ತಿರವಾಗುತ್ತಿದೆ. ಜೂನ್ 1994 ರಿಂದ ಜನವರಿ 1995ರ ವರೆಗೆ, ಮೂರು ದಿನಗಳ ಅಧಿವೇಶನ ಕಾರ್ಯಕ್ರಮವು ಲೋಕದಾದ್ಯಂತ ನೂರಾರು ನಗರಗಳಲ್ಲಿ—ಪ್ರಥಮವಾಗಿ ಉತ್ತರ ಅಮೆರಿಕ, ತದನಂತರ ಪೂರ್ವ ಮತ್ತು ಪಶ್ಚಿಮ ಯೂರೋಪ್, ಏಷಿಯಾ, ಮಧ್ಯ ಮತ್ತು ದಕ್ಷಿಣ ಅಮೆರಿಕ, ಆಫ್ರಿಕ, ಆಸ್ಟ್ರೇಲಿಯ, ಮತ್ತು ಸಮುದ್ರದ ಸಣ್ಣ ದ್ವೀಪಗಳಲ್ಲಿ—ಕೇಳಲ್ಪಡುವುದು.
ಎಂತಹ ವಿಚಾರ ಪ್ರೇರಕ ಮುಖ್ಯ ವಿಷಯ—“ದಿವ್ಯ ಭಯ”! ಜೀವವು ಗಂಡಾಂತರದಲ್ಲಿರುವ ಒಬ್ಬನ ಅನಾರೋಗ್ಯಕರ ವ್ಯಾಧಿಕಾರಕ ಭಯವು ಇದಾಗಿರುವುದಿಲ್ಲ, ಮನಶ್ಶಾಂತಿಯನ್ನು ಮತ್ತು ಸಂತೋಷವನ್ನು ಕೊಡುವ ಭಯವು ಇದಾಗಿದೆ. ಬೈಬಲಿನ ಜ್ಞಾನೋಕ್ತಿ ಹೇಳುವುದು: “ಧನ ಮಾನ ಜೀವಗಳು ದೀನಭಾವಕ್ಕೂ ಯೆಹೋವನ ಭಯಕ್ಕೂ ಫಲ.” (ಜ್ಞಾನೋಕ್ತಿ 22:4) ದೇವರಿಗೆ ಭಯಪಡುವುದು “ಧನ ಮಾನ ಜೀವ” ವಾಗಿ ಹೇಗೆ ಪರಿಣಮಿಸಬಲ್ಲದು? ಅಧಿವೇಶನದ ಮುಖ್ಯವಿಷಯವು ಮೂರು ದಿನಗಳಲ್ಲಿ, ಭಾಷಣಗಳು, ಚರ್ಚೆಗಳು, ಪ್ರತ್ಯಕ್ಷಾಭಿನಯಗಳು, ಮತ್ತು ಒಂದು ಡ್ರಾಮದೊಂದಿಗೆ ವಿಕಸಿಸಲ್ಪಡುವಾಗ ಅದು ಸ್ಪಷ್ಟವಾಗಿಗಿ ವ್ಯಕ್ತವಾಗುವುದು.
ನಾವು ‘ಸಭೆಯಾಗಿ ಕೂಡಿಕೊಳ್ಳುವದನ್ನು ರೂಢಿಯಾಗಿ ಬಿಡ’ಬಾರದೆಂದು ಅಪೊಸ್ತಲ ಪೌಲನು ಬರೆದನು. (ಇಬ್ರಿಯ 10:25) ಸಭಾ ಅಭ್ಯಾಸ ಮತ್ತು ಆರಾಧನೆಗಾಗಿ, ವಾರವೊಂದಕ್ಕೆ ಮೂರು ಬಾರಿ ಕೂಡುವ ಮೂಲಕ, ಯೆಹೋವನ ಸಾಕ್ಷಿಗಳು ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೂ, ವಾರ್ಷಿಕ ಜಿಲ್ಲಾ ಅಧಿವೇಶನವು ವಿಶೇಷವಾದದ್ದಾಗಿದೆ. ಅದಕ್ಕಾಗಿ ಯೆಹೋವನ ಸಾಕ್ಷಿಗಳು ನಿರೀಕ್ಷೆಯಿಂದ ಎದುರು ನೋಡುತ್ತಾರೆ ಮತ್ತು ತದನಂತರ ತಿಂಗಳುಗಳ ತನಕ ಅದರ ಕುರಿತು ಮಾತಾಡುತ್ತಾರೆ. ನಿಮ್ಮ ಧರ್ಮವು ಯಾವುದೇ ಆಗಿರಲಿ, ಅವರ ಅಧಿವೇಶನದಲ್ಲಿ ಅವರನ್ನು ಜತೆಗೂಡಲು ಮತ್ತು ಆದರಣೆಯ ಕ್ರೈಸ್ತ ಸಹವಾಸದಲ್ಲಿ ಹಾಗೂ ಅವಶ್ಯವಾದ ಆತ್ಮಿಕ ಸಮಾಚಾರದಲ್ಲಿ ಆನಂದಿಸಲು ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಆಮಂತ್ರಿಸುತ್ತೇವೆ. ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಯ ಸದಸ್ಯರೊಬ್ಬರು, ನಿಮಗೆ ಸಮೀಪವಾಗಿರುವ ಅಧಿವೇಶನವು ಎಲ್ಲಿ ಮತ್ತು ಯಾವಾಗ ನಡೆಯಲಿದೆಯೆಂಬುದನ್ನು ನಿಮಗೆ ತಿಳಿಸಲು ಸಂತೋಷಿಸುವರು.