ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 10/1 ಪು. 3
  • ಎಲ್ಲಿದ್ದಾನೆ ದೇವರು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಲ್ಲಿದ್ದಾನೆ ದೇವರು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಅನುರೂಪ ಮಾಹಿತಿ
  • ಪರಿವಿಡಿ
    ಎಚ್ಚರ!—2007
  • ಪರಿವಿಡಿ
    ಎಚ್ಚರ!—2006
  • ಪರಿವಿಡಿ
    ಎಚ್ಚರ!—2003
  • ಭಯೋತ್ಪಾದನೆಗೆ ಗುರಿಯಾಗುವ ಮಕ್ಕಳು
    ಎಚ್ಚರ!—2006
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 10/1 ಪು. 3

ಎಲ್ಲಿದ್ದಾನೆ ದೇವರು?

ಸೆಪ್ಟೆಂಬರ್‌ 11, 2001: ಬೆಳಗ್ಗೆ 8:46ರ ಸಮಯಕ್ಕೆ ನ್ಯೂ ಯಾರ್ಕ್‌ನ ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ಉತ್ತರ ದಿಕ್ಕಿನ ಕಟ್ಟಡಕ್ಕೆ ಒಂದು ದೊಡ್ಡ ಜೆಟ್‌ ವಿಮಾನ ಬಡಿಯಿತು. ಇದು ಭಯೋತ್ಪಾದಕರ ಪೂರ್ವಯೋಜಿತ ಸರಣಿ ಆಕ್ರಮಣಗಳಲ್ಲಿ ಮೊದಲನೆಯದು. 102 ನಿಮಿಷಗಳೊಳಗೆ ಸುಮಾರು 3,000 ಜನರು ಸಾವನಪ್ಪಿದ್ದಾರೆ.

ಡಿಸೆಂಬರ್‌ 26, 2004

ರಿಕ್ಟರ್‌ ಮಾಪಕದಲ್ಲಿ 9.0ಯಷ್ಟು ತೀವ್ರತೆ ಹೊಂದಿದ್ದ ಭಾರೀ ಭೂಕಂಪವೊಂದು ಹಿಂದೂ ಮಹಾಸಾಗರದಲ್ಲಿ ಸಂಭವಿಸಿತು. ಇದರ ಪರಿಣಾಮ ಎದ್ದ ರಾಕ್ಷಸ ಅಲೆಗಳು 5,000 ಕಿ.ಮೀ. ದೂರದಲ್ಲಿದ್ದ ಆಫ್ರಿಕಾ ಸೇರಿದಂತೆ 11 ದೇಶಗಳಿಗೆ ಅಪ್ಪಳಿಸಿವೆ. ಒಂದೇ ದಿನದಲ್ಲಿ ಸುಮಾರು 1,50,000 ಜನರು ಪ್ರಾಣಕಳೆದುಕೊಂಡಿದ್ದಾರೆ ಇಲ್ಲವೆ ಕಾಣೆಯಾಗಿದ್ದಾರೆ. ಹತ್ತು ಲಕ್ಷಕ್ಕಿಂತ ಹೆಚ್ಚು ಜನರು ತಮ್ಮ ಆಸ್ತಿಪಾಸ್ತಿಯನ್ನೆಲ್ಲಾ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.

ಆಗಸ್ಟ್‌ 1, 2009: 42ರ ಪ್ರಾಯದ ವ್ಯಕ್ತಿ ತನ್ನ 5 ವರ್ಷದ ಮಗನೊಂದಿಗೆ ಜೆಟ್‌-ಸ್ಕೀಯಿಂಗ್‌ ಮಾಡುತ್ತಿದ್ದಾಗ ಒಂದು ಮರದ ಕಟ್ಟೆಗೆ ಜೋರಾಗಿ ಅಪ್ಪಳಿಸಿ ಅವನು ಅಲ್ಲೇ ಕೊನೆಯುಸಿರೆಳೆದನು. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನೂ ಮರುದಿನ ಮೃತಪಟ್ಟನು. “ಏನಾದರೂ ಪವಾಡ ನಡೆದು ಅವನು ಬದುಕಬಹುದೆಂದು ನಾವಂದುಕೊಂಡಿದ್ದೆವು” ಎಂದು ದುಃಖತಪ್ತ ಸಂಬಂಧಿಕಳೊಬ್ಬಳು ಹೇಳಿದಳು.

ಹೀಗೆ ಭಯೋತ್ಪಾದಕರ ಆಕ್ರಮಣಗಳ, ಪ್ರಕೃತಿ ವಿಕೋಪಗಳ ಬಗ್ಗೆ ಓದಿದಾಗ ಅಥವಾ ನಿಮ್ಮ ಸ್ವಂತ ಜೀವನದಲ್ಲಿ ದುರಂತವನ್ನು ಅನುಭವಿಸಿದಾಗ ‘ದೇವರು ಇದನ್ನೆಲ್ಲಾ ನೋಡುತ್ತಿದ್ದಾನೋ? ಅವನು ನಮ್ಮ ಕೈಬಿಟ್ಟಿದ್ದಾನೋ?’ ಎಂದು ನೀವು ಯೋಚಿಸಿರಬಹುದು. ಈ ಪ್ರಶ್ನೆಗಳಿಗೆ ಬೈಬಲಿನ ಸಾಂತ್ವನದಾಯಕ ಉತ್ತರವನ್ನು ನೀವು ಮುಂದಿನ ಪುಟಗಳಲ್ಲಿ ಓದಲಿದ್ದೀರಿ. (w10-E 05/01)

[ಪುಟ 3ರಲ್ಲಿರುವ ಚಿತ್ರ ಕೃಪೆ]

© Dieter Telemans/Panos Pictures

PRAKASH SINGH/AFP/Getty Images

© Dieter Telemans/Panos Pictures

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ