ಬೈಬಲ್ ಸಾಹಿತ್ಯವನ್ನು ನೀಡಲು ಎಚ್ಚರದಿಂದಿರ್ರಿ
1 ಯೆಹೋವನು ತನ್ನ ಸಂಸ್ಥೆಯ ಮೂಲಕವಾಗಿ ಕ್ರಮವಾಗಿ ಒದಗಿಸುತ್ತಿರುವ ಬೈಬಲ್ ಸಾಹಿತ್ಯಕ್ಕಾಗಿ ನಾವೆಷ್ಟು ಕೃತಜ್ಞರು! ನಾವೀ ಆತ್ಮಿಕ ಆಹಾರವನ್ನು ಬಹಳವಾಗಿ ಮೂಲ್ಯ ಮಾಡುತ್ತೇವೆ. ಒಂದು ಹೊಸ ಪ್ರಕಾಶನವು ಕೈಸೇರುವಾಗ ನಾವು ಆತುರದಿಂದ ಅದನ್ನು ತೆರೆದು ನೋಡುತ್ತೇವೆ. ಅನಂತರ ಜಾಗ್ರತೆಯಿಂದ ಅದನ್ನು ಓದಿದಷ್ಟಕ್ಕೆ ತಿಳುವಳಿಕೆಯನ್ನು ಪಡೆಯುತ್ತೇವೆ. ಆಗ ಯೆಹೋವನಿಗಾಗಿ ಮತ್ತು ಆತನ ಉದ್ದೇಶಕ್ಕಾಗಿ ನಮ್ಮ ಗಣ್ಯತೆಯು ಹೆಚ್ಚುತ್ತದೆ.
2 : ನಮಗೆ ದೊರಕುವ ಪ್ರಯೋಜನವು ನಾವು ಕಲಿತ ಒಳ್ಳೇ ವಿಷಯಗಳನ್ನು ಇತರರೊಂದಿಗೆ ಹಂಚುವಂತೆ ನಮ್ಮನ್ನು ಪ್ರೇರಿಸುತ್ತದೆ. (ಮತ್ತಾ. 24:14) ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸೊಸೈಟಿಯ ಪ್ರಕಾಶನಗಳು ತಲಪುವಂತೆ ನಾವು ಬಯಸುತ್ತೇವೆ. ಈ ಭೋದಕ ಪ್ರಕಾಶನಗಳಲ್ಲಿರುವ ಸತ್ಯವನ್ನು ಕಲಿಯಲು ಸಹಾ ಇದು ಅವರನ್ನು ಶಕ್ಯರನ್ನಾಗಿ ಮಾಡುತ್ತದೆ. ಸದ್ಯದ ಪುಸ್ತಕ ನೀಡಿಕೆಯನ್ನು ಮಾಡಲು ನಾವು ಸುಸಜ್ಜಿತರೂ ಎಚ್ಚರಿತರೂ ಆಗಿದ್ದರೆ ಇತರ ಪ್ರಾಮಾಣಿಕ ಜನರು ಯೆಹೋವನ ಕಡೆಗೆ ತಿರುಗುವಂತೆ ಮತ್ತು ಆತನ ಸೇವೆಯಲ್ಲಿ ನಮ್ಮೊಂದಿಗೆ ಕೂಡುವಂತೆ ನಾವು ಸಹಾಯ ಮಾಡಬಲ್ಲೆವು.
ಮನೆಯಿಂದ ಮನೆಗೆ
3 ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಾವು 192 ಪುಟದ ಹಲವಾರು ಪುಸ್ತಕಗಳನ್ನು ಇಂಗ್ಲಿಷಲ್ಲಿ ಎರಡಕ್ಕೆ 10 ರೂಪಾಯಿ, ಮತ್ತು ದೇಶಭಾಷೆಯಲ್ಲಿ ಒಂದಕ್ಕೆ 5 ರೂಪಾಯಿ ದರದಲ್ಲಿ ನೀಡಲಿದ್ದೇವೆ. ಹಲವಾರು ಭಾಷೆಗಳಲ್ಲಿ ನೀಡಲ್ಪಡುವ ಈ ಪುಸ್ತಕಗಳನ್ನು ನಮ್ಮ ರಾಜ್ಯದ ಸೇವೆಯ ಫೆಬ್ರವರಿ 1988 ರ “ಪ್ರಕಟನೆ” ಕಾಲಂ ಕೆಳಗೆ ಕೊಡಲಾಗಿದೆ.
4 ಕೆಲವುಸಾರಿ ನಾವು ಸಂದರ್ಶನೆ ಮಾಡುವಾಗ ಜನರು ನಿಜವಾಗಿ ಕಾರ್ಯಮಗ್ನರಿರುತ್ತಾರೆ. ಅಂತಹ ಪರಿಸ್ಥಿತಿಗಳಲ್ಲಿ ರೀಸನಿಂಗ್ 20ನೇ ಪುಟದ ಎರಡನೇ ಮಾದರಿಯಲ್ಲಿ ಸೂಚಿತವಾದದ್ದನ್ನು ಮಾತ್ರವೇ ಹೇಳಿ ನಾವು ಪುಸ್ತಕ ನೀಡಬಹುದು. ಅಥವಾ ಅದೇ ಪುಟದ ಮೂರನೇ ಮಾದರಿಯಲ್ಲಿರುವಂತಹದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಹೇಳಬಹುದು. ಮನೆಯವನ ಪರಿಸ್ಥಿತಿಗೆ ಮಾನ್ಯತೆ ತೋರಿಸುತ್ತಾ ಉತ್ತೇಜಕವಾಗಿ ಹೀಗೆ ಹೇಳಬಹುದು: “ನಿಮಗೀಗ ಮಾತಾಡಲು ಸಮಯವಿಲ್ಲವಾದ್ದರಿಂದ ನೀವು ಈ ಎರಡು ಪತ್ರಿಕೆಗಳನ್ನು 4 ರೂಪಾಯಿಗೆ ತಕ್ಕೊಳ್ಳುವಂತೆ ಮತ್ತು ಹೆಚ್ಚು ಅನುಕೂಲವಿರುವಾಗ ಅವನ್ನು ಓದುವಂತೆ ನಾವು ಸೂಚಿಸುತ್ತೇವೆ. ದೇವರು ವಾಗ್ದಾನಿಸಿದ ಒಂದು ಹೊಸ ವಿಷಯವನ್ನು ನೀವದರಲ್ಲಿ ತಿಳಿಯುವಿರಿ.” ಈ ವಿಧಾನಗಳು ಮನೆಯವನ ಪರಿಸ್ಥಿತಿಗೆ ಪರಿಗಣನೆಯನ್ನು ತೋರಿಸುವದು ಮತ್ತು ಅದೇ ಸಮಯದಲ್ಲಿ ಪುಸ್ತಕವೂ ನೀಡಲ್ಪಡುವದು.
5 ನಾವು ನೀಡುವ ಪುಸ್ತಕವು ವ್ಯಕ್ತಿಯಲ್ಲಿ ಈವಾಗಲೇ ಇದ್ದಲ್ಲಿ ಏನು ಮಾಡಬಹುದು? 1 ಕೊರಿಂಥ 3:6-9 ರ ಬೈಬಲ್ ಸೂತ್ರವನ್ನು ಯಾಕೆ ಅನ್ವಯಿಸಬಾರದು? ಬೀಜವು ಈವಾಗಲೇ ಹಾಕಲ್ಪಟ್ಟಿದೆ. ವ್ಯಕ್ತಿಗೆ ಅಧಿಕ ಸಾಕ್ಷಿಯನ್ನು ನೀಡುವ ಮೂಲಕ ನೀರನ್ನು ಹಾಕಿ, ಅದನ್ನು ಬೆಳೆಸಿರಿ. ಇಲ್ಲವೇ ನಾವು ಹೀಗನ್ನಬಹುದು: “ಈ ಪ್ರಕಾಶನದ ಪ್ರತಿಯು ಈವಾಗಲೇ ನಿಮ್ಮಲ್ಲಿರುವದು ನನಗೆ ಸಂತೋಷ. ನೀವದನ್ನು ಓದಿರುವಿರೆಂಬದಕ್ಕೆ ಸಂಶಯವಿಲ್ಲ. ಅದರಿಂದ ಇನ್ನೂ ಹೆಚ್ಚು ಪ್ರಯೋಜನವನ್ನು ಹೇಗೆ ಪಡೆದಿರಬಲ್ಲಿರೆಂದು ತೋರಿಸಲು ನಾನು ಬಯಸುತ್ತೇನೆ. ಅದಕ್ಕೆ ಕೆಲವೇ ನಿಮಿಷಗಳು ಸಾಕು.” ಅನಂತರ ಆ ಪ್ರಕಾಶನದ ಸಹಾಯದಿಂದ ಬೈಬಲನ್ನು ಅಧ್ಯಯಿನಿಸುವ ವಿಧವನ್ನು ತೋರಿಸಿರಿ. ಮನೆಯವನಲ್ಲಿ ಈವಾಗಲೇ ಪುಸ್ತಕವಿದ್ದಾಗಲೂ ನಮ್ಮ ಸಂದರ್ಶನದ ಉದ್ದೇಶವು ಬದಲಾಗುವದಿಲ್ಲ. ನಮ್ಮ ಮುಖ್ಯ ಗುರಿಯು “ಶಿಷ್ಯರನ್ನಾಗಿ” ಮಾಡುವಿಕೆ ಎಂಬದನ್ನು ಮರೆಯಬೇಡಿ.—ಮತ್ತಾ.28:19.
ಅನೌಪಚಾರಿಕ ಸಾಕ್ಷಿ
6 ಅನೌಪಚಾರಿಕ ಸಾಕ್ಷಿಯಲ್ಲಿ ಪುಸ್ತಕ ನೀಡುವ ಅನೇಕ ಸಂದರ್ಭಗಳಿಗಾಗಿಯೂ ನಾವು ಎಚ್ಚತ್ತಿರಬೇಕು. ನೆಂಟರಿಗೆ, ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ, ಸಹಪಾಠಿಗಳಿಗೆ, ಶಾಪಿಂಗ್ನಲ್ಲಿ ಸಿಗುವ ಜನರಿಗೆ, ಸೇವೆಯಲ್ಲಿ ಮನೆಮನೆಗೆ ಹೋಗುವಾಗ ಮಧ್ಯೆ ಭೇಟಿಯಾಗುವ ಜನರಿಗೆ ಸಾಕ್ಷಿಕೊಡುವ ವಿಧಾನಗಳ ಕುರಿತು ಯೋಚಿಸಿರಿ. ಸಾಧ್ಯವಾದಾಗಲೆಲ್ಲಾ ಅಂತಹ ಸಂದರ್ಭಗಳಲ್ಲಿ ನೀಡಲು ನಮ್ಮಲ್ಲಿ ಪುಸ್ತಕವಿರುವಂತೆ ಮುಂದಾಗಿ ಯೋಜಿಸಿರಿ. ಚಿಕ್ಕ ಪ್ರಕಾಶನಗಳಲ್ಲಿ ಒಂದೆರಡನ್ನು ನಮ್ಮೊಂದಿಗೆ ಒಯ್ಯಲು ಅಷ್ಟೇನೂ ಕಷ್ಟವಾಗದು. ಅನೌಪಚಾರಿಕ ಸಾಕ್ಷಿಯಿಂದ ಬಹಳಷ್ಟು ಒಳ್ಳೇದು ಪ್ರಾಪ್ತಿಸ ಸಾಧ್ಯವಿದೆ.—1 ಪೇತ್ರ 3:15.
7 ಆತ್ಮಿಕವಾಗಿ ದೃಢವಾಗಿರಲು ಮತ್ತು ಸುವಾರ್ತೆಯನ್ನು ಹಬ್ಬಿಸಲು ಯೆಹೋವನ ಸಂಸ್ಥೆಯು ನಮಗೆ ಹೇರಳವಾಗಿ ಒದಗಿದೆ. ಹೀಗೆ ನಾವು ಬೈಬಲ್ ಸಾಹಿತ್ಯವನ್ನು ನೀಡಲಿರುವ ಸಂಧಿಗಳಿಗೆ ಎಚ್ಚರಿರುವ ಮೂಲಕ ಯೆಹೋವನ ನಾಮವನ್ನು ಘನಪಡಿಸಲು ಶಕ್ತರಾಗುವೆವು.—ಕೀರ್ತ.34:3.