ಸುವಾರ್ತೆಯನ್ನು ನೀಡುವದು—ಬೈಬಲಧ್ಯಯನಗಳ ಮೂಲಕ
1 ಭಾರತದಲ್ಲಿ ಈ ಕಳೆದ ಸೇವಾ ವರ್ಷದಲ್ಲಿ, ಪ್ರತಿ ತಿಂಗಳು 6200 ಕ್ಕಿಂತಲೂ ಹೆಚ್ಚು ಬೈಬಲಭ್ಯಾಸಗಳು ನಡಿಸಲ್ಪಟ್ಟವು. ಈ ದೇಶದಲ್ಲಿರುವ 8784 ಪ್ರಚಾರಕರಲ್ಲಿ ಪ್ರಾಯಶ: ಅರ್ಧ ಪಾಲು ಈ ಸಂತೋಷ ಭರಿತ ಸೇವೆಯಲ್ಲಿ ಪಾಲಿಗರಿದಿರ್ದಬಹುದು. ಪ್ರಚಾರಕರಲ್ಲಿ ಸುಮಾರು ಅರ್ಧದಷ್ಟು ಇದರಲ್ಲಿ ಪಾಲಿಗರಾದರೆಂದರೆ, ಬೇರೆ ಅರ್ಧ ಅದರಲ್ಲಿ ಪಾಲು ತಕ್ಕೊಳ್ಳಲಿಲ್ಲವೆಂದರ್ಥ ನಿಶ್ಚಯ. ಇನ್ನೊಬ್ಬರಿಗೆ ಸತ್ಯವನ್ನು ಕಲಿಸುವದರಿಂದ ಬರುವ ಆ ವಿಶೇಷ ತೃಪ್ತಿಯನ್ನು ನಮ್ಮಲ್ಲಿ ಹೆಚ್ಚಿನವರು ಹೇಗೆ ಆನಂದಿಸ ಸಾಧ್ಯವಿದೆ?
2 ನಾವು ದೇವರನ್ನೂ ನೆರೆಯವರನ್ನೂ ಪ್ರೀತಿಸುತ್ತೇವಾದ ಕಾರಣ, ಇತರರಿಗೆ ಸತ್ಯವನ್ನು ಹಂಚಲು ಬಯಸುತ್ತೇವೆ. ಆದರೆ ನಮ್ಮ ಶುಶ್ರೂಷೆಯಲ್ಲಿ ನಮಗೆ ಯೆಹೋವನ ಸಹಾಯದ ಅಗತ್ಯವಿದೆ. (1 ಕೊರಿ. 3:6, 7) ಹೀಗಿರಲಾಗಿ, ಒಂದು ಬೈಬಲಭ್ಯಾಸವನ್ನು ಆರಂಭಿಸಲು ಸಹಾಯಕ್ಕಾಗಿ ಪ್ರಾರ್ಥನೆಯಲ್ಲಿ ಆತನ ಬಳಿಗೇ ಹೋಗುವುದು ಒಳ್ಳೆಯದಲ್ಲವೇ? (1 ಯೋಹಾ. 5:14, 15) ಅನಂತರ ನಾವು ನಮ್ಮ ವಿನಂತಿಗೆ ಹೊಂದಿಕೆಯಲ್ಲಿ ಕಾರ್ಯ ನಡಿಸಿ, ನಮ್ಮ ಪರಿಸ್ಥಿತಿಯು ಅನುಮತಿಸುವ ಮಟ್ಟಿಗೆ ಅದರಲ್ಲಿ ಪೂರ್ಣವಾಗಿ ಭಾಗವಹಿಸಿ, ಸಂದರ್ಭ ದೊರೆತಾಗಲೆಲ್ಲಾ ಒಂದು ಮನೆ ಬೈಬಲಭ್ಯಾಸವನ್ನು ಜನರಿಗೆ ನೀಡೋಣ.
ಅನೇಕ ಸಂದರ್ಭಗಳು
3 ಕಳೆದ ಕೆಲವು ವರ್ಷಗಳಲ್ಲಿ ನಾವು ನಮ್ಮ ಟೆರಿಟೆರಿಯಲ್ಲಿ ಸಾವಿರಾರು ಪುಸ್ತಕ, ಪುಸ್ತಿಕೆ, ಬ್ರೊಷರ್ಗಳನ್ನು ಜನರಿಗೆ ನೀಡಿದ್ದೇವೆ. ಲಿವ್ವ್ ಫಾರೆವರ್, ಟ್ರು ಪೀಸ್, ಸತ್ಯ ಪುಸ್ತಕಗಳು, ಬೇರೆಯವುಗಳು ಸಹಾ, ಯೆಹೋವನ ಸಾಕ್ಷಿಗಳಲ್ಲದ ಸಾವಿರಾರು ಜನರ ಮನೆಗಳಲ್ಲಿ ಕಂಡು ಬರುತ್ತವೆ. ಇದು ಹೊಸ ಬೈಬಲಧ್ಯಯನಗಳನ್ನು ಆರಂಭಿಸಲು ಇರುವ ಸಂದರ್ಭಗಳ ವಿಸ್ತಾರರಂಗವನ್ನು ಸೂಚಿಸುತ್ತದೆ.
4 ನಮ್ಮ ಕಾರ್ಯದ ಪರಿಚಯವು ತನಗಿದೆ ಅಥವಾ ನಮ್ಮ ಪುಸ್ತಕವು ಅವನಲ್ಲಿ ಈವಾಗಲೇ ಇದೆಂದು ಮನೆಯವನು ನಮಗೆ ಹೇಳುವಾಗ, ನಮಗದು ಬಹು ಸಂತೋಷವೆಂದು ನಾವು ಅವನಿಗೆ ಹೇಳಬೇಕು. (ರೀಸನಿಂಗ್ ಪುಟ 20 ನೋಡಿ.) ಅವನಲ್ಲಿ ನಮ್ಮ ಪ್ರಕಾಶನವಿದ್ದರೆ, ಅದನ್ನಾತನು ದಯವಿಟ್ಟು ತರುವಂತೆ ಸೂಚಿಸಬಹುದು ಮತ್ತು ಅವನಿಗೂ ಅವನ ಕುಟುಂಬಕ್ಕೂ ಪ್ರಯೋಜನಿಸುವ ಕೆಲವು ಆಸಕ್ತಿಯ ವಿಷಯಕ್ಕೆ ಅವನ ಗಮನಸೆಳೆಯಬಹುದು. ಪ್ರತಿಕ್ರಿಯೆಯು ಸಕಾರಾತ್ಮಕವಿದ್ದರೆ, ಮನೆ ಬೈಬಲಧ್ಯಯನವನ್ನು ಅವನಿಗೆ ನೀಡಸಾಧ್ಯವಿದೆ.
5 ಇದನ್ನು ಬೇರೊಂದು ರೀತಿಯಲ್ಲಿ ಮಾಡುವ ವಿಧಾನ, ಸಥ್ವಾ ನಾವು ಮೊದಲ ಹೆಜ್ಜೆ ತಕ್ಕೊಳ್ಳುವ ಮೂಲಕ ಅಂದರೆ, ಮನೆಯವನಲ್ಲಿ ನಮ್ಮ ಪುಸ್ತಕವಿದೆಯೋ ಎಂದು ನಾವೇ ಕೇಳುವ ಮೂಲಕ. ಇದು ಎಲ್ಲಿ ನಾವು ತುಂಬಾ ಸಾಹಿತ್ಯಗಳನ್ನು ನೀಡಿದ್ದೇವೋ ಅಂತಹ ಕ್ಷೇತ್ರಗಳಲ್ಲಿ ಹೆಚ್ಚು ಪರಿಣಾಮಕಾರಿ. ಸ್ನೇಹದ ಪೀಠಿಕೆಯನ್ನು ನುಡಿದ ನಂತರ, ನಮ್ಮ ಆಗಿಂದಾಗಿನ ಸಂದರ್ಶನೆಯ ಕಾರಣ ಹೆಚ್ಚಿನ ನೆರೆಹೊರೆಯಲ್ಲಿ ನಮ್ಮ ಪುಸ್ತಕಗಳು ಇರುವುದು ಕಂಡುಬಂದಿದೆ ಎಂದು ನಾವನ್ನಬಹುದು. ಅದರಲ್ಲಿರುವ ಸಮಾಚಾರದಿಂದ ಜನರು ಪ್ರಯೋಜನಿಸುವಂತೆ ನಾವು ಬಯಸುತ್ತೇವೆ. ಅವನಲ್ಲಿ ನಮ್ಮ ಯಾವುದೇ ಸಾಹಿತ್ಯವಿದೆಯೋ ಎಂದು ಅನಂತರ ನಾವವನನ್ನು ಕೇಳಬಹುದು. ಇದ್ದರೆ, ಅವನದನ್ನು ದಯವಿಟ್ಟು ತರುವಂತೆ ಸೂಚಿಸಿರಿ ಮತ್ತು ಅದನ್ನು ಅಧ್ಯಯನ ಮಾಡುವುದು ಹೇಗೆಂದು ತೋರಿಸಿರಿ. ಒಂದು ಚಿಕ್ಕ ದೃಶ್ಯವು ಒಂದು ಮನೆ ಬೈಬಲಭ್ಯಾಸದಲ್ಲಿ ಪರಿಣಮಿಸಬಹುದು. ಅವನಲ್ಲಿ ನಮ್ಮ ಪುಸ್ತಕವಿಲ್ಲದಿದ್ದರೆ, ನಾವು ಕ್ರಮದ ನೀಡಿಕೆಯನ್ನು ನೀಡಬಹುದು ಯಾ ಅವನ ಕುಟುಂಬವು ಒಂದು ಉಚಿತ ಬೈಬಲಭ್ಯಾಸವನ್ನು ಬಯಸುತ್ತದೋ ಎಂದು ನೇರವಾಗಿ ಕೇಳಬಹುದು.
ವಿವೇಚನೆ ಉಪಯೋಗಿಸಿರಿ
6 ಜನರು ಕಾರ್ಯಮಗ್ನರಿರುವುದರಿಂದ, ನಾವು ವಿವೇಚನೆ ತೋರಿಸುವುದು ಒಳ್ಳೆಯದು ಮತ್ತು ತುಂಬಾ ಹೊತ್ತು ಕಳೆಯದಂತೆ ನೋಡಬೇಕು. ಮೊದಲ ಕೆಲವು ಅಭ್ಯಾಸಗಳನ್ನು ಸುಮಾರು 15 ನಿಮಿಷಕ್ಕೆ ಸೀಮಿತ ಮಾಡಿರಿ. ತುಂಬಾ ಸಮಯವು ತಕ್ಕೊಳ್ಳಲ್ಪಡದೆಂದು ಮನೆಯನಿಗೆ ತಿಳಿದಾಗ, ಅವನು ನಮ್ಮ ಕ್ರಮದ ಸಂದರ್ಶನೆಯನ್ನು ಸ್ವೀಕರಿಸಲು ಮನಸ್ಸು ಮಾಡ್ಯಾನು. ಒಮ್ಮೆ ಅಭ್ಯಾಸ ಸ್ಥಾಪಿಸಲ್ಪಟ್ಟಾಗ ಮತ್ತು ಮನೆಯವನ ಆಸಕ್ತಿ ವಿಕಾಸವಾದಾಗ ನಮ್ಮ ಅಭ್ಯಾಸದ ಸಮಯವನ್ನು ಹೆಚ್ಚಿಸಬಹುದು. ನಿಶ್ಚಯವಾಗಿ, ಕೆಲವರಾದರೋ ಆರಂಭದಿಂದಲೇ ಹೆಚ್ಚು ಸಮಯದ ಅಭ್ಯಾಸ ಮಾಡಲು ಇಷ್ಟಸುತ್ತಾರೆ.
7 ನಮ್ಮ ಸಹಾಯ ಬೇಕಾದ ಕುರಿ ಸದೃಶರು ಕ್ಷೇತ್ರದಲ್ಲಿದ್ದಾರೆ ಮತ್ತು ಹೆಚ್ಚಿನವರಲ್ಲಿ ನಮ್ಮ ಪುಸ್ತಕಗಳಿವೆ. ಅವರಲ್ಲಿ ಕೆಲವರು ಇಂದು ಭೂಮಿಯಲ್ಲಿ ನಡಿಯುತ್ತಿರುವ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡು ತ್ತಾರೆಂಬದು ನಿಸ್ಸಂಶಯ. (ಯೆಹೆ. 9:4) ಮಾನವಕುಲದ ಕಷ್ಟಗಳನ್ನು ಪರಿಹರಿಸುವ ಈ ರಾಜ್ಯದ ಕುರಿತಾದ ಸಾಹಿತ್ಯಗಳನ್ನು ಹಂಚುವುದು ಮಾತ್ರವಲ್ಲ ಬೈಬಲಧ್ಯಯನದ ಮೂಲಕ ಪ್ರಾಮಾಣಿಕ ಜನರಿಗೆ ಸತ್ಯವನ್ನು ತಲಪಿಸುವುದು ಸಹಾ ನಮ್ಮ ಸುಯೋಗವಾಗಿದೆ.—ಮತ್ತಾ. 28:19, 20.