ಪ್ರೇರಣೆಯನ್ನೀಯುವ ಪೀಠಿಕೆಗಳನ್ನು ವಿಕಸಿಸಿರಿ
1 ಕಾವಲಿನಬುರುಜು ಮತ್ತು ಎಚ್ಚರ! ಇವೆರಡೂ ಓದುಗರ ಮನಸ್ಸು ಮತ್ತು ಹೃದಯಗಳಲ್ಲಿ ಸತ್ಯದ ಬೀಜಗಳನ್ನು ನೆಡುವುದರಲ್ಲಿ ಉಪಯುಕ್ತವಾಗಿವೆ. ಆದುದರಿಂದ, ಅವುಗಳಲ್ಲಿ ತುಂಬಿರುವ ಆತ್ಮಿಕ ರತ್ನಗಳ ಮೂಲಕ ಪ್ರಯೋಜನವನ್ನು ಪಡೆಯಬಹುದಾದ ಜನರ ಮನೆಗಳಲ್ಲಿ ಈ ಪತ್ರಿಕೆಗಳನ್ನು ತಲುಪಿಸುವಂತೆ ನಾವು ಪರಿಣಾಮಕಾರಿ ವಿಧಾನಗಳನ್ನು ಬೆಳೆಸಲು ಬಯಸಬೇಕು.
2 ನಮ್ಮ ಪತ್ರಿಕೆಗಳನ್ನು ಸ್ವೀಕರಿಸಲು ಮತ್ತು ಓದಲು ಮನೆಯವರನ್ನು ಹೇಗೆ ಪ್ರೇರೇಪಿಸಬಹುದು? ನಾವು ಅವುಗಳನ್ನು ಹೇಗೆ ಪರಿಚಯಿಸುತ್ತೇವೊ ಅದರ ಮೇಲೆ ಇದು ಬಹಳಷ್ಟು ಹೊಂದಿಕೊಂಡಿರುತ್ತದೆ. ಪರಿಣಾಮಕಾರಿ ಪೀಠಿಕೆಗಳನ್ನು ತಯಾರಿಸಲು ಅತ್ಯುತ್ತಮ ಸಲಹೆಗಳು ರೀಸನಿಂಗ್ ಪುಸ್ತಕ, 9-15 ಪುಟಗಳಲ್ಲಿ ದೊರಕುತ್ತವೆ.
3 ನೊವೆಂಬರ್ 1ರ ಕಾವಲಿನಬುರುಜನ್ನು ನೀಡುವಾಗ, ರೀಸನಿಂಗ್ ಪುಸ್ತಕದ ಪುಟ 14 ರಲ್ಲಿ “ಓಲ್ಡ್ ಏಜ್⁄ಡೆತ್” ಶಿರೋನಾಮದ ಕೆಳಗಿನ ಮೊದಲ ಸಲಹೆಯನ್ನು ನೀವು ಪ್ರಯತ್ನಿಸಬಹುದು.
ನಿಮ್ಮನ್ನು ಪರಿಚಯಿಸಿಕೊಂಡ ನಂತರ, ನೀವು ಹೀಗನ್ನಬಹುದು:
▪ “ನೀವು ಆರಿಸಿಕೊಳ್ಳುವಂತಿರುವಲ್ಲಿ, ಲೋಕವು ಈಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಮೊದಲು ಯಾವುದು ಸರಿಪಡಿಸಿದ್ದನ್ನು ನೋಡಲು ನೀವು ಇಚ್ಛಿಸುವಿರಿ?” ಮನೆಯವನ ಉತ್ತರಕ್ಕೆ ಕಿವಿಗೊಡಿರಿ, ಮತ್ತು ಅವನ ವ್ಯಾಕುಲವನ್ನು ಮಾನ್ಯ ಮಾಡಿರಿ. ತದನಂತರ ನೀವು, ತಕ್ಕಮಟ್ಟಿಗೆ ಈ ರೀತಿಯಲ್ಲಿ ಹೇಳುವ ಮೂಲಕ ಮುಂದುವರಿಯಬಹುದು: “ಅಂಥಾ ಸಮಸ್ಯೆಗಳಿಗೆ ಬೈಬಲ್ ಯಾವ ಪರಿಹಾರವನ್ನು ನೀಡುತ್ತದೆಂದು ಗಮನಿಸಿರಿ. [ಯೆಶಾಯ 9:6, 7ನ್ನು ಓದಿರಿ.] ಹೀಗೆ ನಿತ್ಯವಾಗಿ ಜೀವಿಸಿ, ಆಳುವವನಾದ ನೀತಿಯ, ನ್ಯಾಯವಂತನಾದ ರಾಜನನ್ನು ಪಡೆಯುವದರಲ್ಲಿ ಮಾನವ ಕುಲದ ಎಲ್ಲ ಸಮಸ್ಯೆಗಳಿಗೆ ನಿಜ ಪರಿಹಾರವು ಇದೆ. ದೇವರು ವೃದ್ಧಾಪ್ಯ ಮತ್ತು ಮರಣವನ್ನು ಹೋಗಲಾಡಿಸುವನು ಮತ್ತು ಮಾನವರಿಗೆ ಪ್ರಮೋದವನದ ಭೂಮಿಯ ಮೇಲೆ ನಿತ್ಯವಾಗಿ ಜೀವಿಸಲು ಸಂದರ್ಭವನ್ನು ಕೊಡುವನೆಂದು ಕೂಡ ಬೈಬಲ್ ವಾಗ್ದಾನಿಸುತ್ತದೆ.” ತದನಂತರ ಕಾವಲಿನಬುರುಜುನ ಪುಟ 6ಕ್ಕೆ ತಿರುಗಿರಿ ಮತ್ತು “ದೇವರ ನಿತ್ಯ ಜೀವದ ಕೊಡುಗೆ” ಎಂಬ ಉಪಶಿರೋನಾಮವನ್ನು ತೋರಿಸಿರಿ.
4 ರೀಸನಿಂಗ್ ಪುಸ್ತಕದ ಪುಟ 13 ರಲ್ಲಿ ದೊರಕುವ “ಜೀವ⁄ಸಂತೋಷ” ಎಂಬ ಶಿರೋನಾಮದ ಕೆಳಗಿನ ಮೊದಲ ಎರಡು ವಿಷಯಗಳು ನೊವೆಂಬರ್ 1ರ ಕಾವಲಿನಬುರುಜನ್ನು ನೀಡುವಾಗ ನೀವು ಉಪಯೋಗಿಸಬಹುದಾದ ಎರಡು ಬೇರೆ ಪೀಠಿಕೆಗಳಾಗಿವೆ. ಈ ವಿಷಯಗಳನ್ನು ಮತ್ತು ಪ್ರಶ್ನೆಗಳನ್ನು ನಿಮ್ಮ ಸ್ವಂತ ಮಾತಿನಲ್ಲಿ ಹೇಳಬಹುದು ಯಾ ರೀಸನಿಂಗ್ ಪುಸ್ತಕದಲ್ಲಿ ಏನು ಹೇಳಲಾಗಿದೆಯೊ ಅದನ್ನು ಕೇವಲ ಪುನರುಚ್ಛಿರಿಸಬಹುದು. ವ್ಯಕ್ತಿಯ ಪ್ರತಿಕ್ರಿಯೆಯನ್ನು ಒಪ್ಪಿಕೊಂಡ ಮೇಲೆ, ಕಾವಲಿನಬುರುಜುನ ಪುಟ 7ರ ಮಾಹಿತಿಯಲ್ಲಿ ಪಾಲಿಗರಾಗುವುದರ ಮೂಲಕ ಮುಂದುವರಿಸಿರಿ. ನಂತರ ಯೆಶಾಯ 65:21-23ನ್ನು ಓದುವುದರ ಮೂಲಕ, ನಿತ್ಯ ಜೀವದ ಆಶೀರ್ವಾದ ಪ್ರತಿಯೊಬ್ಬರಿಗೆ ತೆರೆದಿದೆ ಎಂದು ತೋರಿಸಿರಿ.
5 “ಜನಸಂಖ್ಯೆಯ ಸ್ಫೋಟನ”ದ ಮೇಲಿನ ನೊವೆಂಬರ್ 8ರ ಎಚ್ಚರ!ವನ್ನು ನೀವು ಉಪಯೋಗಿಸುವುದಾದರೆ, “ಜೀವ⁄ಸಂತೋಷ” ಎಂಬ ಶಿರೋನಾಮದ ಕೆಳಗಿನ ಮೂರನೆಯ ಪೀಠಿಕೆಯನ್ನು ನೀವು ಪ್ರಯತ್ನಿಸಬಹುದು. ಕೀರ್ತನೆ 1:1, 2ನ್ನು ಜೋಡಿಸಿ ಮಾತಾಡಿದ ನಂತರ, ಎಚ್ಚರ!ದ ಪುಟ 20 ರಲ್ಲಿನ “ಯೆಹೋವನ ಮೂಲಕ ದೇವಪ್ರಭುತ್ವ ಆಳಿಕೆಯು ಏನನ್ನು ಮಾಡುವುದು” ಎಂಬ ಚೌಕಟ್ಟಿನ ಕಡೆಗೆ ನೀವು ಗಮನವನ್ನು ಸೆಳೆಯಬಹುದು.
6 ಅವರ ಸ್ವಂತ ಧಾರ್ಮಿಕ ಸಾಹಿತ್ಯಗಳು ಅವರಲ್ಲಿವೆ ಎಂದು ಹೇಳುವ ಮನೆಯವರನ್ನು ನೀವು ಎದುರಿಸುವದು ಸಂಭವನೀಯ. ನೀವು ವಿವರಿಸಬಹುದೇನಂದರೆ ನಮಗೂ ನಮ್ಮ ಸ್ವಂತಕ್ಕಾಗಿ (ನಮ್ಮ ರಾಜ್ಯದ ಸೇವೆಗಳಂತಹ) ಸಾಹಿತ್ಯಗಳಿವೆ; ಆದಾಗ್ಯೂ, ನಮ್ಮ ವೃತ್ತಪತ್ರಕೆಗಳು ಯೆಹೋವನ ಸಾಕ್ಷಿಗಳಲ್ಲದ ಲಕ್ಷಾಂತರ ಜನರಿಂದ ಓದಲ್ಪಡುತ್ತವೆ.
7 ಪೌಲನು 1 ಕೊರಿಂಥದವರಿಗೆ 3:6 ರಲ್ಲಿ ಹೇಳಿದ್ದು: “ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರುಹೊಯಿದನು, ಆದರೆ ಬೆಳಿಸುತ್ತಾ ಬಂದವನು ದೇವರು.” ಅಭಿರುಚಿಯುಳ್ಳವರ ಹೃದಯಗಳಲ್ಲಿ ಸತ್ಯದ ಬೀಜಗಳನ್ನು ಯೆಹೋವನು ಬೆಳೆಸುವಂತೆ ನಾವು ಬಯಸುವದಾದರೆ, ಪ್ರೇರಣೆಯನ್ನೀಯುವ ಪೀಠಿಕೆಗಳನ್ನು ಉಪಯೋಗಿಸುವ ಮೂಲಕ ಈ ಬೀಜಗಳನ್ನು ಪರಿಣಾಮಕಾರಿಯಾಗಿ ನೆಡಲು ನಾವು ಗಮನವನ್ನು ಕೊಡಬೇಕು.