ಪ್ರಶ್ನಾ ಪೆಟ್ಟಿಗೆ
• ಸರ್ಕಿಟ್ ಮೇಲ್ವಿಚಾರಕರ ಸಂದರ್ಶನದ ವಾರದಲ್ಲಿ ಸಭಾ ಪುಸ್ತಕ ಅಭ್ಯಾಸ ಕೂಡಿರುವ ವಿಶೇಷ ಕೂಟದಲ್ಲಿ ಯಾವ ಶೆಡ್ಯೂಲನ್ನು ಅನುಸರಿಸತಕ್ಕದ್ದು?
ಸರ್ಕಿಟ್ ಮೇಲ್ವಿಚಾರಕರ ಸಂದರ್ಶನೆಯ ಸಮಯದಲ್ಲಿ, ಸಭಾ ಪುಸ್ತಕಭ್ಯಾಸ, “ಕಂಟಿನ್ಯೂ ಇನ್ ದ ತಿಂಗ್ಸ್ ದ್ಯಾಟ್ ಯು ಲರ್ನ್ಡ್” ಎಂಬ ಹೆಸರಿನ ಶಾಸ್ತ್ರೀಯ ಮತ್ತು ಸಂಘಟನಾ ಸಮಾಚಾರದ ಚರ್ಚೆ, ಹಾಗೂ ಸರ್ಕಿಟ್ ಮೇಲ್ವಿಚಾರಕನಿಂದ ಸರ್ವಿಸ್ ಭಾಷಣವು ಸೇರಿರುವ ಒಂದು ವಿಶೇಷ ಕೂಟಕ್ಕಾಗಿ ಇಡೀ ಸಭೆಯು ರಾಜ್ಯ ಸಭಾಗೃಹದಲ್ಲಿ ನೆರೆದು ಬರುತ್ತದೆ. ಈ ಕೂಟವು ಸಾಧಾರಣವಾಗಿ ಗುರುವಾರ ಯಾ ಶುಕ್ರವಾರ ರಾತ್ರಿಗೆ ನಡಿಯುತ್ತದೆ.
ಈ ಕೂಟವು ಸಂಗೀತ ಮತ್ತು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಅನಂತರ ಹಿರಿಯರಲ್ಲಿ ಒಬ್ಬನು 45 ಮಿನಿಟುಗಳ ಸಭಾ ಪುಸ್ತಕಭ್ಯಾಸವನ್ನು ನಡಿಸುವನು. ಕ್ರಮದ ವಾರದ ಪುಸ್ತಕಭ್ಯಾಸದಲ್ಲಿ ಹೇಗೋ ಹಾಗೆ, ಈ ವಾರದಲ್ಲೂ ನೇಮಿತವಾದ ಎಲ್ಲಾ ಸಮಾಚಾರವು ಆವರಿಸಲ್ಪಡಬೇಕು ಮತ್ತು ಎಲ್ಲಾ ಪಾರಾಗಳನ್ನೂ ಓದಿಸಬೇಕು. ಸಭಾ ಪುಸ್ತಕಭ್ಯಾಸವನ್ನು ಹಿಂಬಾಲಿಸಿ ಇನ್ನೊಂದು ರಾಜ್ಯ ಸಂಗೀತ ಹಾಡಲ್ಪಡುತ್ತದೆ. ಅನಂತರ ಸರ್ಕಿಟ್ ಮೇಲ್ವಿಚಾರಕನು “ಕಂಟಿನ್ಯೂ ಇನ್ ದ ತಿಂಗ್ಸ್ ದೇಟ್ ಯು ಲರ್ನ್ಡ್” ಎಂಬ ಭಾಗವನ್ನು ನಡಿಸಲು 30 ನಿಮಿಷಗಳನ್ನು ಉಪಯೋಗಿಸುವನು. ಆಮೇಲೆ ತಾನು ಸಂದರ್ಶಿಸುವ ಸಭೆಯ ಅಗತ್ಯತೆಗಳಿಗೆ ವಿಶೇಷವಾಗಿ ಅನ್ವಯಿಸುವ 30 ನಿಮಿಷಗಳ ಸರ್ವಿಸ್ ಭಾಷಣವನ್ನು ಕೊಡುತ್ತಾನೆ. ಈ ಸರ್ವಿಸ್ ಭಾಷಣದಲ್ಲಿ ಸಭೆಯನ್ನು ಬಲಪಡಿಸಲು ತಕ್ಕದಾದ ಪ್ರಶಂಸೆಯನ್ನು ಮತ್ತು ಸೂಚನೆಯನ್ನು ಅವನು ಕೊಡುವನು ಮತ್ತು ರಾಜ್ಯ ಸೇವೆಯಲ್ಲಿ ದೃಢವಾಗಿ ನಿಲ್ಲುವಂತೆ ಸಹೋದರರನ್ನು ಪ್ರೋತ್ಸಾಹಿಸುವನು.
ಕೂಟವು ಸಂಗೀತ ಮತ್ತು ಪ್ರಾರ್ಥನೆಯೊಂದಿಗೆ ಮುಕ್ತಾಯವಾಗುತ್ತದೆ. ಬಳಸುವ ಎಲ್ಲಾ ಸಂಗೀತಗಳು ಸರ್ಕಿಟ್ ಮೇಲ್ವಿಚಾರಕನಿಂದ ಆರಿಸಲ್ಪಡುತ್ತವೆ. ಇಡೀ ಕಾರ್ಯಕ್ರಮವು, ಸಂಗೀತ ಮತ್ತು ಪ್ರಾರ್ಥನೆಗಳೂ ಸೇರಿ, ಎರಡು ತಾಸಿಗಿಂತ ಹೆಚ್ಚಾಗಬಾರದು.
1977 ರಲ್ಲಿ ಪ್ರಾರಂಭವಾದ ಈ ಏರ್ಪಾಡು, ಇಡೀ ಸಭೆಗೆ ಮತ್ತು ಯೆಹೋವನ ಸಂಸ್ಥೆಯು ಒದಗಿಸುವ ಈ ಉತ್ತಮ ಒದಗಿಸುವಿಕೆಯನ್ನು ಹಾಜರಾಗುವ ಮತ್ತು ಪಾಲಿಗರಾಗುವ ವೈಯಕ್ತಿಕ ಪ್ರಚಾರಕರಿಗೆ, ಸರ್ಕಿಟ್ ಮೇಲ್ವಿಚಾರಕರ ಈ ಭೇಟಿಯನ್ನು ಒಂದು ಆನಂದಭರಿತ ಹಾಗೂ ಪ್ರಯೋಜನವುಳ್ಳ ವಿಶೇಷ ಸಂದರ್ಭವನ್ನಾಗಿ ಮಾಡಲು ಬಹಳವಾಗಿ ನೆರವಾಗಿರುತ್ತದೆ.