ಪುನಃ ಭೇಟಿಗಳನ್ನು ಮಾಡುವ ಪಂಥಾಹ್ವಾನ
1 ಸುವಾರ್ತೆಯ ಶುಶ್ರೂಷಕರೋಪಾದಿ, ಶಿಷ್ಯರನ್ನು ಮಾಡಲು ನಮಗೆ ಆಜ್ಞೆಯನ್ನೀಯಲಾಗಿದೆ. (ಮತ್ತಾ. 28:19, 20) ಇದರಲ್ಲಿ ಪುನಃ ಭೇಟಿಗಳನ್ನು ಮಾಡುವುದು ಒಳಗೂಡಿರುತ್ತದೆ. ನಮ್ಮ ಕ್ರೈಸ್ತ ಶುಶ್ರೂಷೆಯ ಈ ಪ್ರಾಮುಖ್ಯ ಭಾಗದ ಒಂದು ಸಕಾರಾತ್ಮಕ ನೋಟವು ನಿಮಗಿದೆಯೋ? ಪುನಃ ಭೇಟಿಗಳನ್ನು ಮಾಡುವುದರಲ್ಲಿ ಕುಶಲರಾಗುವುದು ಒಂದು ಪ್ರಚೋದಕ ಪಂಥಾಹ್ವಾನವಾಗಿರಬಲ್ಲದು.—ಜ್ಞಾನೋ. 22:29.
2 ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಪಾಲಿಗರಾಗುವದರಲ್ಲಿ ಪ್ರತಿಯೊಬ್ಬ ಸಮರ್ಪಿತ ಕ್ರೈಸ್ತನು ಒಂದು ಜವಾಬ್ದಾರಿಯ ಭಾವನೆಯುಳ್ಳವನಾಗಿರತಕ್ಕದ್ದು. ಇತರರೊಂದಿಗೆ ರಾಜ್ಯ ನಿರೀಕ್ಷೆಯನ್ನು ಹಂಚಿಕೊಳ್ಳಲಿಕ್ಕಾಗಿ ಸ್ವಲ್ಪ ಮಟ್ಟದ ವೈಯಕ್ತಿಕ ಅನುಕೂಲತೆಯನ್ನು ನಾವು ಬದಿಗಿಡಬೇಕಾಗಬಹುದು. ಯಥಾರ್ಥವಂತರಿಗೆ ಅವರ ಆತ್ಮಿಕ ಆವಶ್ಯಕತೆಗಳನ್ನು ತೃಪ್ತಿಪಡಿಸಲು ಪುನಃ ಭೇಟಿಗಳು ನಮಗೆ ಅವಕಾಶವನ್ನು ಒದಗಿಸುತ್ತವೆ.
3 ಎಲ್ಲಾ ಆಸಕ್ತಿಯನ್ನು ಬಿಡದೆ ಅನುಸರಿಸಿರಿ: ಅವರು ನಮ್ಮ ಸಾಹಿತ್ಯಗಳನ್ನು ನಿರಾಕರಿಸಿದರೂ, ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿದ ಎಲ್ಲರಿಗೆ ಪುನಃ ಸಂದರ್ಶನ ಮಾಡಲೇ ಬೇಕು. ನಮ್ಮೊಂದಿಗೆ ಬೈಬಲ್ ವಿಚಾರಗಳನ್ನು ಚರ್ಚಿಸುವ ಅವರ ಇಚ್ಛೆಯ ಮೂಲಕ ಆಸಕ್ತಿಯನ್ನು ತೋರಿಸುವ ಅನೇಕ ಜನರು ಇದ್ದಾರೆ. ಚೂಪಾದ ಶಾಸ್ತ್ರೀಯ ಚರ್ಚೆಗಳಲ್ಲಿ ಜನರನ್ನು ತೊಡಗಿಸುವದರಿಂದ ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ಹೇಗೆ ಬೆಳಸಸಾಧ್ಯವಿದೆ ಎಂದು ಯೇಸು ಮತ್ತು ಅಪೊಸ್ತಲರು ತೋರಿಸಿದರು.—ಮಾರ್ಕ 10:21; ಅ.ಕೃ. 2:37-41.
4 ಪುನಃ ಭೇಟಿ ನೀಡುವ ನಮ್ಮ ಉದ್ದೇಶವು ಬೈಬಲ್ ಅಭ್ಯಾಸವೊಂದನ್ನು ಆರಂಭಿಸುವದಾಗಿರಬೇಕು. ಒಂದು ಮನೆ ಬೈಬಲ್ ಅಭ್ಯಾಸವು ಹೇಗೆ ನಡಿಸಲ್ಪಡುತ್ತದೆ ಎಂದು ಮನೆಯವನಿಗೆ ನಾವು ಪ್ರದರ್ಶಿಸಿ ತೋರಿಸ ಸಾಧ್ಯವಿರಬಹುದು. ಕಲಿಸಲು ಪ್ರಾಮಾಣಿಕ ಹೃದಯದ ವ್ಯಕ್ತಿಯೊಬ್ಬನನ್ನು ಹುಡುಕುವುದರಲ್ಲಿ ಸಹಾಯಕ್ಕಾಗಿ ಮಾಡುವ ನಿಮ್ಮ ಪ್ರಾರ್ಥನೆಗೆ ಯೆಹೋವನು ಪ್ರತಿಕ್ರಿಯೆ ತೋರಿಸುವನು ಎಂಬ ವಿಷಯದಲ್ಲಿ ನೀವು ನಿಶ್ಚಯದಿಂದಿರಸಾಧ್ಯವಿದೆ. ಅವನ ಸೇವೆಯಲ್ಲಿ ನಿಮ್ಮ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನು. ಯೆಹೋವನ ಸಹಾಯವನ್ನು ಯಾಕೆ ಕೇಳಿಕೊಳ್ಳಬಾರದು ಮತ್ತು ಬೈಬಲ್ ಅಭ್ಯಾಸವೊಂದನ್ನು ಆರಂಭಿಸುವುದು ಒಂದು ಧ್ಯೇಯವನ್ನಾಗಿ ಏಕೆ ಮಾಡಬಾರದು?
5 ಟ್ರ್ಯಾಕ್ಟ್ಗಳ ಸದುಪಯೋಗವನ್ನು ಮಾಡಿರಿ: ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಟ್ರ್ಯಾಕ್ಟ್ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ. ಆವರಣಪುಟದಲ್ಲಿರುವ ಚಿತ್ರವನ್ನು ಕೇವಲ ಚರ್ಚಿಸುವುದರ ಮೂಲಕ ಸಂಭಾಷಣೆಯನ್ನು ಆರಂಭಿಸಲು ಅನೇಕರಿಗೆ ಸಾಧ್ಯವಾಗಿದೆ. ಮನೆಯವನೊಂದಿಗೆ ಒಮ್ಮೆಗೆ ಒಂದು ಪ್ಯಾರಗ್ರಾಫ್ ಮಾತ್ರ ಓದಿರಿ. ಪ್ರಶ್ನೆಯೊಂದು ಕೇಳಲ್ಪಟ್ಟಾಗ, ನಿಲ್ಲಿಸಿರಿ ಮತ್ತು ಮನೆಯವನು ಸ್ವತಃ ವ್ಯಕ್ತಪಡಿಸುವಂತೆ ಆಮಂತ್ರಿಸಿರಿ. ಶಾಸ್ತ್ರವಚನಗಳನ್ನು ನೋಡಿರಿ ಮತ್ತು ಅವುಗಳು ಹೇಗೆ ಅನ್ವಯವಾಗುತ್ತವೆಂದು ತೋರಿಸಿರಿ. ಅನಂತರ ಸಂಭಾಷಣೆಯನ್ನು ಯಾವ ಪ್ರಕಾಶನದಿಂದ ಅಭ್ಯಾಸಿಸಲು ಸಾಧ್ಯವಿದೆಯೋ ಅದರ ಕಡೆಗೆ ನಿರ್ದೇಶಿಸಸಾಧ್ಯವಿದೆ.
6 ರೀಸನಿಂಗ್ ಪುಸ್ತಕವನ್ನುಪಯೋಗಿಸಿರಿ: ರೀಸನಿಂಗ್ ಪುಸ್ತಕದಿಂದ ಪರಿಣಾಮಕಾರಿ ಪುನಃ ಭೇಟಿಗಳನ್ನು ಮಾಡಬಹುದು. ಪ್ರಧಾನ ವಿಷಯಗಳ ಪಟ್ಟಿ ಇಲ್ಲವೆ ಪರಿವಿಡಿ (ಇಂಡೆಕ್ಷ್) ಪರಾಮರ್ಶಿಸುವುದು ಹಿಂದಿನ ಸಂಭಾಷಣೆಗಳನ್ನು ಬಿಡದೆ ಅನುಸರಿಸುವಾಗ ಚರ್ಚಿಸಲು ತಕ್ಕದ್ದಾದ ಸಮಾಚಾರವನ್ನು ನೀವು ಆಯ್ಕೆ ಮಾಡಲು ಸಹಾಯಮಾಡಬಲ್ಲದು. “ಸ್ಕ್ರಿಪ್ಚರ್ಸ್ ಒಫನ್ ಮಿಸ್ಎಪ್ಲಾಯ್ಡ್” (ಆಗಾಗ್ಯೆ ತಪ್ಪಾಗಿ ಅನ್ವಯಿಸಿದ ಶಾಸ್ತ್ರವಚನಗಳು) ವಿಭಾಗವು ಎದ್ದೇಳಬಹುದಾದ ಅಡಿಗ್ಡಳೊಂದಿಗೆ ವ್ಯವಹರಿಸಲು ಸಹಾಯಕಾರಿಯಾಗಬಲ್ಲದು. ರೀಸನಿಂಗ್ ಪುಸ್ತಕದ 204 ನೆಯ ಪುಟದಲ್ಲಿ “ಹೌ ಡು ಜೆಹೊವಾಸ್ ವಿಟ್ನೆಸಸ್ ಎರೈವ್ ಎಟ್ ದೆಯರ್ ಎಕ್ಪ್ಷೆನ್ಲೆಶನ್ ಆಫ್ ದ ಬೈಬಲ್?” (ಬೈಬಲಿನ ಅವರ ವಿವರಣೆಗೆ ಯೆಹೋವನ ಸಾಕ್ಷಿಗಳು ಬರುವ ವಿಧ ಹೇಗೆ?) ಎಂಬಂಥ ವಿಷಯದಲ್ಲಿರುವ ಸಮಾಚಾರವನ್ನುಪಯೋಗಿಸುವ ಮೂಲಕ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಹೆಚ್ಚಿನ ಯಶಸ್ಸನ್ನು ಪಯನೀಯರರು ವರದಿಮಾಡುತ್ತಾರೆ. ಬೈಬಲ್ ಸ್ವತಃ ತನ್ನ ಸ್ವಂತ ವಿವರಣೆಯನ್ನು ಒದಗಿಸುತ್ತದೆ ಎಂದು ಆಸಕ್ತಿಯುಳ್ಳ ವ್ಯಕ್ತಿಯು ನೋಡುವಂತೆ ಅವರು ತೋರಿಸುತ್ತಾರೆ. ಇದು ಚಲೋದಾಗಿ ಕಾರ್ಯವೆಸಗುತ್ತದೆ ಮತ್ತು ಅನೇಕ ಸಂಖ್ಯೆಯಲ್ಲಿ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಫಲಿತಾಂಶಗಳನ್ನು ತಂದಿದೆ.
7 ಯೇಸು ಮತ್ತು ಅಪೊಸ್ತಲರಂತೆ, ನಾವು ಯೆಹೋವನ ಕುರಿಗಳಲ್ಲಿ ಯಥಾರ್ಥವಾದ ಆಸಕ್ತಿಯನ್ನು ಪ್ರದರ್ಶಿಸುವ ಜರೂರಿಯಿದೆ. (ಲೂಕ 9:11) ಜನರೆಡೆಗಿನ ಪ್ರೀತಿಯು ರಾಜ್ಯದ ಸತ್ಯತೆಗಳೊಂದಿಗೆ ಅವರನ್ನು ತಲುಪುವಂತೆ ನಮಗೆ ಸಹಾಯವನ್ನೀಯುತ್ತದೆ. (2 ಕೊರಿಂ. 2:17) ಇತರರ ಆತ್ಮಿಕ ಶ್ರೇಯೋಭಿವೃದ್ಧಿಗಾಗಿ ನಮ್ಮನ್ನು ನಾವೇ ಕೊಟ್ಟುಕೊಳ್ಳುವದರ ಮೇಲೆ ಹೆಚ್ಚಿನ ಒತ್ತರವನ್ನು ಹಾಕುವಾಗ, ಪುನಃ ಭೇಟಿಗಳನ್ನು ಮಾಡುವ ಪಂಥಾಹ್ವಾನವನ್ನು ನಾವು ಎದುರಿಸಲು ಶಕ್ತರಾಗುತ್ತೇವೆ.