ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು
1 ಯೇಸು ಪೀಠಿಕೆಗಳ ತನ್ನ ಉಪಯೋಗದಲ್ಲಿ ನಿಪುಣನಾಗಿದ್ದನು. ಆಸಕ್ತಿಯನ್ನು ಕೆರಳಿಸಲು ಏನು ಹೇಳಬೇಕೆಂದು ಅವನಿಗೆ ಗೊತ್ತಿತ್ತು. ಒಂದು ಸಂದರ್ಭದಲ್ಲಿ, ಕೇವಲ ಕುಡಿಯಲು ನೀರಿಗಾಗಿ ಕೇಳುವ ಮೂಲಕ ಒಬ್ಬ ಸಮಾರ್ಯದ ಸ್ತ್ರೀಯೊಡನೆ ಒಂದು ಸಂಭಾಷಣೆಯನ್ನು ಆರಂಭಿಸಿದನು. ಇದು ಕೂಡಲೆ ಆಕೆಯ ಗಮನವನ್ನು ಸೆರೆ ಹಿಡಿಯಿತು ಯಾಕೆಂದರೆ ‘ಯೆಹೂದ್ಯರಿಗೆ ಸಮಾರ್ಯದವರೊಂದಿಗೆ ಯಾವ ವ್ಯವಹಾರಗಳು ಇರುತ್ತಿರಲಿಲ್ಲ.’ ಇದರಿಂದ ಪರಿಣಮಿಸಿದ ಸಂಭಾಷಣೆಯು ಕಟ್ಟಕಡೆಗೆ ಆಕೆಯನ್ನು ಮತ್ತು ಅನೇಕ ಇತರರನ್ನು ವಿಶ್ವಾಸಿಗಳಾಗುವಂತೆ ಸಹಾಯ ಮಾಡಿತು. (ಯೋಹಾನ 4:7-9, 41) ಅವನ ಉದಾಹರಣೆಯಿಂದ ನಾವು ಕಲಿಯಬಲ್ಲೆವು.
2 ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಲು ತಯಾರಿಸುವಾಗ, ನಿಮ್ಮನ್ನೇ ಕೇಳಿಕೊಳ್ಳಿ, ‘ನಮ್ಮ ಟೆರಿಟೊರಿಯಲ್ಲಿರುವ ಜನರ ಪ್ರಧಾನ ಚಿಂತೆಗಳಾವುವು? ಒಬ್ಬ ಹದಿವಯಸ್ಕನಿಗೆ, ಒಬ್ಬ ವೃದ್ಧ ವ್ಯಕ್ತಿಗೆ, ಒಬ್ಬ ಗಂಡನಿಗೆ, ಯಾ ಒಬ್ಬ ಹೆಂಡತಿಗೆ ಯಾವ ವಿಷಯವು ಇಷ್ಟವಾಗುವುದು?’ ಒಂದಕ್ಕಿಂತ ಹೆಚ್ಚು ಪೀಠಿಕೆಯನ್ನು ನೀವು ತಯಾರಿಸಬಹುದು ಮತ್ತು ಸನ್ನಿವೇಶಕ್ಕೆ ಅತ್ಯಂತ ತಕ್ಕದ್ದಾಗಿ ತೋರುವ ಒಂದನ್ನು ಉಪಯೋಗಿಸಲು ಯೋಜಿಸಬಹುದು.
3 ಕುಟುಂಬ ಜೀವಿತದ ಕ್ಷೀಣಿಸುವಿಕೆ ಅನೇಕರನ್ನು ಚಿಂತಿತರಾಗಿಸುವುದರಿಂದ, ನೀವು ಹೀಗೆ ಹೇಳಬಹುದು:
▪ “ಜೀವಿತದ ದೈನಿಕ ಒತ್ತಡಗಳು ಇಂದು ಕುಟುಂಬಗಳ ಮೇಲೆ ಮಹಾ ಬಿಗುಪನ್ನು ಹೇರಿವೆ. ನೆರವನ್ನು ಅವರು ಎಲ್ಲಿ ಪಡೆಯಬಲ್ಲರು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲು ನಮಗೆ ನಿಜವಾದ ಒಂದು ಸಹಾಯವಾಗಿರಬಲ್ಲದು. [2 ತಿಮೊಥೆಯ 3:16, 17 ಓದಿರಿ.] ಕುಟುಂಬಗಳು ಬದುಕಿ ಉಳಿಯುವಂತೆ ಸಹಾಯಮಾಡಬಲ್ಲ ಪ್ರಯೋಜನಕಾರಿ ಮಾರ್ಗದರ್ಶನಗಳನ್ನು ಶಾಸ್ತ್ರಗಳು ನೀಡುತ್ತವೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಈ ಪ್ರಕಾಶನದ ಪುಟ 238 ರಲ್ಲಿರುವ 3 ನೆಯ ಪ್ಯಾರಗ್ರಾಫ್ನಲ್ಲಿ ಏನು ಹೇಳಲಾಗಿದೆ ಎಂಬುದನ್ನು ಗಮನಿಸಿರಿ.” 3 ನೆಯ ಪ್ಯಾರಗ್ರಾಫ್ನ್ನು ಓದಿ, ನೀಡಿಕೆಯನ್ನು ಮಾಡಿರಿ.
4 ಒಂದು ಸ್ಥಳಿಕ ವಾರ್ತಾ ವರದಿಯನ್ನು ನೀವು ಉಪಯೋಗಿಸುತ್ತಿರುವಲ್ಲಿ, ನೀವು ಹೀಗೆ ಹೇಳಬಹುದು:
▪ “[ಸ್ಥಳಿಕ ಚಿಂತೆಯ ವಿಷಯವನ್ನು ಉಲ್ಲೀಖಿಸಿ] ಇದರ ಕುರಿತಾದ ವಾರ್ತಾ ವರದಿಯನ್ನು ನೀವು ಕೇಳಿದಿರೊ? ಅದರ ಕುರಿತು ನೀವು ಏನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಲೋಕವು ಎಲ್ಲಿಗೆ ಸಾಗುತ್ತಿದೆ ಎಂದು ನೀವು ಕುತೂಹಲಪಡುವಂತೆ ಇದು ಮಾಡುತ್ತದೆ ಅಲ್ಲವೆ? ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಾ ಇರುವುದರ ಪ್ರಮಾಣವಾಗಿ ಇಂತಹ ವಿಷಯಗಳನ್ನು ಬೈಬಲ್ ಮುಂತಿಳಿಸಿತು.” ಆಮೇಲೆ ಸದಾ ಜೀವಿಸಬಲ್ಲಿರಿ ಪುಸ್ತಕ, ಪುಟಗಳು 150-3 ರಲ್ಲಿರುವ ಮಾಹಿತಿಯನ್ನು ಪರಿಗಣಿಸಿರಿ.
5 ಹೆಚ್ಚಾಗುತ್ತಿರುವ ಪಾತಕ ಸಮಸ್ಯೆಯ ಕುರಿತು ಅನೇಕರು ಚಿಂತಿತರಾಗಿದ್ದಾರೆ. “ರೀಸನಿಂಗ್” ಪುಸ್ತಕದ 10 ನೆಯ ಪುಟದಲ್ಲಿ “ಪಾತಕ ⁄ ಸುರಕ್ಷೆ” ಎಂಬ ತಲೆಬರಹದ ಕೆಳಗಿರುವ ಪ್ರಥಮ ಪೀಠಿಕೆಯನ್ನು ನೀವು ಉಪಯೋಗಿಸಬಹುದು:
▪ “ವೈಯಕ್ತಿಕ ಸುರಕ್ಷೆಯ ವಿಷಯದ ಕುರಿತು ನಾವು ಜನರೊಂದಿಗೆ ಮಾತಾಡುತ್ತಾ ಇದ್ದೇವೆ. ನಮ್ಮ ಸುತ್ತಲೂ ಬಹಳಷ್ಟು ಪಾತಕವಿದೆ, ಮತ್ತು ಅದು ನಮ್ಮ ಜೀವಿತಗಳನ್ನು ಪ್ರಭಾವಿಸುತ್ತದೆ. ನಿಮ್ಮಂತಹ ಮತ್ತು ನಮ್ಮಂತಹ ಜನರು ರಾತ್ರಿಯಲ್ಲಿ ರಸ್ತೆಗಳ ಮೇಲೆ ಸುರಕ್ಷಿತ ಅನಿಸಿಕೆಯನ್ನು ಪಡೆದಿರಲು ಏನು ಮಾಡುವ ಅಗತ್ಯವಿದೆಯೆಂದು ನೀವು ನೆನಸುತ್ತೀರಿ?” ನೀವು ಕೀರ್ತನೆ 37:10, 11ನ್ನು ಓದಬಹುದು ಮತ್ತು ಸದಾ ಜೀವಿಸಬಲ್ಲಿರಿ ಪುಸ್ತಕದ ಪುಟಗಳು 156-8ನ್ನು ಉಪಯೋಗಿಸುತ್ತಾ, ದೇವರ ರಾಜ್ಯವು ತರಲಿರುವ ಆಶೀರ್ವಾದಗಳನ್ನು ಸೂಚಿಸಬಹುದು.
6 ಸರಳವಾದೊಂದು ಪ್ರಸ್ತಾವನೆಯನ್ನು ನೀವು ಇಷ್ಟಪಡುವುದಾದರೆ, “ರೀಸನಿಂಗ್” ಪುಸ್ತಕದಲ್ಲಿ ಪುಟ 12ರ ಮೇಲ್ಭಾಗದಲ್ಲಿರುವ ಪೀಠಿಕೆಗೆ ಸಮಾನವಾದ ಒಂದು ಪೀಠಿಕೆಯನ್ನು ನೀವು ಉಪಯೋಗಿಸಬಹುದು:
▪ “ಬೈಬಲ್ ನಮಗಾಗಿ ಎತ್ತಿಹಿಡಿಯುವ ಉಜ್ವಲ ಭವಿಷ್ಯತ್ತನ್ನು ಪರಿಗಣಿಸುವಂತೆ ನಾವು ನಮ್ಮ ನೆರೆಯವರನ್ನು ಉತ್ತೇಜಿಸುತ್ತಿದ್ದೇವೆ. [ಪ್ರಕಟನೆ 21:3, 4 ಓದಿರಿ.] ಇದು ಒಳ್ಳೆಯದೆಂದು ನಿಮಗನಿಸುತ್ತದೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರ ರಾಜ್ಯದ ಕೆಳಗೆ ವಿಧೇಯ ಮಾನವಕುಲವು ಅನುಭವಿಸುವ ಇತರ ಆಶೀರ್ವಾದಗಳನ್ನು ಈ ಪ್ರಕಾಶನದ 19 ನೆಯ ಅಧ್ಯಾಯವು ಎತ್ತಿತೋರಿಸುತ್ತದೆ.” ತದನಂತರ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ನೀಡಿರಿ.
7 ಪರಿಣಾಮಕಾರಿಯಾದ ಪೀಠಿಕೆಯೊಂದನ್ನು ತಯಾರಿಸುವುದು, ನೀತಿಗಾಗಿ ಹಸಿದಿರುವವರನ್ನು ತಲಪುವಂತೆ ನಿಮಗೆ ಸಹಾಯ ಮಾಡಬಲ್ಲದು.—ಮತ್ತಾ. 5:6.