ದೇವಪ್ರಭುತ್ವ ವಾರ್ತೆಗಳು
ಕಂಬೋಡಿಯ: ಫೆಬ್ರವರಿ 8, 1993 ರಂದು, ನಮ್ಮ ಕೆಲಸಕ್ಕಾಗಿ ಒಂದು ಆಫೀಸನ್ನು ಸ್ಥಾಪಿಸಲು ಅನುಮತಿ ಕೊಡುವ ಮತ್ತು ಮಿಷನರಿಗಳು ಆ ದೇಶವನ್ನು ಪ್ರವೇಶಿಸಲು ಮಾರ್ಗವನ್ನು ತೆರೆಯುವ ಒಂದು ಅಧಿಕೃತ ದಾಖಲೆಯು ದೊರೆಯಿತು. ಇಪ್ಪತ್ತೈದಕ್ಕಿಂತಲೂ ಹೆಚ್ಚಿನ ವರ್ಷಗಳ ಅನಂತರ, ಕಂಬೋಡಿಯದಲ್ಲಿ ಸುಸಮಾಚಾರವು ಬಹಿರಂಗವಾಗಿ ಮತ್ತೆ ಸಾರಲಾಗುತ್ತಿರುವುದರಿಂದ ನಾವು ಸಂತೋಷಪಡುತ್ತೇವೆ.
ಸೈಪ್ರಸ್: ಮಾರ್ಚ್ ತಿಂಗಳಿನಲ್ಲಿ 1,462 ಪ್ರಚಾರಕರ ಹೊಸ ಉಚ್ಚಾಂಕದೊಂದಿಗೆ, ಶಾಖೆಯು ತಾಸುಗಳಲ್ಲಿ, ಪುನರ್ ಭೇಟಿಗಳಲ್ಲಿ, ಮತ್ತು ಬೈಬಲ್ ಅಧ್ಯಯನಗಳಲ್ಲಿ ಉಚ್ಚಾಂಕಗಳನ್ನು ವರದಿಸಿತು.
ಲೈಬಿರೀಯ: ಮಾರ್ಚ್ ತಿಂಗಳಿನಲ್ಲಿ ಸಹೋದರರು, ಶಾಖಾ ಆಫೀಸಿನ ಪಕ್ಕದಲ್ಲಿರುವ ಸೊಸೈಟಿಯ ವಿಶಾಲವಾದ ಪ್ರದೇಶದಲ್ಲಿ ತಮ್ಮ “ಬೆಳಕು ವಾಹಕರು” ಜಿಲ್ಲಾ ಅಧಿವೇಶನವನ್ನು ನಡೆಸಲು ಶಕ್ತರಾದರು. ಉಚ್ಚಾಂಕ ಹಾಜರಿಯು 2,711 ಆಗಿತ್ತು, ಮತ್ತು 78 ವ್ಯಕ್ತಿಗಳು ದೀಕ್ಷಾಸ್ನಾನ ಪಡೆದರು.
ಜಪಾನ್: ಮಾರ್ಚ್ ತಿಂಗಳಿನಲ್ಲಿ ಅವರ ಪ್ರಚಾರಕರ ಹೊಸ ಉಚ್ಚಾಂಕವು 1,77,591 ಆಗಿತ್ತು.
ಫಿಲಿಪ್ಪೀನ್ಸ್: ಮಾರ್ಚ್ ತಿಂಗಳಿನಲ್ಲಿ 1,15,044 ಪ್ರಚಾರಕರ ಹೊಸ ಉಚ್ಚಾಂಕವನ್ನು ಮುಟ್ಟಲಾಯಿತು.