ದೇವ ಪ್ರಭುತ್ವ ವಾರ್ತೆಗಳು
ಅಲ್ಪೇನಿಯ: 1991 ರ ದಶಂಬರದಿಂದ 1992 ರ ದಶಂಬರ ವರೆಗೆ, ಪ್ರಚಾರಕರ ಸಂಖ್ಯೆಯು 24 ರಿಂದ 107 ಕ್ಕೆ ಹೆಚ್ಚಿತು. ಅದೇ ಸಮಯದಲ್ಲಿ ಬೈಬಲ್ ಅಭ್ಯಾಸಗಳ ಸಂಖ್ಯೆಯು 4 ರಿಂದ 221 ಕ್ಕೆ ಏರಿತು.
ಮಧ್ಯ ಆಫ್ರಿಕನ್ ರಿಪಬ್ಲಿಕ್: ಜನವರಿ 20, 1993 ರಂದು, ಯೆಹೋವನ ಸಾಕ್ಷಿಗಳ ಮೂಲಕ ಸಂಪೂರ್ಣ ಚಟುವಟಿಕೆಗಳ ಪುನಃ ಆರಂಭಕ್ಕೆ ಅನುಮತಿ ನೀಡುವ ಒಂದು ತೀರ್ಪನ್ನು ಸರಕಾರವು ಪ್ರಕಟಿಸಿತು. ಅಲ್ಲಿರುವ ಸಹೋದರರು ತಮ್ಮ ರಾಜ್ಯಸಭಾ ಗೃಹಗಳನ್ನು ಈಗ ಉಪಯೋಗಿಸಲು ಮತ್ತು “ಬೆಳಕು ವಾಹಕರು” ಜಿಲ್ಲಾ ಅಧಿವೇಶನವನ್ನು ಬಹಿರಂಗವಾಗಿ ನಡೆಸಲು ಶಕ್ತರಾಗಿರುವದರಿಂದ ಹರ್ಷಿಸುತ್ತಾರೆ. ನಡೆಸಿದಂತಹ ಆರು ಅಧಿವೇಶನಗಳಲ್ಲಿ 4,739 ಜನರ ಮೊತ್ತವು ಹಾಜರಿಯಲ್ಲಿತ್ತು, ಮತ್ತು 121 ವ್ಯಕ್ತಿಗಳು ದೀಕ್ಷಾಸ್ನಾನ ಪಡೆದರು.