ಜನರು ಗಮನಕೊಟ್ಟು ಆಲಿಸುವಂತೆ ಶ್ರಮಿಸಿರಿ
1 ನಮ್ಮ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ನಾವು ಭೇಟಿಯಾಗುವ ಅನೇಕ ಜನರಿಗೆ ಅವರ ಮನಸ್ಸುಗಳಲ್ಲಿ ಆತ್ಮಿಕ ವಿಷಯಗಳು ಇರುವುದಿಲ್ಲ. ಕುಟುಂಬ ಸದಸ್ಯರು, ಆರ್ಥಿಕ ತೊಂದರೆಗಳು, ಯಾ ವೈಯಕ್ತಿಕ ಸಮಸ್ಯೆಗಳಲ್ಲಿ ಅವರು ಮಗ್ನರಾಗಿರಬಹುದು. ಒಂದು ಸಂಭಾಷಣೆಯನ್ನು ಆರಂಭಿಸಲು, ನೆರೆಹೊರೆಯಲ್ಲಿ ಅನೇಕರಿಗೆ ಸಾಮಾನ್ಯವಾಗಿರುವ ಅಭಿರುಚಿಯ ವಿಷಯಗಳ ಕುರಿತು ಮಾತಾಡುವುದು ಅನೇಕ ವೇಳೆ ಅತ್ಯುತ್ತಮವಾಗಿದೆ. ಪ್ರಶ್ನೆಗಳು ಮನೆಯವನನ್ನು ಸಂಭಾಷಣೆಯಲ್ಲಿ ಒಳಗೂಡಿಸುವುದರಿಂದ, ಆಸಕ್ತಿಯನ್ನು ಪ್ರಚೋದಿಸಲು ಅವುಗಳನ್ನು ಉಪಯೋಗಿಸಬಹುದು. ಜನರನ್ನು ಪೇಚಾಟಗೊಳಿಸದ ದೃಷ್ಟಿಕೋನ ಪ್ರಶ್ನೆಗಳು ಅತ್ಯಂತ ಪರಿಣಾಮಕಾರಿಯಾಗಿವೆ.
2 ಈ ರೀತಿಯ ಒಂದು ಪ್ರಸ್ತಾವವನ್ನು ಉಪಯೋಗಿಸುವ ಮೂಲಕ ಆಲಿಸುವವರು ನಿಮಗೆ ಸಿಗಬಹುದು:
▪ “ನಮಸ್ಕಾರ. ನನ್ನ ಹೆಸರು ‐. ನಾನು ನೆರೆಹೊರೆಯಲ್ಲಿ ಜೀವಿಸುತ್ತೇನೆ. ಇಂದು ಬೆಳಗ್ಗೆ ನಾನು ಮಾತಾಡಿದ ಅನೇಕರು [ಸ್ಥಳಿಕ ಚಿಂತೆಯ ಒಂದು ವಿಷಯ ಯಾ ಇತ್ತೀಚೆಗೆ ನೆರೆಹೊರೆಯಲ್ಲಿ ನಡೆದ ಸಮಾಚಾರ ಘಟನೆಯನ್ನು ಉಲ್ಲೇಖಿಸಿರಿ] ಕುರಿತು ಕಳವಳಗೊಂಡಿದ್ದಾರೆ. ಲೋಕವು ಹೀಗಿರಲು ದೇವರು ಉದ್ದೇಶಿಸಿದನೆಂದು ನೀವು ಯೋಚಿಸುತ್ತೀರೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಈ ಹಂತದಲ್ಲಿ ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ಪ್ರದರ್ಶಿಸಬಹುದು. ಸಮಯವು ಅನುಮತಿಸಿದಂತೆ ಪುಟ ಒಂದರಲ್ಲಿರುವ ದೃಷ್ಟಾಂತವನ್ನು ಮತ್ತು ಪ್ಯಾರಗ್ರಾಫ್ಗಳು 1-3 ರಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ಪರಿಗಣಿಸುತ್ತಾ, ಸದಾ ಜೀವಿಸಬಲ್ಲಿರಿ ಪುಸ್ತಕದ ನೀಡುವಿಕೆಗೆ ನಡೆಸಿರಿ. ಅಥವಾ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವನ್ನು ನೇರವಾಗಿ ಪರಿಚಯಿಸಬಹುದು. ಪುಟ 157 ರಲ್ಲಿ ನಮೂದಿಸಲಾದಂಥ ಕೀರ್ತನೆ 37:9, 10 ಕ್ಕೆ ಗಮನವನ್ನು ಸೆಳೆದು, ಅದನ್ನು ಪುಸ್ತಕದಿಂದ ಓದಬಹುದು. ಪುಟಗಳು 156-7 ರಲ್ಲಿರುವ ಚಿತ್ರಣವನ್ನು ಉಪಯೋಗಿಸುತ್ತಾ, ದುಷ್ಟತನವು ಇಲ್ಲದೆಹೋದಾಗ ಭೂವ್ಯಾಪಕವಾಗಿ ನೆಲೆಸಲಿರುವ ನೀತಿಯ ಪರಿಸ್ಥಿತಿಗಳನ್ನು ವಿವರಿಸಿರಿ.
3 ಪುಸ್ತಕದ ನೀಡುವಿಕೆಯು ನಿರಾಕರಿಸಲ್ಪಟ್ಟಲ್ಲಿ ಯಾ ಮನೆಯವನು ಬಹಳ ಕಾರ್ಯಮಗ್ನನಾಗಿದ್ದಲ್ಲಿ, ಕಾವಲಿನಬುರುಜು ಮತ್ತು ಎಚ್ಚರ! ವನ್ನು ನೀಡಲು ಸದಾ ಸಿದ್ಧರಾಗಿರಿ. ನೈತಿಕತೆಯ ಕುಸಿತದೆಡೆಗೆ ಎಲ್ಲೆಡೆಯೂ ಜನರು ಭಯಗೊಂಡಿದ್ದಾರೆ. ಇಂಗ್ಲಿಷ್ ಸಂಚಿಕೆಯ ಆಗಸ್ಟ್ 8 ರ ಎಚ್ಚರ! ಪತ್ರಿಕೆಯನ್ನು ನೀವು ಓದುವಾಗ, ನಿಮ್ಮ ಟೆರಿಟೊರಿಯಲ್ಲಿ ಜನರೊಳಗೆ ಆಸಕ್ತಿಯನ್ನು ಕೆರಳಿಸಬಹುದೆಂದು ನಿಮಗೆ ಅನಿಸುವ ಕೆಲವೊಂದು ಅಂಶಗಳನ್ನು ಹೆಕ್ಕಿ ತೆಗೆಯಿರಿ. ಸದ್ಯದ ಕೆಟ್ಟ ಪರಿಸ್ಥಿತಿಗಳ ಮೇಲೆ ಹೆಚ್ಚು ಕಾಲ ನೆಲೆಸದೆ, ಎಚ್ಚರ! ದ ಈ ಸಂಚಿಕೆಯಲ್ಲಿರುವ “ಪರಿಪೂರ್ಣ ನೈತಿಕ ಮಾರ್ಗದರ್ಶನ” ಎಂಬ ಲೇಖನದ ಕಡೆಗೆ ಮನೆಯವನ ಗಮನವನ್ನು ಸೆಳೆಯಿರಿ ಮತ್ತು ದೇವರ ವಾಕ್ಯದ ಸಲಹೆಗೆ ಕಿವಿಗೊಡುವುದರ ಪ್ರಯೋಜನಗಳ ಕುರಿತು ಸಕಾರಾತ್ಮಕವಾಗಿ ಮಾತಾಡಿರಿ. ತಿಂಗಳ ಕೊನೆಯ ಭಾಗದಲ್ಲಿ, ಇಂಗ್ಲಿಷ್ ಸಂಚಿಕೆಯ ಆಗಸ್ಟ್ 22 ರ ಎಚ್ಚರ! ವನ್ನು ನೀವು ಪರಿಚಯಪಡಿಸುವಾಗ, “ಎಲ್ಲಾ ಕುಲಗಳು ಜೊತೆಯಾಗಿ ಶಾಂತಿಯಲ್ಲಿ ಜೀವಿಸುವಾಗ” ಎಂಬ ಲೇಖನದ ಕಡೆಗೆ ಗಮನವನ್ನು ಸೆಳೆಯಿರಿ. ವಿಭಿನ್ನ ಕುಲಗಳ ಜನರ ನಡುವೆ ಶಾಂತಿಭರಿತ ಸಂಬಂಧಗಳನ್ನು ಹೊಂದಲು ಬೈಬಲಿನ ಸಲಹೆಯನ್ನು ಎತ್ತಿತೋರಿಸಿರಿ. ದೇಶೀಯ ಭಾಷೆಗಳ ಆಗಸ್ಟ್ 8 ರ ಎಚ್ಚರ! ದ ಪ್ರಥಮ ಲೇಖನದ ಶೀರ್ಷಿಕೆಯು ಅನೇಕ ಜನರು ಕೇಳುವಂಥ ಪ್ರಶ್ನೆಯನ್ನು ಕೇಳುತ್ತದೆ: “ದೇವರು ಯುದ್ಧದಲ್ಲಿ ಪಕ್ಷ ವಹಿಸುತ್ತಾನೊ?” “ಯುದ್ಧಾಂತ್ಯಕ್ಕೆ ಯಾವ ನಿರೀಕ್ಷೆ?” ಎಂಬ ಆ ಸಂಚಿಕೆಯ ಎರಡನೆಯ ಲೇಖನದಲ್ಲಿ ಚರ್ಚಿಸಲಾದ, ನಮ್ಮ ಮುಂದಿರುವ ಅದ್ಭುತಕರ ಪ್ರತೀಕ್ಷೆಗಳ ಕಡೆಗೆ ನೀವು ಮನೆಯವನ ಗಮನವನ್ನು ಸೆಳೆಯಬಲ್ಲಿರಿ. ಪತ್ರಿಕೆ ನೀಡುವಿಕೆಗೆ ವಿಶೇಷ ದಿನಗಳನ್ನು ಬದಿಗಿಟ್ಟಿರುವುದರ ಜೊತೆಗೆ ಯಾವುದೇ ಸಮಯದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರಚಲಿತ ಹಾಗೂ ಹಳೆಯ ಸಂಚಿಕೆಗಳನ್ನು ತೋರಿಸಬಹುದು.
4 ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ಕೆರಳಿಸುವುದು ನಮ್ಮ ಉದ್ದೇಶವಾಗಿದೆ ಎಂಬುದನ್ನು ನೆನಪಿನಲ್ಲಿಡಿ. ಆಲಿಸುವಂಥ ವ್ಯಕ್ತಿಯನ್ನು ಕಂಡುಕೊಳ್ಳಲು, ನಾವು ಮೊದಲು ಮನೆಯವನ ಗಮನವನ್ನು ಸೆಳೆದು ಅವನ ಯೋಚನೆಯನ್ನು ಪ್ರಚೋದಿಸಬೇಕು. ಮಾನವಕುಲಕ್ಕೆ ಆತನ ಉದ್ದೇಶದ ಸಂಬಂಧದಲ್ಲಿ “ಸತ್ಯದೇವರಾದ ಯೆಹೋವನು ಏನು ಹೇಳುತ್ತಾನೋ ಅದನ್ನು ಕೇಳಲು,” ಕುರಿಗಳಂಥ ಜನರು ಬಯಸುವಂತೆ ಇದು ಮಾಡುವುದು.—ಕೀರ್ತ. 85:8 NW.