ಎಲ್ಲರಿಗಾಗಿ ಒಂದು ವಿಶೇಷ ರಾಜ್ಯ ವಾರ್ತೆ
1 ಎಪ್ರಿಲ್ 24 ರಿಂದ ಆರಂಭಿಸಿ, ಎಲ್ಲೆಲ್ಲೂ ಚಿಂತಿತ ಜನರ ಆಸಕ್ತಿಯನ್ನು ಕೆರಳಿಸಿರುವ ವಿಶೇಷ ರಾಜ್ಯ ವಾರ್ತೆಯ ಸಾಮಾನ್ಯ ವಿತರಣೆಯನ್ನು ನಾವು ಆರಂಭಿಸಿದೆವು! ಅದರ ಸಂದೇಶವು ಸಮಯೋಚಿತವಾಗಿದೆ ಮಾತ್ರವಲ್ಲ ಅದು ತುರ್ತಿನದ್ದು ಸಹ ಆಗಿದೆ. ಈ ಸಂದೇಶವನ್ನು ಸಾವಿರಾರು ಜನರ ಕೈಗಳಿಗೆ ಸೇರಿಸಲು ಬಯಸುತ್ತಾ, ಪ್ರತಿ ಸಭೆಯಲ್ಲಿರುವ ಪ್ರಚಾರಕರು ಪೂರ್ಣಹೃದಯದ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನೀವು ಒಂದು ಪೂರ್ಣ ಪಾಲನ್ನು ತೆಗೆದುಕೊಳ್ಳಲು ಎಟುಕಿಸಿಕೊಳ್ಳುತ್ತಿದ್ದೀರೋ?
2 ಪ್ರತಿಯೊಬ್ಬ ಪ್ರಚಾರಕನಿಗೆ ಸರಿಸುಮಾರು 50 ಮತ್ತು ಪ್ರತಿ ಪಯನೀಯರನಿಗೆ 250ನ್ನು ಒದಗಿಸುತ್ತಾ, ಪ್ರತಿಯೊಂದು ಸಭೆಗೆ ರಾಜ್ಯ ವಾರ್ತೆಯ ಒಂದು ಸಂಗ್ರಹವನ್ನು ಕಳುಹಿಸಲಾಯಿತು. ನೀವು ಎಷ್ಟನ್ನು ಹಂಚಲು ಶಕ್ತರಾಗಿದ್ದೀರಿ? ನೀವು ನಿರೀಕ್ಷಿಸಿದಷ್ಟನ್ನು ಹಂಚಲು ಶಕ್ತರಾಗದಿದ್ದಲ್ಲಿ, ಮೇ 14 ರಂದು ವಿತರಣೆಯು ಕೊನೆಗೊಳ್ಳುವ ಮುಂಚೆ ಹೆಚ್ಚನ್ನು ಮಾಡುವ ವಿಧಗಳನ್ನು ನೀವು ಪರಿಗಣಿಸಿದ್ದೀರೋ? ಒಬ್ಬ ಆಕ್ಸಿಲಿಯರಿ ಪಯನೀಯರಾಗಿ ನಮೂದಿಸಿಕೊಳ್ಳುವ ಕುರಿತಾಗಿ ಏನು? ಸಂಜೆ ಸಾಕ್ಷಿ ಕಾರ್ಯಗಳಿಗಿರುವಂತೆಯೇ, ವಾರದಲ್ಲಿರುವ ಸೇವೆಗಾಗಿರುವ ಅಧಿಕ ಕೂಟಗಳ ಲಾಭವನ್ನು ನೀವು ತೆಗೆದುಕೊಳ್ಳಬಹುದೋ?
3 ಹಿರಿಯರು ಟೆರಿಟೊರಿಯ ಆವರಿಸುವಿಕೆಯನ್ನು ಜಾಗ್ರತೆಯಿಂದ ಪುನರ್ವಿಮರ್ಶಿಸಲಿರುವರು. ಸಭೆಗೆ ಅದರ ಎಲ್ಲಾ ಟೆರಿಟೊರಿಯನ್ನು ಆವರಿಸಲು ಸಾಧ್ಯವಾಗದಿರಬಹುದು, ಆದುದರಿಂದ ಹತ್ತಿರದ ಒಂದು ಸಭೆಯು ತನ್ನ ಟೆರಿಟೊರಿಯನ್ನು ಕಿರುಹೊತ್ತಗೆಯೊಂದಿಗೆ ಪೂರ್ಣವಾಗಿ ಆವರಿಸಿರುವುದಾದರೆ, (ಇದು ಕೆಲವೇ ವಿದ್ಯಮಾನಗಳಲ್ಲಿ ಸಂಭವಿಸಬಹುದು,) ಸಹಾಯವನ್ನು ಪಡೆಯಲು ಹಿರಿಯರು ಆ ಸಭೆಯನ್ನು ಸಂಪರ್ಕಿಸಬೇಕು. ಸಭೆಗಳ ನಡುವೆ ಒಳ್ಳೆಯ ಸಹಕಾರದೊಂದಿಗೆ ನಮ್ಮ ಪೂರ್ಣಹೃದಯದ ಪ್ರಯತ್ನಗಳು, ಕೆಲಸವನ್ನು ಪೂರೈಸಬೇಕು.
4 ಹೊಸ ಪ್ರಚಾರಕರು ಮತ್ತು ಎಳೆಯರನ್ನು ಒಳಗೂಡಿಸಿ, ಇಷ್ಟೊಂದು ಮಂದಿ ಭಾಗವಹಿಸಲು ಶಕ್ತರಾಗಿದದ್ದರಿಂದ, ನೀವು ಈ ಕೆಲಸದಲ್ಲಿ ಅಧಿಕ ಆನಂದವನ್ನು ಅನುಭವಿಸಿರಬಹುದು. ಆಶಾಜನಕವಾಗಿ, ಅನುಕೂಲಕರವಾಗಿ ಪ್ರತಿಕ್ರಿಯಿಸಿದವರನ್ನು ಪುನಃ ಸಂದರ್ಶಿಸುವ ಮೂಲಕ ಆಸಕ್ತಿಯನ್ನು ಹಿಂಬಾಲಿಸಲು ಎಲ್ಲರನ್ನು ಪ್ರೋತ್ಸಾಹಿಸುತ್ತಾ ಈ ಆನಂದದ ಆತ್ಮವು ಎತ್ತಿಹಿಡಿಯಲ್ಪಡುವುದು. ಆಸಕ್ತಿಯನ್ನು ತೋರಿಸಿದವರ ಲಕ್ಷ್ಯವಿಡುತ್ತಾ ಮನೆ ಮನೆಯ ನಿಷ್ಕೃಷ್ಟ ರೆಕಾರ್ಡುಗಳನ್ನು ಇಡುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿತ್ತು. ಹೊಸ ಅಧ್ಯಯನಗಳನ್ನು ಆರಂಭಿಸುವ ನೋಟದೊಂದಿಗೆ ಪುನರ್ಭೇಟಿಗಳನ್ನು ಮಾಡುವುದರ ಮೇಲೆ ಕೇಂದ್ರೀಕರಿಸಲು ಮೇ ತಿಂಗಳ ಕೊನೆಯ ಭಾಗವು ಸುಸಮಯವಾಗಿರುವುದು.
5 ನಾವು ಹಿಂದಿರುಗಿ ಹೋದಾಗ ನಾವೇನನ್ನು ಹೇಳಬಲ್ಲೆವು? ನೀವು ಹೀಗೆ ಹೇಳುವುದನ್ನು ಪರಿಣಾಮಕಾರಿಯಾಗಿ ಕಂಡುಕೊಳ್ಳಬಹುದು: “ಇತ್ತೀಚೆಗೆ ನಾನು ನಿಮ್ಮೊಂದಿಗೆ ಬಿಟ್ಟುಹೋದ ಮುದ್ರಿತ ಮಾಹಿತಿಯನ್ನು ನೀವು ನೆನಪಿಸಿಕೊಳ್ಳಬಹುದು; ಅದನ್ನು ಓದಲು ಮತ್ತು ವಿಷಯವನ್ನು ಪರ್ಯಾಲೋಚಿಸಲು ನಿಮಗೆ ಒಂದು ಅವಕಾಶವಿತ್ತೆಂದು ನಾನು ನಿರೀಕ್ಷಿಸುತ್ತೇನೆ. ಅದು ಎಲ್ಲಾ ಮಾನವಕುಲವನ್ನು ಎದುರಿಸುತ್ತಿರುವ ಅತಿ ಪ್ರಮುಖ ವಿವಾದಾಂಶಗಳನ್ನು ಸೂಚಿಸಿ ಮಾತಾಡುವುದರಿಂದ ಅದರ ಸಂದೇಶವು ನಮ್ಮ ಸಮುದಾಯದಲ್ಲಿ ತುಂಬ ಚರ್ಚೆಯನ್ನು ಉಂಟುಮಾಡಿದೆ.” ಎರಡನೆಯ ಪುಟ್ಟದಲ್ಲಿರುವ ವಿಚಾರ-ಪ್ರೇರಕ ಹೇಳಿಕೆಗಳಲ್ಲಿ ಕೆಲವಕ್ಕೆ ಸೂಚಿಸುತ್ತಾ ಕೇಳಿರಿ: “ಭವಿಷ್ಯವು ಏನನ್ನು ತರಲಿದೆಯೋ ಅದಕ್ಕಾಗಿ ನಾವು ಸಿದ್ಧರಾಗಿದ್ದೇವೆಂದು ಖಚಿತಪಡಿಸಲಿಕ್ಕಾಗಿ ನಾವೇನನ್ನು ಮಾಡುವ ಅಗತ್ಯವಿದೆಯೆಂದು ನೀವು ನೆನಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ರಾಜ್ಯ ವಾರ್ತೆಯ 2-4 ಪುಟಗಳಲ್ಲಿರುವ ಇತರ ಅಂಶಗಳನ್ನು ಚರ್ಚಿಸಿರಿ, ಮತ್ತು ಒಂದು ಬೈಬಲ್ ಅಭ್ಯಾಸವನ್ನು ನೀಡಿರಿ ಅಥವಾ, ಅದು ಸಾಧ್ಯವಿರದಿದ್ದಲ್ಲಿ ಇತ್ತೀಚೆಗಿನ ಪತ್ರಿಕೆಗಳನ್ನು ನೀಡಿರಿ.
6 ಇನ್ನೊಂದು ಸಭೆಯ ಟೆರಿಟೊರಿಯಲ್ಲಿ ಕೆಲಸಮಾಡಲು ನೀವು ಆಮಂತ್ರಿಸಲ್ಪಟ್ಟಲ್ಲಿ, ನೀವು ಕಂಡುಹಿಡಿಯುವ ಯಾವುದೇ ಆಸಕ್ತ ವ್ಯಕ್ತಿಗಳ ಹೆಸರುಗಳನ್ನು ಆ ಸಭೆಗೆ ಕೊಡಲು ನಿಶಿತ್ಚರಾಗಿರ್ರಿ, ಹೀಗೆ ಆ ಸಭೆಯ ಪ್ರಚಾರಕರಿಂದ ಪುನರ್ಭೇಟಿಗಳು ಮಾಡಲ್ಪಡಸಾಧ್ಯವಿದೆ. ತದ್ರೀತಿಯಲ್ಲಿ, ನಿಮಗೆ ಪುನರ್ಸಂದರ್ಶಿಸಲು ಕೆಲವು ಭೇಟಿಗಳು ಕೊಡಲ್ಪಟ್ಟಲ್ಲಿ, ತಡವಿಲ್ಲದೆ ಹಿಂದಿರುಗಲು ತಪ್ಪದಿರ್ರಿ.
7 ರಾಜ್ಯ ವಾರ್ತೆಯ ವಿಶೇಷ ವಿತರಣೆಯು ಉದ್ರೇಕವನ್ನು ಉಂಟುಮಾಡಿದೆ ಮತ್ತು ರಾಜ್ಯ ಸಾರುವಿಕೆಯ ಕಾರ್ಯದಲ್ಲಿನ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲು ನಮ್ಮೆಲ್ಲರನ್ನು ಪ್ರಚೋದಿಸಿದೆ. ಯೆಹೋವನ ಮಹತ್ತಾದ ಹೆಸರು ಮತ್ತು ಉದ್ದೇಶಗಳ ಕುರಿತಾಗಿ ಎಲ್ಲೆಲ್ಲೂ ಜನರ ಅರಿವನ್ನು ಹೆಚ್ಚಿಸುತ್ತಾ ಅದು ಅತಿ ಮಹತ್ತಾದ ಒಂದು ಯಶಸ್ಸಾಗಿರುವುದು ಎಂಬದರ ಕುರಿತಾಗಿ ನಾವು ಭರವಸೆಯಿಂದಿರಬಲ್ಲೆವು. (ಯೆಶಾ. 12:4, 5) ನಾವು ಶಕ್ತರಾಗಿರುವಷ್ಟು ಹೆಚ್ಚನ್ನು ಮಾಡುವುದಾದರೆ, ನಮ್ಮ ಆನಂದವು ಇನ್ನೂ ಹೆಚ್ಚು ಮಹತ್ತಾಗಿರುವುದು.—ಕೀರ್ತ. 126:3.