ಮಹತ್ತಾದ ವಿಷಯಗಳುಳ್ಳ ಪತ್ರಿಕೆಗಳು
1 ವಾಚ್ಟವರ್ ಮತ್ತು ಎವೇಕ್! ಪತ್ರಿಕೆಯ ಎಪ್ರಿಲ್ ಮತ್ತು ಮೇ ಸಂಚಿಕೆಗಳು ಒಂದು ಸಂತೋಷದ ಭವಿಷ್ಯವನ್ನು ಹುಡುಕುವ ಎಲ್ಲರಿಗಾಗಿ ಆಸಕ್ತಿಯುಳ್ಳ ಗಮನಾರ್ಹ ಲೇಖನಗಳನ್ನು ಪ್ರಕಾಶಿಸಲಿವೆ. ಉದಾರಣೆಗಾಗಿ, “ಹು ವಿಲ್ ಲೀಡ್ ಮ್ಯಾನ್ಕೈಂಡ್ ಟು ಪೀಸ್” ಮತ್ತು “ವರ್ಲ್ಡ್ ಪೀಸ್— ವಾಟ್ ವಿಲ್ಲ್ ಇಟ್ ರಿಯಲಿ ಮೀನ್?” ಎಂಬ ವಿಷಯಗಳು ಎಪ್ರಿಲ್ 1, ಎಪ್ರಿಲ್ 15 ರ ವಾಚ್ಟವರ್ ನಲ್ಲಿ ಬರಲಿವೆ. (ದೇಶೀಯ ಭಾಷೆಯ ಪತ್ರಿಕೆಗಳು ಎಪ್ರಿಲ್ ಮತ್ತು ಮೇ ಸಂಚಿಕೆಗಳಲ್ಲಿ “ನೂತನ ಲೋಕ ಅತಿ ಹತ್ತಿರ”, “ನೂತನಲೋಕ ಪ್ರಮೋದವನ ಪುನ:ಸಂಪಾದಿಸಲ್ಪಡುತ್ತದೆ” ಮತ್ತು “ನೀವು ಹೊಸ ವಿಚಾರಗಳಿಗೆ ತೆರೆದಿರುತ್ತೀರೋ?” ಎಂಬ ಲೇಖಗಳನ್ನು ಕೊಡಲಿವೆ.)
2 ಎಪ್ರಿಲ್ ಮತ್ತು ಮೇ ತಿಂಗಳ ಎವೇಕ್! ನಲ್ಲಿ “ವಾಟ್ ಪ್ರಾಸ್ಪೆಕ್ಟ್ಸ್ ಫಾರ್ ಲಾಂಗರ್ ಲೈಫ್?, “ಎ ಕ್ಲೀನ್ ಅರ್ಥ್—ವಿಲ್ ಯು ಲಿವ್ ಟು ಸೀ ಇಟ್?” ಮತ್ತು “ಎ ವರ್ಲ್ಡ್ ವಿದೌಟ್ ಗನ್ಸ್—ಈಸ್ ಇಟ್ ಪಾಸಿಬಲ್?” ಲೇಖನಗಳು ಬರಲಿವೆ. (ದೇಶೀಯ ಭಾಷೆಯಲ್ಲಿ ಕೆಳಗಿನ ವಿಷಯಗಳಿರುವವು: “ವಾಟ್ ಈಸ್ ಹೆಪ್ಪನಿಂಗ್ ಟು ವೇಲ್ಯೂಸ್?” ಮತ್ತು “ಹೊಲೊಕಾಸ್ಟ್—ವೈ ಶುಡ್ ಯು ಕ್ಯಾರ್?”) ನಿಮ್ಮ ಕ್ಷೇತ್ರದ ಜನರಿಗೆ ಈ ಸಂಚಿಕೆಗಳನ್ನೋದುವ ಸಂದರ್ಭಕೊಡಬೇಕೆಂದು ನೀವು ಒಪ್ಪುವಿರೋ?
ಅಧಿಕವಾಗಿ ಭಾಗವಹಿಸುವಿಕೆ
3 ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರಲಿರುವ ಈ ಎಲ್ಲಾ ಮಹತ್ತಾದ ಪತ್ರಿಕೆಗಳನ್ನು ಹಂಚುವದರಲ್ಲಿ ಪೂರ್ಣವಾಗಿ ಭಾಗವಹಿಸಲು ನಾವೀಗ ಯೋಜಿಸಬೇಕು. ಪತ್ರಿಕೆ ಹಂಚುವಿಕೆಗೆ ಎಂದಿಗಿಂತ ಹೆಚ್ಚು ಸಮಯವನ್ನು ಮೀಸಲಾಗಿಡಲು ನಾವೇಕೆ ಏರ್ಪಡಿಸಬಾರದು? ಅಂತಹ ಸಮಯೋಚಿತ ವಿಷಯಗಳಿರುವಾಗ ನಾವು ಉತ್ಸಾಹದಿಂದಲೂ ಆತ್ಮವಿಶ್ವಾಸದಿಂದಲೂ ಪತ್ರಿಕೆ ನೀಡ ಸಾಧ್ಯವಿದೆ.
4 ನಮ್ಮ ಪತ್ರಿಕಾ ನೀಡುವಿಕೆಯನ್ನು ಹೆಚ್ಚಿಸಲು ನಮಗೆ ಯಾವುದು ಸಹಾಯ ಮಾಡುವುದು? ಮೊದಲನೇದಾಗಿ, ಪತ್ರಿಕೆಗಳನ್ನು ಪೂರ್ಣವಾಗಿ ನಾವು ಓದಬೇಕಾಗಿದೆ. ಪತ್ರಿಕೆಗಳೊಂದಿಗೆ ನಾವು ಎಷ್ಟು ಹೆಚ್ಚು ಪರಿಚಿತರೋ ಅಷ್ಟು ಹೆಚ್ಚು ಉತ್ಸಾಹದಿಂದ ನಾವದನ್ನು ನೀಡಬಲ್ಲೆವು. ಓದುವಾಗ, ವಿವಿಧ ಲೇಖನಗಳಲ್ಲಿ ಒತ್ತಿಹೇಳಬಹುದಾದ ಮುಖ್ಯಾಂಶವನ್ನು ನಾವು ಕಂಡು ಹಿಡಿಯ ಪ್ರಯತ್ನಿಸಬೇಕು. ನಿರ್ದಿಷ್ಟ ಜನರಿಗೆ ಅಪ್ಪಿಲಾಗುವ ಯಾವ ವಿಷಯ ಪ್ರತಿ ಲೇಖನದಲ್ಲಿದೆ? ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ವಿಶೇಷವಾಗಿ ಯಾರು ಈ ಲೇಖನವನ್ನು ಗಣ್ಯಮಾಡುವರು? ಒಬ್ಬ ನೆರೆಯವನಿಗೆ, ಪರಿಚಿತನಿಗೆ, ವ್ಯಾಪಾರಿಗೆ, ವಿದ್ಯಾರ್ಥಿಯೇ ಮುಂತಾದವರಿಗೆ ಯಾವುದು ಅಪ್ಪೀಲಾಗಬಹುದು?’ ನಿಜವಾಗಿ ಪರಿಣಾಮಕಾರಿಯಾಗಬೇಕಾದರೆ, ಸಮಯೋಚಿತ ಲೇಖನಗಳ ವಿಷಯ ನಮಗಿರುವ ತಿಳುವಳಿಕೆ ಮತ್ತು ದೊರೆತ ಆನಂದದಲ್ಲಿ ಆಧರಿತವಾದ ವೈಯಕ್ತಿಕ ಶಿಫಾರಸನ್ನು ನಾವು ಮಾಡಶಕ್ತರಾಗಬೇಕು.
ವೈಯಕ್ತಿಕ ಗುರಿಯನ್ನಿಡಿರಿ
5 ಕೆಲವರು ಎಪ್ರಿಲ್ ಮತ್ತು ಮೇ ಯಲ್ಲಿ ಪತ್ರಿಕೆ ನೀಡುವಿಕೆಯ ಒಂದು ವೈಯಕ್ತಿಕ ಗುರಿಯನ್ನಿಡಲು ಬಯಸಬಹುದು. ಹಾಗೆ ಮಾಡುವುದಾದರೆ, ನಿಮ್ಮ ಪತ್ರಿಕೆ ಆರ್ಡರಿನಲ್ಲಿ ಅನುರೂಪಕ ವೃದ್ಧಿಯನ್ನು ವಿನಂತಿಸಲು ಮರೆಯದಿರ್ರಿ. ಇದನ್ನು ಕೂಡಲೇ ಮಾಡಬೇಕು, ವಿಶೇಷವಾಗಿ ಈ ತಿಂಗಳುಗಳಲ್ಲಿ ಸಹಾಯಕ ಪಯನೀಯರರಾಗಲು ನೀವು ಯೋಚಿಸುವುದಾದರೆ.
6 ಮನೆಮನೆಯ ಸೇವೆಯಲ್ಲಿ ಮಾತ್ರವಲ್ಲದೆ ಬೇರೆ ಅನೇಕ ವಿಧಾನಗಳಲ್ಲೂ ನಾವು ಪತ್ರಿಕೆ ನೀಡಬಲ್ಲೆವು. ಬೀದಿ ಸಾಕ್ಷಿಯಲ್ಲಿ ಮತ್ತು ಕೆಲ್ಸಕ್ಕಾಗಿ ಹೋಗುವಾಗ ಪತ್ರಿಕೆಗಳನ್ನು ನೀಡ ಸಾಧ್ಯವಿದೆ. ಅನೇಕ ಸಹೋದರರು ಪತ್ರಿಕಾ ಮಾರ್ಗಗಳನ್ನು ಸ್ಥಾಪಿಸಿದ್ದಾರೆ. ಆಸಕ್ತ ಜನರೊಂದಿಗೆ ಪುನ:ರ್ಭೇಟಿ ಮಾಡುವಾಗ ಹೊಸ ಸಂಚಿಕೆಗಳನ್ನು ಬಿಟ್ಟುಹೋಗಬಹುದು. ಅನೌಪಚಾರಿಕ ಸಾಕ್ಷಿ ಸಹಾ ಪತ್ರಿಕೆ ನೀಡಲು ಮತ್ತು ಸಾಕ್ಷಿಕೊಡಲು ಅತ್ಯುತ್ತಮ ಮಾರ್ಗವು. ಕೆಲವುಸಾರಿ ಪತ್ರಿಕೆಗಳ ಕಣ್ಸೆಳೆಯುವ ರಕ್ಷಾವರಣವನ್ನು ಬರೇ ತೋರಿಸುವುದೇ ಪತ್ರಿಕೆ ನೀಡಲು ಅಥವಾ ಸಂಭಾಷಣೆ ಆರಂಭಿಸಲು ಸಾಕಾಗುವುದು.
7 ನಮ್ಮ ಪತ್ರಿಕೆಗಳ ಪ್ರತ್ಯೇಕತೆಯನ್ನು ನೆನಪಿನಲ್ಲಿಡಿರಿ. ಅವು ಶಾಂತಿ, ಸಂತೋಷ ಮತ್ತು ನಿತ್ಯಜೀವಕ್ಕೆ ದಾರಿ ತೋರಿಸುತ್ತವೆ. (ಯೋಹಾ. 17:3) ಆದ್ದರಿಂದ ವಾಚ್ಟವರ್ ಮತ್ತು ಎವೇಕ್! ನ ಎಪ್ರಿಲ್ ಮತ್ತು ಮೇ ಸಂಚಿಕೆಗಳಲ್ಲಿ ಪ್ರಕಟವಾಗಲಿರುವ ಮಹತ್ತಾದ ಲೇಖನಗಳೊಂದಿಗೆ ಅಧಿಕ ಚಟುವಟಿಕೆಗಾಗಿ ಈಗಲೇ ಯೋಜಿಸಿರಿ.