ನಿಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸಿರಿ
1 ನಿವಾಸಿತ ಕ್ಷೇತ್ರಗಳಲ್ಲಿ, ಆಗಿಂದಾಗ್ಗೆ ನಾವು ಒಂದು ಕಿರಾಣಿ ಅಂಗಡಿ, ರೆಸ್ಟೊರೆಂಟ್, ಅಥವಾ ಚಿಲ್ಲರೆ ವ್ಯಾಪಾರ ಅಂಗಡಿಯಂತಹ ಒಂದು ಚಿಕ್ಕ ವ್ಯಾಪಾರ ಸ್ಥಳವನ್ನು ಎದುರಾಗುತ್ತೇವೆ. ಈ ಟೆರಿಟೊರಿಯ ಉಳಿದ ಭಾಗದೊಂದಿಗೆ ಈ ವ್ಯಾಪಾರ ಸಂಸ್ಥೆಗಳು ಆವರಿಸಲ್ಪಡಬೇಕಾದರೆ, ನೀವು ಅವುಗಳನ್ನು ನಿವಾಸಗಳನ್ನು ಸಂದರ್ಶಿಸುವಂತೆಯೇ ಸಂದರ್ಶಿಸಬೇಕು.
2 ಪ್ರಾಯಶಃ ಹೀಗೆ ಹೇಳುತ್ತಾ, ನೀವು ಒಂದು ಸರಳವಾದ, ಸಂಕ್ಷಿಪ್ತ ನಿರೂಪಣೆಯನ್ನು ಉಪಯೋಗಿಸಬಲ್ಲಿರಿ: “ನಾನು ನಿಮಗೆ ತೋರಿಸಲು ಇಷ್ಟಪಡುವ ಒಂದು ವಿಷಯವು ನನ್ನಲ್ಲಿದೆ.” ಯಜಮಾನನು ಆ ಕ್ಷಣದಲ್ಲಿ ಕಾರ್ಯಮಗ್ನನಾಗಿರುವಂತೆ ತೋರುವಲ್ಲಿ, ನೀವು ಕೇವಲ ಒಂದು ಕಿರುಹೊತ್ತಗೆಯನ್ನು ನೀಡಿ ಹೀಗೆ ಹೇಳಬಹುದು: “ನೀವು ಇಷ್ಟು ಕಾರ್ಯಮಗ್ನರಾಗಿರದ ಒಂದು ಸಮಯದಲ್ಲಿ ನಾನು ಪುನಃ ಬರುವೆ. ನೀವು ಇದರ ಕುರಿತಾಗಿ ಏನು ನೆನಸುತ್ತೀರೆಂಬುದನ್ನು ತಿಳಿದುಕೊಳ್ಳಲು ನಾನು ಇಷ್ಟಪಡುತ್ತೇನೆ.”
3 ಈ ಕೆಲಸವನ್ನು ಮಾಡುವುದಕ್ಕಾಗಿ ಭಯಭರಿತರಾಗುವ ಅಗತ್ಯವಿಲ್ಲ. ಒಬ್ಬ ಪ್ರಚಾರಕನು ವರದಿಸಿದ್ದು: “ಪ್ರತಿಕ್ರಿಯೆಯು ನಕಾರಾತ್ಮಕವಾಗಿರುವುದೆಂದು ನಾನು ನಿರೀಕ್ಷಿಸಿದ್ದೆ. ಆದಾಗಲೂ, ನನ್ನನ್ನು ಆಶ್ಚರ್ಯಪಡಿಸುತ್ತಾ, ರಾಜ್ಯ ಸಂದೇಶದೆಡೆಗಿನ ಪ್ರತಿಕ್ರಿಯೆಯು ಅದಕ್ಕೆ ತದ್ವಿರುದ್ಧವಾಗಿತ್ತು. ಅವರು ನಿಜವಾಗಿ ಸೌಮ್ಯಭಾವದವರೂ ಸ್ನೇಹಪರರೂ ಆಗಿದ್ದರು, ಮತ್ತು ಬಹುಮಟ್ಟಿಗೆ ಯಾವಾಗಲೂ ಪತ್ರಿಕೆಗಳನ್ನು ಸ್ವೀಕರಿಸಿದರು.”
4 ಒಂದು ಸ್ಥಿರಾಸ್ತಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದಒಬ್ಬ ಸ್ತ್ರೀಯು, ಸಾಕ್ಷಿಗಳನ್ನು ತನ್ನ ಆಫೀಸಿನೊಳಗೆ ಆಮಂತ್ರಿಸಿದಳು. ಅವಳು ಪತ್ರಿಕೆಗಳನ್ನು ಸ್ವೀಕರಿಸಿ, ಒಂದು ಬೈಬಲ್ ಅಭ್ಯಾಸವನ್ನು ಹೊಂದುವುದರಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಳು. ಅವಳಿಗೆ ಜ್ಞಾನ ಪುಸ್ತಕವನ್ನು ತೋರಿಸಲಾಯಿತು, ಮತ್ತು ತತ್ಕ್ಷಣವೇ, ಅಲ್ಲಿಯೇ ಅವಳ ಆಫೀಸಿನಲ್ಲಿ ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು!
5 ನಿಮ್ಮ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸುವ ನೇಮಕವು, ನೆರೆಹೊರೆಯ ವ್ಯಾಪಾರಗಳನ್ನು ನಡೆಸುವ ವ್ಯಕ್ತಿಗಳನ್ನು ಸಂದರ್ಶಿಸುವುದನ್ನು ಸೇರಿಸುತ್ತದೆ. (ಅ. ಕೃ. 10:42) ಖಾಸಗಿ ಮನೆಗಳನ್ನು ಸಂದರ್ಶಿಸುವಂತೆಯೇ ಈ ಬಾಗಿಲುಗಳಲ್ಲಿ ಸಂದರ್ಶಿಸಲು ಯೋಜಿಸಿರಿ. ಇದು ನಿಮ್ಮ ಟೆರಿಟೊರಿಗೆ ಉತ್ತಮ ಆವರಿಸುವಿಕೆಯನ್ನು ಕೊಡುವುದು ಮಾತ್ರವಲ್ಲ, ಕೆಲವೊಂದು ಹರ್ಷಗೊಳಿಸುವ ಅನುಭವಗಳೊಂದಿಗೆ ನೀವು ಆಶೀರ್ವದಿಸಲ್ಪಡಬಹುದು!