ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ವ್ಯಾಪಾರ ಕ್ಷೇತ್ರದಲ್ಲಿ ಸುವಾರ್ತೆ ಸಾರಿ
ಏಕೆ ಪ್ರಾಮುಖ್ಯ: ಹೆಚ್ಚಿನ ಜನ ತುಂಬ ಹೊತ್ತು ಕೆಲಸ ಮಾಡುವುದರಿಂದ ಅಂಥವರಿಗೆ ಸುವಾರ್ತೆ ಸಾರಲು ನಾವು ಅವರ ಕೆಲಸದ ಸ್ಥಳಕ್ಕೆ ಹೋದರೆ ಉತ್ತಮವಾಗಿರುತ್ತದೆ. ವ್ಯಾಪಾರ ಕ್ಷೇತ್ರಗಳಲ್ಲಿ ಸುವಾರ್ತೆ ಸಾರುವುದರಿಂದ ಒಳ್ಳೇ ಪ್ರತಿಫಲ ಮತ್ತು ಸಂತೋಷ ಸಿಗುತ್ತದೆ. ಯಾಕೆಂದರೆ ಮನೆ-ಮನೆ ಸೇವೆಯಲ್ಲಿ ಕೆಲವೊಮ್ಮೆ ಜನರು ಸಿಗುವುದಿಲ್ಲ, ಆದರೆ ಈ ಸಾಕ್ಷಿಕಾರ್ಯದಲ್ಲಿ ಖಂಡಿತ ಸಿಗುತ್ತಾರೆ. ಅಂಗಡಿಯವರು ಸಹ ‘ಚೆನ್ನಾಗಿ ಮಾತಾಡಿಸಿದರೆ ಈ ಗಿರಾಕಿ ಮತ್ತೆ ಬರುತ್ತಾರೆ’ ಎಂದು ಯೋಚಿಸಿ ನಯ-ವಿನಯದಿಂದ ಮಾತಾಡುತ್ತಾರೆ. ಆದರೆ ಸಾಕ್ಷಿಕಾರ್ಯ ಚೆನ್ನಾಗಿ ಆಗಬೇಕೆಂದರೆ ಪ್ರಚಾರಕರು ವಿವೇಚನೆ ತೋರಿಸಬೇಕು. ಉಡುಪು ಮತ್ತು ಹೊರತೋರಿಕೆಯು ನೀಟಾಗಿರಬೇಕು. (2 ಕೊರಿಂ. 6:3) ಹಾಗಾಗಿ, ವ್ಯಾಪಾರ ಕ್ಷೇತ್ರಗಳಲ್ಲಿ ಎಷ್ಟು ದಿನಕ್ಕೊಮ್ಮೆ ಸಾರಬೇಕು, ಯಾರು ಸಾರಬೇಕು ಅನ್ನೋದನ್ನು ಸೇವಾ ಮೇಲ್ವಿಚಾರಕನು ವಿವೇಚನೆಯಿಂದ ನಿರ್ಧರಿಸಬೇಕು.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ನಿಮ್ಮ ಮುಂದಿನ ಕುಟುಂಬ ಆರಾಧನೆಯಲ್ಲಿ, ವ್ಯಾಪಾರ ಕ್ಷೇತ್ರದಲ್ಲಿ ಹೇಗೆ ಸಾರಬಹುದೆಂಬ ಚುಟುಕಾದ ನಿರೂಪಣೆಯನ್ನು ಅಭ್ಯಾಸ ಮಾಡಿ.