ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/96 ಪು. 2
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 1996 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ರೇಖಾಚೌಕ
    2002 ನಮ್ಮ ರಾಜ್ಯದ ಸೇವೆ
  • ಪತ್ರಗಳ ಮೂಲಕ ಸಂವಾದಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮಾದರಿ ಪತ್ರ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಒಳ್ಳೇ ಪತ್ರಗಳನ್ನು ಬರೆಯಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ಇನ್ನಷ್ಟು
1996 ನಮ್ಮ ರಾಜ್ಯದ ಸೇವೆ
km 11/96 ಪು. 2

ಪ್ರಶ್ನಾ ರೇಖಾಚೌಕ

◼ ಮನೆಯಲ್ಲಿ ನಾವು ಕಂಡುಕೊಳ್ಳಲು ಅಶಕ್ತರಾಗಿದ್ದ ಮನೆಯವರಿಗೆ ಪತ್ರಗಳನ್ನು ಬರೆಯುವಾಗ ನಾವೇನನ್ನು ಮನಸ್ಸಿನಲ್ಲಿಡತಕ್ಕದ್ದು?

ವಿವಿಧ ಕಾರಣಗಳಿಗಾಗಿ, ನಾವು ಜನರ ಮನೆಗಳಿಗೆ ಭೇಟಿನೀಡುವಾಗ ಅವರನ್ನು ಸಂಪರ್ಕಿಸುವುದನ್ನು ನಾವು ಹೆಚ್ಚೆಚ್ಚಾಗಿ ಕಷ್ಟಕರವಾಗುತ್ತಿರುವುದನ್ನು ಕಂಡುಕೊಳ್ಳುತ್ತಿದ್ದೇವೆ. ಪತ್ರ ಬರೆಯುವುದು ಅವರನ್ನು ತಲಪುವ ಒಂದು ವ್ಯಾವಹಾರಿಕ ವಿಧವೆಂದು ಕೆಲವು ಪ್ರಚಾರಕರು ಕಂಡುಹಿಡಿದಿದ್ದಾರೆ. ಇದು ಕೆಲವು ಒಳ್ಳೆಯ ಫಲಿತಾಂಶಗಳನ್ನು ಉತ್ಪಾದಿಸಬಲ್ಲದಾದರೂ, ಕೆಲವೊಂದು ಇಕ್ಕಟ್ಟುಗಳನ್ನು ದೂರಮಾಡಲು ನಮಗೆ ಸಹಾಯ ಮಾಡಬಲ್ಲ ಕೆಲವು ಮರುಜ್ಞಾಪನಗಳನ್ನು ಪರಿಗಣಿಸುವ ಅಗತ್ಯವಿದೆ:

ಹಿಂದಿರುಗಿ ಬರೆಯಲು ಸೊಸೈಟಿಯ ವಿಳಾಸವನ್ನು ಉಪಯೋಗಿಸಬೇಡಿರಿ. ಇದು ಅನಾವಶ್ಯಕವಾದ ಸಮಸ್ಯೆಗಳನ್ನು ಮತ್ತು ಕೆಲವೊಮ್ಮೆ ಹೆಚ್ಚಿನ ವೆಚ್ಚವನ್ನು ಉಂಟುಮಾಡುತ್ತಾ, ಪತ್ರವ್ಯವಹಾರವು ನಮ್ಮ ಆಫೀಸುಗಳಿಂದ ಕಳುಹಿಸಲ್ಪಟ್ಟಿತ್ತೆಂಬುದನ್ನು ಅಯೋಗ್ಯವಾಗಿ ಸೂಚಿಸುವುದು.

ನಿಮ್ಮಲ್ಲಿ ಸರಿಯಾದ ವಿಳಾಸ ಮತ್ತು ಸಾಕಷ್ಟು ಅಂಚೆಯ ಸ್ಟ್ಯಾಂಪ್‌ಗಳು ಇವೆಯೆಂಬುದನ್ನು ಖಚಿತಮಾಡಿಕೊಳ್ಳಿರಿ.

“ನಿವಾಸಿಗೆ” ಎಂದು ಪತ್ರಗಳನ್ನು ಸಂಬೋಧಿಸಬೇಡಿರಿ; ನಿರ್ದಿಷ್ಟ ಹೆಸರನ್ನು ಉಪಯೋಗಿಸಿರಿ.

ಯಾರೂ ಮನೆಯಲ್ಲಿಲ್ಲದಿರುವಾಗ ಪತ್ರಗಳನ್ನು ಬಾಗಿಲಲ್ಲಿ ಬಿಡಬೇಡಿರಿ.

ಸಂಕ್ಷಿಪ್ತ ಪತ್ರಗಳು ಅತ್ಯುತ್ತಮ. ಒಂದು ದೀರ್ಘವಾದ ಸಂದೇಶವನ್ನು ಬರೆಯಲು ಪ್ರಯತ್ನಿಸುವ ಬದಲಿಗೆ ಒಂದು ಕಿರುಹೊತ್ತಗೆ ಅಥವಾ ಒಂದು ಹಳೆಯ ಪತ್ರಿಕೆಯನ್ನು ಒಳಸೇರಿಸಿರಿ.

ಬೆರಳಚ್ಚಿನ ಪತ್ರಗಳನ್ನು ಓದುವುದು ಹೆಚ್ಚು ಸುಲಭ ಮತ್ತು ಒಂದು ಹೆಚ್ಚು ಅನುಕೂಲವಾದ ಪ್ರಭಾವವನ್ನು ಸೃಷ್ಟಿಸುತ್ತವೆ.

ಈ ಹಿಂದೆ ಆ ವ್ಯಕ್ತಿಗೆ ನೀವು ವೈಯಕ್ತಿಕವಾಗಿ ಸಾಕ್ಷಿನೀಡಿರದಿದ್ದಲ್ಲಿ, ಪತ್ರಗಳನ್ನು ಪುನರ್ಭೇಟಿಗಳಾಗಿ ಎಣಿಸಲಾಗುವುದಿಲ್ಲ.

ಈ ಹಿಂದೆ ಆಸಕ್ತಿಯನ್ನು ತೋರಿಸಿದ ಒಬ್ಬ ವ್ಯಕ್ತಿಗೆ ನೀವು ಪತ್ರವನ್ನು ಬರೆಯುತ್ತಿರುವಲ್ಲಿ, ನಿಮ್ಮನ್ನು ಸಂಪರ್ಕಿಸಸಾಧ್ಯವಾಗುವಂತೆ ನೀವು ಒಂದು ವಿಳಾಸ ಅಥವಾ ಫೋನ್‌ ನಂಬ್ರವನ್ನು ಒದಗಿಸತಕ್ಕದ್ದು. ನಮ್ಮ ಬೈಬಲ್‌ ಅಭ್ಯಾಸ ಕಾರ್ಯಕ್ರಮವನ್ನು ವಿವರಿಸಿರಿ.

ಸ್ಥಳಿಕ ಸಭೆಯ ಕೂಟಗಳಿಗೆ ಆಮಂತ್ರಣವನ್ನು ನೀಡಿರಿ. ಕೂಟದ ಸ್ಥಳದ ವಿಳಾಸ ಮತ್ತು ಕೂಟದ ಸಮಯಗಳನ್ನು ಕೊಡಿರಿ.

ಟೆರಿಟೊರಿಯನ್ನು ಸಭೆಗೆ ಹಿಂದಿರುಗಿಸಿದ ನಂತರ ಮನೆಯಲ್ಲಿಲ್ಲದವರಿಗೆ ಪತ್ರಗಳನ್ನು ಕಳುಹಿಸುವುದನ್ನು ಮುಂದುವರಿಸಬೇಡಿರಿ; ಪ್ರಸ್ತುತ ಆ ಟೆರಿಟೊರಿಯನ್ನು ಪಡೆದಿರುವ ಪ್ರಚಾರಕನು ಅದನ್ನು ಆವರಿಸಲು ಜವಾಬ್ದಾರನಾಗಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ