ಪ್ರಶ್ನಾ ರೇಖಾಚೌಕ
◼ ಪತ್ರಗಳ ಮೂಲಕ ಸಾಕ್ಷಿ ನೀಡುವಾಗ ಜಾಗರೂಕರಾಗಿರುವ ಅಗತ್ಯವಿದೆ ಏಕೆ?
ಪತ್ರಗಳ ಮೂಲಕ ಸಾಕ್ಷಿಯನ್ನು ಕೊಡುವುದು, ಸುವಾರ್ತೆಯನ್ನು ಹಂಚಿಕೊಳ್ಳಲಿಕ್ಕಾಗಿ ಪರಿಣಾಮಕಾರಿಯಾದ ವಿಧವಾಗಿದೆ ಎಂಬುದು ದೀರ್ಘ ಸಮಯದಿಂದ ರುಜುವಾಗಿದೆ. ಆದರೆ ಜಗತ್ತಿನಲ್ಲಿನ ಇತ್ತೀಚಿನ ಘಟನೆಗಳು, ಅಪರಿಚಿತ ಪತ್ರಗಳನ್ನು ತೆರೆಯುವುದರ ಬಗ್ಗೆ ಜನರು ಜಾಗರೂಕರಾಗಿರುವಂತೆ ಮಾಡಿದೆ. ಅಜ್ಞಾತ ಮೂಲಗಳಿಂದ ಬಂದಿರುವ ಇಲ್ಲವೆ ಕಳುಹಿಸುವವರ ವಿಳಾಸವಿಲ್ಲದಿರುವ ಲಕೋಟೆಗಳು, ವಿಶೇಷವಾಗಿ ಹಸ್ತಲಿಖಿತವಾಗಿರುವಲ್ಲಿ ಮತ್ತು ಭಾರವಾಗಿರುವಲ್ಲಿ, ಅವುಗಳನ್ನು ಶಂಕೆಯ ದೃಷ್ಟಿಯಿಂದ ನೋಡಲಾಗುತ್ತದೆ. ಮನೆಯವರು ಅಂಥ ಪತ್ರಗಳನ್ನು ತೆರೆದು ನೋಡದೆ, ಹಾಗೆಯೇ ಎಸೆದುಬಿಡಬಹುದು. ನಮ್ಮ ಪತ್ರಗಳಿಗೆ ಹೀಗಾಗುವುದನ್ನು ನಾವು ಹೇಗೆ ತಡೆಗಟ್ಟಬಹುದು?
ಸಾಧ್ಯವಿರುವಲ್ಲಿ, ಪತ್ರವನ್ನು ಮತ್ತು ಲಕೋಟೆಯ ಮೇಲಿನ ವಿಳಾಸವನ್ನು ಬರೆಯಲಿಕ್ಕಾಗಿ ಟೈಪ್‌ರೈಟರನ್ನು ಉಪಯೋಗಿಸಿರಿ. ಲಕೋಟೆಯ ಮೇಲೆ ಆ ಮನೆಯವನ ಸ್ವಂತ ಹೆಸರಿರಬೇಕು. ಅದನ್ನು “ನಿವಾಸಿಗೆ” ಎಂದು ಸಂಬೋಧಿಸಬೇಡಿರಿ. ಅಷ್ಟುಮಾತ್ರವಲ್ಲದೆ, ಅವರು ಉತ್ತರವನ್ನು ಬರೆಯಲಿಕ್ಕಾಗಿ ಯಾವಾಗಲೂ ಒಂದು ವಿಳಾಸವನ್ನು ಕೊಡಿರಿ. ನಿಮ್ಮ ವೈಯಕ್ತಿಕ ವಿಳಾಸವನ್ನು ಕೊಡುವುದು ಸೂಕ್ತವಲ್ಲದಿದ್ದರೆ, ನಿಮ್ಮ ಹೆಸರು ಮತ್ತು ರಾಜ್ಯ ಸಭಾಗೃಹದ ವಿಳಾಸವನ್ನು ಕೊಡಿರಿ. ಅನಾಮಧೇಯ ಪತ್ರಗಳನ್ನು ಕಳುಹಿಸಬೇಡಿರಿ. ಬ್ರಾಂಚ್ ಆಫೀಸಿನ ವಿಳಾಸವನ್ನು ಎಂದಿಗೂ ಉಪಯೋಗಿಸಬೇಡಿರಿ.—ನವೆಂಬರ್ 1996ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ರೇಖಾಚೌಕವನ್ನು ನೋಡಿರಿ.
ಹೆಚ್ಚಿನ ಸಲಹೆಗಳನ್ನು ಮತ್ತು ಒಂದು ಮಾದರಿ ಪತ್ರವನ್ನು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ 71-3ನೆಯ ಪುಟಗಳಲ್ಲಿ ಕಂಡುಕೊಳ್ಳಸಾಧ್ಯವಿದೆ. ಈ ನಿರ್ದೇಶನಗಳು, ನಾವು ಇತರರಿಗೆ ಸುವಾರ್ತೆಯನ್ನು ತಲಪಿಸುವುದರಲ್ಲಿ ಪತ್ರಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ನಮಗೆ ಸಹಾಯಮಾಡುವವು.