ಇತರರಿಗೆ ಕಲಿಸಲು ಅರ್ಹರು ಮತ್ತು ಸಜ್ಜಿತರು
1 ಮೋಶೆಯು ಯೆಹೋವನ ಪ್ರತಿನಿಧಿಯೋಪಾದಿ ನೇಮಿಸಲ್ಪಟ್ಟಾಗ, ಫರೋಹನಿಗೆ ದೇವರ ವಾಕ್ಯವನ್ನು ಪ್ರಕಟಿಸಲು ತಾನು ಯೋಗ್ಯನೆಂದು ಅವನಿಗೆ ಅನಿಸಲಿಲ್ಲ. (ವಿಮೋ. 4:10; 6:12) ಯೆರೆಮೀಯನು ತನಗೆ ಮಾತಾಡುವ ರೀತಿಯು ತಿಳಿದಿಲ್ಲವೆಂದು ದೇವರಿಗೆ ಹೇಳುತ್ತಾ, ಯೆಹೋವನ ಪ್ರವಾದಿಯಾಗಿ ಸೇವೆ ಸಲ್ಲಿಸುವ ಸಾಮರ್ಥ್ಯದಲ್ಲಿ ತನ್ನ ಭರವಸೆಯ ಕೊರತೆಯನ್ನು ಹೊರಗೆಡಹಿದನು. (ಯೆರೆ. 1:6) ಅವರ ಆರಂಭದ ಭರವಸೆಯ ಕೊರತೆಯ ಹೊರತೂ, ಆ ಇಬ್ಬರೂ ಪ್ರವಾದಿಗಳು ಯೆಹೋವನಿಗೆ ನಿರ್ಭಯ ಸಾಕ್ಷಿಗಳಾಗಿ ಪರಿಣಮಿಸಿದರು. ಅವರು ದೇವರಿಂದ ಸಾಕಷ್ಟು ಅರ್ಹರಾಗಿ ಮಾಡಲ್ಪಟ್ಟರು.
2 ಇಂದು, ಯೆಹೋವನ ಸಹಾಯದಿಂದ ನಮ್ಮ ಶುಶ್ರೂಷೆಯನ್ನು ಭರವಸೆಯಿಂದ ಪೂರೈಸಲಿಕ್ಕಾಗಿ ನಮಗೆ ಅಗತ್ಯವಿರುವ ವಿಷಯವು ನಮ್ಮಲ್ಲಿದೆ. (2 ಕೊರಿಂ. 3:4, 5; 2 ತಿಮೊ. 3:17) ಸಾಧನಗಳ ಒಂದು ಸಂಪೂರ್ಣ ಸಜ್ಜಿನೊಂದಿಗಿರುವ ಒಬ್ಬ ಅರ್ಹ ಮೆಕ್ಯಾನಿಕ್ನಂತೆ, ನಮ್ಮ ನೇಮಿತ ಶುಶ್ರೂಷೆಯನ್ನು ಕೌಶಲಭರಿತವಾಗಿ ಪೂರೈಸಲು ನಾವು ಯೋಗ್ಯ ರೀತಿಯಲ್ಲಿ ಸಜ್ಜುಗೊಳಿಸಲ್ಪಟ್ಟಿದ್ದೇವೆ. ವಿಶೇಷ ದರದಲ್ಲಿ ನೀಡಲ್ಪಡುವುದಕ್ಕಾಗಿ ಪಟ್ಟಿಮಾಡಲ್ಪಟ್ಟಿರುವ ನಮ್ಮ ಯಾವುದೇ ಹಳೆಯ 192 ಪುಟದ ಪುಸ್ತಕಗಳನ್ನು ನಾವು ಜನವರಿ ತಿಂಗಳಿನಲ್ಲಿ ನೀಡುತ್ತಿದ್ದೇವೆ. ಈ ಆತ್ಮಿಕ ಸಾಧನಗಳು ಹೊಸತಾಗಿಲ್ಲವಾದರೂ, ಅವುಗಳ ಶಾಸ್ತ್ರೀಯ ವಿಷಯಗಳು ಇನ್ನೂ ಪ್ರಚಲಿತವಾಗಿವೆ ಮತ್ತು ಈ ಪುಸ್ತಕಗಳು ಜನರಿಗೆ ಸತ್ಯವನ್ನು ಕಲಿಯಲು ಸಹಾಯಮಾಡುವವು. ಮುಂದೆ ಸೂಚಿಸಲ್ಪಟ್ಟಿರುವ ನಿರೂಪಣೆಗಳನ್ನು ನೀಡಲಾಗುತ್ತಿರುವ ಯಾವುದೇ ಪುಸ್ತಕಕ್ಕೆ ಸರಿಹೊಂದಿಸಿಕೊಳ್ಳಬಹುದು.
3 ದೇವರ ವಾಕ್ಯದಲ್ಲಿ ಆಸಕ್ತಿಯನ್ನು ಮೂಡಿಸಲು ಶಿಕ್ಷಣದ ವಿಷಯವು ಉಪಯೋಗಿಸಲ್ಪಡಬಹುದು. ಸೂಕ್ತವಾಗಿರುವಲ್ಲಿ, ನೀವು ಹೀಗೆ ಹೇಳುತ್ತಾ ಸಂಭಾಷಣೆಯೊಂದನ್ನು ಆರಂಭಿಸಸಾಧ್ಯವಿದೆ:
◼“ಗುಣಮಟ್ಟದ ಶಿಕ್ಷಣಕ್ಕಾಗಿರುವ ಅಗತ್ಯದ ಮೇಲೆ ಇಂದು ಹೆಚ್ಚು ಮಹತ್ತ್ವವಿದೆ. ನಿಮ್ಮ ಅಭಿಪ್ರಾಯದಲ್ಲಿ, ಜೀವಿತದಲ್ಲಿ ಅತ್ಯಂತ ಸಂತೋಷವನ್ನೂ ಯಶಸ್ಸನ್ನೂ ಖಾತ್ರಿಪಡಿಸಿಕೊಳ್ಳಲಿಕ್ಕಾಗಿ ಒಬ್ಬ ವ್ಯಕ್ತಿಯು ಯಾವ ರೀತಿಯ ಶಿಕ್ಷಣವನ್ನು ಬೆನ್ನಟ್ಟಬೇಕು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ದೇವರ ಜ್ಞಾನವನ್ನು ಪಡೆದುಕೊಳ್ಳುವವರು ಅನಂತಕಾಲದ ಪ್ರಯೋಜನಗಳನ್ನು ಗಳಿಸಸಾಧ್ಯವಿದೆ. [ಜ್ಞಾನೋಕ್ತಿ 9:10, 11ನ್ನು ಓದಿರಿ.] ಈ ಕೈಪಿಡಿಯು [ನೀವು ನೀಡುತ್ತಿರುವ ಪುಸ್ತಕದ ಶೀರ್ಷಿಕೆಯನ್ನು ಹೇಳಿರಿ] ಬೈಬಲಿನ ಮೇಲೆ ಆಧಾರಿತವಾಗಿದೆ. ಬೈಬಲು ನಿತ್ಯಜೀವಕ್ಕೆ ನಡೆಸಬಲ್ಲ ಜ್ಞಾನದ ಒಂದು ಅದ್ಭುತಕರವಾದ ಮೂಲವಾಗಿದೆ ಎಂಬುದನ್ನು ಇದು ವಿವರಿಸುತ್ತದೆ.” ಪುಸ್ತಕದಲ್ಲಿನ ಒಂದು ನಿರ್ದಿಷ್ಟ ಉದಾಹರಣೆಯನ್ನು ತೋರಿಸಿರಿ. ಯಥಾರ್ಥವಾದ ಆಸಕ್ತಿಯಿರುವಲ್ಲಿ, ಪುಸ್ತಕವನ್ನು ಕೊಟ್ಟು, ಒಂದು ಪುನರ್ಭೇಟಿಗಾಗಿ ಏರ್ಪಾಡನ್ನು ಮಾಡಿರಿ.
4 ಬೈಬಲ್ ಶಿಕ್ಷಣದ ಮಹತ್ತ್ವದ ಕುರಿತಾಗಿ ನೀವು ಚರ್ಚಿಸಿದ ಮನೆಯವನಲ್ಲಿಗೆ ಹಿಂದಿರುಗಿಹೋಗುವಾಗ, ನೀವು ಹೀಗೆ ಹೇಳಬಹುದು:
◼“ನನ್ನ ಕಳೆದ ಭೇಟಿಯಲ್ಲಿ, ನಾವು ಬೈಬಲನ್ನು ನಮ್ಮ ಅನಂತ ಭವಿಷ್ಯತ್ತನ್ನು ಖಾತ್ರಿಪಡಿಸಬಲ್ಲ ಶಿಕ್ಷಣದ ಮೂಲವನ್ನಾಗಿ ಚರ್ಚಿಸಿದ್ದೆವು. ಖಂಡಿತವಾಗಿ, ಶಾಸ್ತ್ರಗಳಿಂದ ನಮಗೆ ಏನನ್ನು ತಿಳಿದುಕೊಳ್ಳುವ ಅಗತ್ಯವಿದೆಯೋ ಅದನ್ನು ಕಲಿತುಕೊಳ್ಳಲು ಶ್ರಮವು ತಗಲುತ್ತದೆ. [ಜ್ಞಾನೋಕ್ತಿ 2:1-5ನ್ನು ಓದಿರಿ.] ಅನೇಕ ಜನರು ಬೈಬಲಿನ ಕೆಲವು ಭಾಗಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಷ್ಟಕರವಾದದ್ದಾಗಿ ಕಂಡುಕೊಳ್ಳುತ್ತಾರೆ. ಮೂಲಭೂತ ಬೈಬಲ್ ಬೋಧನೆಗಳ ಕುರಿತು ಹೆಚ್ಚನ್ನು ಕಲಿಯುವಂತೆ ಜನರಿಗೆ ಸಹಾಯಮಾಡಲು ನಾವು ವ್ಯಾಪಕವಾಗಿ ಉಪಯೋಗಿಸಿರುವ ವಿಧಾನವನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಲು ನಾನು ಇಚ್ಛಿಸುತ್ತೇನೆ.” ಬಿಟ್ಟುಹೋದ ಪುಸ್ತಕವನ್ನು ಉಪಯೋಗಿಸುತ್ತಾ, ತಕ್ಕದ್ದಾದ ಸ್ಥಳಕ್ಕೆ ತಿರುಗಿಸಿ, ಬೈಬಲ್ ಅಭ್ಯಾಸವೊಂದನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ. ಒಂದು ಕ್ರಮವಾದ ಅಭ್ಯಾಸವನ್ನು ಪಡೆದುಕೊಳ್ಳಲು ಮನೆಯವನು ಇಚ್ಛಿಸುವಲ್ಲಿ, ನಮ್ಮ ಅಭ್ಯಾಸದ ಸಹಾಯಕವಾದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದೊಂದಿಗೆ ನೀವು ಹಿಂದಿರುಗುವಿರೆಂಬುದನ್ನು ವಿವರಿಸಿರಿ.
5 ಲೋಕದ ಲಕ್ಷಾಂತರ ಮಕ್ಕಳ ಕಷ್ಟಾನುಭವದಿಂದಾಗಿ ಅನೇಕ ಜನರು ಕ್ಲೇಶಗೊಂಡಿದ್ದಾರೆ. ಈ ಅವಸ್ಥೆಯನ್ನು ದೇವರು ಹೇಗೆ ವೀಕ್ಷಿಸುತ್ತಾನೆಂಬುದನ್ನು ನೋಡುವಂತೆ, ಮನೆಯವನಿಗೆ ನೀವು ಹೀಗೆ ಹೇಳುವ ಮೂಲಕ ಪ್ರಾಯಶಃ ಸಹಾಯಮಾಡಬಲ್ಲಿರಿ:
◼“ಭೂಮ್ಯಾದ್ಯಂತ ಹಸಿದ, ಅಸ್ವಸ್ಥಗೊಂಡ, ಹಾಗೂ ಅಲಕ್ಷಿಸಲ್ಪಟ್ಟ ಮಕ್ಕಳ ಕುರಿತಾದ ವಾರ್ತಾ ವರದಿಗಳನ್ನು ನೀವು ನೋಡಿದ್ದೀರೆಂಬುದರಲ್ಲಿ ಸಂದೇಹವಿಲ್ಲ. ಸಂಬಂಧಪಟ್ಟ ಸಂಸ್ಥೆಗಳು ಈ ಸ್ಥಿತಿಯನ್ನು ಏಕೆ ಸುಧಾರಿಸಲು ಸಾಧ್ಯವಾಗಿಲ್ಲ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮಾನವರಿಗೆ ಯಾವುದು ಅತ್ಯುತ್ತಮವಾಗಿದೆಯೋ ಅದನ್ನೇ ದೇವರು ಬಯಸುತ್ತಾನೆ. ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವಂತೆ ಮಕ್ಕಳಿಗೂ ವಯಸ್ಕರಿಗೂ ಆತನು ಏನನ್ನು ವಾಗ್ದಾನಿಸುತ್ತಾನೆಂಬುದನ್ನು ಗಮನಿಸಿರಿ. [ಪ್ರಕಟನೆ 21:4ನ್ನು ಓದಿರಿ.] ಈ ಪುಸ್ತಕವು [ಶೀರ್ಷಿಕೆಯನ್ನು ಹೇಳಿರಿ] ದೇವರು ರಚಿಸುವ ಲೋಕವೊಂದರ ಕುರಿತ ಹೆಚ್ಚಿನ ವಿವರವನ್ನು ನೀಡುತ್ತದೆ. ಅಲ್ಲಿ ಕಷ್ಟಾನುಭವವು ಅಂತ್ಯಗೊಳ್ಳುವುದು.” ಸಾಧ್ಯವಾದಲ್ಲಿ, ಪ್ರಮೋದವನವನ್ನು ವರ್ಣಿಸುವ ಚಿತ್ರವನ್ನು ತೆರೆದು, ಅದನ್ನು ಚರ್ಚಿಸಿರಿ. ಪುಸ್ತಕವನ್ನು ನೀಡಿ, ಮತ್ತೊಂದು ಭೇಟಿಗಾಗಿ ಏರ್ಪಾಡು ಮಾಡಿರಿ.
6 ಆರಂಭದಲ್ಲಿ ನೀವು ಮಕ್ಕಳ ಕಷ್ಟಾನುಭವದ ಕುರಿತಾಗಿ ಮಾತಾಡಿದ್ದಲ್ಲಿ, ಮುಂದಿನ ಭೇಟಿಯಲ್ಲಿ ನೀವು ಹೀಗೆ ಹೇಳುತ್ತಾ ಚರ್ಚೆಯನ್ನು ಮುಂದುವರಿಸಬಹುದು:
◼“ಇತ್ತೀಚೆಗೆ ನಾನು ಇಲ್ಲಿಗೆ ಬಂದಿದ್ದಾಗ, ಒಡೆದ ಸಂಸಾರಗಳು, ಕ್ಷಾಮ, ಅಸ್ವಸ್ಥತೆ, ಹಾಗೂ ಹಿಂಸಾಚಾರದಿಂದ ಕಷ್ಟಾನುಭವಿಸುವ ಮಕ್ಕಳ ಅವಸ್ಥೆಯ ಬಗ್ಗೆ ನೀವು ಚಿಂತೆಯನ್ನು ವ್ಯಕ್ತಪಡಿಸಿದಿರಿ. ಎಲ್ಲಿ ಮಕ್ಕಳು ಇಲ್ಲವೇ ವಯಸ್ಕರು ಅಸ್ವಸ್ಥತೆ, ನೋವು, ಅಥವಾ ಮರಣವನ್ನು ಅನುಭವಿಸುವುದಿಲ್ಲವೋ ಆ ಲೋಕದ ಕುರಿತಾಗಿ ಬೈಬಲಿನಲ್ಲಿ ಓದುವುದು ಸಾಂತ್ವನದಾಯಕವಾಗಿದೆ. ಯೆಶಾಯನ ಪುಸ್ತಕದಲ್ಲಿನ ಒಂದು ಪ್ರವಾದನೆಯು, ಭೂಮಿಯ ಮೇಲೆ ಬರಲಿರುವಂಥ ಒಂದು ಉತ್ತಮ ಜೀವಿತವನ್ನು ವರ್ಣಿಸುತ್ತದೆ.” ಯೆಶಾಯ 65:20-25ನ್ನು ಓದಿ, ಚರ್ಚಿಸಿರಿ. ಕಟ್ಟಕಡೆಗೆ, ಜ್ಞಾನ ಪುಸ್ತಕದಲ್ಲಿನ ಅಭ್ಯಾಸಕ್ಕೆ ಮುನ್ನಡೆಸಿರಿ.
7 ಧಾರ್ಮಿಕ ಜನರಿಗೆ ಪ್ರಾರ್ಥನೆಯ ರೂಢಿಯು ಸಾಮಾನ್ಯವಾಗಿರುವುದರಿಂದ, ನೀವು ಹೀಗೆ ಹೇಳುತ್ತಾ ಈ ವಿಷಯದ ಮೇಲೆ ಒಂದು ಸಂಭಾಷಣೆಯನ್ನು ಪ್ರಾರಂಭಿಸಸಾಧ್ಯವಿದೆ:
◼“ನಮ್ಮ ಜೀವಿತದ ಯಾವದೋ ಒಂದು ಹಂತದಲ್ಲಿ, ಸಹಾಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವಂತೆ ನಮ್ಮನ್ನು ಪ್ರೇರಿಸಿದ ಸಮಸ್ಯೆಗಳನ್ನು ನಮ್ಮಲ್ಲಿ ಹೆಚ್ಚಿನವರು ಅನುಭವಿಸಿದ್ದೇವೆ. ಆದರೂ, ಅನೇಕರಿಗೆ ತಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಿಲ್ಲವೆಂಬ ಅನಿಸಿಕೆಯಿದೆ. ಶಾಂತಿಗಾಗಿ ಸಾರ್ವಜನಿಕವಾಗಿ ದೇವರಿಗೆ ಪ್ರಾರ್ಥಿಸುವ ಧಾರ್ಮಿಕ ಮುಖಂಡರ ಮೊರೆಯೂ ಆಲಿಸಲ್ಪಡುತ್ತಿಲ್ಲವೆಂದೂ ತೋರುತ್ತದೆ. ಯುದ್ಧ ಹಾಗೂ ಹಿಂಸಾಚಾರವು ಮಾನವಕುಲಕ್ಕೆ ವೇದನೆಯನ್ನು ಉಂಟುಮಾಡುವುದನ್ನು ಮುಂದುವರಿಸುವುದರಿಂದ ನಾವು ಹಾಗೆ ಹೇಳುತ್ತೇವೆ. ದೇವರು ನಿಜವಾಗಿಯೂ ಪ್ರಾರ್ಥನೆಗಳನ್ನು ಆಲಿಸುತ್ತಾನೋ? ಆತನು ಆಲಿಸುವಲ್ಲಿ, ಅನೇಕ ಪ್ರಾರ್ಥನೆಗಳು ಏಕೆ ಉತ್ತರಿಸಲ್ಪಡದಿರುವಂತೆ ತೋರುತ್ತವೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡಬೇಕಾದಲ್ಲಿ ಏನು ಆವಶ್ಯಕವಾಗಿದೆ ಎಂಬುದನ್ನು ಕೀರ್ತನೆ 145:18 ವಿವರಿಸುತ್ತದೆ. [ಶಾಸ್ತ್ರವಚನವನ್ನು ಓದಿರಿ.] ಒಂದು ವಿಷಯವೇನೆಂದರೆ, ದೇವರಿಗೆ ಮಾಡಲ್ಪಡುವ ಪ್ರಾರ್ಥನೆಗಳು ಪ್ರಾಮಾಣಿಕವೂ ಆತನ ವಾಕ್ಯದಲ್ಲಿ ಕಂಡಬರುವಂಥ ಸತ್ಯಕ್ಕೆ ಅನುಸಾರವಾಗಿಯೂ ಇರತಕ್ಕದ್ದು.” ನೀವು ನೀಡುತ್ತಿರುವ ಪುಸ್ತಕವನ್ನು ತೋರಿಸಿ, ಪ್ರಾರ್ಥನೆಯ ಮೌಲ್ಯದ ಕುರಿತಾಗಿ ಅದು ಏನು ಹೇಳುತ್ತದೆಂಬುದನ್ನು ತೋರಿಸಿರಿ.
8 ಪ್ರಾರ್ಥನೆಯ ಕುರಿತಾದ ಹಿಂದಿನ ಚರ್ಚೆಯನ್ನು ಅನುಸರಿಸುತ್ತಿರುವಾಗ, ನೀವು ಈ ಪ್ರಸ್ತಾಪವನ್ನು ಪ್ರಯತ್ನಿಸಬಹುದು:
◼“ಪ್ರಾರ್ಥನೆಯ ವಿಷಯದ ಕುರಿತಾದ ನಮ್ಮ ಸಂಭಾಷಣೆಯಲ್ಲಿ ನಾನು ಆನಂದಿಸಿದೆ. ಯಾವುದಕ್ಕಾಗಿ ಪ್ರಾರ್ಥಿಸಬೇಕೆಂಬ ವಿಷಯದಲ್ಲಿ ಯೇಸುವಿನ ಯೋಚನೆಗಳನ್ನು ಒಂದು ಸಹಾಯಕರವಾದ ಮಾರ್ಗದರ್ಶಕವಾಗಿ ನೀವು ಕಂಡುಕೊಳ್ಳುವಿರೆಂಬುದು ನಿಸ್ಸಂದೇಹ.” ಯೇಸುವಿನ ಮಾದರಿ ಪ್ರಾರ್ಥನೆಯಲ್ಲಿ ಅವನಿಂದ ಎತ್ತಿತೋರಿಸಲ್ಪಟ್ಟಿರುವ ಮುಖ್ಯ ಚಿಂತೆಗಳನ್ನು ನಿರ್ದೇಶಿಸುತ್ತಾ, ಮತ್ತಾಯ 6:9, 10ನ್ನು ಓದಿರಿ. ಜ್ಞಾನ ಪುಸ್ತಕದಲ್ಲಿನ “ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ” ಎಂಬ 16ನೇ ಅಧ್ಯಾಯವನ್ನು ತೋರಿಸಿ, ವಿಷಯವನ್ನು ಹೇಗೆ ಅಭ್ಯಾಸಿಸಬೇಕೆಂಬುದನ್ನು ನೀವು ಪ್ರತ್ಯಕ್ಷಾಭಿನಯಿಸಸಾಧ್ಯವಿದೆಯೋ ಎಂದು ಕೇಳಿರಿ.
9 ದೇವರ ಜ್ಞಾನವನ್ನು ಇತರರಿಗೆ ಹಂಚುವ ವಿಷಯದಲ್ಲಿ ನಾವು ಹೀಗೆ ಕೇಳಿಕೊಳ್ಳಬಹುದು, “ಇಂಥ ಕಾರ್ಯಗಳಿಗೆ ಯಾರು ಯೋಗ್ಯರು [“ಅರ್ಹರು” NW]?” ಶಾಸ್ತ್ರವಚನಗಳು ಉತ್ತರಿಸುವುದು: “ನಾವು ಅರ್ಹರು.”—2 ಕೊರಿಂ. 2:16, 17, NW.