ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯ ಕಡೆಗೆ ವಿದ್ಯಾರ್ಥಿಗಳನ್ನು ನಿರ್ದೇಶಿಸುವುದು
1 “200ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ತಿಳಿಸಲ್ಪಡುವ ಒಂದು ಸಂದೇಶವು ಅದಾಗಿದೆ. ಅದು 210ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಕೇಳಲ್ಪಡುತ್ತಿರುವ ಒಂದು ಸಂದೇಶವಾಗಿದೆ. ಜನರನ್ನು ಎಲ್ಲೆಲ್ಲಾ ಕಂಡುಕೊಳ್ಳಸಾಧ್ಯವೊ ಅಲ್ಲೆಲ್ಲಾ ವೈಯಕ್ತಿಕವಾಗಿ ನೀಡಲ್ಪಡುತ್ತಿರುವ ಒಂದು ಸಂದೇಶ ಅದಾಗಿದೆ. ಅದೆಲ್ಲವೂ, ಲೋಕವು ಎಂದೂ ತಿಳಿದಿರದಂತಹ, ಸಾರುವಿಕೆಯ ಅತಿ ಮಹಾ ಕಾರ್ಯಾಚರಣೆಯ ಭಾಗವಾಗಿದೆ. ಭೂವ್ಯಾಪಕವಾಗಿ ಲಕ್ಷಾಂತರ ಜನರನ್ನು ಐಕ್ಯಗೊಳಿಸುತ್ತಿರುವ ಒಂದು ಸಂದೇಶವಿದಾಗಿದೆ. ಈ ಕೆಲಸವನ್ನು ಪೂರೈಸಲು ಯೆಹೋವನ ಸಾಕ್ಷಿಗಳು ನೂರಕ್ಕಿಂತಲೂ ಹೆಚ್ಚು ವರ್ಷಗಳಿಂದ ಸಂಘಟಿಸಲ್ಪಟ್ಟಿದ್ದಾರೆ!”
2 ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೊದ ಕಥನವು ಹೀಗೆ ಆರಂಭವಾಗುತ್ತದೆ. ನಿಜವಾಗಿ ಯೆಹೋವನ ಸಾಕ್ಷಿಗಳು ಯಾರಾಗಿದ್ದಾರೆ? ಅವರ ಚಟುವಟಿಕೆಯು ಹೇಗೆ ಸಂಘಟಿಸಲ್ಪಟ್ಟಿದೆ, ನಿರ್ದೇಶಿಸಲ್ಪಟ್ಟಿದೆ, ಹಣಕಾಸು ಒದಗಿಸಲ್ಪಡುತ್ತದೆ? ಎಂಬಂತಹ ಪ್ರಶ್ನೆಗಳನ್ನು ಅದು ಉತ್ತರಿಸುತ್ತಾ ಮುಂದುವರಿಯುತ್ತದೆ. “ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು, ತಮ್ಮ ನೆರೆಹೊರೆಯವರಿಗೆ ಬೈಬಲಿನಲ್ಲಿ ನಂಬಿಕೆಯನ್ನು ಕಟ್ಟಲು ಸಹಾಯಮಾಡುವಂತೆ ಒಂದು ಸಂಸ್ಥೆಯೋಪಾದಿ ತರಬೇತುಮಾಡಲ್ಪಟ್ಟಿದ್ದಾರೆ” ಎಂಬ ವಾಸ್ತವಾಂಶವನ್ನು ಅದು ವೀಕ್ಷಕರ ಮೇಲೆ ಅಚ್ಚೊತ್ತುತ್ತದೆ ಮತ್ತು ಅವರು ಸ್ವತಃ ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯನ್ನು ನೋಡುವಂತೆ ಅವರನ್ನು ಉತ್ತೇಜಿಸುತ್ತದೆ. ಅಭ್ಯಾಸಮಾಡುತ್ತಿದ್ದ ಒಬ್ಬ ಸ್ತ್ರೀಯು ಈ ವಿಡಿಯೊವನ್ನು ನೋಡಿದ ನಂತರ, ಆನಂದ ಮತ್ತು ಗಣ್ಯತೆಯ ಅಶ್ರುಗಳನ್ನು ಸುರಿಸುತ್ತಾ ಹೇಳಿದ್ದು: “ಇದು ಸತ್ಯ ದೇವರಾದ ಯೆಹೋವನ ಸಂಸ್ಥೆ ಆಗಿದೆ ಎಂಬುದನ್ನು ಯಾರಾದರೂ ಹೇಗೆ ಗ್ರಹಿಸದೇ ಇರಸಾಧ್ಯವಿದೆ?”—1 ಕೊರಿಂಥ 14:24, 25ನ್ನು ಹೋಲಿಸಿರಿ.
3 ಇನ್ನೊಬ್ಬ ಸ್ತ್ರೀಯು, ದೀರ್ಘ ಸಮಯದ ವರೆಗೆ ಬೈಬಲನ್ನು ಬಿಟ್ಟುಬಿಟ್ಟು ಅಭ್ಯಾಸಿಸಿದ್ದಳು. ಆದರೆ ತ್ರಯೈಕ್ಯವು ಒಂದು ಸುಳ್ಳು ಬೋಧನೆಯಾಗಿದೆಯೆಂಬ ವಾಸ್ತವಾಂಶವನ್ನು ಆಕೆಗೆ ಅಂಗೀಕರಿಸಲು ಸಾಧ್ಯವಾಗಲಿಲ್ಲ. ಅನಂತರ ಆಕೆಗೆ ಮತ್ತು ಆಕೆಯ ಗಂಡನಿಗೆ ನಮ್ಮ ವಿಡಿಯೊ ತೋರಿಸಲ್ಪಟ್ಟಿತು. ಅವರು ಆ ಪ್ರಸ್ತುತಪಡಿಸುವಿಕೆಯಿಂದ ತುಂಬ ಪ್ರಭಾವಿಸಲ್ಪಟ್ಟು, ಅದೇ ರಾತ್ರಿ ಅದನ್ನು ಎರಡು ಸಲ ವೀಕ್ಷಿಸಿದರು. ಅವರ ಮುಂದಿನ ಅಭ್ಯಾಸದಲ್ಲಿ, ಹೆಂಡತಿಯು ಒಬ್ಬ ಸಾಕ್ಷಿಯಾಗಲು ತನಗಿರುವ ಬಯಕೆಯನ್ನು ವ್ಯಕ್ತಪಡಿಸಿದಳು. ತಾನು ತ್ರಯೈಕ್ಯದ ಕುರಿತಾಗಿರುವ ತನ್ನ ನಂಬಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದೆ ಮತ್ತು ನಮ್ಮ ಸಂಸ್ಥೆ ಹಾಗೂ ಅದರಲ್ಲಿರುವ ಜನರನ್ನು ನೋಡಲು ತಪ್ಪಿಹೋದೆ ಎಂದು ಆಕೆ ಹೇಳಿದಳು. ತಾನು ದೇವರ ಸತ್ಯ ಸಂಸ್ಥೆಯನ್ನು ಕಂಡುಕೊಂಡಿದ್ದೇನೆಂಬುದನ್ನು ಆಕೆ ವಿಡಿಯೊ ನೋಡಿ ಗ್ರಹಿಸಿದಳು. ಆಕೆಯು ಆಗಲೇ ಮನೆಯಿಂದ ಮನೆಗೆ ಸಾರುವುದನ್ನು ಆರಂಭಿಸಲು ಬಯಸಿದಳು. ಒಬ್ಬ ಅಸ್ನಾನಿತ ಪ್ರಚಾರಕಳಾಗಲು ಬೇಕಾಗಿರುವ ಆವಶ್ಯಕ ಹೆಜ್ಜೆಗಳು ಯಾವವು ಎಂಬುದನ್ನು ಆಕೆಗೆ ವಿವರಿಸಲ್ಪಟ್ಟ ಬಳಿಕ, ಆಕೆ ಹೇಳಿದ್ದು: “ನಾನು ಆ ಆವಶ್ಯಕ ಹೆಜ್ಜೆಗಳನ್ನು ತತ್ಕ್ಷಣವೇ ತೆಗೆದುಕೊಳ್ಳಲಿದ್ದೇನೆ.” ಆಕೆ ತನ್ನ ಚರ್ಚಿಗೆ ರಾಜೀನಾಮೆ ಕೊಟ್ಟು, ಕ್ಷೇತ್ರ ಸೇವಾ ಚಟುವಟಿಕೆಯನ್ನು ಆರಂಭಿಸಿದಳು ಮತ್ತು ತ್ರಯೈಕ್ಯವನ್ನು ತಪ್ಪೆಂದು ಸಿದ್ಧಪಡಿಸುವುದರಲ್ಲಿ ನಿಪುಣೆಯಾದಳು.
4 ಬೈಬಲ್ ವಿದ್ಯಾರ್ಥಿಗಳು ಯೆಹೋವನ ಸಂಸ್ಥೆಯನ್ನು ಗುರುತಿಸಿ, ಅದರೊಂದಿಗೆ ಸಹವಾಸಿಸುವಾಗ ಅವರು ಹೆಚ್ಚು ಉತ್ತಮವಾದ ಆತ್ಮಿಕ ಪ್ರಗತಿಯನ್ನು ಮಾಡುತ್ತಾರೆ ಮತ್ತು ಹೆಚ್ಚು ಕ್ಷಿಪ್ರವಾಗಿ ಪ್ರೌಢತೆಗೆ ಬೆಳೆಯುತ್ತಾರೆಂಬ ವಿಷಯವು ಸುಸ್ಥಾಪಿತ. ಅರ್ಥಗರ್ಭಿತವಾಗಿ, ಪಂಚಾಶತ್ತಮದಲ್ಲಿ 3,000 ವ್ಯಕ್ತಿಗಳು ದೀಕ್ಷಾಸ್ನಾನಗೊಳಿಸಲ್ಪಟ್ಟ ನಂತರ, “ಅವರು ತಮ್ಮನ್ನು ಅಪೊಸ್ತಲರ ಬೋಧನೆಗೆ ಮತ್ತು ಒಬ್ಬರೊಂದಿಗೊಬ್ಬರು ಕೂಡಿಬರುವುದಕ್ಕಾಗಿ ತಮ್ಮನ್ನು ಮೀಸಲಾಗಿಟ್ಟುಕೊಳ್ಳುವುದನ್ನು ಮುಂದುವರಿಸಿದರು.” (ಅ. ಕೃ. 2:42, NW ಪಾದಟಿಪ್ಪಣಿ) ವಿದ್ಯಾರ್ಥಿಗಳು ಇಂದು ಅದನ್ನೇ ಮಾಡುವಂತೆ ನಾವು ಸಹಾಯಮಾಡುವುದು ಅತ್ಯಾವಶ್ಯಕ. ನಾವು ಹೇಗೆ ಸಹಾಯಮಾಡಸಾಧ್ಯವಿದೆ?
5 ಜವಾಬ್ದಾರಿಯನ್ನು ಹೊತ್ತುಕೊಳ್ಳಿರಿ: ಶಿಷ್ಯರನ್ನಾಗಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ, ಬೈಬಲ್ ವಿದ್ಯಾರ್ಥಿಯನ್ನು ದೇವರ ಸಂಸ್ಥೆಯ ಕಡೆಗೆ ನಿರ್ದೇಶಿಸುವುದು ತನ್ನ ಜವಾಬ್ದಾರಿಯಾಗಿದೆಯೆಂಬುದನ್ನು ಗ್ರಹಿಸಬೇಕು. (1 ತಿಮೊ. 4:16) ಪ್ರತಿಯೊಂದು ಅಭ್ಯಾಸದ ಅವಧಿಯನ್ನು, ಆ ಹೊಸ ವ್ಯಕ್ತಿಯು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತನ್ನ ಸಮರ್ಪಣೆಯನ್ನು ಸಂಕೇತಿಸುವ ಆ ಸಂತೋಷದ ದಿನದ ಕಡೆಗೆ ಒಂದು ಮೆಟ್ಟುಗಲ್ಲಾಗಿ ವೀಕ್ಷಿಸಬೇಕು. ದೀಕ್ಷಾಸ್ನಾನ ಸಮಾರಂಭದ ಸಮಯದಲ್ಲಿ ಅವನಿಗೆ ಕೇಳಲಾಗುವ ಪ್ರಶ್ನೆಗಳಲ್ಲಿ ಒಂದು ಇದಾಗಿದೆ: “ನಿಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನವು ನಿಮ್ಮನ್ನು, ದೇವರ ಆತ್ಮ ನಿರ್ದೇಶಿತ ಸಂಸ್ಥೆಯ ಸಹವಾಸದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನಾಗಿ ಗುರುತಿಸುತ್ತದೆ ಎಂಬುದನ್ನು ನೀವು ತಿಳಿಯುತ್ತೀರೋ?” ಆದುದರಿಂದ, ನಿಜ ಕ್ರೈಸ್ತ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದೆ ತಾನು ದೇವರಿಗೆ ಸೇವೆಸಲ್ಲಿಸಲು ಸಾಧ್ಯವಿಲ್ಲವೆಂಬುದನ್ನು ಅವನು ಗ್ರಹಿಸುವುದು ಪ್ರಾಮುಖ್ಯ.—ಮತ್ತಾ. 24:45-47; ಯೋಹಾ. 6:68; 2 ಕೊರಿಂ. 5:20.
6 ಸ್ಥಳಿಕ ಸಭೆಯ ಕುರಿತಾಗಿ ಮತ್ತು ಯೆಹೋವನ ಸಾಕ್ಷಿಗಳ ಹಿಂದಿರುವ ಅಂತಾರಾಷ್ಟ್ರೀಯ ಸಂಸ್ಥೆಯ ಕುರಿತಾಗಿ ವಿದ್ಯಾರ್ಥಿಗೆ ತಿಳಿಸುವುದನ್ನು ಮುಂದುವರಿಸಿರಿ. ಪ್ರಥಮ ಬೈಬಲ್ ಅಭ್ಯಾಸದ ಅವಧಿಯಿಂದಲೇ ಆರಂಭಿಸಿ, ಇದನ್ನು ಪ್ರತಿಯೊಂದು ಅಭ್ಯಾಸದ ಅವಧಿಯಲ್ಲಿ ಮಾಡಿರಿ. ಅತ್ಯಾರಂಭದಿಂದಲೇ, ವಿದ್ಯಾರ್ಥಿಯನ್ನು ಕೂಟಗಳಿಗೆ ಆಮಂತ್ರಿಸಿರಿ, ಮತ್ತು ಆಮಂತ್ರಿಸುತ್ತಾ ಇರಿ.—ಪ್ರಕ. 22:17.
7 ಒದಗಿಸಲ್ಪಟ್ಟಿರುವ ಸಾಧನಗಳನ್ನು ಉಪಯೋಗಿಸಿರಿ: ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುವುದರಲ್ಲಿ ಉಪಯೋಗಿಸಲಿಕ್ಕಾಗಿರುವ ನಮ್ಮ ಅತ್ಯುತ್ತಮ ಪ್ರಕಾಶನಗಳು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ ಮತ್ತು ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕ ಆಗಿವೆ. ಎರಡೂ ಪ್ರಕಾಶನಗಳೂ, ಸಭೆಯೊಂದಿಗೆ ಕೂಡಿಬರುವ ಅಗತ್ಯವನ್ನು ಎತ್ತಿಹೇಳುತ್ತವೆ. ಅಪೇಕ್ಷಿಸು ಬ್ರೋಷರಿನಲ್ಲಿರುವ ಪಾಠ 5ರ ಅಂತ್ಯ ಭಾಗವು ತಿಳಿಸುವುದು: “ನೀವು ಯೆಹೋವನ ಕುರಿತು ಕಲಿಯುತ್ತಾ ಇರುವ ಮತ್ತು ಆತನ ಆವಶ್ಯಕತೆಗಳಿಗೆ ವಿಧೇಯರಾಗುತ್ತಾ ಇರುವ ಅಗತ್ಯವಿದೆ. ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗುವುದು, ಹಾಗೆ ಮಾಡುವಂತೆ ನಿಮಗೆ ಸಹಾಯ ಮಾಡುವುದು.” ಜ್ಞಾನ ಪುಸ್ತಕವು, ವಿದ್ಯಾರ್ಥಿಯನ್ನು ಕೂಟಗಳಲ್ಲಿ ಕೂಡಿಬರುವಂತೆ ಪದೇ ಪದೇ ಉತ್ತೇಜಿಸುತ್ತದೆ. ಅಧ್ಯಾಯ 5, ಪ್ಯಾರಗ್ರಾಫ್ 22 ಈ ಆಮಂತ್ರಣವನ್ನು ನೀಡುತ್ತದೆ: “ಯೆಹೋವನ ಸಾಕ್ಷಿಗಳು . . . ಅವರೊಂದಿಗೆ ದೇವರನ್ನು ‘ಆತ್ಮ ಮತ್ತು ಸತ್ಯದಿಂದ’ ಆರಾಧಿಸುವುದರಲ್ಲಿ ಪಾಲಿಗರಾಗುವಂತೆ . . . ಹೃದಯೋಲ್ಲಾಸದಿಂದ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ. (ಯೋಹಾನ 4:24)” ಅಧ್ಯಾಯ 12, ಪ್ಯಾರಗ್ರಾಫ್ 16 ತಿಳಿಸುವುದು: “ನೀವು ಈ ಅಧ್ಯಯನವನ್ನು ಮುಂದುವರಿಸಿ, ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಉಪಸ್ಥಿತರಾಗುವುದನ್ನು ನಿಮ್ಮ ರೂಢಿಯಾಗಿ ಮಾಡುವಾಗ, . . . ನಿಮ್ಮ ನಂಬಿಕೆಯು ಇನ್ನೂ ಹೆಚ್ಚು ಭದ್ರವಾಗಲಿರುವುದು.” ಅಧ್ಯಾಯ 16, ಪ್ಯಾರಗ್ರಾಫ್ 20 ಹೇಳುವುದು: “ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಉಪಸ್ಥಿತರಾಗುವುದನ್ನು ನಿಮ್ಮ ರೂಢಿಯಾಗಿ ಮಾಡಿರಿ.” ಅದು ಕೂಡಿಸುವುದು: “ಇದು ದೇವರ ಜ್ಞಾನವನ್ನು ನೀವು ಅರ್ಥಮಾಡಿಕೊಂಡು, ಅನಂತರ ಅದನ್ನು ನಿಮ್ಮ ಜೀವನದಲ್ಲಿ ಅನ್ವಯಿಸುವಂತೆ ನಿಮಗೆ ಸಹಾಯಮಾಡಿ ನಿಮಗೆ ಸಂತೋಷವನ್ನು ತರುವುದು. ಲೋಕವ್ಯಾಪಕವಾದ ಕ್ರೈಸ್ತ ಸಹೋದರತ್ವದ ಭಾಗವಾಗಿರುವುದು ನೀವು ಯೆಹೋವನಿಗೆ ಸಮೀಪವಾಗಿ ಉಳಿಯಲು ನಿಮಗೆ ಸಹಾಯಮಾಡುವುದು.” ದೇವರ ಜನರ ನಡುವೆ ಒಬ್ಬನು ನಿಜ ಭದ್ರತೆಯನ್ನು ಹೇಗೆ ಕಂಡುಕೊಳ್ಳುತ್ತಾನೆಂಬುದನ್ನು ಅಧ್ಯಾಯ 17 ಸಮಗ್ರವಾಗಿ ಚರ್ಚಿಸುತ್ತದೆ. ನಾವು ಇತರರೊಂದಿಗೆ ಅಭ್ಯಾಸಿಸಿದಂತೆ, ವಿಷಯದ ಈ ಭಾಗಗಳನ್ನು ಒತ್ತಿಹೇಳುವುದು ನಮ್ಮ ಜವಾಬ್ದಾರಿಯಾಗಿದೆ.
8 ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯವಾಗಿ ಮಾಡುತ್ತಿರುವುದು (ಇಂಗ್ಲಿಷ್) ಎಂಬ ಬ್ರೋಷರ್, ಯೆಹೋವನು ಇಂದು ತನ್ನ ಚಿತ್ತವನ್ನು ಪೂರೈಸಲು ಉಪಯೋಗಿಸುತ್ತಿರುವ ಏಕಮಾತ್ರ ದೃಶ್ಯ ಸಂಸ್ಥೆಯೊಂದಿಗೆ ವ್ಯಕ್ತಿಗಳನ್ನು ಪರಿಚಿತಗೊಳಿಸಲು ತಯಾರಿಸಲ್ಪಟ್ಟಿರುವ ಒಂದು ಉತ್ತಮ ಸಾಧನವಾಗಿದೆ. ನಮ್ಮ ಶುಶ್ರೂಷೆ, ಕೂಟಗಳು ಮತ್ತು ಸಂಸ್ಥೆಯ ಕುರಿತಾದ ವಿವರವಾದ ಮಾಹಿತಿಯು ಇದರಲ್ಲಿ ಅಡಕವಾಗಿರುತ್ತದೆ. ಮತ್ತು ಇದು, ದೇವರನ್ನು ಆರಾಧಿಸುವುದರಲ್ಲಿ ನಮ್ಮೊಂದಿಗೆ ಕೂಡಿಬರುವಂತೆ ವಾಚಕನನ್ನು ಉತ್ತೇಜಿಸುವುದು. ಬೈಬಲ್ ಅಭ್ಯಾಸವು ಒಮ್ಮೆ ಸ್ಥಾಪಿಸಲ್ಪಟ್ಟ ನಂತರ, ವಿದ್ಯಾರ್ಥಿಯು ಅದನ್ನು ತನ್ನಷ್ಟಕ್ಕೆ ಓದಲಿಕ್ಕಾಗಿ ನಾವು ಅವನಿಗೆ ಈ ಬ್ರೋಷರಿನ ಒಂದು ಪ್ರತಿಯನ್ನು ಕೊಡುವಂತೆ ಶಿಫಾರಸ್ಸು ಮಾಡಲಾಗುತ್ತದೆ. ಗತಕಾಲದಲ್ಲಿ ಮಾಡಲ್ಪಟ್ಟಂತೆ ಅದನ್ನು ಅವನೊಂದಿಗೆ ಅಭ್ಯಾಸಿಸುವ ಅಗತ್ಯವಿಲ್ಲ.
9 ಸೊಸೈಟಿಯು ತಯಾರಿಸಿರುವ ವಿಡಿಯೊಗಳಲ್ಲಿ ಕೆಲವು, ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯ ಕಡೆಗೆ ವಿದ್ಯಾರ್ಥಿಗಳನ್ನು ನಿರ್ದೇಶಿಸಲು ಅತ್ಯುತ್ಕೃಷ್ಟವಾದ ಸಾಧನಗಳಾಗಿವೆ. ಅವರು ಈ ಕೆಳಗಿನ ವಿಡಿಯೊಗಳನ್ನು ನೋಡಸಾಧ್ಯವಿದ್ದರೆ ಒಳ್ಳೇದು. (1) ಕ್ರಿಯೆಯಲ್ಲಿ ನೂತನ ಲೋಕ ಸಮಾಜ (ಇಂಗ್ಲಿಷ್), ಯೆಹೋವನ ಸಂಸ್ಥೆಯು ಕಾರ್ಯನಡಿಸುವ ಸುಗಮವಾದ, ದಕ್ಷ, ಮತ್ತು ಪ್ರೀತಿಪರ ಮನೋವೃತ್ತಿಯನ್ನು ಸೆರೆಹಿಡಿದ 1954ರ ಚಲನಚಿತ್ರದ ಪುನರ್ವಿಮರ್ಶೆ; (2) ಭೂಮಿಯ ಕಟ್ಟಕಡೆಯ ವರೆಗೆ (ಇಂಗ್ಲಿಷ್), ಇದು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 50ನೆಯ ವಾರ್ಷಿಕೋತ್ಸವವನ್ನು ಗುರುತಿಸಿತು ಮತ್ತು ಲೋಕವ್ಯಾಪಕವಾದ ಸಾರುವಿಕೆಯ ಕೆಲಸದ ಮೇಲೆ ಮಿಷನೆರಿಗಳು ಬೀರಿರುವ ಪ್ರಭಾವವನ್ನು ತೋರಿಸುತ್ತದೆ; (3) ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ (ಇಂಗ್ಲಿಷ್) ಇದು, ಸಾಕ್ಷಿಗಳ ಮೇಲೆ ಹಿಟ್ಲರನು ತಂದಂತಹ ಭೀಕರ ಹಿಂಸೆಯ ಎದುರಿನಲ್ಲಿ ಅವರ ಸಾಹಸ ಮತ್ತು ವಿಜಯದ ಕುರಿತಾದ ರೋಮಾಂಚಕ ಕತೆಯನ್ನು ತಿಳಿಸುತ್ತದೆ; (4) ದೈವಿಕ ಬೋಧನೆಯಿಂದ ಐಕ್ಯಗೊಳಿಸಲ್ಪಟ್ಟಿರುವುದು (ಇಂಗ್ಲಿಷ್) ಪೂರ್ವ ಯೂರೋಪ್, ದಕ್ಷಿಣ ಅಮೆರಿಕ, ಆಫ್ರಿಕ ಮತ್ತು ಏಷಿಯದಲ್ಲಿನ ನಮ್ಮ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಪ್ರದರ್ಶಿಸಲ್ಪಟ್ಟಿರುವ ಶಾಂತಪೂರ್ಣ ಐಕ್ಯವನ್ನು ಪರೀಕ್ಷಿಸುತ್ತದೆ. ಮತ್ತು ಖಂಡಿತವಾಗಿಯೂ (5) ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್). ಈ ಕೊನೆಯ ಎರಡು ವಿಡಿಯೊಗಳು ಭಾರತದಲ್ಲಿ ಲಭ್ಯವಿವೆ ಮತ್ತು ಅವುಗಳನ್ನು ಸಭೆಯ ಮೂಲಕ ಆರ್ಡರ್ ಮಾಡಸಾಧ್ಯವಿದೆ. ಆದರೆ ಅನೇಕ ಸಹೋದರರು ಇತರ ಮೂರು ವಿಡಿಯೊಗಳನ್ನು ವೈಯಕ್ತಿಕವಾಗಿ ವಿದೇಶದಿಂದ ಪಡೆದುಕೊಂಡಿದ್ದಾರೆ ಮತ್ತು ಇವುಗಳನ್ನು ಬೈಬಲ್ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಡೆಗೆ ನಿರ್ದೇಶಿಸಲಿಕ್ಕಾಗಿ ಸದುಪಯೋಗಿಸಸಾಧ್ಯವಿದೆ.
10 ಕೂಟಗಳ ವಿಷಯದಲ್ಲಿ ಪ್ರಗತಿಪರ ಗುರಿಗಳನ್ನು ಇಡಿರಿ: ಮನೆ ಬೈಬಲ್ ಅಭ್ಯಾಸದ ಸನ್ನಿವೇಶದಲ್ಲಿ ಒದಗಿಸಲ್ಪಡುವ ಖಾಸಗಿ ಕಲಿಸುವಿಕೆ ಮತ್ತು ಸಭಾ ಕೂಟಗಳಲ್ಲಿ ಒದಗಿಸಲ್ಪಡುವ ತರಗತಿ ಚರ್ಚೆಗಳು—ಎರಡೂ—ನಮಗೆ ಅಗತ್ಯವಾಗಿವೆ ಎಂಬ ವಿಷಯವು ವಿದ್ಯಾರ್ಥಿಗಳಿಗೆ ವಿವರಿಸಲ್ಪಡಬೇಕು. (ಯೋಹಾ. 6:45) ಒಬ್ಬ ಹೊಸ ವ್ಯಕ್ತಿಯು ಶಾಸ್ತ್ರಗಳ ಮತ್ತು ಸಂಸ್ಥೆಯ ಕುರಿತಾದ ತನ್ನ ತಿಳಿವಳಿಕೆಯಲ್ಲಿ ಸಮಾನವಾಗಿ ಪ್ರಗತಿ ಮಾಡುವ ಅಗತ್ಯವಿದೆ. ಅದನ್ನು ಸಾಧಿಸಲು, ಕೂಟಗಳಿಗೆ ಹಾಜರಾಗುವುದನ್ನು ಬಿಟ್ಟು ಬೇರೆ ಯಾವ ಬದಲಿಯೂ ಇಲ್ಲ. (ಇಬ್ರಿ. 10:23-25) ಆ ವ್ಯಕ್ತಿಯನ್ನು ಒಡನೆಯೆ ಸಭಾ ಕೂಟಗಳಿಗೆ ಆಮಂತ್ರಿಸಲು ಆರಂಭಿಸಿರಿ. ಹೊಸದಾಗಿ ಆಸಕ್ತರಾದ ಕೆಲವರು ಒಂದು ಕ್ರಮವಾದ ಮನೆ ಬೈಬಲ್ ಅಭ್ಯಾಸವನ್ನು ಹೊಂದುವ ಮುಂಚೆಯೇ ಕೂಟಗಳಿಗೆ ಹಾಜರಾಗುವುದನ್ನು ಆರಂಭಿಸುತ್ತಾರೆ. ನಾವು ಸ್ವತಃ ಕ್ರಮವಾಗಿ ಉಪಸ್ಥಿತರಾಗಿರುವ ಮೂಲಕ ಖಂಡಿತವಾಗಿಯೂ ಯೋಗ್ಯವಾದ ಮಾದರಿಯನ್ನಿಡಲು ಬಯಸುತ್ತೇವೆ.—ಲೂಕ 6:40; ಫಿಲಿ. 3:17.
11 ಕೂಟಗಳ ಕುರಿತಾಗಿ ಮತ್ತು ಅವು ಹೇಗೆ ನಡೆಸಲ್ಪಡುತ್ತವೆ ಎಂಬುದರ ಕುರಿತಾಗಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಳ್ಳಿರಿ. ಆಗ ವಿದ್ಯಾರ್ಥಿಯು ತನ್ನ ಪ್ರಥಮ ಕೂಟಕ್ಕೆ ಹಾಜರಾಗುವಾಗ ಹಾಯಾಗಿರುವನು. ಕೆಲವು ಜನರಿಗೆ, ಪ್ರಥಮ ಸಲ ಹೊಸ ಸ್ಥಳಗಳಿಗೆ ಹೋಗುವಾಗ ತೀರ ಆತಂಕದ ಅನಿಸಿಕೆಯಾಗುವುದರಿಂದ, ವಿದ್ಯಾರ್ಥಿಯು ತನ್ನ ಪ್ರಥಮ ಕೂಟಕ್ಕೆ ಹಾಜರಾಗುವಾಗ ಅವನೊಂದಿಗೆ ರಾಜ್ಯ ಸಭಾಗೃಹಕ್ಕೆ ಹೋಗುವುದು ಪ್ರಯೋಜನಕರ. ಅವನು ಸಭೆಯ ಸದಸ್ಯರನ್ನು ಭೇಟಿಯಾದಂತೆ ನೀವು ಅವನೊಂದಿಗೆ ಇರುವಲ್ಲಿ ಅವನು ಹೆಚ್ಚು ನಿರಾತಂಕದಿಂದಿರುವನು. ಎಲ್ಲಕ್ಕಿಂತಲೂ ಮಿಗಿಲಾಗಿ, ನಿಮ್ಮ ಸಂದರ್ಶಕನಿಗೆ ಒಬ್ಬ ಒಳ್ಳೆಯ ಆತಿಥೇಯರಾಗಿರಿ. ಅವನಿಗೆ ಸ್ವಾಗತಿಸಲ್ಪಟ್ಟಿರುವ ಮತ್ತು ಹಾಯಾದ ಅನಿಸಿಕೆಯಾಗುವಂತೆ ಮಾಡಿರಿ.—ಮತ್ತಾ. 7:12; ಫಿಲಿ. 2:1-4.
12 ಪ್ರಥಮ ಅವಕಾಶದಲ್ಲೇ, ವಿದ್ಯಾರ್ಥಿಯು ಒಂದು ವಿಶೇಷ ಸಮ್ಮೇಳನ ದಿನವನ್ನು, ಸರ್ಕಿಟ್ ಸಮ್ಮೇಳನವನ್ನು ಅಥವಾ ಜಿಲ್ಲಾ ಅಧಿವೇಶನವನ್ನು ಹಾಜರಾಗುವಂತೆ ಉತ್ತೇಜಿಸಿರಿ. ಪ್ರಾಯಶಃ ನೀವು ಅವನನ್ನು ನಿಮ್ಮ ವಾಹನಸೌಕರ್ಯದ ಏರ್ಪಾಡುಗಳಲ್ಲಿ ಸೇರಿಸಸಾಧ್ಯವಿದೆ.
13 ಹೃತ್ಪೂರ್ವಕವಾದ ಗಣ್ಯತೆಯನ್ನು ಬೇರೂರಿಸಿರಿ: ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕವು, ಪುಟ 92ರಲ್ಲಿ ವಿವರಿಸುವುದು: “ಯೆಹೋವನ ಸಂಸ್ಥೆಯ ಕಡೆಗೆ ನೀವು ತೋರಿಸುವ ಆಳವಾದ ಮಾನ್ಯತೆಯು ಆಸಕ್ತಿಯ ಜನರೊಂದಿಗೆ ನೀವು ಮಾಡುವ ಸಂಭಾಷಣೆಯಲ್ಲಿ ಪ್ರತಿಬಿಂಬಿಸುವಲ್ಲಿ, ಮಾನ್ಯತೆಯಲ್ಲಿ ಅವರೂ ಬೆಳೆಯುವದನ್ನು ಸುಲಭಮಾಡಿ ಯೆಹೋವನ ಪರಿಚಯ ಮಾಡಿಕೊಳ್ಳುವುದರಲ್ಲಿ ಹೆಚ್ಚು ಮುಂದುವರಿಯುವಂತೆ ಅವರನ್ನು ಪ್ರಚೋದಿಸುವುದು.” ನಿಮ್ಮ ಸ್ಥಳಿಕ ಸಭೆಯ ಕುರಿತಾಗಿ ಎಂದೂ ನಕಾರಾತ್ಮಕವಾಗಿ ಮಾತಾಡಬೇಡಿರಿ. ಬದಲಾಗಿ ಯಾವಾಗಲೂ ಸಕಾರಾತ್ಮಕವಾಗಿ ಮಾತಾಡಿರಿ. (ಕೀರ್ತ. 84:10; 133:1, 3ಬಿ) ಬೈಬಲ್ ಅಭ್ಯಾಸದಲ್ಲಿ ನೀವು ಮಾಡುವ ಪ್ರಾರ್ಥನೆಗಳಲ್ಲಿ, ಸಭೆಯ ಕುರಿತಾಗಿ ಮತ್ತು ಅದರೊಂದಿಗೆ ಕ್ರಮವಾಗಿ ಕೂಡಿಬರಲು ವಿದ್ಯಾರ್ಥಿಗಿರುವ ಅಗತ್ಯವನ್ನು ಪ್ರಸ್ತಾಪಿಸಿರಿ.—ಎಫೆ. 1:15-17.
14 ಹೊಸ ವ್ಯಕ್ತಿಗಳು, ದೇವರ ಜನರ ನಡುವೆ ಕಂಡುಕೊಳ್ಳಲಾಗುವ ಸಂತೋಷಕರವಾದ ಸಾಂಗತ್ಯ ಮತ್ತು ಆತ್ಮಿಕ ಭದ್ರತೆಗಾಗಿ ಹೃತ್ಪೂರ್ವಕವಾದ ಗಣ್ಯತೆಯನ್ನು ವಿಕಸಿಸಿಕೊಳ್ಳಬೇಕೆಂಬುದನ್ನು ನಾವು ನಿಶ್ಚಯವಾಗಿಯೂ ಬಯಸುತ್ತೇವೆ. (1 ತಿಮೊ. 3:15; 1 ಪೇತ್ರ 2:17; 5:9) ಯೆಹೋವನ ಸಾಕ್ಷಿಗಳೋಪಾದಿ, ನಮ್ಮ ಹೆಸರಿನ ಹಿಂದಿರುವ ಸಂಸ್ಥೆಯ ಕಡೆಗೆ ದೇವರ ವಾಕ್ಯದ ವಿದ್ಯಾರ್ಥಿಗಳನ್ನು ನಿರ್ದೇಶಿಸಲು, ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ನಾವು ಮಾಡೋಣ.
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿದ್ಯಾರ್ಥಿಗಳು ಸ್ವತಃ ಸಂಸ್ಥೆಯನ್ನು ನೋಡುವಾಗ ಅವರು ಹೆಚ್ಚು ತೀವ್ರಗತಿಯ ಆತ್ಮಿಕ ಪ್ರಗತಿಯನ್ನು ಮಾಡುತ್ತಾರೆ
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ವಿದ್ಯಾರ್ಥಿಗಳನ್ನು ಕೂಟಗಳಿಗೆ ಆಮಂತ್ರಿಸುವುದರಲ್ಲಿ ತಡಮಾಡಬೇಡಿರಿ