ಬೈಬಲ್ ವಿದ್ಯಾರ್ಥಿಗಳನ್ನು ಯೆಹೋವನ ಸಂಸ್ಥೆಗೆ ನಡಿಸುವುದು
1 ಯೋಹಾನ 10:16ರಲ್ಲಿ ಯೇಸು ತಿಳಿಸಿದ “ಒಂದೇ ಹಿಂಡಿನ” ಸಂಸ್ಥೆಯೊಂದಿಗೆ ಬೈಬಲ್ ವಿದ್ಯಾರ್ಥಿಗಳು ಪರಿಚಯ ಮಾಡಿಕೊಳ್ಳುವ ಅಗತ್ಯವಿದೆ. ಯೆಹೋವನ ಸಂಸ್ಥೆಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುವುದು ತಮ್ಮ ರಕ್ಷಣೆಗೆ ಅತ್ಯಾವಶ್ಯಕವೆಂದು ಅವರು ಗಣ್ಯಮಾಡಬೇಕು. (ಪ್ರಕ. 7:9, 10, 15) ಆದ್ದರಿಂದ ಬೈಬಲ್ ಅಧ್ಯಯನವು ಸ್ಥಾಪಿಸಲ್ಪಟ್ಟ ಮೇಲೆ ಆದಷ್ಟು ಬೇಗನೇ ನಾವು ನಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಡೆಗೆ ನಡಿಸಲಾರಂಭಿಸಬೇಕು.
2 ಯೆಹೋವನ ಐಹಿಕ ಸಂಸ್ಥೆಯ ಅನೇಕ ವೈಶಿಷ್ಟ್ಯಗಳೊಂದಿಗೆ ಪರಿಚಯ ಮಾಡಿಕೊಳ್ಳಲು ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಿ. ಒಂದನೇ ಶತಕದ ಮಾದರಿಯನ್ನು ಹಿಂಬಾಲಿಸಿ ಯೆಹೋವನ ಜನರೆಲ್ಲರೂ, ಹಿರಿಯರು, ಶುಶ್ರೂಷೆ ಸೇವಕರು ಮತ್ತು ಪ್ರಚಾರಕರಿಂದ ಕೂಡಿರುವ ಸಭೆಗಳಿಗೆ ಸೇರಿರುತ್ತಾರೆ. ಸಭೆಯ ಸದಸ್ಯರು ವಾರದಲ್ಲಿ ಐದು ಕೂಟಗಳಿಗೆ ಹಾಜರಾಗುವುದರಲ್ಲಿ ಇಂದು ಆನಂದಿಸುತ್ತಾರೆ. ವರ್ಷದ ಕಾಲಾವಧಿಗಳಲ್ಲಿ ಸಮ್ಮೇಳನಗಳು ಮತ್ತು ಅಧಿವೇಶನಗಳು ನಡಿಸಲ್ಪಡುತ್ತವೆ ಮತ್ತು ಇವು ವಿಶೇಷ ಉಪದೇಶಗಳನ್ನು ಹಾಗೂ ಬೇರೆ ಬೇರೆ ಕ್ಷೇತ್ರದ ಜತೆ ಸಾಕ್ಷಿಗಳೊಂದಿಗೆ ಸಹವಸಿಸುವ ಸಂದರ್ಭಗಳನ್ನು ಕೊಡುತ್ತವೆ. ಅದಲ್ಲದೆ ಅವರಲ್ಲಿ, ಪಯನೀಯರರು, ಮಿಶನೆರಿಗಳು, ಮತ್ತು ಸಂಚಾರ ಮೇಲ್ವಿಚಾರಕರಿದ್ದಾರೆ ಹಾಗೂ ಲೋಕ ವ್ಯಾಪಕ ಕಾರ್ಯವನ್ನು ಮಾರ್ಗದರ್ಶಿಸುವ ಒಂದು ಆಡಳಿತಾ ಮಂಡಲಿ ಇದೆ. ಯೆಹೋವನ ಸಂಸ್ಥೆಯ ಈ ವಿವಿಧ ವೈಶಿಷ್ಟ್ಯಗಳ ಪರಿಚಯವನ್ನು ನಿಮ್ಮ ವಿದ್ಯಾರ್ಥಿಗಳಿಗೆ ನೀವು ಹೇಗೆ ಮಾಡಬಹುದು? ಸಂಸ್ಥೆಯ ರಚನೆಯು ಬೈಬಲಾಧರಿತವೆಂದು ಕಾಣಲು ನೀವು ಅವರಿಗೆ ಹೇಗೆ ಸಹಾಯ ಮಾಡಬಲ್ಲಿರಿ?
ಡುಯಿಂಗ್ ಗಾಡ್ಸ್ ವಿಲ್ಲ್ ಬ್ರೊಷೂರ್ ಬಳಸಿರಿ
3 ಡುಯಿಂಗ್ ಗಾಡ್ಸ್ ವಿಲ್ಲ್ ಬ್ರೊಷೂರಲ್ಲಿ ಯೆಹೋವನ ಸಂಸ್ಥೆಯ ಕುರಿತಾದ ವಿಸ್ತಾರ್ಯವಾದ ಮಾಹಿತಿ ಇದೆ. ಅದರೊಂದಿಗೆ ನೀವು ನಿಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಸಂಸ್ಥೆಯೊಂದಿಗೆ ಪ್ರಗತಿಪೂರ್ವಕವಾಗಿ ಪರಿಚಯಿಸಬಹುದು ಮತ್ತು ಅದರ ಕಾರ್ಯವಿಧಾನವನ್ನು ಗಣ್ಯಮಾಡಲು ನೆರವಾಗಬಹುದು. ಪ್ರಾರಂಭಿಸುವ ಒಂದು ಒಳ್ಳೇ ವಿಧಾನವು, ರಾಜ್ಯ ಸಭಾಗೃಹದಲ್ಲಿ ಏನು ನಡಿಯುತ್ತದೋ ಅದನ್ನು ಚರ್ಚಿಸುವ ಮೂಲಕವೇ. ಇದು, ವಿದ್ಯಾರ್ಥಿಯನ್ನು ಸಭಾ ಕೂಟಗಳಿಗೆ ಹಾಜರಾಗಲು ಪ್ರೋತ್ಸಾಹಿಸುವದು. ಬಹಿರಂಗ ಭಾಷಣಕ್ಕೆ ಪ್ರಥಮವಾಗಿ ಅವನನ್ನು ಆಮಂತ್ರಿಸುವ ಮೊದಲು, ಪುಟ 14 ಮತ್ತು 15 ರಲ್ಲಿರುವ ಸಮಾಚಾರವನ್ನು ಅವನೊಂದಿಗೆ ಪರಾಮರ್ಶಿಸಿರಿ. ಚಿತ್ರಗಳಿಗೆ ಅವನ ಗಮನವನ್ನು ಸೆಳೆಯಿರಿ. ಸ್ಥಳೀಕ ರಾಜ್ಯ ಸಭಾಗೃಹದ ಸ್ಥಳ ಮತ್ತು ತೋರಿಕೆಯನ್ನು ವಿವರಿಸಿ ಹೇಳಿರಿ. ನೀವು ಹಾಜರಾಗುವ ರಾಜ್ಯ ಸಭಾಗೃಹದ ಒಂದು ಚಿತ್ರವನ್ನೂ ನೀವು ತೋರಿಸಬಹುದು.
4 ಸಭೆಗೆ ಸರ್ಕಿಟ್ ಮೇಲ್ವಿಚಾರಕರ ಸಂದರ್ಶನೆಯು ಪ್ರಕಟನೆಯಾಗುವಾಗ, ನಿಮ್ಮ ವಿದ್ಯಾರ್ಥಿಯೊಂದಿಗೆ 20 ಮತ್ತು 21ನೇ ಪುಟವನ್ನು ಚರ್ಚಿಸಿರಿ. ಮುಖ್ಯ ವಿಷಯಗಳನ್ನು ಎತ್ತಿಹೇಳಲು 21ನೇ ಪುಟದ ಕೊನೆಯಲ್ಲಿರುವ ಪ್ರಶ್ನೆಗಳನ್ನು ಬಳಸಿರಿ. 20ನೇ ಪುಟದ ಮೊದಲ ಪಾರಾವನ್ನು ಉಪಯೋಗಿಸುವ ಮೂಲಕ, ನಮ್ಮ ಸದ್ಯದ ಏರ್ಪಾಡಿಗಿರುವ ಶಾಸ್ತ್ರೀಯ ಹಿನ್ನೆಲೆಯನ್ನು ಅವನೊಂದಿಗೆ ಚರ್ಚಿಸಿರಿ. ಇದು ನಿಮ್ಮ ವಿದ್ಯಾರ್ಥಿಯ ರಾಜ್ಯ ಸಭಾಗೃಹದ ಸಂದರ್ಶನೆಯನ್ನು ಅರ್ಥಭರಿತವನ್ನಾಗಿ ಮಾಡುವುದು.
5 ತದ್ರೀತಿಯಲ್ಲಿ ನಿಮ್ಮ ಜಿಲ್ಲಾ ಅಧಿವೇಶನ, ಸರ್ಕಿಟ್ ಸಮ್ಮೇಳನ ಅಥವಾ ವಿಶೇಷ ಸಮ್ಮೇಳನ ದಿನಕ್ಕೆ ಮುಂಚೆ, 19 ನೇ ಪುಟದ ಸಮಾಚಾರವನ್ನು ಆವರಿಸಿರಿ. ಒಂದು ದೊಡ್ಡ ಅಧಿವೇಶನದಲ್ಲಿ ಏನೆಲ್ಲಾ ಒಳಗೂಡಿದೆ ಎಂಬದಕ್ಕೆ ಅವನ ಗಮನ ಸೆಳೆಯಿರಿ, ಮತ್ತು 18 ನೇ ಪುಟದ ಚಿತ್ರದಲ್ಲಿ ನೀಡಲಾದ ಅಂತರ್ರಾಷ್ಟ್ರೀಯ ವ್ಯಾಪ್ತಿಯನ್ನು ಎತ್ತಿಹೇಳಿರಿ. ಹೊಸ ಪ್ರಕಾಶನಗಳ ಹೊರಡಿಸುವಿಕೆಯನ್ನು ತೋರಿಸುವ ಚಿತ್ರದ ಮೇಲೆ ಹೇಳಿಕೆ ಕೊಡುವಾಗ, 24 ಮತ್ತು 25 ಪುಟದ ಅಧಿಕ ಚರ್ಚೆಗಾಗಿ ನೀವು ಅವನನ್ನು ತಯಾರಿಸಬಹುದು. ಪಯನೀಯರ ಸೇವೆಯನ್ನು ವಿವರಿಸಲಿಕ್ಕಾಗಿ, 22 ಮತ್ತು 23 ಪುಟದ ಸಮಾಚಾರವನ್ನು ಆವರಿಸಿರಿ.
ಅಗತ್ಯಕ್ಕೆ ತಕ್ಕಹಾಗೆ ಅಳವಡಿಸಿರಿ
6 ಹೀಗೆ, ಡುಯಿಂಗ್ ಗಾಡ್ಸ್ ವಿಲ್ಲ್ ಬ್ರೊಷೂರ್ನ್ನು ಆರಂಭದಿಂದಲೇ ಪ್ರಾರಂಭಿಸುವ ಅಗತ್ಯವಿಲ್ಲವೆಂದು ನೀವು ಕಾಣುವೀರಿ. ಬದಲಿಗೆ ಸಂದರ್ಭ ಮತ್ತು ಅಗತ್ಯ ಎದಹ್ದಾಗೆ ಬ್ರೊಷೂರಿನಿಂದ ವಿಶಿಷ್ಟ ವಿಷಯಗಳನ್ನು ಚರ್ಚಿಸಿರಿ. ಇದು ವಿದ್ಯಾರ್ಥಿಗೆ ಯೆಹೋವನ ಸಂಸ್ಥೆಯನ್ನು ಗಣ್ಯಮಾಡುವಂತೆ ಸಹಾಯ ಮಾಡುವುದು ಮತ್ತು ಸ್ಥಳೀಕ ಸಭೆಯೊಂದಿಗೆ ಸಹವಸಿಸುವಂತೆ ಪ್ರೋತ್ಸಾಹನೆ ಕೊಡುವುದು.
7 ಈ ವಿಷಯಗಳನ್ನು ಚರ್ಚಿಸುವಾಗ ಖಾತ್ರಿಯಿಂದ ಮಾತಾಡುವ ಮೂಲಕ ನಿಮ್ಮ ವಿದ್ಯಾರ್ಥಿಯ ಮೇಲೆ ಬಾಳುವ ಅಚ್ಚೊತ್ತನ್ನು ಹಾಕುವಿರಿ. ಆಸಕ್ತ ಮನಸ್ಸುಳ್ಳವರಾಗಿರ್ರಿ. (ಅಪೊ. 18:25) ಅಲ್ಲದೆ, “ಮತ್ತೊಬ್ಬನಿಗೆ ಉಪದೇಶಮಾಡುವ ನೀವು” ಸಥ್ವಾ, ಯೆಹೋವನ ಸಂಘಟನೆಗೆ ಗಣ್ಯತೆ ತೋರಿಸುವುದರಲ್ಲಿ ಒಳ್ಳೇ ಮಾದರಿಯನ್ನಿಡಲು ನಿಶ್ಚಯದಿಂದಿರ್ರಿ. (ರೋಮಾ. 2:21) ಹೀಗೆ ಮಾಡುವ ಮೂಲಕ ನೀವು ಇತರರಿಗೆ, ಯೇಸು ನಿತ್ಯಜೀವಕ್ಕೆ ನಡಿಸುವ ಆ ಒಂದು ಹಿಂಡನ್ನು ಜತೆಗೂಡುವಂತೆ ಸಹಾಯ ಮಾಡಬಲ್ಲಿರಿ.