ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು
ಭಾಗ 8: ವಿದ್ಯಾರ್ಥಿಯನ್ನು ಸಂಘಟನೆಯ ಕಡೆಗೆ ನಿರ್ದೇಶಿಸುವುದು
1. ಪ್ರತಿ ವಾರ ಅಧ್ಯಯನದ ಸಮಯದಲ್ಲಿ ಯೆಹೋವನ ಸಂಘಟನೆಯ ಕುರಿತು ಒಂದು ಅಂಶವನ್ನು ಹಂಚಿಕೊಳ್ಳುವುದು ಏಕೆ ಪ್ರಯೋಜನಕಾರಿಯಾಗಿದೆ?
1 ಬೈಬಲ್ ಅಧ್ಯಯನವನ್ನು ನಡೆಸುವಾಗ ನಮ್ಮ ಗುರಿಯು ವಿದ್ಯಾರ್ಥಿಗೆ ಕೇವಲ ತಾತ್ವಿಕ ವಿಚಾರವನ್ನು ಕಲಿಸುವುದಷ್ಟೇ ಅಲ್ಲ ಬದಲಿಗೆ ಕ್ರೈಸ್ತ ಸಭೆಯ ಭಾಗವಾಗುವಂತೆ ಅವರಿಗೆ ಸಹಾಯಮಾಡುವುದೂ ಅದರಲ್ಲಿ ಸೇರಿದೆ. (ಜೆಕ. 8:23) ಇದನ್ನು ಮಾಡುವಂತೆ, ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರ್ ನಮಗೆ ಸಹಾಯಮಾಡಬಲ್ಲದು. ಈ ಬ್ರೋಷರಿನ ಒಂದು ಪ್ರತಿಯನ್ನು ಹೊಸ ಬೈಬಲ್ ವಿದ್ಯಾರ್ಥಿಗೆ ನೀಡಿರಿ ಮತ್ತು ಅವರು ಅದನ್ನು ಓದುವಂತೆ ಉತ್ತೇಜಿಸಿ. ಇದಕ್ಕೆ ಕೂಡಿಕೆಯಾಗಿ, ಪ್ರತಿ ವಾರ ಅಧ್ಯಯನದ ಸಮಯದಲ್ಲಿ ಯೆಹೋವನ ಸಂಘಟನೆಯ ಕುರಿತು ಒಂದು ಅಂಶವನ್ನು ಹಂಚಿಕೊಳ್ಳಲು ಕೊಂಚ ಸಮಯವನ್ನು ಬದಿಗಿರಿಸಿರಿ.
2. ಸಭಾ ಕೂಟಗಳಿಗೆ ಹಾಜರಾಗುವಂತೆ ನೀವು ಬೈಬಲ್ ವಿದ್ಯಾರ್ಥಿಗಳನ್ನು ಹೇಗೆ ಉತ್ತೇಜಿಸಬಲ್ಲಿರಿ?
2 ಸಭಾ ಕೂಟಗಳು: ಬೈಬಲ್ ವಿದ್ಯಾರ್ಥಿಗಳು ದೇವರ ಸಂಘಟನೆಯನ್ನು ಗಣ್ಯಮಾಡಲು ಆರಂಭಿಸುವ ಮುಖ್ಯ ವಿಧಾನವು, ಸಭಾ ಕೂಟಗಳಲ್ಲಿ ನಮ್ಮೊಂದಿಗೆ ಸಹವಾಸಿಸುವ ಮೂಲಕವೇ. (1 ಕೊರಿಂ. 14:24, 25) ಆದುದರಿಂದ, ಒಂದೊಂದಾಗಿ ವಾರದ ಐದು ಕೂಟಗಳ ಕುರಿತು ಬೈಬಲ್ ವಿದ್ಯಾರ್ಥಿಗಳಿಗೆ ನೀವು ವರ್ಣಿಸಲು ಆರಂಭಿಸಬಹುದು. ಮುಂದಿನ ಬಹಿರಂಗ ಭಾಷಣದ ಶೀರ್ಷಿಕೆಯನ್ನು ಅವರಿಗೆ ತಿಳಿಸಿರಿ. ಕಾವಲಿನಬುರುಜು ಅಧ್ಯಯನದಲ್ಲಿ ಮತ್ತು ಸಭಾ ಪುಸ್ತಕ ಅಧ್ಯಯನದಲ್ಲಿ ಚರ್ಚಿಸಲಿರುವ ವಿಷಯವನ್ನು ಅವರಿಗೆ ತೋರಿಸಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಕುರಿತು ವಿವರಿಸಿರಿ. ನಿಮಗೆ ಶಾಲೆಯಲ್ಲಿ ಭಾಗಗಳಿರುವಾಗ ಒಂದುವೇಳೆ ಅದನ್ನು ನೀವು ಅವರೊಂದಿಗೆ ಪೂರ್ವಾಭಿನಯಿಸಸಾಧ್ಯವಿದೆ. ಕೂಟಗಳಲ್ಲಿ ತಿಳಿಸಲ್ಪಟ್ಟ ಮುಖ್ಯ ಅಂಶಗಳನ್ನು ಅವರೊಂದಿಗೆ ಹಂಚಿಕೊಳ್ಳಿರಿ. ನಮ್ಮ ಸಾಹಿತ್ಯಗಳಲ್ಲಿರುವ ಚಿತ್ರಗಳನ್ನು ಉಪಯೋಗಿಸುತ್ತಾ, ಕೂಟಗಳು ಹೇಗೆ ನಡೆಸಲ್ಪಡುತ್ತವೆ ಎಂಬುದನ್ನು ಅವರು ತಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲು ಸಹಾಯಮಾಡಿರಿ. ಮೊದಲ ಅಧ್ಯಯನದಿಂದಲೇ ಕೂಟಗಳಿಗೆ ಹಾಜರಾಗುವಂತೆ ಅವರನ್ನು ಆಮಂತ್ರಿಸಿರಿ.
3. ಸಂಘಟನೆಯ ಕುರಿತು ನಾವು ಯಾವ ಅಂಶಗಳನ್ನು ಚರ್ಚಿಸಬಹುದು?
3 ಜ್ಞಾಪಕಾಚರಣೆ, ಸಮ್ಮೇಳನಗಳು, ಅಧಿವೇಶನಗಳು ಮತ್ತು ಸರ್ಕಿಟ್ ಮೇಲ್ವಿಚಾರಕರ ಭೇಟಿಯು ಸಮೀಪಿಸುತ್ತಿರುವಾಗ, ಈ ಏರ್ಪಾಡುಗಳ ಕುರಿತು ವಿವರಿಸಲು ಮತ್ತು ಇದರ ಬಗ್ಗೆ ಉತ್ಸಾಹವನ್ನು ಹೆಚ್ಚಿಸಲು ಕೆಲವು ನಿಮಿಷಗಳನ್ನು ವ್ಯಯಿಸಿರಿ. ಇಲ್ಲಿ ಕೊಡಲ್ಪಟ್ಟಿರುವಂಥ ಪ್ರಶ್ನೆಗಳನ್ನು ಪ್ರಗತಿಪರವಾಗಿ ಉತ್ತರಿಸಿರಿ: ನಾವೇಕೆ ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುತ್ತೇವೆ? ನಮ್ಮ ಕೂಟದ ಸ್ಥಳವನ್ನು ರಾಜ್ಯ ಸಭಾಗೃಹ ಎಂದು ನಾವು ಏಕೆ ಕರೆಯುತ್ತೇವೆ? ಹಿರಿಯರ ಮತ್ತು ಶುಶ್ರೂಷಾ ಸೇವಕರ ಕರ್ತವ್ಯಗಳೇನು? ಸಾರುವ ಕೆಲಸ ಮತ್ತು ಕ್ಷೇತ್ರವು ಹೇಗೆ ವ್ಯವಸ್ಥಾಪಿಸಲ್ಪಡುತ್ತದೆ? ನಮ್ಮ ಸಾಹಿತ್ಯವನ್ನು ಹೇಗೆ ತಯಾರಿಸಲಾಗುತ್ತದೆ? ಸಂಘಟನೆಗೆ ಹಣವು ಎಲ್ಲಿಂದ ದೊರಕುತ್ತದೆ? ಕೆಲಸವನ್ನು ಮೇಲ್ವಿಚಾರಣೆ ಮಾಡುವುದರಲ್ಲಿ ಬ್ರಾಂಚ್ ಆಫೀಸ್ ಮತ್ತು ಆಡಳಿತ ಮಂಡಲಿಯು ಯಾವ ಪಾತ್ರಗಳನ್ನು ವಹಿಸುತ್ತವೆ?
4, 5. ನಮ್ಮ ವಿಡಿಯೋಗಳು ಸಂಘಟನೆಯ ಕಡೆಗಿನ ಗಣ್ಯತೆಯನ್ನು ಹೇಗೆ ಹೆಚ್ಚಿಸಬಲ್ಲವು?
4 ಬೋಧಪ್ರದವಾದ ವಿಡಿಯೋಗಳು: ಬೈಬಲ್ ವಿದ್ಯಾರ್ಥಿಗಳು ಯೆಹೋವನ ಅದ್ಭುತಕರವಾದ ಸಂಘಟನೆಯನ್ನು ನೋಡಸಾಧ್ಯವಿರುವ ಇನ್ನೊಂದು ವಿಧವು ನಮ್ಮ ವಿಡಿಯೋಗಳ ಮೂಲಕವೇ ಆಗಿದೆ. ಇದು ಅವರನ್ನು ಭೂಮಿಯ ಕಟ್ಟಕಡೆಯ ವರೆಗೆa ತೆಗೆದುಕೊಂಡುಹೋಗಬಲ್ಲದು, ನಮ್ಮ ಸಹೋದರರ ಸಂಪೂರ್ಣ ಸಂಘbದ ಪರಿಚಯವನ್ನು ಮಾಡಿಸುವುದು ಮತ್ತು ನಾವು ಹೇಗೆ ದೈವಿಕ ಬೋಧನೆಯಿಂದ ಐಕ್ಯಗೊಳಿಸಲ್ಪಟ್ಟವರುc ಎಂಬುದನ್ನು ತೋರಿಸುವುದು. ನಮ್ಮ ಪತ್ರಿಕೆಗಳನ್ನೂ ಇತರ ಸಾಹಿತ್ಯವನ್ನೂ ಐದು ವರುಷಗಳಿಂದ ಓದುತ್ತಿದ್ದ ಒಬ್ಬ ಸ್ತ್ರೀಯು, ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಘಟನೆd ಎಂಬ ವಿಡಿಯೋವನ್ನು ನೋಡಿದಾಗ ಕಣ್ಣೀರು ಸುರಿಸಿದಳು. ಅವಳನ್ನು ಭೇಟಿಮಾಡುತ್ತಿದ್ದ ಸಾಕ್ಷಿಗಳನ್ನು ಅವಳು ನಂಬುತ್ತಿದ್ದಳು, ಆದರೆ ಈಗ ಸಂಘಟನೆಯನ್ನು ಸಹ ನಂಬಸಾಧ್ಯವಿದೆ ಎಂದು ಅವಳಿಗೆ ಅನಿಸಿತು. ಅವಳೊಂದಿಗೆ ವ್ಯವಸ್ಥಾಪಿತ ಅಧ್ಯಯನವನ್ನು ಆರಂಭಿಸಲಾಯಿತು ಮತ್ತು ಅದರ ನಂತರದ ವಾರದಿಂದಲ್ಲೇ ಅವಳು ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾದಳು.
5 ಪ್ರತಿ ವಾರ ನಮ್ಮ ವಿದ್ಯಾರ್ಥಿಗಳೊಂದಿಗೆ ಕೆಲವು ನಿಮಿಷಗಳನ್ನು ವ್ಯಯಿಸುವ ಮತ್ತು ಒದಗಿಸಲ್ಪಟ್ಟಿರುವ ಸಹಾಯಕಗಳನ್ನು ಉಪಯೋಗಿಸುವ ಮೂಲಕ, ಇಂದು ಯೆಹೋವನು ಉಪಯೋಗಿಸುತ್ತಿರುವ ಏಕೈಕ ಸಂಘಟನೆಯ ಕಡೆಗೆ ಬೈಬಲ್ ವಿದ್ಯಾರ್ಥಿಗಳನ್ನು ನಾವು ಪ್ರಗತಿಪರವಾಗಿ ನಿದೇರ್ಶಿಸಬಲ್ಲೆವು.
[ಪಾದಟಿಪ್ಪಣಿಗಳು]
a ಕನ್ನಡದಲ್ಲಿ ಲಭ್ಯವಿಲ್ಲ.
b ಕನ್ನಡದಲ್ಲಿ ಲಭ್ಯವಿಲ್ಲ.
c ಕನ್ನಡದಲ್ಲಿ ಲಭ್ಯವಿಲ್ಲ.
d ಕನ್ನಡದಲ್ಲಿ ಲಭ್ಯವಿಲ್ಲ.