ನಿರಾಸಕ್ತಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
1 ಭಾವ ಅಥವಾ ಭಾವಾವೇಶದ ಕೊರತೆ, ಆಸಕ್ತಿ ಅಥವಾ ಚಿಂತೆಯ ಅನುಪಸ್ಥಿತಿಯೇ ನಿರಾಸಕ್ತಿಯಾಗಿದೆ. ಶುಶ್ರೂಷೆಯಲ್ಲಿ ನಾವು ಎದುರಿಸುವ ಹೆಚ್ಚು ಸಾಮಾನ್ಯ ಹಾಗೂ ಹೆಚ್ಚು ಕಠಿನ ಮನೋಭಾವಗಳಲ್ಲಿ ಇದು ಒಂದಾಗಿದೆ. ಇದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಇದು ನಿಮ್ಮನ್ನು ಶುಶ್ರೂಷೆಯಲ್ಲಿ ಮಂದಗತಿಯುಳ್ಳವರನ್ನಾಗಿ ಮಾಡಿದೆಯೋ? ರಾಜ್ಯದ ಸಂದೇಶದೊಂದಿಗೆ ಜನರನ್ನು ತಲಪಸಾಧ್ಯವಾಗುವಂತೆ ಇದನ್ನು ನೀವು ಹೇಗೆ ಜಯಿಸಬಲ್ಲಿರಿ?
2 ಮೊದಲಾಗಿ, ನಿಮ್ಮ ಕ್ಷೇತ್ರದಲ್ಲಿರುವ ಜನರು ಏಕೆ ನಿರಾಸಕ್ತರಾಗಿದ್ದಾರೆಂಬುದನ್ನು ಕಂಡುಹಿಡಿಯಿರಿ. ಅವರು ನಿರಾಸಕ್ತರಾಗಿರುವುದು ತಮ್ಮ ರಾಜಕೀಯ ಹಾಗೂ ಧಾರ್ಮಿಕ ಮುಖಂಡರಿಂದ ನಿರಾಶೆಗೊಳಿಸಲ್ಪಟ್ಟಿರುವ ಕಾರಣದಿಂದಲೋ? ತಮ್ಮನ್ನು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ಅವರು ಭಾವಿಸುತ್ತಾರೋ? ಅತ್ಯುತ್ತಮವಾದದ್ದು ಏನೋ ಇದೆ ಎಂಬುದರ ವಾಗ್ದಾನಗಳ ಕುರಿತಾಗಿ ಅವರು ಅನಿಶ್ಚಿತಮತಿಗಳಾಗಿದ್ದಾರೋ? ತತ್ಕ್ಷಣದ ದೈಹಿಕ ಪ್ರಯೋಜನಗಳನ್ನು ನೋಡದ ಹೊರತು ಅವರು ಆತ್ಮಿಕ ವಿಷಯಗಳ ಕುರಿತಾಗಿ ಆಲೋಚಿಸಲು ಮನಸ್ಸಿಲ್ಲದವರಾಗಿದ್ದಾರೋ?
3 ರಾಜ್ಯ ನಿರೀಕ್ಷೆಯನ್ನು ಎತ್ತಿತೋರಿಸಿರಿ: ರಾಜ್ಯವು ಪರಿಹರಿಸದಿರುವ ಯಾವ ಸಮಸ್ಯೆಯೂ ಇಲ್ಲ. ಆದುದರಿಂದ ಒಂದು ಬೈಬಲ್ ವಚನವನ್ನು ತೋರಿಸಲು ಅಸಾಧ್ಯವಾಗಿರುವಾಗ ಇಲ್ಲವೇ ಪ್ರಾಯೋಗಿಕವಾಗಿರದಿರುವಾಗಲೂ, ನಮಗೆ ಸಾಧ್ಯವಿರುವಾಗಲೆಲ್ಲ ಮುಖ್ಯ ಶಾಸ್ತ್ರೀಯ ಹೇಳಿಕೆಗಳನ್ನು ಉಲ್ಲೇಖಿಸುತ್ತಾ, ನಾವು ರಾಜ್ಯ ವಾಗ್ದಾನಗಳ ಕುರಿತು ಮಾತಾಡಬೇಕು. (ಇಬ್ರಿ. 4:12) ಆದರೂ, ರಾಜ್ಯ ವಾಗ್ದಾನಗಳ ಕುರಿತಾಗಿ ಮಾತಾಡುವ ಹಂತದ ವರೆಗೆ ನಾವು ಹೇಗೆ ಸಂಭಾಷಣೆಯನ್ನು ನಡೆಸುತ್ತಾ ಹೋಗಸಾಧ್ಯವಿದೆ?
4 ನಮ್ಮ ಭೇಟಿಯ ಉದ್ದೇಶವನ್ನು ಜನರು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನೆರೆಯವರ ಕಡೆಗಿನ ಪ್ರೀತಿಯ ಹಾಗೂ ಸಮಾಜಕ್ಕಾಗಿರುವ ಆಸ್ಥೆಯ ಕಾರಣದಿಂದ ನಾವು ಅಲ್ಲಿದ್ದೇವೆಂಬುದನ್ನು ಅವರು ಗ್ರಹಿಸಿಕೊಳ್ಳುವ ಅಗತ್ಯವಿದೆ. “[ಸಮಾಜವನ್ನು ಬಾಧಿಸುತ್ತಿರುವ ಒಂದು ಸಮಸ್ಯೆ]ಗೆ ಯಾವುದು ಪರಿಹಾರವಾಗಿದೆಯೆಂದು ನೀವು ನೆನಸುತ್ತೀರಿ?” ಎಂಬಂಥ ಸುಆಲೋಚನಾಭರಿತ ಪ್ರಶ್ನೆಯೊಂದನ್ನು ನಾವು ಕೇಳಸಾಧ್ಯವಿದೆ. ಒಂದು ಪ್ರಸ್ತಾವನೆಯು ಕಾರ್ಯಸಾಧ್ಯವಾಗದಿದ್ದಲ್ಲಿ ಮತ್ತೊಂದನ್ನು ಪ್ರಯತ್ನಿಸಿರಿ.
5 ಎಲ್ಲಿ ಮನೆಯವರು ರಾಜ್ಯ ಸಂದೇಶಕ್ಕೆ ಉದಾಸೀನಭಾವದವರು ಆಗಿದ್ದರೋ ಆ ಒಂದು ಅತಿ ಸಂಪದ್ಭರಿತ ಟೆರಿಟೊರಿಯಲ್ಲಿ, ಆಸಕ್ತಿಯನ್ನು ಕೆರಳಿಸುವ ಪೀಠಿಕೆಯೊಂದನ್ನು ಕಂಡುಕೊಳ್ಳಲು ಪ್ರಚಾರಕರು ಶ್ರಮಿಸಿದರು. ಜ್ಞಾನ ಪುಸ್ತಕವನ್ನು ತೋರಿಸುವಾಗ, ಒಬ್ಬ ದಂಪತಿಗಳು ಈ ಪೀಠಿಕೆಯನ್ನು ಪ್ರಯತ್ನಿಸಿದರು: “ಇಂದು ಲೋಕದಲ್ಲಿನ ಯಶಸ್ಸಿಗಾಗಿ ಒಳ್ಳೆಯ ಶಿಕ್ಷಣವು ಪ್ರಾಮುಖ್ಯವೆಂದು ನೀವು ಭಾವಿಸುತ್ತೀರೋ? ಸಮಗ್ರ ಶಿಕ್ಷಣವೊಂದು ಬೈಬಲಿನ ಜ್ಞಾನವನ್ನು ಒಳಗೂಡುವುದು ಎಂಬುದನ್ನು ನೀವು ಸಮ್ಮತಿಸುತ್ತೀರೋ?” ಒಂದು ಅಪರಾಹ್ಣದಲ್ಲಿ ಅವರು ಮೂರು ಪುಸ್ತಕಗಳನ್ನು ನೀಡಿದರು, ಅವರಲ್ಲಿ ಒಬ್ಬ ಮಹಿಳೆಯು, ತಾನು ಜ್ಞಾನ ಪುಸ್ತಕವನ್ನು ಸಂಪೂರ್ಣ ಓದಿದ್ದೇನೆಂದು ಅನಂತರ ಹೇಳಿದಳು ಮತ್ತು ಒಂದು ಬೈಬಲ್ ಅಭ್ಯಾಸಕ್ಕೆ ಒಪ್ಪಿಕೊಂಡಳು.
6 ನಿರಾಸಕ್ತರನ್ನು ನೀವು ಸಂಧಿಸುವಾಗ, ಬೇರೆ ಬೇರೆ ಪ್ರಸ್ತಾವನೆಗಳನ್ನು ಪ್ರಯತ್ನಿಸಿರಿ, ಆಲೋಚನೆಯನ್ನು ಕೆರಳಿಸುವ ಪ್ರಶ್ನೆಗಳನ್ನು ಕೇಳಿರಿ ಹಾಗೂ ದೇವರ ವಾಕ್ಯದ ಶಕ್ತಿಯನ್ನು ಸದುಪಯೋಗಿಸಿಕೊಳ್ಳಿರಿ. ಹೀಗೆ ನಮ್ಮ ಅದ್ಭುತಕರವಾದ ರಾಜ್ಯ ನಿರೀಕ್ಷೆಯನ್ನು ಇತರರು ಅಂಗೀಕರಿಸುವಂತೆ ಸಹಾಯಮಾಡಲು ನೀವು ಶಕ್ತರಾಗಬಹುದು.